Moodlakatte : Mangalore University Inter Zone  Women’s Throw Ball Tournament- Alva’s Moodbidre emerge as Champion

In the Mangalore University Inter zone throw ball tournament for women, organized by IMJISC  Moodlakatte in association with Mangalore University , Alva’s First Grade College Moodbidri emerged as champion defeating Govt. First Grade college Hebri  in the final by 2-0. Paduva College Mangalore and MSRS Shirva bagged the third and fourth place respectively.

Earlier at the same venue, in the Udupi zone throw ball tournament, Alva’s  Moodbidri  emerged champion defeating Hebri Govt. College in the final match, third and fourth place were won by SMC Shirva and MSRS shirva  respectively.

Chief Guest of the Prize Distribution Ceremony, held at IMJISC grounds Moodlakatte, Mr. Harsavardhan, MD of Sristi Infotech  Kundapura, told that the sports should be an integral part of the education system and he appreciated the good participation by the teams . Guest of honour of the function Dr. Herald Santhosh, PD of Mangalore University, told the students to make time for the sports  by cutting the time on the mobile phones, and achieve  better physical fitness and mental health. Principal of IMJISC Moodlakatte and the president of the function, Dr. Prathibha Patel told, losing is not the end and by good determination followed by hard work  will surely give the winning streak.

Asst. P.D Mangalore University, Dr. Haridas Kuloor, Director, Brand Building  IMJ Institutions,  Dr. Ramakrishna Hegde, Vice Principal IMJISC Prof. Jayasheel Kumar, Physical Directors of Various Participating colleges, Referees of the tournament, Participants,  staff and students of the college were present on the occasion. Prof. Pavana  welcomed the gathering, Prof. Khaleel  Ahamed   read the list of winners ,  Prof. Pavana proposed the vote of thanks , Prof. Sumana was Master of Ceremony of the programme.

ಮೂಡ್ಲಕಟ್ಟೆ ಎಂಐಟಿಕೆ ಎಂ.ಬಿ.ಎ ವಿಭಾಗದ ಯುವ-2023

ಎಂಐಟಿ ಮೂಡ್ಲಕಟ್ಟೆ ಕುಂದಾಪುರ ಇಲ್ಲಿಯ ಎಂ.ಬಿ.ಎ ವಿಭಾಗವು ಯುವ-2023 ರಾಜ್ಯಮಟ್ಟದ ಅಂತರಕಾಲೇಜು ಮ್ಯಾನೇಜ್‍ಮೆಂಟ್ ಮತ್ತು ಸಾಂಸ್ಕøತಿಕ ಹಬ್ಬವನ್ನು ದಿನಾಂಕ 25 ಮೇ 2023ರಂದು ಕಾಲೇಜಿನ ಆವರಣದಲ್ಲಿ ನಡೆಸುತ್ತಿದೆ. ಆಹ್ವಾನಿತ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಮ್ಮ ವ್ಯಾವಹಾರಿಕ ಮತ್ತು ಸಾಂಸ್ಕøತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಉತ್ತೇಜಿಸಲು “ಯುವ” ಒಂದು ಉತ್ತಮ ವೇದಿಕೆಯಾಗಲಿದೆ. ಉಡಾನ್ (ಬಿಸಿನೆಸ್ ಪ್ಲಾನ್) ಆ್ಯಡ್‍ಮ್ಯಾಡ್, ಚದುರಂಗ (ಬಿಸಿನೆಸ್ ಕ್ವಿಜ್), 100 ಕಾಫಂಡ್ ಹಾಗೂ ಹ್ಯಾಷ್ ಟ್ಯಾಗ್ ಸ್ಪರ್ಧೆಗಳು ವ್ಯವಹಾರ ಚತುರತೆಯನ್ನು ಉತ್ತೇಜಿಸಿದರೆ, “ಯುವ ಪರಂಪರಾ” ಇದು ಸಂಪ್ರದಾಯಕವಾದ ಸಾಂಸ್ಕøತಿಕ ವೈಭೋಗದ ಮೇಲೆ ಬೆಳಕು ಚೆಲ್ಲಲಿದೆ. ನೃತ್ಯ, ಹಾಡುಗಾರಿಕೆ, ಮೈಮ್, ನಾಟಕ ಮತ್ತು ಪ್ಯಾಷನ್ ಶೋ ಸ್ಪರ್ಧೆಗಳು ಸಾಂಪ್ರದಾಯಿಕವಾಗಿ ಮೂಡಿಬರಲಿದೆ. ಈ ಕಾರ್ಯಕ್ರಮಕ್ಕೆ ಹಲವಾರು ತಂಡಗಳು ತಯಾರಿಯಲಿದ್ದು ಭಾಗವಹಿಸುವ ನಿರೀಕ್ಷೆಯಲ್ಲಿದೆ.

ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ. ಭಾಸ್ಕರ್ ಶೆಟ್ಟಿ ಎಸ್, ಪ್ರಾಂಶುಪಾಲರು ಡಾ. ಜಿ ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು, ಉಡುಪಿ ಇವರು ಆಗಮಿಸಲಿದ್ದಾರೆ. ಸಂಜೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಶ್ರೀ ಎಚ್. ಕೆ. ಗಂಗಾಧರ್ ಡಿಜಿಎಂ ಮತ್ತು ಮುಖ್ಯ ಕಲಿಕಾ ಅಧಿಕಾರಿ, ಕೆನರಾ ಬ್ಯಾಂಕ್ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಐಎಂಜೆ ವಿದ್ಯಾಸಂಸ್ಥೆಗಳ ಚೇರ್‍ಮೆನ್‍ರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿಯವರು ವಹಿಸಲಿದ್ದಾರೆ.

ಮಹಾತಾಯಿಯೊಬ್ಬಳು 7 ತಿಂಗಳಲ್ಲೆ ಏಕಕಾಲದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದಳು..!!!

ಜಾರ್ಖಂಡ್​​ ಛತ್ರಾ:  ಜಾರ್ಖಂಡ್​​ನ ಛತ್ರಾ ಜಿಲ್ಲೆಯ ಇಟ್ಖೋರಿ​ ಎಂಬ ಹಳ್ಳಿಯ ಮಹಿಳೆ ಆಸ್ಪತ್ರೆಯಲ್ಲಿ ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅದೂ ಎಳು ತಿಂಗಳಲ್ಲಿ.  ಸದ್ಯ ತಾಯಿ ಮತ್ತು ಮಕ್ಕಳು ಎಲ್ಲರೂ ಆರೋಗ್ಯವಾಗಿದ್ದು, ರಿಮ್ಸ್ ಆಸ್ಪತ್ರೆ ತಿಳಿಸಿದ್ದು, ಆಸ್ಪತ್ರೆಯ ಟ್ವಿಟರ್​ನಲ್ಲಿ ಐದೂ ಶಿಶುಗಳ ಫೋಟೋವನ್ನು ಹಂಚಿಕೊಂಡಿದೆ.

   ಡಾ. ಶಶಿ ಬಾಲಾ ಸಿಂಗ್​ ಅವರ ನೇತೃತ್ವದಲ್ಲಿ ಈ ಹೆರಿಗೆ ಮಾಡಿಸಲಾಗಿದೆ ಎಂದೂ ಆಸ್ಪತ್ರೆ ತಿಳಿಸಿದೆ. ಸದ್ಯ ಐದೂ ಶಿಶುಗಳನ್ನು ಎನ್‌ಐಸಿಯುದಲ್ಲಿ ಇಡಲಾಗಿದ್ದು, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರು ಅವುಗಳ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

  ಮಕ್ಕಳ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇಲ್ಲದೆ ಇದ್ದರೂ ಎಲ್ಲವುಗಳ ತೂಕವೂ ಕಡಿಮೆ ಇದೆ. ಇವೆಲ್ಲವೂ ಪ್ರಿಮೆಚ್ಯೂರ್​ ಶಿಶುಗಳಾಗಿದ್ದು ಹೆಚ್ಚಿನ ಕಾಳಜಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಹೀಗೆ ಏಕಕಾಲದಲ್ಲಿ ಮಹಿಳೆಯೊಬ್ಬರು 5 ಶಿಶುಗಳಿಗೆ ಜನ್ಮ ನೀಡಿದ್ದು ಜಾರ್ಖಂಡ್​​ನಲ್ಲಿ ಇದೇ ಮೊದಲು ಎಂದು ವರದಿಯಿಂದ ತಿಳಿದುಬಂದಿದೆ.

ಮಣಿಪುರದಲ್ಲಿ ಮತ್ತೆ ಸಂಘರ್ಷ: ರಾಜಧಾನಿ ಇಂಫಾಲದಲ್ಲಿ ಕರ್ಫ್ಯೂ ವಿಸ್ತರಣೆ, ಇಂಟರ್ನೇಟ್ ಸ್ಥಗಿತ

ಇಂಫಾಲ: ಕೆಲವು ದಿನಗಳ ಶಾಂತಿಯುತ ವಾತಾವರಣದ ನಂತರ, ಮಣಿಪುರದಲ್ಲಿ ಮತ್ತೆ ಘರ್ಷಣೆ ಆರಂಭಗೊಂಡಿದೆ.. ಇಂಫಾಲ ಪೂರ್ವ ಜಿಲ್ಲೆಯಲ್ಲಿ ಜನರ ಗುಂಪೊಂದು ಕೆಲವು ಮನೆಗಳಿಗೆ ಬೆಂಕಿ ಹಚ್ಚಿದ್ದು ಮತ್ತೆ ಸಂಘರ್ಷಕ್ಕೆಕಾರಣವಾಗಿದೆ.. ಸೇನೆ ಮತ್ತು ಅರೆಸೇನಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸುತ್ತಿವೆ. ಹೊಸ ಘರ್ಷಣೆಗಳ ನಂತರ ಇಂಫಾಲ್‌ನಲ್ಲಿ ಕರ್ಫ್ಯೂ ವಿಸ್ತರಿಸಲಾಗಿದ್ದು, ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ. ಇಂಟರ್ನೆಟ್ ನಿಷೇಧವನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸಲಾಗಿದೆ

ಅಬುಧಾಬಿಯಲ್ಲಿ ಮನೆಗೆ ಬೆಂಕಿ: 6 ಸಾವು 7 ಮಂದಿಗೆ ಗಾಯ ಇಬ್ಬರ ಸ್ಥಿತಿ ಚಿಂತಾಜನಕ


ಅಬುಧಾಬಿ ಅಬುಧಾಬಿಯ ಮುಜಾಝಾಜ್ ಪ್ರದೇಶದಲ್ಲಿ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಯುಎಇ ಕ್ಯಾಪಿಟಲ್‌ನ ಸಿವಿಲ್ ಡಿಫೆನ್ಸ್ ತಿಳಿಸಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.,

ಬೆಂಕಿ ಅನಾಹುತದ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ, ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದ್ದು ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ಬೆಂಕಿ ಅವಘಡಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಕಾರಣ ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

ಕೋಲಾರ : ರಾಜ್ಯದಲ್ಲಿ ಯಾವುದೇ ಸರಕಾರ ಬರಲಿ ಕೋಲಾರ ಜಿಲ್ಲೆಯ ಶಾಸಕರಿಗೆ ಮಂತ್ರಿಯಾಗುವ ಯೋಗವೇ ಕೂಡಿ ಬರುತ್ತಿಲ್ಲ

ಶನಿವಾರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿಯೂ ಕೋಲಾರ ಜಿಲ್ಲೆಯ ಯಾವುದೇ ಶಾಸಕ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿಲ್ಲ .

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿಗೆದ್ದ ಕೆ.ಎಚ್. ಮುನಿಯಪ್ಪ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದೇ ಸದ್ಯ ಕೋಲಾರ ಜಿಲ್ಲೆಯ ಜನರ ಸಮಾಧಾನಕ್ಕೆ ಕಾರಣವಾಗಿದ್ದು , ಇವರೇ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗುವ ಸಾಧ್ಯತೆ ಇದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಸಂತಸಕ್ಕೆ ಕಾರಣವಾಗಿದೆ .

ಕೋಲಾರ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿ ದಿವಂಗತ ಸಿ.ಬೈರೇಗೌಡ , ಆಲಂಗೂರ್ ಶ್ರೀನಿವಾಸ್ , ವಿ. ಮುನಿಯಪ್ಪ ಇತರರು ಜಿಲ್ಲಾ ಆಡಳಿತದಲ್ಲಿ ತಮ್ಮದೇ ಹೆಜ್ಜೆ ಗುರುತುಗಳನ್ನು ಮೂಡಿಸಿಹೋಗಿದ್ದಾರೆ .

ಆನಂತರದ ದಿನಗಳಲ್ಲಿ ಆರ್. ವರ್ತೂರು ಪ್ರಕಾಶ್ , ಆಲಂಗೂರ್ ಶ್ರೀನಿವಾಸ್ , ಎಚ್. ನಾಗೇಶ್ ಮತ್ತು ಕೆ . ಆರ್ ರಮೇಶ್ ಕುಮಾರ್ ತಮ್ಮದೇ ರೀತಿಯಲ್ಲಿ ಆಡಳಿತ ನಡೆಸಿ ಗಮನ ಸೆಳೆದಿದ್ದಾರೆ . ಆದರೆ , ಇತ್ತೀಚಿನ ವರ್ಷಗಳಲ್ಲಿ ಕೋಲಾರ ಜಿಲ್ಲೆಯ ಶಾಸಕರಿಗೆ ಮಂತ್ರಿ ಭಾಗ್ಯ ಸಿಗದ ಕಾರಣದಿಂದಾಗಿ ಯಾವುದೇ ರಾಜಕಾರಣಿ ಸಮರ್ಥವಾಗಿ ಉಸ್ತುವಾರಿ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ .

ಹಿಂದಿನ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕೋಲಾರದಿಂದ ಜೆಡಿಎಸ್ ಶಾಸಕರಾಗಿ ಕೆ. ಶ್ರೀನಿವಾಸಗೌಡ ಗೆದ್ದಿದ್ದರೂ , ಅವರಿಗೆ ಮಂತ್ರಿಯಾಗುವ ಭಾಗ್ಯ ಒದಗಿಬರಲಿಲ್ಲ . ಇದರಿಂದ ಉಸ್ತುವಾರಿ ಹೊಣೆಯೂ ಕೈಗೆಟುಕಲಿಲ್ಲ . ಆನಂತರದ ಬಿಜೆಪಿ ಸರಕಾರದಲ್ಲಿ ಸುಮಾರು ದಿನಗಳ ಕಾಲ ಕೋಲಾರ ಜಿಲ್ಲೆಗೆ ಮಂತ್ರಿಯನ್ನೇ ನೇಮಕ ಮಾಡಿರಲಿಲ್ಲ .

ಕೇವಲ ಆಗಸ್ಟ್ 15 ಮತ್ತು ಜನವರಿ 26 ರಂದು ರಾಷ್ಟ್ರೀಯ ಹಬ್ಬಗಳಂದು ರಾಷ್ಟ್ರಧ್ವಜಾರೋಹಣಕ್ಕೆ ಮಾತ್ರವೇ ಮಂತ್ರಿಗಳನ್ನು ನೇಮಕ ಮಾಡಲಾಗುತ್ತಿತ್ತು .

ಕಾಂಗ್ರೆಸ್ ಪಕ್ಷದಿಂದ ಶಾಸಕರು ಬಿಜೆಪಿ ಸೇರಿ ಉಪಚುನಾವಣೆ ಗೆದ್ದು ಬಂದ ನಂತರತವಷ್ಟೇ ಒಪ್ಪದಿದ್ದರೂ ತೋಟಗಾರಿಕೆ ಸಚಿವ ಮುನಿರತ್ನರನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಗಿತ್ತು . ಆದರೆ , ಮುನಿರತ್ನ ಕೇವಲ ಪಕ್ಷದ ಸಭೆಗಳಿಗೆ ಹಾಗೂ ಸರಕಾರಿ ದೊಡ್ಡ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದರಾದರೂ , ಕೋಲಾರ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಸಮಗ್ರವಾಗಿ ಚಿಂತನೆ ನಡೆಸುವ ಗೋಜಿಗೆ ಹೋಗಲೇ ಇಲ್ಲ . ಒಂದೆಡೆರು ಕೆಡಿಪಿ ಸಭೆಗಳನ್ನು ನಡೆಸಿ ಸುಮ್ಮನಾಗಿದ್ದರು .

2023 ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಿಂದ ನಾಲ್ವರು ಶಾಸಕರು ಗೆದ್ದಿದ್ದಾರೆ . ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತವೂ ಬಂದಿತ್ತು . ಇದರಿಂದ ಗೆದ್ದ ನಾಲ್ವರಲ್ಲಿ ಒಬ್ಬರಿಗಾದರೂ ಮಂತ್ರಿಗಿರಿ ಸಿಗುತ್ತದೆಯೆಂಬ ನಿರೀಕ್ಷೆ ಕೋಲಾರ ಜಿಲ್ಲೆಯವರದ್ದಾಗಿತ್ತು . ಅದರಲ್ಲೂ ಬಂಗಾರಪೇಟೆಯ ಎಸ್.ಎ ನ್. ನಾರಾಯಣಸ್ವಾಮಿ ಮೂರು ಬಾರಿ ಗೆದ್ದಿದ್ದರಿಂದ ಮಂತ್ರಿಯಾಗಲು ಪ್ರಯತ್ನಿಸಿದ್ದರು .

ಮಾಲೂರಿನ ಕೆ.ವೈ. ನಂಜೇಗೌಡ , ಕೋಲಾರದ ಕೊತ್ತೂರು ಮಂಜುನಾಥ್ ತಮ್ಮ ವಾದ ಮಂಡಿಸಿ ಮಂತ್ರಿಗಿರಿಗಾಗಿ ಧ್ವನಿ ಎತ್ತಿದ್ದರು . ಕೆಜಿಎಫ್ ಶಾಸಕಿ ರೂಪಕಲಾರಿಗೆ ಮಂತ್ರಿಯಾಗುವ ಭಾಗ್ಯ ಸ್ವಲ್ಪದರಲ್ಲಿ ಕೈತಪ್ಪುವಂತಾಯಿತು . ಮಹಿಳಾ ಹಾಗೂ ದಲಿತ ಎಡಗೈ ಕೋಟಾದಲ್ಲಿ ರೂಪಕಲಾ ಮಂತ್ರಿಯಾಗಿಬಿಡ ುತ್ತಿದ್ದರು . ಆದರೆ , ದೇವನಹಳ್ಳಿಯಲ್ಲಿ ಗೆದ್ದಿದ್ದ ಅವರ ತಂದೆ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದರಿಂದ ರೂಪಕಲಾ ಮಂತ್ರಿಗಿರಿಯಿಂದ ವಂಚಿತರಾಗಬೇಕಾಯಿತು .

ಸಿದ್ದರಾಮಯ್ಯರ ಹಿಂದಿನ ಸರಕಾರದಲ್ಲಿ ಮಂತ್ರಿಯಾಗಿದ್ದ ಶ್ರೀನಿವಾಸಪುರದ ಕೆ ಆರ್ ರಮೇಶ್ ಕುಮಾರ್ ಈ ಬಾರಿ ಗೆದ್ದಿದ್ದರೆ ಮಂತ್ರಿಯಾಗರವ ಸ್ಥಾನದಲ್ಲಿರುತ್ತಿದ್ದರು . ಆದರೆ , ಪರಾಭವ ಗೊಂಡಿದ್ದರಿಂದ ಅವಕಾಶ ವಂಚಿತರಾದರು .

ಕೋಲಾರ ಜಿಲ್ಲೆಯ ಎಲ್ಲಾ ನಾಲ್ವರು ಶಾಸಕರು ಒಗ್ಗಟ್ಟಿನಿಂದ ಪ್ರಯತ್ನಿಸಿದ್ದರೆ ಮಂತ್ರಿಯಾಗುವ ಭಾಗ್ಯ ಒಬ್ಬರಿಗಾದರೂ ಸಿಗುತ್ತಿತ್ತು . ಆದರೆ , ತಾವೇ ಮಂತ್ರಿಯಾಗಬೇಕೆಂಬ ಭರದಲ್ಲಿ ವೈಯಕ್ತಿಕವಾಗಿ ಪ್ರಯತ್ನಿಸಿದ ಕೋಲಾರದ ಶಾಸಕರು ಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ .

ಹಿಂದಿನ ಸರಕಾರಗಳಲ್ಲಿ ಕೋಲಾರ ಜಿಲ್ಲೆಗೆ ಹಲವಾರು ತಿಂಗಳುಗಳ ಕಾಲ ಉಸ್ತುವಾರಿ ಮಂತ್ರಿಯನ್ನು ನೇಮಕ ಮಾಡಿರಲಿಲ್ಲ . ಕೇವಲ ಧ್ವಜಾರೋಹಣ ಜವಾಬ್ದಾರಿಯನ್ನು ಮಾತ್ರವೇ ಕೆಲವು ಸಚಿವರಿಗೆ ಒಪ್ಪಿಸಲಾಗುತ್ತಿತ್ತು .

ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ , ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಸರಕಾರವು ಕೋಲಾರ ಕುರಿತಂತೆ ಇಂತದ್ದೇ ನಿರ್ಲಕ್ಷ್ಯವನ್ನು ಹೊಂದಿ ಉಸ್ತುವಾರಿ ಸಚಿವರ ನೇಮಕ ಮಾಡುವುದನ್ನು ಮರೆತಿತ್ತು .

ಕೋಲಾರ ಜಿಲ್ಲೆಯಿಂದ ಉಸ್ತುವಾರಿ ಮಂತ್ರಿಗಾಗಿ ಬೇಡಿಕೆ ಹೆಚ್ಚಿದಾಗ ಮುನಿರತ್ನರನ್ನು ಕಾಡಿಬೇಡಿ ಒಪ್ಪಿಸಲಾಗಿತ್ತು .

ಇದೀಗ ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಎಂಟು ಮಂದಿ ಶಾಸಕರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ .

ಈ ಎಂಟು ಮಂದಿಯಲ್ಲಿ ಕೋಲಾರದಿಂದ ಗೆದ್ದವರು ಯಾರೂ ಇಲ್ಲ . ಮುಂದಿನ ಸಂಪುಟ ವಿಸ್ತರಣೆಯಲ್ಲಿಯೂ ಕೋಲಾರ ಜಿಲ್ಲೆಯ ಯಾರಾದರೂ ಇರುತ್ತಾರೆಂಬ ನಂಬಿಕೆ ಇಲ್ಲವಾಗಿದೆ . ಏಕೆಂದರೆ , ಕೋಲಾರ ಜಿಲ್ಲೆಯ ಶಾಸಕರಿಗಿಂತಲೂ ಪ್ರಭಾವಿ ಶಾಸಕರು ಮಂತ್ರಿಗಿರಿಗಾಗಿ ಪ್ರಯತ್ನಿಸುತ್ತಿದ್ದಾರೆ .

ಕೋಲಾರ ಉಸ್ತುವಾರಿ ಕೆ.ಎಚ್.ಮುನಿಯಪ್ಪ .. ?

ಸದ್ಯಕ್ಕೆ ಕೋಲಾರ ಜಿಲ್ಲೆಯ ಆಶಾಕಿರಣ ಎಂದರೆ ದೇವನಹಳ್ಳಿಯಲ್ಲಿ ಗೆದ್ದು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕೆ.ಎಚ್. ಮುನಿಯಪ್ಪ ಮಾತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗೆದ್ದರೂ ಕೆ.ಎಚ್. ಮುನಿಯಪ್ಪ ಕೋಲಾರ ಉಸ್ತುವಾರಿ ಹೊಣೆಗಾರಿಯನ್ನು ಹೊತ್ತುಕೊಳ್ಳುತ್ತಾರೆಂಬ ವಿಶ್ವಾಸ ಅವರ ಬೆಂಬಲಿಗರಲ್ಲಿದೆ .

ಇದು ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೆ.ಎಚ್ . ಮುನಿಯಪ್ಪರನ್ನು ವಿರೋಧಿಸುವ ಒಂದು ಗುಂಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ . ಮತ್ತೊಂದೆಡೆ ಕೋಲಾರ ಜಿಲ್ಲೆಯ ಶಾಸಕರಿಗೆ ಮಂತ್ರಿ ಸ್ಥಾನ ಸಿಗಬೇಕು , ಅವರೇ ಕೋಲಾರ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕೆಂಬ ಬೇಡಿಕೆ ರೈತ ಸಂಘ ಸೇರಿದಂತೆ ರಾಜಕೀಯ ವಲಯದಲ್ಲಿಯೂ ಕೇಳಿ ಬರುತ್ತಿದೆ .

ಹಿಂದಿನ ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರಗಳಲ್ಲಿ ಕೋಲಾರ ಜಿಲ್ಲೆಗೆ ಉಸ್ತುವಾರಿ ಹೊಣೆ ನೀಡದೆ ನಿರ್ಲಕ್ಷಿಸಿದಂತೆ ಕಾಂಗ್ರೆಸ್ ಹೊಸ ಸರಕಾರದಲ್ಲಿ ಆಗದಿರಲಿ ಎಂಬುದು ಕೋಲಾರ ಜಿಲ್ಲೆಯ ಜನತೆಯ ಆಶಯವಾಗಿದೆ . ಕೋಲಾರ ರಾಜಕಾರಣವನ್ನು ಚೆನ್ನಾಗಿಯೇ ಅರಿತಿರುವ ಮುಖ್ಯಮಂತ್ರಿ ಸಿದ್ದರಾವಯ್ಯ , ಕೋಲಾರದಯಾವ ಶಾಸಕರನ್ನು ತಮ್ಮ ಮಂತ್ರಿ ಮಂಡಲದಲ್ಲಿ ಸೇರಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಲ್ಲಿಯವರೆವಿಗೂ ಇದ್ದೇ ಇರುತ್ತದೆ

ತಹಶೀಲ್ದಾರ್ ಶಿರಿನ್ ತಾಜ್ ಅವರ ನೇತೃತ್ವದಲ್ಲಿ ಕಂದಾಯ, ತೊಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸಂಭವಿಸಿರುವ ಪ್ರದೇಶಗಳ ಪರಿಶೀಲನೆ

ಶ್ರೀನಿವಾಸಪುರ: ತಹಶೀಲ್ದಾರ್ ಶಿರಿನ್ ತಾಜ್ ಅವರ ನೇತೃತ್ವದಲ್ಲಿ ಸೋಮವಾರ ಕಂದಾಯ, ತೊಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಸಿದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತೋಟಗಾರಿಕಾ ಅಧಿಕಾರಿಗಳಾದ ಹರೀಶ್, ಎನ್.ಮಂಜುನಾಥ್, ಎಂ.ಎಸ್.ರಾಜೀವ್ ಇದ್ದರು.
ತಾಲ್ಲೂಕಿನಲ್ಲಿ ಈ ಮುಂಗಾರಿನಲ್ಲಿ 2939 ಹೆಕ್ಟೇರ್‍ನಲ್ಲಿ ಬೆಳೆಯಲಾಗಿದ್ದ ತೋಟದ ಬೆಳೆಗೆ ಹಾನಿ ಉಂಟಾಗಿದೆ. ಆಪೈಕಿ 2500 ಹೆಕ್ಟೇರ್‍ನಲ್ಲಿ ಬೆಳೆಯಲಾಗಿದ್ದ ಮಾವಿನ ಫಸಲಿಗೆ ಹಾನಿ ಉಂಟಾಗಿದೆ. ಬೆಳೆ ನಷ್ಟ ಅನುಭವಿಸಿರುವ 1546 ರೈತರಲ್ಲಿ 515 ಸಣ್ಣ ರೈತರು ಹಾಗೂ 1031 ಇತರ ರೈತರು ಸೇರಿದ್ದಾರೆ ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ತಿಳಿಸಿದರು.
ಸಭೆ: ಬೆಳೆ ಹಾನಿ ಪರಿಶೀಲನೆ ಬಳಿಕ, ತಹಶೀಲ್ದಾರ್ ಶಿರಿನ್ ತಾಜ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಯಿತು.
ತಹಶೀಲ್ದಾರ್ ಶರಿನ್ ತಾಜ್ ಮಾತನಾಡಿ, ಬೆಳೆ ಹಾನಿ ಪ್ರಕರಣಗಳಲ್ಲಿ ಅತ್ಯಂತ ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ಬೆಳೆ ನಷ್ಟ ಅಂದಾಜು ಮಾಡಲಾಗಿದೆ. ಜಿಪಿಎಫ್ ಬಳಸಿ ರೈತರ ಸಮ್ಮುಖದಲ್ಲಿ ಪಹಣಿ ಪರಿಶೀಲನೆ ನಡೆಸಲಾಗಿದೆ. ಬೆಳೆ ನಷ್ಟ ಪರಿಹಾರ ಅರ್ಹ ಫಲಾನುಭವಿಗೆ ದೊರೆಯುವಂತೆ ಎಚ್ಚರ ವಹಿಸಲಾಗಿದೆ. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಮಾವು, ಪ್ರಮುಖ ತೋಟದ ಬೆಳೆಗಳಾದ ಟೊಮೆಟೊ, ಕ್ಯಾಪ್ಸಿ ಕಂ, ಬೀನ್ಸ್ ಮತ್ತಿತರ ಬೆಳೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ಹಿರಿಯ ಅಧಿಕಾರಿಗಳಿಗೆ ಬೆಳೆ ಹಾನಿ ಪರಿಶೀಲನಾ ವರದಿ ಕಳಿಸಿಕೊಡಲಾಗುವುದು ಎಂದು ಹೇಳಿದು.