ಮಣಿಪುರ ಹಿಂಸಾಚಾರ: ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ್ಯದಿಂದ ಮನವಿ

ಉಡುಪಿ: ಈಶಾನ್ಯ ಭಾರತದ ಮಣೆಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಚಾರದಲ್ಲಿ ಕೇಂದ್ರ. ಸರಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಕ್ರೈಸ್ತ ಸಮುದಾಯದ ಪರವಾಗಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ದೇಶದ. ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಮಾತನಾಡಿ ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಿಂಸಾಚಾರ ಮತ್ತು ಜೀವ ಹಾನಿ, ಆಸ್ತಿಪಾಸ್ತಿಗಳ ನಷ್ಟದಿಂದ ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ಬಹುಸಂಖ್ಯಾತ ಮಣೆಪುರಿಗಳು (ಮೈಟೈಸ್) ಮತ್ತು ಅಲ್ಪಸಂಖ್ಯಾತ ಬುಡಕಟ್ಟು ಜನರು (ಒಟ್ಟಾರೆಯಾಗಿ ಕುಕಿ/ಜೋಮಿ ಬುಡಕಟ್ಟುಗಳು ಎಂದು ಕರೆಯುತ್ತಾರೆ) ನಡುವಿನ ಅಂತರ-ಸಮುದಾಯ ಸಂಘರ್ಷದ ನೆಪದಲ್ಲಿ ವಿಸ್ತೃತ ಇಂಫಾಲ್ ಕಣಿವೆಯಲ್ಲಿ ಬಹುತೇಕ ಎಲ್ಲಾ ಚಚ್ರ್ಗಳನ್ನು ಸುಟ್ಟುಹಾಕಲಾಗಿದೆ, ಧ್ವಂಸ ಗೊಳಿಸಲಾಗಿದೆ ಅಥವಾ ಅಪವಿತ್ರ ಗೊಳಿಸಲಾಗಿದೆ. ಕನಿಷ್ಠ 317 ಚರ್ಚುಗಳು ಮತ್ತು 70 ಚರ್ಚ್ ಆಡಳಿತ/ಶಾಲಾ ಕಟ್ಟಡಗಳನ್ನು ಸುಟ್ಟು ಹಾಕಲಾಗಿದೆ. ಕನಿಷ್ಠ 75 ಕ್ರಿಶ್ಚಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ ಇದೊಂದು ಭಾರತ ಕಂಡ ಅತ್ಯಂತ ಕೆಟ್ಟ ಕೈಸ್ತ ವಿರೋಧಿ ಹಿಂಸಾಚಾರವಾಗಿದ್ದು ಸುಮಾರು 30000 ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ. ವಿವಿಧ ಗುಂಪುಗಳಿಂದ ಪ್ರಚೋದಿಸಲ್ಪಟ್ಟ ವಿದ್ವಂಸಕ ಕೃತ್ಯವನ್ನು ಕ್ರೈಸ್ತ ಸಮುದಾಯ ಬಲವಾಗಿ ಖಂಡಿಸುತ್ತಿದ್ದು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಎಲ್ಲಾ ಮನೆಗಳು, ಚರ್ಚಗಳು ಮತ್ತು ಹಾನಿಗೊಳಗಾದ ಆಸ್ತಿಗಳನ್ನು ಪುನರ್ನಿರ್ಮಿಸಬೇಕು ಮತ್ತು ಮನೆಗಳನ್ನು ಪುನರ್ನಿರ್ಮಿಸಲು ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಸರ್ಕಾರವು ಈ ಪ್ರದೇಶದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಬೇಕು ಮತ್ತು ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆಯನ್ನು ತ್ವರಿತವಾಗಿ ಮರುಸ್ಥಾಪಿಸಬೇಕು ಮತ್ತು ಸಂತ್ರಸ್ತ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಅದರ ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು. ಖಚಿತ ಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಅವರು ಸಂಬಂಧಪಟ್ಟವರಿಗೆ. ಮನವಿಯನ್ನು ತಲುಪಿಸಲಾಗುವುದು ಎಂದರು.
ಮನವಿ ನೀಡಿದ ನೀಯೋಗದಲ್ಲಿ ಧರ್ಮಪ್ರಾಂತ್ಯದ ಕುಲಪತಿ ವಂ[ಡಾ|ರೋಶನ್ ಡಿಸೋಜಾ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಇದರ ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಡಿ’ಆಲ್ಮೇಡಾ, ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜಾ, ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ, ಭಾರತೀಯ ಶೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತ್ಯದ ನೂತನ ಮುಖ್ಯ ನ್ಯಾಯಧಿಪತಿಯಾಗಿ ವಂ|ಡಾ|ರೋಶನ್‌ ಡಿ’ಸೋಜಾ ಅಧಿಕಾರ ಸ್ವೀಕಾರ

ಉಡುಪಿ, ಜೂ30: ಅತಿ ವಂದನೀಯ ಡಾ. ರೋಶನ್‌ ಡಿ’ಸೋಜಾರವರನ್ನು ಉಡುಪಿ ಧರ್ಮಪ್ರಾಂತ್ಯದ
ನ್ಯಾಯಾಲಯದ ಮುಖ್ಯ ನ್ಯಾಯಾಧಿಪತಿಯಾಗಿ ಬಿಷಪ್‌ ಜೆರಾಲ್ಡ್‌ ಐಸಾಕ್‌ ಲೋಬೊರವರು.
ಸೇಮಕಗೊಳಿಸಿದ್ದಾರೆ.

ಇಂದು ಜೂ.30 ರಂದು ಉಡುಪಿ ಬಿಷಪ್‌ ಹೌಸ್‌ನಲ್ಲಿ ಜರಗಿದ ಸರಳ ಧಾರ್ಮಿಕ ಸಮಾರಂಭದಲ್ಲಿ ಬಿಷಪ್‌ ಜೆರಾಲ್ಡ್‌
ಲೋಬೊರವರ ಸಮ್ಮುಖದಲ್ಲಿ ವಂ. ಡಾ. ರೋಶನ್‌ ಡಿ’ಸೋಜಾರವರು ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ನ್ಯಾಯಾಧಿಪತಿ ಅತಿ ವಂ. ವಾಲ್ಟರ್‌ ಡಿ’ಮೆಲ್ಲೊರವರು ವಂ.ಡಾ.ರೋಶನ್‌ ಡಿ’ಸೋಜಾರವರಿಗೆ.
ಅಧಿಕಾರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಬಿಷಪ್‌ ಜೆರಾಲ್ಡ್‌ ಲೋಬೊರವರು, ಅತಿ ವಂ. ವಾಲ್ಟರ್‌
ಡಿಮೆಲ್ಗೊರವರು ಕಳೆದ 6 ವರ್ಷಗಳಿಂದ ಉಡುಪಿ ಧರ್ಮಪ್ರಾಂತ್ಯದಲ್ಲಿ ಸಲ್ಲಿಸಿದ ಸೇವೆಗಾಗಿ ಕೃತಜ್ಞತೆ.
ಸಲ್ಲಿಸಿದರು ಹಾಗೂ ನೂತನ ಮುಖ್ಯ ನ್ಯಾಯಾಧಿಪತಿ ವಂ. ಡಾ. ರೋಶನ್‌ ಡಿ’ಸೋಜಾರವರಿಗೆ
ಅಭಿನಂದನೆಗಳನ್ನು ಸಲ್ಲಿಸಿದರು.

ಪಾಂಬೂರ್‌ ಚರ್ಚಿನ ಧರ್ಮಗುರು ವಂ. ಹೆನ್ರಿ ಮಸ್ಕರೇನಸ್‌, ಉಡುಪಿ ಚರ್ಚಿನ ಧರ್ಮಗುರು ಅತಿ ವಂ. ಚಾರ್ಲ್ಸ್‌
ಮಿನೇಜಸ್‌, ಧರ್ಮಗುರು ವಂ. ಜೋಕಿಮ್‌ ಡಿ’ಸೋಜ, ಧರ್ಮಪ್ರಾಂತ್ಯದ ಖಜಾಂಚಿ ಮಾರ್ಸೆಲ್‌ ಡಿ’ಸೋಜ ಉಪಸ್ಥಿತರಿದ್ದರು.

ವಂ. ಡಾ. ರೋಶನ್‌ ಡಿ’ಸೋಜರವರು ಪ್ರಸ್ತುತ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾಗಿಯೂ ಸೇವೆ.
ಸಲ್ಲಿಸುತ್ತಿದ್ದಾರೆ. ಅವರು ಮಂಗಳೂರಿನ ರೊಜಾರಿಯೋ ಕಾಥೆದ್ರಲ್‌, ಕುಲಶೇಕರ ಮತ್ತು ಮೂಡುಬೆಳ್ಳೆ ಚರ್ಚಿನಲ್ಲಿ
ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಸೈಂಟ್‌ ಪೀಟರ್ ಇನ್‌ಸ್ಟಿಟ್ಯುಟ್‌ನಿಂದ ‘ಕ್ಯಾನನ್‌
ಲಾ’ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ರೋಮನ್‌ ಉರ್ಬಾನಿಯಾನ ವಿಶ್ವವಿದ್ಯಾಲಯದಿಂದ
ಡಾಕ್ಟರೇಟ್‌ ಪದವಿಯನ್ನು ಪಡೆದಿದ್ದಾರೆ.

118 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟನೆಗೊಂಡ 40 ದಿವಸಗಳಲ್ಲೆ ಬಿರುಕು !

ಸೂರತ್‌: ಮೇ 17 ರಂದು ಉದ್ಘಾಟನೆಗೊಂಡ ಸೇತುವೆಯನ್ನು 118 ಕೋಟಿ ರೂ. ವೆಚ್ಚದಿಂದ ಪುನರ್ ನಿರ್ಮಾಣ ಗೊಂಡಿದ್ದು, ಇದು ಸೂರತ್‌ನ ವರಿಯಾವ್ ಮತ್ತು ವೇದ್ ಗ್ರಾಮಗಳನ್ನು ಸಂಪರ್ಕಿಸುತ್ತದೆ ಮತ್ತು ಆ ಪ್ರದೇಶದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಜನ ಸಂಪರ್ಕವನ್ನು ಪಡೆಯುವ ಸೇತುವೆಯಾಗಿದ್ದು, ಸೇತುವೆಯು ವ್ಯಾಪ್ತಿ1.5 ಕಿಮೀ ಯಾಗಿದ್ದು, ಇದು ನಾಲ್ಕು ಪಥಗಳನ್ನು ಹೊಂದಿದೆ.

ಜುಲೈ 01ರಂದು ಬೆಳ್ಮಣ್ಣು ಜೇಸಿಐ ನೇತೃತ್ವದಲ್ಲಿ ಪೂರ್ವಾಧ್ಯಕ್ಷರ ಸಮ್ಮಿಲನ ಮತ್ತು ಜೇಸಿ ಕುಟುಂಬೋತ್ಸವ

43 ವರ್ಷಗಳ ಸುದೀರ್ಘ ಇತಿಹಾಸವಿರುವ ಬೆಳ್ಮಣ್ಣು ಜೇಸಿಐ ಘಟಕದ ನೇತೃತ್ವದಲ್ಲಿ 43ನೇ ವರ್ಷಾಚರಣೆ ಅಂಗವಾಗಿ ಇಂದಾರು ಸತ್ಯನಾರಾಯಣ ಭಟ್ ಅವರ ಮನೆಯಲ್ಲಿ ಜುಲೈ 01ರಂದು ಶನಿವಾರ ಸಂಜೆ 06-30ರಿಂದ ಪೂರ್ವಾಧ್ಯಕ್ಷರ ಸಮ್ಮಿಲನ ಮತ್ತು ಜೇಸಿ ಕುಟುಂಬೋತ್ಸವ ಕಾರ್ಯಕ್ರಮ ಜರಗಲಿದೆ.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಮಣ್ಣು ಜೇಸಿಐ ಘಟಕದ ಸ್ಥಾಪಕಾಧ್ಯಕ್ಷರಾದ ಕೆ. ಸದಾನಂದ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
      ಕಾರ್ಯಕ್ರಮದ ವಿಶೇಷತೆಗಳು: ಪೂರ್ವಾಧ್ಯಕ್ಷರ ಸಮ್ಮಿಲನ,ಜೇಸಿ ಕುಟುಂಬೋತ್ಸವ, ಹಿರಿಯ ಕಿರಿಯ ಜೇಸಿಗಳ ಸಮಾಗಮ, ವಿವಿಧ ನೃತ್ಯ, ಸಂಗೀತ ಕಾರ್ಯಕ್ರಮ, ಮನೋರಂಜನಾ ಸ್ಪರ್ಧೆಗಳು, ಶುಚಿ ರುಚಿಯಾದ ಭೋಜನದ ವ್ಯವಸ್ಥೆಯಿದೆ ಎಂದು ಬೆಳ್ಮಣ್ಣ ಜೇಸಿಐ ಘಟಕಾಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

Rachana, Catholic Chamber of Commerce and Industry held a member meeting

Rachana, Catholic Chamber of Commerce and Industry held a member meeting today at the Chefs Restaurant at Nanthur.
Prof. C. A. Lionel Aranha, a renowned CA n investors expert spoke on the topic ” Analysing Financial Statements, Unlocking the Secrets of Financial Data.”
Mr. Aranha simplified the topic in a common man’s language to ensure all those present understood the importance of the day’s topic.
He insisted that you understand the financial situation and the know-how of any investment that you wish to do.
Also that you do not get carried away by YouTube expertise or any other advisors.
You study the market well, keep a close watch on the market n take a decision.
Other than Rachana Members, there were MBA students from various colleges in the city.
In the absence of Rachana President Mr. Vincent Cutinha, the Vice President of Rachana CA Rudolph Rodrigues welcomed the gathering with a brief note on the program. Also, he mentioned that Rachana is heading to 25th year. Rudolph mentioned about various programs including the Udyog Sathi program taken by Rachana in collaboration with St. Joseph’s Engineering College in M’lore.
Mrs. Eulalia Dsouza, treasurer did the invocation. Secretary Lavina Monteiro proposed a Vote of thanks.
Joint Secretary Philip Pereira compared the program.
Including the members and invitees, there were almost 60 people present for this program.

ಶ್ರೀನಿವಾಸಪುರ: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು

ಶ್ರೀನಿವಾಸಪುರ: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಿಸಿದರು. ಪಟ್ಟಣದ ಹೊರವಲಯದಲ್ಲಿನ ಈದ್ಗಾ ಮೈದಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಸಮುದಾಯದ ನಾಗರಿಕರು ಪರಸ್ಪರ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ಸಲ್ಲಿಸಿ ಹಿಂದಿರುಗುವಾಗ ಕೆಲವು ಮುಸ್ಲಿಂ ಸಮುದಾಯದವರು ತಂಪು ಪಾನೀಯ ವಿತರಿಸಿದರು.
ಹಬ್ಬದ ಪ್ರಯುಕ್ತ ಬಡವರಿಗೆ ಮಾಂಸ ದಾನ ಮಾಡಲಾಯಿತು. ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿತ್ತು. ಮಧ್ಯಾಹ್ನದ ಹೊತ್ತಿಗೆ ಮಾಂಸದ ಅಂಗಡಿಗಳಲ್ಲಿ ಮಾಂಸ ಮುಗಿದುಹೋಗಿತ್ತು. ಮುಸ್ಲಿಂ ಸಮುದಾಯದಿಂದ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಬಂದ ಪರಿಣಾಮವಾಗಿ ಬೇರೆಯವರಿಗೆ ಕುರಿ ಮಾಂಸ ಸಿಗುವುದು ಕಷ್ಟವಾಗಿತ್ತು. ಕುರಿ ತಲೆ ಮತ್ತು ಕಾಲಿನ ವ್ಯಾಪಾರ ಜೋರಾಗಿ ನಡೆಯಿತು. ಕುರಿ ಮಾಂಸ ಕೆಜಿಯೊಂದಕ್ಕೆ ರೂ.700 ರಂತೆ ಮಾರಾಟ ಮಾಡಲಾಯಿತು.
ಬಕ್ರೀದ್ ಪ್ರಯುಕ್ತ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಲ್ಲೂಕಿನ ಗೌನಿಪಲ್ಲಿ, ಅಡ್ಡಗಲ್, ಮುದಿಮಡಗು, ಯಚ್ಚನಹಳ್ಳಿ ಸೇರಿದಂತೆ ಮುಸ್ಲಿಮರು ವಾಸಿಸುವ ಗ್ರಾಮಗಳಲ್ಲಿ ಬಕ್ರೀದ್ ಆಚರಣೆ ಮಾಡಲಾಯಿತು. ಈದ್ಗಾ ಮೈದಾನಕ್ಕೆ ಒಟ್ಟಾಗಿ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.