ಕುಂದಾಪುರದಲ್ಲಿ ಕಾಂಗ್ರೆಸ್ ಅಲೆ ಇದೆ, ಕಾಂಗ್ರೆಸ್ ಜಯ ನಿಶ್ಚಿತ – ಮೊಳಹಳ್ಳಿ ದಿನೇಶ ಹೆಗ್ಡೆ

ಕುಂದಾಪುರ : ನಾವು ಎಲ್ಲಾ ಧರ್ಮದವರ ಜೊತೆಯಿದ್ದೇವೆ, ನಮ್ಮದು ಜಾತ್ಯಾತೀತ ಪಕ್ಷ, ಜೊತೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್. ಅದರಲ್ಲಿ ಇರುವ ಪ್ರಮುಖ ಐದು ಅಂಶಗಳು. ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಈ ಭರವಸೆಗಳನ್ನು ನಾವು ನೀಡಿದ್ದೆವೆ. ಖಂಡಿತಾ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಇವುಗಳನ್ನು ಅನುಷ್ಟಾನ ಮಾಡಲಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು. ಅವರು ಕುಂದಾಪುರದ ಹೋಟೆಲ್ ಶೆರೊನ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ನೆನಗುದಿಗೆ ಬಿದ್ದಿದೆ. ಸಿಆರ್‍ಜೆಡ್, 94ಸಿ, 94ಸಿಸಿ, ಅಕ್ರಮ ಸಕ್ರಮ ಸಮಸ್ಯೆಗಳಿವೆ. ಕುಂದಾಪುರದಲ್ಲಿ ಆರ್.ಟಿ.ಓ ಕಛೇರಿ ಬೇಡಿಕೆ ಇದೆ. ಕೋಡಿ ಕನ್ಯಾಣ ಭಾಗದಲ್ಲಿ ಹಕ್ಕುಪತ್ರ ಸಮಸ್ಯೆ, ನದಿ ದಂಡೆಯ ಸಮಸ್ಯೆ, ಗಂಗೊಳ್ಳಿ-ಕುಂದಾಪುರ ಸೇತುವೆ ಬೇಡಿಕೆ, 44 ವರ್ಷಗಳಾದರೂ ಬಾಕಿ ಇರುವ ವರಾಹಿ ನೀರಾವರಿ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಉಪ ಕಾಲುವೆಗಳ ನಿರ್ಮಾಣಗೊಂಡಿಲ್ಲ. ನಾನು ಶಾಸಕನಾಗಿ ಆಯ್ಕೆಯಾದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಕುಂದಾಪುರ ಕ್ಷೇತ್ರದಲ್ಲಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬೆಂಬಲ ನೀಡುತ್ತಿದ್ದಾರೆ. ನಾನು ಹೋದ ಎಸ್ಟೊ ಕಡೆ ಯುವಕರು, ನಾವು ಇನ್ನು ಬಿಜೆಪಿ ಯಲ್ಲಿ ಕೆಲಸ ಮಾಡುವುದಿಲ್ಲ, ಎಂದು ನಮ್ಮ ಪಕ್ಷ ಸೇರಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಸಿಗುತ್ತಿರುವ ಬೆಂಬಲ ನೋಡಿದಾಗ ಕಾಂಗ್ರೆಸ್ ಗೆಲ್ಲುವುದು ಖಂಡಿತವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳದ ಪ್ರಸ್ತಾಪದ ಮಾಧ್ಯಮದರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಜರಂಗದಳ ವಿರೋಧ ಸ್ಪಷ್ಟವಾಗಿ ಹೇಳಿಲ್ಲ. ಇದನ್ನು ಬಿಜೆಪಿಗರು ಹತಾಶರಾಗಿ ಸುಳ್ಳು ವದಂತಿಯನ್ನು ಹಬ್ಬಿಸುತಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಹೇಳಲು ಬೇರೆ ವಿಷಯಗಳಿಲ್ಲ. ಚುನಾವಣೆಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.

      ಕಾಂಗ್ರೆಸ್ ಪಕ್ಷದ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಇವತ್ತು ಬಿಜೆಪಿಗರು ಸೋಲಿನ ಭಯದಿಂದ ಹತಾಸರಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದು ವಿರೋಧಿಯಲ್ಲ, ನಮ್ಮ ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಅವರು ಧಾರ್ಮಿಕ ವ್ಯವಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಪ್ರತಿವರ್ಷ ಶ್ರೀರಾಮ ಭಜನೆಯನ್ನು ನೆಡೆಸಿಕೊಂಡು ಬರುತ್ತಿದ್ದಾರೆ. ಪರಿಸರದ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಹಾಗಾಗಿ ಇಡೀ ಕ್ಷೇತ್ರದ ಜನರಿಗೆ ದಿನೇಶ ಹೆಗ್ಡೆ ಅವರ ವ್ಯಕ್ತಿತ್ವದ ಅರಿವಿದೆ. ಪ್ರತಿ ಚುನಾವಣೆಯಲ್ಲಿ ಬಿಜೆಪಿ ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಹೋಗುತ್ತಾರೆ. ಹಿಂದುತ್ವ, ಹಿಂದು ಸಂಘಟನೆಯ ಬಗ್ಗೆ ಬಿಜೆಪಿಗೆ ಅಷ್ಟೊಂದು ಅಭಿಮಾನ ಇದ್ದರೆ ಹಿಂದೂ ನಾಯಕರುಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಅವರಿಗೆ ಏಕೆ ಬೆಂಬಲ ಕೊಡುವುದಿಲ್ಲಾ. ಪುತ್ತೂರು, ಕಾರ್ಕಳದಲ್ಲಿ ಹಿಂದು ಸಂಘಟನೆಯ ಮುಖಂಡರು ಸ್ಪರ್ಧೆ ಮಾಡಿದ್ದಾರೆ. ಅವರನ್ನು ಏಕೆ ಬೆಂಬಲಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಕುಂದಾಪುರ ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಅಮಾಸೆಬೈಲು ಗ್ರಾಮದಲ್ಲಿ 11 ಶಾಲೆಗಳಿದ್ದು 3 ಶಾಲೆಗಳಲ್ಲಿ ಶೂನ್ಯ ಶಿಕ್ಷಕರ ಶಾಲೆಯಾಗಿದೆ. ಅಮಾಸೆಬೈಲು ಗ್ರಾಮದಲ್ಲಿ ಹಿಂದು ರುದ್ರಭೂಮಿ ಇಲ್ಲ, ಜೂನಿಯರ್ ಕಾಲೇಜು ಬೇಡಿಕೆ ಇದೆ. ವಾರಾಹಿ ನೀರು ಅಮಾಸೆಬೈಲು ಗ್ರಾಮಕ್ಕೆ ಸಿಗುತ್ತಿಲ್ಲ. ಕೃಷಿಕರ ಪಾಡು ಹೇಳತಿರದು. ಇಷ್ಟೊಂದು ಸಮಸ್ಯೆ ಅಮಾಸೆಬೈಲು ಗ್ರಾಮದಲ್ಲಿದ್ದರೂ ಕೂಡಾ ಕಳೆದ 30 ವರ್ಷಗಳಿಂದ ಶಾಸಕರ ನಿಕಟ ಸಂಪರ್ಕ ಇರುವ ಕಿರಣ್ ಕೊಡ್ಗಿಯವರಿಂದ ಏಕೆ ಪರಿಹರಿಸಲು ಆಗಲಿಲ್ಲ ಎಂದು ಪ್ರಶ್ನಿಸಿದರು.

    ಕುಂದಾಪುರ ಕ್ಷೇತ್ರದಲ್ಲಿ ಪಂಚಗಂಗಾವಳಿ ನದಿಗಳಿದ್ದು, ಕೇರಳದಂತೆ ಹಿನ್ನಿರಿನ ನದಿಗಳಿವೆ, ಆದರೆ ಪ್ರವಾಸೊದ್ಯಮ ಎನೊಂದು ಅಭಿವ್ರದ್ದಿಯಾಗಲಿಲ್ಲಾ ಎಂಬ ಪ್ರಶ್ನೆಗೆ ಸಿ.ಆರ್.ಜಡ್ ಸಮಸ್ಯೆ ಇದೆ ಎಂದು ಹೇಳಲಾಯಿತು, ಆದರೆ ಪತ್ರಕರ್ತರು ಸಿ.ಆರ್.ಜಡ್. ಇತ್ತೀಚಿನ ಸಮಸ್ಯೆ. ಹಲವು ವರ್ಷಗಳಿಂದ ಕಾಂಗ್ರೆಸ್ ಇರುವಾಗ ಸಿ.ಆರ್.ಜಡ್ ಸಮಸ್ಯೆ ಇರಲಿಲ್ಲ. ಬರೆ ಪ್ರವಾಸೊದ್ಯೋಮ ಅಂತಾ, ಹಣ ಪೋಲು ಮಾಡಿದ್ದಶ್ಟೆ ಸಾಧನೆ ಅಂದಾಗ ’ನಾವು ಶಾಸಕರಾಗಿ ಆಯ್ಕೆಯಾದರೆ, ಪ್ರವಾಸೋದ್ಯಮದ ಬಗ್ಗೆಯು ಚಿಂತಿಸುತ್ತೇವೆ ಎಂದು ಸಮಾಧಾನ ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಕೃಷ್ಣದೇವ ಕಾರಂತ, ವಿನೋದ್ ಕ್ರಾಸ್ತ್,  ಅಶೋಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. 

ಮತದಾರರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಬೇಕು:ಜೆ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮತದಾರರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಬೇಕು. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಜೆ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ರೋಣೂರಿನಲ್ಲಿ ಬುಧವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಬಳಿಕೆ ಮಾತನಾಡಿದ ಅವರು, ಜೆಡಿಎಸ್‌ನ ಜಲಧಾರೆ ಯೋಜನೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಿಗೆ ವರದಾನವಾಗಲಿದೆ. ಈ ಯೋಜನೆಯಡಿ ಜಿಲ್ಲೆಗೆ ಕುಡಿಯಲು ಹಾಗೂ ವ್ಯವಸಾಯಕ್ಕೆ ಯೋಗ್ಯವಾದ ನೀರು ಪೂರೈಸಲಾಗುವುದು. ಪಂಚರತ್ನ ಯೋಜನೆ ಸಮಾಜದ ಎಲ್ಲ ವರ್ಗದ ಜನರ ಪಾಲಿಗೆ ಹೆಚ್ಚು ಉಪಯುಕ್ತವಾಗಿದೆ. ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಣಿಗೆ ರೂ.೨ ಲಕ್ಷ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ. ಪ್ರತಿ ರೈತ ಕುಂಟುAಬಕ್ಕೆ ರೂ.೧೦ ಸಾವಿರ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ ಇದೆ. ಮತದಾರರು ೧೦ ವರ್ಷಗಳಿಂದ ನಿಂತ ನೀರಿನಂತಿರುವ ಪರಿಸ್ಥಿತಿ ಬದಲಾಯಿಸಲು ಮುಂದಾಗಿದ್ದಾರೆ. ಜಿ.ಕೆ.ವೆಂಕಟಶಿವಾರೆಡ್ಡಿ ಶಾಸಕರಾಗಿದ್ದ ೪ ಅವಧಿಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಅವರ ಕೈಹಿಡಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ,ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೂರನಹಳ್ಳಿ, ಅಂಜಪ್ಪ ಮಾಜಿ ಸದ್ಯಸರಾದ. ಗೋಟ್ಟಕುಂಟ್ಟೆ.ಕೃಷ್ಣಾ ರೆಡ್ಡಿ, ಆರ್.ಕೆ. ಮಂಜುನಾಥ್ ರೆಡ್ಡಿ, ಮುಖಂಡರಾದ ಎಸ್.ಎಲ್.ಎನ್.ಮಂಜುನಾಥ್, ಇಮರಕುಂಟೆ.ವಕೀಲ. ಕೆ.ಮಾರುತಿ ರೆಡ್ಡಿ, ಕನಿಗಾನಹಳ್ಳಿ. ಎಸ್ ಅನಂದ್,,ವೆಂಕಟೇಶ್, ಶೇಷಾಪುರ ,ಗೋಪಾಲ್, ದಡಮಲಡೂಡ್ಡಿ .ಶ್ರೀನಾಥರೆಡ್ಡಿ, ಸಂತೋಷ್, ಕೂಂಡ ಸಂದ್ರ.ಜೆ.ಶ್ರೀನಿವಾಸ್, ಮುರಳಿ, ಇದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಾರ ಮತದಾರರ ಮತದಾನ

ಶ್ರೀನಿವಾಸಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಹೊಂದಿರುವ ಮತದಾರರು ಬುಧವಾರ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಗೆ ಮಂಗಳವಾರ ಅಧಿಕ ಸಂಖ್ಯೆಯ ಇಡಿಸಿ ಪಡೆದಿರುವ ಮತದಾರರು ಮತದಾನ ಮಾಡಲು ಬಂದ ಪರಿಣಾಮವಾಗಿ ಬಹಳಷ್ಟು ಮತದಾರರು ಮತದಾನ ಮಾಡಲು ಸಾಧ್ಯವಾಗದೆ ಹಿಂದಿರುಗಬೇಕಾಯಿತು.
ಪಟ್ಟಣದಲ್ಲಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಹೊಂದಿರುವ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ತಾಲ್ಲೂಕು ಕಚೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಲಾ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಆದರೆ ಮತದಾರರಿಗೆ ಮಾಹಿತಿ ಕೊರತೆಯಿಂದ ಎಲ್ಲರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಮತದಾನ ಮಾಡಲು ಹೋದ ಪರಿಣಾಮವಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಉಪ ಚುನಾವಣಾಧಿಕಾರಿ ಶಿರಿನ್ ತಾಜ್ ಪ್ರಜಾವಾಣಿಗೆ ತಿಳಿಸಿದರು.
ಆದರೆ ಬುಧವಾರ ಎರಡು ಮತಗಟ್ಟೆಗಳ ಮಾಹಿತಿ ಪಡೆದ ಇಡಿಸಿ ಮತದಾರರು ಎರಡೂ ಮತಗಟ್ಟೆಗಳಲ್ಲಿ ಮತದಾನ ಮಾಡಿದ ಪರಿಣಾಮವಾಗಿ, ಮತದಾನ ಸುಗಮವಾಗಿ ನಡೆಯಿತು. ಕ್ಷೇತ್ರದಲ್ಲಿ ಒಟ್ಟು 2606 ಇಡಿಸಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಕೌಶಲ್ಯ ಅಭಿವೃದ್ಧಿಯು ಸ್ಪರ್ಧೆಯನ್ನು ಗೆಲ್ಲುವ ಮಾರ್ಗವಾಗಿದೆ


ಶಿರ್ವ: ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ ಮೂಲಕ ಬಿಸಿಎ ವಿದ್ಯಾರ್ಥಿಗಳಿಗೆ ಆಯೋಜಿಸಿದ ರೈಜೆನ್23 ಐಟಿ ಕಾಂಪಿಟೇಶನ್ಸ್ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ! ಹೆರಾಲ್ಡ್ ಐವನ್ ಮೋನಿಸ್ ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ವಿಜೇತರಿಗೆ ಪ್ರಮಾಣ ಪತ್ರ ಜೊತೆಗೆ ಬಹುಮಾನಗಳನ್ನು ವಿತರಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮಲ್ಲಿ ಅಡಗಿರುವಂತ ವಿವಿಧ ಕೌಶಲಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಎಲ್ಲಾ ರೀತಿಯ ಸ್ಪರ್ಧೆಗಳನ್ನು ಗೆಲ್ಲಲು ಸಾಧ್ಯ ಎಂದು
ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ರೈಜೆನ್23 ಐಟಿ ಕಾಂಪಿಟೇಶನ್ಸ್ ಬಗ್ಗೆ ಮಾರ್ಗದರ್ಶನ ನೀಡಿ ಮಾತನಾಡಿದರು. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ವಿವಿಧ ಕೌಶಲ್ಯಗಳನ್ನು ವೃದ್ಧಿಸುವ ರಸಪ್ರಶ್ನೆ, ಕೋಡಿಂಗ್, ಗೇಮಿಂಗ್,ರಂಗೋಲಿ,ಅಣುಕು ಸಂದರ್ಶನ, ಪೋಸ್ಟರ್ ತಯಾರಿಕೆ, ನಿಧಿ ಬೇಟೆ,ಪವರ್ಪಾಯಿಂಟ್ ಪ್ರಸ್ತುತಿ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಇದೇ ಸಂದರ್ಭದಲ್ಲಿ ವಿಪ್ರೊ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವಲ್ಲಿ ಆಯ್ಕೆಯಾದ ಕು. ನಿವೇದಿತಾ ನಿಖಿಲ್ ಪೂಜಾರಿ ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಾದ ಮಾನ್ವಿತ ಎಸ್ ಸುವರ್ಣ, ಡಿಯೋನ್ ಜೋಯಲ್ ಪಿಂಟೋ ಈ ಸ್ಪರ್ಧೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ದಿವ್ಯಶ್ರೀ ಬಿ, ಸುಷ್ಮಾ, ಬಿಸಿಎ ವಿಭಾಗದ ಎಲ್ಲಾ ಅಧ್ಯಾಪಕ-ಅಧ್ಯಾಪಕೇತರಬಂಧುಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಲ್ರುಶಾ ಮಿಲಿನಾ ಡಿಸಾ ಬಹುಮಾನ ಪಟ್ಟಿಯನ್ನು ವಾಚಿಸಿದರು.ವಿದ್ಯಾರ್ಥಿಗಳಾದ ಗೌರವ ಬಂಗೇರ ಮತ್ತು ತಂಡ, ಆಲಿಸ್ಟರ್ ಸುಜಾಯ್ ಡಿಸೋಜ, ಅನುಪ್ ನಾಯಕ ಸಹಕರಿಸಿದರು.ಕು.ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ಕು. ಛಾಯಾ ಏ ಕರ್ಕೇರ ಸ್ವಾಗತಿಸಿ, ಪದ್ಮಶ್ರೀ ಭಟ್ ವಂದಿಸಿದರು. ಕು. ಫೈಝ ಭಾನು ಕಾರ್ಯಕ್ರಮ ಸಂಯೋಜಿಸಿದರು.

ಮತದಾರರು, ಸಂವಿಧಾನದಲ್ಲಿ ನಂಬಿಕೆಯುಳ್ಳ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಬದ್ಧವಾಗಿರುವ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕು :ಮಾಜಿ ಸಚಿವ ಸೋಮಶೇಖರ್

ಶ್ರೀನಿವಾಸಪುರ: ಮತದಾರರು, ಸಂವಿಧಾನದಲ್ಲಿ ನಂಬಿಕೆಯುಳ್ಳ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಸಚಿವ ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಶಿವಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಮಾಜದಲ್ಲಿ ಧರ್ಮಾಂಧತೆ ಹಾಗೂ ಕೋಮುವಾದ ಬೆಳೆಸುತ್ತಿದೆ. ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತಿದೆ ಎಂದು ಆಪಾದಿಸಿದರು.
ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಅದನ್ನು ಒಮ್ಮೆಗೇ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ಧರಿಂದ ಸ್ವಲ್ಪ ಸ್ವಲ್ಪ ಹಾನಿಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಉರುಳಿಸುವ ಹುನ್ನಾರ ಮಾಡುತ್ತಿದೆ. ಮತದಾರರು ಅದಕ್ಕೆ ಅವಕಾಶ ನೀಡಬಾರದು. ವಿಧಾನಸಭೆ ಹಾಗೂ ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೆಸಿ ವ್ಯಾಲಿ ನೀರು ಹರಿಸಿ, ಹಸಿರು ಮೂಡಿಸಿದ್ದಾರೆ. ರೈತರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮನೆಗಳನ್ನು ತಂದು ಬಡವರಿಗೆ ನೀಡಿದ್ದಾರೆ. ಅವರ ಕೊಡುಗೆ ಗಮನಿಸಿ ಮತದಾರರು ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಹಿಂದೆ ಕ್ಷೇತ್ರದಲ್ಲಿ 1800 ಅಡಿ ಕೊಳವೆ ಬಾವಿ ಕೊರೆದರೂ ನೀಡು ಸಿಗುತ್ತಿರಲಿಲ್ಲ. ಈಗ ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿದ ಪರಿಣಾಮವಾಗಿ ಅಂತರ್ಜಲ ವೃದ್ಧಿಗೊಂಡಿದೆ. 600 ಅಡಿಯಲ್ಲೇ ನೀರು ಸಿಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು ರೂ.50 ಸಾವಿರದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಅಕ್ಕಿ ನೀಡುವ ಪ್ರಮಾಣ 10 ಕೆಜಿಗೆ ಹೆಚ್ಚಿಸಲಾಗವುದು. ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಗ್ಯಾಸ್ ಸಲಿಂಡರ್ ಬೆಲೆಯನ್ನು ಅರ್ಧಕ್ಕೆ ಇಳಿಸಲಾಗುವುದು. ಮನೆ ಒಡತಿಗೆ ತಿಂಗಳಿಗೆ ರೂ.2000 ನೀಡಲಾಗುವುದು ಎಂದು ಹೇಳಿದರು.
ಮುಖಂಡರಾದ ಎಂ.ಶ್ರೀನಿವಾಸನ್, ಅಯ್ಯಪ್ಪ, ಮುನಿವೆಂಕಟಪ್ಪ, ಗೋಪಾಲರೆಡ್ಡಿ, ನಾಗರಾಜ್, ಈರಪ್ಪ, ಗುರಪ್ಪ, ಶಿವಪ್ಪ, ಎಸ್.ಜಿ.ವೆಂಕಟೇಶ್, ಎಸ್.ಜಿ.ಜಗದೀಶ್, ವಿ.ಗುರಪ್ಪ, ಸಿ.ಶಿವಕುಮಾರ್, ಮುರಳಿ, ವೆಂಕಟೇಶ್, ಪ್ರಸಾದ್ ಶ್ರೀನಿವಾಸ್, ರಾಜೇಂದ್ರ, ತಮ್ಮಯ್ಯ ಇದ್ದರು

ರೈಲ್ವೆ ಕೋಚ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಸುಳ್ಳು ಅಶ್ವಾಸನೆ ನೀಡಿ ಕ್ಷೇತ್ರ ಜನತೆಗೆ ಮೋಸ ಮಾಡುತ್ತಿದ್ದಾರೆ: ಜಿ.ಕೆ.ವೆಂಕಟಶಿವಾರೆಡ್ಡಿ ಟೀಕೆ

ಶ್ರೀನಿವಾಸಪುರ 3 : ರೈಲ್ವೆ ಕೋಚ್ , ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಸುಳ್ಳ ಅಶ್ವಾಸನೆ ನೀಡಿ ಕ್ಷೇತ್ರ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಟೀಕಿಸಿದರು.
ತಾಲೂಕಿನ ಸೋಮಯಾಜಪಲ್ಲಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಪಕ್ಷದಿಂದ ರೋಡ್‍ಶೋ ಮುಖಾಂತರ ಮತಯಾಚನೆ ಮಾಡಿ ಮಾತನಾಡಿದರು.
ಪಂಚರತ್ನ ಯೋಜನೆ ಮುಖಾಂತರ ಗ್ರಾಮೀಣ ಭಾಗದಲ್ಲಿ ಹೈಟೆಕ್ ಆಸ್ಪತ್ರೆ, ಉಚಿತ ಶಿಕ್ಷಣ , ರೈತರ ಒಂದು ಎಕರೆ ಭೂಮಿಗೆ 10 ಸಾವಿರದಂತೆ 10 ಎಕರೆಗೆ 1 ಲಕ್ಷ ಹಣವನ್ನು ಮುಂಗಡವಾಗಿ ನೀಡಲಾಗುವುದು. ವೃದ್ಧಾಪ್ಯ ವೇತನವು 1500 ರೂಗಳಿಂದ 5000 ಕ್ಕೆ ಏರಿಸಲಾಗುವುದು. ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಲಾಗುವುದು.
ಶಾಸಕ ರಮೇಶ್‍ಕುಮಾರ್‍ರವರು ಆರೋಗ್ಯ ಸಚಿವರಾಗಿದ್ದಾಗ ಅರಣ್ಯ ಭೂಮಿಯ ಮಿಸ್ ಡಾಕ್ಯುಮೆಂಟ್ ಮಾಡಿದ್ದು, ಅದರಂತೆ ಅರಣ್ಯ ಭೂಮಿಯನ್ನು ಒತ್ತವರಿ ಮಾಡಿದ್ದು, ಅದನ್ನ ತೆರೆವುಗೊಳಿಸುವ ಕಾರ್ಯಮಾಡಲಾಗುವುದು.
ಕಳೆದ 10 ವರ್ಷಗಳಿಂದ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ .ಎಸ್‍ಸಿ, ಎಸ್‍ಟಿ ರೈತರಿಗೆ ಸರ್ಕಾರದಿಂದ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್‍ವೆಲ್ ಕೊರೆಸಿಲ್ಲ. ಬಡವರ ಬಗ್ಗೆ ಕಾಳಜಿ ಇಲ್ಲ.
ಕೆಸಿ ವ್ಯಾಲಿ ನೀರಿನಿಂದ ಜನರ ಆರೋಗ್ಯದ ಮೇಲೆ ಪ್ರಭಾವ ಬೀರುವುದರಿಂದ ಪಂಚರತ್ನ ಯೋಜನೆ ಅಡಿಯಲ್ಲಿ ಈ ಭಾಗದ ಜನರಿಗೆ ಶುದ್ದಕುಡಿಯುವ ನೀರನ್ನ ಕೊಡಲಾಗುವುದು. ಕೆಳದ 10 ವರ್ಷಗಳಿಂದ ಕ್ಷೇತ್ರವು ಅಭಿವೃದ್ಧಿ ಶೂನ್ಯವಾಗಿದೆ. ಇದು ನನ್ನ ಕೊನೆಯ ಚುನಾವಣೆ ಆದ್ದರಿಂದ ತಾವೆಲ್ಲರೂ ನನಗೆ ಅತ್ಯಧಿಕ ಮತವನ್ನ ನೀಡುವುದರ ಮೂಲಕ ಚುನಾವಣೆಯಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಜೆಡಿಎಸ್ ಪಕ್ಷದ ಮುಖಂಡ ಶೇಷಾಪುರ ಗೋಪಾಲಕೃಷ್ಣ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಸೋಲಲು ಕೆ.ಆರ್.ರಮೇಶ್‍ಕುಮಾರ್ ಕಾರಣ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳುವ ರಮೇಶ್‍ಕುಮಾರ್ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮೂಲ ಕಾರಣ.
ರಮೇಶ್‍ಕುಮಾರ್ ರವರ ಮೊಸಳೆ ಕಣ್ಣೀರಿಗೆ ಮತದಾರರು ಬೆರಗಾಗದೆ, ರೈತ ಪರ ಹಾಗು ಬಡವರ ಬಗ್ಗೆ ಕಾಳಜಿ ಇರುವ ಜಿ.ಕೆ.ವೆಂಕಟಶಿವಾರೆಡ್ಡಿ ರವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಕೂಲಗುರ್ಕಿ ತಿಮ್ಮರಾಯಪ್ಪ, ಮುಖಂಡರಾದ ವಕೀಲ ಕೆ.ಮಾರುತಿರೆಡ್ಡಿ, ಬಾಜಾಜ್ ನಾರಾಯಣಸ್ವಾಮಿ, ಬಂಡಪಲ್ಲಿ ಕೃಷ್ಣಾರೆಡ್ಡಿ, ಕೊರ್ನಹಳ್ಳಿ ಆಂಜನಪ್ಪ, ಸಂತೋಷ,ದಿಗವಪಲ್ಲಿ ಸುರೇಶ್‍ರೆಡ್ಡಿ, ಕೋಳಿಫಾರಂ ಆರ್.ರಮೇಶ್ ದೊಡಮಲದೊಡ್ಡಿ ಶ್ರೀನಾಥರೆಡ್ಡಿ, ಸದಾಶಿವ, ಆರ್.ಬಾಬ
ಇದ್ದರು.

ರೈತ ಪ್ರಣಾಳಿಕೆಗೆ ಬದ್ದವಾಗಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಗುಂಜೂರು ಆರ್.ಶ್ರೀನಿವಾಸರೆಡ್ಡಿಗೆ ರೈತ ಸಂಘದ ಬೆಂಬಲ

ಶ್ರೀನಿವಾಸಪುರ-ಮೇ-2, ರೈತ ಪ್ರಣಾಳಿಕೆಗೆ ಬದ್ದವಾಗಿರುವ ಜೊತೆಗೆ, ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟ ಮಾಡುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಗುಂಜೂರು ಆರ್.ಶ್ರೀನಿವಾಸರೆಡ್ಡಿಗೆ ರೈತ ಸಂಘದ ಬೆಂಬಲ ನೀಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಮ್ಮ ಮತ ಪಡೆದು ನಮ್ಮ ಮಕ್ಕಳಿಗೆ ಉದ್ಯೋಗ ಸ್ಥಳೀಯವಾಗಿ ಸೃಷ್ಟಿ ಮಾಡುವಲ್ಲಿ ರೆಡ್ಡಿ-ಸ್ವಾಮಿ ರವರು ವಿಫಲವಾಗಿದ್ದಾರೆ. ಪ್ರತಿಭಾವಂತ ಯುವಕರು ಉದ್ಯೋಗವನ್ನು ಅರಿಸಿ ಬೆಂಗಳೂರಿಗೆ ವಲಸೆ ಹೋಗವ ಜೊತೆಗೆ ರೈತರ ರಕ್ತ ಹೀರುವ ನಕಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಹಾವಳಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿರುವ ಪಕ್ಷಗಳನ್ನು ತಿರಸ್ಕರಿಸಬೇಕೆಂದು ಸಭೆಯಲ್ಲಿ ಕ್ಷೇತ್ರದ ಜನತೆಗೆ ಮನವಿ ಮಾಡಿದರು.
ಪ್ರಗತಿ ಪರ ರೈತ ಬಂಗವಾದಿ ನಾಗರಾಜಗೌಡ ತೋಟದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹತ್ತಾರು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಸ್ವಾಮಿ-ರೆಡ್ಡಿ ರವರ ಪ್ರತಿಷ್ಠೆಯ ಕ್ಷೇತ್ರವಾಗಿದ್ದರೂ ಅಭಿವೃದ್ದಿಯಲ್ಲಿ ಹಿನ್ನಡೆಯಾಗಿದೆ. ಇಬ್ಬರ ಹಗ್ಗಾಜಗ್ಗಾಟದಲ್ಲಿ ರೈತರ ಆಶಾಕಿರಣ ಅಭಿವೃದ್ದಿಯ ಹರಿಕಾರ ಗುಂಜೂರು ಶ್ರೀನಿವಾಸರೆಡ್ಡಿ ರವರ ಆಗಮನ ಕ್ಷೇತ್ರದ ಜನರಲ್ಲಿ ಅಭಿವೃದ್ದಿಯ ಆಶಾಕಿರಣ ಕಾಣುತ್ತಿದ್ದಾರೆಂದು ಸಭೆಯಲ್ಲಿ ಆಶೆಯ ವ್ಯಕ್ತಪಡಿಸಿದರು.
ಮಾವಿನ ಮಡಿಲು ಇಡಿ ಪ್ರಪಂಚಕ್ಕೆ ಮಾವನ್ನು ಕೊಡುವ ಕ್ಷೇತ್ರದಲ್ಲಿ ಅಭಿವೃದ್ದಿ ಎಂಬುದು ಮರುಚಿಕೆಯಾಗಿದೆ. ರೈತರ ಜೀವನಾಡಿಯಾಗಿರುವ ಟೆಮೊಟೊ, ಮಾವು, ಮಾರುಕಟ್ಟೆ ಅಭಿವೃದ್ದಿ ಇಲ್ಲದೆ ಬದುಕಿನ ಜೀವ ಹರಿಸಿಬರುವ ಸಾವಿರಾರು ಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಅನಾರೋಗ್ಯ ಪೀಡಿತ ಮಾರುಕಟ್ಟೆಯಾಗಿ ಮಾರ್ಪಟ್ಟು, ಸಮರ್ಪಕವಾದ ಮಾವು, ವಿಲೆವಾರಿ ಇಲ್ಲದೆ, ರಸ್ತೆ ರಸ್ತೆಯಲ್ಲೂ ಸುರಿದು ಅನಾರೋಗ್ಯ ಹರಡುವ ಜೊತೆಗೆ ಮಳೆ ಬಿದ್ದರೆ ಕೆರೆ ಕುಂಟೆಯಾಗಿ ಮಾರ್ಪಾಡುವ ಮಾರುಕಟ್ಟೆ ಹಾಗೂ ಗ್ರಾಮೀನ ಪ್ರದೇಶದ ಅಬಿವೃದ್ದಿಗೆ ಆದ್ಯತೆ ನೀಡುವ ಅಭ್ಯರ್ಥಿಗೆ ಹೆಚ್ಚಿನ ಬಹುಮತನೀಡುವ ಮುಖಾಂತರ ವಿಧಾನಸೌಧಕ್ಕೆ ಆಯ್ಕೆ ಮಾಡುವಂತೆ ಸಭೆಯಲ್ಲಿ ಕ್ಷೇತ್ರದ ಜನರನ್ನು ಮನವಿ ಮಾಡಿದರು.
ಆರೋಗ್ಯ, ಶಿಕ್ಷಣ, ಉದ್ಯೋಗ ಸೃಷ್ಟಿ ಹಾಗೂ ಟೆಮೋಟೋ ಹಾಗೂ ಮಾವು ಬೆಳೆಗಾರರಿಗೆ ಅನುಕೂಲಕರವಾಗುವ ಮಾವು ಸಂಸ್ಕರಣ ಘಟಕ ಕೃಷಿ ಆದಾರಿತ ಕೈಗಾರಿಕೆಗಳು ಸರ್ಕಾರಿ ಆಸ್ಪತ್ರೆ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ ನೀಡಿ ಕ್ಷೇತ್ರದ ಅಭಿವೃದ್ದಿಗೆ ಮನೆ ಮಗನಾಗಿ ನಿಲ್ಲುವ ಗುಂಜೂರು ಆರ್.ಶ್ರೀನಿವಾಸರೆಡ್ಡಿ ರವರಿಗೆ ಈ ಭಾರಿ ರೈತ ಸಂಘದಿಂದ ಬೆಂಬಲ ಸೂಚಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಅಭ್ಯರ್ಥಿಗೆ ರೈತ ಸಂಘದ ಮತ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಆಲವಾಟ ಶಿವು, ಸಹದೇವಣ್ಣ, ಶೇಕ್ ಷಪಿವುಲ್ಲಾ, ರತ್ನಮ್ಮ, ಭಾಗ್ಯಮ್ಮ, ಶೈಲಜ, ರಾಮಕ್ಕ, ವೆಂಕಟಮ್ಮ, ಇನ್ನು ಮುಂತಾದವರು ಇದ್ದರು.

Decennial Celebration of Father Muller Hospital Thumbay

The Decennial Celebration of Father Muller Hospital Thumbay (FMHT) was celebrated on May 2nd 2023 in the hospital premises by offering thanksgiving Eucharist.The programme began with invocation to Almighty God through a prayer dance and welcome dance  by Father Muller Nursing College Thumbay Students followed by tribute to our Founder Fr Augustus Muller and former Director late Rev Fr Patrick Rodrigues by the dignitaries.

The formal decennial celebration was inaugurated by lighting the lamp by the dignitaries. Muller @ Thumbay, the decennial souvenir and the documentary of FMHT were released by Dr. Peter Paul Saldanha the Bishop of Mangalore Diocese.

Most Rev. Dr.Peter Paul Saldanha, Bishop of Mangalore Diocese  and  President of Father Muller Charitable Institutions was the president for the Celebration and addressed the gathering saying “God loves a cheerful giver and a receiver, giving oneself, once own time, Doctors and Nurses render selfless service in the hospital and they will be remembered by people and their names are written in the hearts of the people”. Bishop congratulated all and thanked everyone for their contribution. The Bishop facilitated the present and Former Administrators, Doctors, and the Staff  who  served the institution continuously for the last 10 years.

By addressing the gathering Rev Fr Richard Aloysius Coelho, Director FMCI acknowledged the services rendered by  former Director late Rev Fr Patrick Rodrigues and former administrators for improving the infrastructure, services and for their hard work towards the accreditation process of the hospital.   

Dr.Antony Sylvan D’Souza ,Dean FMMC was the guest of honor he made a special mention that to look at the outcome than income not money but benefits, looking into the service and good feedback is very necessary.

Rev.Fr.Sylvester Vincent Lobo,the Administrator of FMHT welcomed the dignitaries.Dr.Kiran Shetty, Medical Superintendent FMHT,Sr. Dhanya Devasia,Principal Father Muller Nursing College Thumbay,Administrators Rev. Fr. Ajith Menezes, Rev.Fr.Roshan Crasta, Rev Fr.George Jeevan Sequiera, Rev.Fr.Nelson Deeraj Pais,Rev.Fr.Rohan Dias, Rev Fr.Valerian D’Souza, Parish Priest,  Modankap Church, Bantwal, Rev. Fr Rudolf Ravi Dsa, Chaplains, Dr.Jayaprakash Alva the Former Dean  FMMC, Mr. Praveen B Thumbe, the Gram panchayath President andMr. MohammedVolavoor, Principals of various colleges and other dignitaries  graced the occasion.

Dr. Deekshith Shetty and Dr. Soumya Neetha Aranha were the anchors for the event. Dr.Saritha Lobo proposed the Vote of Thanks.

ಕುಂದಾಪುರ ವಾಲಿಬಾಲ್ ಅಕಾಡೆಮಿ ವತಿಯಿಂದ ಗಾಂಧೀ ಮೈದಾನದಲ್ಲಿ ವಾಲಿಬಾಲ್ ತರಬೇತಿ ಶಿಬಿರ

ಕುಂದಾಪುರ, ಮೇ 2 : ಕುಂದಾಪುರದ ಎಳೆ ವಯಸ್ಸಿನ ಹುಡುಗರಲ್ಲಿ ಜನಪ್ರಿಯ ಆಟವಾದ ವಾಲಿಬಾಲ್ ನ ಕೌಶಲ್ಯ ವನ್ನು ಕಲಿಯಲು ಕುಂದಾಪುರ ವಾಲಿಬಾಲ್ ಅಕಾಡೆಮಿ ವತಿಯಿಂದ ಮೇ 1 ರಂದು, 1 ತಿಂಗಳ ವರೆಗಿನ ತರಬೇತಿ ಶಿಬಿರ ಗಾಂಧೀ ಮೈದಾನದಲ್ಲಿ ಉದ್ಘಾಟನೆ ಗೊಂಡಿತು . ಸುಮಾರು 35 ಶಿಬಿರಾರ್ಥಿಗಳು ಪಾಲ್ಗೊಳ್ಳುವ ಶಿಬಿರವನ್ನು ನಿವೃತ್ತ ದೈಹಿಕ ಶಿಕ್ಷಕ ಬಾಲಕೃಷ್ಣ ಮಾಸ್ಟರ್ ಬಸ್ರೂರು ಉದ್ಘಾಟಿಸಿದರು. ವೇದಿಕೆಯಲ್ಲಿ ಪೋಲಿಸ್ ಸಿಬ್ಬಂದಿ ರಾಮು ಹೆಗ್ಡೆ, ಅನುಭವಿ ವಾಲಿಬಾಲ್ ಆಟಗಾರರಾದ ಮೆಲ್ವಿನ್ ರೆಬೆಲ್ಲೋ, ಜೋಯ್ .ಜೆ.ಕರ್ವಾಲೋ, ಶ್ರೀಧರ್ ಆಚಾರ್, ಉಪಸ್ಥಿತರಿದ್ದರು. ಕುಂದಾಪುರ ವಾಲಿಬಾಲ್ ಅಕಾಡೆಮಿ ಇಲಿಯಾಸ್.ಬಿ. ಪ್ರಸ್ತಾವನೆ ಗೈದು ಕಾರ್ಯ ಕ್ರಮ ನಿರ್ವಹಿಸಿದರು. ಅಕಾಡೆಮಿಯ ಮುಖ್ಯಸ್ಥ ರಾಷ್ಟ್ರೀಯ ಆಟಗಾರ ಮಹಮ್ಮದ್ ಸಮೀರ್, ಇಲಿಯಾಸ್ .ಬಿ, ಶ್ರೀಧರ್ ಆಚಾರ್, ವಿಖ್ಯಾತ್ ಕಂಡ್ಲೂರ್ ತರಬೇತು ದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.