ಎಂಐಟಿಕೆ ಸ್ಕಿಲ್-ಎ-ಥೈನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ

ಮೂಡ್ಲಕಟ್ಟೆ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ವಿದ್ಯಾರ್ಥಿಗಳ ತಂಡವು ಯು ಐ ಪಾಥ್ ರವರು ನಡೆಸಿದ ಸ್ಕಿಲ್-ಎ-ಥೋನ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ ಆರನೇಯ ಸ್ಥಾನವನ್ನು ಪಡೆದಿರುತ್ತಾರೆ. ಈ ಸ್ಪರ್ಧೆಯು ‘ರೊಬೋಟಿಕ್ ಯಾಂತ್ರೀಕರಣ ಪ್ರಕ್ರೀಯೆ ಪೌರv’À್ವದಲ್ಲಿ ಉತ್ತಮ ಸಾಧನೆ ಮಾಡುವ ಸಂಸ್ಥೆಗಳನ್ನು ಗುರುತಿಸುವ ಗುರಿಹೊಂದಿದೆ. ಎಂಐಟಿ ಕುಂದಾಪುರ ತಂಡ 200 ಬಾಟ್‍ಗಳನ್ನು ನಿರ್ಮಿಸಿ ಈ ಸ್ಪರ್ಧೆಯಲ್ಲಿ ಜಯಗಳಿಸಿದೆ. ಸ್ಕಿಲ್-ಎ-ಥಾನ್ 2022 ಸ್ಪರ್ಧೆಯು ನಾಗರಿಕ ಡೆವೆಲಪರ್‍ರನ್ನು ಸೃಷ್ಟಿಸಿ, ಡಿಜಿಟಲ್ ಸಹಾಯಕರಾಗಿ ಸಾಮಾನ್ಯ ರೋಬೋಟಗಳ ಸಾಮಥ್ರ್ಯವನ್ನು ತಿಳಿಯುವುದಾಗಿದೆ. ಮೊದಲನೇ ಹಾಗೂ ಎರಡನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ ಹಾಗೂ ಉಪಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜರವರು ಐ ಸಿ ಟಿ ಅಕಾಡೆಮಿಯ ಶ್ರೀ ವಿಘ್ನೇಶ ಶೆಟ್ಟಿಯವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಅದ್ಯಾಪಕರಾದ ಪ್ರೊ. ಅಮೃತಮಾಲಾ, ಪ್ರೊ. ಅಕ್ಷತಾ, ಪ್ರೊ. ಮನೋಜ್ ಕುಮಾರ್ ಮತ್ತು ಎರಡನೇ ವರ್ಷದ ಎಐ ಆಂಡ್ ಎಂಎಲ್ ವಿಭಾಗದ ವಿದ್ಯಾರ್ಥಿಗಳಾದ ಸಿ ಬಿ ಸಭಾಸ್ಟಿನ್ ಮತ್ತು ಮೇಘನಾ ಈ ಸ್ಪರ್ಧೆಗೆ ಸಹಕರಿಸಿದ್ದರು.

ಮೇ ಎಂಟರಂದು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನಾಚರಣೆ :ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಘಟಕದಿಂದ ವಿವಿಧೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ರೆಡ್ ಕ್ರಾಸ್ ದಿನಾಚರಣೆಯ ಒಂದನೇ ಕಾರ್ಯಕ್ರಮ

ಮೇ ಎಂಟರಂದು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಎದುರು ಆಯೋಜಿಸಲಾಯಿತು. ಸರ್ಜನ್ ಆಸ್ಪತ್ರೆಯ MD ಡಾ. ವಿಶ್ವೇಶ್ವರಯ್ಯ ಇದನ್ನು ಉದ್ಗಾಟಿಸಿ ಶುಭ ಹಾರಿಸಿದರು. ಸಭಾಪತಿ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. 104 ಮಂದಿ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದರು. ಕಾರ್ಯಕ್ರಮ ದಲ್ಲಿ ಉಪ ಸಭಾಪತಿ ಡಾ. ಉಮೇಶ್ ಪುತ್ರನ್, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಎ. ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಎನ್ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ಎರಡನೇ ಕಾರ್ಯಕ್ರಮ

ಹಟ್ಟಿಯಂಗಡಿಯ ನಮ್ಮ ಭೂಮಿಗೆ ಉಚಿತ ಸೆನಿಟರಿ ಪೇಡ್, ನೋವಿನ ಸ್ಪ್ರೆ ಮತ್ತು ಕ್ರೀಮ್, ಬೇಂಡೇಜ್, ಓಕ್ಸಿ ಮೀಟರ್ ಇತ್ಯಾದಿ ಸುಮಾರು ಹದಿನೈದು ಸಾವಿರ ರೂಪಾಯಿ ಬೆಲೆಯ ವಸ್ತುಗಳ ಸರಬರಾಜು ಮಾಡಲಾಯಿತು. ರೆಡ್ ಕ್ರಾಸ್ ದಿನಾಚರಣೆಯ ಮೂರನೇ ಕಾರ್ಯಕ್ರಮ:- ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು.

ರೆಡ್ ಕ್ರಾಸ್ ದಿನಾಚರಣೆಯ ಮೂರನೇ ಕಾರ್ಯಕ್ರಮ

ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಭಿರ ಆಯೋಜಿಸಲಾಯಿತು ಹಾಗೂ ದಾನಿಗಳನ್ನು ಗೌರವಿಸಲಾಯಿತು.

‘ಮತದಾನ ನಮ್ಮ ಹಕ್ಕು’ಜನಜಾಗೃತಿಯಗಾಗಿ ಮರಳು ಶಿಲ್ಪಾಕೃತಿ

ಮೇ 10 ರಂದು ನಡೆಯುವರಾಜ್ಯ ವಿಧಾನ ಸಭಾಕ್ಷೇತ್ರದಚುನಾವಣೆಯ ಅಂಗವಾಗಿ ಸದೃಢರಾಜ್ಯಕ್ಕಾಗಿ ಮತದಾನ ಎಂಬ ಸಂಕಲ್ಪದೊಂದಿಗೆ: ಸದೃಢರಾಜ್ಯಕ್ಕಾಗಿ‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆಜನಜಾಗೃತಿಯನ್ನು ಮೂಡಿಸಿದ ಮರಳು ಶಿಲ್ಪ.

ಅಳತೆ:- 4.5 ಅಡಿ ಎತ್ತರ ಮತ್ತು 6 ಅಡಿ ಅಗಲ

ಕಲಾವಿದರು:-
‘ಸ್ಯಾಂಡ್‍ಥೀಂ’ ಉಡುಪಿ ತಂಡದಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ

ಸ್ಥಳ:- ಮಲ್ಪೆಕಡಲ ತೀರ, ‘ಸ್ಯಾಂಡ್‍ಥೀಂ’ ಉಡುಪಿ:   9611495199

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಸತತ 6 ವರ್ಷಗಳಿಂದ 100% ಫಲಿತಾಂಶ

617 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ ಕಲ್ಯಾಣ್ ಬಸವರಾಜ ಲಗಳೂರು

ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ ಸತತ 6 ವರ್ಷಗಳಿಂದ 100% ಫಲಿತಾಂಶ
ಕುಂದಾಪುರ : ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 6ನೇ ವರ್ಷವೂ ಕೂಡ 100% ಫಲಿತಾಂಶ ದಾಖಲಿಸಿದ್ದು 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿ ಕಲ್ಯಾಣ್ ಬಸವರಾಜ ಲಗಳೂರು 617 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಫಾತಿಮಾತುಲ್ ಹನ್ನತ್ 599 ಅಂಕ ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ, ಚಿನ್ಮಯ ಎಸ್ ಪೈ 595 ಅಂಕ ಗಳಿಸಿ ಶಾಲೆಗೆ ಮೂರನೇ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕರೂ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರದಾನ ಧರ್ಮ ಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಡಿಸೋಜ ಎ ಸಿ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ಅಭಿನಂದಿಸಿದ್ದಾರೆ.

ವಿಶಿಷ್ಟ ಶ್ರೇಣಿಯಲ್ಲಿ ತೆರ್ಗಡೆಯಾದ ವಿದ್ಯಾರ್ಥಿಗಳು

ಫಾ|ಸ್ಟ್ಯಾನಿ ತಾವ್ರೊ ಇವರ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮ್ರೋತ್ಸವದ ಸಂಭ್ರಮ – ಜನರ ಪ್ರೀತಿಯ ಮಹಾಪೂರ


ಕುಂದಾಪುರ, ಮೇ.8: 452 ವರ್ಷ ಪುರಾತನವಾದ ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಅವರ ಈ ವರ್ಷ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವ ಕೆಲವೇ ತಿಂಗಳ ಅಂತರದಲ್ಲಿ ಬಂದಿರುವುದು, ಬಹು ಅಪರೂಪವಾಗಿದ್ದರಿಂದ ಮೇ 10 ರಂದು ಅವರಿಗೆ (ಯಾಜಕೀ ದೀಕ್ಷೆ ಪಡೆದ ದಿನ, ಅಗಸ್ಟ್ 20 ಜನ್ಮದಿನ) ವಾಗಿದ್ದು, ರೋಜರಿ ಮಾತಾ ಭಕ್ತರು ಈ ಸಂಭ್ರವನ್ನು ಒಟ್ಟಾಗಿ ಆಚರಿಸುವ ನಿರ್ಣಯವನ್ನು ಮಾಡಿ ಮೇ 7 ಭಾನುವಾರದಂದು ಸಡಗರ ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಲಾಯಿತು.
ಈ ಸಂಭ್ರವನ್ನು ಫಾ|ಸ್ಟ್ಯಾನಿ ಅವರು ಸುಮಾರು 70 ಧರ್ಮಗುರುಗಳ ಜೊತೆ ದಿವ್ಯ ಕ್ರತ್ಞತಾ ಬಲಿದಾನವನ್ನು ಅರ್ಪಿಸಿ ಆಚರಿಸಿದರು.
ಉಡುಪಿ ಶೋಕಮಾತ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಚಾಲ್ರ್ಸ್ ಮಿನೆಜೆಸ್ ದೇವರ ವಾಕ್ಯವನ್ನು ಮುರಿದು “ಯಜಕನನ್ನು ದೇವರು ಜನರ ಮಧ್ಯದಿಂದ ಆರಿಸಿಕೊಳ್ಳುತಾನೆ, ಆರಿಸುವುದು ಆ ದೇವರು, ಅದೊಂದು ದೇವರ ಕ್ರಪೆ. ಹೀಗೆ ಆರಿಸಲ್ಪಟ್ಟ ಯಾಜಕನು, ಜನರಿಗೆ ಮುಕ್ತಿ ನೀಡಲು ಆಧಾರವಾಗಿರುತ್ತಾನೆ. ನಮಗೆ ಪ್ರಾರ್ಥನೆ, ಪೂಜೆ ಪಾಠ, ಜನರ ನಿವೇದನೆ ದೇವರಲ್ಲಿ ತಲುಪಿಸುವ ಹೋಣೆ ಅವರದಾಗುತ್ತೆ, ಜನರು ಮತ್ತು ದೇವರ ನಡುವೆ ಅವನ ಸೇತುವೆಯಾಗುತ್ತಾನೆ. ಇಂತಹ ಸೇವೆಯನ್ನು ಫಾ|ಸ್ಟ್ಯಾನಿ ತಾವ್ರೊ, 50 ವರ್ಷಗಳಿಂದ ನಿರಂತರ ಮಾಡಿಕೊಂಡು ಬಂದಿದ್ದಾರೆ. ಹೀಗೆ ಅವರು ಸಮರ್ಪಿತ ಯಾಜಕಿ ಜೀವನವನ್ನು ನಡೆಸಿದ್ದಾರೆ. ಯಾಜಕ ಅಂದರೆ ಯೇಸುಕ್ರಿಸ್ತರ ಪ್ರತಿನಿಧಿ ಅವರ ತತ್ವದಂತೆ ಜೀವಿಸಿ, ಯಾಜಕತನದ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವದ ಸಂಭ್ರಮ ಆಚರಿಸುತ್ತಿರುವ ಅವರಿಗೆ ಮುಂದಿನ ದಿನಗಳಲ್ಲಿ ದೇವರ ವಿಶೇಷ ಆಶಿರ್ವಾದಗಳು ಮತ್ತು ದೇವರು ಆಯುರಾರೋಗ್ಯ, ಸಂತ್ರಪ್ತಿ ಸಮಾಧನ ನೀಡಲಿ ಎಂದು” ಅವರು ಸಂದೇಶದಲ್ಲಿ ತಿಳಿಸಿದರು.
ಮಂಗಳೂರು ಮತ್ತು ಉಡುಪಿ ಆವತ್ತು ಅವಿಭಾಜ್ಯ ಧರ್ಮಪ್ರಾಂತ್ಯದ ಬಿಷಪರಾಗಿದ್ದ, ಈಗ ನಿವ್ರತರಾಗಿರುವರುವ ಅ|ವಂ| ಅಲೋಶಿಯಸ್ ಪಾವ್ಲ್ ಡಿಸೋಜಾ, ದಿವ್ಯ ಬಲಿ ಪೂಜೆಯಲ್ಲಿ ಭಾಗಿಯಾಗಿ, “ಸುಮಾರು 40 ವರ್ಷ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಅಮೋಘ ಸೇವೆ ನೀಡಿದ ಕೀರ್ತಿ ಫಾ|ಸ್ಟ್ಯಾನಿಯವರಿಗೆ ಸಲ್ಲುತ್ತದೆ, ವಿವಿಧ ಇಗರ್ಜಿಗಳಲ್ಲಿ ಧರ್ಮಗುರುಗಳಾಗಿ, ಕಂಕನಾಡಿ ಆಸ್ಪತ್ರೆಯ ನಿರ್ದೇಶಕರಾಗಿ, ಹೋಮಿಯೊಪತಿ ಮೆಡಿಕಲ್ ಕಾಲೇಜಿನ ಅಧಿಕಾರಿಯಾಗಿ ಸೇವೆ ನೀಡಿದಲ್ಲದೆ, ವೀಶೆಷ ಮಕ್ಕಳ ಶಾಲೆ ತೆರೆದು ಸಮಾಜಕ್ಕೆ ಉತ್ತಮ ಸೇವೆ ನೀಡಿದ್ದಾರೆ” ಎಂದು ಅವರು ಫಾ|ಸ್ಟ್ಯಾನಿ ಬಗ್ಗೆ ತಿಳಿಸಿದರು.
ನಂತ ನಡೆದ ಅಭಿನಂದನ ಸಮಾರಂಭದಲ್ಲಿ ಈ ಸಂಭ್ರಮದ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡ ರೋಜರಿ ಚರ್ಚಿನ ಸಹಾಯಕ ಧರ್ಮಗುರು ಸ್ವಾಗತದ ಮಾತುಗಳನ್ನಾಡಿದರು. ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಹೂ ಗುಚ್ಚಗಳನ್ನು ನೀಡಿ ಗೌರವಿಸಿದರು.
ನಂತರ ಫಾ|ಸ್ಟ್ಯಾನಿ ತಾವ್ರೊ ಇವರ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಮತ್ತು ಹುಟ್ಟು ಹಬ್ಬದ ಅಮøತ್ಸೋವದ ಕೇಕ್‍ನ್ನು ಕತ್ತರಿಸಿ ಅಭಿನಂದನಾ ಸಂಭ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಹಿಂದೆ ಕುಂದಾಪುರ ಸಂತ ಜೋಸೆಫ್ ಚರ್ಚಿನ ಮುಖ್ಯಸ್ಥೆಯಾಗಿ ಸೇವೆ ನೀಡಿದ್ದ ಧರ್ಮಭಗಿನಿಯ ದೀಕ್ಷೆ ಪಡೆದು 40 ವರ್ಷದ ಸಂಭ್ರವನ್ನು ಇತ್ತೀಚೆಗೆ ಆಚರ್ಸಿಕೊಂಡ ಫಾ|ಸ್ಟ್ಯಾನಿ ತಾವ್ರೊ ಅವರ ಸಹೋದರಿ ಸಿಸ್ಟರ್ ವಾಯ್ಲೆಟ್ ಅವರು ತಮ್ಮ ಸಹೋದರನ ಕುರಿತು ಮಾತನಾಡಿದರು. ಫಾ|ಸ್ಟ್ಯಾನಿ ತಾವ್ರೊ ಅವರು ಈ ಹಿಂದೆ ಪ್ರಧಾನ ಧರ್ಮಗುರುಗಳಾಗಿ ಸೇವೆ ನೀಡಿದ ಮಣಿಪಾಲದ ಚರ್ಚಿನ ಅಂದಿನ ಉಪಾಧ್ಯಕ್ಷ ಎಲನ್ ಪಿರೇರಾ, ಕಿನ್ನಿಗೊಳ್ಳಿ ಚರ್ಚಿನ ಅಂದಿನ ಉಪಾಧ್ಯಕ್ಷೆ ಜೆಸಿಂತಾ ಮಥಾಯಸ್, ಶಿರ್ವಾ ಚರ್ಚಿನ ಅಂದಿನ ಉಪಾಧ್ಯಕ್ಷರಾದ ವಿಲ್ಸನ್ ಡಿಸೋಜಾ, ಫಾ|ಸ್ಟ್ಯಾನಿ ತಾವ್ರೊರವರ ಸಾಧನೆ ಬಗ್ಗೆ ಮಾತನಾಡಿದರು. ಫಾ|ಸ್ಟ್ಯಾನಿ ತಾವ್ರೊ ದೀಕ್ಷೆ ಪಡೆದ ಸಮಯದಲ್ಲಿ ದೀಕ್ಷೆ ಪಡೆದ ಕೋಟ ಚರ್ಚಿನ ಧರ್ಮಗುರುಗಳಾದ ವಂ|ಆಲ್ಫೊನ್ಸ್ ಡಿಲೀಮಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಶೇಷವಾಗಿ ಫಾ|ಸ್ಟ್ಯಾನಿ ತಾವ್ರೊ ಇವರಿಗೆ ಸಮರ್ಪಣೆ ಮಾಡಲು, ಬರ್ನಾಡ್ ಡಿಕೋಸ್ತಾ ಇವರ ಸಂಪಾದಕತ್ವದಲ್ಲಿ ಸಿದ್ದವಾದ ಕುಂದಾಪುರ ಚರ್ಚಿನ “ರೊಜಾರಿಯುಮ್” ಪತ್ರಿಕೆಯನ್ನು ಬಿಷಪ್ ಜೆರಾಲ್ಡ್ ಲೋಬೊ ಬಿಡುಗಡೆಗೊಳಿಸಿ ಫಾ|ಸ್ಟ್ಯಾನಿ ತಾವ್ರೊ ಅವರಿಗೆ ಸಮರ್ಪಿಸಿದರು.
ನಂತರ ಸಮಾರಂಭದ ಮುಖ್ಯಪ್ರಾಯರಾದ ಫಾ|ಸ್ಟ್ಯಾನಿ ತಾವ್ರೊ ಅವರನ್ನು ಚರ್ಚ್ ಪರವಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಮ್‍ನಿಂದ ಪೋಪ್ ಸ್ವಾಮಿಗಳು ಕಳುಹಿಸಿದ್ದ ಸಂದೇಶ ಪತ್ರವನ್ನು ಫಾ|ಅಶ್ವಿನ್ ಆರಾನ್ನಾ ವಾಚಿಸಿ ಪ್ರಧಾನಿಸಿದರು. ಇದರ ವ್ಯವಸ್ಥೆಯನ್ನು ಫಾ|ಮನೋಜ್ ಬ್ರಗಾಂಜಾ ಮಾಡಿದ್ದರು.
ಸನ್ಮಾಕ್ಕೆ ಉತ್ತರವಾಗಿ ಫಾ|ಸ್ಟ್ಯಾನಿ ತಾವ್ರೊ “ನನ್ನ ಈ ಅಪರೂಪದ ಎರಡು ಸಂಭ್ರಮಗಳನ್ನು ಆಚರಿಸುವ ಭಾಗ್ಯ ನನಗೆ ಅನುಗ್ರಹಿಸಿದಕ್ಕೆ ದೇವರಿಗೆ ಕ್ರಜ್ಞತೆಗಳನ್ನು ನೀಡಿತ್ತೇನೆ, ದೇವರು ನನ್ನಲ್ಲಿ ವಿಚಿತ್ರಗಳನ್ನು ಮಾಡಿದ್ದಾರೆ, ನನ್ನ ಯಾಜಕೀ ಜೀವನದ ಪಯಣವನ್ನು ನೆಡಸಲು ಆತ ನನಗೆ, ಸದಾಕಾಲ ನನಗೆ ಆತನ ಕ್ರಪೆಯನ್ನು ಪ್ರಾಪ್ತಿ ಮಾಡಿದ್ದಾನೆ. ನನಗೇನು ಆಶೆಯಿಲ್ಲ, ಆದರೆ ನನಗೆ ಬೇಕಾದಂತಹ, ಎಲ್ಲಾ ಆಶೋತ್ತರಗಳನ್ನು ಜನರ ಮೂಲಕ ಇಡೇರಿಸಿದ್ದಾನೆ, ನನ್ನ ಕುಟುಂಬದವರು ನನ್ನ ಯಾಜಕಿ ಜೀವನದಲ್ಲಿ ಉತ್ತಮ ಸಹಕಾರವನ್ನು ನೀಡಿದ್ದಾರೆ. ಇಂದು ಇಷ್ಟು ದೊಡ್ಡ ಸಂಭ್ರವನ್ನು ಕುಂದಾಪುರದ ಜನತೆ, ಒಂದು ಕುಟುಂಬದಂತೆ ಆಚರಿಸಿದ್ದಿರಿ, ನಿಮೆಗೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಇದರಿಂದಾಗಿ ನನ್ನ ಮನಸ್ಸು ಆನಂದ ಸಂತೋಷದಿಂದ ಕೂಡಿದೆ. ನಾನು ಯಾಜಕನಾಗಿ ಇಷ್ಟೆಲ್ಲಾ ಸೇವೆ ನೀಡಲು ದೇವರ ದಯೆಯೆ ಕಾರಣವಾಗಿದೆ, ನನಗೆ 50 ವರ್ಷಗಳ ಯಾಕತನದ ಅವಧಿ ಮತ್ತು 75 ವರ್ಷಗಳ ಹುಟ್ಟು ಹಬ್ಬ ಆಚರಿಸಲು ಕರುಣಿಸಿದ ಈ ಅಪರೂಪದ ಅವಕಾಶ ದೇವರು ನೀಡಿದಕ್ಕೆ, ಆತನಿಗೆ ಕ್ರತ್ಞತೆ ಮತ್ತು ಧನ್ಯವಾದಗಳನು ಸಮರ್ಪಿಸುತ್ತೇನೆ” ಎಂದು ತಮ್ಮ ಮನದಾಳದ ಮಾತನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಶಪ್ ಅ|ವ||ಡಾ|ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ “ಫಾ|ಸ್ಟ್ಯಾನಿ ತಾವ್ರೊ ಇವರನ್ನು ದೇವರು ಆರಿಸಿ ದೇವರು ಅವರನ್ನು ಅಭಿಷೇಕ ಮಾಡಿದ್ದಾರೆ, ಕಾರಣ ಅವರು ತನ್ನ ಪ್ರಜೆಗಳಿಗೆ ಸೇವೆ ನೀಡಲು. ಯಾಜಕರು ಕ್ರಿಸ್ತನ ಪ್ರೇರಣೆಯಂತೆ ನಡೆಯಬೇಕು, ಯಾಜಕನು ಯೇಸು ಕ್ರಿಸ್ತನ ಸಂಕೇತ, ಯೇಸು ಕ್ರಿಸ್ತನ ಪ್ರಾತಿನಿತ್ಯವನ್ನು ಹೊಂದಿದ ವಿಶೇಷ ವ್ಯಕ್ತಿಯಾಗಿದ್ದಾನೆ. ಫಾ|ಸ್ಟ್ಯಾನಿ ತಾವ್ರೊ ಅವರು ಉಡುಪಿ ಮತ್ತು ಮಂಗಳೂರು ಈ ಎರಡೂ ಧರ್ಮಪ್ರಾಂತ್ಯದದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದವರು, ಅವರು ಅನೇಕ ಸಾಧನೆಗಳನ್ನು ಮಾಡಿದ್ದಾರೆ, ಆದರೆ ಅದು ಅವರಾಗಿಯೇ ಮಾಡಿದ್ದಲ್ಲಾ, ದೇವರು ನನ್ನ ಪ್ರಜೆಗಳಿಗೆ ಎನೆಲ್ಲಾ ಬೇಕೊ ಅವಗಳನ್ನು ತನ್ನ ಕ್ರಪೆಯ ಮುಖಾಂತರ ಫಾ|ಸ್ಟ್ಯಾನಿ ತಾವ್ರೊ ಮೂಲಕ ವiಸಿದ್ದಾರೆ’ ಪ್ರತಿಯೊಂದು ಹುಟ್ಟು ಹಬ್ಬ ದೇವರ ವಿಶ್ವಾಸವನ್ನು ಪ್ರಸರಿಸುತ್ತದೆ. ಇವತ್ತು ಫಾ|ಸ್ಟ್ಯಾನಿ ತಾವ್ರೊ ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ, ಈ ಸಂದರ್ಭದಲ್ಲಿ ಅವರಿಗೆ ಶುಭಾಷಯ ಮತ್ತು ಅಭಿನಂದನೆಗಳನ್ನು ಸಲ್ಲಿಸುತೇನೆ” ಎಂದು ಧರ್ಮಪ್ರಾಂತ್ಯದ ಪರವಾಗಿ ಅವರು ಫಾ|ಸ್ಟ್ಯಾನಿ ತಾವ್ರೊರವರನ್ನು ಸನ್ಮಾನಿಸಿದರು.


ಕಾರ್ಯಕ್ರಮ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಅವರನ್ನು ಸನ್ಮಾನಿಸಲಾಯಿತು. ಫಾ|ಸ್ಟ್ಯಾನಿ ತಾವ್ರೊ ಅವರಿಗೆ ಕುಟುಂಬದ ಪರವಾಗಿ, ಸಂಘ ಸಂಸ್ಥೆಗಳ ಪರವಾಗಿ, ಶಿಕ್ಷಣ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು. ಜನತೆಯಿಂದ ಅಭಿನಂದನೆ ಮತ್ತು ಶುಭಾಶಷಯಳ ಮಹಾಪೂರ ಹರಿಯಿತು.
ಫಾ|ಸ್ಟ್ಯಾನಿ ತಾವ್ರೊ
ಅವರ ಜೀವನದ ಹಿಂದಿನ ಮುಖ್ಯಾಂಶಗಳನ್ನು ಪರದೆಯ ಮೂಲಕ ತೋರಿಸಲಾಯಿತು. ಹಾಡುಗಾರ ವಿಲ್ಸನ್ ಒಲಿವೆರಾ ಅವರ ನೇತ್ರತ್ವದಲ್ಲಿ ಶುಭಾಶಯ ಗೀತೆಯನ್ನು ಹಾಡಲಾಯಿತು, ಭಾ.ಕ.ಯುವ ಸಂಚಾಲನೆ ಮತ್ತು ವೈ.ಸಿ.ಎಸ್. ಮಕ್ಕಳಿಂದ ನ್ರತ್ಯಗಳನ್ನು ಪ್ರದರ್ಶಿಸಲಾಯಿತು. ಚರ್ಚ್ ಗಾಯನ ಪಂಗಡ ಅಧ್ಯಕ್ಷೆ ವಿನಯಾ ಡಿಕೋಸ್ತಾ ನೇತ್ರತ್ವದಲ್ಲಿ ದಿವ್ಯ ಬಲಿಪೂಜೆಗೆ ಗೀತೆಗಳನ್ನು ಮತ್ತು ದೇವರಿಗೆ ಕ್ರತ್ಞತೆ ಸಲ್ಲಿಸುವ “ಲಾವ್ದಾತೆ” ಗೀತೆಯನ್ನು ಸುಶ್ರವ್ಯವಾಗಿ ಹಾಡಲಾಯಿತು. ಭೋಜನದ ಮೇಲಿನ ಪ್ರಾರ್ಥನೆಯನ್ನು, ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದ ರೆಕ್ಟರ್ ಫಾ|ಸುನೀಲ್ ವೇಗಸ್ ಇವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, 20 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿರಿದ್ದು, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಧನ್ಯವಾದಗಳನ್ನು ಅರ್ಪಿಸಿದರು,, ಎಲ್.ಜೆ.ಫೆರ್ನಾಂಡಿಸ್ ಮತ್ತು ಫೆಲ್ಸಿಯಾನ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು. ಭೋಜನದ ಜೊತೆ ಕಾರ್ಯಕ್ರಮವು ಅದ್ದೂರಿಯಿಂದ ಸಮಾಪನಗೊಂಡಿತು.