ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್: ಅಂತರಾಷ್ಟ್ರೀಯ ದಾದಿಯರ ದಿನಾಚರಣೆ

ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ನರ್ಸಿಂಗ್ ವೃತ್ತಿಗೆ ಪಾದರ್ಪಣೆ ಮಾಡುವ ಮೊದಲ ಹಂತವಾದ ದೀಪ ಬೆಳಗಿಸುವ ಮೂಲಕ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮವನ್ನು ಮೇ 12 “ಅಂತರಾಷ್ಟ್ರೀಯ ದಾದಿಯರ ದಿನ”ದಂದು ಆಯೋಜಿಸಲಾಯಿತು. ಮುಖ್ಯ ಅತಿಥಿಯವರಾದ ಡಾ. ಸುಜ ಕರ್ಕಡ, ಪ್ರಾಂಶುಪಾಲರು, ಸಿ ಎಸ್ ಐ ಲೋಂಬಾರ್ಡ್ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್, ಉಡುಪಿ. ಪ್ರೊ| ಧೋಮ ಚಂದ್ರಶೇಖರ್, ನಿರ್ದೇಶಕರು, ಐಎಂಜೆ ಸಮೂಹ ಸಂಸ್ಥೆ, ಪ್ರೊ| ಫಸಲ್ ರಹಮಾನ್ ಎಂ.ಟಿ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ. ಪ್ರೊ| ಜೆನಿಫರ್ ಫ್ರೀಡ ಮಿನೇಜೆಸ್, ಪ್ರಾಂಶುಪಾಲರು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಫ್ರೀಡಾ ಮಿನೇಜಸ್ ರವರು ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಜ್ಞಾ ಸ್ವೀಕಾರ ವಿಧಾನವನ್ನು ವಾಚಿಸುವ ಮೂಲಕ, ಅವರಿಗೆ ಸೇವೆ ಸಲ್ಲಿಸುವ ಸಲುವಾಗಿ ಜ್ಞಾನ, ಪ್ರೀತಿ, ಬದ್ಧತೆ,ಸಹಾನುಭೂತಿ, ಸಮರ್ಪಣೆ ಮತ್ತು ಶಿಸ್ತಿನ ಬೆಳಕನ್ನು ಬೆಳಗಿಸಿದರು. “ನಮ್ಮ ದಾದಿಯರು ನಮ್ಮ ಭವಿಷ್ಯ” ಎಂಬ ಧ್ಯೇಯೋದ್ದೇಶದೊಂದಿಗೆ ಅಂತರಾಷ್ಟ್ರೀಯ ದಾದಿಯರ ದಿನವನ್ನು ವಿಜ್ರಂಭಣೆಯಿಂದ ಆಚರಿಸಿದರು.

ಮುಖ್ಯ ಅತಿಥಿಯವರಾದ ಡಾ. ಸುಜ ಕರ್ಕಡ ರವರು “ ಬಿದಿರಿನ ಮರ ಮೊದಲು ತನ್ನ ಬೇರಿನ ಬುಡವನ್ನು ಗಟ್ಟಿಗೊಳಿಸಿ, ಹೆಮ್ಮರವಾಗಿ ಬೆಳೆಯುತ್ತದೆ. ಹಾಗೆಯೇ ನಾವು ಮೊದಲು ನಮ್ಮ ವಿದ್ಯಾಭ್ಯಾಸದ ಬುಡವನ್ನು ಗಟ್ಟಿಗೊಳಿಸಿ, ನಮ್ಮ ಶ್ರದ್ಧೆ, ಸೇವಾಮನೋಭಾವದ ಮನಸ್ಥಿತಿಯನ್ನು ಹೆಮ್ಮೆರವಾಗಿ ಬೆಳೆಸುವ ಮೂಲಕ ಇತರರಿಗೆ ಮಾರ್ಗದರ್ಶಿಗಳಾಗಿರಬೇಕು” ಎಂದು ತಿಳಿಸಿದರು.

ಪ್ರೊ| ದೋಮ ಚಂದ್ರಶೇಖರ್ ರವರು ವೈದ್ಯರಿಗಿಂತ ದಾದಿಯವರು ರೋಗಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ದಾದಿಯವರು ನಮ್ಮ ಜೀವನದ ಒಂದು ಭಾಗವಾಗಿದ್ದಾರೆ. ರೋಗಿಗಳ ಆರೈಕೆ, ಚಿಕಿತ್ಸೆ, ನಿರ್ವಹಣೆ ಹೀಗೆ ಅವರ ಮಹತ್ವದ ಕುರಿತು ತಿಳಿಸಿದರು.

ಸಹಾಯಕ-ಪ್ರಾಧ್ಯಾಪಕಿಯವರಾದ ವೆಲ್ಮೇರಾ ಡಯಾಸ್ ರವರು ಸ್ವಾಗತ ಕೋರಿದರು. ಉಪನ್ಯಾಸಕಿ ಅಕ್ಷತಾ ರವರು ಈ ದಿನದ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಂಶುಪಾಲರಾದ ಪ್ರೊ| ಜೆನ್ನಿಫರ್ ಫ್ರೀಡಾ ಮಿನೇಜಸ್ ರವರು ಧನ್ಯವಾದವನ್ನು ಸಮರ್ಪಿಸಿದರು. ಸಹ- ಉಪನ್ಯಾಸಕಿ ದಿವ್ಯ ದಾಂತಿ ರವರು ಅತಿಥಿಯವರ ಕಿರು ಪರಿಚಯವನ್ನು ಮಾಡಿದರು. ನರ್ಸಿಂಗ್ ವಿದ್ಯಾರ್ಥಿಗಳಾದ ಶೆರಿಲ್ ಮತ್ತು ರೋಶ್ನಾ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಅಂತರಾಷ್ಟ್ರೀಯ ದಾದಿಯರ ದಿನದ ಅಂಗವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದರು.

ಕ್ಷೇತ್ರದ ಸರ್ವತೋಮುಖ ಪ್ರಗತಿ ನನ್ನ ಗುರಿಯಾಗಿದೆ : ಜೆಡಿಎಸ್ ವಿಜೇತ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ; ಕ್ಷೇತ್ರದ ಸರ್ವತೋಮುಖ ಪ್ರಗತಿ ನನ್ನ ಗುರಿಯಾಗಿದೆ ಎಂದು ಜೆಡಿಎಸ್ ವಿಜೇತ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರು ಏರ್ಪಡಿಸಿದ್ದ ವಿಜಯೋತ್ಸವದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ಶಕ್ತಿ ನನಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಲಾಗುವುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಕೃಷಿ ಕೊಳವೆ ಬಾವಿ ನಿರ್ಮಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗುವುದು. ಕ್ಷೇತ್ರದಾದ್ಯಂತ ಪರಿಶೀಲನೆ ನಡೆಸಿ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಅಗತ್ಯ ಇರುವ ಕಡೆಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಪೂರ್ವ ಕಾಲೇಜು ಸ್ಥಾಪಿಸಲಾಗುವುದು. ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಸರಬರಾಜು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು. ನನಗೆ ಮತ ನೀಡಿ ಗೆಲ್ಲಿಸಿದ ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಪ್ರತಿ ಹಂತದಲ್ಲೂ ಪಕ್ಷಾತೀತವಾಗಿ ಹಾಗೂ ಪಾರದರ್ಶಕವಾಗಿ ನಡೆದುಕೊಳ್ಳುತ್ತೇನೆ. ನನ್ನ ಗೆಲುವಿಗೆ ಕಾರಣರಾದ ಎಲ್ಲರರಿಗೂ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಕ್ಷೇತ್ರದ ಅಭಿವೃದ್ಧಿ ಕುರಿತು ಹೊಂದಿರುವ ಯೋಜನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ರೋಡ್ ಶೋ ನಡೆಸಿ ಸಂಭ್ರಮಿಸಿದರು.
ಮುಖಂಡರಾದ ಶೇಷಾಪುರ ಗೋಪಾಲ್, ಕೆ.ಬಿ.ರಘುನಾಥ್ ರೆಡ್ಡಿ,ಎಂ.ವಿ.ಮಂಜುನಾಥ್,ಶ್ರೀನಿವಾಸ್,ಬಾಬು ರವಿಕುಮಾರ್, ಶ್ರೀನಿವಾಸಪ್ಪ, ಜಯಾಜ್ ಖಾನ್, ಅಬ್ದುಲ್, ಅಮ್ಜದ್, ಚಾನ್‌ಪಾಷ, ಸರ್ದಾರ್, ಫಯಾಜ್ ಖಾನ್, ಇಂತಿಯಾಜ್, ಪ್ರಸನ್ನ, ಮನು ದುರ್ಗಾಪ್ರಸಾದ್ ಇದ್ದರು.

ರಾಜಕೀಯ ತಂತ್ರಗಾರಿಕೆಯಲ್ಲಿ ಪಳಗಿರುವ ಮಾಜಿ ಕೇಂದ್ರ ಸಚಿವ ಶಾಸಕ ಕೆ.ಎಚ್. ಮುನಿಯಪ್ಪ ಅವರು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆಗಳು ಹೆಚ್ಚಿವೆ

ಕೋಲಾರ : ರಾಜಕೀಯ ತಂತ್ರಗಾರಿಕೆಯಲ್ಲಿ ಪಳಗಿರುವ ಮಾಜಿ ಕೇಂದ್ರ ಸಚಿವ ಹಾಲಿ ದೇವನಹಳ್ಳಿ ಶಾಸಕ ಕೆ.ಎಚ್. ಮುನಿಯಪ್ಪ ಅವರು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಕೋಲಾರ ಮೂಲಗಳು ತಿಳಿಸಿವೆ .

ಸತತ ಏಳು ಬಾರಿ ಕೋಲಾರ ಸಂಸದರಾಗಿ ಆಯ್ಕೆಯಾಗಿದ್ದ ಕೆ.ಎಚ್.ಮುನಿಯಪ್ಪ , ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ಎಐಸಿಸಿ ವರ್ಕಿಂಗ್ ಕಮಿಟಿಯಲ್ಲೂ ಸದಸ್ಯತ್ವ ಪಡೆಯುವ ಮೂಲಕ ಸೋನಿಯಾಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದಾರೆ .

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ತಮ್ಮದೇ ಪಕ್ಷದ ಶಾಸಕರ ಪ್ರಯತ್ನದಿಂದ ಸೋಲುಂಡಿದ್ದ ಕೆ.ಎಚ್. ಮುನಿಯಪ್ಪ , ಜಿಲ್ಲೆಯ ಕೆ.ಆರ್ ರಮೇಶ್‌ ಕುಮಾರ್‌ ಮತ್ತವರ ಘಟಬಂಧನ್‌ನಿಂದ ದೂರವಿದ್ದರು. ಕಾಂಗ್ರೆಸ್ ಪಕ್ಷದಲ್ಲೇ ಇದ್ದರೂ ಮಾಜಿ ಶಾಸಕ ಕೆ.ಆರ್ ರಮೇಶ್‌ ಕುಮಾರ್‌ ತಂಡದ ವಿರುದ್ಧ ತೊಡೆತಟ್ಟಿ , ಬಹಿರಂಗವಾಗಿಯೇ ಸುದ್ದಿಗೋಷ್ಟಿ ನಡೆಸಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದರು.

ಇದೀಗ ರಮೇಶ್ ಕುಮಾರ್ ಸೋಲುಂಡಿದ್ದು , ಕೆ.ಎಚ್ ಮುನಿಯಪ್ಪ ದೇವನಹಳ್ಳಿಯಲ್ಲಿ ಶಾಸಕರಾಗಿ ಹೊರಹೊಮ್ಮಿದ್ದಾರೆ . ಎಡಗೈ ದಲಿತ ಸಮುದಾಯದ ರಾಷ್ಟ್ರಮಟ್ಟದ ನಾಯಕರಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಬೆಂಬಲ ಸಿಕ್ಕಿರುವುದರಿಂದ ಮೂವರು ಡಿಸಿಎಂಗಳ ಆಯ್ಕೆಯ ಕೂಗು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ದಲಿತ ಎಡಗೈ ಸಮುದಾಯದ ಹಿರಿಯ ನಾಯಕರಾಗಿರುವ ಕೆ.ಎಚ್ ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಆ ಸಮುದಾಯಕ್ಕೆ ನ್ಯಾಯ ಒದಗಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದಂತಿದೆ.

ಜತೆಗೆ ಸತತ 2 ನೇ ಬಾರಿಗೆ 50 ಸಾವಿರಕ್ಕೂ ಹೆಚ್ಚಿನ ಭಾರಿ ಮತಗಳ ಅಂತರದಿಂದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಕಲಾ ಶಶಿಧರ್ ಕೆಜಿಎಫ್ ಶಾಸಕರಾಗಿ ಆಯ್ಕೆಯಾಗಿದ್ದು , ಒಂದೇ ಶಾಸನ ಸಭೆಯಲ್ಲಿ ತಂದೆ ಮಗಳು ಶಾಸಕರಾಗಿರುವುದು ವಿಶೇಷವಾಗಿದೆ.

ಈ ನಡುವೆ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಕೆ.ಎಚ್.ಮುನಿಯಪ್ಪ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದ್ದು , ಕಳೆದ ಲೋಕಸಭಾ ಸೋಲು , ತಮ್ಮ ಸೋಲಿಗೆ ಸ್ವಪಕ್ಷಿಯರೇ ಕಾರಣ ಎಂಬ ಸತ್ಯ ಅರಿತಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಜಿಲ್ಲೆಯಲ್ಲಿ ಮತ್ತೆ ತಮ್ಮ ಶಕ್ತಿ ತೋರಲು ಉತ್ತಮ ಅವಕಾಶ ಸಿಕ್ಕಿದೆ.

7 ಬಾರಿ ಸಂಸದರಾಗಿ ಕೋಲಾರದ ಅಗತ್ಯತೆಗಳು , ಬೇಡಿಕೆಗಳ ಕುರಿತು ಅರಿತಿರುವ ಕೆ.ಎಚ್.ಮುನಿಯಪ್ಪ ಡಿಸಿಎಂ ಆಗುವ ಸಾಧ್ಯತೆಗಳಿಂದಾಗಿ ಕೋಲಾರ ಕಾಂಗ್ರೆಸ್‌ನಲ್ಲಿ ಘಟಬಂಧನಿಂದ ದೂರವಿದ್ದ ಅವರ ಬೆಂಬಲಿಗರ ಗುಂಪು ಮತ್ತೆ ಕ್ರಿಯಾಶೀಲವಾಗಲಿದೆ .

ಪಕ್ಷದ ಎಲ್ಲಾ ಕಾರ್ಯಕರ್ತರಿಗೆ, ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಹಾಗೂ ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ನನ್ನ ಆನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಸೋಮವಾರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ನನ್ನ ಜೀವನದಲ್ಲಿ ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ನಾನು ದಿನದ 24 ಗಂಟೆಗಳಲ್ಲಿಯೂ ನಿಮ್ಮ ಸಂಪರ್ಕದಲ್ಲಿರುತ್ತೇನೆ. ಎಲ್ಲಾ ಸಮುದಾಯದವರ ಕಷ್ಟ ಸುಖಗಳಿಗೆ ಸ್ಪಂದಿಸಿ ಈ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂದವ್ಯವನ್ನು ಬೆಳಸಿಕೊಳ್ಳುವ ಜೊತೆಗೆ ಈ ಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಯಲ್ದೂರಿನಲ್ಲಿ ಕೆಇಬಿ ಸರ್ಕಾರಿ ಶಾಲೆ, ಅಸ್ವತ್ರೆ ಹೀಗೆ ಅನೇಕ ಅಭಿವೃದ್ದಿ ಕೆಲಸಗಳು ನನ್ನ ಅವಧಿಯಲ್ಲಿ ಆಗಿದ್ದು ಮುಂದಿನ ದಿನಗಳಲ್ಲಿ ಬಹಳ ಅಭಿವೃದ್ದಿಯತ್ತ ಯಲ್ದೂರು ಗ್ರಾಮ ಸಾಗುತ್ತದೆ. ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಲಭ್ಯಗಳಿಗೆ ನನ್ನ ಮೊದಲ ಆಧ್ಯತೆ ನೀಡುತ್ತೇನೆ. ನಿಮ್ಮ ಎಲ್ಲರ ಆಶೀರ್ವಾದದಿಂದ ಅತಿ ಹೆಚ್ಚು ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಿದ್ದೀರಿ ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ ಅನುಧಾನವನ್ನು ತಂದು ಕೆಲಸ ಮಾಡುವ ಜವಾಬ್ದಾರಿ ನನ್ನದು ಎಲ್ಲಾ ಶಾಸಕರು ನನ್ನ ಮಿತ್ರರುರಾಗಿದ್ದಾರೆ. ಎಲ್ಲರೂ ವಿಶ್ವಾಸವನ್ನು ಗೆಲ್ಲಿಸಿ ಕೋಟ್ಯಾಂತರ ರೂಗಳನ್ನು ಅನುದಾನ ತಂದು ಈ ಕ್ಷೇತ್ರವನ್ನು ಅಭಿವೃದ್ದಿ ಮಾಡುತ್ತೇನೆ. ನಿಮಗೆ ಕೊಟ್ಟ ಭರವಸೆ ನಾನು ಉಳಿಸಿಕೊಳ್ಳುತ್ತೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಈ ಕ್ಷೇತ್ರದ ಕಟ್ಟೆಕಡೆಯ ವ್ಯಕ್ತಿಗೂ ತಲುಪಿಸುತ್ತೇನೆ. ಕ್ಷೇತ್ರದಲ್ಲಿ ಹಂತ ಹಂvವಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತೇನೆಂದರು.
ಇದೇ ವೇಳೆಯಲ್ಲಿ ಯಲ್ದೂರು ಕ್ಷೇತ್ರಕ್ಕೆ ಅಗಮಿಸಿದ ಶಾಸಕ ಜಿ..ಕೆ. ವೆಂಕಟಶಿವಾರೆಡ್ಡಿ ರವರನ್ನು ಅದ್ದೂರಿಯಾಗಿ ಪಟಾಕಿಗಳನ್ನು ಸಿಡಿಸಿ ಹೂ ಮಾಲೆಗಳನ್ನು ಹಾಕುತ್ತಾ ಬರಮಾಡಿಕೊಂಡರು.
ತಾಲ್ಲೂಕಿನ ಸೋಮಯಾಜಲಹಳ್ಳಿ, ರೋಣೂರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ವೆಂಕಟಶಿವಾರೆಡ್ಡಿ ಪ್ರೀತಿ ಮತ್ತು ಸಹೋದರತ್ವದಿಂದ ಹೋರಾಡಿ ಗೆದ್ದಿದ್ದೇವೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಇಂದಿರಾ ಭವನ್ ರಾಜಣ್ಣ, ತೂಪಲ್ಲಿ ಆರ್ ನಾರಾಯಣಸ್ವಾಮಿ. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟಕುಂಟೆ ಕೃಷ್ಣಾರೆಡ್ಡಿ,ಹಿರಿಯ ಮುಖಂಡರಾದ ಶೇಷಾಪುರ ಗೋಪಾಲ್ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ವಿನೋದ್‍ಗೌಡ, ಕೊಳತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎನ್. ನಾರಾಯಣಗೌಡ, ಎನ್. ವೆಂಕಟೇಶ್, ಮುಖಂಡರಾದ ವಕೀಲ ಆಚಂಪಲ್ಲಿ ಜಯರಾಮೇಗೌಡ, ಮಣಿ, ಉಪ್ಪಕುಂಟೆ ಚಂಗಪ್ಪ, ಮಂಜಲನಗರ ವಿ. ಚಂದ್ರಪ್ಪ, ಚಿಂತಮಾಕನಹಳ್ಳಿ ಕೃಷ್ಣಪ್ಪ, ಇನ್ನೂ ಹಲವಾರು ಮುಖಂಡರು ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Sthree Sangatan of Udupi diocese one amongst top in national level, but need to strengthen further powerful – Bishop Gerald Isaac Lobo

Udupi : Indeed our diocesan Catholic Sthree Sangatana has the top most one amongst all India dioceses. But it must be strengthened further, said Bishop Rt Rev Dr. Gerald Isaac Lobo, Bishop of Udupi diocese.

Speaking during the annual general meeting of the Sugamya District Women’s Okkoota and Sugamya Mahila Sauhardha Sahakari Sangha®, held at Don Bosco Hall, Our Lady of Sorrows Church here on Monday, May 15, 2023, Bishop said that the process of Udupi Diocese Sthree Sangatana is much appreciated. It must be powerful and should enable the individuals to realize their full identity and powers in all spheres of life. Diocesan Women’s Okkoota must focus on empowerment of women and making them financially, socially and politically capable. He said there shall need to proceed developmental work towards further development of cooperative Sangha with each other’s cooperation. The women in the diocese should strengthen their leadership in the church in many ways and need to make second line leaders in the society which will encourage the betterment of the society. In order to make a powerful society and to achieve success, we should work hard to make our society stronger and stronger. Our diocesan Women’s group needs to be role models to other dioceses in the country, he said.

Earlier, the annual general meeting began with starting prayer by the Kundapur unit. The Diocesan Sugamya Mahila Okkoota President Anita Dias presided over the occasion. Sr. Lydia Fernandes, National Secretary of Catholic Shtree Sangatana was the chief guest. Bishop Rt Rev Dr. Gerald Isaac Lobo,  Rev Fr. Reginald Pinto, Spiritual Director, Pramila D’Sa President of Sugamya Mahila Sauhardha Sahakari Sangha, Cynthia D’Silva General Secretary of Okkoota, Veera Wilma D’Souza Hon. Treasurer and other office bearers along with diocesan five deaneries presidents were present on the dais.

Cynthia D’Silva, general secretary, placed a long annual report during the occasion and Hon Treasurer placed the statement of accounts for the year of Okkoota and Mothiyam newsletter of the Okkoota.

Bishop and guests on the dais felicitated five marvelous achievers each from the deaneries in the society and their profiles read out by their respective deanery heads.

National Secretary Sr. Lydia Fernandes also felicitated by the Bishop and guests on the dais during the occasion. In her felicitation address, Sr. Lydia Fernandes appreciated the diocesan Shtree Sanghatana for their marvelous achievements’ for the society not only in the diocese, but also one of the best Catholic Women’s Okkoota amongst all dioceses of the country. She said that what her parents taught her benefited in serving women in the society and influenced her to do good work in other dioceses of the country. She found women can do the same for society’s empowerment. She planned to get together four pastoral commissions for future action of the Sthree Sanghatana at the diocese level.

Pramila D’Sa was felicitated by Sr. Lydia Fernandes and others on the dais for her tremendous achievement for the society.

Janet Barboza was unanimously elected chief editor of Mothiyam magazine during the occasion.

At the end Vice President Celine D’Souza proposed a vote of thanks. The programme winded up with a prayer song of Our Lady of Virgin Mary. Hilda Fernandes and Jyothi D’Mello of Karkala Deanery compared the beautiful programme.

ರಾಜಕಾಲುವೆಗಳನ್ನು ಮುಚ್ಚಿ ಮಳೆ ನೀರನ್ನು ಕೆರೆಗಳಿಗೆ ಹರಿಯದಂತೆ ಮುಚ್ಚಿರುವುದರಿಂದ ನೀರು ರೈತರ ಕೃಷಿ ಭೂಮಿಗೆ ಹಾಗೂ ತಗ್ಗು ಪ್ರದೇಶಕ್ಕೆ ನುಗ್ಗಿ ಅವಾಂತರ ಆರೋಪ

ಸಾವಿರಾರು ಕೆರೆಗಳನ್ನು ಹೊಂದಿರುವ ಜಿಲ್ಲೆಯನ್ನು ಕೆರೆಗಳ ತವರು ಎಂದು ಪ್ರಸಿದ್ದಿ ಪಡೆದಿರುವ ಪೂರ್ವಜರು ಬೆವರು ಸುರಿಸಿ ಒಗ್ಗಟ್ಟಿನಿಂದ ಕಟ್ಟಿ ಅಭಿವೃದ್ದಿ ಪಡಿಸಿರುವ ಕೆರೆಗಳು ದಿನೇ ದಿನೇ ಒತ್ತುವರಿದಾರರಿಂದ ತನ್ನ ಸ್ವರೂಪವನ್ನು ಕಳೆದುಕೊಂಡು ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಮನುಷ್ಯನ ದುರಾಸೆಯೇ ಮೂಲ ಕಾರಣವಾಗಿದೆ ಎಂದರು.

ಪ್ರತಿವರ್ಷ ಮುಂಗಾರು ಮಳೆ ಆರಂಭವಾದರೆ ಜಿಲ್ಲೆಯ ರೈತರಿಗೆ ಬೆಳೆನಷ್ಟದ ಚಿಂತೆ ಜನ ಸಾಮಾನ್ಯರಿಗೆ ಬದುಕಿನ ಚಿಂತೆಯಾಗಿದೆ. ಮಳೆ ನೀರು ಸರಾಗವಾಗಿ ಹರಿಯುವ ರಾಜಕಾಲುವೆಗಳು ಇಂದು ಒತ್ತುವರಿಯಿಂದ ಸಂಪೂರ್ಣವಾಗಿ ತನ್ನ ಸ್ವರೂಪವನ್ನು ಕಳೆದುಕೊಂಡು ಬಲಾಡ್ಯರು ವಾಣಿಜ್ಯ ಮಳಿಗೆಗಳು ನಿರ್ಮಾಣ ಮಾಡುವ ಜೊತೆಗೆ ರಾಜಕಾಲುವೆಗಳನ್ನು ಮುಚ್ಚಿ ಮಳೆ ನೀರನ್ನು ಕೆರೆಗಳಿಗೆ ಹರಿಯದಂತೆ ಮುಚ್ಚಿರುವುದರಿಂದ ಮಳೆ ನೀರು  ರೈತರ ಕೃಷಿ ಭೂಮಿಗೆ ಹಾಗೂ ತಗ್ಗು ಪ್ರದೇಶದ ಬಡವರ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಲು ಒತ್ತುವರಿದಾರರೇ ನೇರಕಾರಣವಾಗಿದ್ದಾರೆಂದು ಆರೋಪ ಮಾಡಿದರು. 

ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ಮಳೆ ನೀರಿನಿಂದ ನಷ್ಟವಾಗಿರುವ ಸ್ಥಳ ಪರಿಶೀಲನೆಗೆ ಬರುವ ಅಧಿಕಾರಿಗಳು ಸಂತಸ್ತ್ರರಿಗೆ ದಿಕ್ಕುತಪ್ಪಿಸಲು ನೂರೊಂದು ನೆಪ ಹೇಳಿ 24 ಗಂಟೆಯಲ್ಲಿ ಒತ್ತುವರಿಗಳನ್ನು ತೆರವುಗೊಳಿಸುತ್ತೇವೆ. ಜೊತೆಗೆ ರೈತರಿಗೆ ಜನ ಸಾಮಾನ್ಯರಿಗೆ ಪರಿಹಾರವನ್ನು ನೀಡುತ್ತೇವೆಂದು ಹೇಳಿ ಹೋಗುವ ಅಧಿಕಾರಿಗಳು ಮತ್ತೆ 364 ದಿನ ನಾಪತ್ತೆಯಾಗಿ ಸಮಸ್ಯೆಯಾದಾಗ ಪ್ರತ್ಯಕ್ಷವಾಗಿ ಹರಿಕಥೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆಂದು ಅವ್ಯವಸ್ಥೆ ಬಗ್ಗೆ ಕಿಡಿಕಾರಿದರು.

ಜಿಲ್ಲಾಧ್ಯಂತ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳಿಗೆ ಸಂಬಂಧಪಟ್ಟಂತೆ ದಾಖಲೆಗಳ ಸಮೇತ ಕಂದಾಯ ಸರ್ವೆ ಅಧಿಕಾರಿಗಳಿಗೆ ದೂರು ನೀಡಿದರೆ ಒತ್ತುವರಿದಾರರಿಗೆ ಅಧಿಕಾರಿಗಳೇ ಮುಂಚಿತವಾಗಿ ಮೆಸೇಜ್‍ನ್ನು ನೀಡು ಮಟ್ಟಕ್ಕೆ ವ್ಯವಸ್ಥೆ ಹದಗೆಟ್ಟಿದೆ. ಒಂದು ಪ್ರಕಾರ ಅಧಿಕಾರಿಗಳೇ ಒತ್ತುವರಿದಾರರಿಗೆ ಶ್ರೀರಕ್ಷೆಯಾಗಿ ಕೆಲಸ ಮಾಡುವ ಮುಖಾಂತರ ಜನ ಸಾಮಾನ್ಯರ ಬುದುಕನ್ನು ಕಸಿಯುತ್ತಿದ್ದಾರೆಂದು ಅಧಿಕಾರಿಗಳ ವಿರುದ್ದ ದೂರು ನೀಡಿದರು. 

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 25ನೇ ಬ್ಯಾಚ್ ಸ್ನಾತಕೋತ್ತರ ಕೋರ್ಸ್ ಉದ್ಘಾಟನಾ ಸಮಾರಂಭ


ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ 25 ನೇ ಬ್ಯಾಚ್ ಸ್ನಾತಕೋತ್ತರ ಕೋರ್ಸ್‍ನ್ನು ದಿನಾಂಕ 15.05.2023 ರಂದು ಬೆಳಿಗ್ಗೆ 10.00 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಮುಖ್ಯ ಅತಿಥಿಗಳಾಗಿ ರೋಸಿ ರೋಯಲ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರು ಇಲ್ಲಿನ ಪ್ರಾಂಶುಪಾಲರಾದ ಡಾ. ಸೈಯದ್ ಸೆದೀಕ್ ಆಹ್ಮದ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಫಾದರ್ ಮುಲ್ಲರ್ ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಕಾಲೇಜಿನ ಯು.ಜಿ. ಹಾಗೂ ಪಿ.ಜಿ. ಕೋರ್ಸ್ ಸಲಹೆಗಾರರಾದ ಡಾ. ಎಮ್. ಕೆ. ಕಾಮಥ್, ಪಿ.ಜಿ. ಶೈಕ್ಷಣಿಕ ಉಸ್ತುವಾರಿ ಡಾ. ಜ್ಯೋಶ್ನಾ ಶಿವಪ್ರಸಾದ್ ಹಾಗೂ 25ನೇ ಬ್ಯಾಚ್ ಸ್ನಾತಕೋತ್ತರ ವಿದ್ಯಾರ್ಥಿ ಪ್ರತಿನಿಧಿ ಇವರುಗಳು ಭಾಗವಹಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್‍ರವರು ನೆರೆದಿರುವ ಎಲ್ಲರನ್ನು ಸ್ವಾಗತಿಸಿ ಹೊಸ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್‍ಗಳ ಆರಂಭದ ಚರಿತ್ರೆಯನ್ನು ನೆನಪಿಸುತ್ತಾ, ತಮ್ಮ ಶೈಕ್ಷಣಿಕ ಹಾಗೂ ವೃತ್ತಿ ಜೀವನದಲ್ಲಿ ಸೂಕ್ಷ್ಮತೆ ಹಾಗೂ ಸಂವೇದನೆಯನ್ನು ಕಾಪಾಡಿಕೊಳ್ಳುವಂತೆ ಹುರಿದುಂಬಿಸಿದರು.
ಮುಖ್ಯ ಅತಿಥಿಗಳಾದ ಡಾ. ಸೈಯದ್ ಸೆದೀಕ್ ಆಹ್ಮದ್, ರವರು ತಮ್ಮ ಸಂದೇಶದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಗಮನ ಹರಿಸುವಂತೆ ಪ್ರೇರೇಪಿಸಿದರು. ಆಡಳಿತಾದಿಕಾರಿಯಾದ ವಂದನೀಯ ರೋಶನ್ ಕ್ರಾಸ್ತಾ ರವರು ವಿದ್ಯಾರ್ಥಿಗಳು ಫಾದರ್ ಮುಲ್ಲರ್ ಸಂಸ್ಥೆಯನ್ನು ಆಯ್ಕೆ ಮಾಡಿದಕ್ಕಾಗಿ ಅಬಿನಂದಿಸಿ ರೋಗಿಗಳ ಆರೈಕೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸುವಂತೆ ಉತ್ತೇಜಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸ್ಥೆಯ ಮೂಲಭೂತ ಧ್ಯೇಯ ಮತ್ತು ನಡುವಳಿಕೆಯನ್ನು ಅಳವಡಿಸುತ್ತಾ ತಮ್ಮ ಸಾಧನೆಯಲ್ಲಿ ಮುಂದುವರಿಯುವಂತೆ ಹುರಿದುಂಬಿಸಿದರು. ಶೈಕ್ಷಣಿಕ ಉಸ್ತುವಾರಿ ಡಾ. ಜ್ಯೋಶ್ನಾ ಶಿವಪ್ರಸಾದ್ ರವರು ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಹೊಸದಾಗಿ ಸೇರಿದ ವಿದ್ಯಾರ್ಥಿಗಳು ತಮ್ಮ ಸ್ವಯಂ ಪರಿಚಯವನ್ನು ಮಾಡಿದರು. ಡಾ. ಶಿವಾನಿ ಸಿಂಗ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಮತ್ತೊಮ್ಮೆಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ, ಮೇ 18 ಅಥವಾ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

.

ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವುದು ಕಂಘಟಾಗಿತ್ತು, ಆದರೆ ಇದೀಗ ಉತ್ತರ ಸಿಕ್ಕಿದೆ. ಕರ್ನಾಟಕ ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ ಕಾಂಗ್ರೆಸ್, ಹಾಗೇ ಈ ಬಗ್ಗೆ ಹೈಕಮಾಂಡ್‍ನಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.ಸಿದ್ದರಾಮಯ್ಯನವರು ಮೇ 18 ಆಥವಾ 20 ರಂದು  ಕರ್ನಾಟಕದ ಮುಂದಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾನೇ ಮುಖ್ಯಮಂತ್ರಿಯಾಗಬೇಕು ಕಾಂಗ್ರೆಸ್ ಬಹುಮತ ಸಾಧಿಸಲು ನಾನು ಶ್ರಮಿಸಿದ್ದು,  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದರು. ಇತ್ತ ಸಿದ್ದರಾಮಯ್ಯನವರು ಸಹ ಸಿಎಂ ನಾನೇ ಆಗಬೇಕೆಂದು ಪಟ್ಟು ಹಿಡದು ಕುಳಿತಿದ್ದರು. ಅದರಂತೆ ಇಬ್ಬರೂ  ನಾಯಕರು ಕಾಂಗ್ರೆಸ್ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರಿದ್ದರು. ಕೊನೆ ಗಳಿಗೆಯಲ್ಲಿ ಡಿ.ಕೆ ಶಿವಕುಮಾರ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ಧರಾಮಯ್ಯ ಎಲ್ಲಾ ಸಮುದಾಯಗಳ ನಾಯಕ ಹಾಗಾಗಿ ಅವರೇ ಸಿಎಂ ಆಗಲಿ ಎರಡು ವರ್ಷ ಕಳೆದ ಬಳಿಕ ನೋಡೋಣ ಎಂದು ಸಿದ್ಧರಾಮಯ್ಯನವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

    ದೆಹಲಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ವರಿಷ್ಠರು ಅಂತಿಮವಾಗಿ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿ ಎಂದು ಆಯ್ಕೆ ಮಾಡಿದ್ದಾರೆಂದು ತಿಳಿದುಬಂದಿದೆ. ಇದೀಗ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ