ಮಾಜಿ ಶಾಸಕ ಯುಆರ್ ಸಭಾಪತಿ ನಿಧನ (71)

ಉಡುಪಿ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ  ಮಾಜಿ ಶಾಸಕ ಯು ಆರ್ ಸಭಾಪತಿ ನಿಧನರಾಗಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. 1994 ರಲ್ಲಿ ಕೆಸಿಪಿ ಮತ್ತು 1999 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.  ಯುಆರ್ ಸಭಾಪತಿ ಅವರು ಮಾಜಿ ಸಿಎಂ ಬಂಗಾರಪ್ಪ ಅವರ ಅನುಯಾಯಿ ಆಗಿದ್ದರು. ಆಸ್ಕರ್ ಫರ್ನಾಂಡಿಸ್ ರಾಜಕೀಯ ಪ್ರವೇಶಕ್ಕೂ ಸಭಾಪತಿ ಪ್ರೇರಣೆಯಾಗಿದ್ದರು. ಯು ಆರ್ ಸಭಾಪತಿ ರಾಷ್ಟ್ರೀಯ ಜನತಾದಳ, ಜಾತ್ಯಾತೀತ ಜನತಾದಳದೊಂದಿಗೂ ಗುರುತಿಸಿಕೊಂಡಿದ್ದರು. 80 -90ರ ದಶಕದ ಕರಾವಳಿಯ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು.

ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ದಿವ್ಯ ಬಲಿಪೀಠ ಸೇವಕರ ದಿನಾಚರಣೆ

Report And Photos : Dominic Braganza

ಕುಂದಾಪುರ, ಮೇ, 21: ಭಾನುವಾರ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ದಿವ್ಯ ಬಲಿಪೀಠದ ಸೇವಕರ ದಿನವನ್ನು ಆಚರಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು. ಕುಂದಾಪುರ ಹೋ ಲಿ ರೋಜರಿ ಚರ್ಚಿನ ಸಹಾಯ ಧರ್ಮಗುರುಗಳಾದ ವಂದನೀಯ ಫಾ. ಅಶ್ವಿನ್ ಆರಾನ್ನಾ ಪ್ರಧಾನ ಯಾಜಕರಾಗಿ ಈ ದಿವ್ಯ ಬಲಿಪೂಜೆಯನ್ನು ಅರ್ಪಿಸಿ “ದಿವ್ಯ ಬಲಿಪೀಠದ ಸೇವಕರ ಪಾಲಕ ಸಂತ ಬರ್ಕ್ ಮನ್ಸ್ ರಿಗೆ ದಿವ್ಯ ಬಲಿಪೀಠದ ಸೇವೆ ಮಾಡುವುದರಲ್ಲಿ ಅತೀವ ಶ್ರದ್ಧೆ ಹಾಗೂ ಪ್ರೀತಿಯಿತ್ತು. ಅದರಂತೆ ದಿವ್ಯ ಬಲಿಪೀಠದ ಸೇವಕರು ಅವರ ಪಾಲಕ ಸಂತರ ಆದರ್ಶವನ್ನು ಮೈಗೂಡಿಸಿಕೊಂಡು, ಯೇಸು ಕ್ರೀಸ್ತರು  ತೋರಿಸಿದ ಹಾದಿಯಲ್ಲಿ ನಡೆದು, ಮುಂದೊಂದು ದಿನ ದೇವರ ಕರೆಗೆ ಓಗೊಟ್ಟು ಯಾಜಕರಾಗಿ ದೇವರ ಸೇವೆ ಮಾಡುವಂತಾಗಲಿ”  ಎಂದು ಪ್ರಾರ್ಥಿಸಿದರು.

    ಕುಂದಾಪುರ ಹೋ ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾ. ಸ್ಟ್ಯಾನಿ ತಾವ್ರೋರವರು ಸಹ ಯಾಜಕರಾಗಿ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿ ದೇವರ ಶುಭ ಸಂದೇಶವನ್ನು ವಾಚಿಸಿ ಅರ್ಥಭರಿತವಾದ ಪ್ರಸಂಗವನ್ನು ನೀಡಿದರು. ದಿವ್ಯ ಬಲಿಪೂಜೆಯ ಕೊನೆಯಲ್ಲಿ ದಿವ್ಯ ಬಲಿಪೀಠದ ಸೇವಕರು ಸಮರ್ಪಣಾ ಪ್ರಾರ್ಥನೆಯನ್ನು ವಾಚಿಸಿದರು. ದಿವ್ಯ ಬಲಿಪೂಜೆಯ ನಂತರ ದಿವ್ಯ ಬಲಿಪೀಠ ಸೇವಕರಿಗಾಗಿ ಫಲಾಹಾರವನ್ನು ನೀಡಲಾಯಿತು.

Bhagyashree of St Lawrence English Medium school Bondel bags first prize in International karate competition.

10th standard student of st Lawrence English Medium school Bondel Mangalore Bhagyashree, daughter of Kamalaksha and Babitha participated in 45th JSKA international open level karate Championship compitition held on 13 and 14th of May 2023 at V.K.N. Menon Indoor Stadium, Thrissur, Kerala, India and won first place in KATA and third place in KUMITE. 

Earlier on 6&7th of May 2023 she had participated in TSKO 2nd National level karate Championship held at C.Pa Adhithanar Kalyana Mandapam, Anna Salai, Kodaikanal and won black belt in KUMITE and Kata. She was trained by Karate master Mr Kamalaksha. 

ಮಾವಿನ ಸುಗ್ಗಿಯಲ್ಲಿ ವರ್ತಕರು ಮತ್ತು ರೈತರು ಸಮನ್ವಯತೆಯಿಂದ ವಹಿವಾಟು ನಡೆಸಿ – ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸಲಹೆ

ಶ್ರೀನಿವಾಸಪುರ ಮೇ-20 : ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಮಾವಿಗೆ ಹೆಸರುವಾಸಿಯಾಗಿದೆ ಆದ್ದರಿಂದ ರೈತರು, ವರ್ತಕರು ಸಮನ್ವಯತೆಯಿಂದ ನಡೆದುಕೊಂಡು ಯಾವುದೇ ಅಡಚಣೆಗಳಿಲ್ಲದೆ ಮಾವಿನ ಸುಗ್ಗಿ ಪೂರ್ಣಗೊಳಿಸಬೇಕು ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಸೂಚಿಸಿದರು.
ಎ.ಪಿ.ಎಂ.ಸಿ. ಪ್ರಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಾರ್ಷಿಕ ಬೆಳೆ ಮಾವಿನ ಸುಗ್ಗಿ ಪ್ರಾರಂಭವಾಗಿದೆ ವರ್ತಕರು ರೈತರಿಗೆ ಯಾವುದೇ ತೊಂದರೆಯಾಗದಂತೆ ಪಾರದರ್ಶಕತೆಯನ್ನು ಕಾಪಾಡಬೇಕು ಕಾರ್ಮಿಕರಿಗೆ ಅಗತ್ಯವಾದ ಶುದ್ದ ಕುಡಿಯುವ ನೀರು, ವಿಶ್ರಾಂತಿಧಾಮ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನಿಗಾ ವಹಿಸಬೇಕು ಎಂದು ಕಾರ್ಯದರ್ಶಿ ಉಮಾರವರಿಗೆ ಸೂಚಿಸಿದರು. ಪೊಲೀಸ್ ಇಲಾಖೆಯವರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು ಜೊತೆಗೆ ಮುಖ್ಯರಸ್ತೆಯಲ್ಲಿ ನಿಲ್ಲಿಸುವ ಬೃಹತ್ ವಾಹನಗಳು ತೆರವುಗೊಳಿಸಲು ಪೊಲೀಸ್ ಇಲಾಖೆಯವರು ಗಮನ ಹರಿಸಬೇಕು, ಪ್ರಾಂಗಣದೊಳಗೆ ಮದ್ಯ ಮಾರಾಟ ನಿಲ್ಲಿಸಲು ಅಬಕಾರಿ ಇಲಾಖೆ ಕಾರ್ಯೋನ್ಮುಕರಾಗಬೇಕು ಎಂದ ಅವರು ಅಗತ್ಯವಿರುವ ರಸ್ತೆ, ಚರಂಡಿ ಕಾಮಗಾರಿಯನ್ನು ನಡೆಸಲು ಕ್ರಿಯಾಯೋಜನೆ ತಯಾರಿಸಿ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾವು ಬೆಳೆಗಾರರ ಅಧ್ಯಕ್ಷ ಚಿನ್ನಪ್ಪರೆಡ್ಡಿ ಮಾತನಾಡಿ ಸರಿಸುಮಾರು 150 ಮಂಡಿಗಳು ಇರುವ ಪ್ರಾಂಗಣದಲ್ಲಿ ಹಲವಾರು ಕುಂದುಕೊರತೆಗಳು ಜೀವಂತವಾಗಿದ್ದಾವೆ ಅದನ್ನು ಸರಿಪಡಿಸಲು ಕರೆದಿರುವ ಸಭೆಗೆ ಹಲವಾರು ಮಂಡಿ ಮಾಲೀಕರು ಬಾರದೆ ಇರುವುದು ಬೇಸರದ ಸಂಗತಿ, ಎ.ಪಿ.ಎಂ.ಸಿ. ಕಾಯ್ದೆಯ ಪ್ರಕಾರ ಕಮೀಷನ್ ಪಡೆಯಬಾರದು ಹಾಗೂ ಮಂಡಿ ಮಾಲೀಕರು ತ್ಯಾಜ್ಯವನ್ನು ರಸ್ತೆಬದಿ ಹಾಕಬಾರದು ಎಂದು ವರ್ತಕರ ಗಮನಕ್ಕೆ ತಂದರು.
ಎ.ಪಿ.ಎಂ.ಸಿ. ಕಾರ್ಯದರ್ಶಿ ಉಮಾ ಮಾತನಾಡಿ ಸಮಿತಿಗೆ ಬರುವ ಆದಾಯದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ 2015ನೇ ಸಾಲಿನಲ್ಲಿ ಸಮಿತಿ ಮಾಡಿರುವ ಸಾಲಕ್ಕೆ ಬಡ್ಡಿ ತೀರಿಸಲು ಆಗದ ಕಾರಣ ಶಾಸಕರು ಪ್ರಾಂಗಣಕ್ಕೆ ಅಗತ್ಯವಿರುವ ರಸ್ತೆ, ಚರಂಡಿ, ಕಾಂಪೌಂಡ್ ನಿರ್ಮಾಣ, ಶುದ್ದ ನೀರಿನ ಘಟಕ ಮತ್ತು ತ್ಯಾಜ್ಯ ವಿಲೇವಾರಿ ಮಾಡಲು ಸ್ಥಳಾವಕಾಶವನ್ನು ನೀಡಬೇಕು ಎಂದು ಕೋರಿದರು.
ಈ ಸಂಧರ್ಭದಲ್ಲಿ ಜಿಲ್ಲ ಪಂಚಾಯ್ತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್. ನಾರಾಯಣಸ್ವಾಮಿ, ಮಂಡಿ ಮಾಲೀಕರ ಸಂಘದ ಅಧ್ಯಕ್ಷ ಅಕ್ಬರ್ ಷರೀಫ್, ಎ.ಪಿ.ಎಂ.ಸಿ. ಮಾಜಿ ನಿರ್ದೇಶಕರಾದ ಅಥಾವುಲ್ಲ, ಅನೀಸ್ ಅಹಮದ್, ನಾರಾಯಣಸ್ವಾಮಿ, ಪಿ.ಎಸ್.ಐ. ರಾಮಚಂದ್ರಯ್ಯ ಇತರರು ಇದ್ದರು.

ಹಿರಿಯ ರಾಜಕಾರಣಿ ಕೆ.ಎಚ್ ಮುನಿಯಪ್ಪ ಅವರು ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ -ಪ್ರಮಾಣ ವಚನ ಸ್ವೀಕಾರ

ಶ್ರೀನಿವಾಸಪುರ: ಕರ್ನಾಟಕ ರಾಜಕೀಯದ ಅತ್ಯಂತ ಹಿರಿಯ ರಾಜಕಾರಣಿಯಾದ ಕೆ.ಎಚ್ ಮುನಿಯಪ್ಪ ಅವರು ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು , ಇಂದು ( ಮೇ 20 ) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೆ.ಎಚ್ ಮುನಿಯಪ್ಪ ಅವರು 07 ಮಾಚ್ 1948 ರಂದು ಕೋಲಾರ ಜಿಲ್ಲೆಯ ಕಂಬದಹಳ್ಳಿ ಶ್ರೀ ಹನುಮಪ್ಪ ಹಾಗೂ ಶ್ರೀಮತಿ ವೆಂಕಟಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ವೃತ್ತಿಯಲ್ಲಿ ವಕೀಲರಾಗಿರುವ ಕೆ.ಎಚ್ ಮುನಿಯಪ್ಪ ಸಮಾಜಿಕ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ನಾಗರತ್ನಮ್ಮ ಅವರನ್ನು ವಿವಾಹವಾಗಿರುವ ಕೆ.ಎಚ್ ಮುನಿಯಪ್ಪ ಅವರಿಗೆ ನಾಲ್ವರು ಪುತ್ರಿಯರು ಓರ್ವ ಪುತ್ರನಿದ್ದಾನೆ.

1960 ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಕೆ.ಎಚ್ ಮುನಿಯಪ್ಪ ಅವರು ಸುದೀರ್ಘ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಕೇಂದ್ರ ರಾಜಕೀಯದಲ್ಲಿ ಸೋಲಿಲ್ಲದ ಸರದಾರನಂತಿದ್ದ ಕೆ.ಎಚ್ ಮುನಿಯಪ್ಪ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರ ರಾಜಕೀಯ ತಂತ್ರಗಾರಿಕೆಗಳಿಂದ ಸೋಲನ್ನು ಅನುಭವಿಸಿದ್ದರು.