ಕೋಲಾರ ಜಿಲ್ಲೆ ಕಾಂಗ್ರೆಸ್ ಮುಖಂಡರಿಂದ ಅಭಿನಂದನೆ : ಸಿಎಂ ಆಯ್ಕೆಯಲ್ಲಿ ಗೊಂದಲವಿಲ್ಲ-ಕೆ.ಎಚ್.ಮುನಿಯಪ್ಪ

ಕೋಲಾರ:- ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಳಿಸುವ ಜನರ ನಿರ್ಧಾರ ಕೈಗೂಡಿದ್ದು, ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಸಿಎಂ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ದೇವನಹಳ್ಳಿ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಜಯಭೇರಿ ಬಾರಿಸಿದ ಹಿನ್ನಲೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿ ಸಿಹಿ ತಿನ್ನಿಸಿ ಸನ್ಮಾನಿಸಿ ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ದೇವನಹಳ್ಳಿಯ ಮತದಾರರು ನನ್ನನ್ನು ಬೆಂಬಲಿಸಿ ಗೆಲುವು ನೀಡಿದ್ದಾರೆ, ಅವರಿಗೆ ನಾನು ಋಣಿಯಾಗಿದ್ದೇನೆ ಎಂದ ಅವರು, ಸದಾ ಅವರ ಸೇವೆಗೆ ಸಿದ್ದನಿದ್ದು, ಈ ಭಾಗದ ಅಭಿವೃದ್ದಿಗೆ ನನ್ನ ಶಕ್ತಿ ಮೀರಿ ಶ್ರಮ ಹಾಕುವುದಾಗಿ ಘೋಷಿಸಿದರು.
ನನ್ನ ಸ್ವಂತ ಜಿಲ್ಲೆಯಾದ ಕೋಲಾರ ಜಿಲ್ಲೆಯಲ್ಲೂ ಕಾಂಗ್ರೆಸ್‍ಗೆ ಉತ್ತಮ ಮನ್ನಣೆ ಸಿಕ್ಕಿದೆ ಎಂದ ಅವರು, ಈಗ ಸಿಕ್ಕಿರುವ ಅಧಿಕಾರ ತಲೆಗೆಹತ್ತದಂತೆ ನಾನು ಇದೊಂದು ಜವಾಬ್ದಾರಿ ಎಂದು ಅರಿತು ಕೆಲಸ ಮಾಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಸುಭದ್ರ ಸರ್ಕಾರ ನೀಡಲಿದೆ, ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಖಂಡಿತಾ ಈಡೇರಿಸುತ್ತೇವೆ ಎಂದ ಅವರು, ರಾಜ್ಯದ ಮತದಾರರಿಗೆ, ಪಕ್ಷದ ಹೈಕಮಾಂಡ್ ನಾಯಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಎಸ್ಸಿಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್, ಮುಖಂಡ ರಾಮಪ್ರಸಾದ್ ಸೇರಿದಂತೆ ಕೋಲಾರದ ಜಿಲ್ಲೆಯ ಹಲವಾರು ಮುಖಂಡರು ಹಾಜರಿದ್ದು, ಶುಭ ಕೋರಿದರು.

ಕೋಲಾರದಿಂದ ಶ್ರೀನಿವಾಸಪುರಕ್ಕೆ ಬಂದ ಜೆಡಿಎಸ್ ವಿಜೇತ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿಗೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತ

ಶ್ರೀನಿವಾಸಪುರ: ಕೋಲಾರದಿಂದ ಶ್ರೀನಿವಾಸಪುರಕ್ಕೆ ಬಂದ ಜೆಡಿಎಸ್ ವಿಜೇತ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಪಟ್ಟಣದ ಹೊರವಲಯದ ವೇಣು ವಿದ್ಯಾಸಂಸ್ಥೆ ಸಮೀಪ ಬರುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಮತದಾರರಿಗೆ ಕೃತಜ್ಞತೆ ಅರ್ಪಿಸಿ ಮಾತನಾಡಿ, ‘ಇದು ನನ್ನ ಗೆಲುವಲ್ಲ. ಸಮಾಜದ ಎಲ್ಲ ವರ್ಗದ ಸ್ವಾಭಿಮಾನಿ ಮತದಾರರ ಗೆಲುವು. ಕ್ಷೇತ್ರದ ಸರ್ವಜನಾಂಗದ ಗೆಲುವು. ಈಗ 144ನೇ ಸೆಕ್ಷನ್ ಜಾರಿಯಲ್ಲಿದೆ. ನಾಲ್ಕೈದು ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಅರ್ಪಿಸಲಾಗುವುದು. ಗಲಾಟೆಗೆ ಆಸ್ಪದ ನೀಡಬಾರದು ಎಂದು ಹೇಳಿದರು. ಎಂದು ಹೇಳಿದರು.
ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಶೇಷಾಪುರ ಗೋಪಾಲ್, ಗಾಯಿತ್ರಿ ಮುತ್ತಪ್ಪ ಇದ್ದರು.

ಕಾಂಗ್ರೆಸ್ ಬಹುಮತ ಪಡೆದು ಪಕ್ಷ ಸರಕಾರ ರಚನೆಯತ್ತ ಬಿಜೆಪಿಯ ಮೇಲೆ ರೋಸಿ ಹೋದ ಜನ, ಜೆಡಿಸ್ ಬ್ಲ್ಯಾಕ್ ಮೈಲ್ ತಂತ್ರ ವಿಫಲ

ಕಾಂಗ್ರೆಸ್ ಬಹುಮತ ಪಡೆದು ಪಕ್ಷ ಸರಕಾರ ರಚನೆಯತ್ತ ಧಾಪುಕಾಲು ಹಾಕುತ್ತಿದೆ. ನಾವು ಜನನುಡಿ. ಸುದ್ದಿ ಸಂಸ್ಥೆ ಹೇಳಿದಂತೆ ೧೩೦ ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿತ್ತು, ಈಗ ಇದನ್ನು ದಾಟಿ ಹೆಚ್ಚಿನ ಬಹುಮತ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ಯ ಜನ ವೀರೊಧಿ ನೀತಿ ಬಿಜೆಪಿ ಗೆ ಮುಳುವಾಗಿದೆ.

ಮೇಲಿನ ಫೋಟೊಗಳು ಬೆಂಗಳೂರುರಿನ್ ಕಾಂಗ್ರೆಸ್ ಪಕ್ಷದ ವಾರ್ ರೂಮಿನನವು. ಇವರು ಚುನಾವಣೆ ಪ್ರಕ್ರಿಯೆ ಆರಂಭವಾಗಿದನಿಂದ ನಿರಂತರ ಪಕ್ಷಕ್ಕಾಗಿ ದುಡಿಯುತಿತ್ತು.

ಜಾತ್ಯಾತೀತ ಪಕ್ಷ ಎಂದು, ಕುಟುಂಬ ರಾಜಾಕರಣ ಮಾಡುತ್ತೀರುವ ಜೆಡಿಎಸ್ ಇಬ್ಬರ ಜಗಳ ಮೂರನೇಯವನ ಆಧಾಯ ಎಂದು ಎಣಿಸಿಕೊಳ್ಳುತಿದ್ದ ಪಕ್ಷಕ್ಕೆ ಅತ್ಯಂತ ಹೀನಾಯವಾದ ಹಿನ್ನೆಡೆ ಆಗಿದೆ.

2023 ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದತ್ತ

2023 ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಎಣಿಕೆಯಲ್ಲಿ ನಿಚ್ಚಳ ಬಹುಮತದತ್ತ ಸಾಗಿದೆ, ಮೇಜಿಕ್ ನಂಬರ್ ೧೧೩ ಸೀಟು ದೊರಕಬೇಕಾಗಿದ್ದು, ಕಾಂಗ್ರೆಸ್ ಪಕ್ಷ ಅದನ್ನು ದಾಟಿ ಮುಂದವರೆಯುತ್ತಿದೆ.

ಕಾಂಗ್ರೆಸ್ ಪಕ್ಷ ಹೆಚ್ಚಿನ ಕಡೆಗಳಲ್ಲಿ ಮತಗಳ್ ಏನಿಕೆಯಲಿ ಮುಂದಿದ್ದು, 130 ಸೀಟುಗಳನ್ನು ಪಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತವರಣ ಕೂಡಿದ್ದು, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೆಲವಡೆ ವಿಜಯೋತ್ಸವ ಆಚರಿಸುತಿದ್ದಾರೆ.

ಬಿಜೆಪಿ ಸೋಲಿನ ಸುಳಿವಿನಲ್ಲಿ ಸಿಕ್ಕಿ ಹಾಕಿಕೊಂಡತ್ತಿದೆ.

ಯಮದೂತ ಟಿಪ್ಪರ್, ಕಾರಿಗೆ ಡಿಕ್ಕಿ ಅತ್ತೆ ಮತ್ತು ಸೊಸೆ ದಾರುಣ ಸಾವು

ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ಸಮೀಪ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅತ್ತೆ ಮತ್ತು ಸೊಸೆ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತಿದ್ದರು. ಮೃತಪಟ್ಟವರು ಬಾಳ್ಳು ಪೇಟೆಯ ಕಾಫಿ ಪ್ಲಾಂಟರ್ ಮತ್ತು ಸಹ್ಯಾದ್ರಿ ಥಿಯೇಟರ್ ಮಾಲಕರಾಗಿದ್ದ ಮೈತ್ರಿದೇವಿ (70)  (ಬಿ.ಎಸ್. ಗುರುನಾಥ್ ಅವರ ಪತ್ನಿ) ಹಾಗೂ ಸೊಸೆ ಸೌಜನ್ಯ (48) ಎಂದು ತಿಳಿದುಬಂದಿದೆ.

ಬಿ.ಎಸ್. ಗುರುನಾಥ್ ಅವರ ಮಗಳ ಹೊಸ ಮನೆ ಗೃಹ ಪ್ರವೇಶಕ್ಕೆಂದು ಕಾರಿನಲ್ಲಿ ಹಾಸನದಿಂದ ದಾವಣಗೆರೆಗೆ ಹೋಗಿದ್ದರು ಎನ್ನಲಾಗಿದೆ. ಕಾರ್ಯಕ್ರಮ ಮುಗಿಸಿಕೊಂಡು ಹಾಸನಕ್ಕೆ ವಾಪಸ್ಸು ಬರುವಾಗ ಚನ್ನಗಿರಿ ಬಳಿ ಟಿಪ್ಪರ್‌ಲಾರಿ ವಾಹನದ ಚಾಲಕ ಅತಿ ವೇಗದಲ್ಲಿ ಓವರ್ ಟೇಕ್ ಮಾಡುವ ಅವಸರದಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿದೆ

ಈ ವೇಳೆ ಕಾರಿನಲ್ಲಿ ಮುಂಭಾಗ ಕುಳಿತಿದ್ದ ಬಿ.ಎಸ್. ಗುರುನಾಥ್ ಹಾಗೂ ಪುತ್ರ ರಾಜೇಶ್ ಇಬ್ಬರೂ ಸೇಫ್ಟಿ ಬೆಲ್ಟ್ ಹಾಕಿಕೊಂಡಿದ್ದರಿಂದ ಇಬ್ಬರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದದು.      

ಮೋಚಾ ಚಂಡಮಾರುತ ಅಪ್ಪಳಿಕೆ, ಇಂದು ರಾತ್ರಿ ತೀವ್ರ ಸ್ವರೂಪ ಪಡೆಯಲಿದೆ – ಕರ್ನಾಟಕದಲ್ಲಿ ಮಳೆ ಬರುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ (IMD) ಮೇ 6 ರಿಂದ ಬಂಗಾಳ ಕೊಲ್ಲಿಯಲ್ಲಿ (BOB) ರೂಪುಗೊಳ್ಳುವ ಸಂಭಾವ್ಯ ಸೈಕ್ಲೋನಿಕ್ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ. ಮೇ ತಿಂಗಳಲ್ಲಿ, BOB (ಬಂಗಾಳ ಕೊಲ್ಲಿ) ಸಾಮಾನ್ಯವಾಗಿ ಹಲವಾರು ಉಷ್ಣವಲಯದ ಚಂಡಮಾರುತಗಳನ್ನು ತರುತ್ತದೆ. ಕೆಲವು ವ್ಯಾಪಕ ಹಾನಿ ಮತ್ತು ನಷ್ಟವನ್ನು ಉಂಟುಮಾಡುತ್ತವೆ. IMD ಮತ್ತೊಮ್ಮೆ ಅಂತಹ ಘಟನೆಯ ಮುನ್ಸೂಚನೆ ನೀಡಿದ್ದ ‘ಮೋಚಾ’ ಚಂಡಮಾರುತ ಇಂದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಭಾರತೀಯ ಹವಾಮಾನ ಇಲಾಖೆ ಮೋಚಾ ಚಂಡಮಾರುತದ ಬಗ್ಗೆ ಇತ್ತೀಚಿನ ನವೀಕರಣವನ್ನು ಬಿಡುಗಡೆ ಮಾಡಿದೆ.

ಚಂಡಮಾರುತದ ಪರಿಣಾಮ ಹಲವು ರಾಜ್ಯಗಳಲ್ಲಿ ಕಂಡುಬರಲಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತ ಒಡಿಶಾ, ಬಂಗಾಳ ಮತ್ತು ಅಂಡಮಾನ್-ನಿಕೋಬಾರ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಆದ್ದರಿಂದ ಇಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಂಡಮಾರುತ ಪರಿಣಾಮ ಇಂದು ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು,
ಬಾಂಗ್ಲಾದೇಶ- ಮ್ಯಾನ್ಮಾರ್ ಗಡಿಯತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಮಧ್ಯಾಹ್ನ ಸುಮಾರಿಗೆ ಆಗ್ನೇಯ ದಿಕ್ಕಿನ ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಪೋರ್ಟ್‌ಬ್ಲೇರ್‌ನ ಪಶ್ಚಿಮ-ವಾಯುವ್ಯಕ್ಕೆ ೫೨೦ ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ.

ಇನ್ನೂ, ಮೋಚಾ ಚಂಡಮಾರುತದ ಪರಿಣಾಮ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಮಿಜೋರಾಂನಲ್ಲಿ ಶನಿವಾರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ದಕ್ಷಿಣ ಅಸ್ಸಾಂನಲ್ಲಿ ಭಾನುವಾರ ಮಳೆಯಾಗಬಹುದು.

ಎಚ್ಚರಿಕೆ: ಮತ್ತೊಂದೆಡೆ, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಎಂಟು ತಂಡಗಳನ್ನು ನಿಯೋಜಿಸಿದ್ದು, ೨೦೦ ಕೋಸ್ಟ್ ಗಾರ್ಡ್‌ಗಳನ್ನು ಸಜ್ಜುಗೊಳಿಸಿದೆ. ಮೀನುಗಾರರು, ಹಡಗುಗಳು, ದೋಣಿಗಳು ಮತ್ತು ಟ್ರಾಲರ್‌ಗಳು ಭಾನುವಾರದವರೆಗೆ ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರಕ್ಕೆ ಹೋಗದಂತೆ ಇಲಾಖೆ ಎಚ್ಚರಿಸಿದೆ.

ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿ ನೌಕಾಯಾನ ಮಾಡುವವರಿಗೆ ಕರಾವಳಿಗೆ ಮರಳಲು ಸೂಚಿಸಲಾಗಿದೆ.

ಮೋಚಾ ಚಂಡಮಾರುತವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯ ಹವಾಮಾನ ಇಲಾಖೆ, “ಭಾನುವಾರದ ವೇಳೆಗೆ ಚಂಡಮಾರುತ ಕ್ರಮೇಣ ತೀವ್ರಗೊಳ್ಳಲಿದೆ. ಬಾಂಗ್ಲಾ- ಮಯನ್ಮಾರ್ ಗಡಿಯಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದ್ದು, ಗಂಟೆಗೆ 150-160 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ” ಎಂದು ಹೇಳಿದೆ.

ಇದರ ಪರಿಣಾಮ ಅಂಡಮಾನ್ ಮತ್ತು ನಿಕೋಬಾರ್, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ದಕ್ಷೀಣ ಆಸ್ಸಾಂನಲ್ಲಿ ರವಿವಾರದ ವರೆಗೂ ಮಳೆಯಾಗಲಿದೆ. ಕೇರಳ, ಒಡಿಶಾ ಮತ್ತು ಕರ್ನಾಟದಲ್ಲೂ ಗುಡುಗು ಸಿಡಿಲಿನಿಂದ ಕೂಡಿದ ಮಳಯಾಗಲಿದೆ. ಎಂದು ಎಚ್ಚರಿಕೆ ನೀಡಿದೆ.

ಕಥೊಲಿಕ್ ಸಭಾ ಮೌಂಟ್ ರೋಜರಿ ಘಟಕಾಚಿ ವಾರ್ಷಿಕ್ ಜೆರಾಲ್ ಜಮಾತ್ ಅನಿ ಕಥೊಲಿಕ್ ಸಭೆಚೊ ದೀಸ್ ಆಚರಣ್

ಕಥೊಲಿಕ್ ಸಭಾ ಮೌಂಟ್ ರೋಜರಿ ಘಟಕಾಚಿ ವಾರ್ಷಿಕ್ ಜೆರಾಲ್ ಜಮಾತ್ ಅನಿ ಕಥೊಲಿಕ್ ಸಭೆಚೊ ದೀಸ್ ಆಚರಣ್ 7 – 5 -2023 ಅಯ್ತಾರಾ ಸಕಳಿಂ ಆಟ್ ವರಾಂಚಾ ಮಿಸಾ ಉಪ್ರಾಂತ್ ಫಿರ್ಗಜೆಚಾ ಮಿನಿ ಸಾಲಾಂತ್ ಗದ್ದಳಾಯೆನ್ ಚಲೊನ್ ವೆಲೊ ಮಾಗ್ಣ್ಯಾ ದ್ವಾರಿಂ ಕಾರ್ಯಕ್ರಮಾಚಿ ಸುರ್ವಾತ್ ಕೆಲಿ ಕಥೊಲಿಕ್.

ಸಭೆಚಿ ಅಧ್ಯಕ್ಷ್ ರೋಜಿ ಕ್ವಾಡ್ರಸಾನ್ ಸಯ್ರ್ಯಾಂಕ್ ವೆದಿರ್ ಅಪೊನ್ ಹಾಡ್ಲೆಂ ಅನಿ ಗುಲೊಬ್ ದೀವ್ನ್ ಸ್ವಾಗತ್ ಕೆಲೊ ಸಂತೊಷ್ ಕರ್ನೆಲಿಯೊ ಕೇಂದ್ರಚೆ ಅಧ್ಯಕ್ಷಾ ಥಾವ್ನ್ ಪ್ರಾಸ್ತವಿಕ್ ಭಾಷಣ್ ಉಪ್ರಾಂತ್ ಸಹ ಕಾರ್ಯದರ್ಶಿ ಝೀನಾನ್ 2021 – 22 ವ್ಯಾ ವರ್ಸಾಚಿ ಜೆರಾಲ್ ಜಮಾತೆಚಿ ವರ್ಧಿ ತಶೆಂಚ್ 2022 – 23 ವ್ಯಾ ವರ್ಸಾಚಿ ವರ್ಷಿಕ್ ವರ್ಧಿ ಸಭೆರ್ ದವರ್ಲಿ. ಖಜನ್ದಾರ್ ಮೇವಿಸ್ ಕರ್ನೆಲಿಯೊನ್ 2022 – 23 ವ್ಯಾ ವರ್ಸಾಚೆಂ ಯೆವೆಂ ದೆವೆಂ ಸಭೆರ್ ಮಂಡನ್ ಕೆಲೆಂ ನಿಯೋಜಿತ್ ಅಧ್ಯಕ್ಷ್ ಆರ್ಚಿಬಾಲ್ಡ್ ಫುರ್ಟಾಡೊನ್ 2923 – 24 ವ್ಯಾ ವರ್ಸಾಚೆಂ ಬಜೆಟ್, ಸಭೆರ್ ಮಂಡನ್ ಕೆಲೆಂ. ಉಪ್ರಾಂತ್ ಕೇಂದ್ರಾಚೊ ಅಧ್ಯಕ್ಷ್ ಜಾವ್ನ್ ಚುನಾಯಿತ್ ಜಾಲ್ಯಾ ಸಂತೋಷ್ ಕರ್ನೆಲಿಯೊಕ್ ಅನಿ 20 ಆಯೋಗಚಿ ಸಂಯೋಜಕಿ ಜಾವ್ನ್ ಚುನಾಯಿತ್ ಜಾಲ್ಯಾ ಢೇಝಿ ಮೆಂಡೋನ್ಸಾಕ್ ಪುಲಾಂಚೊ ತುರೊ ದೀವ್ನ್ ಸನ್ಮಾನ್ ಕೆಲೊ. ತಿಚೆ ಥಾವ್ನ್ ಸಂದೇಶ್ ತಶೆಂಚ್ ಕೇಂದ್ರಾಚಾ ಮಾಜಿ ಅಧ್ಯಕ್ಷ್ ವಲೇರಿಯನ್ ಫೆರ್ನಾಂಡಿಸಾ ಥಾವ್ನ್ ತ್ಯಾ ದಿಸಾಚಾ ಪ್ರಾಮಮುಖ್ಯತಾ ವಿಶಿಂ ಸಂದೇಶ್ ಉಪ್ರಾಂತ್ ಅಧ್ಯಕ್ಷ್ ರೋಜಿ ಕ್ವಾಡ್ರಸಾನ್ ವಾಡ್ಯಾಚಾ ಗುರ್ಕಾರಾಂಕ್ ಸಂಘ್ ಸಂಸ್ಥಾಚಾ ಅಧ್ಯಕ್ಷಾಂಕ್ ಗುಲೊಬ್ ದೀವ್ನ್ ಮಾನ್ ಕೆಲೊ. ಉಪ್ರಾಂತ್ 2022 – 23 ವ್ಯಾ ವರ್ಸಾಚಾ ಹುದ್ದೆದಾರಾಂನಿ 2023 – 24 ವ್ಯಾ ವರ್ಸಾಂಚಾ ಹುದ್ದೆದಾರಾಂಕ್ ಹುದ್ದೊ ಹಸ್ತಾಂತರ್ ಕೆಲೊ. ಮಾಜಿ ಅಧ್ಯಕ್ಷ್ ಎಲಿಯಾಸ್ ಡಿಸೋಜನ್ ಧನ್ಯವಾದ್ ಪಾಟಯ್ಲೆಂ. ನಿಮಾಣ್ಯಾ ಗಿತಾ ಸವೆಂ ಜಮಾತ್ ಅಖೇರ್ ಕೆಲಿ

ಮೇ.14ರಂದು ಕುಂದಾಪುರ ವ್ಯಾಸರಾಜ ಮಠದಲ್ಲಿ ಸಾಮೂಹಿಕ ಉಪನಯನ


ಕೋಟ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ಮೇ.14ರಂದು ಭಾನುವಾರ ಕುಂದಾಪುರ ವ್ಯಾಸರಾಜ ಮಠದಲ್ಲಿ ಸಾಮೂಹಿಕ ಉಪನಯನ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದೆ. ಈಗಾಗಲೇ 50 ಮಂದಿ ವಟುಗಳು ಸಾಮೂಹಿಕ ಉಪನಯನಕ್ಕೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಮಧ್ಯಾಹ್ನ ಗಂಟೆ 12ಕ್ಕೆ ಮಹಾಮಂಗಳಾರತಿ, 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

St Lawrence Unaided English Medium High School Bondel Mangalore feels immensely proud of the gleaming results secured by the students in the SSLC results 2023.

St Lawrence Unaided English Medium High School Bondel Mangalore feels immensely proud of the gleaming results secured by the students in the SSLC results 2023.

Vaishnavi N

Daughter of Naveen Kumar and Ashalatha, with the commendable top score of 616 marks makes the school proud.

Carine Cleona Lobo 

Daughter of Claudy Lobo and Bendedicta Lobo has secured an impressive 604 marks cherished the heritage of good result.

Boomika  daughter of Umesh and Savitha with outstanding total of 603 marks took every effort to galvanize the dream effectively. The school emerged with 22 distinctions and  38 First class. 

The entire school management along with the PTA, Staff and students congratulate the toppers as well as all the students for the exemplary and outstanding achievements.