ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ಬೆಂಗಳೂರು : ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈ ಕುರಿತಾಗಿ ಮುನ್ಸೂಚನೆ ನೀಡಲಾಗಿದ್ದು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆಯಾಗಲಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಳ್ಳಾರಿ, ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ, ರಾಮನಗರ, ವಿಜಯನಗರ, ಕೋಲಾರ, ಕೊಡಗು, ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸೋಮವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಕರಾವಳಿಯ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕುಂದಾಪುರ ತಾಲೂಕು ಆಯುಷ್ ಆಸ್ಪತ್ರೆಗೆ ರೂಪಾಯಿ 56,600 ಮೌಲ್ಯದ ಔಷಧಗಳ ಕೊಡುಗೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರು ತಾಲೂಕು ಆಯುಷ್ ಆಸ್ಪತ್ರೆ ಕುಂದಾಪುರ ಇಲ್ಲಿಗೆ ರೂಪಾಯಿ 56,600 ಮೌಲ್ಯದ ಔಷಧ ಗಳನ್ನು ಉಚಿತವಾಗಿ ನೀಡಿದರು. ಇದನ್ನು ಆಯುಷ್ ಆಸ್ಪತ್ರೆಯ ವೈದ್ಯರಾದ ಅಶೋಕ್ ಎಚ್. ಇವರಿಗೆ ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಸದಾನಂದ ಶೆಟ್ಟಿ ಮತ್ತು ಬಿ. ಎಮ್. ಚಂದ್ರಶೇಖರ್ ಹಾಗೂ ಆಸ್ಪತ್ರೆಯ ಸಿಭಂಧಿಗಳು ಉಪಸ್ಥಿತರಿದ್ದರು.

ಕುಂದಾಪುರದ ಹಿರಿಯ ಉದ್ಯಮಿ ರಾಮದಾಸ ಮಲ್ಯ ನಿಧನ


ಕುಂದಾಪುರದ ಹಿರಿಯ ವ್ಯವಹಾರೋದ್ಯಮಿ ರಾಮದಾಸ ಮಲ್ಯ (86) ಮೇ 22 ರಂದು ನಿಧನರಾದರು.
ಖಾಸಗಿ ಬಸ್ ಟ್ರಾನ್ಸ್‍ಪೋರ್ಟ್ ವ್ಯವಹಾರಸ್ಥರಾಗಿ ಜನಪ್ರಿಯರಾಗಿದ್ದ ಇವರು ಕುಂದಾಪುರದ ಪುರಸಭೆ ಬಳಿ ಕಾಂಡಿಮೆಂಟ್ಸ್ ವ್ಯವಹಾರ ಮಳಿಗೆಯನ್ನು ಪುತ್ರರೊಂದಿಗೆ ನಡೆಸುತ್ತಿದ್ದರು.
ಇವರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಸಮುದಾಯದ ಧರ್ಮಗುರುಗಳಿಂದ, ಹ್ಯುಮಾನಿಟಿ ಉಚಿತ ವಸತಿ 20 ಮನೆಗಳ ಕೀಲಿ ಕೈಗಳ ಆಶೀರ್ವಚನ

ವರದಿ: ಪಿಯೂಸ್ ಲಿಗೋರಿ ರೊಡ್ರಿಗಸ್

ಉಚಿತ ವಸತಿ ಯೋಜನೆಯ 20 ಮನೆಗಳ 20 ಕೀಲಿ ಕೈಗಳನ್ನು ಸ್ಥಳೀಯ ಅಲಂಗಾರು ಚರ್ಚಿನ ಧರ್ಮಗುರುಗಳು , ಶ್ರೀ ಬಡಗು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಲಂಗಾರು ಅರ್ಚಕರು, ಸಾವಿರ ಕಂಬದ ಬಸದಿ, ಮೂಡಬಿದ್ರೆ ಸ್ವಾಮೀಜಿಯವರು, ನೂರಾನಿ ಮಸೀದಿ ಪುತ್ತಿಗೆ ಧರ್ಮಗುರುಗಳು ಆಶೀರ್ವದಿಸಿ ಸಂಸ್ಥೆಯ ಮೇಲೆ ಹಾಗೂ ಸಂಸ್ಥೆಯ ದಾನಿ ಅಭಿಮಾನಿಗಳ ಮೇಲೆ ದೇವರ ಕೃಪೆಯನ್ನು ಬೇಡಿ ಶುಭ ಹಾರೈಸಿದರು. ಹ್ಯುಮಾನಿಟಿ ಟ್ರಸ್ಟಿಗಳಾದ ಮತ್ತು ಅಭಿಮಾನಿಗಳಾದ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ನಾಲ್ಕೂ ಸಮುದಾಯದವರು ಭಾಗವಹಿಸಿದ್ದರು.