ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂದು ಮಾತು ನೀಡಿ ಮತ ಪಡೆದು ಮನ್ನಾ ಮಾಡದಿದ್ದಕ್ಕೆ ಪ್ರತಿಭಟನೆ

ಕೋಲಾರ, ಜೂ.13: ಪ್ರಜಾಯಾತ್ರೆ ಸಮಾವೇಶಗಳಲ್ಲಿ ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ನಮ್ಮ ಪಕ್ಷಕ್ಕೆ ಮಹಿಳೆಯಾದ ನೀವು ಮತ ನೀಡಿದರೆ ಸಹಕಾರ ಬ್ಯಾಂಕ್‍ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂಧು ಮಾತು ನೀಡಿ ಮತ ಪಡೆದ ಸಿದ್ದರಾಮಯ್ಯನವರ ಸರ್ಕಾರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ದ್ರೋಹವನ್ನು ಖಂಡಿಸಿ ಹೊಸಮಟ್ನಹಳ್ಳಿ ಮತ್ತು ಮಂಗಸಂದ್ರ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಾತಿಗೆ ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಬೋರ್ಡ ಹಾಕಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ನಳಿನಿಗೌಡ ಮಾತನಾಡಿ ಸಿದ್ದರಾಮಯ್ಯನವರೇ, ಕೊಟ್ಟ ಮಾತಿನಂತೆ ನಡೆಯುವ ನೀವು ಮಹಿಳೆಯರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದಿರಲು ಕಾರಣವೇನು? ಇಡೀ ರಾಜ್ಯದಲ್ಲಿ ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಅಹಿಂದ ವರ್ಗದ ಹಾಗೂ ಬಡ ರೈತಾಪಿ ಕುಟುಂಬಗಳ ಹೆಣ್ಣು ಮಕ್ಕಳೇ ಹೊರತು ಶ್ರೀಮಂತರಲ್ಲ ಮಾನ್ಯ  ಸಿದ್ದರಾಮಯ್ಯರವರು  ಅರ್ಥ ಮಾಡಿಕೊಳ್ಳಬೇಕು.
ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಲು ರೆಡಿಯಾಗಿದ್ದರೂ ಕೋಲಾರ ಜಿಲ್ಲೆಯ ಕೆಲವೇ ಕೆಲವು ಅಘೋಷಿತ ಕಾಂಗ್ರೆಸ್ ನಾಯಕರು ಮತ್ತು ಸಹಕಾರಿ ಸಂಘಗಳಲ್ಲಿರುವ ಕೆಲವು ವ್ಯಕ್ತಿಗಳು ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಿದರೆ ಯಾರಿಗೋ ಸಾಲ ಮನ್ನಾ ಮಾಡಿಸಿದ ಕೀರ್ತಿ ಬಂದು ಬಿಡುತ್ತೆ ಎಂಬ ದುರುದ್ದೇಶ ಇಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಇಲ್ಲಸಲ್ಲದ ದೂರುಗಳನ್ನು ಹೇಳಿಕೊಂಡು ಸಾಲ ಮನ್ನಾ ಮಾಡಿಸದೆ ಇಬ್ಬಾಗಿ ನಿತಿಯನ್ನು ಅನುಸರಿಸುತ್ತಿರುವ ಈ ಮುಖಂಡರ ವರ್ತನೆ ಇದೇ ರೀತಿ ಮುಂದುವರೆದರೆ ಮಹಿಳೆಯರು ಬುದ್ದಿ ಕಲಿಸಬೇಕಾಗುತ್ತದೆ ಎಂದು ಹೆಚ್ಚರಿದರು 
ಮಂಗಸಂದ್ರ ಚೌಡಮ್ಮ ಮಾತನಾಡಿ ನಿಯತ್ತಾಗಿ ಮಾಡಿದ ಸಾಲವನ್ನು ಮರುಪಾವತಿ ಮಾಡುವುದು ನಾವೇ ಆಗಿದ್ದೇವೆ, ಹಾಗೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಕಾಂಗ್ರೇಸ್ ಸರ್ಕಾರವನ್ನು ನಮ್ಮ ಎಲ್ಲಾ ಮಹಿಳೆಯರು ಬೆಂಬಲಿಸಿ ಮತ ನೀಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂಬುದನ್ನು ಮರೆಯಬೇಡಿ ಸಿದ್ದರಾಮಣ್ಣ, ಸಾಲ ಮನ್ನಾ ಆಗುವವರೆಗೂ ನಾವು ಸಾಲ ಕಟ್ಟುವುದಿಲ್ಲ. ಸಹಕಾರಿ ಬ್ಯಾಂಕ್‍ಗಳ ಸಿಬ್ಬಂದಿ ಏನಾದರೂ ಸಾಲ ವಸೂಲಿ ಹೆಸರಿನಲ್ಲಿ ಮಹಿಳೆಯರಾದ ನಮ್ಮ ಮೇಲೆ ಮನೆ ಬಳಿ ಬಂದು ಸಾಲ ಹೆಸರಿನಲ್ಲಿ ದೌರ್ಜನ್ಯ ಮಾಡಿದರೆ ಆಗ ಆಗುವ ಎಲ್ಲಾ ರೀತಿಯ ಅನಾಹುತಗಳಿಗೂ ಮಾನ್ಯ ಸಿದ್ದರಾಮಣ್ಣ ನೀವೇ ಜವಬ್ದಾರಿ ಆಗಿರುತ್ತೀರಿ 
ಸಹಕಾರಿ ಸೊಸೈಟಿ ಮತ್ತು ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸಾಲ ವಸೂಲಿ ಹೆಸರಿನಲ್ಲಿ ಮಹಿಳೆಯರಿಗೆ ನಾವು ಕಿರುಕುಳ ನೀಡಿ ವಸೂಲಿ ಮಾಡಲು ಮುಂದಾಗುತ್ತೇವೆ ಎಂಬ ಆಲೋಚನೆ ಇದ್ದರೆ ಬಿಟ್ಟುಬಿಡಿ ಬಲವಂತ ವಸೂಲಿಗೆ ಮುಂದಾದರೆ ಮಹಿಳೆಯರ ನಾರಿ ಶಕ್ತಿ ಏನೂ ಎಂಬುದು ಮಾರಿ ಹಬ್ಬ ಮಾಡುವ ಮೂಲಕ ತಮಗೆ ತೋರಿಸಬೇಕಾಗುತ್ತೇ ಎಚ್ಚರವಿರಲಿ ನಿಮ್ಮ ಸಾಲ ವಸೂಲಿ ಆಗಬೇಕಾದರೆ ಮಾತು ಕೊಟ್ಟು ವೋಟು ಪಡೆದಿರುವ ಮಾನ್ಯ ಸಿದ್ದರಾಮಣ್ಣ ಮತ್ತು ರಾಜ್ಯದ ಕಾಂಗ್ರೇಸ್ ಮುಖಂಡರಿಂದ ವಸೂಲಿ ಮಾಡಿಕೊಳ್ಳಿ ಮನ್ನಾ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆಂದರು 
ಕೊಟ್ಟ ಮಾತಿನಂತೆ ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ ನೀವು ನಮಗೆ ಕೊಟ್ಟ ಮಾತಿನಂತೆ ನಮ್ಮ ಮಹಿಳಾ ಸಾಲವನ್ನು ಮನ್ನಾ ಮಾಡಿ ಕೊಟ್ಟ ಮಾತಿಗೆ ತಪ್ಪದೆ ನಡೆದುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಸಿದರು. 
ಈ ತಿಂಗಳಿನಿಂದ ನಾವು ಸಾಲ ಕಟ್ಟುವುದಿಲ್ಲ , ನೀವು ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲೇಬೇಕು ಎಂದು ಹೊಸಮಟ್ನಹಳ್ಳಿ ಮತ್ತು ಮಂಗಸಂದ್ರ ಗ್ರಾಮಗಳ ಸ್ತ್ರೀಶಕ್ತಿ ಸಂಘದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ  ರತ್ನಮ್ಮ, ಚೌಡಮ್ಮ, ನಳಿನಿ, ಪ್ರಮೀಳಾದೇವಿ, ಮಂಜುಳಾ ಕಾವ್ಯ, ಶಕುಂತಲ, ಶಾರದಮ್ಮ, ಸುರೇಖಾ, ಮುನಿಯಮ್ಮ, ವೆಂಕಟಮ್ಮ, ಸುನಿತಾ, ಸುಧಾ,ಅನಿತಾ, ರಾಮಕ್ಕ, ಪಾರ್ವತಿ,  ಲಕ್ಷಮ್ಮ, ಜಯಲಕ್ಷ್ಮೀ, ಪದ್ಮಮ್ಮ, ರಾಧ, ಶೋಭ, ಮುಂತಾದ ನೂರಾರು ಮಹಿಳಾ ಸಂಘದ ಸದಸ್ಯರು ಇದ್ದರು.

ಕೋಲಾರ ಜಿಲ್ಲೆಯಲ್ಲೆ ಮೊದಲ ಸಂಚಾರಿ ರಕ್ತದಾನ ಘಟಕ ಪ್ರಾರಂಭ ರಕ್ತದಾನಿಗಳು ಸದುಪಯೋಗ ಪಡೆಯಲು ಡಿಹೆಚ್‍ಓ ಡಾ.ಜಗದೀಶ್ ಕರೆ

ಕೋಲಾರ:- ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ವತಿಯಿಂದ ಜಿಲ್ಲೆಯಲ್ಲೆ ಮೊಟ್ಟ ಮೊದಲ ಸಂಚಾರಿ ರಕ್ತದಾನ ಘಟಕವನ್ನು ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಪ್ರಾರಂಭಿಸಿದ್ದು, ರಕ್ತದಾನಿಗಳು ಸಂಚಾರಿ ರಕ್ತದಾನ ಘಟಕದ ಸದುಪಯೋಗವನ್ನು ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ರವರು ಕರೆ ನೀಡಿದರು.
ನಗರದ ಸರ್ಕಾರಿ ಬಾಲಕರ ಕಾಲೇಜು ವೃತ್ತದಲ್ಲಿ ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ಸಂಚಾರಿ ರಕ್ತದಾನ ಘಟಕದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು, ಕಾರ್ಲ್ ಲ್ಯಾಂಡ್ ಸ್ಟೀನರ್ ರವರ ಜನ್ಮದಿನದ ಜ್ಞಾಪಕಾಥರ್ವಾಗಿ ಇಡೀ ವಿಶ್ವದಲ್ಲಿ ರಕ್ತದಾನಿಗಳ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಅವಶ್ಯಕತೆಯಿರುವ ವ್ಯಕ್ತಿಗಳಿಗೆ ರಕ್ತವನ್ನು ಸರಿಯಾದ ವೇಳೆಯಲ್ಲಿ ಪೂರೈಸುವುದು. ತುರ್ತು ಸಮಯದಲ್ಲಿ ವಿತರಿಸಲು ಅವಶ್ಯಕವಾದ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ರಕ್ತನಿಧಿ ಘಟಕಗಳಲ್ಲಿ ಶೇಖರಿಸಿಡುವುದಕ್ಕೆ ಸಂಚಾರಿ ರಕ್ತದಾನ ಘಟಕ ಉಪಯುಕ್ತವಾಗಿದೆ, ತುರ್ತು ಸಂದರ್ಭಗಳಲ್ಲಿ ರಕ್ತದಾನಿಗಳು ರಕ್ತ ನಿಧಿ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ಸಂಚಾರಿ ರಕ್ತದಾನ ಘಟಕದ ಮೂಲಕ ಸ್ಥಳದಲ್ಲೇ ರಕ್ತದಾನ ಮಾಡಬಹುದಾಗಿದೆ ಈ ರೀತಿಯಾದ ಸಂಚಾರಿ ರಕ್ತದಾನ ಘಟಕಗಳು ಬೆಂಗಳೂರು ಮಹಾ ನಗರದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಲಯನ್ಸ್ ರಕ್ತ ನಿಧಿ ಕೇಂದ್ರ ದ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಂಚಾರಿ ಘಟಕವನ್ನು ಪ್ರಾರಂಭಿಸಿದ್ದು ರಕ್ತದಾನಿಗಳಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬಾಲಕರ ಕಾಲೇಜಿನ ವಿದ್ಯಾರ್ಥಿಗಳು, ರಕ್ತದಾನಿಗಳು ಸಂಚಾರಿ ರಕ್ತದಾನ ಘಟಕದಲ್ಲಿ ರಕ್ತದಾನವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಡಯಟ್ ಹಿರಿಯ ಉಪನ್ಯಾಸಕರಾದ ಸಿ.ಆರ್.ಅಶೋಕ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುನಿತಾ, ಕೋಲಾರ ಲಯನ್ಸ್ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಟಿ.ಎಸ್.ಜನಾರ್ಧನ್, ಮುರಳಿ, ಕೆಎಸ್‍ಎಮ್‍ಎಸ್‍ಸಿಎಲ್ ವ್ಯವಸ್ಥಾಪಕರಾದ ಶ್ರೀರಾಮ್, ರೊಟೇರಿಯನ್‍ಗಳಾದ ಬಿಕೆ ದೇವರಾಜ್, ನಾಗಶೇಖರ್, ಡಾ.ಚೇತನ, ತಜ್ಞರಾದ ಪ್ರತಿಭಾ, ಅಜಿತ್, ಅಚ್ಚಯ್ಯ ಶೆಟ್ಟಿ , ಕುರುಬರಪೇಟೆ ವೆಂಕಟೇಶ್, ವಿದ್ಯಾಶ್ರೀ ಮುಂತಾದವರು ಉಪಸ್ಥಿತರಿದ್ದರು.

ದೋರ್ನಹಳ್ಳಿಯ ವಿಶ್ವಪ್ರಸಿದ್ಧ ಸಂತ ಅಂತೋನಿಯವರ ವಾರ್ಷಿಕ ಹಬ್ಬ ವಿಜ್ರಂಭಣೆಯಿಂದ ಆಚರಣೆ / The Annual Feast of World Renowned St Anthony of Dornahalli


ದೋರ್ನಹಳ್ಳಿ : ಹಬ್ಬದ ದಿನದಂದು ಮಂಗಳವಾರ 2023 13 ಜೂನ್ 2023 ರಂದು ನಡೆಯಿತು ಬೆಳಿಗ್ಗೆ 5 ರಿಂದ ಸಂಜೆ 5.30 ರವರೆಗೆ ಸಾಮೂಹಿಕ ಪೂಜೆಗಳು ನಡೆದವು
ಹಬ್ಬದ ಪವಿತ್ರ ಪ್ರಸಾದದ ಆರಾಧನೆಯನ್ನು ಬೆಳಿಗ್ಗೆ 10 ಗಂಟೆಗೆ ಕನ್ನಡದಲ್ಲಿ ಆಚರಿಸಲಾಯಿತು, ಮೈಸೂರು ಧರ್ಮಪ್ರಾಂತ್ಯದ ಧರ್ಮಪ್ರಚಾರಕ ಆಡಳಿತಾಧಿಕಾರಿ ಅತಿ ವಂ. ಡಾ.ಬರ್ನಾರ್ಡ್ ಮೊರಾಸ್ ಮುಂದಾಳ್ವತದಲ್ಲಿ ದಿವ್ಯ ಬಲಿದಾನವನ್ನು ಅರ್ಪಿ
ಸಿ ಪವಾಡ ಮೂರ್ತಿಯ ಆಶಿರ್ವಾದವನ್ನು ನೀಡಿದರು.
ರೆ.ಫಾ. ಬಿಷಪ್ ಕಾರ್ಯದರ್ಶಿ ಕ್ಲಿಫರ್ಡ್ ಧರ್ಮೋಪದೇಶವನ್ನು ಬೋಧಿಸಿದರು. ರೆ.ಫಾ. ಎನ್.ಟಿ. ಜೋಸೆಫ್, ರೆಕ್ಟರ್, ಸಂತ ಅಂತೋನಿ ಬೆಸಿಲಿಕಾ, ದೋರ್ನಹಳ್ಳಿ, ರೆವ್ ಫಾ. ಪ್ರವೀಣ್ ಪೆದ್ರು, ಆಡಳಿತಾಧಿಕಾರಿ, ಸೇಂಟ್ ಅಂತೋನಿ ಬೆಸಿಲಿಕಾ, ಡೋರ್ನಹಳ್ಳಿ, ರೆ.ಫಾ ಜೂಲಿಯನ್, ಸಂತ ಅಂತೋನಿ ಬೆಸಿಲಿಕಾ, ದೋರ್ನಹಳ್ಳಿ, ರೆ. ಆಲ್‍ಫ್ರೆಡ್ ಜೆ ಮೆಂಡೋನ್ಕಾ, ವಿಕಾರ್ ಜನರಲ್, ಮೈಸೂರು ಡಯಾಸಿಸ್, ರೆ.ಫಾ. ಜೇಮ್ಸ್ ಡೊಮಿನಿಕ್, ಹಣಕಾಸು ಆಡಳಿತ, ಮೈಸೂರು ಡಯಾಸಿಸ್, ರೆ.ಫಾ. ಜೋಸೆಫ್ ಪಾಲ್ಸಿಯಾ ರಾಯ್, ಚಾನ್ಸಲರ್, ಮೈಸೂರು ಡಯಾಸಿಸ್, ರೆ.ಫಾ. ಬರ್ನಾರ್ಡ್ ಪ್ರಕಾಶ್ ಬಾರ್ನಿಸ್, ರೆಕ್ಟರ್, ಸೇಂಟ್ ಫಿಲೋಮಿನಾ ಕಾಲೇಜು, ರೆ.ಫಾ. ಶಿಕ್ಷಣ ಮಂಡಳಿಯ ಸಂಚಾಲಕ ಮಾದಲಿ ಮುತ್ತು ಬಲಿದಾನದಲ್ಲಿ ಭಾಗಿಯಾದರು.

ಸಂತ ಅಂತೋನಿ ಬೆಸಿಲಿಕಾ, ದೋರ್ನಹಳ್ಳಿ ಹಬ್ಬದ ದಿನಂದು ಅರ್ಪಿಸಿದ ಬಲಿದಾನ ವಿವರ


ಬೆಳಗ್ಗೆ 5 ಗಂಟೆಗೆ ಧರ್ಮಗುರು ಫಾ. ಎನ್.ಟಿ. ಜೋಸೆಫ್, ರೆಕ್ಟರ್, ಸಂತ ಅಂತೋನಿ ಬೆಸಿಲಿಕಾ, ದೋರ್ನಹಳ್ಳಿ,


ಬೆಳಿಗ್ಗೆ 6 ಗಂಟೆಗೆ ಧರ್ಮಗುರು ಫಾ. ಸಂಜಯ್ ಕುಮಾರ್ ಆಡಳಿತಾಧಿಕಾರಿ, ಸೇಂಟ್ ಜೋಸೆಫ್ ಆಸ್ಪತ್ರೆ, ಮೈಸೂರು,


ಬೆಳಗ್ಗೆ 7 ಗಂಟೆಗೆ ರೆ.ಫಾ. ಎಡ್ವರ್ಡ್ ವಿಲಿಯಂ ಸಲ್ಡಾನ್ಹಾ, ಧರ್ಮಗುರು ಸೇಂಟ್ ಮೇರಿಸ್ ಚರ್ಚ್, ಎಚ್.ಡಿ. ಕೋಟೆ,
ಬೆಳಿಗ್ಗೆ 8 ಗಂಟೆಗೆ ರೆ.ಫಾ. ಚಿನ್ನಪ್ಪ, ಧರ್ಮಗುರು, ಮದರ್ ಆಫ್ ಹ್ಯುಮಾನಿಟಿ ಚರ್ಚ್, ಮಂಡ್ಯ.


10 ಗಂಟೆಗೆ ಕನ್ನಡದಲ್ಲಿ ನಿವ್ರತ ಆರ್ಚ್ ಬಿಷಪ್, ಹಾಲಿ ಮೈಸೂರು ಧರ್ಮಪ್ರಾಂತ್ಯದ ಧರ್ಮಪ್ರಚಾರಕ ಆಡಳಿತಾಧಿಕಾರಿ ಅತಿ ವಂ. ಡಾ.ಬರ್ನಾರ್ಡ್ ಮೊರಾಸ್


ಬೆಳಿಗ್ಗೆ 11.30 ಕ್ಕೆ ರೆ.ಫಾ. ವಿನ್ಸೆಂಟ್ ಎಂ, ಧರ್ಮಗುರು, ಶ್ರೀರಾಂಪುರದ ಪರ್ಪೆಚುಯಲ್ ಸಕರ್ ಚರ್ಚ್‍ನ ಓ.ಎಲ್.


ಮಧ್ಯಾಹ್ನ 1.00 ಗಂಟೆಗೆ ರೆ.ಫಾ. ವ್ಯಾಲೆಂಟೈನ್ ಆರ್. ಕುಮಾರ್, ಪ್ಯಾರಿμï ಪ್ರೀಸ್ಟ್, ಹೋಲಿ ಫ್ಯಾಮಿಲಿ ಚರ್ಚ್, ಹಿನಕಲ್.


ಮಧ್ಯಾಹ್ನ 3.00 ಗಂಟೆಗೆ ರೆ.ಫಾ. ಜ್ಞಾನಪ್ರಗಾಸಂ, ಧರ್ಮಗುರು, ಪ್ರೆಸೆಂಟೇಶನ್ ಚರ್ಚ್‍ನ ಓ.ಎಲ್. ಮರಿಯಮಂಗಲಂ


ಸಂಜೆ 4.00 ಗಂಟೆಗೆ ರೆ.ಫಾ. ಜಾರ್ಜ್ ದೀಪಕ್, ಧರ್ಮಗುರು, ಸೇಂಟ್ ಮೈಕಲ್ ಚರ್ಚ್, ಮಡಿಕೇರಿ.


ಸಂಜೆ 5.30 ಕ್ಕೆ ರೆ.ಫಾ. ಮೈಕೆಲ್ ಮಾರಿ ಎ. ಸೇಂಟ್ ಜೋಸೆಫ್ ಚರ್ಚ್, ಧರ್ಮಗುರು ಸಿದ್ದಾಪುರ, ಇವರ ಮುಂದಾಳತ್ವದಲ್ಲಿ ಪವಿತ್ರ ಪ್ರಸಾದದ ಮೆರವಣೆಗೆ ಮತ್ತು ಪವಿತ್ರ ಪವಿತ್ರ ಪ್ರಸಾದದ ಆಶೀರ್ವಾದ ನಡೆಯಿತು.

ರೆ.ಫಾ ಎನ್.ಟಿ. ಜೋಸೆಫ್, ರೆಕ್ಟರ್, ಸೇಂಟ್ ಅಂತೋನಿ ಬೆಸಿಲಿಕಾ, ದೋರ್ನಹಳ್ಳಿ ಅವರು ತಮ್ಮ ಬೆಂಬಲ ಮತ್ತು ಸಹಕಾರಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಕೆ.ಆರ್.ನಗರದ ಶಾಸಕ ಶ್ರೀ ರವಿಶಂಕರ್ ಕೂಡ ಸೇಂಟ್ ಅಂತೋನಿ ಬೆಸಿಲಿಕಾಕ್ಕೆ ಭೇಟಿ ನೀಡಿದರು.
ದಿನವಿಡೀ ನಡೆದ ಮಹಾಮಸ್ತಕಾಭಿಕೇಷದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು
ಸೇಂಟ್ ಅಂತೋನಿ ಬೆಸಿಲಿಕಾ ದೋರ್ನಹಳ್ಳಿ 2023 ರ ವಾರ್ಷಿಕ ಹಬ್ಬವು ಸ್ಥಳೀಯ ಮುಖಂಡರು, ಹಿತೈಷಿಗಳು ಮತ್ತು ಭಕ್ತರ ಸಹಾಯದಿಂದ ಉತ್ತಮ ಯಶಸ್ಸನ್ನು ಕಂಡಿತು.

ಸೇಂಟ್ ಆಂಥೋನಿಯ ಪವಾಡದ ಪ್ರತಿಮೆಯ ಸಂಕ್ಷಿಪ್ತ ಇತಿಹಾಸ ಇಲ್ಲಿದೆ


ಸುಮಾರು 220 ವರ್ಷಗಳ ಹಿಂದೆ, ಒಬ್ಬ ರೈತ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ, ಮರದ ಪ್ರತಿಮೆಯು ಅದ್ಭುತ ಶಕ್ತಿಯನ್ನು ಹೊಂದಿದೆ ಎಂದು ಕಂಡುಬಂದು, ಮುಂದಿನ ದಿನಗಳಲ್ಲಿ ಇದು ಪಡುವಾ ಸಂತ ಅಂತೋನಿಯವರ ಪ್ರತಿಮೆ ಎಂದು ತಿಳಿದುಬಂತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು ಮತ್ತು ಹೆಚ್ಚಿನ ಪ್ರಸಾದವನ್ನು ಪಡೆದರು.
ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ಸಂತ ಅಂತೋನಿ ಅವರಿಗೆ ಗೌರವವನ್ನು ತೋರಿಸಲು ಅನುಕೂಲವಾಗುವಂತೆ, 1920 ರಲ್ಲಿ ಧರ್ಮಕ್ಷೇತ್ರದ ಧರ್ಮಗುರು ರೆ. ಎಸ್.ಡಿ’ಸಿಲ್ವಾ ಅವರು ಮೈಸೂರು ಅರಮನೆಯಲ್ಲಿ ಹಿಂದಿನ ದಿವಾನರಾದ ಶ್ರೀ ತಂಬು ಚೆಟ್ಟಿ ಮತ್ತು ಅವರ ಸಹೋದರ ಶ್ರೀ ಧರ್ಮರಾಜ್ ಚೆಟ್ಟಿಯವರ ಉದಾರತೆ ಮತ್ತು ಸಹಾಯದೊಂದಿಗೆ ಪುಣ್ಯ ಕ್ಷೇತ್ರಕ್ಕೆ ಕಟ್ಟಡವನ್ನು ಕಟ್ಟಿದರು.
ಮುಂಬರುವ ವರ್ಷಗಳಲ್ಲಿ, ಪವಾಡಗಳು ನಡೆಯುತ್ತಿರುವುದರಿಂದ ದೇಗುಲಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯು ಬಹುಪಟ್ಟು ಹೆಚ್ಚಾಯಿತು, ನಂತರ ಅಂದಿನ ಧರ್ಮಗುರು ವೆರಿ.ರೆ. ಐ.ಎಚ್. ಲೋಬೋ, ಅವರು ವಿಶಾಲವಾದ ಮತ್ತು ಸುಂದರವಾದ ಚರ್ಚ್ ಅನ್ನು ನಿರ್ಮಿಸಲು ನಿರ್ಧರಿಸಿದರು. ಅವರು ಇದರ ನಿರ್ಮಾಣಕಾರ್ಯ 1964 ರಲ್ಲಿ ಪ್ರಾರಂಭಿಸಿದರು. ಹೊಸದಾಗಿ ನಿರ್ಮಿಸಲಾದ, ಸುಂದರವಾದ ಚರ್ಚ್ ಅನ್ನು ಜೂನ್ 13, 1969 ರಂದು ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದ ಘನತೆವೆತ್ತ ಮೋಸ್ಟ್ ರೆವ್. ಡಾ. ಮಥಾಯಸ್ ಫೆನಾರ್ಂಡಿಸ್ ಆಶೀರ್ವದಿಸಿ ಉದ್ಘಾಟಿಸಿದರು.
ಅಕ್ಟೋಬರ್ 17, 2019 ರಂದು, ಸರ್ವಶಕ್ತನ ದೈವಿಕ ಆಶೀರ್ವಾದದಿಂದ, ಚರ್ಚ್‍ಗೆ ಪೋಪ್ ಫ್ರಾನ್ಸಿಸ್ ಅವರು “ಮೈನರ್ ಬೆಸಿಲಿಕಾ” ಸ್ಥಾನಮಾನವನ್ನು ನೀಡಿದರು. ಇದು ಎಲ್ಲಾ ಭಕ್ತರಿಗೆ ಬಹಳ ಸಂತೋಷದ ವಿಷಯವಾಗಿದೆ. 9ನೇ ಜೂನ್ 2020 ರಂದು, ಮೈಸೂರಿನ ಬಿಷಪ್ ಅತಿ ರೆವ. ಡಾ. ಕೆ.ಎ. ವಿಲಿಯಂ ಅವರು ಮೈನರ್ ಬೆಸಿಲಿಕಾವನ್ನು ಅಧಿಕೃತವಾಗಿ ಘೋಷಿಸಿ ಕ್ರತ್ಞತಾ ಬಲಿದಾನವನ್ನು ಅರ್ಪಿಸಿದರು.

The Annual Feast of World Renowned St Anthony of Dornahalli 2023 was held on 13 June 2023
On the feast day , which was on Tuesday masses were held from morning 5am upto 5.30pm
The Festive Eucharistic Celebration was celebrated in kannada at 10am by Most Rev.Dr.Bernard Moras , Apostolic Administrator , Diocese of Mysore  and Rev.Fr. Clifford , Secretary of Bishop, preached the sermon . Rev. Fr. N. T. Joseph, Rector, St. Antony’s Basilica, Dornahalli ,Rev Fr. Praveen Pedru , Administrator, St Anthony’s Basilica, Dornahalli , Rev.Fr  Julian , Vice Rector ,St. Antony’s Basilica, Dornahalli, Rev.Msgr. Alfred J Mendonca, Vicar general , Diocese of Mysore , Rev.Fr James Dominic , Financial Administrator , Diocese of Mysore , Rev.Fr Joseph Palciya Roy , Chancellor ,  Diocese of Mysore ,Rev.Fr. Bernard Prakash Barnis ,Rector ,St Philomena’s college , Rev.Fr. Madali Muthu , Procurator of education board , were present as co-celebrants .
At 5am the mass was celebrated by Rev. Fr. N. T. Joseph ,Rector, St. Anthony’s Basilica, Dornahalli , at 6am by Rev. Fr. Sanjay Kumar Administrator, St. Joseph’s Hospital, Mysuru , at 7am by Rev. Fr. Edward William Saldanha ,Parish Priest, St. Mary’s Church, H. D. Kote , at 8am by Rev. Fr. Chinnappa ,Parish Priest, Mother of Humanity Church, Mandya, at 11.30am by Rev. Fr. Vincent M, Parish Priest, O.L of Perpetual Succor Church, Srirampura , at 1.00 pm by Rev. Fr. Valentine R. Kumar ,Parish Priest, Holy Family Church, Hinkal , at 3.00pm by Rev. Fr. Gnanapragasam ,Parish Priest, O. L. of Presentation Church. Mariamangalam , at 4.00pm by Rev. Fr. George Deepak ,Parish Priest, St. Michael’s Church, Madikeri ,  at 5.30pm by Rev. Fr. Michael Mari A. Parish Priest, St. Joseph’s Church, Siddapura ,which was followed by the Car Procession and Benediction of the Holy Eucharist. Rev. Fr. N. T. Joseph ,Rector, St. Anthony’s Basilica, Dornahalli thanked everyone for their support and cooperation.
Mr. Ravi Shankar , MLA of K.R Nagar also paid a visit to the St. Anthony’s Basilica.
Lacs of Devotees took part in the eucharistic celebrations throughout the day
The Annual Feast of St Anthony Basilica Dornahalli 2023 was a great success with the help of local leaders , benefactors and devotees.

Here’s a  brief history of the Miraculous Statue of St Anthony 

Around 220 years ago, a farmer while tilling his field, found a wooden statue which was found to have miraculous powers. In the days to come, it was revealed that it was the statue of St. Anthony of Padua. Devotees started visiting this place in large numbers and obtained great favors.
In order to facilitate the devotees to pray and show their reverence to St. Anthony, a small shrine was built in the year 1920, by the Parish priest Rev. Fr. S. D’Silva with the generosity and help of the erstwhile Dewan at the Mysore Palace, Shri Thambu Chetty, and his brother Shri Dharmaraj Chetty.
In the years to come, the number of pilgrims visiting the shrine because of the miracles taking place increased manifold, it was then decided to construct a spacious and beautiful church by the then Parish Priest Very. Rev. Fr. I. H. Lobo, and hence construction started in 1964. The newly constructed, spacious, beautiful church was blessed and inaugurated on the 13th of June, 1969 by His excellency Most. Rev. Dr. Matthias Fernandez, who was the Bishop of the Diocese of Mysore.
On the 17th of October, 2019, by the Divine blessings of The Almighty, the Church was granted the status of “Minor Basilica” by His Holiness Pope Francis which is a matter of great joy to all  the Devotees.
On 9th June 2020, Most Rev. Dr. K. A. William Bishop of Mysore Officially announced the Minor Basilica and  Offered the Thanksgiving Mass.

ಸಂತ ಮೇರಿಸ್ ವಿದ್ಯಾ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಸಿಬಂದಿಯೊಂದಿಗೆ ಬಿಶಪರ ಸಮಾಲೋಚನೆ


ಕುಂದಾಪುರ, ಜೂ.14: “ಇಂದು ಪ್ರಪಂಚದ ಆಗುಹೋಗುಗಳನ್ನು ಇಂದಿನ ವಿದ್ಯಾರ್ಥಿಗಳು ಬಹಳ ಬೇಗ ತಿಳಿದಿಕೊಳ್ಳುತ್ತಾರೆ, ಅದರಿಂದಾಗಿ ಅವರು ಕೇಳುವ ಪ್ರಶ್ನೆಗಳಿಗೆ ಶಿಕ್ಷಕರಿಗೆ ಸೂಕ್ತ ಉತ್ತರ ಕೊಡಲಾಗುವುದಿಲ್ಲ. ಆದರಿಂದ ಶಿಕ್ಷಕರು ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕು. ಪುಸ್ತಕಗಳನ್ನು, ಲೇಖನಗಳನ್ನು ಓದಿ ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು.” ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯದರ್ಶಿ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ಜೂ.12 ರಂದು ಸಂತ ಮೇರಿಸ್ ಪದವಿ ಪೂ. ಕಾಲೇಜಿನ ಸಭಾಭವನದಲ್ಲಿ ಸಂತ ಮೇರಿಸ್ ವಿಧ್ಯಾ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಸಿಬಂದಿಯೊಂದಿಗೆ ಸಮಾಲೋಚನಾ ಸಭೆಯಲ್ಲಿ ತಿಳಿಸುತ್ತಾ “ಶಿಕ್ಷರು ಕಟ್ಟಕಡೆಯ ವಿದ್ಯಾರ್ಥಿ ಕಡೆಗೆ ಗಮಗ ಕೊಡಬೇಕು, ಈ ಕಟ್ಟಕಡೆಯ ವಿದ್ಯಾರ್ಥಿ ಕಡೆಗೆ ಗಮನ ಕೊಟ್ಟು ಅವನು ಉತ್ತಮ ಫಲಿತಾಂಶ ಪಡೆದು ಉತೀರ್ಣನಾಗಲು ಶ್ರಮ ಪಟ್ಟರೆ, ಬುದ್ದಿವಂತ ವಿದ್ಯಾರ್ಥಿಗಳೂ ಉತ್ತಮ ಫಲಿತಾಂಶ ಪಡೆಯುತ್ತಾರೆ. ಆ ಮೂಲಕ ವಿದ್ಯಾಸಂಸ್ಥೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ, ಶಿಕ್ಷಕರು ವರ್ಷಕ್ಕೆ ಒಂದು ಸಲ ಉತ್ತಮ ಗುಣ ಮಟ್ಟದ ವಿದ್ಯಾ ಸಂಸ್ಥೆ ಇರುವ ಕಡೆ ಪ್ರವಾಸ ಮಾಡಿ ಅಲ್ಲಿನ ಗುಣಮಟ್ಟವನ್ನು ತಿಳಿದುಕೊಳ್ಳಬೇಕೆಂದು” ತಿಳಿಸಿದರು.
ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಡಿಸೋಜಾ, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜರಿ ಆಂಗ್ಲ ಮಾದ್ಯಮ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್ ತಮ್ಮ ಸಂಸ್ಥೆಗಳ ವರದಿಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಸಂತ ಮೇರಿಸ್ ವಿದ್ಯಾ ಸಮೂಹ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಮತ್ತು ವಿಧ್ಯಾ ಸಂಸ್ಥೆಗಳ ಶಿಕ್ಷಕ- ಶಿಕ್ಷಕೇತರ ಸಿಂಬದ್ದಿ ಹಾಜರಿದ್ದರು.
ದೈಹಿಕ ಶಿಕ್ಷಕ ಚಂದ್ರಶೇಖರ ಬೀಜಾಡಿ ಸಾಗತಿಸಿ ನಿರೂಪಿಸಿದರು. ಶಿಕ್ಷಕ ಭಾಸ್ಕರ ಗಾಣಿಗ ವಂದಿಸಿದರು.

ಬೆಳ್ಮಣ್ಣು ಜೇಸಿಐಗೆ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ, ಸ್ಪೆಷಲ್ ಪ್ರೋಜೆಕ್ಟ್ ವಿನ್ನರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳ ಮಾಲೆ


ಭಾರತೀಯ ಜೇಸಿಐನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಜೇಸಿಐ ವಲಯ 15ರ ಮಧ್ಯಂತರ ಸಮ್ಮೇಳನ – 2023 “ನಿಲುಮೆ” ಸಮಾರಂಭದಲ್ಲಿ ಪ್ರತಿಷ್ಠಿತ ಘಟಕ ಬೆಳ್ಮಣ್ಣು ಜೇಸಿಐ ಘಟಕದ ಅಧ್ಯಕ್ಷರಾದ ಅಬ್ಬನಡ್ಕ ಸತೀಶ್ ಪೂಜಾರಿ ಸಾರಥ್ಯದ ತಂಡಕ್ಕೆ ಅತ್ಯುತ್ತಮ ಘಟಕ ರನ್ನರ್ ಪ್ರಶಸ್ತಿ, ಸ್ಪೆಷಲ್ ಪ್ರೋಜೆಕ್ಟ್ ವಿನ್ನರ್ ಪ್ರಶಸ್ತಿ, ಸ್ವಿಲರ್ ಘಟಕ, ರಕ್ತದಾನ ವಿಭಾಗ, ಗಣರಾಜ್ಯೋತ್ಸವ, ಯುವ ದಿನಾಚರಣೆ, ಯುಗಾದಿ ದಿನಾಚರಣೆ ಸೇರಿದಂತೆ ಹಲವಾರು ವಿಭಾಗಗಳ ಪ್ರಶಸ್ತಿ ಪುರಸ್ಕಾರವನ್ನು ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷರಾದ ಬೋಳ ಸುಧಾಕರ್ ಆಚಾರ್ಯ, ಪೂರ್ವಾಧ್ಯಕ್ಷರಾದ ಸಂದೀಪ್ ವಿ. ಪೂಜಾರಿ, ಸತ್ಯನಾರಾಯಣ ಭಟ್, ಕೃಷ್ಣ ಪವಾರ್, ಉಪಾಧ್ಯಕ್ಷೆ ಜಯಶ್ರೀ ಪೂಜಾರಿ, ಯುವ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ, ಮಹಿಳಾ ಜೇಸಿ ಸಂಯೋಜಕಿ ಸೌಜನ್ಯ ಕೋಟ್ಯಾನ್, ಸದಸ್ಯರಾದ ಸುದರ್ಶನ್ ಪೂಜಾರಿ, ಜೆಸಿಂತಾ, ಶ್ವೇತಾ ಆಚಾರ್ಯ, ಅನಿತಾ ಮೊದಲಾದವರಿದ್ದರು.

ಮೂಡ್ಲಕಟ್ಟೆ ಎಂ ಐ ಟಿ: ಹೊಸ ಇಂಜಿನಿಯರಿಂಗ್ ಕೋರ್ಸ್

ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹೊಸ ಇಂಜಿನಿಯರಿಂಗ್ ಕೋರ್ಸ್ ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಅನ್ನು ಆರಂಭಿಸಲು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಇಂದ ಅನುಮೋದನೆ ದೊರೆತಿದೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಈ ಕೋರ್ಸ್ ನ್ನು ಆಯ್ಕೆ ಮಾಡುತ್ತಿರುವುದನ್ನು ಗಮನದಲ್ಲಿಟ್ಟು ಬೇಡಿಕೆ ಹೆಚ್ಚಿದ್ದರಿಂದ ಈ ವರ್ಷದಿಂದ ಹೊಸ ಕೋರ್ಸ್ ಅರಂಭಿಸುತ್ತಿದ್ದೇವೆ. ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಗೆ ಸಂಬಂಧಪಟ್ಟ ಮೂರು ಕೋರ್ಸುಗಳು ಲಭ್ಯವಿದ್ದು, ಕಳೆದ ಬಾರಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯಲು ಸೀಟ್ಗಳು ಸಿಕ್ಕಿರಲಿಲ್ಲ. ಅದೇ ಕಾರಣ ಬಹು ಬೇಡಿಕೆಯ ಮತ್ತೊಂದು ಕೋರ್ಸ್ ಅನ್ನು ಆರಂಭಿಸುತ್ತಿದ್ದೇವೆ ಎಂದು ಕಾಲೇಜಿನ ಉಪ ಪ್ರಾಂಶುಪಲರು ಮತ್ತು ಅಡ್ಮಿಷನ್ ವಿಭಾಗದ ಮುಖ್ಯಸ್ಥ ಪ್ರೊ ಮೆಲ್ವಿನ್ ಡಿಸೋಜರವರು ತಿಳಿಸಿದ್ದಾರೆ. ಪ್ರವೇಶ ಬಯಸುವವರು ಕಾಲೇಜಿನ ಕಚೇರಿಗೆ ಸಂಪರ್ಕಿಸಬಹುದು.

ಜೆಸಿಐ ಕುಂದಾಪುರ ಸಿಟಿಗೆ ಅತ್ಯುತ್ತಮ ಘಟಕ ಪ್ರಶಸ್ತಿ

ಜೆಸಿಐ ಜೋಡುಮಾರ್ಗ ನೇತ್ರಾವತಿ ಇವರ ಆಶ್ರಯದಲ್ಲಿ ನಡೆದ ವಲಯ ಮದ್ಯಾ0ತರ ಸಮ್ಮೇಳನ ದಲ್ಲಿ ಜೆಸಿಐ ಕುಂದಾಪುರ ಸಿಟಿ ಅತ್ತುತ್ತಮ ಘಟಕ ಪ್ರಶಸ್ತಿ ಯಾ ಜೊತೆಗೆ ರನ್ನರ್ಸ್ ಅಪ್ ಅಧ್ಯಕ್ಷ ಪ್ರಶಸ್ತಿ ಹಾಗು ಹಲವಾರು ಪ್ರಶಸ್ತಿ ಪಡೆದು ಕೊಂಡಿತ್ತು ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪ್ರಶಸ್ತಿ ಗಳನ್ನು ನೀಡಿದರು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಹಾಗು ಸದ್ಯಸ್ಯ ರು ಪ್ರಶಸ್ತಿ ಪಡೆದುಕೊಂಡರು

ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಅಭಿಲಾಶ್ ಜಯಶ್ರೀ ರಾಷ್ಟ್ರೀಯ ಸಂಯೋಜಕ ಕೆ ಕಾರ್ತಿಕೇಯ ಮಧ್ಯಸ್ಥ ಪೂರ್ವ ವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ ಘಟಕದ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಶ್ರೀಧರ್ ಸುವರ್ಣ ಗಿರೀಶ್ ಹೆಬ್ಬಾರ್ ನಾಗೇಶ್ ನಾವಡ ವಿಜಯ ಬಂಡಾರಿ ಜೇಸಿರೇಟ್ ಪೂರ್ವ ಅಧ್ಯಕ್ಷೆ ಸಹನಾ ನಾವಡ ಸರೋಜ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು.

ಕೆರೆಕಟ್ಟೆ ಸಂತ ಅಂತೋನಿಯವರ ವಾರ್ಷಿಕ ಮಹಾಹಬ್ಬ : ಬಿಶಪರಿಂದ ಅನಾಥಲಯಕ್ಕೆ ಶಿಲಾನ್ಯಾಸ

ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಜೊತೆಗೆ ಸಂತ ಅಂತೋನಿಯವರಿಗೆ ಅನಾಥರು, ಬಡವರು ನಿರಾಶ್ರಿತರೆಂದರೆ ಬಹಳ ಪ್ರೀತಿ ಹಾಗಾಗಿ ಇಲ್ಲಿ ಅವರ ಹೆಸರಿನಲ್ಲಿ ಅನಾಥಲಯ ನಿರ್ಮಿಸಲು ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರ ಯೋಜನೆ ಹಮ್ಮಿಕೊಂಡಿದ್ದು ಇದರ ಶಿಲಾನ್ಯಾಸವನ್ನು ಬಿಶಪರು ಪ್ರಾರ್ಥನೆ ಮತ್ತು ಆಶಿರ್ವವಚನೇಯ ಮೂಲಕ ನೇರವೆರಿಸಿದರು.
ಉಡುಪಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಅ|ವಂ|ಮೊನ್ಸಿಂಜೆರ್ ಫರ್ಡಿನಂಡ್ ಗೊನ್ಸಾಲ್ವಿಸ್ ದೇವರ ವಾಕ್ಯ ಪಟಿಸಿ ತಮ್ಮ ಪ್ರವಚನದಲ್ಲಿ “ಸಂತ ಅಂತೋನಿ ಇಡೀ ಪ್ರಪಂಚದಲ್ಲಿ ಅವರು ಪವಾಡಗಳನ್ನು ಮಾಡುತ್ತಾ ಇದ್ದಾರೆ. ಅವರಿಂದ ಭಕ್ತಾಧಿಗಳು ಅನೇಕ ವರಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರದೇಶವು ಬಹಳ ವರ್ಷಗಳ ಹಿಂದೆ ಧುರ್ಗಮ ಪ್ರದೇಶವಾಗಿದ್ದು, ಜನರು ಇಲ್ಲಿ ಸಂಚಾರ ಮಾಡುವುದಕ್ಕೆ ಭಯ ಪಡುತಿದ್ದರು, ಇಲ್ಲಿ ಸಂತ ಅಂತೋನಿಯವರ ದೇವಾಲಯ ನಿರ್ಮಾಣವಾದ ಮೇಲೆ ಇಲ್ಲಿ ಜನಸಂಚಾರ ಭಯವಿಲ್ಲದೆ ಸಾಗಿತು. ಈ ಪುಣ್ಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಾ ಇದೆ. ಇಲ್ಲಿನ ಸಂತ ಅಂತೋನಿಯವರ ಮೂಲಕ ಹಲವಾರು ಭಕ್ತಾಧಿಗಳು, ಉಪಕಾರವನ್ನು ಪಡೆದುಕೊಂಡಿದ್ದಾರೆ, ಇಲ್ಲಿ ಅನೇಕ ಪವಾಡಗಳು ನಡೆದಿವೆ” ಎಂದು ತಿಳಿಸುತ್ತಾ ಅದರಲ್ಲಿ ಕೆಲವು ಪವಾಡಗಳನ್ನು ವಿವರಿಸಿ “ಇದೀಗ ಇಲ್ಲಿ ಅನಾಥ ದೀನದಲಿತರಿಗಾಗಿ, ಅನಾಥಶ್ರಮವನ್ನು ನಿರ್ಮಿಸಲಾಗುವುದು. ಸಂತ ಅಂತೋನಿಯವರು ದೀನ ದಲಿತರಬಗ್ಗೆ ಅನಾಥರ ಬಗ್ಗೆ ಕಾಳಜಿ ಇದ್ದು ಅವರು ದಾನಿಗಳಾಗಿದ್ದರು, ಅವರಂತೆ ನಾವು ದಾನಿಗಳಾಗಿ ಈ ಮಹಾನ ಯೋಜನೆ ಪೂರ್ಣವಾಗಲು ಸಹಕರಿಸೋಣ. ದೀನ ದಲಿತರಿಗೆ, ಬಡವರಿಗೆ, ಸಹಾಯ ನೀಡುವರೊ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡುತ್ತಾರೊ, ಹಸಿದವರಿಗೆ ಆಹಾರ ಕೊಡುತ್ತಾರೊ, ಬಾಯಾರಿದವರಿಗೆ ನೀರು ಕೊಡುತ್ತಾರೊ, ಅದು ನನಗೆ ಮಾಡಿದಂತೆ ಅದಕ್ಕೆ ನಿಮಗೆ ಸ್ವರ್ಗರಾಜ್ಯ ದೊರಕುವುದು ಎಂದು ಯೇಸು ತಿಳಿಸಿದ್ದಾರೆ, ಅದರಂತೆ ನಾವು ನೆಡೆದು ಸ್ವರ್ಗರಾಜ್ಯವನ್ನು ಪಡೆಯೋಣ” ಎಂದು ಸಂದೇಶ ನೀಡಿದರು.
ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಸಂತ ಅಂತೋನಿಯವರು ಪವಾಡ ಪುರುಷರಾಗಿದ್ದು, ಅವರು ಬಡವರನ್ನು ಅನಾಥರನ್ನು, ರೋಗಿಗಳನ್ನು ಬಹಳವಾಗಿ ಪ್ರೀತಿಸುತಿದ್ದರು. ಅವರ ಹೆಸರಿನಲ್ಲಿ ಅವರ ನಡೆಯಂತೆ ಅನಾಥಶ್ರಾಲಯವನ್ನು ನಿರ್ಮಿಸಲು ಹೊರಟಿದ್ದೇವೆ. ನಿಮ್ಮ ಸಹಕಾರ ಮತ್ತು ಸಂತ ಅಂತೋನಿಯವರ ಆಶಿರ್ವಾದದಿಂದ ಬರುವ ವರ್ಷ ಇದೇ ದಿನದಂದು ಲೋಕಾರ್ಪಣೆಗೊಳ್ಳಲಿ” ಎಂದು ಹರಸಿದರು. ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಶುಭಾಶಯಗಳನ್ನು ಅರ್ಪಿಸಿದರು. ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ವಾರ್ಷಿಕ ಮಹಾಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯದ, ಹೊರ ವಲಯದ ಹಲವಾರು ಧರ್ಮಗುರುಗಳು ಮತ್ತು ಅತಿಥಿ ಧರ್ಮಗುರುಗಳು ಭಾಗಿಯಾಗಿದ್ದು ಭಕ್ತಾಧಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಿಯುಸ್ ನಗರ ಚರ್ಚಿನ ಗಾಯನ ಮಂಡಳಿ ಗಾಯನಗಳನ್ನು ಹಾಡಿತು. ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದನೆಗಳನ್ನು ಸಲ್ಲಿಸಿದರು.

ಕುಂದಾಪುರ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಬಿಶಪ್ ಜೆರಾಲ್ಡ್ ಲೋಬೊರವರ ಭೇಟಿ


ಜೂ.13: ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿರುವ ಸಂತ ಮೇರಿಸ್ ಸಮೂಹ ಶಿಕ್ಶಣ ಸಂಸ್ಥೆಯ ಶಾಲೆಗಳಾದ ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋe ರಿ ಆಂಗ್ಲಾ ಮಾದ್ಯಮ ಶಾಲೆ ಮತ್ತು ಸಂತ ಮೇರಿಸ್ ಪದವಿ ಪೂ.ಕಾಲೇಜಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಜೂನ್ 12 ರಂದು ಭೇಟಿಯಾಗಿ ಸಭೆ ನೆಡೆಸಿದರು.
“ಶಿಕ್ಷಣ ಅಂದರೆ ಮಕ್ಕಳ ಸರ್ವಾಂಗೀಣ ಅಭಿವ್ರದ್ದಿ. ವಿದ್ಯಾರ್ಥಿಗಳು ಮಾನಸಿಕ ಬೆಳವಣಿಗೆಯನ್ನು ಪಡೆದುಕೊಳ್ಳಬೇಕು, ದೈಹಿಕವಾಗಿ ಸುಧ್ರಡವಾಗಿರಬೇಕು, ಆತ್ಮವನ್ನು ಪರಿಶುದ್ದವಾಗಿಟ್ಟುಕೊಳ್ಳಬೇಕು, ಇಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ, ಆದರೆ ಮೌಲ್ಯ ಭರಿತ ಶಿಕ್ಷಣ ಲಭಿಸುವುದಿಲ್ಲ, ನಮ್ಮಲ್ಲಿ ಕ್ರೈಸ್ತ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ಕೊಡಲಾಗುತ್ತೆ. ಕ್ರೈಸ್ತರೇತರ ಮಕ್ಕಳಿಗೆ ನೀತಿ ಶಿಕ್ಷಣವನ್ನು ನೀಡಲಾಗುತ್ತೆ.” ಎಂದು ತಿಳಿಸುತ್ತಾ “ನಾವು ಪರರ ಬಗೆ ಒಳಿತನ್ನೆ ಯೋಚಿಸಬೇಕು, ಅಂತೇಯೆ ಒಳಿತನ್ನೆ ಮಾಡಬೇಕು. ಪರರ ಬಗೆ ಒಳಿತನ್ನೆ ಯೋಚಿಸುತ್ತಾ, ಒಳಿತನ್ನೆ ಮಾಡಬೇಕು, ಆವಾಗ ದೇವರ ಆಶಿರ್ವಾದ ನಮ್ಮ ಮೇಲೆ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬೇಕು ಎಂದು ಚಿಂತಿಸದರೆ ಮಾತ್ರ ಸಾಲದು, ಅದಕ್ಕೆ ಸತತವಾದ ಪ್ರಯತ್ನ ಪಡಬೇಕು. ಶಿಕ್ಷಕರೂ ಕೂಡ ಸಮಾಜದಲ್ಲಾಗುವ ಬದಲಾವಣೆಗಳನ್ನು ಗಮನಿಸಬೇಕು ಮತ್ತು ಹೊಸತನದ ಬಗ್ಗೆ ಓದಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು” ಎಂದು ಅವರು ಸಂದೇಶ ನೀಡಿದರು.
ಬಿಶಪರಿಗೆ ತಿಲಕವಿಟ್ಟು ಹೂವುಗಳನ್ನು ಅರ್ಪಿಸಿ ಆರತಿ ಎತ್ತಿ ವಿದ್ಯಾರ್ಥಿಗಳು ಬ್ಯಾಂಡು ವಾದನಗಳಿಂದ ಸಾಂಪ್ರಾದಾಯಕವಾಗಿ ಹಾಗೂ ಎನ್.ಸಿ.ಸಿ. ಕೇಡಟಗಳಿಂದ ಗೌರವಪೂರ್ವಕವಾಗಿ ಸ್ವಾಗತಿಸಿದರು


ಈ ಸಂದರ್ಭದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ,ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಡೋರಾ ಡಿಸೋಜಾ, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜಾರೀ ಆಂಗ್ಲಾ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಎಮ್.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು. ಪ್ರಾದ್ಯಪಕ ನಾಗರಾಜ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.