ಜೆಸಿಐ ಕುಂದಾಪುರ ಸಿಟಿಗೆ ಅತ್ಯುತ್ತಮ ಘಟಕ ಪ್ರಶಸ್ತಿ

ಜೆಸಿಐ ಜೋಡುಮಾರ್ಗ ನೇತ್ರಾವತಿ ಇವರ ಆಶ್ರಯದಲ್ಲಿ ನಡೆದ ವಲಯ ಮದ್ಯಾ0ತರ ಸಮ್ಮೇಳನ ದಲ್ಲಿ ಜೆಸಿಐ ಕುಂದಾಪುರ ಸಿಟಿ ಅತ್ತುತ್ತಮ ಘಟಕ ಪ್ರಶಸ್ತಿ ಯಾ ಜೊತೆಗೆ ರನ್ನರ್ಸ್ ಅಪ್ ಅಧ್ಯಕ್ಷ ಪ್ರಶಸ್ತಿ ಹಾಗು ಹಲವಾರು ಪ್ರಶಸ್ತಿ ಪಡೆದು ಕೊಂಡಿತ್ತು ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪ್ರಶಸ್ತಿ ಗಳನ್ನು ನೀಡಿದರು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಹಾಗು ಸದ್ಯಸ್ಯ ರು ಪ್ರಶಸ್ತಿ ಪಡೆದುಕೊಂಡರು

ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಅಭಿಲಾಶ್ ಜಯಶ್ರೀ ರಾಷ್ಟ್ರೀಯ ಸಂಯೋಜಕ ಕೆ ಕಾರ್ತಿಕೇಯ ಮಧ್ಯಸ್ಥ ಪೂರ್ವ ವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ ಘಟಕದ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಶ್ರೀಧರ್ ಸುವರ್ಣ ಗಿರೀಶ್ ಹೆಬ್ಬಾರ್ ನಾಗೇಶ್ ನಾವಡ ವಿಜಯ ಬಂಡಾರಿ ಜೇಸಿರೇಟ್ ಪೂರ್ವ ಅಧ್ಯಕ್ಷೆ ಸಹನಾ ನಾವಡ ಸರೋಜ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು.

ಕೆರೆಕಟ್ಟೆ ಸಂತ ಅಂತೋನಿಯವರ ವಾರ್ಷಿಕ ಮಹಾಹಬ್ಬ : ಬಿಶಪರಿಂದ ಅನಾಥಲಯಕ್ಕೆ ಶಿಲಾನ್ಯಾಸ

ಕುಂದಾಪುರ, ಜೂ.13: ಕುಂದಾಪುರ ವಲಯದ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾಹಬ್ಬವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರು ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಜೊತೆಗೆ ಸಂತ ಅಂತೋನಿಯವರಿಗೆ ಅನಾಥರು, ಬಡವರು ನಿರಾಶ್ರಿತರೆಂದರೆ ಬಹಳ ಪ್ರೀತಿ ಹಾಗಾಗಿ ಇಲ್ಲಿ ಅವರ ಹೆಸರಿನಲ್ಲಿ ಅನಾಥಲಯ ನಿರ್ಮಿಸಲು ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರ ಯೋಜನೆ ಹಮ್ಮಿಕೊಂಡಿದ್ದು ಇದರ ಶಿಲಾನ್ಯಾಸವನ್ನು ಬಿಶಪರು ಪ್ರಾರ್ಥನೆ ಮತ್ತು ಆಶಿರ್ವವಚನೇಯ ಮೂಲಕ ನೇರವೆರಿಸಿದರು.
ಉಡುಪಿ ಧರ್ಮಪ್ರಾಂತ್ಯದ ನೂತನ ವಿಕಾರ್ ಜನರಲ್ ಅ|ವಂ|ಮೊನ್ಸಿಂಜೆರ್ ಫರ್ಡಿನಂಡ್ ಗೊನ್ಸಾಲ್ವಿಸ್ ದೇವರ ವಾಕ್ಯ ಪಟಿಸಿ ತಮ್ಮ ಪ್ರವಚನದಲ್ಲಿ “ಸಂತ ಅಂತೋನಿ ಇಡೀ ಪ್ರಪಂಚದಲ್ಲಿ ಅವರು ಪವಾಡಗಳನ್ನು ಮಾಡುತ್ತಾ ಇದ್ದಾರೆ. ಅವರಿಂದ ಭಕ್ತಾಧಿಗಳು ಅನೇಕ ವರಗಳನ್ನು ಪಡೆದುಕೊಂಡಿದ್ದಾರೆ. ಈ ಪ್ರದೇಶವು ಬಹಳ ವರ್ಷಗಳ ಹಿಂದೆ ಧುರ್ಗಮ ಪ್ರದೇಶವಾಗಿದ್ದು, ಜನರು ಇಲ್ಲಿ ಸಂಚಾರ ಮಾಡುವುದಕ್ಕೆ ಭಯ ಪಡುತಿದ್ದರು, ಇಲ್ಲಿ ಸಂತ ಅಂತೋನಿಯವರ ದೇವಾಲಯ ನಿರ್ಮಾಣವಾದ ಮೇಲೆ ಇಲ್ಲಿ ಜನಸಂಚಾರ ಭಯವಿಲ್ಲದೆ ಸಾಗಿತು. ಈ ಪುಣ್ಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಭಕ್ತಾಧಿಗಳ ಸಂಖ್ಯೆ ಹೆಚ್ಚುತ್ತಾ ಇದೆ. ಇಲ್ಲಿನ ಸಂತ ಅಂತೋನಿಯವರ ಮೂಲಕ ಹಲವಾರು ಭಕ್ತಾಧಿಗಳು, ಉಪಕಾರವನ್ನು ಪಡೆದುಕೊಂಡಿದ್ದಾರೆ, ಇಲ್ಲಿ ಅನೇಕ ಪವಾಡಗಳು ನಡೆದಿವೆ” ಎಂದು ತಿಳಿಸುತ್ತಾ ಅದರಲ್ಲಿ ಕೆಲವು ಪವಾಡಗಳನ್ನು ವಿವರಿಸಿ “ಇದೀಗ ಇಲ್ಲಿ ಅನಾಥ ದೀನದಲಿತರಿಗಾಗಿ, ಅನಾಥಶ್ರಮವನ್ನು ನಿರ್ಮಿಸಲಾಗುವುದು. ಸಂತ ಅಂತೋನಿಯವರು ದೀನ ದಲಿತರಬಗ್ಗೆ ಅನಾಥರ ಬಗ್ಗೆ ಕಾಳಜಿ ಇದ್ದು ಅವರು ದಾನಿಗಳಾಗಿದ್ದರು, ಅವರಂತೆ ನಾವು ದಾನಿಗಳಾಗಿ ಈ ಮಹಾನ ಯೋಜನೆ ಪೂರ್ಣವಾಗಲು ಸಹಕರಿಸೋಣ. ದೀನ ದಲಿತರಿಗೆ, ಬಡವರಿಗೆ, ಸಹಾಯ ನೀಡುವರೊ, ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡುತ್ತಾರೊ, ಹಸಿದವರಿಗೆ ಆಹಾರ ಕೊಡುತ್ತಾರೊ, ಬಾಯಾರಿದವರಿಗೆ ನೀರು ಕೊಡುತ್ತಾರೊ, ಅದು ನನಗೆ ಮಾಡಿದಂತೆ ಅದಕ್ಕೆ ನಿಮಗೆ ಸ್ವರ್ಗರಾಜ್ಯ ದೊರಕುವುದು ಎಂದು ಯೇಸು ತಿಳಿಸಿದ್ದಾರೆ, ಅದರಂತೆ ನಾವು ನೆಡೆದು ಸ್ವರ್ಗರಾಜ್ಯವನ್ನು ಪಡೆಯೋಣ” ಎಂದು ಸಂದೇಶ ನೀಡಿದರು.
ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಸಂತ ಅಂತೋನಿಯವರು ಪವಾಡ ಪುರುಷರಾಗಿದ್ದು, ಅವರು ಬಡವರನ್ನು ಅನಾಥರನ್ನು, ರೋಗಿಗಳನ್ನು ಬಹಳವಾಗಿ ಪ್ರೀತಿಸುತಿದ್ದರು. ಅವರ ಹೆಸರಿನಲ್ಲಿ ಅವರ ನಡೆಯಂತೆ ಅನಾಥಶ್ರಾಲಯವನ್ನು ನಿರ್ಮಿಸಲು ಹೊರಟಿದ್ದೇವೆ. ನಿಮ್ಮ ಸಹಕಾರ ಮತ್ತು ಸಂತ ಅಂತೋನಿಯವರ ಆಶಿರ್ವಾದದಿಂದ ಬರುವ ವರ್ಷ ಇದೇ ದಿನದಂದು ಲೋಕಾರ್ಪಣೆಗೊಳ್ಳಲಿ” ಎಂದು ಹರಸಿದರು. ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಶುಭಾಶಯಗಳನ್ನು ಅರ್ಪಿಸಿದರು. ದಾನಿಗಳಿಗೆ, ಬಲಿಪೂಜೆ ನಿವೇದನೆ ಮಾಡಿಕೊಂಡವರಿಗೆ ಮುಂಬತ್ತಿ ನೀಡಿ ಗೌರವಿಸಲಾಯಿತು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ವಾರ್ಷಿಕ ಮಹಾಹಬ್ಬದ ಬಲಿದಾನದಲ್ಲಿ ಕುಂದಾಪುರ ವಲಯದ, ಹೊರ ವಲಯದ ಹಲವಾರು ಧರ್ಮಗುರುಗಳು ಮತ್ತು ಅತಿಥಿ ಧರ್ಮಗುರುಗಳು ಭಾಗಿಯಾಗಿದ್ದು ಭಕ್ತಾಧಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಿಯುಸ್ ನಗರ ಚರ್ಚಿನ ಗಾಯನ ಮಂಡಳಿ ಗಾಯನಗಳನ್ನು ಹಾಡಿತು. ಕೆರೆಕಟ್ಟೆ ಸಂತ ಅಂತೋನಿ ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ವಂದನೆಗಳನ್ನು ಸಲ್ಲಿಸಿದರು.

ಕುಂದಾಪುರ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಬಿಶಪ್ ಜೆರಾಲ್ಡ್ ಲೋಬೊರವರ ಭೇಟಿ


ಜೂ.13: ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿರುವ ಸಂತ ಮೇರಿಸ್ ಸಮೂಹ ಶಿಕ್ಶಣ ಸಂಸ್ಥೆಯ ಶಾಲೆಗಳಾದ ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋe ರಿ ಆಂಗ್ಲಾ ಮಾದ್ಯಮ ಶಾಲೆ ಮತ್ತು ಸಂತ ಮೇರಿಸ್ ಪದವಿ ಪೂ.ಕಾಲೇಜಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಜೂನ್ 12 ರಂದು ಭೇಟಿಯಾಗಿ ಸಭೆ ನೆಡೆಸಿದರು.
“ಶಿಕ್ಷಣ ಅಂದರೆ ಮಕ್ಕಳ ಸರ್ವಾಂಗೀಣ ಅಭಿವ್ರದ್ದಿ. ವಿದ್ಯಾರ್ಥಿಗಳು ಮಾನಸಿಕ ಬೆಳವಣಿಗೆಯನ್ನು ಪಡೆದುಕೊಳ್ಳಬೇಕು, ದೈಹಿಕವಾಗಿ ಸುಧ್ರಡವಾಗಿರಬೇಕು, ಆತ್ಮವನ್ನು ಪರಿಶುದ್ದವಾಗಿಟ್ಟುಕೊಳ್ಳಬೇಕು, ಇಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ, ಆದರೆ ಮೌಲ್ಯ ಭರಿತ ಶಿಕ್ಷಣ ಲಭಿಸುವುದಿಲ್ಲ, ನಮ್ಮಲ್ಲಿ ಕ್ರೈಸ್ತ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ಕೊಡಲಾಗುತ್ತೆ. ಕ್ರೈಸ್ತರೇತರ ಮಕ್ಕಳಿಗೆ ನೀತಿ ಶಿಕ್ಷಣವನ್ನು ನೀಡಲಾಗುತ್ತೆ.” ಎಂದು ತಿಳಿಸುತ್ತಾ “ನಾವು ಪರರ ಬಗೆ ಒಳಿತನ್ನೆ ಯೋಚಿಸಬೇಕು, ಅಂತೇಯೆ ಒಳಿತನ್ನೆ ಮಾಡಬೇಕು. ಪರರ ಬಗೆ ಒಳಿತನ್ನೆ ಯೋಚಿಸುತ್ತಾ, ಒಳಿತನ್ನೆ ಮಾಡಬೇಕು, ಆವಾಗ ದೇವರ ಆಶಿರ್ವಾದ ನಮ್ಮ ಮೇಲೆ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬೇಕು ಎಂದು ಚಿಂತಿಸದರೆ ಮಾತ್ರ ಸಾಲದು, ಅದಕ್ಕೆ ಸತತವಾದ ಪ್ರಯತ್ನ ಪಡಬೇಕು. ಶಿಕ್ಷಕರೂ ಕೂಡ ಸಮಾಜದಲ್ಲಾಗುವ ಬದಲಾವಣೆಗಳನ್ನು ಗಮನಿಸಬೇಕು ಮತ್ತು ಹೊಸತನದ ಬಗ್ಗೆ ಓದಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು” ಎಂದು ಅವರು ಸಂದೇಶ ನೀಡಿದರು.
ಬಿಶಪರಿಗೆ ತಿಲಕವಿಟ್ಟು ಹೂವುಗಳನ್ನು ಅರ್ಪಿಸಿ ಆರತಿ ಎತ್ತಿ ವಿದ್ಯಾರ್ಥಿಗಳು ಬ್ಯಾಂಡು ವಾದನಗಳಿಂದ ಸಾಂಪ್ರಾದಾಯಕವಾಗಿ ಹಾಗೂ ಎನ್.ಸಿ.ಸಿ. ಕೇಡಟಗಳಿಂದ ಗೌರವಪೂರ್ವಕವಾಗಿ ಸ್ವಾಗತಿಸಿದರು


ಈ ಸಂದರ್ಭದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ,ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಡೋರಾ ಡಿಸೋಜಾ, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜಾರೀ ಆಂಗ್ಲಾ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಎಮ್.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು. ಪ್ರಾದ್ಯಪಕ ನಾಗರಾಜ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.

ಗಿಳಿಯಾರು ಕುಶಲ ಹೆಗ್ಡೆ ಟ್ರಸ್ಟ್‍ನಿಂದ ಜೂನ್ 19 ರಂದು ಸಹಾಯಧನ ವಿತರಣೆ


ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ.) ನಿಂದ ಪ್ರಥಮ ಪಿಯುಸಿ ಹಾಗೂ ಪ್ರಥಮ ಪದವಿ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಮಾರಂಭ ಜೂನ್ 19 ರಂದು ಸೋಮವಾರ ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಸಮಾರಂಭ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಿದ್ದಾರೆ. ಖ್ಯಾತ ಶಿಕ್ಷಣ ತಜ್ಞ ನಿವೃತ್ತ ಪ್ರಾಂಶುಪಾಲ ಡಾ| ಎಂ. ಮಹಾಬಲೇಶ್ವರ ರಾವ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಸಾಧಕ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುತ್ತದೆ.
ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಬಿ. ಪ್ರಕಾಶ್ಚಂದ್ರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಹಾಯಧನಕ್ಕೆ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅಂಚೆ ಕಾರ್ಡು ಮೂಲಕ ಮಾಹಿತಿ ನೀಡಲಾಗುತ್ತಿದ್ದು, ಪತ್ರದೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ತಿಳಿಸಲಾಗಿದೆ.
ಸಮಾರಂಭದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳ ಪೋಷಕರು, ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ದತ್ತಿನಿಧಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಜೀವನೋಪಾಯಕ್ಕೆ ದಾನಿ ಎಸ್.ಆರ್.ಧರ್ಮೇಶರಿಂದ ಸೈಕಲ್ ಕೊಡುಗೆ

ಶ್ರೀನಿವಾಸಪುರ ವಿಧಾನಸಭಾ ಕ್ಷೆತ್ರ ಹೊಸ ಮಟ್ನಹಳ್ಳಿ ಗ್ರಾಮದ ಮಡಿವಾಳ ವೃತ್ತಿಯಿಂದ ಜೀವನ ಮಾಡುವ ಬಸವರಾಜ್ ಅವರಿಗೆ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೊಸ ಸೈಕಲ್ ಕೊಡುಗೆಯಾಗಿ ನೀಡಿದರು.

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು:ಆನಂದ ಸುವರ್ಣ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಸುಜ್ಞಾನ ನಿಧಿ ಶಿಷ್ಯವೇತನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ 47 ಸಾವಿರ ವಿದ್ಯಾರ್ಥಿಗಳಿಗೆ ರೂ.60 ಕೋಟಿ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಗಿದೆ. ತಾಲ್ಲೂಕಿನಲ್ಲಿ ವೃತ್ತಿ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ 187 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ಒಂದು ಸರ್ಕಾರ ಮಾಡುವಂಥ ಅಭಿವೃದ್ಧಿ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಡುತ್ತಿದ್ದಾರೆ. ಅವರ ಪಾರದರ್ಶಕ ಹಾಗೂ ಸಮಾಜ ಮುಖಿ ಚಟುವಟಿಕೆ ದೇಶಕ್ಕೆ ಮಾದರಿಯಾಗಿದೆ. ಫಲಾನುಭವಿಗಳು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ಹೇಳಿದರು.
ಭೈರವೇಶ್ವರ ವಿದ್ಯಾನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ, ತಾಲ್ಲೂಕು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಾಯಾ ಬಾಲಚಂದ್ರ ಮಾತನಾಡಿದರು. ಪೋಷಕರೊಂದಿಗೆ ಆಗಮಿಸಿದ್ದ 187 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನದ ಮಂಜೂರಾತಿ ಪತ್ರ ವಿತರಿಸಲಾಯಿತು.
ಯೋಜನೆ ಜಿಲ್ಲಾ ನಿರ್ದೇಶಕ ಪದ್ಮಯ್ಯ, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಗೊಪಾಲಕೃಷ್ಣ, ಪುಷ್ಪರಾಜ್ ಇದ್ದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ನಿವೃತ್ತಿ ಸಿಬ್ಬಂದಿ ಮತ್ತು ಮ್ರತ ಸದಸ್ಯರಿಗೆ ಪ್ರೋತ್ಸಾಹ ಧನ ಚೆಕ್‌ಗಳ ವಿತರಣೆ

ಶ್ರೀನಿವಾಸಪುರ :  ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. , ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮತ್ತು ಮೃತಪಟ್ಟ ಸದಸ್ಯರ ಕೋಮುಲ್ ವಿಮಾ ಚೆಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಎನ್.ಹನುಮೇಶ್ ರವರು ಮಾತನಾಡಿ , ನಿವೃತ್ತಿ ಹೊಂದಿದ ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಿ , ಸಂಘಗಳಿಗೆ ನೀಡಿದ ನಿರಂತರ ಸೇವೆಯನ್ನು ಸ್ಮರಿಸುತ್ತಾ ಸಿಬ್ಬಂದಿಯವರ ನಿವೃತ್ತಿ ಪ್ರೋತ್ಸಾಹ ಧನ ಚೆಕ್‌ಗಳು ಮೊತ್ತ 12,25,000 / – ರೂಗಳು ಹಾಗೂ ಮೃತಪಟ್ಟ ಸದಸ್ಯರ ಕೋಮುಲ್ ವಿಮಾ ಚೆಕ್ ರೂ .25,000 / ಗಳ ಚೆಕ್‌ಗಳನ್ನು ವಿತರಿಸಿದರು.

 ಮತ್ತು ಗಫಾರ್ ಖಾನ್ ಮೊಹಲ್ಲಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಕ.ಹಾ.ಮ. ಸಂಜೀವಿನಿ ಯೋಜನೆಯಡಿಯಲ್ಲಿ Automatic Milk Collection Unit with Milk Analyser ಘಟಕ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನಲ್ಲಿರುವ ಫ್ಯಾಟ್ ಅಂಶವನ್ನು ಪರೀಕ್ಷಿಸಲು ಎಲೆಕ್ಟಿಕ್ ಗರ್ಭರ್ ಯಂತ್ರಗಳನ್ನು ಸಬ್ಸಿಡಿ ಧರದಲ್ಲಿ ವಿತರಿಸಿದರು . 

ಪ್ರಭಾರೆ ಉಪ ವ್ಯವಸ್ಥಾಪಕರಾದ ಕೆ.ಎಂ.ಮುನಿರಾಜು ರವರು ಮಾತನಾಡಿ , ಸಂಘಗಳಲ್ಲಿ ವೈಜ್ಞಾನಿಕವಾಗಿ ಹಾಲಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ , ಪ್ಯಾಟ್ ಮತ್ತು ಎಸ್.ಎನ್.ಎಫ್ . ಆಧಾರದ ಮೇಲೆ ಎಲ್ಲಾ ಯಂತ್ರಗಳನ್ನು ಬಳಸಿಕೊಂಡು ರೈತರಿಗೆ ಹೆಚ್ಚಿನ ಧರ ನೀಡಿದ್ದಲ್ಲಿ ರೈತರಿಗೆ ಸಂಘಗಳ ಮೇಲೆ ನಂಬಿಕೆ ಹೆಚ್ಚಾಗಿ ಉತ್ತಮ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ , ಸಹಕಾರ ಸಂಘಗಳು ಅಭಿವೃದ್ಧಿಯಾಗುತ್ತದೆ ಹಾಗೂ ಖಾಸಗಿ ಡೇರಿಗಳ ಹಾವಳಿ ಸಹ ಕಡಿಮೆ ಆಗುವುದೆಂದು ತಿಳಿಸಿದರು . 

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕರು ದ್ವಾರಸಂದ್ರ  ಸಿ.ಮುನಿವೆಂಕಟಪ್ಪ , ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆಲಂಬಗಿರಿ ಅಯ್ಯಪ್ಪ ರವರು , ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಕೇತಗಾನಹಳ್ಳಿ  ನಾಗರಾಜ್‌ರವರು , ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ಕೆ.ಮಂಜು, ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಎನ್.ಶಂಕರ್ , ಪಿ.ಕೆ.ನರಸಿಂಹರಾಜು , ಕೆ.ಪಿ.ಶ್ವೇತ , ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಹಾಗೂ ಶಿಬಿರದ ಸಿಬ್ಬಂದಿಯವರು ಮತ್ತು ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು , ಸಿಬ್ಬಂದಿಯವರು ಮತ್ತು ಫಲಾನುಭವಿಗಳು ಹಾಜರಿದ್ದರು.