ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಕಾರ್ಯಕ್ರಮ


ಶಿರ್ವ: ಮಂಗಳೂರಿನ ಪ್ರತಿಷ್ಠಿತ ಗ್ಲೋಟಚ್ ಟೆಕ್ನಾಲಜೀಸ್ ಸಂಸ್ಥೆಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವೂ ಈಗಾಗಲೇ ಬಿಸಿಎ, ಬಿಎಸ್ಸಿ (ಸಿ.ಎಸ್),ಬಿಇ(ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿಕಾಂ( ಕಂಪ್ಯೂಟರ್ ಅಪ್ಲಿಕೇಶನ್), ಡಿಪ್ಲೋಮಾ(ಸಿಎಸ್),ಎಂಎಸ್ಸಿ (ಸಿಎಸ್), ಎಂಸಿಎ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಶಿರ್ವ ಸಂತ ಮೇರಿ ಕಾಲೇಜಿನ ಗಣಕ ವಿಜ್ಞಾನ ವಿಭಾಗ ವತಿಯಿಂದ ಜೂನ್ 1 ರಂದು ಕಾಲೇಜಿನ ಫಾ. ಹೆನ್ರಿ ಕ್ಯಾಸ್ಟಲಿನೊ ಸಭಾಂಗಣದಲ್ಲಿ ನಡೆಯಿತು.
ಇದು ಸ್ಪರ್ಧಾತ್ಮಕ ಯುಗ ಎಂದು ತಿಳಿದಿದೆ ಶಿಕ್ಷಣದ ಜೊತೆಗೆ ಪ್ರತಿಯೊಬ್ಬ ಅಭ್ಯರ್ಥಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಕೌಶಲಗಳನ್ನು ಕಲಿತು ಉದ್ಯೋಗವನ್ನು ಪಡೆಯಲು ಹಾಗೂ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು
ಗ್ಲೋಟಚ್ ಟೆಕ್ನಾಲಜೀಸ್ ನ ಟ್ಯಾಲೆಂಟ್ ಅಕ್ವೇಶನ್ ಮ್ಯಾನೇಜರ್ ಎಚ್.ಆರ್ ಶ್ರೀ ಎಬಿನೇಜರ್ ರಾಜಾರವರು ಅಭ್ಯರ್ಥಿಗಳನುದ್ದೇಶಿಸಿಮಾತನಾಡಿದರು.
ಇಂದಿನ ಕಾಲದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಳು ಲಭ್ಯವಿದ್ದು ಅದರ ಮಾಹಿತಿಯನ್ನು ಸೂಕ್ತವಾಗಿ ಪಡೆದು – ಸೂಕ್ತ ತಯಾರಿಕೆಯನ್ನು ಮಾಡಿಕೊಂಡು ಇಂತಹ ಸಂದರ್ಶನಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬೇಕಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ | ಹೆರಾಲ್ಡ್ ಐವನ್ ಮೋನಿಸ್ ರವರು ಶುಭ ಹಾರೈಸಿದರು.
ಇಂದು ಸಂವಹನ ಕೌಶಲ್ಯಗಳ ಮಹತ್ವವನ್ನು ಅಭ್ಯರ್ಥಿಗಳು ಅರಿತುಕೊಂಡು ಇಂತಹ ಸಂದರ್ಶನಕ್ಕೆ ಭಾಗವಹಿಸಿ ಉದ್ಯೋಗ ಪಡೆಯಬೇಕು ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಶ್ರೀ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಗ್ಲೋಟಚ್ ಟೆಕ್ನಾಲಜೀಸ್ ಸಂಸ್ಥೆಯ ಸೀನಿಯರ್ ಅನಲಿಸ್ಟ್ ಟ್ಯಾಲೆಂಟ್ ಅಕ್ವೇಶನ್ ಶ್ವೇತಾ, ಪ್ರಮುಖ ತರಬೇತುದಾರ ಶ್ರೀಜೀತ್, ಉಪನ್ಯಾಸಕಿ ದಿವ್ಯಶ್ರೀ ಬಿ ,ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಅನುಪ್ ನಾಯಕ್ ಸಹಕರಿಸಿದರು.
ಕು. ಸುಪ್ರಿಯಾ ಮುಗೇರಾಯ ಮತ್ತು ಬಳಗ ಪ್ರಾರ್ಥಿಸಿ,ಕು. ರಕ್ಷಿತಾ ವಂದಿಸಿದರು. ಕು. ಚಂದನ ಸ್ವಾಗತಿಸಿ, ಕು. ಹರ್ಷಿತ ಕಾರ್ಯಕ್ರಮ ನಿರೂಪಿಸಿದರು
.

ಕುಂದಾಪುರ ಸೈಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಆರಂಭೋತ್ಸವ


ಕುಂದಾಪುರ : ಕುಂದಾಪುರದ ಪ್ರತಿಷ್ಠಿತ ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ 2023-24 ನೇ ಸಾಲಿನ ಶಾಲಾ ಆರಂಭೋತ್ಸವವನ್ನು ಸಂಭ್ರಮದಿಂದ ನರವೇರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿಯರು ಹಾಗೂ ವಿದ್ಯಾರ್ಥಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು. ತಳಿರು-ತೋರಣ,ಬಲೂನು ಕಟ್ಟಿ, ಬ್ಯಾಂಡಿನೊಂದಿಗೆ ಭವ್ಯ ಮೆರವಣೆಯ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ, ಸೈಂಟ್ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ವಿದ್ಯಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಬಲೂನ್ ಹಾಗೂ ವಾದ್ಯದೊಂದಿಗೆ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡರು. ವಿದ್ಯಾರ್ಥಿಗಳಿಗೆ ಪಾಯಸದೊಂದಿಗೆ ಬಿಸಿಯೂಟ ನೀಡಲಾಯಿತು.

ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಗಳ ಪ್ರಾರಂಭೋತ್ಸವ


ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು. ತಳಿರು-ತೋರಣ,ಬಲೂನು ಕಟ್ಟಿ ಬ್ಯಾಂಡ್ ಸದ್ದಿನೊಂದಿಗೆ ಭವ್ಯ ಮೆರವಣೆಯ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ, ಸೈಂಟ್ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್ ವಿದ್ಯಾರ್ಥಿಗಳಿಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಹಿರಿಯ ಶಿಕ್ಷಕ ಭಾಸ್ಕರ್ ಗಾಣಿಗ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಎಂಐಟಿಕೆ ಮೂಡ್ಲಕಟ್ಟೆ ವಿದ್ಯಾರ್ಥಿಗಳ ಪ್ರಾಜೆಕ್ಟ್‍ಗಳಿಗೆ KSCST ಅನುದಾನ

KSCST 2022-23  ನೇ ಸಾಲಿಗೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಕುಂದಾಪುರ ಇದರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಮೂರು ಪ್ರಾಜೆಕ್ಟ್ ಪ್ರಸ್ತಾವನೆಗಳು ಅನುದಾನವನ್ನು ಪಡೆದಿವೆ.
ಎಲೆಕ್ಟ್ರಾನಿಕ್ಸ್ ವಿಭಾಗದ ಸುಮನ್ ಕಾನ್ ಆರ್ ಬಾಗೇವಾಡಿ, ಪ್ರಥಮ ರಾಜೇಶ್ ರಾಯ್ಕರ್, ವೀರೇಂದ್ರ ಪಿ ಗೌಡರ್, ರಘು ಬಿ ನಾಯ್ಕರ್ “ಐಒಟಿ ಬಳಸಿ ಟ್ರಾನ್ಸ್‌ಫಾರ್ಮರ್ ಹೆಲ್ತ್ ಮಾನಿಟರಿಂಗ್ ಸಿಸ್ಟಮ್” ಎಂಬ ತಮ್ಮ ಯೋಜನೆಯ ಪ್ರಸ್ತಾವನೆಗೆ ಅನುದಾನವನ್ನು ಪಡೆದರು. ಈ ಯೋಜನೆಗೆ ಪ್ರೊ.ವರುಣ ಕುಮಾರ, ಪ್ರೊ.ಅಕ್ಷತಾ ನಾಯಕ್ ಮಾರ್ಗದರ್ಶಕರಾಗಿದ್ದರು.ಅಮರ್ ಸಿ ಬಾಲಗಾಂವ್, ಅನಿಲ್ ಎನ್ ಟಿ, ಚಂದನ್ ಕುಮಾರ್ ಸಿ ಎನ್, ವಿಷ್ಣುಮೂರ್ತಿ ನಾಯಕ್ ಅವರು ಪ್ರೊ ವರುಣ್ ಕುಮಾರ್ ಹಾಗೂ ಪ್ರೊ. ಅಕ್ಷತಾ ನಾಯಕ್ ಅವರ ಮಾರ್ಗದರ್ಶನದಲ್ಲಿ “ಕುಂದಾಪುರ ನಗರ ಪಾಲಿಕೆಗಳಲ್ಲಿ ದಕ್ಷ ಘನತ್ಯಾಜ್ಯ ನಿರ್ವಾಹಕರಿಗೆ ಸ್ವಯಂಚಾಲಿತ ಘನ ತ್ಯಾಜ್ಯ ವಿಂಗಡಣೆ ವ್ಯವಸ್ಥೆ” ಎಂಬ ಪ್ರಾಜೆಕ್ಟ್ ತಯಾರಿಸಿದ್ದು ಈ ಪ್ರಾಜೆಕ್ಟ್ ರಾಷ್ಟ್ರ ಮಟ್ಟದಲ್ಲಿ ನಡೆದ ಸ್ಪರ್ದೆಯಲ್ಲಿ ಉತ್ತಮ ಭವಿಷ್ಯದ ತಂತ್ರಜ್ಞಾನ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಪ್ರಜ್ವಲ್ ಸುರೇಂದ್ರ ನಾಯ್ಕ್, ಸುಷ್ಮಾ ಜಿ, ನವ್ಯಾ ಎಂ, ದೀಪಕ್ ಅವರು ಪ್ರೊ.ರಘುನಾಥ ಮತ್ತು ಪ್ರೊ.ವರುಣಕುಮಾರ ಅವರ ಮಾರ್ಗದರ್ಶನದಲ್ಲಿ ಮಣ್ಣಿನಲ್ಲಿರುವ ಸಾರಜನಕ, ರಂಜಕ, ಹಾಗೂ ಪೊಟ್ಯಾಶಿಯಮ್ ಒಟ್ಟಿಗೆ ನೀರಿನ ಪ್ರಮಾಣವನ್ನು ಸೆನ್ಸಾರ್ ಉಪಯೋಗಿಸಿ ಪತ್ತೆ ಹಚ್ಚುವುದು ಮತ್ತು ಸಸ್ಯಗಳ ರೋಗವನ್ನು ಸಿಎನ್ ಎನ್ ಹಾಗೂ ಯುಐ ಪಾತ್ ಸಹಾಯದಿಂದ ಪತ್ತೆಹಚ್ಚುವ ಪ್ರಾಜೆಕ್ಟ್ ಅನ್ನು ತಯಾರಿಸಿದ್ದು ಕ್ಯೂತ್ರೀ ಜರ್ನಲ್ಸ್ ಅಲ್ಲಿ ಇವರ ಪೇಪರ್ ಮುದ್ರಿತಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ವಿಧ್ಯಾರ್ಥಿಗಳ ಪರಿಶ್ರಮ ಹಾಗೂ ಯಶಸ್ಸಿಗೆ ಕಾಲೇಜಿನ ಅಧ್ಯಕ್ಷರಾದ ಶ್ರೀ ಸಿಧ್ದಾರ್ಥ ಜೆ ಶೆಟ್ಟಿ ಹಾಗೂ ಸಿಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

The Annual Feast of World Renowned St Anthony the wonder worker of Dornahalli 13 June 2023 

The worldwide known Annual Feast of St Anthony Basilica Dornahalli will be celebrated on tuesday 13 June 2023 .As a preparation for the feast nine days novenas will be held from 4 june 2023. 

The flag hoisting ceremony after which the novena begins, will be held at 5.30 pm on June 4. The Eucharistic celebration will be celebrated by Most Rev Dr Bernard Moras (Apostolic Administrator ,diocese of Mysore) on the day. The Holy Eucharistic celebration on days of novena would be in english at 7am and kannada at 11am and 5.30pm.

Most Rev.Dr.Thomas A Vazhapilly ,Bishop Emeritus,diocese of Mysore, will celebrate the Mass on June 5, Rev Msgr  Alfred J Mendonca, Vicar General, diocese of Mysore, on June 6, Rev.Fr Prasanna Kumar OCD, Parish Priest, St Michael’s church Bellur, on June 7, Rev.Fr Anthonppa C, Parish Priest ,St Paul’s church, Chamarajanagar , on June 8, Rev.Fr Arun Rayappa , Director ,Pallotti Shanthidhama, Dornahallli, on June 9,  Rev.Fr Martin M , Parish Priest, St Sebastine’s church Kushalnagar on June 10 , Rev.Fr Roxan Thomas Baros, Administrator ,St Joseph’s Nursing Institutions Mysuru on 11 June and Rev.Fr Lourdu Prasad ,Parish Priest St Joseph’s church Mandya on 12 June . The Eucharistic celebrations will be celebrated along with novenas.

On 13 June 2023 Tuesday feast day eucharistic celebrations will commence from 5 am upto 5.30 pm . The festive high mass would be in kannada language at 10 am by Rev.Dr Bernard Moras (Apostolic Administrator ,diocese of Mysore). Rev. Fr N T Joseph ,Rector, St Anthony’s Basilica ,Dornahalli at 5am in kannada , Rev Fr Sanjay Kumar Administrator, St Joseph’s Hospital Mysore at 6am in kannada, Rev.Fr Edward William Saldanha Parish Priest St Mary’s church ,H.D Kote at 7am in english, Rev.Fr Chinnappa Parish Priest ,Mother of Humanity church Mandya at 8am in kannada ,Rev.Fr Vincent M Parish Priest, O.L of Perpetual Succor church , Srirampura at 11.30am in tamil , Rev.Fr Valentine R Kumar Parish Priest, Holy Family church ,Hinkal at 1pm in english , Rev.Fr Gnanapragasam , Parish Priest ,O.L of Presentation church Mariamangalam at 3pm in kannada , Rev.Fr George Deepak ,Parish Priest St Michael’s church , Madikeri at 4pm in kannada , Rev.Fr Michael Mari A , Parish Priest, St.Joseph’s church , Siddapura in  kannada at 5.30pm followed by the Car Procession and Benediction of the Holy Eucharist.

You are cordially invited by ,

Rev.Fr N T Joseph (Rector, St Anthony’s Basilica, Dornahalli) and Rev.Fr Praveen Prabhu (Administrator , St Anthony’s Basilica Dornahalli  Asst Parish Priest , Religious Sisters and Parishoners

ವ್ಯವಹಾರದಲ್ಲಿನ ಅಡೆತಡೆಗಳ ನಿವಾರಣೆಯ ಕುರಿತು ಮೈಕಲ್‌ ಡಿಸೋಜಾರಿಂದ ವಿಚಾರ ಸಂಕಿರಣ

ಮಂಗಳೂರು, ಮೇ 29: ರಚನಾ, ಕ್ಯಾಥೋಲಿಕ್‌ ಚೇ೦ಬರ್‌ ಆಫ್‌ ಕಾಮರ್ಸ್‌ ಲ್ಯಂಡ್‌ ಇಂಡಸ್ಟ್ರಿ ಇದರ ವತಿಯಿಂದ ಮಂಗಳೂರು ಕ್ಷಬ್‌ನಲ್ಲಿ 28 ಮೇ 2023ರಂದು ಸಂಜೆ 7 ಗಂಟೆಗೆ ಸದಸ್ಯರ ಸಭೆಯನ್ನು ನಡೆಸಲಾಯಿತು. ಎನ್‌ಆರ್‌ಐ ಉದ್ಯಮಿ ಶ್ರೀ ಮೈಕೆಲ್‌ ಡಿಸೋಜಾ ಮುಖ್ಯ ಅತಿಥಿ ಮತ್ತು ಪ್ರಮುಖ ಭಾಷಣಕಾರರಾಗಿದ್ದರು.           ಶ್ರೀ ಮೈಕಲ್‌ ಡಿಸೋಜರವರು ಪರಿಶ್ರಮದ ಶಕ್ತಿ ಮತ್ತು ವ್ಯವಹಾರದ ಮೂಲಕ ವಿಪತ್ತುಗಳನ್ನು ನಿವಾರಿಸುವ ಬಗ್ಗೆ. ಪುತ್ತೂರಿನ ಪುಟ್ಟ ಊರಿನಿಂದ ಬಂದ ತಮ್ಮ ಜೀವನ ಪಯಣದ ಬಗ್ಗೆ ಮಾತನಾಡಿದರು. ಇವರು ತಮ್ಮ ಸಣ್ಣ ವಯಸ್ಸಿನಲ್ಲಿ ತಮ್ಮ ವ್ಯಾಪಾರವನ್ನು ಪ್ರಾರಂಭಿಸಿದರು. ನಂತರ ಯುಎಇಯಲ್ಲಿನ ವ್ಯಾಪಾರ ಸಾಮರ್ಥ್ಯದ ಬಗ್ಗೆ ಮಾರುಕಟ್ಟಿ ಅಧ್ಯಯನವನ್ನು ನಡೆಸಿ, ಸ್ಥಳೀಯರ ಸಹಾಯದಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸ್ಹಂತ ವ್ಯವಹಾರವನ್ನು ಪ್ರಾರಂಭಿಸಿ. ವ್ಯಾಪಾರದಲ್ಲಿ ಹೂಡಿಕೆ ಮಾಡಿದರು. ನಂಬಿಗಸ್ತ ಜನರು ದೊಡ್ಡ ಪ್ರಮಾಣದಲ್ಲಿ ವಂಚಿಸಿದಾಗ ಧೈರ್ಯಗುಂದದೆ, ವ್ಯಾಪಾರವನ್ನು ಪುನರಾಂಭಿಸಿದರು. ಅವರ ಧರ್ಮಪತ್ನಿ ಶ್ರೀಮತಿ ಫ್ಲೇವಿಯವರ ಸಹಾಯದಿಂದ ಮುನ್ನಡೆದುದರ ಮಾತನಾಡಿದರು. ಸಭಿಕರಲ್ಲಿ ನೆರೆದಿದ್ದ ಯುವ ಉದ್ಯಮಿಗಳಿಗೆ “ನಿಮ್ಮ ವ್ಯವಹಾರವು ಆರ್ಥಿಕ ಪಾರದರ್ಶಕತೆಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ, ನಿಮ್ಮ ಕೆಲಸದ ಬಗ್ಗೆ ಜ್ಞಾನ ಮತ್ತು ಹಣಕಾಸಿನ ಸರಿಯಾದ ನಿರ್ವಹಣೆ ವ್ಯವಹಾರದಲ್ಲಿ ಯಶಸ್ಸಿಗೆ ಪ್ರಮುಖವಾಗಿದೆ. ನಿಮ್ಮ ವ್ಯವಹಾರ       ವಿಫಲವಾದರೂ ನಿಮ್ಮ ಹೆಸರು ಖ್ಯಾತಿಯಲ್ಲಿರಬೇಕು’ ಎ೦ಬ ಸಲಹೆ ನೀಡಿದರು. ರಚನಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿನ್ಸೆಂಟ್‌ ಕುಟಿನ್ಹಾ ಸ್ವಾಗತಿಸಿ, ಉಪಾಧ್ಯಕ್ಷ ಸಿಎ ರುಡಾಲ್ಫ್‌ ರೋಡ್ರಿಗಸ್‌ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯರಾದ ಶ್ರೀ ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಶ್ರೀಮತಿ  ಯುಲಾಲಿಯಾ ಡಿಸೋಜಾ ವಂದಿಸಿದರು. ಭೋಜನದೊಂದಿಗೆ ಸಭೆ ಮುಕ್ತಾಯವಾಯಿತು.