ಕುಂದಾಪುರ ಅಗ್ನಿಶಾಮಾಕ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣ ನಾಯ್ಕ್ ಯವರಿಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಸನ್ಮಾನ

ಕುಂದಾಪುರ ಅಗ್ನಿಶಾಮಾಕ ಠಾಣೆ ಯಲ್ಲಿ ಸೇವೆ ಸಲ್ಲಿಸುತ್ತಿರುವ ಕೃಷ್ಣ ನಾಯ್ಕ್ ಯವರಿಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಸನ್ಮಾನ ಕಾರ್ಯಕ್ರಮ ಕೋಟೇಶ್ವರ ದ ಸಹನಾ ಕನ್ವೆನ್ಷನ್ ನ ಕೃಷ್ಣ ಸಬಾ ಭವನ ದಲ್ಲಿ ಜರುಗಿತು

ವೃತ್ತಿ ಯನ್ನು ನಾವು ಗೌರವಿಸಬೇಕು ಅದನ್ನು ಪ್ರೀತಿ ಯಿಂದ ಸೇವೆ ಮಾಡಬೇಕು ನಾವು ಮಾಡುತ್ತಿರುವ ಕೆಲಸ ಅದು ಎಷ್ಟೇ ಕಷ್ಟವಾದರು ಅದನ್ನು ಚಾಲೆಂಜ್ ಯಾಗಿ ತೆಗೆದುಕೊಂಡರೆ ಮಾತ್ರ ಯಶಸ್ಸು ಸಿಗುತ್ತದೆ” ಎಂದು ಸನ್ಮಾನ ಸ್ವೀಕರಿಸಿ ಕೃಷ್ಣ ನಾಯ್ಕ್ ಮಾತನಾಡಿದರು
ಸಮಾರಂಭ ದ ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ವಹಿಸಿದರು
ಈ ಸಂದರ್ಭದಲ್ಲಿ ಜೆಸಿಐ ಕಾಪು ಘಟಕದ ಅಧ್ಯಕ್ಷೆ ದೀಕ್ಷಾ ಕೋಟ್ಯಾನ್ ಜೆಸಿಐ ಕಾರ್ಕಳ ಘಟಕದ ಅಧ್ಯಕ್ಷ ವಿಘ್ನಶ್ ರಾವ್ ಜೆಸಿಐ ಬೈಂದೂರ್ ಸಿಟಿ ಯಾ ಅಧ್ಯಕ್ಷ ನರೇಂದ್ರ ಶೇಟ್ ಜೆಸಿಐ ಭಟ್ಕಳ ಸಿಟಿ ಯಾ ಅಧ್ಯಕ್ಷೆ ಶಾಯ್ನಾ ಶೈಖ್
ವಲಯ 15 ರ ಪೂರ್ವ ಅಧ್ಯಕ್ಷ ಕೆ ಕಾರ್ತಿಕೇಯ ಮಧ್ಯಸ್ಥ ವಲಯ ಉಪಾಧ್ಯಕ್ಷ ಅಭಿಲಾಷ್ ವಲಯ 14 ರ ಉಪಾಧ್ಯಕ್ಷೆ ಆಶಾ ಜೈನ್
ಪೂರ್ವ ವಲಯ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ಜೆ ಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ನಾಗೇಶ್ ನಾವಡ ಜಯಚಂದ್ರ ಶೆಟ್ಟಿ ಚಂದ್ರಕಾಂತ್ ಮಂಜುನಾಥ್ ಕಾಮತ್ ಗಿರೀಶ್ ಹೆಬ್ಬಾರ್ ವಿಜಯ್ ಭಂಡಾರಿ ರಾಘವೇಂದ್ರ ಕುಲಾಲ್ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಕಾಮತ್ ಶ್ರುತಿ ಡಿ ಸೋಜಾ ಇನ್ನಿತರರು ಉಪಸ್ಥಿತರಿದ್ದರು
ಜೆಸಿಐ ಕುಂದಾಪುರ ಸಿಟಿ ಯಾ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಸಲ್ವಾಡಿ ವಂದಿಸಿದರು
.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವನಸೀರ್ ಅಹಮದ್‍ರಿಗೆ ಕೋಲಾರ ಕಾಂಗ್ರೆಸ್ ಅಭಿನಂದನೆ

ಕೋಲಾರ:- ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಿದ್ದರಾಮಯ್ಯ ನೀಡಿರುವ ಭರವಸೆಗಳ ಈಡೇರಿಕೆಗೆ ನಿರಂತರವಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಭರವಸೆ ನೀಡಿದರು.
ಇಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆತ್ಮೀಯವಾಗಿ ಸನ್ಮಾನಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಕೋಲಾರಕ್ಕೆ ಸಿದ್ದರಾಮಯ್ಯ ಅವರೇ ಅಭ್ಯರ್ಥಿಯಾಗಿ ಶಾಸಕರಾಗಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಈ ಅವಕಾಶ ಕೊತ್ತೂರು ಮಂಜುನಾಥ್ ಅವರ ಪಾಲಾಗಿದೆ, ಅವರೂ ಸಹಾ ಅಭಿವೃದ್ದಿಯ ಪರವಾಗಿದ್ದು, ಉತ್ತಮ ಕಾರ್ಯ ಮಾಡಲಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವ ಆಶಯದೊಂದಿಗೆ ವಿವಿಧ ಸಭೆಗಳಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಕೋಲಾರದ ಅಭಿವೃದ್ದಿಗೆ ಅವರು ನೀಡಿದ್ದ ಭರವಸೆಗಳ ಈಡೇರಿಕೆಗೆ ಬದ್ದರಾಗಿದ್ದು, ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಅವರ ಗಮನಸೆಳೆಯುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಅಲ್ಪಸಂಖ್ಯಾತವಿಭಾಗದ ಅಧ್ಯಕ್ಷ ಇಕ್ಬಾಲ್ ಅಹಮದ್, ಕ್ಯಾಲನೂರು ಬಾಬು, ಕಾರ್ಮಿಕ ಘಟಕದ ಯಲ್ಲಪ್ಪ, ಹಾರೋಹಳ್ಳಿ ಶ್ರೀನಿವಾಸ್,ಮೋಚಿಪಾಳ್ಯ ನಾಗೇಶ್, ಗಾಂಧಿನಗರ ರಾಮಣ್ಣ, ನಾಗರಾಜ್,ಹಾರೋಹಳ್ಳಿ ರೆಡ್ಡಿ, ನರಸಾಪುರ ಸಾಹಿದ್,ಗ್ರಾಮಾಂತರ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಜಗನ್,ಚನ್ನಸಂದ್ರದ ಮುನಿರಾಜು, ವೆಂಕಟೇಶ್, ದೇವಪಲ್ಲಿ ಸೀನಪ್ಪ ಮತ್ತಿತರರಿದ್ದರು.

ಥಲಸ್ಸೆಮಿಯಾ ದಿಂದ ಮುಕ್ತವಾಗಿ ಪುನರ್ ಜನ್ಮ ಪಡೆದ ಹೆಣ್ಣು ಮಗುಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ವೈಸಿ ಬೀರೇಗೌಡರ ಸಾಧನೆ

ಕೋಲಾರ,ಜೂ,3: ಥಲಸ್ಸೆಮಿಯಾ ರೋಗದಿಂದ ಬಳಲುತ್ತಿದ್ದ 11 ವರ್ಷದ ಹೆಣ್ಣು ಮಗು ಸಂಪೂರ್ಣ ಗುಣಮುಖವಾದ ಸಾಧನೆಯ ಸುದ್ದಿ ಡಾ. ವೈ ಸಿ ಬೀರೇಗೌಡ ರವರ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ದೊರಕಿದೆ.
ಈ ಹೆಣ್ಣು ಮಗು ಜನನವಾಗಿದ್ದು ಇದೇ ಆಸ್ಪತ್ರೆಯಲ್ಲಿ. ಜನಿಸಿದಾಗಲೇ ಈ ಕಂದನಲ್ಲಿ ಥೆಲಸೆಮಿಯ ಖಾಯಿಲೆಯು ಪತ್ತೆಯಾಗಿತ್ತು. ತದನಂತರ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ಬದಲಾವಣೆ ಕಾರ್ಯ ಸಹ ನಡೆಯುತ್ತಿತ್ತು. ಇದರಿಂದ ಮುಕ್ತಿ ಹೊಂದಲು ಪೋಷಕರು ಪರಿತಪಿಸುತ್ತಿದ್ದರು. ಆಗ ಡಾ.ವೈ.ಸಿ ಬೀರೇಗೌಡರವರ ಸಲಹೆಯಂತೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ (Bone marrow transplant) ಮಾಡಲಾಯಿತು. ಇದನ್ನು ಬೆಂಗಳೂರಿನ ಯಶವಂತ ಪುರದಲ್ಲಿ ಇರುವ ಪೀಪಲ್ಸ್ ಟ್ರಿ ಆಸ್ಪತ್ರೆಯ ತಜ್ಞ ವೈದ್ಯರುಗಳು ನೀಡಿದ ಚಿಕಿತ್ಸೆಯಿಂದ 11 ವರ್ಷದ ಹೆಣ್ಣುಮಗಳು ಸಂಪೂರ್ಣವಾಗಿ ಗುಣಮುಖವಾದ ಮಗು ಎಲ್ಲರಂತೆ ಆಗಿದೆ. ಪೋಷಕರು ಇದರಿಂದ ಬಹಳ ಸಂತೋಷಗೊಂಡಿದ್ದಾರೆ.
ಈ ರೀತಿಯ ಘಟನೆಗಳು ಜರುಗಿದಾಗ ಮಕ್ಕಳಲ್ಲಿ ಈ ರೀತಿಯ ನ್ಯೂನತೆಗಳು ಕಂಡು ಬಂದಾಗ ಪೆÇೀಷಕರು ಕುಗ್ಗದೆ ಸರಿಯಾದ ಚಿಕಿತ್ಸಾ ಕ್ರಮದಿಂದ ಪುನರ್ ಜೀವನ ಪಡೆಯಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಈ ಕಾಯಿಲೆಗೆ ಒಳಪಡುವ ಯಾವುದೇ ವ್ಯಕ್ತಿಯಾಗಲಿ ಮೂರು ತಿಂಗಳಿಗೊಮ್ಮೆ ರಕ್ತವನ್ನ ಬದಲಾಯಿಸಿಕೊಳ್ಳುತ್ತಿರಬೇಕು. ಇದು ಪೋಷಕರಿಗೂ ಹೊರೆಯಾಗುತ್ತದೆ. ಅಲ್ಲದೆ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಇಂತಹ ಕಾಯಿಲೆ ಬಂದಾಗ ಸೂಕ್ತ ಸಂದರ್ಭದಲ್ಲಿ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಅಥವಾ ಸಲಹೆ ಪಡೆದುಕೊಂಡಾಗ ಥಲಸ್ಸಮಿಯಾ ಕಾಯಿಲೆಯಿಂದ ಹೊರಬರಲು ಸಾಧ್ಯವಾಗುತ್ತದೆ.
ಥಲಸ್ಸಮಿಯಾ ಕಾಯಿಲೆಯಿಂದ ಗುಣಮುಖರಾದ ನಂತರ ಮಗು ನಗುಮುಖದೊಂದಿಗೆ ಎಲ್ಲರೊಂದಿಗೂ ಸಂತೋಷದಿಂದ ಇದ್ದಾಳೆ. ಇದೀಗ ಆ ಮಗು ಎಲ್ಕರಂತೆ ಶಾಲೆಗೆ ಹೋಗುತ್ತಿದ್ದಾಳೆ. ಇದನ್ನ ನೋಡಿ ಪೋಷಕರು ಕಣ್ಣು ತುಂಬಿಸಿಕೊಂಡು ಡಾ.ವೈ.ಸಿ.ಬೀರೇಗೌಡರು ಹಾಗೂ ಅವರ ಸ್ನೇಹಿತ ವೈದ್ಯರ ಸೇವೆಯನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ರೇಡಿಯಾಲಿಜಿಸ್ಟ್ ಮಂಜುನಾಥ ಅವರ ಸಹಕಾರವೂ ಇದೆ.
ಥಲಸ್ಸಮಿಯಾ.. ಎಂದರೆ ಇದೊಂದು ರಕ್ತಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದೊಂದು ಅನುವಂಶಿಕವಾಗಿ ತಂದೆ-ತಾಯಿಯಿಂದ ಮಕ್ಕಳಿಗೆ ಬರುವ ರಕ್ತದ ಕಾಯಿಲೆಯಾಗಿದೆ. ಈ ರೋಗದ ಪರಿಣಾಮದಿಂದ ಮಗುವಿನ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆ ಸರಿಯಾಗಿ ಆಗದೆ ಈ ಜೀವಕೋಶಗಳ ಜೀವಿತಾವಧಿಯೂ ಬಹಳ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ಮಕ್ಕಳಿಗೆ ಪ್ರತಿ 21 ದಿನಗಳ ನಂತರ ಕನಿಷ್ಠ ಒಂದು ಯೂನಿಟ್ ರಕ್ತದ ಅಗತ್ಯವಿರುತ್ತದೆ. ಆದರೆ ಈ ಕಾಯಿಲೆ ಇರುವ ಮಕ್ಕಳು ಬಹಳ ದಿನ ಬದುಕುವುದಿಲ್ಲ. ಕೆಲವರು ಬದುಕುಳಿದರೂ, ಅವರು ಆಗಾಗ್ಗೆ ಕೆಲವು ಕಾಯಿಲೆಗಳಿಂದ ಬಳಲುತ್ತಾರೆ. ಹಾಗಾಗಿ ಅವರಿಗೆ ಬೇರೆ ಮಕ್ಕಳು ಬೆಳೆದಂತೆ ಸಂತೋಷದಿಂದ ಬಾಲ್ಯವನ್ನು ಕಳೆಯಲು ಸಾಧ್ಯವಾಗುವುದಿಲ್ಲ.ಥಲಸ್ಸೆಮಿಯಾ ಹೊಂದಿರುವ ವ್ಯಕ್ತಿಗಳು ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ, ಮಸುಕಾದ ಚರ್ಮ ಮತ್ತು ಕಾಮಾಲೆಯಂತಹ ರಕ್ತಹೀನತೆಯ ರೋಗಲಕ್ಷಣಗಳನ್ನು ಅನುಭವಿಸಬಹುದು. ತೀವ್ರ ಪ್ರಕರಣಗಳಲ್ಲಿ, ಥಲಸ್ಸೆಮಿಯಾ ಮೂಳೆ ವಿರೂಪಗೊಳ್ಳುವುದು, ಹಿಗ್ಗಿರುವ ಗುಲ್ಮ ಮತ್ತು ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು. ಈ ರೋಗನಿರ್ಣಯವು ಕ್ಲಿನಿಕಲ್ ರೋಗಲಕ್ಷಣಗಳು ಮತ್ತು ಪ್ರಯೋಗಾಲಯ ಪರೀಕ್ಷೆಗಳನ್ನು ಆಧರಿಸಿದೆ. ಇದು ಎಚ್ಪಿಎಲ್ಸಿ ಅಥವಾ ಎಲೆಕ್ಟ್ರೋಫೆÇೀರೆಸಿಸ್ನಲ್ಲಿ ಎಚ್ಬಿಎಫ್ (ಭ್ರೂಣದ ಹಿಮೋಗ್ಲೋಬಿನ್) ಅನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಕೆ ಡಿ ಎ ಪಿ ಕೋಲಾರ ಜಿಲ್ಲೆಯ ಅಧ್ಯಕ್ಷರಾದ ಡಾ.ವೈ ಸಿ ಬೀರೇಗೌಡ ರವರ ಉದ್ದೇಶ ಥೆಲಸೆಮಿಯ ಕುರಿತಾಗಿ ಕೆಡಿಎಪಿ ವತಿಯಿಂದ ಈಗಾಗಲೇ ಈ ಕುರಿತ ಮಾಹಿತಿ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸಾ ವಿಧಾನದಿಂದ ಈ ಕಾಯಿಲೆನ ಸಂಪೂರ್ಣವಾಗಿ ಗುಣಮುಖಗೊಳಿಸಬಹುದು ಎಂದು ಈ ಘಟನೆಯಿಂದ ತಿಳಿಯಬಹುದಾಗಿದೆ ವೈದ್ಯಕೀಯ ಲೋಕದ ಅಚ್ಚರಿಗಳಲ್ಲಿ ಇದು ಕೂಡ ಒಂದಾಗಿದೆ.

ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ

ಕೋಲಾರ,ಜೂ,3: ಇಂದು ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ “ಸರ್ಕಾರಿ/ಅನುದಾನಿತ ಶಾಲೆಗಳ ಉಳಿವಿಗಾಗಿ ನಾವು-ನೀವು ” ಅಭಿಯಾನದಡಿ ಪ್ರತಿವರ್ಷದಂತೆ ಈ ಶೈಕ್ಷಣಿಕ ಸಾಲಿಗೂ ಸಹ ಅವಶ್ಯಕತೆ ಇರುವ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಇಂದು ಸುಗಟೂರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮುಖ್ಯವಾಗಿ ಶಿಕ್ಷಣದ ಮೂಲಭೂತ ಸೌಲಭ್ಯಗಳನ್ನು ಪೂರೈಸಿದಾಗ ಉತ್ತಮ ಶಿಕ್ಷಣ ನೀಡಲು ಸಾಧ್ಯ ಎಂದು ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ.ಶಿವಕುಮಾರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆಯ ನಿರ್ದೇಶಕರಾದ ಸುಗಟೂರ್ ಸೈಯದ್ ತನವೀರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವರ್ಣಭೂಮಿ ಫೌಂಡೇಷನ್‍ನ ಅಧ್ಯಕ್ಷ ಬಿ.ಶಿವಕುಮಾರ್, ನಿರ್ದೇಶಕರಾದ ಸುಗಟುರು ಸೈಯದ್ ತನವೀರ್, ಎಸ್‍ಡಿಎಂಸಿ ಅಧ್ಯಕ್ಷ ಕಲಿಂ ಉಲ್ಲಾ, ಮುಖ್ಯ ಶಿಕ್ಷಕಿ ನೂರ್ ಕುತೇಜ, ಶಿಕ್ಷಕರಾದ ವರಲಕ್ಷ್ಮಿ, ನೂರ್ ಅಫ್ಶ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಪಾಳು ಬೀಳುತ್ತಿರುವ ಎಪಿಎಂಸಿಗಳಿಗೆ ಬಲ ತುಂಬಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ-ರೈತಸಂಘ

ಶ್ರೀನಿವಾಸಪುರ; ಜೂ.: ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಪಾಳು ಬೀಳುತ್ತಿರುವ ಎಪಿಎಂಸಿಗಳಿಗೆ ಬಲ ತುಂಬಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಬೇಕೆಂದು ರೈತಸಂಘದಿಂದ ತಹಸೀಲ್ದಾರ್ ಹಾಗೂ ಎಪಿಎಂಸಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ಎಪಿಎಂಸಿ ಇಂದು ಮೂಲಭೂತ ಸೌಕರ್ಯಗಳಿಲ್ಲದೆ ಸ್ಮಶಾನಗಳಾಗಿ ಮಾರ್ಪಟ್ಟಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಶುಲ್ಕ ಪಾವತಿಸಲು ಆದಾಯವಿಲ್ಲದೆ ಅನಾಥವಾಗುತ್ತಿವೆ ಎಂದು ಎಪಿಎಂಸಿ ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಹಾಗೂ ಎಪಿಎಂಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 4 ವರ್ಷಗಳ ಹಿಂದೆ ಜಾರಿಗೆ ತಂದಿದ್ದ ಮೂರು ಕಾಯಿದೆಗಳನ್ನು ರೈತರ ಹೋರಾಟದ ಪ್ರತಿಫಲ ವಾಪಸ್ ಪಡೆಯಿತು. ಆದರೆ, ರಾಜ್ಯ ಸರ್ಕಾರ ತನ್ನ ಮೊಂಡುತನದಿಂದ ಯಾವುದೇ ಕಾಯಿದೆಯನ್ನು ವಾಪಸ್ ಪಡೆಯದೆ ಅದನ್ನೇ ಮುಂದುವರೆಸಿದ ಹಿನ್ನೆಲೆಯಲ್ಲಿ ಎಪಿಎಂಸಿಗೆ ಬರುತ್ತಿದ್ದ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಆರೋಪ ಮಾಡಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ವಿಶ್ವ ವಿಖ್ಯಾತಿ ಮಾವಿನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮಾವು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬದುಕು ಕಟ್ಟಿಕೊಳ್ಳಲು ಬರುವ ಕೂಲಿ ಕಾರ್ಮಿಕರು, ವರ್ಷಪೂರ್ತಿ ಬೆವರು ಸುರಿಸಿ ಮನೆ ಮಕ್ಕಳಂತೆ ಸಾಕುವ ರೈತರು, ಆರೋಗ್ಯದಿಂದ ಬಂದು ಅನಾರೋಗ್ಯ ಪೀಡಿತರಾಗಿ ಮನೆಗೆ ವಾಪಸ್ ಹೋಗುವ ಮಟ್ಟಕ್ಕೆ ಮಾರುಕಟ್ಟೆ ವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪ ಮಾಡಿದರು.
ಈ ಕಾಯಿದೆಯಿಂದ ಎಪಿಎಂಸಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಜೊತೆಗೆ ಯಾರ್ಡ್‍ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವರ್ತಕರು ಎಪಿಎಂಸಿ ಆಡಳಿತ ಮಂಡಳಿಯ ಕೈತಪ್ಪಿ ತಮಗಿಷ್ಟ ಬಂದ ರೀತಿ ವ್ಯಾಪಾರ ಮಾಡುವ ಮೂಲಕ ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿರುವ ಜೊತೆಗೆ ಮಾರುಕಟ್ಟೆಗೆ ವರ್ತಕರು ಪಾವತಿಸುತ್ತಿದ್ದ ಸೆಸ್ ಶೇ.1.5 ರಿಂದ ಶೇ.0.60ಕ್ಕೆ ಇಳಿಕೆ ಮಾಡಿ ಎಪಿಎಂಸಿಯಿಂದ ಹೊರಗಡೆ ವ್ಯಾಪಾರ ಮಾಡುವ ಮುಖಾಂತರ ಪಾವತಿಸಬೇಕಾದ ಸೆಸ್ ಹಣಕ್ಕೂ ಹೊಡೆತ ಬಿದ್ದಿದೆ ಎಂದು ಹೇಳಿದರು.
ರೈತರ ನಿರೀಕ್ಷೆಯಂತೆ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಕೂಡಲೇ ಎಪಿಎಂಸಿ ಕಾಯಿದೆಯನ್ನು ವಾಪಸ್ ಪಡೆದು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ಧಿಪಡಿಸುವ ಜೊತೆಗೆ ವರ್ತಕರ ಮೇಲೆ ವಿಧಿಸುತ್ತಿರುವ ಸೆಸ್ ಶೇ.1.5ಕ್ಕೆ ಏರಿಕೆ ಮಾಡಬೇಕು. ಮಾವು ಮಾರುಕಟ್ಟೆಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಆಲವಾಟ ಶಿವ, ಶೇಕ್ ಶಫಿಉಲ್ಲಾ, ವೆಂಕಟ್ ಮುಂತಾದವರಿದ್ದರು.

ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯ “ಮುದ್ದು ಯೇಸು2022-23” ರರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪುರ,ಜೂನ್ 4 : ಜನನುಡಿ ಡಾಟ್ ಕಾಮ್ ಸುದ್ದಿ ಸಂಸ್ಥೆಯಿಂದ ಏರ್ಪಡಿಸಿದ ಮುದ್ದು ಯೇಸು ಫೋಟೊ ಸ್ಫರ್ಧೆಯ ವಿಜೇತರಿಗೆ ಕೋಟೆಶ್ವರ ಕಟ್ಕರೆಯ ಬಾಲ ಯೇಸುವಿನ ಆಶ್ರಮದಲ್ಲಿ ಮತ್ತು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಗುರುವಾರದಂದು ಬಾಲ ಯೇಸುವಿನ ನೊವೆನಾ ದಿವಸ ವಿಜೇತರಿಗೆ ಶುಕ್ರವಾರದಂದು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಕಟ್ಕೆರೆ ಬಾಲಯೇಸುವಿನ ಆಶ್ರಮದಲ್ಲಿ,ಆಶ್ರಮದ ನೂತನ ಮುಖ್ಯಸ್ಥರಾದ ವಂ|ಪ್ರವೀಣ್ ಪಿಂಟೊ ಮತ್ತು ಧರ್ಮಗುರು ವಂ|ಜೋ ತಾವ್ರೊ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಿದರು. ಶುಕ್ರವಾರ ಸಂಜೆ ರೋಜರಿ ಚರ್ಚಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಹಣವನ್ನು ವಿತರಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕುಂದಾಪುರದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಪೋಷಕಿಯರಲ್ಲಿ ಒಬ್ಬರಾದ ಶಾಂತಿ ಪಿಂಟೊ ಮತ್ತು ಇತರು ಉಪಸ್ಥಿತರಿದ್ದರು.

  ಜನನುಡಿ ಸುದ್ದಿ ಸಂಸ್ಥೆಯ ಸಂಪಾದಕರಾದ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿಧನ್ಯವಾದಗಳನ್ನು ಅರ್ಪಿಸಿದರು. ಸ್ಫರ್ಧೆಯ ಸಂಯೋಜಕಿ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.

ಮುದ್ದು ಯೇಸು ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಸ್ರೂರಿನ ವೆನೋರಾ ಡಿಸೋಜಾ ಪ್ರಥಮ ಸ್ಥಾನ ಪಡೆದರೆ,ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಇಯನ್ ಜಿತ್, ಡೆದರು, ತ್ರತೀಯ ಸ್ಥಾನವನ್ನು ಕುಂದಾಪುರದ ಎಡೆನ್ ಡಿಆಲ್ಮೇಡಾ ಪಡೆದುಕೊಂಡನು. ಕೋಟದ ಡೀಯೊರ್ ಸಾಶಾ ಡಾಯಾಸ್, ಕೋಟೆಶ್ವರದ ಅಮೋಸ್ ಥೋಮಸ್ ಡಿಮೆಲ್ಲೊ ಮತ್ತು  ಪೇತ್ರಿಯ ಈವಾ ಎಂಜೆಲ್ ಡಿಸೋಜಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.

2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಕುಂದಾಪುರದ ಸಾನಿಯಾ ಡಿಮೆಲ್ಲೊ ಪ್ರಥಮ ಸ್ಥಾನ ಪಡೆದಳು. ದ್ವಿತೀಯ ಸ್ಥಾನವನ್ನು ಕುಂದಾಪುರದ ಅಲೈನಾ ಎಬ್ರಿಲ್ ಫೆರ್ನಾಂಡಿಸ್ ಪಡೆದುಕೊಂಡನು, ತ್ರತೀಯ ಸ್ಥಾನವನ್ನು ಕುಂದಾಪುರದ ಮಹಿಮಾ ವಿಯಾನ್ನಾ ಬರೆಟ್ಟೊ ಪಡೆದುಕೊಂಡಳು. ಗಂಗೊಳ್ಳಿಯ ಒನೀಲ್ ಜೂಡ್ ರೆಬೆಲ್ಲೊ, ಮೂಡುಬಿದ್ರೆ ಕಲ್ಲಾ ಬೆಟ್ಟುವಿನ ಆನ್ (Ann) ಕಾರ್ಡೊಜಾ, ಮತ್ತು ಹಂಗಾರಕಟ್ಟೆಯ ಸೆಲ್ವಿಟಾ ಡಿಆಲ್ಮೇಡಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡರು.

ಈ ಸಾಲಿನ ಸ್ಪರ್ಧೆಯು ಮಾಧ್ಯಮದ ಮೂಲಕ ಸಾರ್ವಜನಿಕರು ಮೆಚ್ಚುಗೆ ಪಡೆದ ಮಕ್ಕಳನ್ನು ಜನನುಡಿ ಮುದ್ದು ಯೇಸು ಸ್ಫರ್ಧೆಯಲ್ಲಿ ವಿಜೇತರನ್ನಾಗಿ ಆರಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜನನುಡಿ ಸುದ್ದಿ ಸಂಸ್ಥೆಯಿಂದ ಧನ್ಯವಾದಗಳು, ವಿಜೇತರಾದ ಮುದ್ದು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಜನನುಡಿ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳು.ಹಾಗೇ ಈ ಸ್ಫರ್ಧೆಗೆ ಪೋಷಕರಾದ ಮಂಜೀತ್ ನಾಗರಾಜ್, ಸಮಾಜ ಸೇವಕರು ಉದ್ಯಮಿ, ಕಿರಣ್-ಜೆಸ್ವಿನಾ ಜಿತ್ ಎನ್ರೆಸ್ಪೊಟೆಕ್ನೊಲೊಜೀಸ್ ಬೆಂಗಳೂರು, ರೋಜರಿ ಕ್ರೆಡಿಟ್ ಕೋ.ಆಪ್. ಸೊಸೈಟಿ ಲಿಮಿಟ್. ಡಾ.ರೊಬರ್ಟ್ ರೆಬೆಲ್ಲೊ ಐವನ್ ಆಲ್ಮೇಡಾ, ವಸಂತ ಬೇಕರಿ,ಕುಂದಾಪುರ, ಶ್ರೀಮತಿ ಶಾಂತಿ ಪಿಂಟೊ, ಮತ್ತು ಕುಟುಂಬ ಕುಂದಾಪುರ, ಸೀತಾರಾಮ್ ಶೆಟ್ಟಿ, ಕುಂದಾಪುರ. ಶ್ರೀಮತಿ ವನೀತಾ ಬರೆಟ್ಟೊ/ಶ್ರೀ ವಿನ್ಸೆಂಟ್ ಬರೆಟ್ಟೊ ಮತ್ತು ಅಂಟೋನಿ ಲುವಿಸ್ ಮಣಿಪಾಲ  ಇವರಿಗೆ  ತುಂಬು ಹ್ರದಯದಿಂದ ಸುದ್ದಿ ಸಂಸ್ಥೆ ಕ್ರತ್ಞಜತೆಗಳನ್ನು  ಸಲ್ಲಿಸಿಸುತ್ತಿದೆ.