ಕಾಂಗ್ರೆಸ್ ಬಹುಮತ ಪಡೆದು ಪಕ್ಷ ಸರಕಾರ ರಚನೆಯತ್ತ ಬಿಜೆಪಿಯ ಮೇಲೆ ರೋಸಿ ಹೋದ ಜನ, ಜೆಡಿಸ್ ಬ್ಲ್ಯಾಕ್ ಮೈಲ್ ತಂತ್ರ ವಿಫಲ

ಕಾಂಗ್ರೆಸ್ ಬಹುಮತ ಪಡೆದು ಪಕ್ಷ ಸರಕಾರ ರಚನೆಯತ್ತ ಧಾಪುಕಾಲು ಹಾಕುತ್ತಿದೆ. ನಾವು ಜನನುಡಿ. ಸುದ್ದಿ ಸಂಸ್ಥೆ ಹೇಳಿದಂತೆ ೧೩೦ ಸ್ಥಾನ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿತ್ತು, ಈಗ ಇದನ್ನು ದಾಟಿ ಹೆಚ್ಚಿನ ಬಹುಮತ ಪಡೆಯುವ ಸಾಧ್ಯತೆ ಇದೆ. ಬಿಜೆಪಿ ಯ ಜನ ವೀರೊಧಿ ನೀತಿ ಬಿಜೆಪಿ ಗೆ ಮುಳುವಾಗಿದೆ.

ಮೇಲಿನ ಫೋಟೊಗಳು ಬೆಂಗಳೂರುರಿನ್ ಕಾಂಗ್ರೆಸ್ ಪಕ್ಷದ ವಾರ್ ರೂಮಿನನವು. ಇವರು ಚುನಾವಣೆ ಪ್ರಕ್ರಿಯೆ ಆರಂಭವಾಗಿದನಿಂದ ನಿರಂತರ ಪಕ್ಷಕ್ಕಾಗಿ ದುಡಿಯುತಿತ್ತು.

ಜಾತ್ಯಾತೀತ ಪಕ್ಷ ಎಂದು, ಕುಟುಂಬ ರಾಜಾಕರಣ ಮಾಡುತ್ತೀರುವ ಜೆಡಿಎಸ್ ಇಬ್ಬರ ಜಗಳ ಮೂರನೇಯವನ ಆಧಾಯ ಎಂದು ಎಣಿಸಿಕೊಳ್ಳುತಿದ್ದ ಪಕ್ಷಕ್ಕೆ ಅತ್ಯಂತ ಹೀನಾಯವಾದ ಹಿನ್ನೆಡೆ ಆಗಿದೆ.

2023 ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತದತ್ತ

2023 ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಎಣಿಕೆಯಲ್ಲಿ ನಿಚ್ಚಳ ಬಹುಮತದತ್ತ ಸಾಗಿದೆ, ಮೇಜಿಕ್ ನಂಬರ್ ೧೧೩ ಸೀಟು ದೊರಕಬೇಕಾಗಿದ್ದು, ಕಾಂಗ್ರೆಸ್ ಪಕ್ಷ ಅದನ್ನು ದಾಟಿ ಮುಂದವರೆಯುತ್ತಿದೆ.

ಕಾಂಗ್ರೆಸ್ ಪಕ್ಷ ಹೆಚ್ಚಿನ ಕಡೆಗಳಲ್ಲಿ ಮತಗಳ್ ಏನಿಕೆಯಲಿ ಮುಂದಿದ್ದು, 130 ಸೀಟುಗಳನ್ನು ಪಡೆಯುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತವರಣ ಕೂಡಿದ್ದು, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೆಲವಡೆ ವಿಜಯೋತ್ಸವ ಆಚರಿಸುತಿದ್ದಾರೆ.

ಬಿಜೆಪಿ ಸೋಲಿನ ಸುಳಿವಿನಲ್ಲಿ ಸಿಕ್ಕಿ ಹಾಕಿಕೊಂಡತ್ತಿದೆ.

ಯಮದೂತ ಟಿಪ್ಪರ್, ಕಾರಿಗೆ ಡಿಕ್ಕಿ ಅತ್ತೆ ಮತ್ತು ಸೊಸೆ ದಾರುಣ ಸಾವು

ಜನಸ್ಪಂದನ ನ್ಯೂಸ್, ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ಸಮೀಪ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡಲು ಹೋಗಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಅತ್ತೆ ಮತ್ತು ಸೊಸೆ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತಿದ್ದರು. ಮೃತಪಟ್ಟವರು ಬಾಳ್ಳು ಪೇಟೆಯ ಕಾಫಿ ಪ್ಲಾಂಟರ್ ಮತ್ತು ಸಹ್ಯಾದ್ರಿ ಥಿಯೇಟರ್ ಮಾಲಕರಾಗಿದ್ದ ಮೈತ್ರಿದೇವಿ (70)  (ಬಿ.ಎಸ್. ಗುರುನಾಥ್ ಅವರ ಪತ್ನಿ) ಹಾಗೂ ಸೊಸೆ ಸೌಜನ್ಯ (48) ಎಂದು ತಿಳಿದುಬಂದಿದೆ.

ಬಿ.ಎಸ್. ಗುರುನಾಥ್ ಅವರ ಮಗಳ ಹೊಸ ಮನೆ ಗೃಹ ಪ್ರವೇಶಕ್ಕೆಂದು ಕಾರಿನಲ್ಲಿ ಹಾಸನದಿಂದ ದಾವಣಗೆರೆಗೆ ಹೋಗಿದ್ದರು ಎನ್ನಲಾಗಿದೆ. ಕಾರ್ಯಕ್ರಮ ಮುಗಿಸಿಕೊಂಡು ಹಾಸನಕ್ಕೆ ವಾಪಸ್ಸು ಬರುವಾಗ ಚನ್ನಗಿರಿ ಬಳಿ ಟಿಪ್ಪರ್‌ಲಾರಿ ವಾಹನದ ಚಾಲಕ ಅತಿ ವೇಗದಲ್ಲಿ ಓವರ್ ಟೇಕ್ ಮಾಡುವ ಅವಸರದಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿದೆ

ಈ ವೇಳೆ ಕಾರಿನಲ್ಲಿ ಮುಂಭಾಗ ಕುಳಿತಿದ್ದ ಬಿ.ಎಸ್. ಗುರುನಾಥ್ ಹಾಗೂ ಪುತ್ರ ರಾಜೇಶ್ ಇಬ್ಬರೂ ಸೇಫ್ಟಿ ಬೆಲ್ಟ್ ಹಾಕಿಕೊಂಡಿದ್ದರಿಂದ ಇಬ್ಬರಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹಿಂದಿನ ಸೀಟಿನಲ್ಲಿ ಕುಳಿತಿದ್ದದು.      

ಮೋಚಾ ಚಂಡಮಾರುತ ಅಪ್ಪಳಿಕೆ, ಇಂದು ರಾತ್ರಿ ತೀವ್ರ ಸ್ವರೂಪ ಪಡೆಯಲಿದೆ – ಕರ್ನಾಟಕದಲ್ಲಿ ಮಳೆ ಬರುವ ಸಾಧ್ಯತೆ

ಭಾರತೀಯ ಹವಾಮಾನ ಇಲಾಖೆ (IMD) ಮೇ 6 ರಿಂದ ಬಂಗಾಳ ಕೊಲ್ಲಿಯಲ್ಲಿ (BOB) ರೂಪುಗೊಳ್ಳುವ ಸಂಭಾವ್ಯ ಸೈಕ್ಲೋನಿಕ್ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದೆ. ಮೇ ತಿಂಗಳಲ್ಲಿ, BOB (ಬಂಗಾಳ ಕೊಲ್ಲಿ) ಸಾಮಾನ್ಯವಾಗಿ ಹಲವಾರು ಉಷ್ಣವಲಯದ ಚಂಡಮಾರುತಗಳನ್ನು ತರುತ್ತದೆ. ಕೆಲವು ವ್ಯಾಪಕ ಹಾನಿ ಮತ್ತು ನಷ್ಟವನ್ನು ಉಂಟುಮಾಡುತ್ತವೆ. IMD ಮತ್ತೊಮ್ಮೆ ಅಂತಹ ಘಟನೆಯ ಮುನ್ಸೂಚನೆ ನೀಡಿದ್ದ ‘ಮೋಚಾ’ ಚಂಡಮಾರುತ ಇಂದು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಭಾರತೀಯ ಹವಾಮಾನ ಇಲಾಖೆ ಮೋಚಾ ಚಂಡಮಾರುತದ ಬಗ್ಗೆ ಇತ್ತೀಚಿನ ನವೀಕರಣವನ್ನು ಬಿಡುಗಡೆ ಮಾಡಿದೆ.

ಚಂಡಮಾರುತದ ಪರಿಣಾಮ ಹಲವು ರಾಜ್ಯಗಳಲ್ಲಿ ಕಂಡುಬರಲಿದ್ದು, ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತ ಒಡಿಶಾ, ಬಂಗಾಳ ಮತ್ತು ಅಂಡಮಾನ್-ನಿಕೋಬಾರ್ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಆದ್ದರಿಂದ ಇಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಚಂಡಮಾರುತ ಪರಿಣಾಮ ಇಂದು ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು,
ಬಾಂಗ್ಲಾದೇಶ- ಮ್ಯಾನ್ಮಾರ್ ಗಡಿಯತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಮಧ್ಯಾಹ್ನ ಸುಮಾರಿಗೆ ಆಗ್ನೇಯ ದಿಕ್ಕಿನ ಮಧ್ಯ ಬಂಗಾಳ ಕೊಲ್ಲಿಯ ಮೇಲೆ, ಪೋರ್ಟ್‌ಬ್ಲೇರ್‌ನ ಪಶ್ಚಿಮ-ವಾಯುವ್ಯಕ್ಕೆ ೫೨೦ ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ.

ಇನ್ನೂ, ಮೋಚಾ ಚಂಡಮಾರುತದ ಪರಿಣಾಮ ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು ಮಿಜೋರಾಂನಲ್ಲಿ ಶನಿವಾರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ದಕ್ಷಿಣ ಅಸ್ಸಾಂನಲ್ಲಿ ಭಾನುವಾರ ಮಳೆಯಾಗಬಹುದು.

ಎಚ್ಚರಿಕೆ: ಮತ್ತೊಂದೆಡೆ, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಎಂಟು ತಂಡಗಳನ್ನು ನಿಯೋಜಿಸಿದ್ದು, ೨೦೦ ಕೋಸ್ಟ್ ಗಾರ್ಡ್‌ಗಳನ್ನು ಸಜ್ಜುಗೊಳಿಸಿದೆ. ಮೀನುಗಾರರು, ಹಡಗುಗಳು, ದೋಣಿಗಳು ಮತ್ತು ಟ್ರಾಲರ್‌ಗಳು ಭಾನುವಾರದವರೆಗೆ ಮಧ್ಯ ಮತ್ತು ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರಕ್ಕೆ ಹೋಗದಂತೆ ಇಲಾಖೆ ಎಚ್ಚರಿಸಿದೆ.

ಮಧ್ಯ ಬಂಗಾಳ ಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದಲ್ಲಿ ನೌಕಾಯಾನ ಮಾಡುವವರಿಗೆ ಕರಾವಳಿಗೆ ಮರಳಲು ಸೂಚಿಸಲಾಗಿದೆ.

ಮೋಚಾ ಚಂಡಮಾರುತವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯ ಹವಾಮಾನ ಇಲಾಖೆ, “ಭಾನುವಾರದ ವೇಳೆಗೆ ಚಂಡಮಾರುತ ಕ್ರಮೇಣ ತೀವ್ರಗೊಳ್ಳಲಿದೆ. ಬಾಂಗ್ಲಾ- ಮಯನ್ಮಾರ್ ಗಡಿಯಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದ್ದು, ಗಂಟೆಗೆ 150-160 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ” ಎಂದು ಹೇಳಿದೆ.

ಇದರ ಪರಿಣಾಮ ಅಂಡಮಾನ್ ಮತ್ತು ನಿಕೋಬಾರ್, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ದಕ್ಷೀಣ ಆಸ್ಸಾಂನಲ್ಲಿ ರವಿವಾರದ ವರೆಗೂ ಮಳೆಯಾಗಲಿದೆ. ಕೇರಳ, ಒಡಿಶಾ ಮತ್ತು ಕರ್ನಾಟದಲ್ಲೂ ಗುಡುಗು ಸಿಡಿಲಿನಿಂದ ಕೂಡಿದ ಮಳಯಾಗಲಿದೆ. ಎಂದು ಎಚ್ಚರಿಕೆ ನೀಡಿದೆ.