ಜಿಲ್ಲಾದ್ಯಂತ ಅವೈಜ್ಞಾನಿಕ ಅಂಡರ್‍ಪಾಸ್ ಅವ್ಯವಸ್ಥೆ ಸರಿಪಡಿಸಿ -ರೈತ ಸಂಘದಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ

ಬಂಗಾರಪೇಟೆ, ಮೇ-18 ಜಿಲ್ಲಾದ್ಯಂತ ಅವೈಜ್ಞಾನಿಕ ಅಂಡರ್‍ಪಾಸ್ ಅವ್ಯವಸ್ಥೆ ಸರಿಪಡಿಸಿ ಮುಂಗಾರು ಮಳೆಯಿಂದ ಜನ ಸಾಮಾನ್ಯರ ರಚನೆ ಮಾಡುವ ಜೊತೆಗೆ ರೈಲ್ವೆ ಟ್ರಾಕ್ ಅಕ್ಕಪಕ್ಕದಲ್ಲಿ ಸುರಿಯುತ್ತಿರುವ ಕಸವನ್ನು ಸ್ವಚ್ಚಗೊಳಿಸಿ ಮುಳ್ಳು ತಂತಿಯನ್ನು ಅಳವಡಿಸಿ ಜಾನುವಾರುಗಳನ್ನು ರಕ್ಷಣೆ ಮಡಬೇಕೆಂದು ರೈತ ಸಂಘದಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಕೋಲಾರ ರೈಲ್ವೆ ಟ್ರಾಕ್ ಹಾದು ಹೋಗುವ ಕೀಲುಕೋಟೆ, ಟವರ್, ವ್ಯಾಪ್ತಿಯಲ್ಲಿ ಸುತ್ತಮುತ್ತಲ ಮನೆಯವರು ಕಸವನ್ನೇ ರೈಲ್ವೆ ಅಳಿಗಳ ಮೇಲೆ ಸುರಿದಿರುವ ಕಸದ ರಾಶಿಯಲ್ಲಿ ಮೇವಿಗಾಗಿ ಜಾನುವಾರುಗಳು ರೈಲ್ವೆ ಕಂಬಿಗಳ ಮೇಲೆ ನಿಲ್ಲುತ್ತಿರುವುದರಿಂದ ಹಾದು ಹೋಗುವ ರೈಲಿಗೆ ಸಿಲುಕಿ ಪ್ರಾಣವನ್ನು ಕಳೆದುಕೊಳ್ಳುವ ಜೊತೆಗೆ ರಾತ್ರಿ ವೇಳೆ ಕೆಲವು ಯುವಕರು ಕಂಬಿಗಳ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವ ಬಗ್ಗೆ ದೂರು ನೀಡುತ್ತಿದ್ದರೂ ಇದುವರೆಗೂ ಸಮಸ್ಯೆಯನ್ನು ಇದುವರೆಗೂ ಗಂಭೀರವಾಗಿ ಪರಿಗಣಿಸಿಲ್ಲವೆಂದು ಅವ್ಯವಸ್ಥೆ ವಿರುದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿವರ್ಷ ಮುಂಗಾರು ಮಳೆ ಪ್ರಾರಂಭವಾದಾಗ ಜಿಲ್ಲಾದ್ಯಂತ ಎಲ್ಲಾ ಅಂಡರ್‍ಪಾಸ್‍ಗಳು ಕೆರೆ ಕುಂಟೆಗಳಾಗಿ ಮಾರ್ಪಟ್ಟು ಹಳ್ಳಿಯಿಂದ ಹಳ್ಳಿಗೆ ಸಂಪರ್ಕಗಳು ಸಂಪೂರ್ಣವಾಗಿ ಖಡಿತವಾಗುತ್ತಿದ್ದರೂ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಿಫಲವಾಗಿದ್ದಾರೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ರೈಲ್ವೆ ಇಲಾಖೆ ಅಭಿವೃದ್ದಿ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುವ ಇಲಾಖೆಯಾಗಿ ಮಾರ್ಪಟ್ಟಿದೆ. ಜಿಲ್ಲಾದ್ಯಂತ ಸಾವಿರಾರು ಕೋಟಿ ಅನುದಾನದಲ್ಲಿ ಅಭಿವೃದ್ದಿಪಡಿಸಿರುವ ಅಂಡರ್ ಪಾಸ್‍ಗಳು ಯಾವುದೇ ಮುಂಜಾಗ್ರತೆ ಇಲ್ಲದೆ ಸ್ಥಳೀಯರ ಜೊತೆ ಚರ್ಚೆ ಮಾಡದೆ ತಮಗೆ ಇಷ್ಟ ಬಂದ ರೀತಿ ಎಲ್ಲಿ ಬೇಕೋ ಅಲ್ಲಿ ಮಳೆ ನೀರು ಸರಾಗವಾಗಿ ಹರಿದು ಪಕ್ಕದ ರಾಜಕಾಲುವೆ ಇಲ್ಲ ಚಿಕ್ಕಕಾಲುವೆಗಳಿಗೆ ಹೋಗಬೇಕಾದ ದಾರಿಯಿಲ್ಲದೆ ಅಂಡರ್ ಪಾಸ್‍ಗಳನ್ನು ನಿರ್ಮಿಸಿರುವುದರಿಂದ ಮುಂಗಾರು ಮಳೆ ಪ್ರಾರಂಭವಾದರೆ ಅಂಡರ್ ಪಾಸ್ ಸುತ್ತಮುತ್ತಲಿರುವ ಗ್ರಾಮೀಣ ಪ್ರದೇಶದ ರೈತರು ವಿದ್ಯಾರ್ಥಿಗಳು ವ್ಯಾಪಾರಸ್ತರಿಗೆ ಮುಳವಾಗಿ ಪರಿಣಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ರೈಲ್ವೆ ಅಧಿಕಾರಿಗಳು ಜನ ಸಾಮಾನ್ಯರ ತೆರಿಗೆ ಹಣವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದರೆ ಆಕಾಶಕ್ಕೆ ಕೋಟಿ ಕೋಟಿ ಹಣವನ್ನು ವೆಚ್ಚಾ ಮಾಡಿ ಚಪ್ಪರ ಹಾಕಿದಂತೆ ಅಂಡರ್‍ಪಾಸ್‍ಗಳಿಗೆ ಶಾಶ್ವತ ಪರಿಹಾರ ಹುಡುಕುವುದನ್ನು ಬಿಟ್ಟು ಕಬ್ಬಿಣದ ರೇಖುಗಳ ಮೂಲಕ ಮೇಲ್ಛಾವಣಿಯಂತೆ ಚಪ್ಪರವನ್ನು ಹಾಕಲು ಮುಂದಾಗಿರುವುದು ನಾಚಿಕೆಗೇಡು ಎಂದು ಕಿಡಿ ಕಾರಿದರು.
ಮಳೆ ನೀರು ಸಮರ್ಪಕವಾಗಿ ಹರಿದು ಹೋಗದೆ ಶೀಟುಗಳು ಹಾಕಿದ್ದರು ಸಂಪೂರ್ಣವಾಗಿ ಅಂಡರ್ ಪಾಸ್‍ಗಳು ಜಲಾವೃತವಾಗಿರುವುದರಿಂದ ಆಯಾ ತಪ್ಪಿ ಚಿಕ್ಕಮಕ್ಕಳು ಅಥವಾ ಜಾನುವಾರುಗಳು ಇಲ್ಲವೆ ತರಕಾರಿ ತುಂಬಿದ ವಾಹನಗಳೇನಾದರೂ ಅಂಡರ್ ಪಾಸ್‍ಗಳಲ್ಲಿ ಸಂಚಾರ ಮಾಡಿದರೆ ಕಂಡಿತವಾಗಲೂ ಪ್ರಾಣವನ್ನು ಕಳೆದುಕೊಳ್ಳುವ ಮಟ್ಟಕ್ಕೆ ಅಧಿಕಾರಿಗಳ ಕಾಮಗಾರಿಗಳು ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಒಂದು ಕಡೆ ಅವೈಜ್ಞಾನಿಕ ಅಂಡರ್ ಪಾಸ್‍ಗಳು ಮತ್ತೊಂದು ಕಡೆ ರೈಲ್ವೆ ಪಟ್ಟಾಗಳ ಮೇಲೆ ಜಾನುವಾರುಗಳು ಹಾಗೂ ರಾತ್ರಿವೇಳೆ ಮದ್ಯ ಸೇವಿಸುವ ಕೆಲವು ಕಿಡಿಗೇಡಿಗಳು ರೈಲ್ವೆ ಪಟ್ಟಾಗಳ ಮೇಲೆ ಕುಳಿತು ಮದ್ಯ ಪಾನ ಮಾಡುವ ದಂದೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ನಿಯಮದ ಪ್ರಕಾರ ರೈಲು ಪಟ್ಟಾಗಳ ಅಕ್ಕಪಕ್ಕದ 10 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಜಾನುವಾರಾಗಲೀ ಅಥವಾ ಮನುಷ್ಯರಾಗಲೀ ಓಡಾಡಬಾರದೆಂದು ಮುಳ್ಳು ತಂತಿಯನ್ನು ಅಳವಡಿಸಬೇಕಾದ ಅಧಿಕಾರಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕೋಟಿ ಕೋಟಿ ಹಣವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಲೂಟಿ ಮಾಡುತ್ತಿದ್ದಾರೆಂದು ದೂರು ನೀಡಿದರು.
48 ಗಂಟೆಗಳ ಜಿಲ್ಲಾಧ್ಯಂತ ಹದಗೆಟ್ಟಿರುವ ಅವೈಜ್ಞಾನಿಕ ಅಂಡರ್‍ಪಾಸ್‍ಗಳನ್ನು ಸರಿಪಡಿಸಿ ಮುಂಗಾರು ಮಳೆಯಿಂದ ಜನ ಸಾಮಾನ್ಯರ ರಕ್ಷಣೆ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ರೈಲ್ವೆ ಅಧಿಕಾರಿ ವಿಕ್ರಮ್ ಜಿನೋರಿಯಾರವರು ಸಂಬಂದಪಟ್ಟ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್‍ಪಾಷ, ಕಿರಣ್, ಬಾಬಾಜಾನ್, ಆರೀಪ್, ಜಾವೇದ್, ಮುನಿಯಪ್ಪ, , ಸಂದೀಪ್‍ರೆಡ್ಡಿ,ಸಂದೀಪ್‍ಗೌಡ, ರಾಮಸಾಗರ ವೇಣು, ಕಿರಣ್, ಮುನಿಕೃಷ್ಣ, ಕದರಿನತ್ತ ಅಪ್ಪೋಜಿರಾವ್, ವಿಶ್ವ, ಮುನಿರಾಜು, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ಶೈಲಜ, ರತ್ನಮ್ಮ,ಮುಂತಾದವರಿದ್ದರು.

ಆಶಾವಾದಿ ಪ್ರಕಾಶನ್ ಆನಿ ಧೆಂಪೆ ಕೊಲೆಜಿಚಿ ಸಮ್ಜೀಕಾಯ್ ಕಬ್ಲಾತ್/आशावादी प्रकाशन आनी धेंपे कोलेजिची समजीकाय कबलात

13 ಮಾಯ್ 2023, (ಗೊಂಯ್): ಆಶಾವಾದಿ ಪ್ರಕಾಶನ್ ಆನಿ ಭಾರತೀಯ್ ಭಾಶಾ ವಿಭಾಗ್, ಧೆಂಪೆ ಕಲಾ ಆನಿ ವಿಜ್ನಾನ್ ಮಹಾವಿದ್ಯಾಲಯ್ ಹಾಂಚ್ಯಾ ಜೋಡ್ ಪಾಲವಾನ್ ಸ್ವಾಮಿ ವಿವೇಕಾನಂದ್ ಸಭಾಘರ್, ಧೆಂಪೆ ಕೊಲೆಜ್ ಹಾಂಗಾ 13 ಮಾಯ್ 2023 ದಿಸಾ ಸಾಂಜೆರ್ ಚ್ಯಾರ್ ವೊರಾಂಚೆರ್ ಪುಸ್ತಕ್ ಲೊಪಾರ್ಕಣ್ ಸುವಾಳೊ ಆನಿ ಕವಿಸಂಮೇಳನ್ ಆಯೋಜಿತ್ ಕೆಲ್ಲೆಂ. ಸಲೋಮಿ ಮಿಯಾಪದವ್ ಹಿಚ್ಯಾ ಕವಿತೆಂಚೊ ಜಮೊ ’ಆಟ್ವೊ ಸುರ್’ ತಶೆಂಚ್ ಮೊನಿಕಾ ಡೆಸಾ ಮಥಾಯಸ್ ಹಿಚ್ಯಾ ಕವಿತೆಂಚೊ ಜಮೊ ’ಪಾನಾಂಚ್ ಫುಲಾಂ ಜಾತಾನಾ’ ಮ್ಹಳ್ಳ್ಯಾ ಕನ್ನಡ್ ಆನಿ ನಾಗರಿ ಲಿಪಿಯೆಂತ್ಲ್ಯಾ ಪುಸ್ತಕಾಂಚೆಂ, ತಶೆಂಚ್ ವೈಷ್ಣವಿ ರಾಯ್ಕರ್ ಹಿಚ್ಯಾ ’ಆತ್ಮನಾದ್’ ಹ್ಯಾ ಡಿಜಿಟಲ್ ಇ-ಪುಸ್ರಕಾಚೆಂ ಲೊಕಾರ್ಪಣ್ ಅನುಕ್ರಮಾನ್ ದಲ್ಗಾದೊ ಕೊಂಕಣಿ ಅಕಾಡೆಮಿಚೆ ಅಧ್ಯಕ್ಷ್ ಸೆಲ್ಸೊ ಫೆರ್ನಾಂಡಿಸ್, ಶೈಲೇಂದ್ರ ಮೆಹ್ತಾ ಆನಿ ಧೆಂಪೆ ಮಹಾವಿದ್ಯಾಲಯಾಂಚ್ಯಾ ಪ್ರಾಚಾರ್ಯ್ ಡೊ|ವೃಂದಾ ಬೊರ್ಕರ್ ಹಾಂಚ್ಯಾ ಹಸ್ತುಕಿಂ ಜಾಲೆಂ.

ವಿದಿತಾ ಶೆಟ್ ಹಿಣೆಂ ಕಾರ್ಯಾಚೆಂ ಸೂತ್ರ್ ಸಂಚಾಲನ್ ಕೆಲ್ಲ್ಯಾ ಹ್ಯಾ ಕಾರ್ಯಾಚೆಂ ಉಗ್ತಾವಣ್ ಜಾತಚ್ ಡೊ|ವೃಂದಾ ಬೊರ್ಕರಾನ್ ಅಪ್ಲ್ಯಾ ಯೆವ್ಕಾರ್ ಉಲವ್ಪಾಂತ್ ಪ್ರಾಂತೀಯ್ ಭಾಸೆಂಕ್ ಚಡಿತ್ ಮಹತ್ವ್ ಆಸಾ ಜಾಲ್ಲ್ಯಾನ್ ಕೊಂಕಣಿ ಭಾಸೆಚ್ಯಾ ವಾಡಾವಳೆಚ್ಯಾ ದಿಶೆನ್ ಆಮಿ ಎಕ್ಟಾಂಯ್ ಜಾವ್ನ್ ವಾವ್ರ್ ಕರ್ಪಾಚಿ ಗರಜ್ ಆಸಾ ಮ್ಹಣಾಲಿ. ವಲ್ಲಿ ಕ್ವಾಡ್ರಸಾನ್ ಆಶಾವಾದಿ ಪ್ರಕಾಶನಾಚಿ ’ಬುನ್ಯಾದಿ ವಾವ್ರ್ ಆನಿ ಚಿಂತಪ್’ ವಿಶ್ಯಾಚೆರ್ ಉಲವ್ನ್ ಆಜ್ ಸಮಾಜೆಚ್ಯಾ ದರೇಕಾ ಶೆತಾಂತ್ ನಿರಾಸ್ ಆಸಾ, ನಾ-ಸಮಧಾನ್ ಆಸಾ, ಅಶೆಂ ಮ್ಹಣುನ್ ಮನಿಸ್ ಜಾಲ್ಲ್ಯಾನ್ ಜಿಯೆಂವ್ಚೆಂ ಸೊಡುಂಕ್ ಜಾಯ್ನಾ, ಹ್ಯಾ ನಿರಾಸೆಮಧೆಂ ಆಶಾವಾದ್ ಜಾವ್ಪಾಚಿ ಗರಜ್ ಆಸಾ, ತ್ಯಾ ದಿಶೆನ್ ’ಯದಾಹಾಂ ಜೀವಮಿ, ಅಹಮಾಶಾಂಸೆ’ (ಜೀವ್ ಆಸ್ತಾಸರ್ ಭರ್ವಸ್ತಾಂ) ಧ್ಯೇಯಾಖಾಲ್ ಆಶಾವಾದಿ ಪ್ರಕಾಶನ್ ಜಾತ್-ಪ್ರಾಂತ್ಯ್-ಲಿಪಿ-ಬೊಲಿಚ್ಯೊ ಗಡಿ ಉತ್ರುನ್ ವಾವ್ರ್ ಕರುನ್ ಆಯ್ಲಾಂ ಆನಿ ಅಪ್ಲ್ಯಾ ಕಾಮಾಮುಖಾಂತ್ರ್ ಉಲಯಿತ್ ಆಯ್ಲಾಂ ಆನಿ ಫುಡೆಂಯ್ ಅಸಲಿಂಚ್ ಕಾಮಾ ಮುಖಾರುನ್ ವರ್ತೆಲೆಂ ಮ್ಹಣಾಲೊ.

ತ್ಯೇ ಉಪ್ರಾಂತ್ ಆಶಾವಾದಿ ಪ್ರಕಾಶನ್ ಆನಿ ಧೆಂಪೆ ಕೊಲೆಜಿನ್ ವೆಗ್-ವೆಗಳ್ಯಾ ಸಾಹಿತಿಕ್ ಕಾರ್ಯಾವಳೆಂಚಿ ಯೆವ್ಜಣ್ ಕರ್ಚ್ಯಾ ದಿಶೆನ್ ಪಾಂಚ್ ವರ್ಸಾಂಚಿ ಸಮ್ಜೀಕಾಯ್ ಕಬ್ಲಾತ್ (Memorandum Of Understanding (MOU) ಘಡ್ಲಿ. ಧೆಂಪೆ ಕೊಲೆಜಿಂತ್ ಕೊಂಕಣಿ ಶಿಕ್ಚ್ಯಾ ವಿಧ್ಯಾರ್ಥಿಂಕ್ ಕೊಂಕಣಿ ಸಾಹಿತ್ಯಾಚೆಂ ಚಡ್ತಿಕ್ ಶಿಕಪ್ ದಿಂವ್ಚ್ಯಾ ಇರಾದ್ಯಾಚ್ಯಾ ಹ್ಯಾ ಸಮ್ಜೀಕಾಯ್ ಕಬ್ಲಾತೆಕ್ ಧೆಂಪೆ ಕೊಲೆಜಿಚ್ಯಾ ಪ್ರಾಚಾರ್ಯ್ ಡೊ|ವೃಂದಾ ಬೊರ್ಕಾರಾನ್ ತಶೆಂಚ್ ಆಶಾವಾದಿ ಪ್ರಕಾಶನಾ ತರ್ಫೆನ್ ವಲ್ಲಿ ಕ್ವಾಡ್ರಸಾನ್ ಸಯ್ ಘಾಲಿ. (ಹ್ಯಾ ಆಧಿಂ ಆಶಾವಾದಿ ಪ್ರಕಾಶನಾನ್ ಗೊಂಯ್ಚ್ಯಾ ಶ್ರೀ ಮಲ್ಲಿಕಾರ್ಜುನ ಕೊಲೆಜಿಸವೆಂ 2019 ಇಸ್ವೆಂತ್ ಪಾಂಚ್ ವರ್ಸಾಂಚಿ ಸಮ್ಜೀಕಾಯ್ ಕಬ್ಲಾತ್ ಘಡುನ್ ಸಾಹಿತಿಕ್ ಕಾರ್ಯಿಂ ಚಲಯಿಲ್ಲಿಂ)

ಮುಖೆಲ್ ಸಯ್ರೊ ಸೆಲ್ಸೊ ಫೆರ್ನಾಂಡಿಸಾನ್ ’ಕೊಂಕಣಿ ಭಾಸೆಚ್ಯಾ ವಾವ್ರಾಕ್’ ಆಮಿ ಸರ್ವಾಂನಿ ಎಕಾ ಮನಾನ್ ವಾವ್ರ್ ಕರ್ಚಿ ಗರ್ಜ್ ಮ್ಹಣಾಲೊ.

ತ್ಯೇ ಉಪ್ರಾಂತ್ ಶೈಲೇಂದ್ರ ಮೆಹ್ತಾಚ್ಯಾ ಅಧ್ಯಕ್ಷ್‌ಪಣಾಖಾಲ್ ಚಲ್‌ಲ್ಲ್ಯಾ ಕೊಂಕಣಿ ಕವಿಸಂಮೇಳನಾಂತ್ ಪ್ರಕಾಶ್ ದ. ನಾಯ್ಕ್, ನೂತರ್ ಸಾಖರ್‌ದಾಂಡೆ, ನಯನಾ ಅಡಾರಕಾರ್, ವಿಲ್ಲಿ ಗೋಯೆಸ್, ಡೊ|ಪ್ರಕಾಶ್ ಪೆರ್ಯೆಂಕಾರ್, ಫಿಲೋಮೆನಾ ಸಾಂಫ್ರಾನ್ಸಿಸ್ಕೊ, ರಾಜಶ್ರೀ ಸೈಲ್, ಅಲ್ಕಾ ಸಿನಾಯ್ ಅಸೊಲ್ಡೆಕಾರ್, ಸುಜಾತ ಕಾಂಬ್ಳಿ, ವೈಷ್ಣವಿ ರಾಯ್ಕರ್, ಆನಿ ದ ಕೊಲ್ವಾಳೆ ಆನಿ ಗೌರಾಂಗ್ ಭಾಂಡಿಯೆ ಹಾಣಿಂ ಆಪಾಪ್ಲ್ಯೊ ಕವಿತಾ ಸಾದರ್ ಕೆಲ್ಯೊ.

ಧೆಂಪೆ ಕೊಲೆಜಿಚ್ಯಾ ಕೊಂಕಣಿ ವಿಭಾಗಾಚಿ ಮುಖೇಸ್ತ್ ಅಂಜು ಸಾಖರ್‌ದಾಂಡೆನ್ ಅಪ್ಲ್ಯಾ ಉಪ್ಕಾರಾಚೆಂ ಉಲವ್ಪಾಂತ್ ಕಶೆಂ ಪಾಟ್ಲ್ಯಾ ಥೊಡ್ಯಾ ವರ್ಸಾಂನಿ ಆಶಾವಾದಿ ಪ್ರಕಾಶನಾಸವೆಂ ರಾಶ್ಟ್ರೀಯ್ ಮಟ್ಟಾಚಿಂ ವೆಬಿನಾರಾಂ ಆಯೋಜಿತ್ ಕರುನ್ ಗೊಂಯ್ಚ್ಯಾ ಜಾಯ್ತ್ಯಾ ಕೊಂಕಣಿ ವಿಧ್ಯಾರ್ಥಿಂಕ್ ಮಜತ್ ಲಾಭ್ಲಿ ಆನಿ ಹ್ಯಾ ದಿಶೆನ್ ಫುಡೆಂಯ್ ವೆಗ್-ವೆಗಳಿಂ ಉಪಕ್ರಮಾಂ ಮಾಂಡುನ್ ಹಾಡ್ಚೆವಿಶಿಂ ಉಲವ್ನ್ ಸಮೇಸ್ತಾಂಚೊ ಉಪ್ಕಾರ್ ಬಾವುಡ್ಲೊ.


आशावादी प्रकाशन आनी धेंपे कोलेजिची समजीकाय कबलात

१३ माय २०२३, (गोंय): आशावादी प्रकाशन आनी भारतीय भाशा विभाग, धेंपे कला आनी विजनान महाविद्यालय हांच्या जोड पालवान स्वामी विवेकानंद सभाघर, धेंपे कोलेज हांगा १३ माय २०२३ दिसा सांजेर च्यार वोरांचेर पुसतक लोपार्कण सुवाळो आनी कविसंमेळन आयोजीत केल्लें. सलोमी मियापदव हिच्या कवितेंचो जमो ’आटवो सूर’ तशेंच मोनिका डेसा मथायस हिच्या कवितेंचो जमो ’पानांच फुलां जाताना’ म्हळ्ळ्या कन्नड आनी नागरी लिपियेंतल्या पुसतकांचें, तशेंच वैषणवी रायकर हिच्या ’आत्मनाद’ ह्या डिजिटल ई-पुस्रकाचें लोकार्पण अनुक्रमान दल्गादो कोंकणी अकाडेमिचे अध्यक्ष सेल्सो फेर्नांडीस, शैलेंद्र मेहता आनी धेंपे महाविद्यालयांच्या प्राचाऱ्य डो|वृंदा बोर्कर हांच्या हसतुकीं जालें.

विदिता शेट हिणें काऱ्याचें सूत्र संचालन केल्ल्या ह्या काऱ्याचें उग्तावण जातच डो|वृंदा बोर्करान अपल्या येवकार उलवपांत प्रांतीय भासेंक चडीत महत्व आसा जाल्ल्यान कोंकणी भासेच्या वाडावळेच्या दिशेन आमी एकटांय जावन वावर कर्पाची गरज आसा म्हणाली. वल्ली क्वाड्रसान आशावादी प्रकाशनाची ’बुन्यादी वावर आनी चिंतप’ विश्याचेर उलवन आज समाजेच्या दरेका शेतांत निरास आसा, ना-समधान आसा, अशें म्हणून मनीस जाल्ल्यान जियेंवचें सोडुंक जायना, ह्या निरासेमधें आशावाद जावपाची गरज आसा, त्या दिशेन ’यदाहां जीवमी, अहमाशांसे’ (जीव आसतासर भर्वसतां) ध्येयाखाल आशावादी प्रकाशन जात-प्रांत्य-लिपी-बोलिच्यो गडी उत्रून वावर करून आयलां आनी अपल्या कामामुखांत्र उलयीत आयलां आनी फुडेंय असलिंच कामा मुखारून वर्तेलें म्हणालो.

त्ये उपरांत आशावादी प्रकाशन आनी धेंपे कोलेजीन वेग-वेगळ्या साहितीक काऱ्यावळेंची येवजण कर्च्या दिशेन पांच वर्सांची समजीकाय कबलात (Memorandum Of Understanding (MOU) घडली. धेंपे कोलेजिंत कोंकणी शिकच्या विध्यार्थिंक कोंकणी साहित्याचें चडतीक शिकप दिंवच्या इराद्याच्या ह्या समजीकाय कबलातेक धेंपे कोलेजिच्या प्राचाऱ्य डो|वृंदा बोर्कारान तशेंच आशावादी प्रकाशना तर्फेन वल्ली क्वाड्रसान सय घाली. (ह्या आधीं आशावादी प्रकाशनान गोंयच्या श्री मल्लिकार्जून कोलेजिसवें २०१९ इस्वेंत पांच वर्सांची समजीकाय कबलात घडून साहितीक काऱ्यीं चलयिल्लीं)

मुखेल सयरो सेल्सो फेर्नांडिसान ’कोंकणी भासेच्या वावराक’ आमी सर्वांनी एका मनान वावर कर्ची गर्ज म्हणालो.

त्ये उपरांत शैलेंद्र मेहताच्या अध्यक्ष‌पणाखाल चल‌ल्ल्या कोंकणी कविसंमेळनांत प्रकाश द. नायक, नूतर साखर‌दांडे, नयना अडारकार, विल्ली गोयेस, डो|प्रकाश पेऱ्येंकार, फिलोमेना सांफ्रान्सिसको, राजश्री सैल, अल्का सिनाय असोलडेकार, सुजात कांबळी, वैषणवी रायकर, आनी द कोलवाळे आनी गौरांग भांडिये हाणीं आपापल्यो कविता सादर केल्यो.
धेंपे कोलेजिच्या कोंकणी विभागाची मुखेसत अंजू साखर‌दांडेन अपल्या उपकाराचें उलवपांत कशें पाटल्या थोड्या वर्सांनी आशावादी प्रकाशनासवें राश्ट्रीय मट्टाचीं वेबिनारां आयोजीत करून गोंयच्या जायत्या कोंकणी विध्यार्थिंक मजत लाभली आनी ह्या दिशेन फुडेंय वेग-वेगळीं उपक्रमां मांडून हाडचेविशीं उलवन समेसतांचो उपकार बावुडलो.

त्ये उपरांत शैलेंद्र मेहताच्या अध्यक्ष‌पणाखाल चल‌ल्ल्या कोंकणी कविसंमेळनांत प्रकाश द. नायक, नूतर साखर‌दांडे, नयना अडारकार, विल्ली गोयेस, डो|प्रकाश पेऱ्येंकार, फिलोमेना सांफ्रान्सिसको, राजश्री सैल, अल्का सिनाय असोलडेकार, सुजात कांबळी, वैषणवी रायकर, आनी द कोलवाळे आनी गौरांग भांडिये हाणीं आपापल्यो कविता सादर केल्यो.
धेंपे कोलेजिच्या कोंकणी विभागाची मुखेसत अंजू साखर‌दांडेन अपल्या उपकाराचें उलवपांत कशें पाटल्या थोड्या वर्सांनी आशावादी प्रकाशनासवें राश्ट्रीय मट्टाचीं वेबिनारां आयोजीत करून गोंयच्या जायत्या कोंकणी विध्यार्थिंक मजत लाभली आनी ह्या दिशेन फुडेंय वेग-वेगळीं उपक्रमां मांडून हाडचेविशीं उलवन समेसतांचो उपकार बावुडलो.

ಬೆಸ್ಕಾಂ ಇಲಾಖೆಯಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ

ಶ್ರೀನಿವಾಸಪುರ : ಪಟ್ಟಣದಲ್ಲಿ ಪ್ರತಿ ವರ್ಷದಂತೆಯೂ ಈ ವರ್ಷವೂ ಸಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಬೆಸ್ಕಾಂ ಇಲಾಖೆ ಕಚೇರಿ ಆವರಣದಲ್ಲಿ  ಬೆಸ್ಕಾಂ ಸಿಬ್ಬಂದಿಯಿಂದ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ  ಸೂಚಿಸಲಾಯಿತು ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಸ್ಥೆ ಅಧ್ಯಕ್ಷರಾದ ರಾಮಾಂಜಿ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ನೌಕರರ ಪ್ರಾಥಮಿಕ ಸಮಿತಿಯ ಕಾರ್ಯದರ್ಶಿ ಆರ್ ಕೆ ಬಾಬು ಮಾತನಾಡಿ ಪ್ರತಿ ವರ್ಷವೂ ನಮ್ಮ ಬೆಸ್ಕಾಂ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡುತ್ತೇವೆ ಕಳೆದ ತಿಂಗಳು ಏಪ್ರಿಲ್ 14ರಂದು ವಿಧಾನಸಭೆ ಚುನಾವಣೆಯ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸಾಂಕೇತಿಕವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ್ದು ನೀತಿ ಸಂಹಿತೆ ಮುಗಿದ ಮೇಲೆ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದೇವೆಂದು ಮುಂದಿನ ದಿನಗಳಲ್ಲಿಯೂ ಇದೇ ರೀತಿಯಾಗಿ ಮುಂದುವರೆಸುತ್ತೇವೆಂದರು ಇನ್ನೂ ಈ ಸಂದರ್ಭದಲ್ಲಿ ಬೆಸ್ಕಾಂ ಎ ಇ ಇ ರಾಮತೀರ್ಥ, ನಂಜುಂಡೇಶ್ವರ, ಶ್ರೀನಿವಾಸ್,ಆರ್ ಕೆ ಬಾಬು,  ರಾಮಾಂಜಿ, ಆನಂದ್, ಶ್ರೀನಿವಾಸ್,ವೇಣುಗೋಪಾಲ್, ಸುದರ್ಶನ್, ಆರ್ ಚಂದ್ರು,ರಾಜಶೇಖರ್, ಗಂಗರಾಜ್, ಬೆಸ್ಕಾಂ ಗುತ್ತಿಗೆದಾರರ ಗೌರವಾಧ್ಯಕ್ಷ ಕೆ.ಮೋಹನಾಚಾರಿ, ಇತರರು ಹಾಜರಿದ್ದರು.

ಶ್ರೀನಿವಾಸಪುರ ಪುರಸಭೆ ಕಚೇರಿಯಲ್ಲಿ ಬುಧವಾರ ಮೇರಾ ಸ್ವಚ್ಚ ಶೆಹರ್ ಮೆಗಾ ಅಭಿಯಾನಕ್ಕೆ ಚಾಲನೆ

ಶ್ರೀನಿವಾಸಪುರ 2 : ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ಮೇರಾ ಸ್ವಚ್ಚ ಶೆಹರ್ ಮೆಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ್ ಮಿಷನ್ ನಗರ -2.0 ಯೋಜೆಯಡಿ ಹೆಚ್ಚಿನ ರೀತಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಭಿಸಿದ್ದು, ಪ್ಲಾಸ್ಟಿಕ್ ಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳು , ಬಳಸಿದ ಬಟ್ಟೆ , ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರುಬಳಸ ಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ದತಿಗಳನ್ನು ಆಳವಡಿಸಿಕೊಳ್ಳುವ ಮೂಲಕ ಪರಸಿರವನ್ನು ರಕ್ಷಿಸುವುದು ಲೈಫ್ ಮಿಷನ್‍ನ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಇದೇ ತಿಂಗಳು 20 ರಿಂದ ಜೂನ್ 5 ರತನಕ ಮೇರಾ ಸ್ವಚ್ಚ ಶಹರ್ ಯೋಜನೆಯ ನನ್ನ ಲೈಫ್ ನನ್ನ ಸ್ವಚ್ಚ ನಗರ ಕಾರ್ಯಕ್ರಮದಡಿ ತ್ಯಾಜ್ಯ ನಿರ್ವಹಣೆಯ ತತ್ವಗಳನ್ನು ಕಡಿಮೆಗೊಳಿಸುವುದು, ಮರುಬಳಕೆ, ಪುನರ್‍ಬಳಕೆ, (ಆರ್‍ಆರ್‍ಆರ್) ಕೇಂದ್ರಗಳನ್ನು ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿ 6 ವಿವಿಧ ಬಗೆಯ ತ್ಯಾಜ್ಯವನ್ನು ನಿರ್ವಹಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು.
ಮೇರಾ ಸ್ವಚ್ಚ ಶೆಹರ್ ಯೋಜನೆ ಅಡಿಯಲ್ಲಿ ಆರ್‍ಆರ್‍ಆರ್ ಕೇಂದ್ರಗಳನ್ನು ಪಟ್ಟಣದ ಪುರಸಭೆ ವ್ಯಾಪ್ತಿಯ ಸಂತೇ ಮೈದಾನ, ಪಂಪ್ ಹೌಸ್ ಮತ್ತು ಮುಸಾಫೀರ್ ಖಾನ್ ವಾಣಿಜ್ಯ ಸಂಕೀರ್ಣದಲ್ಲಿ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳನ್ನು ಸಾರ್ವಜನಿಕರು ಪ್ರತಿ ದಿನ ಬೆಳಗ್ಗೆ 6:30 ರಿಂದ ಮಧ್ಯಾಹ್ನ 1:00 ಗಂಟೆ ವರೆಗೂ ಸದುಪಯೋಗ ಪಡಿಸಿಕೊಂಡು ಮೇರಿ ಲೈಫ್ ಮೇರಾ ಸ್ವಚ್ಚ ಶೆಹರ್ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಚೇರಿಯ ಆರೋಗ್ಯ ಶಾಖೆಯಲ್ಲಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.
ಸ್ವಚ್ಚಭಾರತ್ ರಾಯಬಾರಿ ಮಾಯಬಾಲಚಂದ್ರ ಮಾತನಾಡಿ ಈ ಯೋಜನೆ ಅಡಿಯಲ್ಲಿ ಬುದ್ದಿಹೀನ ಬಳಕೆಯನ್ನು ಬುದ್ದಿಪೂರ್ವಕ ಬಳಕೆಯೊಂದಿಗೆ ಬದಲಿಸುವ ಗುರಿಯನ್ನು ಹೊಂದಿದೆ ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳು ತಮ್ಮ ದೈನಂದಿನ ಜೀವನದಲ್ಲಿ ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದೇ ಈ ಅಭಿಯಾನದ ಮೂಲ ಉದ್ದೇಶ . ಕೋವಿಡ್ ಸಮಯದಲ್ಲಿ ಪುರಸಭೆ ವತಿಯಿಂದ ಸ್ವಚ್ಚಾಭಾರತ್ ಕಾರ್ಯಕ್ರಮದಲ್ಲೂ ಪಟ್ಟಣದಲ್ಲಿ ಜಾಥ ಹಮ್ಮಿಕೊಂಡು ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲಾಗಿತ್ತು ಎಂದರು.
ಪುರಸಭೆ ಆರೋಗ್ಯಾಧಿಕಾರಿ ಕೆ.ಜಿ.ರಮೇಶ್, ವ್ಯವಸ್ಥಾಪಕ ನವೀನ್‍ಚಂದ್ರ ಇದ್ದರು.
17, ಎಸ್‍ವಿಪುರ್ 2 : ಪಟ್ಟಣದ ಪುರಸಭೆ ಕಚೇರಿಯಲ್ಲಿ ಮೇರಾ ಸ್ವಚ್ಚ ಶೆಹರ್ ಮೆಗಾ ಅಭಿಯಾನಕ್ಕೆ ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಚಾಲನೆ ನೀಡಿ ಮಾತನಾಡಿದರು.

ವಿಐಪಿ ಶಾಲೆ : ಉತ್ತಮ ಫಲಿತಾಂಶ ಬರಲು ಶಿಕ್ಷಕರ ಶ್ರಮ ಹಾಗು ವಿದ್ಯಾರ್ಥಿಗಳ ಅಕ್ಕರೆ, ಪೋಷಕರ ಸಹಕಾರ ಕಾರಣ-ಡಾ| ವೇಣುಗೋಪಾಲ್‍ ರೆಡ್ಡಿ

ಶ್ರೀನಿವಾಸಪುರ 1 : ಈ ಉತ್ತಮ ಫಲಿತಾಂಶ ಬರಲು ಶಿಕ್ಷಕರ ಶ್ರಮ ಹಾಗು ವಿದ್ಯಾರ್ಥಿಗಳ ಅಕ್ಕರೆ, ಪೋಷಕರ ಸಹಕಾರ ಕಾರಣವಾಗಿದ್ದು, ಇವರಲ್ಲೆರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ವಿಐಪಿ ಶಾಲೆಯ ಆಡಳಿತ ಮಂಡಲಿ ಅಧ್ಯಕ್ಷ ಡಾ|| ವೇಣುಗೋಪಾಲ್‍ರೆಡ್ಡಿ ಹೇಳಿದರು.
ರೋಣೂರು ಕ್ರಾಸ್‍ನ ವಿಐಪಿ ಶಾಲೆಯಲ್ಲಿ ಬುಧವಾರ ನಡೆದ ಶಾಲೆಯು ಸಿಬಿಎಸ್‍ಇ ಸಿಲಬಸ್‍ನ ಫಲಿತಾಂಶದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದಕ್ಕಾಗಿ ಹಮ್ಮಿಕೊಳ್ಳಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಶಾಲೆಯು ಸಿಬಿಎಸ್‍ಸಿ ಬೋರ್ಡ್ ನಿಂದ ಮಾನ್ಯತೆ ಪಡೆದಿದ್ದು, ಕಳೆದ ಮೂರು ವರ್ಷಗಳಿಂದಲೂ 10 ನೇ ತರಗತಿಯಲ್ಲಿ ಶೇಕಡ ನೂರು ರಷ್ಟು ಫಲಿತಾಂಶವನ್ನು ಪಡೆದಿದೆ. ಕೋವಿಡ್ ನಿಂದಾಗಿ ಶಾಲೆಯ ಮೂಲಕ ಪಾಠಪ್ರವಚನಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೂ ಸಹ ಶಿಕ್ಷಕರ ಶ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಅನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ನಿರಂತರವಾಗಿ ಶಿಕ್ಷಣದ ಬಗ್ಗೆ ಪ್ರೇರಣೆ ನೀಡುತ್ತಾ, ಪಾಠ ಪ್ರವಚನಗಳನ್ನು ಮಾಡುತ್ತಾ , ಆ ಸಮಯದಲ್ಲೂ ಶಿಕ್ಷಕರ ಶ್ರಮದಿಂದ ವಿದ್ಯಾರ್ಥಿಗಳ ಸಹಕಾರದಿಂದ ಶೇಕಡ ನೂರುರಷ್ಟು ಫಲಿತಾಂಶ ಲಭಿಸಿದೆ.
ನಗರ ಪ್ರದೇಶಗಳಲ್ಲಿ ಶಿಕ್ಷಣವನ್ನು ಯಾವ ರೀತಿ ನೀಡುತ್ತಿದ್ದಾರೂ , ಅದೇ ರೀತಿಯಲ್ಲಿಯೇ ಗ್ರಾಮೀಣ ಭಾಗದಲ್ಲಿನ ರೈತ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ನಮ್ಮದಾಗಿದ್ದು, ಬಡವರಿಗೆ , ಮಧ್ಯಮ ವರ್ಗದವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಅದರಂತೆ ಕಡಿಮೆ ವೆಚ್ಚದಲ್ಲಿ ಶುಲ್ಕವನ್ನು ಪಡೆಯಲಾಗುತ್ತಿದೆ.
ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆಡಳಿತ ಮಂಡಲಿ ಮಾರ್ಗದರ್ಶನದೊಂದಿಗೆ ಭೋದಕ ಸಿಬ್ಬಂದಿ ಹಾಗೂ ಭೋದಕೇತರ ಸಿಬ್ಬಂದಿ ಶ್ರಮದೊಂದಿಗೆ ವಿದ್ಯಾರ್ಥಿಗಳ , ಪೋಷಕರ ಸಹಕಾರದೊಂದಿಗೆ ಉತ್ತಮ ಫಲಿತಾಂಶ ಬರಲು ಸಾಧ್ಯವಾಗುತ್ತಿದೆ.
ಒಟ್ಟು ಶಾಲೆಯಲ್ಲಿ 10ನೇ ತರಗತಿಗೆ 36 ವಿದ್ಯಾರ್ಥಿಗಳ ಪೈಕಿ ಪರೀಕ್ಷೆಯಲ್ಲಿ ಹಾಜರಾಗಿದ್ದು, ಅದರಲ್ಲಿ 40% ವಿದ್ಯಾರ್ಥಿಗಳು ಹೈಡಿಸ್ಟಿಂಕ್ಷನ್, 30 % ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಉಳಿದವರು ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ವಿಶೇಷವಾಗಿ ಶಾಲೆಯ ವಿದ್ಯಾರ್ಥಿ ಅರ್ಜುನ್. ವಿ ಶೇಕಡ 96.6% ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನವನ್ನು ಪಡೆದು ಪೋಷಕರಿಗೆ ಹಾಗೂ ಶಾಲೆಯ ಹೆಗ್ಗಲಿಕೆಗೆ ಕಾರಣರಾಗಿರುತ್ತಾನೆ ಎಂದರು.
ಕಾರ್ಯದರ್ಶಿ ಡಾ|| ಕವಿತ, ಪ್ರಾಂಶುಪಾಲ ಮಂಜಿತ್‍ಕೌಮರಿ , ಸಂಯೋಜಕಿ ದೀಪ ಇದ್ದರು.
17, ಎಸ್‍ವಿಪುರ್ : ರೋಣೂರು ಕ್ರಾಸ್‍ನ ವಿಐಪಿ ಶಾಲೆಯಲ್ಲಿ ಶಾಲೆಯು ಸಿಬಿಎಸ್‍ಇ ಸಿಲಬಸ್‍ನ ಫಲಿತಾಂಶದಲ್ಲಿ 10 ನೇ ತರಗತಿಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದಕ್ಕಾಗಿ ಹಮ್ಮಿಕೊಳ್ಳಲಾದ ಸುದ್ದಿಗೋಷ್ಟಿಯಲ್ಲಿ ಡಾ|| ವೇಣುಗೋಪಾಲ್‍ರೆಡ್ಡಿ ಮಾತನಾಡಿದರು.

ಸಿದ್ದುಗೆ ಕರ್ನಾಟಕದ ಮುಖ್ಯಮಂತ್ರಿ ಗದ್ದುಗೆ ಕಾಂಗ್ರೆಸ್ ಕೈಕಮಾಂಡ್ ಒಪ್ಪಿಗೆ – ಶನಿವಾರ ಏರಲಿದ್ದಾರೆ ಸಿದ್ದು ಗದ್ದುಗೆ

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ.  ಕೊನೆಗೂ ಕರ್ನಾಟಕ ಮುಖ್ಯಮಂತ್ರಿಯ ಗದ್ದುಗೆಗೆ ಸಿದ್ದರಾಮಯ್ಯ ಎರಿಸಲು ಹೈಕಮಾಂಡ್ ಒಪ್ಪಿಗೆ ನೀಡಲಾಗಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ, ಮತ್ತು ಮಲ್ಲಿಕಾರ್ಜುನ್ ಖಗೆಯವರ ಸಮಾಜಾಷಿಯಿಂದ ಡಿ.ಕೆ.ಶಿವಕುಮಾರ್ ಉಪ ಮುಖ್ಯ ಮಂತ್ರಿಯ ಸ್ಥಾನಕ್ಕೆ ಒಪ್ಪಿಕೊಂಡಿದ್ದಾರೆ.

ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ದೂರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದಲ್ಲೂ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ದವಾಗಿದೆ.

    ಕಂಠೀರವ ಸ್ಟೇಡಿಯಂ ಬಳಿ ಸಿಎಂ ಸಿದ್ದರಾಮಯ್ಯ ಅವರ ಫ್ಲೆಕ್ಸ್‌ಗಳು ಈಗಾಗಲೇ ರಾರಾಜಿಸತೊಡಗಿವೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡನೇ ಭಾರಿ ಅಧಿಕಾರ ಸ್ವೀಕರಿಸುತ್ತಿರುವ ಸಿದ್ದರಾಮಯ್ಯಗೆ ಆಡಳಿತದಲ್ಲಿ ಸಿದ್ದಹಸ್ತರಾಗಿದ್ದು, ಅವರ ಆಯ್ಕೆ ಜನತೆಗೆ ಸಂತೋಷ ಕಂಡು ಬಂದಿದೆ.. ಶನಿವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಸೇರಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

     ಜನನುಡಿ ಸುದ್ದಿ ಸಂಸ್ಥೆ ಈ ಮೊದಲೇ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗುತ್ತಾರೆ, ಕಾಂಗ್ರೆಸ್ ಹೈಕಮಾಂಡ್ ಘೋಶಿಸುವುದೊಂದೇ ಬಾಕಿಯೆಂದು, ಗುರುವಾರ ಅಥವ ಶನಿವಾರ ಅವರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆಂದು ಸುದ್ದಿ ಮಾಡಿತ್ತು. ಇದು ನಿಜವಾಗಿದೆ