ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚ್ಯಾ ಭೇಟೆಕ್ ಗೊವ್ಳಿಕ್ ಬಾಪಾಚೆ ಆಗಮನ್

ಕುಂದಾಪುರ್, ಜೂ. 10: ಉಡುಪಿ ದಿಯೆಸೆಜ್ ಧರ್ಮಾಧ್ಯಕ್ಷ್ ಅ| ಮಾ| ದೊ| ಜೆರಾಲ್ಡ್ ಐಸಾಕ್ ಲೋಬೊ ಹಾಂಚೆಂ, ಕುಂದಾಪುರ್ ರೊಜಾರ್ ಮಾಯೆಚ್ಯಾ ಫಿರ್ಗಜೆಕ್ ತೀನ್ ದಿಸಾಂಚಾ ಅಧಿಕೃತ್ ಗೊವ್ಳಿಕ್ ಭೇಟೆ ಖಾತಿರ್, ಸನ್ವಾರಾ ಸಾಂಜೆರ್ ತಾಂಚೆಂ ಆಗಮನ್ ಜಾಲೆಂ.

   ಗೊವ್ಳಿ ಬಾಪಾಕ್ ಇಗರ್ಜೆಚ್ಯಾ ದಾರ್ವಾಟ್ಯಾರ್ ವಿಗಾರ್ ಅ|ಮಾ| ಬಾ| ಸ್ಟ್ಯಾನಿ ತಾವ್ರೊ ಝೆಲೊ ಗಾಲುನ್ ಸ್ವಾಗತ್ ಕೆಲೊ. ತಾಂಚೆಂ ಸಂಗಾತಾ ಸಹಾಯಕ್ ವಿಗಾರ್ ಮಾ|ಬಾ| ಅಶ್ವಿನ್ ಆರಾನ್ನಾ ಫಿರ್ಗಜ್ ಮಂಡಳಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ೨೦ ಅಯೋಗಾಂಚಿ ಸಂಚಾಲಕಿ ಪ್ರೇಮಾ ಡಿಕುನ್ಹಾ, ಸಾಂ. ಜೋಸೆಫ್ ಕೊವೆಂತಾಚಿಂ ವ್ಹಡಿಲ್ನ್ ಸಿಸ್ಟರ್ ಸುಪ್ರಿಯಾ ಆನಿ ಸರ್ವ್ ಫಿರ್ಗಜ್ ಲೊಕಾಂ ಸಾಂಗಾತಾ ತಾಂಕಾಂ ಮೊಗಾಚೊ ಸ್ವಾಗತ್ ದಿಲೊ.

  
    ಉಪ್ರಾಂತ್ ಗೊವ್ಳಿ ಬಾಪಾಕ್ ದೇವ್ ಪ್ರಜೆನ್ ಪುರ್ಷಾಂವಾರ್ ದೇವ್ ಮಂದಿರಾಂತ್ ಆಪವ್ನ್ ವೆಲೆಂ. ದೇವ್ ಮಂದಿರಾಂತ್ ಗೊವ್ಳಿ ಬಾಪಾಕ್ ದುಂಪವ್ನ್, ಖುರಿಸ್, ಪೆಟಲ್ಲಿ ವಾತ್ ದಿವ್ನ್ ವಿಗಾರ್ ಬಾಪ್ ಸ್ಟ್ಯಾನಿ ತಾವ್ರೊನ್ ಧಾರ್ಮಿಕ್ ರೀತಿ ರಿವಾಜಿ ಪರ್ಮಾಣೆ ಸ್ವಾಗತಾಚಿ ರೀತ್ ಚಲಯ್ಲಿ.
ಉಪ್ರಾಂತ್ ದೇವ್ ಪ್ರಜೆಕ್ ಪವಿತ್ರ್ ಉದಾಕ್ ಶೆಣಾಂವ್ನ್ ಆಶಿರ್ವಾದಿತ್ ಕೆಲೆಂ, ಗೊವ್ಳಿಕ್ ಮಂಡಳಿ ಸಾಂದ್ಯಾಕ್ ಪೆಟಲ್ಲಿ ವಾತ್ ಗೊವ್ಳಿ ಬಾಪಾನ್ ದಿಂವ್ನ್ ’ತಾಂಚೆಂ ಥಾವ್ನ್ ಉತ್ತಿಮ್ ಸೆವಾ ಮೆಳ್ಚ್ಯಾ ಪಾಸೊತ್ ಮಾಗ್ಣೆ ಕೆಲೆಂ.  ಉಪ್ರಾಂತ್ ಗೊವ್ಳಿಕ್ ಬಾಪಾನಿಂ ‘ಆಮ್ಕಾಂ ಜೆಜು ವರ್ವಿಂ ಪುನರ್ ಜಿವಂತ್ಪಣ್ ಆಸಾ, ಮರಣ್ ತತ್ಕಾಲಿಕ್, ಮರಣ್ ಆಮ್ಕಾಂ ಏಕ್ ಉತ್ರೊಣ್’ ಮ್ಹಣನ್ ತಾಣಿ ಸಂದೇಶ್ ದಿಲೊ. ಅಶೆಂ ವಿವಿಧ್ ಮಾಗ್ಣ್ಯಾ ವಿಧಿಂ ಚಲ್ಲಿ ಉಪ್ರಾಂತ್. ಸರಲ್ಯಾ ಆಮ್ಚ್ಯಾ ಮಲ್ಘಡ್ಯಾ ಪಾಸೊತ್ ಸಿಮೆಸ್ತ್ರಿಂತ್ ಮಾಗ್ಣ್ಯಾ ವಿಧಿ ಚಲವ್ನ್ ಗೊವ್ಳಿ ಬಾಪಾಂನಿ ಸಿಮಿಸ್ತ್ರ್ ಬೆಂಜಾರ್ ಕೆಲಿ. ಹ್ಯಾ ಮಾಗ್ಣ್ಯಾ ವಿಧಿಂತ್, ಗೊವ್ಳಿ ಬಾಪಾ ಸವೆಂ, ವಿಗಾರ್ ಮಾ|ಬಾ|ಸ್ಟ್ಯಾನಿ ತಾವ್ರೊ, ಸಹಾಯಕ್ ವಿಗಾರ್ ಸಹಾಯಕ್ ವಿಗಾರ್ ಮಾ|ಬಾ| ಅಶ್ವಿನ್ ಆರಾನ್ನಾ ವಾಂಟೊ ಘೆತ್ಲೊ. ತಶೆಂಚ್ ಸಭಾರ್ ಧರ್ಮ್ ಭಯ್ಣ್ಯೊ, ಆನಿ ಸಭಾರ್ ದೇವ್ ಪ್ರಜೆನ್ ವಾಂಟೊ ಘೆತ್ಲೊ.

ಭಾ. ರೆ. ಕ್ರಾ. ಸಂಸ್ಥೆ ಕುಂದಾಪುರ ಶಾಖೆಯಿಂದ ಕೇನ್ಸರ್ ರೋಗಿಗೆ ಹತ್ತು ಸಾವಿರ ರೂಪಾಯಿ ದೇಣಿಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಶಾಖೆ ಕೇನ್ಸರ್ ಕಾಯಿಲೆ ಯಿಂದ ಬಳಲುತ್ತಿರುವ ಜಗದೀಶ್ ಖಾರ್ವಿ ಇವರಿಗೆ ಹತ್ತು ಸಾವಿರ ರೂಪಾಯಿ ದೇಣಿಗೆ ಯನ್ನು ರೋಗಿಯ ಪುತ್ರ ನಿರಂಜನ್ ಇವರಿಗೆ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಹಸ್ತಾಂತರಿಸಿದರು. ಈ ದೇಣಿಗೆಯನ್ನು ನಮ್ಮ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ಇವರು ಕೊಡಮಾಡಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ ಆಚಾರ್ಯ ಉಪಸ್ಥಿತರಿದ್ದರು

ಕಾಲೇಜು ವಿದ್ಯಾರ್ಥಿಗಳು ತಮ್ಮ ವಯಸ್ಸಿನಲ್ಲಿಯ ಸಮಸ್ಯೆಗಳನ್ನು ಮತ್ತು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು

ಕುಂದಾಪುರ: ಕಾಲೇಜು ವಿದ್ಯಾರ್ಥಿಗಳು ಹರೆಯವು ಅಲ್ಲದ ವಯಸ್ಕರು ಅಲ್ಲದ ವಯಸ್ಸಿನವರು. ಈ ವಿಚಿತ್ರ ವಯಸ್ಸಿನಲ್ಲಿ ಬರುವಂತಹ ಸಮಸ್ಯೆಗಳನ್ನು ಮತ್ತು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು ಒಂದು ಬಾಗಿಲು ತೆರೆದಿರುತ್ತದೆ ಎಂಬುದರಲ್ಲಿ ನಂಬಿಕೆ ಇಡಬೇಕು ಎಂದು ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಕರೆ ನೀಡಿದರು.
ಅವರು ಜೂನ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ವಯಸ್ಸಿನಲ್ಲಿ ಆತ್ಮವಿಶ್ವಾಸದ ಕೊರತೆ, ಕೀಳರಿಮೆ, ನಕಾರಾತ್ಮಕ ನೆಲೆಯ ಮೌಲ್ಯಮಾಪನ, ಸಾಮಾಜಿಕ ಆತಂಕ ಇವೆಲ್ಲ ಸಮಸ್ಯೆಗಳು ಕಾಡುತ್ತವೆ. ಅದರಿಂದ ಹೊರಬರಲು ತುಂಬಾ ಪ್ರಯಾಸ ಪಡಬೇಕಾಗುತ್ತದೆ. ಆದರೆ ನಿಮ್ಮ ಬದುಕು ಚೆನ್ನಾಗಿ ಇರಬೇಕಾದರೆ ಈ ಸಮಸ್ಯೆ ಗಳಿಂದ ಹೊರಗೆ ಬರಲೇಬೇಕು. ಹೊರಗೆ ಬರಲು ದಾರಿಗಳು ಸಹ ನಮ್ಮೊಳಗೆ ಅಡಗಿರುತ್ತದೆ. ನಿಮ್ಮ ಸಮಸ್ಯೆಗಳ ಕುರಿತು ಸ್ನೇಹಿತರು, ಗುರುಗಳು ಅಥವಾ ಯಾರಾದರೂ ಆತ್ಮೀಯರಲ್ಲಿ ಹಂಚಿಕೊಳ್ಳಿ. ಅಲ್ಲದಿದ್ದರೆ ಮನೋವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ, ಎಲ್ಲವುಗಳಿಗಿಂತ ಆತ್ಮ ಜಾಗೃತಿ, ಸಕಾರಾತ್ಮಕ ನೆಲೆಯಲ್ಲಿ ಬದುಕಿನ ಸ್ವೀಕಾರ, ಸಮಸ್ಯೆ ಬಗ್ಗೆ ಪರಿಹಾರ ಹುಡುಕಬೇಕು. ಹಾಗೆ ನಮ್ಮ ಭವಿಷ್ಯದ ನಿರ್ಣಯಕ್ಕೆ ಪೂರಕ ತಯಾರಿಗಳ ಕಡೆಗೆ ಗಮನ ಹರಿಸಬೇಕು. ಸಮತೋಲನದ ಸಾಮರ್ಥ್ಯ ಮತ್ತು ಒಳ್ಳೆಯ ಆರೋಗ್ಯವಿರಬೇಕು. ಕನಸು ಕಂಡು, ಅದರ ಮಾರ್ಗವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಶಿಸ್ತು, ಸಮರ್ಪಣಾ ಭಾವ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನೆಲೆಯಲ್ಲಿ ಪ್ರಯತ್ನ ಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರ ಆಚಾರಿ ವಹಿಸಿದ್ದರು.
ಮಹಿಳಾ ವೇದಿಕೆ ಸಂಯೋಜಕರಾದ ಮೀನಾಕ್ಷಿ ಎನ್ ಎಸ್. ಸ್ವಾಗತಿಸಿದರು.
ವಿದ್ಯಾರ್ಥಿನಿಯರಾದ ಯಜುಷಾ ಕಾರ್ಯಕ್ರಮ ನಿರೂಪಿಸಿ, ಫಾತಿಮಾ ಅನಾಜ್ ಅತಿಥಿಗಳನ್ನು ಪರಿಚಯಿಸಿ, ವರೇಣ್ಯ ನಾಯಕ್ ವಂದಿಸಿದರು.