ಸುಸ್ಥಿರ ಹಿಪ್ಪುನೇರಳೆ ಸೊಪ್ಪು ಮತ್ತು ಗುಣಮಟ್ಟದ ರೇಷ್ಮೆಗೂಡಿನ ಇಳುವರಿಗೆ ಸಾವಯವ ಪದ್ಧತಿ ನಿರ್ವಹಣೆ ಅತಿ ಮುಖ್ಯ


ಕೋಲಾರ: “ಮಣ್ಣಿನ ಆರೋಗ್ಯ ಹಾಗೂ ಸುಸ್ಥಿರ ಹಿಪ್ಪುನೇರಳೆ ಸೊಪ್ಪು ಮತ್ತು ರೇಷ್ಮೆಗೂಡಿನ ಇಳುವರಿಗೆ ಸಾವಯವ ಆಧಾರಿತ ಬೇಸಾಯ ಕ್ರಮಗಳು ” ಸಾಮಥ್ರ್ಯ ವೃದ್ಧಿ ತರಬೇತಿ ಕಾರ್ಯಕ್ರಮ ವನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ ರೇಷ್ಮೆ ಇಲಾಖೆ, ಜಿ.ಪಂ., ಕೋಲಾರ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಡಿವಾಳ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 28.06.2023 ರಂದು ಕೃಷಿ ವಿಜ್ಞಾನ ಕೇಂದ್ರ, ಕೋಲಾರದಲ್ಲಿ ಆಯೋಜಿಸಲಾಗಿತ್ತು.
ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕರಾದ ಶ್ರೀ. ಮಂಜುನಾಥ್, ಎಂ. ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಇತ್ತೀಚಿಗೆ ಕೀಟನಾಶಕಗಳು, ಕಳೆನಾಶಕಗಳು ಮತ್ತು ಎಲೆ ಸಿಂಪರಕಗಳ ವಿವೇಚನಾರಹಿತ ಬಳಕೆಯಿಂದ, ಹಿಪ್ಪುನೇರಳೆ ತೋಟದ ಮಣ್ಣು ಅಥವಾ ಸೊಪ್ಪು ಕಲುಷಿತಗೊಳ್ಳುತ್ತಿದ್ದು, ಕೀಟದ ಜಾತಿಗೆ ಸೇರಿದ ಸೂಕ್ಷ್ಮ ಪ್ರಾಣಿಯಾದ ರೇಷ್ಮೆಹುಳು ಈ ರೀತಿಯ ಮಲಿನ ವಸ್ತುಗಳಿಂದಾಗಿ ವಿವಿಧ ವಿಚಿತ್ರ ಲಕ್ಷಣಗಳನ್ನು ತೋರ್ಪಡಿಸುತ್ತಾ ಸಾವನ್ನಪ್ಪುತ್ತಿದ್ದು ರೇಷ್ಮೆ ಬೆಳೆಗಾರರು ಹುಳುಗಳ ರೋಗಕ್ಕಿಂತಲೂ ಈ ತರಹದ ಸಮಸ್ಯೆಯಿಂದ ಹೆಚ್ಚಾಗಿ ಬೆಳೆ ಕಳೆದುಕೊಳ್ಳುತ್ತಿದ್ದಾರೆ, ಈ ನೀಟ್ಟಿನಲ್ಲಿ ರೇಷ್ಮೆ ಬೆಳೆಗಾರರು ಹಿಪ್ಪುನೇರಳೆಗೆ ಸಾವಯವ ಪದ್ಧತಿಯಲ್ಲಿ ತೋಟ ನಿರ್ವಹಣೆ ಹಾಗೂ ವೈಜ್ಞಾನಿಕವಾಗಿ ಶಿಪಾರಸು ಮಾಡಿರುವ ಸುರಕ್ಷೀತ ಕೀಟನಾಶಕಗಳನ್ನು ಮಾತ್ರ ಹಿಪ್ಪುನೇರಳೆ ತೋಟಗಳಿಗೆ ಆದ್ಯತೆ ಮೆರೆಗೆ ಬಳಸಬೇಕೆಂದು ತಿಳಿಸಿದರು.
ರೇಷ್ಮೆ ಉಪನಿರ್ದೇಶಕರಾದ ಶ್ರೀ. ಟಿ. ಎಂ. ಕಾಳಪ್ಪರವರು ಉದ್ಘಾಟನೆಯನ್ನು ನೆರವೇರಿಸಿ ಕೋಲಾರ ಜಿಲ್ಲೆ ಮಾತ್ರವಲ್ಲದೆ ರೇಷ್ಮೆ ಬೆಳೆಯುವ ಇತರ ಜಿಲ್ಲೆಗಳಲ್ಲೂ ಸಹ ಇತ್ತೀಚಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರು ರೇಷ್ಮೆಹುಳು ಗೂಡು ಕಟ್ಟದೆ ಬೆಳೆ ನಷ್ಟವನ್ನು ಅನುಭವಿಸುತ್ತಿರುವುದು ವರದಿಯಾಗುತ್ತಿದ್ದು ಇದಕ್ಕೆ ಮುಖ್ಯಕಾರಣ ಅರಿವಿಲ್ಲದೆ ಇತರ ಬೆಳೆಗಳಿಗೆ ಕೀಟನಾಶಕಗಳು ಬಳಸಿದಾಗ ಕೀಟನಾಶಕದ ವಿಷಕಾರಿ ಅಂಶದ ಪ್ರಬಾವವು ಗಾಳಿ ಹಾಗೂ ಮಣ್ಣಿನ ಮುಖಾಂತರ ಸೊಪ್ಪಿಗೆ ಸೇರುವುದರಿಂದ ರೇಷ್ಮೆಹುಳುಗಳು ತಿಂದಾಗ ಸರಿಯಾಗಿ ಗೂಡು ಕಟ್ಟದೆ ಇರುವುದು ಕಂಡುಬಂದಿದೆ ಹಾಗೆಯೇ ಖಾಸಗಿ ಕಂಪನಿಗಳಿಂದ ತಯಾರಾಗುವ ಜೈವಿಕ ಕೀಟನಾಶಕಗಳು ಹಿಪ್ಪುನೇರಳೆಗೆ ಬಳಸಿದಾಗ 2 ರಿಂದ 3 ಬೆಳೆಗಳ ನಂತರ ನಿಧನವಾಗಿ ಅವುಗಳ ಪರಿಣಾಮ ಕಂಡುಬಂದಿರುವುದಾಗಿ ವಿಜ್ಞಾನಿಗಳು ತಿಳಿಸುತ್ತಿದ್ದು ರೇಷ್ಮೆಬೆಳೆಗಾರರು ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಪೀಡೆನಿರ್ವಹಣೆ ಕೈಗೊಳ್ಳಬೇಕೆಂದು ಬಳಸಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶ್ರೀ. ಎಸ್. ಎನ್. ಶ್ರೀನಿವಾಸ್, ರೇಷ್ಮೆ ಉಪನಿರ್ದೇಶಕರು, ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ಕೋಲಾರರವರು ಮಾತನಾಡಿ, ಹಿಪ್ಪುನೇರಳೆ ತೋಟದ ಪಕ್ಕದ ಬೆಳೆಗಳಿಗೆ ಬೂಮರ್ / ಪ್ರೆಷರ್ ಪಂಪ್‍ಗಳಿಂದ ಸಿಂಪಡಿಸಿದ ಕೀಟನಾಶಕ / ಕಳೆನಾಶಕದ ತುಂತುರು ಕಣಗಳು ಗಾಳಿಯ ಮೂಲಕ ಪಸರಿಸಿ, ಸೊಪ್ಪಿನ ಮೇಲೆ ನೆಲೆ ನಿಂತಾಗ ಅಂತಹ ಸೊಪ್ಪನ್ನು ತಿಂದ ಹುಳುಗಳು 5ನೇ ಹಂತದವರೆಗೂ ಆರೋಗ್ಯವಾಗಿದ್ದು, ಹಣ್ಣಾದ ಹುಳುಗಳು ಹಸಿರು ಬಣ್ಣದ ರಸವನ್ನು ವಾಂತಿ ಮಾಡಿಕೊಂಡು ಮೋಟಾಗಿ ನಂತರ ಸಾವನ್ನಪ್ಪುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ರೇಷ್ಮೆಬೆಳೆಗಾರರು ಹಿಪ್ಪುನೇರಳೆ ತೋಟಗಳಿಗೆ ಸಾವಯವ ಪದ್ದತಿಯ ಮೂಲಕ ಮಳೆಗಾಲದಲ್ಲಿ ಹಸಿರೆಲೆ ಗೊಬ್ಬರಗಳನ್ನು ಬೆಳೆದು ಮಣ್ಣಿಗೆ ಸೇರಿಸುವುದು ಹಾಗೂ ಶಿಫಾರಿತ ಕೊಟ್ಟಿಗೆ ಗೊಬ್ಬರವನ್ನು ಮುಂಗಾರು ಹಾಗೂ ಹಿಂಗಾರಿನಲ್ಲಿ ಎರಡು ಸಮ ಕಂತುಗಳಲ್ಲಿ ನೀಡುವುದು, ಟ್ರೇಂಚಿಂಗ್ ಮತ್ತು ಮಲ್ಚಿಂಗ್ ತಾಂತ್ರಿಕತೆ ಅಳವಡಿಸುವ ಮೂಲಕ ಸಾವಯವ ಅಂಶವನ್ನು ವೃದ್ಧಿಗೊಳಿಸಿ ಮಣ್ಣಿನ ಪಲವತ್ತತೆಯನ್ನು ಕಾಪಾಡಬೇಕೆಂದು ಹಾಗೂ ಕಡ್ಡಾಯವಾಗಿ 7 ದಿನಗಳ ನಂತರ ಚಂದ್ರಿಕೆಯಿಂದ ಗೂಡು ಬಿಡಿಸಿ ಕಳಪೆ ಗೂಡುಗಳನ್ನು ವಿಂಗಡಿಸಿ ಉತ್ತಮ ಗೂಡುಗಳನ್ನು ಮಾತ್ರ ಮಾರುಕಟ್ಟೆಗೆ ತರುವುದರಿಂದ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಪಡೆಯಬಹುದೆಂದು ತಿಳಿಸಿದರು.
ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ಡಾ. ಜೆ.ಬಿ. ನರೇಂದ್ರಕುಮಾರ್ ರವರು ಪ್ರಸ್ತುತ ಮುಂಗಾರು ಮಳೆ ನೀರಿಕ್ಷಿತ ಮಟ್ಟದಲ್ಲಿ ಬಿಳದೆ, ಒಣಹವೆ ಮುಂದುವರೆದಿದ್ದು ಹಾಗೂ ಆಸಾಢ ಮಾಸದ ಗಾಳಿಯಿಂದಾಗಿ ಹಿಪ್ಪುನೇರಳೆಯಲ್ಲಿ ಮೈಟ್ಸ್ ನುಸಿಯ ಹಾವಳಿ ಅಧಿಕವಾಗಿದ್ದು ರೇಷ್ಮೆ ಬೆಳೆಗಾರರು ಕಡ್ಡಾಯವಾಗಿ ತೋಟ ಕಟವಾದ 15 ದಿನಗಳಲ್ಲಿ ನುಶಿನಾಶಕವಾದ ಪೆನಜಾಕ್ವೀನ್ 30% ಇ.ಸಿ. 1.50 ಎಂ.ಎಲ್ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸುವುದು ಇದಾದ 10 ದಿನಗಳ ನಂತರ ವೆಟ್ಟಬಲ್ ಸಲ್ಪರ್ 3 ಗ್ರಾಂನಂತೆ ಕಾಂಡದ ಮತ್ತು ಎಲೆಯ ಮೇಲೆ ಸಿಂಪಡಿಸುವುದರಿಂದ ಪೀಡೆನಿರ್ವಹಣೆ ಮಾಡಬಹುದೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಸಸ್ಯರೋಗಶಾಸ್ತ್ರದ ವಿಜ್ಞಾನಿಯಾದ ಡಾ. ಸದಾನಂದ ಮುಶ್ರೀಪ್ ಹಾಗೂ ಡಾ. ಶಶಿಧರ್ ಕೆ.ಆರ್‍ರವರು ಮರಳು ಮಿಶ್ರಿತ ಮಣ್ಣು, ನೀರಾವರಿ ಸೌಲಭ್ಯವಿರುವ ಹಾಗು ಸಾವಯವ ಅಂಶ ಕಡಿಮೆ ಇರುವ ನೆಲದಲ್ಲಿ ಜಂತುಹುಳುವಿನ ಬಾದೆ ಅತೀ ಹೆಚ್ಚಾಗಿ ಕಂಡುಬರುತ್ತಿದ್ದು ಹಿಪ್ಪುನೇರಳೆ ಸಸ್ಯದ ಬೇರಿಗೆ ಹಾನಿಯನ್ನುಂಟು ಮಾಡಿ ಮಣ್ಣಿನ ಮುಖಾಂತರ ಹರಡುವ ಬೇರಿನ ಕಪ್ಪುಕೊಳೆ ಹಾಗು ಕಾಂಡದ ಕ್ಯಾಂಕರ್‍ನಂತಹ ರೋಗಗÀಳಿಗೆ ತುತ್ತಾಗುವಂತೆ ಮಾಡುತ್ತದೆ. ಇದರ ನಿರ್ವಹಣೆಗೆ ಜಂತುನಾಶಕ ಶಿಲೀಂದ್ರ, ವರ್ಟಿಸಿಲಿಯಮ್ ಕ್ಲಮೈಡೋಸ್ಪೋರಿಯಂ (1 ಕೆ.ಜಿ. + 200 ಕೆ.ಜಿ. ಕೊಟ್ಟಿಗೆ ಗೊಬ್ಬರ + 24 ಕೆ.ಜಿ. ಬೇವಿನ ಹಿಂಡಿ, ಒಂದು ವಾರದ ನಂತರ ಗಿಡವೊಂದಕ್ಕೆ 200 ಗ್ರಾಂ. ಮಿಶ್ರಣ ಪ್ರತಿ 4 ತಿಂಗಳಿಗೊಮ್ಮೆ 2 ವರ್ಷಗಳವರೆಗೆ) ಬಳಕೆ ಮಾಡುವುದು ಹಾಗೂ ಪ್ಯಾಸಿಲೋಮೈಸಿಸ್ ಲಿಲಾನಸ್ 5 ಕೆ.ಜಿ.ಯನ್ನು 200 ಕೆ.ಜಿ. ಬೇವಿನ ಹಿಂಡಿಯೊಂದಿಗೆ 15 ದಿನಗಳವರೆಗೆ ಪುಷ್ಠಿಕರಿಸಿ ಗಿಡದ ಬೇರಿನ ಸುತ್ತ 250ಗ್ರಾಂ ನಂತೆ ನೀಡುವುದರಿಂದ ಜೈವಿಕ ಪದ್ಧತಿಯಲ್ಲಿ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಮಣ್ಣು ವಿಜ್ಞಾನಿಯಾದ ಡಾ. ಎಸ್. ಅನಿಲ್ ಕುಮಾರ್ ಹಾಗೂ ಸಾವಯವ ರೇಷ್ಮೆಕೃಷಿಕರಾದ ಸಿ.ಎಲ್.ನಾಗರಾಜು ಚಿಟÀ್ನಹಳ್ಳಿರವರು ಸಾವಯವ ಪದ್ದತಿಯಲ್ಲಿ ಹಿಪ್ಪುನೇರಳೆ ಬೇಸಾಯ ಕ್ರಮಗಳ ಬಗ್ಗೆ ತಿಳಿಸುತ್ತ ಪ್ರತಿಯೊಬ್ಬ ರೇಷ್ಮೆ ಬೆಳೆಗಾರರು ಮನೆಯಲ್ಲಿ ನಾಟಿಹಸು ಸಾಕಾಣಿಕೆ ಮಾಡುವುದರಿಂದ ಹಸುವಿನ ಗಂಜಲ, ಸಗಣಿಯನ್ನು ಬಳಕೆ ಮಾಡಿಕೊಂಡು ಜೀವಾಮೃತ ತಯಾರಿಸಿ ಬಳಸುವುದು, ದ್ರವರೂಪದ ನೀಮಾಸ್ತ್ರ ಹಾಗೂ ಧಶಪರ್ಣಿ ತಯಾರಿಸಿ ಹಿಪ್ಪುನೇರಳೆಗೆ ಬರುವ ರಸಹೀರುವ ಕೀಟಗಳು, ಕುಡಿತಿನ್ನುವ ಕೀಟ ಹಾಗೂ ಶೀಲೀಂದ್ರ ರೋಗಗಳನ್ನು ನಿಯಂತ್ರಿಸುವುದರ ಜೋತೆಗೆ ಮಣ್ಣಿನ ಪಲವತ್ತತೆ ಕಾಪಾಡಬಹುದು ಎಂದು ತಿಳಿಸಿದರು.
ಕೊನೆಯಲ್ಲಿ ಕೋಲಾರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕರಾದ ಶ್ರೀ. ಮಂಜುನಾಥ್, ಎಂ. ರವರು ಜೂನ್ 30 ರಂದು ವಯೋನಿವೃತ್ತಿ ಹೊಂದುತ್ತಿದ್ದು ಸದರಿಯವರು ರೇಷ್ಮೆಕೃಷಿ ವಿಸ್ತರಣೆಗೆ ಮತ್ತು ಅಬಿವೃದ್ಧಿಗೆ ಸಲ್ಲಿಸಿರುವ ಕಾರ್ಯಗಳನ್ನು ಸ್ಮರಿಸುತ್ತ ಕೃಷಿ ವಿಜ್ಞಾನ ಕೇಂದ್ರದಿಂದ ಗೌರವಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಕೋಲಾರ ತಾಲ್ಲೂಕಿನ ಸುಮಾರು 75 ರೇಷ್ಮೆ ಬೆಳೆಗಾರರು ಹಾಗೂ ಕೋಲಾರ ವಿಭಾಗದ ರೇಷ್ಮೆ ಇಲಾಖೆಯ ಎಲ್ಲ ಸಿಬ್ಬಂದಿ ವರ್ಗದವರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 2023-24ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ

ಜುಲೈ 1 ರಂದು ನಗರದ ಪತ್ರಕರ್ತರ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್ ಮತ್ತು ವಿ.ಮುನಿರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಅವರನ್ನೊಳಗೊಂಡ ಸಮಿತಿಯು ಜಿಲ್ಲೆಯ 9 ಮಂದಿ ಪತ್ರಕರ್ತರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿತು.

ಪ್ರಶಸ್ತಿ ವಿಜೇತರ ವಿವರ:
ಕೆ.ಆರ್.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ವಿಜಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಎಂ.ನಾರಾಯಣಸ್ವಾಮಿ, ಜಿ.ನಾರಾಯಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ಪ್ರಜಾವಾಣಿ ದಿನಪತ್ರಿಕೆಯ ಛಾಯಾಗ್ರಾಹಕ ಎ.ಸರ್ವಜ್ಞಮೂರ್ತಿ, ಬಿ.ವಿ.ನರಸಿಂಹಮೂರ್ತಿ ಅವರ ನೆನಪಿನಲ್ಲಿ: ಉದಯವಾಣಿ ದಿನಪತ್ರಿಕೆಯ ಮಾಸ್ತಿ ಹೋಬಳಿ ವರದಿಗಾರ ಎಂ.ಮೂರ್ತಿ, ಎಂ.ಮಲ್ಲೇಶ್ ನೆನಪಿನಲ್ಲಿ: ಕೋಲಾರದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸಮೀರ್ ಅಹಮದ್ ಎನ್.ಎಂ, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಮುಳಬಾಗಿಲಿನ ಉದಯಕಾಲ ದಿನಪತ್ರಿಕೆಯ ತಾಲೂಕು ವರದಿಗಾರ ವಿ.ಸುಕುಮಾರ್, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಬಂಗಾರಪೇಟೆಯ ವಾಸ್ತವ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಹೆಚ್.ಎಲ್.ಸುರೇಶ್, ಬಿ.ಆರ್ಮುಗಂ ನೆನಪಿನಲ್ಲಿ: ಕೆ.ಜಿ.ಎಫ್‍ನ ಸಾಕ್ಷಿ ದಿನಪತ್ರಿಕೆಯ ತಾಲೂಕು ವರದಿಗಾರ ಜೆ.ಸತ್ಯನಾರಾಯಣ, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ: ಶ್ರೀನಿವಾಸಪುರದ ಚುಂಬಕವಾಣಿ ದಿನಪತ್ರಿಕೆಯ ತಾಲೂಕು ವರದಿಗಾರ ಬಿ.ಕೆ.ಉಪೇಂದ್ರ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ: ಕೋಲಾರದ ಕೋಲಾರ ನ್ಯೂಸ್ ಸಂಪಾದಕ ಕೆ.ಎನ್.ಚಂದ್ರಶೇಖರ್ ಅವರನ್ನು ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಕೋಲಾರ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ

ಕೋಲಾರ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾಗೆ ಆಗ್ರಹಿಸಿ ಕೋಲಾರ ರೈತಸಂಘದ ಮುಖಂಡರು ಹಾಗೂ ಮಹಿಳಾ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಭಾವಚಿತ್ರಕ್ಕೆ ಹಾಲು, ಮೊಸರಿನಿಂದ ಅರ್ಚನೆ ಮಾಡಿದ ಮುಖಂಡರು, ಚುನಾವಣೆಗೆ ಮೊದಲು ಘೋಷಿಸಿರುವಂತೆಯೇ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳು ಬಂದು ನಮ್ಮ ಮನವಿಯನ್ನು ಸ್ವೀಕರಿಸಿ ಭರವಸೆ ನೀಡುವವರೆಗೂ ಜಾಗ ಬಿಟ್ಟು ಹೋಗುವುದಿಲ್ಲವೆಂದು ಪಟ್ಟುಹಿಡಿದರು. ಈ ವೇಳೆ ಪೊಲೀಸರು ಹಾಗೂ ಸಂಘಟನೆಯ ಮುಖಂಡರೊಂದಿಗೆ ಮಾತಿನ ಚಕಮಕಿಗಳಾದವು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತಸಂಘದ ಕೋಲಾರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, 5 ಗ್ಯಾರೆಂಟಿಗಳನ್ನು ಘೋಷಿಸಿರುವ ರಾಜ್ಯ ಸರಕಾರಕ್ಕೆ 6ನೇ ಗ್ಯಾರೆಂಟಿ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಯೋಜನೆಯು ನುಂಗಲಾರದ ತುತ್ತಾಗಿದೆ. ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ವಿಚಾವಾಗಿ ಈಗಾಗಲೇ ಜಿಲ್ಲೆಯಾದ್ಯಂತ ಸಾಕಷ್ಟು ಹಳ್ಳಿಗಳಲ್ಲಿ ಸಾಲ ಮರುಪಾವತಿ ಮಾಡದೇ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಚುನಾವಣೆಗೆ ಮೊದಲು ಜಿಲ್ಲೆಯ ವೇಮಗಲ್‍ನಲ್ಲಿ ನಡೆದಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿಯೂ ಭರವಸೆ ನೀಡಿದ್ದರು. ಅವರು ಹೇಳಿದ ಮಾತನ್ನು ಕೇಳಿ ಇಂದು ಮತ ನೀಡಿ ಮಹಿಳೆಯರು ತಮ್ಮ ಮಾತನ್ನು ಉಳಿಸಿಕೊಂಡಿದ್ದೇವೆ. ಅದೇ ರೀತಿ ನಮಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸಿ ಅವರ ಮಾತನ್ನು ಉಳಿಸಿಕೊಳ್ಳಲಿ ಎಂದು ಆಗ್ರಹಿಸಿದರು.
ಮಹಿಳಾ ಸಂಘಗಳ ಪದಾಧಿಕಾರಿಗಳಾದ ಚೌಡಮ್ಮ, ಶೈಲಜಾ ಮಾತನಾಡಿ, ಮಾತನಾಡಿ ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಹಾಲು ಮೊಸರು ಅರ್ಚನೆ ಮಾಡಿ ಸ್ತ್ರೀಶಕ್ತಿ ಸಾಲಮನ್ನಾ ಮಾಡುವಂತೆ ಆಗ್ರಹಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಅಂದು ಕೊಟ್ಟ ಮಾತಿನಂತೆಯೇ ನಡೆದುಕೊಂಡು ಇಂದು ಸಾಲಮನ್ನಾ ಮಾಡಲೇ ಬೇಕೆಂದು ಆಗ್ರಹ ಮಾಡಿದರು.
ನಾವು ಯಾವುದೇ ಕಾರಣಕ್ಕೂ ಸಾಲವನ್ನು ಮರುಪಾವತಿ ಮಾಡುವುದಿಲ್ಲ. ಈ ಬಗ್ಗೆ ಜಿಲ್ಲೆಯಾದ್ಯಂತ ಮಹಿಳೆಯರು ಆಕ್ರೋಶಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಭೆ ನಡೆಸಿ, ಸರಕಾರದ ಮುಂದಿನ ಆದೇಶದವರೆಗೂ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ತೆರಳದಂತೆ ಸೂಚಿಸಿದ್ದಾರೆ.
ಸದ್ಯ ಬೂದಿ ಮುಚ್ಚಿದ ಕೆಂಡದಂತೆ ಪರಿಸ್ಥಿತಿ ಇದ್ದು, ಸಾಲ ಮನ್ನಾ ಮಾಡದೆ ಹೀಗೆಯೇ ನಿರ್ಲಕ್ಷಿಸಿಕೊಂಡು ಹೋಗಿದ್ದೇ ಆದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಅನಾಹುತಗಳಿಗೆ ಮುಖ್ಯಮಂತ್ರಿಗಳೇ ನೇರ ಕಾರಣರಾಗುತ್ತಾರೆ ಎಂದು ಎಚ್ಚರಿಕೆ ನೀಡಿ, ಕೂಡಲೇ ಸಾಲಮನ್ನಾ ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ನರಸಿಂಹಯ್ಯ, ಯಾರಂಘಟ್ಟ ಗಿರೀಶ್, ನಾರಾಯಣಗೌಡ, ವೆಂಕಟಮ್ಮ, ರಾಧಮ್ಮ, ಶೋಭ, ಸುಗುಣ, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

St Agnes PU College – Talk on ‘Cyber Crime and Security’ 

Mangalore : ‘Abhaya’ – The Women’s Forum of St Agnes PU College organised a talk on ‘Cyber Crime and Security’ in the college Auditorium. Mr Abdul Rameez, an expert in cyber security was the resource person and was accompanied by Mr Abhishek, Mr Hussain. Mr Mohan and Mr Pavan.

Mr Abdul said that computers and smartphones play a dominant role in today’s world. We should be careful while using it as it has both advantages and disadvantages. He dwelt upon some of the major cyber-attacks, how cyber security works and cyber security awareness. He also informed students about the various types of cyber-crime, forms of cyber-crimes and highlighted the need to be alert and vigilant. He also demonstrated how some of these crimes are committed and explained how fraudsters usually operate. 

The students enjoyed the session and became aware of the pitfalls associated with the cyber world and its vulnerability. “Being forewarned is being forearmed”. This was especially true in this context as students learnt about safe browsing.

The program was co-ordinated by Convenor of Abhaya, Dr Tressie and the team Mr Mathew & Mrs Anitha along with student representatives Ms Lita, Ms Sanathani, Ms Amekha and Ms Yashasvi.

Sr. NorineDSouza, The Principal, Sr Janet Sequeira, Vice Principal and staff witnessed the programme.

ಕಲ್ಯಾಣಪುರ ಮೌಂಟ್ ರೋಜರಿ ಕಥೊಲಿಕ್ ಸಭಾದಿಂದ ಶ್ರೀಸಾಮಾನ್ಯರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ

ಜೂನ್ 25 ಆದಿತ್ಯವಾರವನ್ನು ಶ್ರೀಸಾಮಾನ್ಯರ ದಿನವನ್ನಾಗಿ ಆಚರಿಸಬೇಕೆಂದು ಉಡುಪಿ ಧರ್ಮಪ್ರಾಂತ್ಯ ಘೊಶಿಸಲಾಗಿ, ಮೌಂಟ್ ರೋಜರಿ ದೇವಾಲಯಕ್ಕೆ ಅಧೀನಪಟ್ಟ ಕಥೊಲಿಕ್ ಸಭಾ ಸಂಘಟನೆಯು ಶ್ರೀಸಾಮಾನ್ಯರ ಆಯೋಗದೊಡಗೂಡಿ ಈ ದಿನವನ್ನು ಅರ್ಥವತ್ತಾಗಿ ಆಚರಿಸಿತು. ಆಚರಣೆಯ ಸಭಾಧ್ಯಕ್ಷತೆಯನ್ನು ಕ,ಸಭೆಯ ಅಧ್ಯಕ್ಷರು ಹಾಗೂ ಶ್ರೀಸಾಮಾನ್ಯರ ಆಯೋಗದ ಸಂಚಾಲಕರೂ ಆಗಿರುವ ರೋಜಿ ಕ್ವಾಡ್ರಸ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಲೂಕ್ ಡಿಸೋಜ, ಕಾರ್ಯದರ್ಶಿ ಪ್ರಿಯಾ ಫುರ್ಟಾಡೊ, ಕ.ಸಭಾ ಉಡುಪಿ ಪ್ರದೇಶ್ ಕೇಂದ್ರಾಧ್ಯಕ್ಷರಾದ ಸಂತೋಷ್ ಕರ್ನೇಲಿಯೊ, ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಎಲ್ ರೊಯ್ ಕಿರಣ್ ಕ್ರಾಸ್ತೊ, ಕಾನ್ವೆಂಟಿನ ಭಗಿನಿ ಜೇನ್, ಕ. ಸಭಾ ಕಾರ್ಯದರ್ಶಿ ಜೋರ್ಜ್ ಡಿಸೋಜ ಹಾಜರಿದ್ದರು.

     ಲೂಕ್ ಡಿಸೋಜರು ವೇದಿಕೆಯ ಮುಂದಿರಿಸಿದ್ದ ಹೂ ಕುಂಡಲದ ಸಸಿಗೆ ನೀರೊಯ್ಯುವ ಸಾಂಕೇತಿಕ ನಡೆ ಮತ್ತು ವೇದಿಕೆಯಲ್ಲಿದ್ದವರೆಲ್ಲರು ಅವರ ಜೊತೆ ಕೂಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಯಿತು. ಐಸಿವೈಎಮ್ ಯುವಸಂಘಟನ ಸದಸ್ಯರು ಪ್ರಾರ್ಥನೆ ಗೀತೆ ಹಾಡಿದರು.

     ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವ್ರತ್ತ ಪ್ರೊಫೆಸರ್, ಅವಿಭಜಿತ ಮಂಗಳೂರು ಧರ್ಮ ಪ್ರಾಂತ್ಯದ ಕ. ಸಭಾ ಮಾಜಿ ಅಧ್ಯಕ್ಷರು ಹಾಗೂ ಕ್ರಶಿಕ ರಚನಾ ಪ್ರಶಸ್ತಿ ವಿಜೇತರೂ ಆಗಿರುವ ರಿಚರ್ಡ್ ರೆಬೆಲ್ಲೊರವರನ್ನು ಈ ಸಂದರ್ಭದಲ್ಲಿ ಅವರ ಸಾಮಾಜಿಕ ಕಳಕಳಿಯ ಸೇವೆಯನ್ನು ಶ್ಲಾಗಿಸಿ ಸನ್ಮಾನಿಸಲಾಯಿತು. ತದನಂತರ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ 18 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಧನದೊಂದಿಗೆ ಪುರಸ್ಕರಿಸಲಾಯಿತು.

     ಎಲ್ ರೊಯ್ ಕಿರಣ್ ಕ್ರಾಸ್ತೊ ಅವರು, ಜನ್ಮದುದ್ದಕ್ಕೂ ಸಮಾಜದಿಂದ ಪಡೆಯುವುದಷ್ಟೇ ಅಲ್ಲ, ಸ್ವಲ್ಪ ಮಟ್ಟಿಗಾದರೂ ನಮ್ಮಿಂದಾದಷ್ಟು ಶ್ರೀಸಾಮಾನ್ಯರ ಸೇವೆಯ ಮೂಲಕ ಮರಳಿ  ಅರ್ಪಿಸಬೇಕೆಂಬ ಸಂದೇಶವನ್ನು ಕೊಟ್ಟರು.    

     ಮೊದಲಿಗೆ ರೋಜಿ ಕ್ವಾಡ್ರಸ್ ಅವರು ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದರು ಸಭಾಂತ್ಯದಲ್ಲಿ ಜೊರ್ಜ್ ಡಿಸೋಜರು ಧನ್ಯವಾದ ಅರ್ಪಣೆಗೈದರು. ಕಾರ್ಯಕ್ರಮವನ್ನು ಪ್ರಮೀಳಾ ಡಿಸೋಜರು ನಡೆಸಿ ಕೊಟ್ಟರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ; ‘ರಾಷ್ಟ್ರೀಯ ಭೂ-ಯುವಸೇನಾ ‘ಎನ್.ಸಿ.ಸಿಯ ಅಂತಾರಾಷ್ಟ್ರೀಯ ಮಾದಕ ವ್ಯಸನ ವಿರೋಧೀ ದಿನಾಚರಣೆ


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಅಂತಾರಾಷ್ಟ್ರೀಯ ಮಾದಕ ವ್ಯಸನ- ಅಕ್ರಮ ಸಾಗಾಟ ವಿರೋಧಿ ದಿನಾಚರಣೆಯನ್ನು ಏರ್ಪಡಿಸಲಾಯಿತು ಇಂದಿನ ಜಗತ್ತಿನಲ್ಲಿ ಯುವಕರು ಅಪಾಯಕಾರಿ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆ ಮತ್ತು ಇದು ಜೀವಮಾನದ ಶಿಕ್ಷೆಗೆ ಕಾರಣವಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ ಅವರು, ಸಮಾಜದಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯುವಕರು ಪಾಲ್ಗೊಳ್ಳುವಂತೆ ಸಲಹೆ ನೀಡಿದರು. ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಕಾಲೇಜಿನ ಎನ್.ಸಿ.ಸಿ ಘಟಕವನ್ನು ಪ್ರಶಂಸಿದರು ಮತ್ತು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಲ್ಲ್ಯಾನ್ಸ್ ಕಾರ್ಪೊರಲ್ ಅನೀಶ್ ಭಟ್, ಶೆಟ್ಟಿಗಾರ್ ಹೇಮಾಶ್ರೀ ಸುದರ್ಶನ್ ಮತ್ತು ಕೆಡೆಟ್ಗಳು ಉಪಸ್ಥಿತರಿದ್ದರು. ಕ್ಯಾಡೆಟ್ಗಳಾದ ಅನುಪ್ ನಾಯಕ ಹಾಗೂ ವಿಶಾಲ್ ಟೆರೆನ್ಸ್ ವಾಜ್ ಸಹಕರಿಸಿದರು. ಕೆಡೆಟ್ ಆದಿತ್ಯ ಶೆಟ್ಟಿಗಾರ್ ಸ್ವಾಗತಿಸಿ , ಕೆಡೆಟ್ ಗೌತಮಿ ಕರ್ಕೇರ ವಂದಿಸಿದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಜನಪರ ಕಾಳಜಿ ಅನುಕರಣೀಯ;ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಜನಪರ ಕಾಳಜಿ ಅನುಕರಣೀಯ ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ, ಕೆಂಪೇಗೌಡರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬೆಂಗಳೂರನ್ನು ಅರ್ಥಪೂರ್ಣವಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಕೆಂಬಪೇಗೌಡರಿಗೆ ಸಲ್ಲುತ್ತದೆ. ಎಲ್ಲ ವರ್ಗದ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ವಿವಿಧ ಪೇಟೆಗಳನ್ನು ನಿರ್ಮಿಸಿದರು. ಕೃಷಿ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಕೆರೆಗಳನ್ನು ನಿರ್ಮಿಸಿದರು. ಎಲ್ಲ ಧರ್ಮೀಯರನ್ನೂ ಸಮಾನವಾಗಿ ಕಂಡು ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ, ಕೆಂಪೇಗೌಡರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರ ಜನಪರ ಕಾರ್ಯ ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳ ಪ್ರತಿಬಿಂಬವಾಗಿದೆ. ಇಂದು ಕೆಂಪೇಗೌಡರ ಹೆಸರು ದೇಶ ವಿದೇಶಗಳಲ್ಲಿ ಕೇಳಿಬರುತ್ತಿರುವುದು ಅವರ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ, ಸಹಾಯಕ ತೋಟಗಾರಿಕಾ ನಿರ್ದೆಶಕ ಬೈರೆಡ್ಡಿ, ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿ ಮುದುವಾಡಿ ಮಂಜುನಾಥರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಮುಖಂಡರಾದ ಮೀಸಗಾನಹಳ್ಳಿ ವೆಂಕಟರೆಡ್ಡಿ, ಲಕ್ಷ್ಮಣರೆಡ್ಡಿ ಇದ್ದರು.

ಕೃಷಿಕ ನಾರಾಯಣಸ್ವಾಮಿ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು:ದಲಿತ ಮುಖಂಡರಾದ ರಾಮಾಂಜಮ್ಮ ಆಗ್ರಹ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ಕೃಷಿಕ ನಾರಾಯಣಸ್ವಾಮಿ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು. ಕುಟುಂಬದ ಸದಸ್ಯರ ಮೇಲೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ರಾಮಾಂಜಮ್ಮ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ದೂರು ಸರ್ವೆ ನಂಬರ್ 42 ಪೈಕಿ 3 ಎಕರೆ ಜಮೀನು ನಾರಾಯಣಸ್ವಾಮಿ ತಂದೆಗೆ ದರಖಾಸ್ತು ಮೂಲಕ ಮಂಜೂರಾಗಿತ್ತು. ತಂದೆ ಮರಣಾನಂತರ ನಾರಾಯಣಸ್ವಾಮಿ ಹೆಸರಿಗೆ ಪವತಿ ಖಾತೆಯಾಗಿದ್ದು, ಅವರೇ ಅನುಭವದಲ್ಲಿದ್ದಾರೆ. ಸದರಿ ಜಮೀನು ಹರ್ಷಫ್ ಎಂಬುವವರಿಗೆ ನೋಂದಣಿಯಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.
ಆದರೆ ಹರ್ಷಫ್ ಅವರಿಂದ ಜಮೀನಿಗೆ ಸಂಬಂಧಿಸಿದಂತೆ ಪವರ್ ಆಫ್ ಅಟಾರ್ನಿ ಪಡೆದುಕೊಂಡಿರುವುದಾಗಿ ಹೇಳಿಕೊಳ್ಳುತ್ತಿರುವ ನಿವೃತ್ತ ಅರಣ್ಯಾಧಿಕಾರಿಯೊಬ್ಬರು, ಉದ್ದೇಶ ಪೂರ್ವಕವಾಗಿ ನಾರಾಯಣಸ್ವಾಮಿ ಕುಟುಂಬದ ಸದಸ್ಯರು ಜಮೀನು ಪ್ರವೇಶ ಮಾಡದಂತೆ ಅಡ್ಡಿಪಡಿಸುತ್ತಿದ್ದಾರೆ. ದೌರ್ಜನ್ಯ ನಡೆಸಿ ಮಾವಿನ ಕಾಯಿ ಕಟಾವು ಮಾಡಿದ್ದಾರೆ. ದೌರ್ಜನ್ಯದಿಂದ ನೊಂದ ನಾರಾಯಣಸ್ವಾಮಿ ಮಗ ಪರಮೇಶ್ ಈಚೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ಹೇಳಿದರು.
ದೌರ್ಜನ್ಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ, ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ. ಇಷ್ಟಾದರೂ ಸಮಸ್ಯೆ ಬಗೆಹರಿದಿಲ್ಲ. ಪೊಲೀಸ್ ಇನ್ಸ್‍ಪೆಕ್ಟರ್ ದೂರು ದಾಖಲಿಸಿಕೊಂಡು, ದೌರ್ಜನ್ಯ ನಡೆಸುತ್ತಿರುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ದಲಿತ ಮುಖಂಡರಾದ ಈರಪ್ಪ, ಎನ್.ತಿಮ್ಮಯ್ಯ, ಜಿ.ಎನ್.ಮುನಿಯಪ್ಪ, ನಾರಾಯಣಸ್ವಾಮಿ, ಕಲಾವತಮ್ಮ, ಪರಮೇಶ್ ಇದ್ದರು.