ಮನುಷ್ಯನಾಗಿ ಹುಟ್ಟುವುದೆ ಹೆಮ್ಮೆ: ಎಸ್ಪಿವೈಎಸ್ಸೆಸ್ಸ್ ಜಿಲ್ಲಾ ಶಿಕ್ಷಣ ಪ್ರಮುಖ ಚೌಡಪ್ಪ

ಕೋಲಾರ: ಮನುಷ್ಯನಾಗಿ ಹುಟ್ಟುವುದೆ ಹೆಮ್ಮೆ ಆದುದರಿಂದ ಸುಸಂಸ್ಕøತರಾಗಿ ಜೀವನದಲ್ಲಿ ಇಡುವ ಹೆಜ್ಜೆ ನೋಡುವ ನೋಟ ಉಡುವ ಬಟ್ಟೆ ಆಡುವ ಮಾತು ಸುಸಂಸ್ಕøತವಾಗಿದ್ದರೆ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಎಸ್ಪಿವೈಎಸ್ಸೆಸ್ಸ್ ಜಿಲ್ಲಾ ಶಿಕ್ಷಣ ಪ್ರಮುಖ ಚೌಡಪ್ಪ ಹೇಳಿದರು.
ಪಟ್ಟಣ ತ್ಯಾಗರಾಜ ಬಡಾವಣೆಯ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ 91 ನೇ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಶಿಬಿರದ ಭಾರತ ಮಾತಾ ಪೂಜಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದಿಂದ ಎಲ್ಲವನ್ನು ಪಡೆಯುವ ಮನುಷ್ಯರು ಸಮಾಜಕ್ಕೇನು ಕೊಡದೆ ನಶ್ವರವಾಗುತ್ತಿದ್ದೇವೆ. ಭಾರತ ಎಂದರೆ ಬೆಳಕು, ರಮಿಸು, ತೇಜಸು ನಂಬಿಕೆ ಪ್ರಕೃತಿ ಭಾರತ ಮಾತೆ ಹೆಮ್ಮೆ ಎನ್ನುವುದು ಅರಿತರೆ ನಾವು ದನ್ಯರು. ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜಿಕ ಸೇವಾ ಚೆಟುವಟಿಕೆಗಳು ಮಾಡುವಲ್ಲಿ ಜಾಗೃತರಾಗಿರಬೇಕು. ಎಲ್ಲಿಗೆ ಹೋದರು ಹೊಂದಿಕೊಂಡು ಹೋಗುವ ಸ್ವಾಭಾವ ಬೆಳೆಸಿಕೊಳ್ಳಬೇಕು. ಯೋಗ ಎಂದರೆ ದೇಹ ದಂಡಿಸುವುದಲ್ಲ. ಕುಂತರೆ ನಿಂತರೆ ನಿತ್ಯ ಜೀವನದಲ್ಲಿ ನಡೆಯುವ ನಡೆ ನುಡಿಯೇ ಯೋಗ. ಸತ್ಸಂಘಗಳ ಮೂಲಕ ಶ್ರೀಮನ್ನಾರಾಯಣ ನುಡಿಯಂತೆ ಮಾನವೀಯ ಮೌಲ್ಯಗಳು ಬೆಳೆಸಿಕೊಂಡು ಸಮಾಜದಿಂದ ಪಡೆದ ಯೋಗ ಶಿಕ್ಷಣಕ್ಕೆ ಸಮಾಜ ನಿಧಿ ಅರ್ಪಿಸುವ ಮೂಲಕ ಸಮಾಜಿಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಮುರಾರ್ಜಿ ಶಾಲೆ ಮುಖ್ಯ ಶಿಕ್ಷಕಿ ಸುಜಾತ ಮಾತನಾಡಿ ಜೀವನದಲ್ಲಿ ನಾವು ಆನಂದವಾಗಿರಲು ಧೈಹಿಕ ಮನಸಿಕ ನೆಮ್ಮದಿಗೆ ಯೋಗಾಭ್ಯಾಸ ಕಲಿತು ಶರೀರದಲ್ಲಿನ ಸೋಂಬೇರಿತನ ದೂರ ಮಾಡಿ. ಯೋಗ ಮಾಡಿದ್ದರೆ ಮದುಮೇಹ, ತೈರಾಯ್ಡ್ ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳು ನಮ್ಮಿಂದ ದೂರವಾಗಿ ದೇಹಕ್ಕೆ ರೋಗ ನಿರೋದಕ ಶಕ್ತಿ ಬರುತ್ತದೆ. ತಂತ್ರಜ್ಞಾನ ಬೆಳೆದ ಈ ದಿನಗಳಲ್ಲಿ ಪ್ರತಿ ವ್ಯಕ್ತಿ ಐಶಾರಾಮಿ ಜೀವನಕ್ಕೆ ಜೋತು ಬಿದ್ದು ದೇಹ ದಂಡನೆಯಾಗದೆ ದೇಹ ಬಂಜೇತನವಾಗುತ್ತದೆ. ತಾಯಿ ಮತ್ತು ಗುರು ಸ್ಥಾನ ಎಲ್ಲದ್ದಕ್ಕಿಂತ ಗುರುತ್ತರವಾದದ್ದು. ಅದಕ್ಕೆ ಬೆಲೆ ಕಟ್ಟಲಾಗದು ಕಲಿತ ವಿದ್ಯೆ ಹೆತ್ತ ತಾಯಿ ಹೊತ್ತ ಭೂಮಿಯ ಋಣ ತೀರಿಸುವುದೆಂದರೆ ಸಮಾಜದ ಸೇವಾ ಚೆಟುವಟಿಕೆಗಳಿಗೆ ಅರ್ಪಿಸುವ ಕಾಣಿಕೆಯಿಂದ ಋಣ ಮುಕ್ತರಾಗುತ್ತೇವೆಚಿದರು.
ಸಹ ಶಿಕ್ಷಕಿ ಉಷಾ ಪ್ರೇಮಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸೇವೆ ಎಂದರೆ ತ್ಯಾಗದ ರೀತಿಯಲ್ಲಿರಬೇಕು. ನಾವು ಮಾಡುವ ಸೇವೆ ಯೋಗ್ಯವಾಗಿರಬೇಕು. ಮನಸು ದೇಹ ಶುದ್ಧವಾಗಿಟ್ಟುಕೊಂಡು ಸಾರ್ಥಕ ಸೇವೆ ಮಾಡಬೇಕು. ನಮ್ಮ ಸಮಿತಿ ಇರುವ ವಾಸ್ತವಾಂಶವನ್ನು ಸಮಾಜದ ಜನ ಸಮುದಾಯಕ್ಕೆ ಉಚಿತವಾಗಿ ಕಲಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಅನುರಾಧಾ ಪ್ರಾರ್ಥಿಸಿ, ಪ್ರಭಾವತಮ್ಮ ಸ್ವಾಗತಿಸಿ, ಉಮಾದೇವಿ ವಂದಿಸಿದರು, ವರಲಕ್ಷ್ಮಮ್ಮ ನಿರೂಪಿಸಿದರು.
10 ಶ್ರೀನಿವಾಸಪುರ 1: ಯೋಗ ಮಂದಿರದಲ್ಲಿ ಏರ್ಪಡಿಸಿದ್ದ ಭಾರತ ಮಾತಾ ಪೂಜೆ ಕಾರ್ಯಕ್ರಮದಲ್ಲಿ ಯೋಗ ಬಂದುಗಳು ಸಮಾಜ ನಿಧಿ ಅರ್ಪಿಸಿದರು.

ಗ್ರಾಮೀಣ ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಬದುಕು ರೂಪಿಸಿಕೊಳ್ಳಬೇಕು : ಡಾ. ಬಾಬುರೆಡ್ಡಿ

ಶ್ರೀನಿವಾಸಪುರ: ಗ್ರಾಮೀಣ ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಹೃದ್ರೋಗ ತಜ್ಞ ಡಾ. ಬಾಬುರೆಡ್ಡಿ ಹೇಳಿದರು.
ತಾಲ್ಲೂಕಿನ ಆರಿಕುಂಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಡಾ. ಅಬ್ದುಲ್ ಕಲಾಂ ಅವರಂಥ ಮಹಾನ್ ಚಿಂತಕರ ಆದರ್ಶದ ಬೆಳಕಲ್ಲಿ ಬೆಳೆಯಬೇಕು ಎಂದು ಹೇಳಿದರು.
ಗ್ರಾಮದ ಮುಖಂಡರಾಗಿದ್ದ ದಿವಂಗತ ಎ.ನಾರಾಯಣಸ್ವಾಮಿ ಬದ್ಧತೆಯಿಂದ ಕಾರ್ಯನಿರ್ವಹಿಸಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ನಿರ್ಮಿಸಿದರು. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಪೋಷಕರು ಹಾಗೂ ಶಿಕ್ಷಕರಿಗೆ ಹೆಸರು ತರಬೇಕು ಎಂದು ಹೇಳಿದರು.
ಡಾ. ಸಿರಿಲಕ್ಷ್ಮಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಂಡು ಬೆಳೆಯಬೇಕು. ಪರಿಶ್ರಮದ ಮೂಲಕ ಸಾಧನೆ ಹಾದಿಯಲ್ಲಿ ಸಾಗಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆದು, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಡಾ. ಬಾಬುರೆಡ್ಡಿ, ಡಾ. ಸಿರಿಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ವೆಂಕಟರೆಡ್ಡಿ, ಮುನಿರೆಡ್ಡಿ, ಶ್ರೀರಾಮರೆಡ್ಡಿ, ಅಶೋಕರೆಡ್ಡಿ, ಮುಖ್ಯ ಶಿಕ್ಷಕಿ ಕೆ.ಭಾಗ್ಯಲಕ್ಷ್ಮಿ, ಶಿಕ್ಷಕರಾದ ವೆಂಕಟೇಶ ಬಾಬು, ಶ್ರೀನಾಥ್, ಎಚ್.ಆಂಜನಪ್ಪ, ಸುಜಾತ, ಬಿ.ವಿ.ರತ್ನಮ್ಮ, ಮುರಳಿ ಬಾಬು ಇದ್ದರು.

ಜಿಲ್ಲಾದ್ಯಂತ 7 ಕೇಂದ್ರಗಳಲ್ಲಿ ಜೂ.12 ರಿಂದ ಎಸ್ಸೆಸ್ಸೆಲ್ಸಿಪೂರಕ ಪರೀಕ್ಷೆ ಆರಂಭ1537 ಮಂದಿ ನೊಂದಣಿ-ಸುಗಮ ಪರೀಕ್ಷೆಗೆ ಅಗತ್ಯ ಕ್ರಮ-ಡಿಸಿ ವೆಂಕಟ್‍ರಾಜಾ

ಕೋಲಾರ:- ಜಿಲ್ಲಾದ್ಯಂತ ಜೂ.12 ರಿಂದ 7 ಕೇಂದ್ರಗಳಲ್ಲಿ ಆರಂಭವಾಗುತ್ತಿರುವ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಕಳೆದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ 1215 ಹಾಗೂ ಖಾಸಗಿಯಾಗಿ 322 ಮಂದಿ ವಿದ್ಯಾರ್ಥಿಗಳು ಸೇರಿದಂತೆ 1537 ಮಂದಿ ಕುಳಿತಿದ್ದು, ಯಾವುದೇ ಗೊಂದಲಕ್ಕೆಡೆ ಇಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಸೂಚನೆ ನೀಡಿದರು.
ತಮ್ಮ ಕಚೇರಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮಾರ್ಚ್ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಹಾಜರಾತಿ ಕೊರತೆಯಿಂದ ಪರೀಕ್ಷೆ ಅವಕಾಶ ಕಳೆದುಕೊಂಡಿದ್ದ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1537 ಮಂದಿ ಪರೀಕ್ಷೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕುವಾರುಕೇಂದ್ರಗಳ ವಿವರ
ಪರೀಕ್ಷೆ ನಡೆಯುತ್ತಿರುವ ಕೇಂದ್ರಗಳೆಂದರೆ ಕೋಲಾರದಲ್ಲಿ ಬಾಲಕಿಯರ ಪಿಯು ಕಾಲೇಜು, ಅಂಜುಮಾನ್ ಅಲಮಿನ್ ಶಾಲೆ, ಬಂಗಾರಪೇಟೆ ಆದರ್ಶ ವಿದ್ಯಾಲಯ, ಕೆಜಿಎಫ್‍ನಲ್ಲಿ ಸಮುತಿ ಜೈನ್ ಶಾಲೆ, ಮಾಲೂರಿನಲ್ಲಿ ಜೆಎಸ್‍ಎಸ್ ಗಾಯತ್ರಿ ಪ್ರೌಢಶಾಲೆ, ಮುಳಬಾಗಿಲಿನಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಶ್ರೀನಿವಾಸಪುರದಲ್ಲಿ ಬಾಲಕರ ಪಿಯು ಕಾಲೇಜು ಎಂದು ತಿಳಿಸಿದರು.
ಕೋಲಾರ ತಾಲ್ಲೂಕಿನಲ್ಲಿ ಒಟ್ಟು 2 ಕೇಂದ್ರಗಳಿದ್ದು, ಅಲ್ಲಿ ಒಂದು ಕೇಂದ್ರದಲ್ಲಿ 255 ಹಾಗೂ ಬಾಲಕಿಯರ ಪಿಯು ಕಾಲೇಜು ಖಾಸಗಿ ಕೇಂದ್ರದಲ್ಲಿ 322 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದ ಅವರು, ಉಳಿದಂತೆ ಬಂಗಾರಪೇಟೆ 194ಮಂದಿ,ಕೆಜಿಎಫ್-135, ಮಾಲೂರು-169, ಮುಳಬಾಗಿಲು-370 ಹಾಗೂ ಶ್ರೀನಿವಾಸಪುರದಲ್ಲಿ 92 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
ಪರೀಕ್ಷಾ ಕಾರ್ಯಕ್ಕೆ
200 ಮಂದಿ ನೇಮಕ
ಜಿಲ್ಲೆಯ ಆರು ಕ್ಷೇತ್ರ ವಲಯಗಳಿಗೆ ಸಂಬಂಧಿಸಿದಂತೆ ಸುಗಮ ಪರೀಕ್ಷೆಗೆ 7 ಮಂದಿ ಮುಖ್ಯ ಅಧೀಕ್ಷಕರು, 7 ಮಂದಿ ಅಭಿರಕ್ಷಕರು ಸೇರಿದಂತೆ ಸ್ಥಾನಿಕ ಜಾಗೃತದಳ, ಕೊಠಡಿ ಮೇಲ್ವಿಚಾಕರು ಸೇರಿದಂತೆ ಒಟ್ಟು 200 ಕ್ಕೂ ಹೆಚ್ಚು ಮಂದಿ ಪರೀಕ್ಷಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮುಖ್ಯ ಅಧೀಕ್ಷಕರು ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳ ಬಂಡಲ್‍ಗಳನ್ನು ಡಿಡಿಪಿಐ ಕಚೇರಿಯ ಭದ್ರತಾ ಕೊಠಡಿಗೆ ಸಂಜೆ 4 ಗಂಟೆಯೊಳಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ ಎಂದರು.
144ನೇ ಸೆಕ್ಷನ್
ನಿಷೇದಾಜ್ಞೆ ಜಾರಿ
ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ.ವ್ಯಾಪ್ತಿಯಲ್ಲಿ 144 ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ 200 ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ 8 ರಿಂದ ಸಂಜೆ 3ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ವಿವರ ನೀಡಿದರು.
ಸ್ಥಾನಿಕ ಜಾಗೃತದಳಕ್ಕೆ
ನೇಮಕ-ಡಿಡಿಪಿಐ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಪರೀಕ್ಷಾ ಪಾವಿತ್ರ್ಯತೆ ಕಾಪಾಡಲುಪ್ರತಿ ಕೇಂದ್ರಕ್ಕೆ ತಲಾ ಒಬ್ಬರು ಸ್ಥಾನಿಕ ಜಾಗೃದಳ ಸಿಬ್ಬಂದಿಯನ್ನು ನೇಮಿಸಲಾಗಿದೆ,
ಇದಲ್ಲದೇ ಡಿಡಿಪಿಐ, ಡಿವೈಪಿಸಿ, ನೇತೃತ್ವದಲ್ಲಿ ಎರಡು ಸಂಚಾರಿ ಜಾಗೃತದಳ ಕಾರ್ಯನಿರ್ವಹಿಸಲಿದೆ, ಪ್ರತಿ ತಾಲೂಕಿನಲ್ಲೂ ಬಿಇಒ, ನೇತೃತ್ವದಲ್ಲಿ ತಲಾ 1 ಜಾಗೃತದಳ ರಚಿಸಲಾಗಿದೆ ಎಂದ ಅವರು, ಇದಲ್ಲದೇ ಅಂತರ್ಜಿಲ್ಲಾ ಜಾಗೃತದಳ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಜಾಗೃತದಳ ಬರಲಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ವಾಟರ್‍ಬಾಯ್‍ಯಿಂದ ಮುಖ್ಯ ಅಧೀಕ್ಷಕರವರೆಗೂ ಎಲ್ಲರಿಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಗುರುತಿನ ಚೀಟಿ ಮುದ್ರಿಸಿ ಕಳುಹಿಸಿದೆ, ಗುರುತಿನ ಚೀಟಿ ಎಲ್ಲದೇ ಯಾರಿಗೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಲಾಗಿದೆ ಎಂದರು.


ಮೌಲಸೌಲಭ್ಯಗಳ ಪರಿಶೀಲನೆ ನಡೆದಿದೆ


ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಜಿಲ್ಲೆಯ ಎಲ್ಲಾ 7 ಕೇಂದ್ರಗಳಲ್ಲೂ ಕೊಠಡಿ, ಪೀಠೋಪಕರಣ, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳ ಕುರಿತು ನಿಗಾ ವಹಿಸಿದ್ದು, ಯಾವುದೇ ಸಮಸ್ಯೆಗಳಿಗೆ ಅವಕಾಶವಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.


ಮೊಬೈಲ್ ಬಳಕೆ ಸಂಪೂರ್ಣ ನಿಷಿದ್ದ


ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿ ಮೊಬೈಲ್ ಬಳಸದಿರುವಂತೆ ಕಟ್ಟಪ್ಪಣೆ ವಿಧಿಸಲಾಗಿದೆ.
ಮುಖ್ಯ ಅಧೀಕ್ಷಕರು ಕೊಠಡಿ ಮೇಲ್ವಿಚಾರಕರು ಮೊಬೈಲ್ ತಂದಿದ್ದರೆ ಸ್ವಿಚ್ ಆಫ್ ಮಾಡಿಸಿ ವಶಕ್ಕೆ ಪಡೆಯಲು ಸೂಚಿಸಲಾಗಿದ್ದು ವಿದ್ಯಾರ್ಥಿಗಳೂ ಸಹಾ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೇಂದ್ರದೊಳಕ್ಕೆ ತರಬಾರದು, ಕೇಂದ್ರದ ಮುಖ್ಯ ದ್ವಾರದಲ್ಲೇ ಈ ಸಂಬಂಧ ಪರಿಶೀಲಿಸಿ ಒಳ ಬಿಡುವಂತೆ ಪರೀಕ್ಷಾ ಮಂಡಳಿ ಸೂಚಿಸಿದೆ ಎಂದು ತಿಳಿಸಿದ್ದಾರೆ.


ಜೂ.12 ರಂದು ಪ್ರಥಮ ಭಾಷೆ


ಜೂ.12 ರಂದು ಪ್ರಥಮ ಭಾಷೆ ಪರೀಕ್ಷೆ ನಡೆಯಲಿದ್ದು, ಜೂ.13 ವಿಜ್ಞಾನ, ಜೂ.14 ದ್ವಿತೀಯ ಭಾಷೆ, ಜೂ.15 ಸಮಾಜ ವಿಜ್ಞಾನ, ಜೂ.16 ತೃತೀಯ ಭಾಷೆ, ಜೂ.17 ಗಣಿತ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ದ್ವಿತೀಯ ಭಾಷೆ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಬೆಳಗ್ಗೆ 10-30 ರಿಂದ ಮಧ್ಯಾಹ್ನ 1-30 ಗಂಟೆಯವರೆಗೂ ನಡೆಯಲಿದ್ದು, ಉಳಿದ ಪ್ರಥಮ ಭಾಷೆ,ಗಣಿತ,ವಿಜ್ಞಾನ, ಸಮಾಜವಿಜ್ಞಾನ ವಿಷಯಗಳ ಪರೀಕ್ಷೆ 10-30 ರಿಂದ 1-45 ರವರೆಗೂ ನಡೆಯಲಿದೆ.

ಪರೀಕ್ಷಾರ್ಥಿಗಳಿಗೆ ಉಚಿತ ಪ್ರಯಾಣ


ಸರ್ಕಾರದ ಆದೇಶದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಕೇಂದ್ರಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದರು.
ವಿದ್ಯಾರ್ಥಿ ಸಮುದಾಯ ವದಂತಿಗಳಿಗೆ ಕಿವಿಗೊಡದೇ, ಖಿನ್ನರಾಗದೇ ವಿಚಲಿತರಾಗದೇ ಪರೀಕ್ಷೆ ಬರೆದು ಗುಣಾತ್ಮಕ ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪರವಾಗಿ ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ, ಡಿವೈಪಿಸಿಗಳಾದ ಮೋಹನ್‍ಬಾಬು,ಬಿಇಒಗಳಾದ ಕನ್ನಯ್ಯ, ಗಂಗರಾಮಯ್ಯ, ಕೃಷ್ಣಮೂರ್ತಿ, ಉಮಾದೇವಿ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯಿತ್ರಿ,ಶಂಕರೇಗೌಡ, ವೆಂಕಟೇಶಪ್ಪ ಮತ್ತಿತರರು ಶುಭ ಹಾರೈಸಿದ್ದಾರೆ.
ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಕೋಲಾರ ತಾಲ್ಲೂಕು ಪರೀಕ್ಷಾನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಬಂಗಾರಪೇಟೆ ತಾಲ್ಲೂಕು ನೋಡಲ್ ಅಧಿಕಾರಿ ಸಿ.ಎಂ.ವೆಂಕಟರಮಣಪ್ಪ, ಶಿಕ್ಷಣ ಇಲಾಖೆ ಅಧಿಕಾರಿಗಳು, ಖಜಾನೆಯ ಅಧಿಕಾರಿಗಳು ಹಾಜರಿದ್ದರು.

ಬಾಲಕಿಯರ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಸಿದ್ದತೆಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಕ್ರಮವಹಿಸಿ -ಮುನಿವೆಂಕಟರಾಮಾಚಾರಿ

ಕೋಲಾರ:- ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಜೂ.12ರ ಸೋಮವಾರದಿಂದ ಆರಂಭಗೊಳ್ಳುತ್ತಿದ್ದು, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಹಾಗೂ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಹಾಗೂ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಸೂಚಿಸಿದರು.
ನಗರದ ಬಾಲಕಿಯರ ಪಿಯು ಕಾಲೇಜು ಕೇಂದ್ರದಲ್ಲಿ ಪರೀಕ್ಷೆಗೆ ನಿಯೋಜನೆಗೊಂಡ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತದಳ ಹಾಗೂ ಕೊಠಡಿ ಮೇಲ್ವಿಚಾರರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇದು ಖಾಸಗಿ ಅಭ್ಯರ್ಥಿಗಳ ಕೇಂದ್ರವಾಗಿದೆ ಎಂದ ಅವರು, ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ.75 ಶಾಲಾ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಅವಕಾಶ ಸಿಗದೇ ವಂಚಿತರಾದ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅವಕಾಶ ಕಲ್ಪಿಸಿದ್ದು, ಅದರಂತೆ ರಾಜ್ಯದಲ್ಲಿ 28 ಸಾವಿರ ಮಂದಿ ಹಾಗೂ ಕೋಲಾರ ಜಿಲ್ಲೆಯಲ್ಲಿ 322 ಮಂದಿ ಅಂತಹ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಕೇಂದ್ರದಲ್ಲಿ ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಿ, ಈ ಕೇಂದ್ರದಲ್ಲಿ ಕನ್ನಡ,ಉರ್ದು,ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ಇರುವುದರಿಂದ ಪ್ರಶ್ನೆಪತ್ರಿಕೆ ವಿತರಿಸುವಾಗ ಗೊಂದಲ ಮಾಡಿಕೊಳ್ಳದಿರಿ, ಆಯಾ ಮಾಧ್ಯಮದ ವಿದ್ಯಾರ್ಥಿಯ ಮಾಹಿತಿ ಗಮನಿಸಿ ಪ್ರಶ್ನೆಪತ್ರಿಕೆ ವಿತರಿಸಿ ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮೋದಿತ ಶಿಕ್ಷಕರನ್ನೇ ಸದರಿ ಪರೀಕ್ಷೆಗೆ ಕೊಠಡಿಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಬೇಕು, ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಗುರುತಿನ ಚೀಟಿ ನೀಡಿ ಎಂದು ಸೂಚಿಸಿದರು.
ಮುಖ್ಯ ಅಧೀಕ್ಷಕ ನಾಗರಾಜ್ ಮಾತನಾಡಿ, ಕೊಠಡಿ ಮೇಲ್ವಿಚಾರಕರು ಸೇರಿದಂತೆ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಯಾರೂ ಮೊಬೈಲ್ ತರಬೇಡಿ, ಮಕ್ಕಳಿಗೆ ಗೊಂದಲವಾಗದ ರೀತಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿದರು.
ಕೊಠಡಿ ಮೇಲ್ವಿಚಾರಕರು, ಡಿ ದರ್ಜೆ ಸಿಬ್ಬಂದಿ ಸೇರಿದಂತೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ಕಡ್ಡಾಯವಾಗಿದೆ, ಮೊಬೈಲ್ ತಂದಿದ್ದರೆ ಶಿಕ್ಷಕರು ಆರಂಭದಲ್ಲೇ ತಮ್ಮ ಮೊಬೈಲ್‍ಅನ್ನು ಇಲಾಖೆ ನೇಮಿಸಿರುವ ಮೊಬೈಲ್ ಸಂಗ್ರಹಣಾಧಿಕಾರಿಗೆ ಒಪ್ಪಿಸಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರುವಂತೆ ಕ್ರಮವಹಿಸಲಾಗಿದೆ, ಪರೀಕ್ಷಾಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿ ಬೆಳಗ್ಗೆ 9 ಗಂಟೆಗೆ ಹಾಜರಾಗುವಂತೆ ಸೂಚಿಸಿದ ಅವರು, ಆಯಾ ದಿನದಂದು ಇರುವ ಪರೀಕ್ಷಾ ವಿಷಯದ ಶಿಕ್ಷಕರನ್ನು ಪರೀಕ್ಷೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಅಭಿರಕ್ಷಕರು ಪ್ರಶ್ನೆಪತ್ರಿಕೆ ಬಂಡಲ್‍ಗಳನ್ನು ಮಾರ್ಗಾಧಿಕಾರಿಗಳು ಬೆಳಗ್ಗೆ 8 ಗಂಟೆಗೆ ತರುವುದರಿಂದ ಮೊದಲೇ ಹಾಜರಿದ್ದು ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ, ಕೊಠಡಿಯಲ್ಲಿ ಪರೀಕ್ಷಾ ಕಾರ್ಯ ಹಾಗೂ ಮಕ್ಕಳ ಏಕಾಗ್ರತೆಗೆ ಭಂಗ ಬಾರದಂತೆ ಎಲ್ಲಾ ಅಗತ್ಯ ಮುನ್ನಚ್ಚರಿಕೆ ವಹಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರೀಕ್ಷಾ ತಾಲ್ಲೂಕು ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡಿರುವ ಶಿಕ್ಷಕರಾದ ಶಿಕ್ಷಕರಾದ ಲೋಕೇಶಪ್ಪ ದಟ್ಟೇರ್,ಕೆ.ಲೀಲಾ, ನಾರಾಯಣರೆಡ್ಡಿ, ಅನಿತಾ ಪತ್ತಾರ್, ಸಿಆರ್‍ಪಿ ಗೋವಿಂದು, ಮೇಡಿಹಾಳ ಶಿಕ್ಷಕ ನಾಗರಾಜ್,ಎಸ್.ಎನ್.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಶಾಲೆಗಳು ಶಿಕ್ಷಕರು ಹಾಜರಿದ್ದರು.

ಕುಂದಾಪುರ ರೋಜರಿ ಚರ್ಚಿಗೆ ಧರ್ಮಾಧ್ಯಕ್ಷರಾದ ಡಾ|ಜೆರಾಲ್ಡ್ ಲೋಬೊರವರ ಅಧಿಕ್ರತ ಭೇಟಿ – 35 ಯುವಕ ಯುವತಿಯರಿಗೆ ದೃಢೀಕರಣ ಸಂಸ್ಕಾರ

ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆ ಇವುಗಳಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ ಮಾಡಿದ್ದು ನಮಗೆ ತಿಳಿದಿದೆ” ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.

  ಅವರು ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿಗೆ ತಮ್ಮ ಅಧಿಕ್ರತ ಭೇಟಿಯ ಸಂದರ್ಭ ಜೂ. 11 ಭಾನುವಾರದಂದು ದಿವ್ಯ ಬಲಿದಾನವನ್ನು ಅರ್ಪಿಸಿ “ನಮ್ಮ ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ ಆದರಿಂದ ನಾವು ಪೋಷಕರು ಮಕ್ಕಳಿಗಾಗಿ ಆದರ್ಶ ಜೀವನವನ್ನು ನಡೆಸಬೇಕು ಯುವ ಯುವತಿಯರು ಸನ್ನಡೆಯಿಂದ ನೆಡೆಯಬೇಕು” ತಿಳಿಸಿದರು ಇದೇ ಸಂದರ್ಭದಲ್ಲಿ 35 ಯುವ – ಯುವತಿಯರಿಗೆ ಅವರು ದೃಢೀಕರಣ ಸಂಸ್ಕಾರ ನೀಡಿದರು

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಸ್ರೂರು ಮೂಲದ ಧರ್ಮಗುರು ವಂ|ಕಿರಣ್ ಕೋತ್ ಬಲಿದಾನದಲ್ಲಿ ಭಾಗವಹಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಳೆದ ಸಾಲಿನ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು. ಬಿಶಪರ ಈ ಭೇಟಿ ಮೂರು ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತ,  ವಿವಿಧ ಪ್ರಾರ್ಥನೆಗಳನ್ನು ನಡೆಸಿ ಸಮಾಧಿ ಭೂಮಿಯನ್ನು ಆಶಿರ್ವದಿಸಿದರು ಭಾನುವಾರ ಮತ್ತು ಸೋಮವಾರ ವಿವಿಧ ಸಂಘಟನೆ, ವಿದ್ಯಾಲಯದ ಭೇಟಿ ಮತ್ತು ಸಮಾಲೋಚನ ಸಭೆಯನ್ನು ನಡೆಸುವರು.

ಕುಂದಾಪುರ  ರೋಜರಿ ಚರ್ಚಿಗೆ ಧರ್ಮಾಧ್ಯಕ್ಷ ಡಾ|ಜೆರಾಲ್ಡ್ ಲೋಬೊರವರ ಅಧಿಕ್ರತ ಭೇಟಿ – 35 ಯುವ ಯುವತಿಯರಿಗೆ ಧ್ರಡಿಕರಣ ಸಂಸ್ಕಾರ

ಕುಂದಾಪುರ, ಜೂ.11: ‘ಹಿತ್ತಲ ಹುಲ್ಲು, ತೋಟದ ಹೂವು, ನೀರಿನ ಗುಳ್ಳೆಯಂತೆ ನಾವುಗಳು, ಹಿತ್ತಲ ಹುಲ್ಲು ನೀರಿಲ್ಲದಿದ್ದರೆ ಬಾಡಿ ಹೋಗುತ್ತದೆ, ತೋಟದ ಹೂವು ಬಾಡಿ ಹೋಗುತ್ತದೆ, ನೀರಿನ ಗುಳ್ಳೆ ಕ್ಷಣಿಕವಾಗಿದ್ದು, ಅದು ಒಡೆದು ಹೋಗುತ್ತದೆ. ಈ ಪ್ರಪಂಚದಲ್ಲಿ ಮನುಷ್ಯರು ಕೂಡ ಹಾಗೇ, ಆದರೆ ಯೇಸುವಿನ ದಯೆಯಿಂದ ನಮಗೆ ಪುನರ್ಜೀವಿತ ದೊರಕುತ್ತದೆ, ನಾವು ಇಲ್ಲಿ ಅಳಿದ ಮೇಲೆ ಪರಲೋಕದಲ್ಲಿ ನಮ್ಮ ಇರುವಿಕೆ ಇದೆಯೆಂದು, ಯೇಸು ಅನೇಕ ಭಾರಿ ಹೇಳಿರುವನು, ನನಗೆ ಮರಣದ ಮೇಲೆ ಅಧಿಕಾರ ಇದೆಯೆಂದು ಸತ್ತವರನ್ನು ಜೀವಂತ ಮಾಡಿದ್ದು ನಮಗೆ ತಿಳಿದಿದೆ” |ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.

  ಅವರು ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿಗೆ ತಮ್ಮ ಅಧಿಕ್ರತ ಭೇಟಿಯ ಸಂದರ್ಭ ಜೂ. 11 ಭಾನುವಾರದಂದು ದಿವ್ಯ ಬಲಿದಾನವನ್ನು ಅರ್ಪಿಸಿ “ನಮ್ಮ ಮಕ್ಕಳು ಪೋಷಕರನ್ನು ಅನುಸರಿಸುತ್ತಾರೆ ಆದರಿಂದ ನಾವು ಪೋಷಕರು ಮಕ್ಕಳಿಗಾಗಿ ಆದರ್ಶ ಜೀವನವನ್ನು ನಡೆಸಬೇಕು ಯುವ ಯುವತಿಯರು ಸನ್ನಡೆಯಿಂದ ನೆಡೆಯಬೇಕು” ತಿಳಿಸಿದರು ಇದೇ ಸಂದರ್ಭದಲ್ಲಿ 35 ಯುವ – ಯುವತಿಯರಿಗೆ ಅವರು ಧ್ರಡಿಕರಣ ಸಂಸ್ಕಾರ ನೀಡಿದರು

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಬಸ್ರೂರು ಮೂಲದ ಧರ್ಮಗುರು ವಂ|ಕಿರಣ್ ಕೋತ್ ಬಲಿದಾನದಲ್ಲಿ ಭಾಗವಹಿಸಿದರು.ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಳೆದ ಸಾಲಿನ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ. ಧರ್ಮ ಭಗಿನಿಯರು, ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಭಾಗಿಯಾದರು. ಬಿಶಪರ ಈ ಭೇಟಿ ಮೂರು ದಿನಗಳದಾಗಿದ್ದು, ಶನಿವಾರ ಸಂಜೆ ಆಗಮಿಸಿ, ಚರ್ಚಿನ ಪರವಾಗಿ ಗೌರವಪೂರ್ವಕ ಸ್ವಾಗತ,  ವಿವಿಧ ಪ್ರಾರ್ಥನೆಗಳನ್ನು ನಡೆಸಿ ಸಮಾಧಿ ಭೂಮಿಯನ್ನು ಆಶಿರ್ವದಿಸಿದರು ಭಾನುವಾರ ಮತ್ತು ಸೋಮವಾರ ವಿವಿಧ ಸಂಘಟನೆ, ವಿದ್ಯಾಲಯದ ಭೇಟಿ ಮತ್ತು ಸಮಾಲೋಚನ ಸಭೆಯನ್ನು ನಡೆಸುವರು.