ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ನಿಂದ ಪ್ರಥಮ ಪಿಯುಸಿ ಹಾಗೂ ಪ್ರಥಮ ಪದವಿ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಮಾರಂಭ ಜೂನ್ 19 ರಂದು ಸೋಮವಾರ ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಸಮಾರಂಭ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಿದ್ದಾರೆ. ಖ್ಯಾತ ಶಿಕ್ಷಣ ತಜ್ಞ ನಿವೃತ್ತ ಪ್ರಾಂಶುಪಾಲ ಡಾ| ಎಂ. ಮಹಾಬಲೇಶ್ವರ ರಾವ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಸಾಧಕ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುತ್ತದೆ.
ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಬಿ. ಪ್ರಕಾಶ್ಚಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಹಾಯಧನಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅಂಚೆ ಕಾರ್ಡು ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಪತ್ರದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ತಿಳಿಸಲಾಗಿದೆ.
ಸಮಾರಂಭದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಪೋಷಕರು, ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿನಿಧಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
Month: June 2023
ಜೀವನೋಪಾಯಕ್ಕೆ ದಾನಿ ಎಸ್.ಆರ್.ಧರ್ಮೇಶರಿಂದ ಸೈಕಲ್ ಕೊಡುಗೆ
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು:ಆನಂದ ಸುವರ್ಣ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ 47 ಸಾವಿರ ವಿದ್ಯಾರ್ಥಿಗಳಿಗೆ ರೂ.60 ಕೋಟಿ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಗಿದೆ. ತಾಲ್ಲೂಕಿನಲ್ಲಿ ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ 187 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ಒಂದು ಸರ್ಕಾರ ಮಾಡುವಂಥ ಅಭಿವೃದ್ಧಿ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿದ್ದಾರೆ. ಅವರ ಪಾರದರ್ಶಕ ಹಾಗೂ ಸಮಾಜ ಮುಖಿ ಚಟುವಟಿಕೆ ದೇಶಕ್ಕೆ ಮಾದರಿಯಾಗಿದೆ. ಫಲಾನುಭವಿಗಳು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ಹೇಳಿದರು.
ಭೈರವೇಶ್ವರ ವಿದ್ಯಾನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ, ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ ಮಾತನಾಡಿದರು. ಪೋಷಕರೊಂದಿಗೆ ಆಗಮಿಸಿದ್ದ 187 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು.
ಯೋಜನೆ ಜಿಲ್ಲಾ ನಿರ್ದೇಶಕ ಪದ್ಮಯ್ಯ, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಗೊಪಾಲಕೃಷ್ಣ, ಪುಷ್ಪರಾಜ್ ಇದ್ದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ನಿವೃತ್ತಿ ಸಿಬ್ಬಂದಿ ಮತ್ತು ಮ್ರತ ಸದಸ್ಯರಿಗೆ ಪ್ರೋತ್ಸಾಹ ಧನ ಚೆಕ್‌ಗಳ ವಿತರಣೆ
ಶ್ರೀನಿವಾಸಪುರ : ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. , ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮತ್ತು ಮೃತಪಟ್ಟ ಸದಸ್ಯರ ಕೋಮುಲ್ ವಿಮಾ ಚೆಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಎನ್.ಹನುಮೇಶ್ ರವರು ಮಾತನಾಡಿ , ನಿವೃತ್ತಿ ಹೊಂದಿದ ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಿ , ಸಂಘಗಳಿಗೆ ನೀಡಿದ ನಿರಂತರ ಸೇವೆಯನ್ನು ಸ್ಮರಿಸುತ್ತಾ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮೊತ್ತ 12,25,000 / – ರೂಗಳು ಹಾಗೂ ಮೃತಪಟ್ಟ ಸದಸ್ಯರ ಕೋಮುಲ್ ವಿಮಾ ಚೆಕ್ ರೂ .25,000 / ಗಳ ಚೆಕ್‌ಗಳನ್ನು ವಿತರಿಸಿದರು.
ಮತ್ತು ಗಫಾರ್ ಖಾನ್ ಮೊಹಲ್ಲಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ.ಹಾ.ಮ. ಸಂಜೀವಿನಿ ಯೋಜನೆಯಡಿಯಲ್ಲಿ Automatic Milk Collection Unit with Milk Analyser ಘಟಕ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನಲ್ಲಿರುವ ಫ್ಯಾಟ್ ಅಂಶವನ್ನು ಪರೀಕ್ಷಿಸಲು ಎಲೆಕ್ಟಿಕ್ ಗರ್ಭರ್ ಯಂತ್ರಗಳನ್ನು ಸಬ್ಸಿಡಿ ಧರದಲ್ಲಿ ವಿತರಿಸಿದರು .
ಪ್ರಭಾರೆ ಉಪ ವ್ಯವಸ್ಥಾಪಕರಾದ ಕೆ.ಎಂ.ಮುನಿರಾಜು ರವರು ಮಾತನಾಡಿ , ಸಂಘಗಳಲ್ಲಿ ವೈಜ್ಞಾನಿಕವಾಗಿ ಹಾಲಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ , ಪ್ಯಾಟ್ ಮತ್ತು ಎಸ್.ಎನ್.ಎಫ್ . ಆಧಾರದ ಮೇಲೆ ಎಲ್ಲಾ ಯಂತ್ರಗಳನ್ನು ಬಳಸಿಕೊಂಡು ರೈತರಿಗೆ ಹೆಚ್ಚಿನ ಧರ ನೀಡಿದ್ದಲ್ಲಿ ರೈತರಿಗೆ ಸಂಘಗಳ ಮೇಲೆ ನಂಬಿಕೆ ಹೆಚ್ಚಾಗಿ ಉತ್ತಮ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ , ಸಹಕಾರ ಸಂಘಗಳು ಅಭಿವೃದ್ಧಿಯಾಗುತ್ತದೆ ಹಾಗೂ ಖಾಸಗಿ ಡೇರಿಗಳ ಹಾವಳಿ ಸಹ ಕಡಿಮೆ ಆಗುವುದೆಂದು ತಿಳಿಸಿದರು .
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕರು ದ್ವಾರಸಂದ್ರ ಸಿ.ಮುನಿವೆಂಕಟಪ್ಪ , ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆಲಂಬಗಿರಿ ಅಯ್ಯಪ್ಪ ರವರು , ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕೇತಗಾನಹಳ್ಳಿ ನಾಗರಾಜ್‌ರವರು , ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ಕೆ.ಮಂಜು, ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಎನ್.ಶಂಕರ್ , ಪಿ.ಕೆ.ನರಸಿಂಹರಾಜು , ಕೆ.ಪಿ.ಶ್ವೇತ , ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಹಾಗೂ ಶಿಬಿರದ ಸಿಬ್ಬಂದಿಯವರು ಮತ್ತು ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು , ಸಿಬ್ಬಂದಿಯವರು ಮತ್ತು ಫಲಾನುಭವಿಗಳು ಹಾಜರಿದ್ದರು.
ಗಲ್ಫಾಂತ್ಲ್ಯಾ ಕೊಂಕಣಿ ವಾವ್ರಾಚೆರ್ ಏಕ್ ಪರಿಸಂವಾದ್
ಜ್ಯೂನ್ 10: ದೀಸ್ಪಡ್ತೊ ಗ್ರಾಸ್ ಜೊಡುಂಕ್ ಪರ್ಗಾಂವಾಕ್ ವಚುನ್ ಸಯ್ತ್ ಕೊಂಕಣಿ ಬಾವ್ಟೊ ಉಭೊ ಕರುನ್ ಕೊಂಕಣಿ ವಾವ್ರ್ ಕರುನ್ ಆಯಿಲ್ಲ್ಯಾ, ಪ್ರತ್ಯೇಕ್ ಜಾವ್ನ್ ಗಲ್ಫಾಂತ್ ಜಾಲ್ಲ್ಯಾ ಕೊಂಕಣಿ ವಾವ್ರಾಚಿ ಎಕಾಮೆಕಾ ಒಳೊಕ್ ಕರುನ್ ದಿಂವ್ಚ್ಯಾ ಇರಾದ್ಯಾನ್ ಆಶಾವಾದಿ ಪ್ರಕಾಶನಾನ್ ಸನ್ವಾರಾ, ಜ್ಯೂನ್ ೧೦ ತಾರಿಕೆರ್ ಏಕ್ ಡಿಜಿಟಲ್ ಪರಿಸಂವಾದ್ ಆಸಾ ಕೆಲೆಂ. ಅಖಿಲ್ ಭಾರತೀಯ್ ಕೊಂಕಣಿ ಪರಿಶದೆಚಿ ಆಧ್ಲಿ ಅಧ್ಯಕ್ಷ್ ಬಾಯ್ ಉಶಾ ರಾಣೆನ್ ಉಗ್ತಾವಣ್ ಉಲವ್ಪಾಂತ್ ’ವಿದೇಶಾಂತ್ ಕೊಂಕಣಿ ವಾವ್ರ್ ಕೆಲ್ಲೊ ವಿವರ್ ಕೊಂಕಣಿಂತ್ ಎಕಾ ಪುಸ್ತಕಾರುಪಾರ್ ಪರ್ಗಟುನ್ ಯೆಂವ್ಕ್ ಜಾಯ್ ಆನಿ ಆಮ್ಚ್ಯಾ ಲೊಕಾಕ್ ತ್ಯಾ ವಾವ್ರಾಚಿ ಮಾಹೆತ್ ಮೆಳುಂಕ್ ಜಾಯ್’ ಮ್ಹಣಾಲಿ. ಮುಖೆಲ್ ಸಯ್ರೊ ದೊ|ಆಸ್ಟಿನ್ ಪ್ರಭುನ್ ಆಮಿ ಎಕಾ ಸಾಂಕ್ಳಿಚ್ಯಾ ಗಾಂಚಿಪರಿಂ ವೆಗ್-ವೆಗಳ್ಯಾ ಲಿಪಿಚ್ಯಾಂನಿ ಸಾಂಗಾತಾ ಮೆಳುನ್ ಎಕಾ ಮನಾನ್ ಕೊಂಕಣಿ ವಾವ್ರ್ ಕರುಂಕ್ ಜಾಯ್ ಮ್ಹಣಾಲೊ. ಉತ್ತರ್ ಕರ್ನಾಟಕಾಚೊ ನಾಮ್ನೆಚೊ ತಿಯಾತ್ರಿಸ್ತ್ ಸ್ಯಾಮ್ಸನ್ ಲೊಪೆಜಾನ್ ಕೊಂಕಣಿ ಕಾಂತಾರಾಂ, ತಿಯಾತ್ರಾಂ ಮುಖಾಂತ್ರ್ ಕಶೆಂ ಹೆರ್ ಪ್ರಾಂತ್ಯಾಚ್ಯಾ ಕೊಂಕಣಿ ಲೊಕಾಂಕ್ ಮೆಳುಂಕ್ ಅಪ್ಣಾಕ್ ಆವ್ಕಾಸ್ ಲಾಭ್ಲೊ ಅಶೆಂಚ್ ಜಾಯ್ತೆಂ ಕೊಂಕಣಿ ತಾಲೆಂತ್ ಮುಕಾರ್ ಯೆವ್ಪಾಕ್ ಆವ್ಕಾಸ್ ಕರುಂಕ್ ಅಸಲಿಂ ವೆಬಿನಾರಾಂ ಸಕುಂದಿತ್ ಮ್ಹಣಾಲೊ. ಧೆಂಪೆ ಕೊಲೆಜಿಚ್ಯಾ ಕೊಂಕಣಿ ವಿಭಾಗಾಚಿ ಮುಖೆಸ್ತ್ ಬಾಯ್ ಅಂಜು ಸಾಖರ್‌ದಾಂಡೆನ್ ಅಪ್ಲ್ಯಾ ಉಲವ್ಪಾಂತ್ ಬಾಬ್ ದಾಮೋದರ್ ಮಾವ್ಜೊ, ಬಾಯ್ ಹೇಮಾ ನಾಯ್ಕ್, ಬಾಬ್ ಎಡ್ವಿನ್ ಜೆ.ಎಫ್.ಡಿ’ಸೋಜ್ ಆನಿ ಹೆರಾಂಚ್ಯಾ ಕಾದಂಬರೆಂನಿ ಗಲ್ಫಾಚೆಂ ಜಿವಿತ್ ಪಿಂತ್ರಾಯಿಲ್ಲೆಂ ಆಮಿ ಅಧ್ಯಯನ್ ಕರುನ್ ಆಯ್ಲ್ಯಾಂವ್ ಪುಣ್ ಪಯ್ಲೆಪಾವ್ಟಿಂ ಆಮ್ಕಾಂ ಹಿ ಸಂಧಿ ಮೆಳ್ಳಿ – ಗಲ್ಫಾಂತ್ಲ್ಯಾ ಕೊಂಕಣಿ ವಾವ್ರಾವಿಶಿಂ ಸಮ್ಜುಂಕ್, ಅಸಲಿಂ ಕಾಮಾಂ ಫುಡೆಂಯ್ ಜಾಂವ್ಕ್ ಜಾಯ್ ಮ್ಹಣಾಲಿ.
ಪರಿಸಂವಾದಾಚ್ಯಾ ಪಯ್ಲ್ಯಾ ವಾಂಟ್ಯಾಂತ್ ಸ್ಮಿತಾ ಶೆಣಯ್ ಹಿಣೆಂ ’ಪರ್ಗಾಂವ್ಚೊ ವಾವ್ರ್ ಅಮೊಲಿಕ್, ಪುಣ್ ಆಮಿ ಕೆದಿಂಚ್ ತ್ಯಾ ವಾವ್ರಾಕ್ ಮೋಲ್ ದಿಲ್ಲೆಂ ನಾ, ಸಾಮಾಜಿಕ್ ಸ್ಥಿತಿಯಂತರಾಂತ್ ಕೊಂಕಣಿ ಲೋಕ್ ಭಾಶಿಕ್/ಧರ್ಮಿಕ್ ಬಂಧಡೆಕ್ ಲಾಗುನ್ ಗೊಂಯಾಂ ಸೊಡುನ್ ಲಾಗ್ಶಿಲ್ಯಾ ರಾಜ್ಯಾಂನಿ ವಚುನ್ ಜಿಯೆಂವ್ಕ್ ಲಾಗ್ಲೊ ಆನಿ ತೆದ್ನಾಂ ತಾಣಿಂ ತಾಂಚ್ಯಾ ಕುಟ್ಮಾಸವೆಂ ಫಕತ್ ದೊನಾಂಕ್ ಅಪ್ಣಾಸವೆಂ ವ್ಹೆಲೆಂ; ಅಪ್ಲೊ ದೇವ್ ಆನಿ ಅಪ್ಲಿ ಆವಯ್ ಭಾಸ್. ತಿತ್ಲೆಂಚ್ ನ್ಹಯ್, ಅಪ್ಲ್ಯಾ ಆವಯ್ ಭಾಶೆಚೊ ಮೋಗ್ ಕರುನ್ ತಿಚೊ ಪೋಸ್ ಸಯ್ತ್ ಕೆಲೊ’ ಮ್ಹಣಾಲಿ. ಶೈಲೇಂದ್ರ ಮೆಹ್ತಾನ್ ಸಯ್ರ್ಯಾಂಚಿ ಒಳೊಕ್ ಕರುನ್ ದಿತಚ್ ಪರಿಸಂವಾದಾಚಿ ಸುರ್ವಾತ್ ಕರುನ್ ಹೇಮಾಚಾರ್ಯನ್ ಸತ್ತರಾವ್ಯಾ ದಾಕ್ಡ್ಯಾಥಾವ್ನ್ ಮೊಟ್ವಿ ಒಳೊಕ್ ಕರುನ್ ದಿವುನ್ ಉಪ್ರಾಂತ್ ದಾಯ್ಜಿದುಭಾಯ್ ಸಂಘಟನಾಚ್ಯಾ ವಾವ್ರಾವಿಶಿಂ ತಾಂಚ್ಯಾ ದಿಶ್ಟಾವ್ಯಾವಿಶಿಂ, ತಾಂಚ್ಯಾ ಸುರ್ವಿಲ್ಲ್ಯಾ ವಾವ್ರಾಂತ್ ಫುಡ್ ಕರುಂಕ್ ಮೆಳ್‌ಲ್ಲ್ಯಾ ಅಡ್ಚಣೆವಿಶಿಂ ಸವಿಸ್ತಾರ್ ರಿತಿನ್ ಉಲವ್ನ್, ಆಜ್ ಕೊಂಕಣಿಂತ್ ದಾಯ್ಜಿದುಭಯ್ ಏಕ್ ವ್ಹಡ್ ರೂಕ್ ಜಾವ್ನ್ ಮಂಗ್ಳುರಾಂತ್ ಸಯ್ತ್ ದಾಯ್ಜಿದುಭಾಯ್ ಸಂಘಟನಾಚೆ ಸಾಂದೆ ಗಾಂವಾರ್ ಗಾಂವ್ ವಚುನ್ ’ಯೆಯಾ ಆಮಿ ಕೊಂಕಣಿ ಉಲವ್ಯಾಂ’ ಮ್ಹಳ್ಳಿಂ ಕಾರ್ಯಿಂ ಚಲವ್ನ್ ಆಸಾತ್ ಮ್ಹಣಾಲೊ.
ತ್ಯೇ ಉಪ್ರಾಂತ್ ಕ್ಲೆರೆನ್ಸ್ ಕೈಕಂಬಾನ್ ಮಸ್ಕತಾಂತ್ಲ್ಯಾ ಬರ್ಪಿ ಮಿತ್ರಾಚ್ಯಾ ಸವಿಸ್ತಾರ್ ವಾವ್ರಾವಿಶಿಂ ಉಲವ್ನ್, ಮಸ್ಕತಾಂತ್ಲ್ಯಾ ಸಾಹಿತಿಕ್ ತಾಲೆಂತಾಂನಿ ಅಪ್ಲಿಂ ತಾಲೆಂತಾಂ ಫಕತ್ ಮಸ್ಕತಾಕ್ ಮಾತ್ರ್ ಸೀಮಿತ್ ಕರುನ್ ದವರಿನಾಸ್ತಾಂ, ದಾಯ್ಜಿದುಭಯ್.ಕೊಮ್, ಮಾಯ್‍ಭಾಸ್.ಕೊಮ್, ದಾಯ್ಜ್.ಕೊಮ್ ಅಶೆಂ ಸರ್ವ್ ನೇಮಾಳಿಂ ತಶೆಂಚ್ ಜಾಳಿಜಾಗ್ಯಾಂಕ್ ತೆಂಕೊ ದಿವುನ್ ಆಯ್ಲೆಂ ಮ್ಹಣಾಲೊ. ಖತಾರಾಂತ್ ಪಾಟ್ಲ್ಯಾ ಪಂಚ್ವೀಸ್-ತೀಸ್ ವರ್ಸಾಂ ಥಾವ್ನ್ ಚಲುನ್ ಆಸ್ಚ್ಯಾ ವಾವ್ರಾಚಿ ಮಾಹೆತ್ ದಿವ್ನ್ ಗ್ಲ್ಯಾಡ್ಸನ್ ಅಲ್ಮೇಡಾನ್ ಹೊಚ್ ವಾವ್ರ್ ಹಾಚ್ಯಾಕೀ ಬರೆ ರಿತಿನ್ ಮುಕಾರುನ್ ವ್ಹರ್ಚೊ ಆಶಾವಾದ್ ವೆಕ್ತ್ ಕೆಲೊ. ತ್ಯೇ ಉಪ್ರಾಂತ್ ಕುವೆಯ್ಟಾಂತ್ಲ್ಯಾ ಕೊಂಕಣಿ ವಾವ್ರಾವಿಶಿಂ ಉಲವ್ನ್ ಬಾಯ್ ಐಡಾ ಡಿಸಿಲ್ವಾ ಪಾಲಡ್ಕಾನ್ ಕೊಂಕಣಿ ಕುಳ್ವಾರ್ ಕುವೇಯ್ಟ್ ಸಂಘಟನಾಚ್ಯಾ ಬುನ್ಯಾದಿ ವಾವ್ರಾಚಿ ತಶೆಂಚ್ ಆಶಾವಾದಿ ಪ್ರಕಾಶನಾಚ್ಯಾ ಸುರ್ವಿಲ್ಯಾ ವಾವ್ರಾಚಿ ಒಳೊಕ್ ಕರುನ್ ದಿತಚ್ ವಲ್ಲಿ ಕ್ವಾಡ್ರಸಾನ್ ಸವಿಸ್ತಾರ್ ರಿತಿನ್ ಕುವೆಯ್ಟಾಂತ್ ಜಾಲ್ಲ್ಯಾ ಕೊಂಕಣಿ ಸಾಹಿತ್ಯಿಕ್ ವಾವ್ರಾಚಿ ಒಳೊಕ್ ಕರುನ್ ದಿಲಿ; ಸತ್ತಾವಿಸ್ ಕೊಂಕಣಿ ಪುಸ್ತಕಾಂ ಆಶಾವಾದಿ ಪ್ರಕಾಶನಾನ್ ಪರ್ಗಟ್ಲಿಂ, ಪಾಂತೀಸ್ ಮಯ್ನ್ಯಾಳಿಂ ಕಾಮಾಸಾಳಾಂ, ಬಾತ್ತೀಸ್ ಪುಸ್ತಕ್ ಸಮೀಕ್ಶಾ, ಸ ಕಥಾಪಾಠ್, ಕೊಂಕಣಿ ಅಭಿಯಾನ್, ಅಟ್ಟಾವೀಸ್ ಮಯ್ನ್ಯಾಳೆ ಕವಿತಾ ಸ್ಪರ್ಧೆ, ದೋನ್ ವರ್ಸಾಚೆ ಕವಿ, ತಶೆಂಚ್ ದೋನ್ ವರ್ಸಾಚೆ ಕಥಾಕಾರ್ ಪುರಸ್ಕಾರ್, ತಶೆಂಚ್ ೨೦೦೪ ಥಾವ್ನ್ ೨೦೦೭ ಪರ್ಯಾಂತ್ ವರ್ಸಾಳೆ ಸಾಹಿತಿಕ್ ಸ್ಪರ್ಧೆ ಮಾಂಡುನ್ ಹಾಡ್ಲೆ ಮಾತ್ರ್ ನ್ಹಯ್, ಮುಂಬಯ್ ಆನಿ ಗಾಂವಾಂತ್ ಸಯ್ತ್ ಕೊಂಕಣಿ ಕಾಮಾಸಾಳಾಂ ಚಲವ್ನ್ ವ್ಹೆಲಿಂ ಮ್ಹಣಾಲೊ.
ಪರಿಸಂವಾದಾಚೊ ವಾಂಟೊ ಗೌರಂಗ್ ಭಂಡಾಯೆನ್ ಚಲವ್ನ್ ವ್ಹೆಲೊ. ಅಖೇರಿಚೊ ವಾಂಟೊ ಶೈಲೇಂದ್ರ ಮೆಹ್ತಾನ್ ಚಲವ್ನ್ ವ್ಹೆಲೊ. ಕನ್ಸೆಪ್ಟಾ ಫೆರ್ನಾಂಡಿಸಾನ್ ಅಪ್ಲ್ಯಾ ಸಂಪ್ಣೆಚ್ಯಾ ಉಲವ್ಪಾಂತ್, ಪರಿಸಂವಾದಾಂತ್ ಜಾಲ್ಲ್ಯಾ ಸರ್ವ್ ಉಲವ್ಪಾಂಚೆರ್ ಏಕ್ ನದರ್ ಘಾಲುನ್ ಪ್ರಮುಕ್ ವಿಶ್ಯಾಂಚೆರ್ ಉಜ್ವಾಡ್ ಫಾಂಕಯಿತ್ತ್, ಹೆಂ ಖರೆಂಚ್ ಏಕ್ ಜಾಗತಿಕ್ ಪರಿಸಂವಾದ್, ಆನಿ ಹಿ ಏಕ್ ಸುರ್ವಾತ್ ಮಾತ್ರ್, ಫುಡೆಂ ಎಕೆಕಾ ರಾಶ್ಟ್ರಾಂತ್ ಜಾಲ್ಲ್ಯಾ ಸಮಗ್ರ್ ಕೊಂಕಣಿ ವಾವ್ರಾಚೆರ್ ಖೊಲಾಯೆಚೆಂ ಅಧ್ಯಯನ್ ಚಲಂವ್ಚ್ಯಾ ದಿಶೆನ್ ಪರಿಸಂವಾದ್ ಮಾಂಡುನ್ ಹಾಡುಂಕ್ ಉಲೊ ದಿಲೊ.
ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟವ್ನ್ ಜುಲಾಯ್ 1 ತಾರಿಕೆರ್ ’ಸಿರಿವಂತಾಚ್ಯಾ ಸಾಹಿತ್ಯಾಚೊ ಅಭ್ಯಾಸ್’ ಸುರ್ವಾತ್ ಜಾಂವ್ಕ್ ಆಸ್ಚ್ಯಾ ಕಥಾಪಾಠ್ ಚೊವ್ತ್ಯಾ ಶಿಂಕಳೆಚಿ ತಶೆಂಚ್ ಸಿರಿವಂತಾಚಿ ಮೊಟ್ವಿ ಒಳೊಕ್ ಕರುನ್ ದಿಲಿ.
ಮನುಷ್ಯನಾಗಿ ಹುಟ್ಟುವುದೆ ಹೆಮ್ಮೆ: ಎಸ್ಪಿವೈಎಸ್ಸೆಸ್ಸ್ ಜಿಲ್ಲಾ ಶಿಕ್ಷಣ ಪ್ರಮುಖ ಚೌಡಪ್ಪ
ಕೋಲಾರ: ಮನುಷ್ಯನಾಗಿ ಹುಟ್ಟುವುದೆ ಹೆಮ್ಮೆ ಆದುದರಿಂದ ಸುಸಂಸ್ಕøತರಾಗಿ ಜೀವನದಲ್ಲಿ ಇಡುವ ಹೆಜ್ಜೆ ನೋಡುವ ನೋಟ ಉಡುವ ಬಟ್ಟೆ ಆಡುವ ಮಾತು ಸುಸಂಸ್ಕøತವಾಗಿದ್ದರೆ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಎಸ್ಪಿವೈಎಸ್ಸೆಸ್ಸ್ ಜಿಲ್ಲಾ ಶಿಕ್ಷಣ ಪ್ರಮುಖ ಚೌಡಪ್ಪ ಹೇಳಿದರು.
ಪಟ್ಟಣ ತ್ಯಾಗರಾಜ ಬಡಾವಣೆಯ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ 91 ನೇ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಶಿಬಿರದ ಭಾರತ ಮಾತಾ ಪೂಜಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಿಂದ ಎಲ್ಲವನ್ನು ಪಡೆಯುವ ಮನುಷ್ಯರು ಸಮಾಜಕ್ಕೇನು ಕೊಡದೆ ನಶ್ವರವಾಗುತ್ತಿದ್ದೇವೆ. ಭಾರತ ಎಂದರೆ ಬೆಳಕು, ರಮಿಸು, ತೇಜಸು ನಂಬಿಕೆ ಪ್ರಕೃತಿ ಭಾರತ ಮಾತೆ ಹೆಮ್ಮೆ ಎನ್ನುವುದು ಅರಿತರೆ ನಾವು ದನ್ಯರು. ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಿಕ ಸೇವಾ ಚೆಟುವಟಿಕೆಗಳು ಮಾಡುವಲ್ಲಿ ಜಾಗೃತರಾಗಿರಬೇಕು. ಎಲ್ಲಿಗೆ ಹೋದರು ಹೊಂದಿಕೊಂಡು ಹೋಗುವ ಸ್ವಾಭಾವ ಬೆಳೆಸಿಕೊಳ್ಳಬೇಕು. ಯೋಗ ಎಂದರೆ ದೇಹ ದಂಡಿಸುವುದಲ್ಲ. ಕುಂತರೆ ನಿಂತರೆ ನಿತ್ಯ ಜೀವನದಲ್ಲಿ ನಡೆಯುವ ನಡೆ ನುಡಿಯೇ ಯೋಗ. ಸತ್ಸಂಘಗಳ ಮೂಲಕ ಶ್ರೀಮನ್ನಾರಾಯಣ ನುಡಿಯಂತೆ ಮಾನವೀಯ ಮೌಲ್ಯಗಳು ಬೆಳೆಸಿಕೊಂಡು ಸಮಾಜದಿಂದ ಪಡೆದ ಯೋಗ ಶಿಕ್ಷಣಕ್ಕೆ ಸಮಾಜ ನಿಧಿ ಅರ್ಪಿಸುವ ಮೂಲಕ ಸಮಾಜಿಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಮುರಾರ್ಜಿ ಶಾಲೆ ಮುಖ್ಯ ಶಿಕ್ಷಕಿ ಸುಜಾತ ಮಾತನಾಡಿ ಜೀವನದಲ್ಲಿ ನಾವು ಆನಂದವಾಗಿರಲು ಧೈಹಿಕ ಮನಸಿಕ ನೆಮ್ಮದಿಗೆ ಯೋಗಾಭ್ಯಾಸ ಕಲಿತು ಶರೀರದಲ್ಲಿನ ಸೋಂಬೇರಿತನ ದೂರ ಮಾಡಿ. ಯೋಗ ಮಾಡಿದ್ದರೆ ಮದುಮೇಹ, ತೈರಾಯ್ಡ್ ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳು ನಮ್ಮಿಂದ ದೂರವಾಗಿ ದೇಹಕ್ಕೆ ರೋಗ ನಿರೋದಕ ಶಕ್ತಿ ಬರುತ್ತದೆ. ತಂತ್ರಜ್ಞಾನ ಬೆಳೆದ ಈ ದಿನಗಳಲ್ಲಿ ಪ್ರತಿ ವ್ಯಕ್ತಿ ಐಶಾರಾಮಿ ಜೀವನಕ್ಕೆ ಜೋತು ಬಿದ್ದು ದೇಹ ದಂಡನೆಯಾಗದೆ ದೇಹ ಬಂಜೇತನವಾಗುತ್ತದೆ. ತಾಯಿ ಮತ್ತು ಗುರು ಸ್ಥಾನ ಎಲ್ಲದ್ದಕ್ಕಿಂತ ಗುರುತ್ತರವಾದದ್ದು. ಅದಕ್ಕೆ ಬೆಲೆ ಕಟ್ಟಲಾಗದು ಕಲಿತ ವಿದ್ಯೆ ಹೆತ್ತ ತಾಯಿ ಹೊತ್ತ ಭೂಮಿಯ ಋಣ ತೀರಿಸುವುದೆಂದರೆ ಸಮಾಜದ ಸೇವಾ ಚೆಟುವಟಿಕೆಗಳಿಗೆ ಅರ್ಪಿಸುವ ಕಾಣಿಕೆಯಿಂದ ಋಣ ಮುಕ್ತರಾಗುತ್ತೇವೆಚಿದರು.
ಸಹ ಶಿಕ್ಷಕಿ ಉಷಾ ಪ್ರೇಮಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವೆ ಎಂದರೆ ತ್ಯಾಗದ ರೀತಿಯಲ್ಲಿರಬೇಕು. ನಾವು ಮಾಡುವ ಸೇವೆ ಯೋಗ್ಯವಾಗಿರಬೇಕು. ಮನಸು ದೇಹ ಶುದ್ಧವಾಗಿಟ್ಟುಕೊಂಡು ಸಾರ್ಥಕ ಸೇವೆ ಮಾಡಬೇಕು. ನಮ್ಮ ಸಮಿತಿ ಇರುವ ವಾಸ್ತವಾಂಶವನ್ನು ಸಮಾಜದ ಜನ ಸಮುದಾಯಕ್ಕೆ ಉಚಿತವಾಗಿ ಕಲಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಅನುರಾಧಾ ಪ್ರಾರ್ಥಿಸಿ, ಪ್ರಭಾವತಮ್ಮ ಸ್ವಾಗತಿಸಿ, ಉಮಾದೇವಿ ವಂದಿಸಿದರು, ವರಲಕ್ಷ್ಮಮ್ಮ ನಿರೂಪಿಸಿದರು.
10 ಶ್ರೀನಿವಾಸಪುರ 1: ಯೋಗ ಮಂದಿರದಲ್ಲಿ ಏರ್ಪಡಿಸಿದ್ದ ಭಾರತ ಮಾತಾ ಪೂಜೆ ಕಾರ್ಯಕ್ರಮದಲ್ಲಿ ಯೋಗ ಬಂದುಗಳು ಸಮಾಜ ನಿಧಿ ಅರ್ಪಿಸಿದರು.
ಗ್ರಾಮೀಣ ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಬದುಕು ರೂಪಿಸಿಕೊಳ್ಳಬೇಕು : ಡಾ. ಬಾಬುರೆಡ್ಡಿ
ಶ್ರೀನಿವಾಸಪುರ: ಗ್ರಾಮೀಣ ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞ ಡಾ. ಬಾಬುರೆಡ್ಡಿ ಹೇಳಿದರು.
ತಾಲ್ಲೂಕಿನ ಆರಿಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಡಾ. ಅಬ್ದುಲ್ ಕಲಾಂ ಅವರಂಥ ಮಹಾನ್ ಚಿಂತಕರ ಆದರ್ಶದ ಬೆಳಕಲ್ಲಿ ಬೆಳೆಯಬೇಕು ಎಂದು ಹೇಳಿದರು.
ಗ್ರಾಮದ ಮುಖಂಡರಾಗಿದ್ದ ದಿವಂಗತ ಎ.ನಾರಾಯಣಸ್ವಾಮಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ನಿರ್ಮಿಸಿದರು. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಪೋಷಕರು ಹಾಗೂ ಶಿಕ್ಷಕರಿಗೆ ಹೆಸರು ತರಬೇಕು ಎಂದು ಹೇಳಿದರು.
ಡಾ. ಸಿರಿಲಕ್ಷ್ಮಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡು ಬೆಳೆಯಬೇಕು. ಪರಿಶ್ರಮದ ಮೂಲಕ ಸಾಧನೆ ಹಾದಿಯಲ್ಲಿ ಸಾಗಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆದು, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಡಾ. ಬಾಬುರೆಡ್ಡಿ, ಡಾ. ಸಿರಿಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ವೆಂಕಟರೆಡ್ಡಿ, ಮುನಿರೆಡ್ಡಿ, ಶ್ರೀರಾಮರೆಡ್ಡಿ, ಅಶೋಕರೆಡ್ಡಿ, ಮುಖ್ಯ ಶಿಕ್ಷಕಿ ಕೆ.ಭಾಗ್ಯಲಕ್ಷ್ಮಿ, ಶಿಕ್ಷಕರಾದ ವೆಂಕಟೇಶ ಬಾಬು, ಶ್ರೀನಾಥ್, ಎಚ್.ಆಂಜನಪ್ಪ, ಸುಜಾತ, ಬಿ.ವಿ.ರತ್ನಮ್ಮ, ಮುರಳಿ ಬಾಬು ಇದ್ದರು.
ಜಿಲ್ಲಾದ್ಯಂತ 7 ಕೇಂದ್ರಗಳಲ್ಲಿ ಜೂ.12 ರಿಂದ ಎಸ್ಸೆಸ್ಸೆಲ್ಸಿಪೂರಕ ಪರೀಕ್ಷೆ ಆರಂಭ1537 ಮಂದಿ ನೊಂದಣಿ-ಸುಗಮ ಪರೀಕ್ಷೆಗೆ ಅಗತ್ಯ ಕ್ರಮ-ಡಿಸಿ ವೆಂಕಟ್‍ರಾಜಾ
ಕೋಲಾರ:- ಜಿಲ್ಲಾದ್ಯಂತ ಜೂ.12 ರಿಂದ 7 ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಕಳೆದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ 1215 ಹಾಗೂ ಖಾಸಗಿಯಾಗಿ 322 ಮಂದಿ ವಿದ್ಯಾರ್ಥಿಗಳು ಸೇರಿದಂತೆ 1537 ಮಂದಿ ಕುಳಿತಿದ್ದು, ಯಾವುದೇ ಗೊಂದಲಕ್ಕೆಡೆ ಇಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಹಾಜರಾತಿ ಕೊರತೆಯಿಂದ ಪರೀಕ್ಷೆ ಅವಕಾಶ ಕಳೆದುಕೊಂಡಿದ್ದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1537 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕುವಾರುಕೇಂದ್ರಗಳ ವಿವರ
ಪರೀಕ್ಷೆ ನಡೆಯುತ್ತಿರುವ ಕೇಂದ್ರಗಳೆಂದರೆ ಕೋಲಾರದಲ್ಲಿ ಬಾಲಕಿಯರ ಪಿಯು ಕಾಲೇಜು, ಅಂಜುಮಾನ್ ಅಲಮಿನ್ ಶಾಲೆ, ಬಂಗಾರಪೇಟೆ ಆದರ್ಶ ವಿದ್ಯಾಲಯ, ಕೆಜಿಎಫ್‍ನಲ್ಲಿ ಸಮುತಿ ಜೈನ್ ಶಾಲೆ, ಮಾಲೂರಿನಲ್ಲಿ ಜೆಎಸ್‍ಎಸ್ ಗಾಯತ್ರಿ ಪ್ರೌಢಶಾಲೆ, ಮುಳಬಾಗಿಲಿನಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಶ್ರೀನಿವಾಸಪುರದಲ್ಲಿ ಬಾಲಕರ ಪಿಯು ಕಾಲೇಜು ಎಂದು ತಿಳಿಸಿದರು.
ಕೋಲಾರ ತಾಲ್ಲೂಕಿನಲ್ಲಿ ಒಟ್ಟು 2 ಕೇಂದ್ರಗಳಿದ್ದು, ಅಲ್ಲಿ ಒಂದು ಕೇಂದ್ರದಲ್ಲಿ 255 ಹಾಗೂ ಬಾಲಕಿಯರ ಪಿಯು ಕಾಲೇಜು ಖಾಸಗಿ ಕೇಂದ್ರದಲ್ಲಿ 322 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದ ಅವರು, ಉಳಿದಂತೆ ಬಂಗಾರಪೇಟೆ 194ಮಂದಿ,ಕೆಜಿಎಫ್-135, ಮಾಲೂರು-169, ಮುಳಬಾಗಿಲು-370 ಹಾಗೂ ಶ್ರೀನಿವಾಸಪುರದಲ್ಲಿ 92 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ
200 ಮಂದಿ ನೇಮಕ
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಗೆ ಸಂಬಂಧಿಸಿದಂತೆ ಸುಗಮ ಪರೀಕ್ಷೆಗೆ 7 ಮಂದಿ ಮುಖ್ಯ ಅಧೀಕ್ಷಕರು, 7 ಮಂದಿ ಅಭಿರಕ್ಷಕರು ಸೇರಿದಂತೆ ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾಕರು ಸೇರಿದಂತೆ ಒಟ್ಟು 200 ಕ್ಕೂ ಹೆಚ್ಚು ಮಂದಿ ಪರೀಕ್ಷಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮುಖ್ಯ ಅಧೀಕ್ಷಕರು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್‍ಗಳನ್ನು ಡಿಡಿಪಿಐ ಕಚೇರಿಯ ಭದ್ರತಾ ಕೊಠಡಿಗೆ ಸಂಜೆ 4 ಗಂಟೆಯೊಳಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ ಎಂದರು.
144ನೇ ಸೆಕ್ಷನ್
ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8 ರಿಂದ ಸಂಜೆ 3ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ವಿವರ ನೀಡಿದರು.
ಸ್ಥಾನಿಕ ಜಾಗೃತದಳಕ್ಕೆ
ನೇಮಕ-ಡಿಡಿಪಿಐ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಪರೀಕ್ಷಾ ಪಾವಿತ್ರ್ಯತೆ ಕಾಪಾಡಲುಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃದಳ ಸಿಬ್ಬಂದಿಯನ್ನು ನೇಮಿಸಲಾಗಿದೆ,
ಇದಲ್ಲದೇ ಡಿಡಿಪಿಐ, ಡಿವೈಪಿಸಿ, ನೇತೃತ್ವದಲ್ಲಿ ಎರಡು ಸಂಚಾರಿ ಜಾಗೃತದಳ ಕಾರ್ಯನಿರ್ವಹಿಸಲಿದೆ, ಪ್ರತಿ ತಾಲೂಕಿನಲ್ಲೂ ಬಿಇಒ, ನೇತೃತ್ವದಲ್ಲಿ ತಲಾ 1 ಜಾಗೃತದಳ ರಚಿಸಲಾಗಿದೆ ಎಂದ ಅವರು, ಇದಲ್ಲದೇ ಅಂತರ್ಜಿಲ್ಲಾ ಜಾಗೃತದಳ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಜಾಗೃತದಳ ಬರಲಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಾಟರ್‍ಬಾಯ್‍ಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ಮುದ್ರಿಸಿ ಕಳುಹಿಸಿದೆ, ಗುರುತಿನ ಚೀಟಿ ಎಲ್ಲದೇ ಯಾರಿಗೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ ಎಂದರು.
ಮೌಲಸೌಲಭ್ಯಗಳ ಪರಿಶೀಲನೆ ನಡೆದಿದೆ
ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಜಿಲ್ಲೆಯ ಎಲ್ಲಾ 7 ಕೇಂದ್ರಗಳಲ್ಲೂ ಕೊಠಡಿ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳ ಕುರಿತು ನಿಗಾ ವಹಿಸಿದ್ದು, ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮೊಬೈಲ್ ಬಳಕೆ ಸಂಪೂರ್ಣ ನಿಷಿದ್ದ
ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿ ಮೊಬೈಲ್ ಬಳಸದಿರುವಂತೆ ಕಟ್ಟಪ್ಪಣೆ ವಿಧಿಸಲಾಗಿದೆ.
ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವಿಚಾರಕರು ಮೊಬೈಲ್ ತಂದಿದ್ದರೆ ಸ್ವಿಚ್ ಆಫ್ ಮಾಡಿಸಿ ವಶಕ್ಕೆ ಪಡೆಯಲು ಸೂಚಿಸಲಾಗಿದ್ದು ವಿದ್ಯಾರ್ಥಿಗಳೂ ಸಹಾ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೇಂದ್ರದೊಳಕ್ಕೆ ತರಬಾರದು, ಕೇಂದ್ರದ ಮುಖ್ಯ ದ್ವಾರದಲ್ಲೇ ಈ ಸಂಬಂಧ ಪರಿಶೀಲಿಸಿ ಒಳ ಬಿಡುವಂತೆ ಪರೀಕ್ಷಾ ಮಂಡಳಿ ಸೂಚಿಸಿದೆ ಎಂದು ತಿಳಿಸಿದ್ದಾರೆ.
ಜೂ.12 ರಂದು ಪ್ರಥಮ ಭಾಷೆ
ಜೂ.12 ರಂದು ಪ್ರಥಮ ಭಾಷೆ ಪರೀಕ್ಷೆ ನಡೆಯಲಿದ್ದು, ಜೂ.13 ವಿಜ್ಞಾನ, ಜೂ.14 ದ್ವಿತೀಯ ಭಾಷೆ, ಜೂ.15 ಸಮಾಜ ವಿಜ್ಞಾನ, ಜೂ.16 ತೃತೀಯ ಭಾಷೆ, ಜೂ.17 ಗಣಿತ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದ್ವಿತೀಯ ಭಾಷೆ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-30 ಗಂಟೆಯವರೆಗೂ ನಡೆಯಲಿದ್ದು, ಉಳಿದ ಪ್ರಥಮ ಭಾಷೆ,ಗಣಿತ,ವಿಜ್ಞಾನ, ಸಮಾಜವಿಜ್ಞಾನ ವಿಷಯಗಳ ಪರೀಕ್ಷೆ 10-30 ರಿಂದ 1-45 ರವರೆಗೂ ನಡೆಯಲಿದೆ.
ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣ
ಸರ್ಕಾರದ ಆದೇಶದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಕೇಂದ್ರಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದರು.
ವಿದ್ಯಾರ್ಥಿ ಸಮುದಾಯ ವದಂತಿಗಳಿಗೆ ಕಿವಿಗೊಡದೇ, ಖಿನ್ನರಾಗದೇ ವಿಚಲಿತರಾಗದೇ ಪರೀಕ್ಷೆ ಬರೆದು ಗುಣಾತ್ಮಕ ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ, ಡಿವೈಪಿಸಿಗಳಾದ ಮೋಹನ್‍ಬಾಬು,ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಕೃಷ್ಣಮೂರ್ತಿ, ಉಮಾದೇವಿ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯಿತ್ರಿ,ಶಂಕರೇಗೌಡ, ವೆಂಕಟೇಶಪ್ಪ ಮತ್ತಿತರರು ಶುಭ ಹಾರೈಸಿದ್ದಾರೆ.
ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಕೋಲಾರ ತಾಲ್ಲೂಕು ಪರೀಕ್ಷಾನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಬಂಗಾರಪೇಟೆ ತಾಲ್ಲೂಕು ನೋಡಲ್ ಅಧಿಕಾರಿ ಸಿ.ಎಂ.ವೆಂಕಟರಮಣಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳು, ಖಜಾನೆಯ ಅಧಿಕಾರಿಗಳು ಹಾಜರಿದ್ದರು.
ಬಾಲಕಿಯರ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಸಿದ್ದತೆಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಕ್ರಮವಹಿಸಿ -ಮುನಿವೆಂಕಟರಾಮಾಚಾರಿ
ಕೋಲಾರ:- ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಜೂ.12ರ ಸೋಮವಾರದಿಂದ ಆರಂಭಗೊಳ್ಳುತ್ತಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಹಾಗೂ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹಾಗೂ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಸೂಚಿಸಿದರು.
ನಗರದ ಬಾಲಕಿಯರ ಪಿಯು ಕಾಲೇಜು ಕೇಂದ್ರದಲ್ಲಿ ಪರೀಕ್ಷೆಗೆ ನಿಯೋಜನೆಗೊಂಡ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತದಳ ಹಾಗೂ ಕೊಠಡಿ ಮೇಲ್ವಿಚಾರರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇದು ಖಾಸಗಿ ಅಭ್ಯರ್ಥಿಗಳ ಕೇಂದ್ರವಾಗಿದೆ ಎಂದ ಅವರು, ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ.75 ಶಾಲಾ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಅವಕಾಶ ಸಿಗದೇ ವಂಚಿತರಾದ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದ್ದು, ಅದರಂತೆ ರಾಜ್ಯದಲ್ಲಿ 28 ಸಾವಿರ ಮಂದಿ ಹಾಗೂ ಕೋಲಾರ ಜಿಲ್ಲೆಯಲ್ಲಿ 322 ಮಂದಿ ಅಂತಹ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಕೇಂದ್ರದಲ್ಲಿ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಿ, ಈ ಕೇಂದ್ರದಲ್ಲಿ ಕನ್ನಡ,ಉರ್ದು,ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಇರುವುದರಿಂದ ಪ್ರಶ್ನೆಪತ್ರಿಕೆ ವಿತರಿಸುವಾಗ ಗೊಂದಲ ಮಾಡಿಕೊಳ್ಳದಿರಿ, ಆಯಾ ಮಾಧ್ಯಮದ ವಿದ್ಯಾರ್ಥಿಯ ಮಾಹಿತಿ ಗಮನಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದಿತ ಶಿಕ್ಷಕರನ್ನೇ ಸದರಿ ಪರೀಕ್ಷೆಗೆ ಕೊಠಡಿಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕು, ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಗುರುತಿನ ಚೀಟಿ ನೀಡಿ ಎಂದು ಸೂಚಿಸಿದರು.
ಮುಖ್ಯ ಅಧೀಕ್ಷಕ ನಾಗರಾಜ್ ಮಾತನಾಡಿ, ಕೊಠಡಿ ಮೇಲ್ವಿಚಾರಕರು ಸೇರಿದಂತೆ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಯಾರೂ ಮೊಬೈಲ್ ತರಬೇಡಿ, ಮಕ್ಕಳಿಗೆ ಗೊಂದಲವಾಗದ ರೀತಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿದರು.
ಕೊಠಡಿ ಮೇಲ್ವಿಚಾರಕರು, ಡಿ ದರ್ಜೆ ಸಿಬ್ಬಂದಿ ಸೇರಿದಂತೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ, ಮೊಬೈಲ್ ತಂದಿದ್ದರೆ ಶಿಕ್ಷಕರು ಆರಂಭದಲ್ಲೇ ತಮ್ಮ ಮೊಬೈಲ್‍ಅನ್ನು ಇಲಾಖೆ ನೇಮಿಸಿರುವ ಮೊಬೈಲ್ ಸಂಗ್ರಹಣಾಧಿಕಾರಿಗೆ ಒಪ್ಪಿಸಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ಕ್ರಮವಹಿಸಲಾಗಿದೆ, ಪರೀಕ್ಷಾಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿ ಬೆಳಗ್ಗೆ 9 ಗಂಟೆಗೆ ಹಾಜರಾಗುವಂತೆ ಸೂಚಿಸಿದ ಅವರು, ಆಯಾ ದಿನದಂದು ಇರುವ ಪರೀಕ್ಷಾ ವಿಷಯದ ಶಿಕ್ಷಕರನ್ನು ಪರೀಕ್ಷೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಅಭಿರಕ್ಷಕರು ಪ್ರಶ್ನೆಪತ್ರಿಕೆ ಬಂಡಲ್‍ಗಳನ್ನು ಮಾರ್ಗಾಧಿಕಾರಿಗಳು ಬೆಳಗ್ಗೆ 8 ಗಂಟೆಗೆ ತರುವುದರಿಂದ ಮೊದಲೇ ಹಾಜರಿದ್ದು ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ, ಕೊಠಡಿಯಲ್ಲಿ ಪರೀಕ್ಷಾ ಕಾರ್ಯ ಹಾಗೂ ಮಕ್ಕಳ ಏಕಾಗ್ರತೆಗೆ ಭಂಗ ಬಾರದಂತೆ ಎಲ್ಲಾ ಅಗತ್ಯ ಮುನ್ನಚ್ಚರಿಕೆ ವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರೀಕ್ಷಾ ತಾಲ್ಲೂಕು ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಶಿಕ್ಷಕರಾದ ಶಿಕ್ಷಕರಾದ ಲೋಕೇಶಪ್ಪ ದಟ್ಟೇರ್,ಕೆ.ಲೀಲಾ, ನಾರಾಯಣರೆಡ್ಡಿ, ಅನಿತಾ ಪತ್ತಾರ್, ಸಿಆರ್‍ಪಿ ಗೋವಿಂದು, ಮೇಡಿಹಾಳ ಶಿಕ್ಷಕ ನಾಗರಾಜ್,ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಶಾಲೆಗಳು ಶಿಕ್ಷಕರು ಹಾಜರಿದ್ದರು.