ಪಿಯುಸ್ ನಗರ ಚರ್ಚಿನ ಧರ್ಮಗುರುಗಳ ಜನ್ಮದಿನದ ವಜ್ರೋತ್ಸವ ಆಚರಣೆ


ಕುಂದಾಪುರ, ಜೂ.26: ಪಿಯುಸ್ ನಗರ ಚರ್ಚಿನ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ ಇವರ ಜನ್ಮದಿನದ ವಜ್ರೋತ್ಸವವನ್ನು ಜೂ.25 ರಂದು ಬಹಳ ಅದ್ದೂರಿಯಿಂದ ಆಚರಿಸಲಾಯಿತು. ಕುಂದಾಪುರ ವಲಯ ಪ್ರಧಾನರಾದ ಕುಂದಾಪುರ ರೋಜರಿ ಮಾತಾ ಚರ್ಚಿನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಕಟ್ಕರೆ ಬಾಲಯೇಸುವಿನ ಆಶ್ರಮದ ಮುಖ್ಯಸ್ಥರಾದ ಧರ್ಮಗುರು ವಂ|ಪ್ರವೀಣ್ ಪಿಂಟೊ ಹಾಗೂ ಧರ್ಮಗುರು ವಂ|ಜೋನ್ ಸಿಕ್ವೇರಾ, ಇವರೂಂದಿಗೆ ಅಂದು ಪೂರ್ವಾಹ್ನಾ ಕ್ರತಜ್ಞತಾ ಬಲಿದಾನವನ್ನು ವಂ|ಆಲ್ಬರ್ಟ್ ಕ್ರಾಸ್ತಾ ಅರ್ಪಿಸಿದರು.
ನಂತರ ನಡೆದ ಅಭಿನಂದನಾ ಸಮಾರಂಭಕ್ಕೆ ವಂ|ಆಲ್ಬರ್ಟ್ ಕ್ರಾಸ್ತಾರವರನ್ನು ಬ್ಯಾಂಡ್ ವಾದ್ಯಗಳ ಸಮ್ಮೇಳನದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸ್ವಾಗತ ನ್ರತ್ಯದೊಂದಿಗೆ ಕಾರ್ಯಕ್ರಮ ಆರಂಭವಾಗಿ ಪಾಲನ ಮಂಡಳಿ ಉಪಾಧ್ಯಕ್ಷ ಜೆಮ್ಸ್ ಡಿಮೆಲ್ಲೊ ಸ್ವಾಗತಿಸಿದರು. ಪಾಲನ ಮಂಡಳಿ ಮಾಜಿ ಉಪಾಧ್ಯಕ್ಷ ವಾಲ್ಟರ್ ಫೆರ್ನಾಂಡಿಸ್ ಧರ್ಮಗುರುಗಳಿಗೆ ಶುಭ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ವಂ|ಆಲ್ಬರ್ಟ್ ಕ್ರಾಸ್ತಾ ರವರನ್ನು ಧರ್ಮಕೇಂದ್ರದ ಪರವಾಗಿ ವೇದಿಕೆಯಲ್ಲಿ ಇದ್ದ ಗಣ್ಯರು ಫಲ ಪುಷ್ಪ ನೀಡಿ ಸನ್ಮಾನಿಸಿದರು. ಪಾಲನ ಮಂಡಳಿ ಕಾರ್ಯದರ್ಶಿ ರೇಶ್ಮಾ ಡಿಸೋಜಾ ಸನ್ಮಾನ ಪತ್ರವನ್ನು ವಾಚಿಸಿದರು. ಧರ್ಮಗುರುಗಳ ಕುಟುಂಬದವರೂ ಧರ್ಮಗುರುಗಳನ್ನು ಸನ್ಮಾನಿಸಿದರು.
ಧರ್ಮಗುರು ವಂ|ಜೋನ್ ಸಿಕ್ವೇರಾ “ಶುಭ ಹಾರೈಸಿ 60 ವರ್ಷ ಮುಗಿದಿದೆ ಇನ್ನೂ ಧರ್ಮಗುರುಗಳು ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು” ಎಂದು ಕಿವಿ ಮಾತು ಹೇಳಿದರು. ವಂ|ಆಲ್ಬರ್ಟ್ ಕ್ರಾಸ್ತಾರವರ ಸಹೋದರ ಮ್ಯಾಕ್ಸಿಮ್ ಕ್ರಾಸ್ತಾ ಬಾಲ್ಯದ ನೆನಪುಗಳನ್ನು ಸ್ಮರಿಸಿದರು. ಕುಂದಾಪುರ ರೋಜರಿ ಮಾತಾ ಚರ್ಚಿನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊರವರು ಪಿಯುಸ್ ನಗರ ಧರ್ಮಪ್ರಜೆಗಳ ಬಗ್ಗೆ ಹೇಳುತ್ತಾ, ಧರ್ಮಗುರುಗಳ ಮೇಲಿರುವ ಅಭಿಮಾನ ಪ್ರೀತಿ ಉಲ್ಲೇಖಿಸಿ ಪ್ರಶಂಸಿ, ಧರ್ಮಗುರುಗಳಿಗೆ ಶುಭ ಹಾರೈಸಿದರು.
ವಂ|ಆಲ್ಬರ್ಟ್ ಕ್ರಾಸ್ತಾರವರು ತಮ್ಮ ಜನ್ಮದಿನಾಚರಣೆಯನ್ನು ಧರ್ಮಪ್ರಜೆಗಳು ವಿಜ್ರಂಭಣೆಯಿಂದ ಆಚರಿಸಿದಕ್ಕೆ ಹಾಗೂ ಅವರ ಮುಕ್ತ ಮನಸಿಗೆ, ಸಹಕಾರಕ್ಕೆ ಧರ್ಮಪ್ರಜೆಗಳನ್ನು ಕ್ರತ್ಞತೆ ಸಲ್ಲಿಸಿ ಪಾಲನ ಮಂಡಳಿಯ ಕಾರ್ಯಾಕಾರಿ ಸಮಿತಿ ಸದಸ್ಯರಿಗೆ ಹೂ ಗುಚ್ಛ ನೀಡಿ ಅಭಿನಂದಿಸಿದರು. ವೇದಿಕೆಯಲ್ಲಿ ವಂ|ಫಾ|ಪ್ರವೀಣ್ ಪಿಂಟೊ, ಸಿಸ್ಟರ್ ಲಿಡಿಯಾ ಉಪಸ್ಥಿತರಿದ್ದರು. ಆಯೋಗಳ ಸಂಚಾಲಕಿ ಲೀನಾ ತಾವ್ರೊ ಧನ್ಯವಾದಗಳನ್ನು ಅರ್ಪಿಸಿದರು. ಎವ್ಲಿನ್ ಫೆರ್ನಾಂಡಿಸ್ ಕಾರ್ಯಕ್ರ ನಿರೂಪಿಸಿದರು.