ಕಡ್ಡಾಯ ಮತದಾನ ಸಂವಾದ : ಉದ್ದೇಶ ಪೂರ್ವಕವಾಗಿ ಮತದಾನ ಮಾಡದಿದ್ದವರ ಮೇಲೆ ಕ್ರಮಕೈಗೊಳ್ಳಬೇಕು

ಚುನಾವಣಾ ಆಯೋಗ ಮತದಾನ ಹೆಚ್ಚಿಸಲು ಬಹಳಷ್ಟು ಕ್ರಮ ಕೈಗೊಳ್ಳುತ್ತಿದ್ದರೂ ಕೆಲವರು ಉದ್ದೇಶ ಪೂರ್ವಕವಾಗಿ ಮತದಾನ ಮಾಡದೇ ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸುತ್ತಾರೆ. ಅಂತಹ ಮತದಾರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಚುನಾವಣಾ ಆಯೋಗ ನಿಯಮ ರೂಪಿಸಬೇಕು. ಇದರಿಂದ ಮತದಾನ ಮಾಡದವರಿಂದ ಚುನಾವಣಾ ಫಲಿತಾಂಶದ ಮೇಲೆ ಆಗುವ ಪರಿಣಾಮವೂ ಕಡಿಮೆಯಾಗುತ್ತದೆ. ಅಲ್ಲದೇ ಶೇಕಡಾವಾರು ಮತದಾನದ ಸಂಖ್ಯೆಯೂ ಹೆಚ್ಚುತ್ತದೆ.
ಈ ಅಭಿಪ್ರಾಯ ವ್ಯಕ್ತವಾದುದು ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ಕಡ್ಡಾಯ ಮತದಾನ ಸಂವಾದ” ಕಾರ್ಯಕ್ರಮದಲ್ಲಿ.
ಚುನಾವಣಾ ಆಯೋಗ ಚುನಾವಣೆಯನ್ನು ಒಂದು ಯದ್ಧದ ಮಾದರಿಯಲ್ಲಿ ಆಗಲು ಬಿಡದೇ ಸರಳವಾಗಿ, ಕಡಿಮೆ ಖರ್ಚಿನಲ್ಲಿ ಆರೋಗ್ಯಪೂರ್ಣ ಸ್ಪರ್ಧೆಯಲ್ಲಿ ನಡೆಯುವಂತೆ ನಿಯಮ ರೂಪಿಸಬೇಕು. ಪ್ರಜಾಪ್ರಭುತ್ವದ ದುರುಪಯೋಗ ಆಗದಂತೆ ಗಮನ ಹರಿಸಬೇಕು. ಆಮಿಷಕ್ಕೊಳಪಟ್ಟು ಮತದಾರರು ಭ್ರಷ್ಟರಾಗದಂತೆ ನೋಡಿಕೊಳ್ಳಬೇಕು ಎಂಬ ಅನಿಸಿಕೆಯೂ ವ್ಯಕ್ತವಾಯಿತು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಯು. ಎಸ್. ಶೆಣೈ ಸಂವಾದದಲ್ಲಿ ಪ್ರಾಸ್ತಾವಿಕ ಮಾತನಾಡಿ, “ಕರ್ನಾಟಕ ವಿಧಾನಸಭಾ ಚುನಾವಣೆ ವ್ಯವಸ್ಥಿತವಾಗಿ ನಡೆಯುವಂತೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಅತೀ ಹೆಚ್ಚು ಜನರು ಮತದಾನದಲ್ಲಿ ಪಾಲ್ಗೊಳ್ಳುವಂತೆ ಹಲವು ಕ್ರಮ ಕೈಗೊಂಡಿದೆ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದೆ. ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತಿದೆ. ಆದರೂ ಬಹಳಷ್ಟು ಮಂದಿ ಈ ದಿನ ತಮ್ಮ ಹಕ್ಕು ಚಲಾಯಿಸುವ ಕರ್ತವ್ಯ ಮರೆತು ಪ್ರವಾಸಕ್ಕೆ ಹೋಗುವುದು, ಬೇರೆ ಕಾರ್ಯಕ್ರಮ ಇಟ್ಟುಕೊಳ್ಳುವುದು, ಮನೆಯಲ್ಲೇ ಮನರಂಜನೆ ಪಡೆಯುತ್ತಾ ಚುನಾವಣೆ ತಮಗೆ ಸಂಬಂಧಿಸಿದ್ದಲ್ಲ ಎಂದು ನಿರ್ಲಕ್ಷ ವಹಿಸುತ್ತಾರೆ. ಈ ಬಗ್ಗೆ ಚಿಂತನ ಮಂಥನ ನಡೆಯಬೇಕು. ಚುನಾವಣಾ ಆಯೋಗ ಉದ್ದೇಶ ಪೂರ್ವಕ ಗೈರು ಹಾಜರಾಗುವವರ ಪಟ್ಟಿ ತಯಾರಿಸಿ ಕಾರಣ ಕೇಳುವ ನೋಟಿಸ್ ಕಳುಹಿಸುವ ಬಗ್ಗೆ ಚಿಂತಿಸಬೇಕು” ಎಂದರು.
ಉದ್ಯಮಿ ಕೆ. ಕೆ. ಕಾಂಚನ್ ಮಾತನಾಡಿ, “ಚುನಾವಣೆಯಲ್ಲಿ ಹಣವೇ ಪ್ರದಾನ ಎಂಬ ನಂಬಿಕೆ ಬಂದು ಬಿಟ್ಟಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಬಗ್ಗೆ ಮತದಾರರಿಗೆ ಅರಿವು ಇರಬೇಕು. ಹಣವಂತ, ಪ್ರಬಲ ಸಮುದಾಯದ ವ್ಯಕ್ತಿ, ಜನಪ್ರಿಯ ಪಕ್ಷದ ಅಭ್ಯರ್ಥಿ ಎನ್ನುವುದಕ್ಕಿಂತ ಅವರು ಶುದ್ಧ ಚಾರಿತ್ರ್ಯದವರೇ, ಸಮಾಜಕ್ಕೆ ಒಳಿತು ಮಾಡ ಬಲ್ಲರೇ, ಎನ್ನುವ ಬಗ್ಗೆ ಚಿಂತಿಸಬೇಕು. ಮತದಾನ ತಪ್ಪಿಸಿಕೊಳ್ಳುವವರ ಬಗ್ಗೆ ಕ್ರಮ ಅತ್ಯಗತ್ಯ” ಎಂದರು.
ನಿವೃತ್ತ ಬ್ಯಾಂಕ್ ಮೆನೇಜರ್ ಕೆ. ಪಾಂಡುರಂಗ ಭಟ್ ಮಾತನಾಡಿ, “ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಚೆನ್ನಾಗಿದೆ. ಚುನಾವಣೆಯೂ ಉತ್ಸಾಹದಿಂದಲೇ ನಡೆಯುತ್ತದೆ ಆದರೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದವರು ಫಲಿತಾಂಶದ ನಂತರ ಬೇಡದ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ, ಟೀಕಿಸುತ್ತಾರೆ. ಅವರಿಗೆ ಚುರುಕು ಮುಟ್ಟಿಸುವುದು ಅಗತ್ಯ” ಎಂದರು.
ತಲ್ಲೂರು ಗ್ರಾಮ ಪಂಚಾಯತ್ ಸದಸ್ಯೆ ಜುಡಿತ್ ಮೆಂಡೋನ್ಸಾ ಮಾತನಾಡಿ, “ಟಿ. ಎನ್. ಶೇಷನ್ ಅವರಂತಹ ಚುನಾವಣಾಧಿಕಾರಿಗಳು ಚುನಾವಣಾ ವ್ಯವಸ್ಥೆಗೆ ಬಹಳಷ್ಟು ಸುಧಾರಣೆ ತಂದರು. ಆದರೂ ಇಂದಿನ ಚುನಾವಣಾ ವಾತಾವರಣ ಕಂಡಾಗ ಚುನಾವಣಾ ಆಯೋಗ ಇನ್ನಷ್ಟು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಎಂದೆನಿಸುತ್ತದೆ” ಎಂದರು.
ಲೇಖಕ ರಮಾನಂದ ಕಾರಂತ ಮಾತನಾಡಿ, “ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಶಕ್ತಿಯುತವಾಗಿದೆ ಜನರೂ ಜಾಗೃತರಾಗಿದ್ದಾರೆ. ವಿದ್ಯಾವಂತರೂ ತಮ್ಮ ಕರ್ತವ್ಯ ನಿರ್ವಹಣೆ ಬಗ್ಗೆ ಇನ್ನಷ್ಟು ಜಾಗೃತರಾಗಬೇಕು” ಎಂದರು.
ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ದೇವರಾಜ್ ಮಾತನಾಡಿ, “ಕೋಟ್ಯಾಂತರ ರೂ. ಚುನಾವಣಾ ವೆಚ್ಚ, ಹತ್ತಾರು ಆಮಿಷಗಳು, ಖಾರವಾದ ಮಾತುಗಳನ್ನು ಹೊರತು ಪಡಿಸಿದ ಸರಳ ಮಾದರಿಯ ಜನ ಮೆಚ್ಚುವ ವಿಧಾನದಲ್ಲಿ ಚುನಾವಣೆ ನಡೆಸುವ ಬಗ್ಗೆ ರಾಷ್ಟ್ರೀಯ ಚಿಂತನ ಆಯೋಗ ಏರ್ಪಡಿಸಬೇಕು” ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಸತ್ಯನಾರಾಯಣ ಪುರಾಣಿಕ, “ಸಮಾಜವನ್ನು ಜಾಗೃತಿಗೊಳಿಸುವ ಅಭಿಯಾನದಲ್ಲಿ ನಾವೂ ಪಾಲ್ಗೊಳ್ಳುತ್ತಿದ್ದೇವೆ. ಹಿತಕರ ವಾತಾವರಣದಲ್ಲಿ ಚುನಾವಣೆ ನಡೆಯಬೇಕು. ಎಲ್ಲರೂ ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳುವುದು ಅಗತ್ಯ. ಈ ವಿಚಾರದಲ್ಲಿ ಅಸಡ್ಡೆ, ನಿರ್ಲಕ್ಷತನ, ಗುರುತರ ಅಪರಾಧವೆಂದೇ ಪರಿಗಣಿಸ ಬೇಕಾಗುತ್ತದೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಎಲ್ಲ ಮತದಾರರು ಪಾಲ್ಗೊಳ್ಳಬೇಕೆಂದು ವಿನಂತಿ ಮಾಡುತ್ತೇವೆ” ಎಂದರು.
ಶ್ರೀನಿವಾಸ ಶೇಟ್ ಸ್ವಾಗತಿಸಿದರು, ಸಚಿನ್ ನಕ್ಕತ್ತಾಯ ಸಂವಾದ ನಿರೂಪಿಸಿದರು.

Bethany Golden Jubilarians Felicitated at Mother House – Bendur, Mangalore.

06 May 2023 : 30 golden jubilarians gathered at Mother house for a 12 day renewal programme which commenced on 26 April.  Reflective  sessions on growing old gracefully by Fr William Sequeira SJ, Paschal Mystery of Founder and Bethany by Sr Mariette, pilgrimage to Rosa Mystica Grotto, sharing of spiritual experiences and a retreat led by Fr Theo OCD were means availed for rejuvenating and refreshing themselves to forge ahead more vibrantly during the years to come.  Sr Santhosh Maria, the General Councillor was the programme coordinator.

The climax of the celebration was the Holy Eucharist celebrated by Most Rev Dr Henry D Souza, Bishop of Bellary and concelebrated by 17 priests.  In his homily Bishop appealed to the jubilarians to live for Christ with an attitude of gratitude, after the example of St Paul who counted everything as rubbish for the surpassing worth of knowing Jesus Christ his Lord.

The golden sisters were greeted followed by the Holy Mass. Sr Rose Celine, the Superior General herself being one of the golden jubilarians was felicitated By Sr Shanthi Priya, the Asst Superior General. Thereafter Sr Rose Celine felicitated the jubilarians to the accompaniment of citation and music, with garlands and flowers and a token of love.  She called upon them to live for Christ with more enthusiasm. Jubilarians were complemented by her for having said their FIAT like Mary, for being missionaries like St Therese of Lisieux and contemplatives in action like Martha and Mary of Bethany during the past 50 years. Inviting them to spend more time at the feet of Jesus like Mary of Bethany, she appealed to them to grow in deep devotion to the Eucharist and Mother Mary taking  the Founder as their model, accepting the declining years of their life with greater faith.

With the carving of the cake, to the rhythm of the jubilee song, with garlands and flowers, the representatives of the entire Congregation joined in applauding and complementing them on this memorable occasion. Sr Shanthi Flavia Menezes and Sr Reena Edel compered the programme.

News by: Sr Santhosh Maria BS, Bethany Generalate

ಮತದಾರರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಬೇಕು : ಬಿಜೆಪಿ ಅಭ್ಯರ್ಥಿ ಜಿ.ಆರ್.ಶ್ರೀನಿವಾಸರೆಡ್ಡಿ

ಶ್ರೀನಿವಾಸಪುರ: ಮತದಾರರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಜಿ.ಆರ್.ಶ್ರೀನಿವಾಸರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದ ಬಳಿಕ ಮಾತನಾಡಿ, ಬಿಜೆಪಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸ್ಥಳೀಯ ಕಾಂಗ್ರೆಸ್ ಮುಖಂಡರು ಬಿಜೆಪಿಯೊಂದಿಗೆ ಜೆಡಿಎಸ್ ಸಮೀಕರಿಸಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು..
ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ತಾಲ್ಲೂಕಿನಲ್ಲಿ ಬಿಜೆಪಿ ಸಂಘಟನೆ ಬಲವಾಗಿದೆ. ಮುಖಂಡರು ಹಾಗೂ ಕಾರ್ಯಕರ್ತರು ಮತದಾರರನ್ನು ನೇರವಾಗಿ ಸಂಪರ್ಕಿಸಿ ಮತಯಾಚನೆ ಮಾಡುತ್ತಿದ್ದಾರೆ. ಮತದಾರರಿಂದಲೂ ಉತ್ತಮ ಸ್ಪಂದನೆ ಕಂಡುಬರುತ್ತಿದೆ. ಈವರೆಗೆ ಇಬ್ಬರಿಗೆ ಮಾತ್ರ ಮತ ನೀಡಿ ನೋಡಿದ್ದೀರಿ. ಈ ಬಾರಿ ಬಿಜೆಪಿ ಗೆಲ್ಲಿಸಿ ಬದಲಾವಣೆಗೆ ದಾರಿಮಾಡಿಕೊಡಿ ಎಂದು ಮನವಿ ಮಾಡಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಅಶೋಕರೆಡ್ಡಿ, ಮುಖಂಡರಾದ ಎನ್.ರಾಜೇಂದ್ರ ಪ್ರಸಾದ್, ರಾಜಶೇಖರರೆಡ್ಡಿ, ರಾಮಾಂಜಿ, ಸುರೇಶ್, ರಮೇಶ್, ಸೈಯದ್ ಷಫಿವುಲ್ಲಾ, ಶ್ರೀನಾಥ್, ಬಂಗವಾದಿ ನಾಗರಾಜ್, ಟಿ.ಮಂಜುನಾಥರೆಡ್ಡಿ, ಷಂಷೀರ್, ಶ್ರೀರಾಮ್, ರಂಜಿತ್. ಮದನ್ ಇದ್ದರು.
3
ಶ್ರೀನಿವಾಸಪುರದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಕೆ.ಆರ್.ರಮೇಶ್ ಕುಮಾರ್ ಪರವಾಗಿ ಮತಯಾಚನೆ ಮಾಡಿದರು. ಮುಖಂಡರಾದ ದಿಂಬಾಲ ಅಶೋಕ್, ಬಿ.ಎನ್.ಸೂರಣ್ಣ, ಮಂಜುನಾಥರೆಡ್ಡಿ, ಎನ್.ಎನ್.ಆರ್.ನಾಗರಾಜ್, ರಮೇಶ್ ಇದ್ದರು.
4.
ಶ್ರೀನಿವಾಸಪುರದಲ್ಲಿ ಶುಕ್ರವಾರ ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಪರವಾಗಿ ಮತಯಾಚನೆ ಮಾಡಿದರು.

ಬಿಜೆಪಿ ಸರ್ಕಾರ ಅಕ್ಕಿ ನೀಡುವ ಪ್ರಮಾಣ ಕಡಿಮೆ ಮಾಡುವ ಮೂಲಕ ಬಡವರ ಅನ್ನಕ್ಕೆ ಕಲ್ಲುಹಾಕಿದೆ : ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಬಿಜೆಪಿ ಸರ್ಕಾರ ಅಕ್ಕಿ ನೀಡುವ ಪ್ರಮಾಣ ಕಡಿಮೆ ಮಾಡುವ ಮೂಲಕ ಬಡವರ ಅನ್ನಕ್ಕೆ ಕಲ್ಲುಹಾಕಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಕೊತ್ತಪೇಟ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಬಡವರ ಕಷ್ಟದ ಅರಿವಿಲ್ಲ. ಹಾಗಾಗಿಯೇ ಬಡವರು ಬಳಸುವ ವಸ್ತುಗಳ ಬೆಲೆ ದುಬಾರಿಯಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ರೂ.1200 ಆಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರಿಗೆ ನೀಡುವ ಅಕ್ಕಿ ಪ್ರಮಾಣ 10 ಕೆಜೆಗೆ ಹೆಚ್ಚಿಸಲಾಗುವುದು. ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಲಾಗುವುದು. ಜನ ಸಾಮಾನ್ಯರು ಬಳಸುವ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು ರೂ.50 ಸಾವಿರದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಮನೆ ಒಡತಿಗೆ ತಿಂಗಳಿಗೆ ರೂ.2000 ನೀಡಲಾಗುವುದು ಎಂದು ಹೇಳಿದರು.
ನಾನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಎಲ್ಲ ಗ್ರಾಮಗಳಿಗೂ ಪಕ್ಷಾತೀತವಾಗಿ ಸರ್ಕಾರದ ಸೌಲಭ್ಯ ತಲುಪಿಸಿದ್ದೇನೆ. ವಿಶೇಷವಾಗಿ 23 ಸಾವಿರ ಮನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಮತದಾರರ ಋಣ ನನ್ನ ಮೇಲಿದೆ. ಅವರಿಗೆ ಇನ್ನಷ್ಟು ಅನುಕೂಲ ಒದಗಿಸುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಮತ ನೀಡುವುದರ ಮೂಲಕ ಆಶೀರ್ವಾದ ಮಾಡಲು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.
ಮುಖಂಡರಾದ ಪಿಚ್ಚಳ್ಳಿ ಶ್ರೀನಿವಾಸ್, ಕೆ.ಕೆ.ಮಂಜು, ಕೃಷ್ಣಾರೆಡ್ಡಿ, ಎನ್.ತಿಮ್ಮಯ್ಯ, ಚಂದ್ರಪ್ಪ, ಸಿ.ವಿ.ಅರ್ಜುನ್, ಈಶ್ವರಪ್ಪ, ವೆಂಕಟರವಣರೆಡ್ಡಿ, ಕೆ.ಎಸ್.ಶ್ರೀನಿವಾಸ್, ಆದಿರೆಡ್ಡಿ, ರಾಮಲಿಂಗಾರೆಡ್ಡಿ, ಎಂ.ಎನ್.ವೇಣು, ಜಗದೀಶ್, ರಘು ಇದ್ದರು.

ಧರ್ಮಗುರು ಸ್ಟ್ಯಾನಿ ಬಿ ಲೋಬೋ ಅವರ ಯಾಜಕೀ ದೀಕ್ಷೆಯ ಸುವರ್ಣಮಹೋತ್ಸವ ಭಕ್ತಿಪೂರ್ವಕವಾಗಿ ಆಚರಣೆಗೊಂಡಿತು.

Photos : Steevan Colaco

ಉಡುಪಿ: ಅತಿ ವಂದನೀಯ ಧರ್ಮಗುರು ಸ್ಟ್ಯಾನಿ ಬಿ ಲೋಬೋ ಅವರು ಯಾಜಕೀ ದೀಕ್ಷೆಯ ೫೦ ಸಂವತ್ಸರಗಳನ್ನು ಪುರೈಸಿದ ಸ್ಮರ್ಣಾಥ ಮೇ 4, 2023 ರಂದು ಉದ್ಯಾವರ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನಲ್ಲಿ ಭಕ್ತಿಪೂರ್ವಕ ಬಲಿದಾನ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ  ತಮ್ಮ ದೀಕ್ಷೆಯ ಸುವರ್ಣಮಹೋತ್ಸವವನ್ನು ಚರ್ಚಿನ ಭಕ್ತಾಧಿಗಳೊಂದಿಗೆ ಹಾಗೂ ಹಲವಾರು ಬಿಷಪ್ ಮತ್ತು ಧರ್ಮಗುರುಗಳೊಂದಿಗೆ ಆಚರಿಸಿಕೊಂಡರು.

    ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ  ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ.ಹೆನ್ರಿ ಡಿಸೋಜ, ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ಯದ ಕುಲಪತಿ ಅತಿ ವಂ| ಫಾ.  ರೋಶನ್ ಡಿ’ಸೋಜಾ ಹಾಗೂ ಅವಿಭಜಿತ ಮಂಗಳೂರು ಧರ್ಮಪ್ರಾಂತ್ಯದ 80ಕ್ಕೂ ಹೆಚ್ಚು ಧರ್ಮಗುರುಗಳು ಈ ದಿವ್ಯ ಬಲಿದಾನದಲ್ಲಿ ಭಾಗಿಯಾದರು.

   ಧರ್ಮಗುರು ವಂ| ಸ್ಟ್ಯಾನಿ ಲೂಯಿಸ್ ಅವರು ಬಲಿದಾನದ ಸಂದೇಶದಲ್ಲಿ ಯಾಜಕರ ಮಹತ್ವ ಮತ್ತು ಅವರ ಯಾಜಕರ ಜೀವನದಲ್ಲಿ, ಯಾಜಕರ ಪಾತ್ರದ ಮಹತ್ವನನ್ನು ತಿಳಿಸಿದರು. ಯೇಸು ಕ್ರಿಸ್ತರ ಸೇವೆಯಲ್ಲಿ ಯಜಕನು ಒರ್ವ ಉತ್ತಮ ಪಾಲುದಾರನಾಗಿದ್ದಾನೆ. ಯೇಸುಕ್ರಿಸ್ತರ ಕಾರ್ಯಾಚರಣೆಯ ಸಮಯದಲ್ಲಿ ನಂಬಿಗಸ್ತ ಜನರ ಆಲೋಚನೆಯು ವಿಭಿನ್ನವಾಗಿರಬಹುದು. ಪುರೋಹಿತರು ಯಾವಾಗಲೂ ಜನರ ಆಧ್ಯಾತ್ಮಿಕ ಕಲ್ಯಾಣವನ್ನು ಹುಡುಕುತ್ತಾರೆ. ದೇವರು ಪವಿತ್ರ ಆತ ಯಾವಾಗಲೂ ನಮ್ಮೊಂದಿಗಿದ್ದಾನೆ. ದೇವರು ತನ್ನ ಸೇವೆಗಾಗಿ ಅರ್ಚಕರನ್ನು ತನ್ನ ಸಮಾನವಾಗಿ ಅಹ್ವಾನಿಸಿದನು. ಪುರೋಹಿತನು ತನಗಾಗಿ ಅಲ್ಲ, ಅವನು ತನಗೆ ವಿಮೋಚನೆಯನ್ನು ನೀಡುವುದಿಲ್ಲ; ಅವನು ಸಂಸ್ಕಾರಗಳನ್ನು ತಾನೇ ನಿರ್ವಹಿಸುವುದಿಲ್ಲ.ಇತರರಿಗಾಗಿ ನಿರ್ವಹಿಸುತ್ತಾನೆ. ಎಂದು ಹೇಳಿದರು.

    ಗೌರವ ಮಹಾಮಸ್ತಕಾಭಿಷೇಕದ ಬಳಿಕ ಉದ್ಯಾವರ ಚರ್ಚಿನ ಪಾಲನ ಮಂಡಳಿ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ನೆಡೆಸಲಾಯಿತು.

   ಯಾಜಕೀ ದೀಕ್ಷೆಯ ಸುವರ್ಣಮಹೊತ್ಸವ ಆಚರಿಸಿಕೊಳ್ಳುತ್ತಿರುವ ಪ್ರಧಾನರಾದ ಅ| ವಂ| ಧರ್ಮಗುರು ಸ್ಟ್ಯಾನಿ ಬಿ ಲೋಬೊ ಅವರನ್ನು  ಬ್ಯಾಂಡು, ಸಾಂಪ್ರದಾಯಿಕ ಬಣ್ಣದ ಕೊಡೆಗಳೊಂದಿಗೆ, ಪಾಲನ ಮಂಡಳಿಯ ಹುದ್ದೆದಾರರು, ಬಿಷಪ್‌ಗಳು ಮತ್ತು ಧರ್ಮಗುರುಗಳೊಂದಿಗೆ ಭವ್ಯ್ ಮೆರವಣಿಗೆಯಲ್ಲಿ ಕರೆತರಲಾಯಿತು.

     ವೃಂದದ ಸದಸ್ಯರೊಬ್ಬರು ಹಾಡಿದ ಸುಂದರ ಗೀತೆ ಮತ್ತು ನಂತರ ಶಾಲಾ ಮಕ್ಕಳಿಂದ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಯಲ್ಲಿ ಅತಿ ವಂದನೀಯ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ  ಧರ್ಮಪ್ರಾಂತ್ಯದ ಅತಿ ವಂದನೀಯ ಬಿಷಪ್  ಡಾ.ಹೆನ್ರಿ ಡಿಸೋಜ, ಮಂಗಳೂರು ಧರ್ಮಪ್ರಾಂತ್ಯದ ನಿವ್ರತ್ತ ಬಿಷಪ್ ಅ| ವಂ| ಡಾ.ಅಲೋಶಿಯಸ್ ಪೌಲ್ ಡಿಸೋಜ, ಅ|ವಂ|ಬಿಷಪ್ ಡಾ| ಸಿಪ್ರಿಯನ್ ಮೊನಿಸ್, ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರು ಮತ್ತು ದೀಕ್ಷಾ ಸುವರ್ಣಮಹೋತ್ಸವ ಆಚರಣೆ ಸಮಿತಿಯ ಸಂಚಾಲಕ, ಧರ್ಮಗುರು  ಲಿಯೋ ಪ್ರವೀಣ್ ಡಿಸೋಜ, ಸ್ಟ್ಯಾನಿ ಲೋಬೊರವವ ಸಹೋದರ ಡಾ. ಕಿರಣ್ ಕಮಲ್ ಪ್ರಸಾದ್ ಪಾಲನಮಂಡಳಿ ಉಪಾಧ್ಯಕ್ಷ ಲಾರೆನ್ಸ್ ಡೆಸಾ ಕಾರ್ಯದರ್ಶಿ ಜಾನ್ ಎಂ ಡಿಸೋಜ ಮತ್ತು ಆಯೋಗಗಳ ಸಂಯೋಜಕ ಜೆರಾಲ್ಡ್ ಪೆರೀರಾ ವೇದಿಕೆಯಲ್ಲಿದ್ದರು.

    ಚರ್ಚಿನ ಗಾಯನ ವ್ರಂದ  ಸ್ಟ್ಯಾನಿ ಲೋಬೋ ಅವರಿಗೆ ಶುಭಾಶಯ ಗೀತೆಯನ್ನು ಹಾಡಿತು. ಫಾ. ಲಿಯೋ ಪ್ರವೀಣ್ ಡಿ’ಸೋಜಾ ಪ್ರಸ್ತಾವಿಕ ಭಾಷಣ ಮಾಡಿ, ಸ್ವಾಗತಿಸಿದರು. ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೋಜಾ ತಮ್ಮ ಭಾಷಣದಲ್ಲಿ ಫಾ. ಸ್ಟ್ಯಾನಿ ಲೋಬೋ ಅವರು 4 ದಶಕಗಳಿಂದ ಮಂಗಳೂರು ಧರ್ಮಪ್ರಾಂತ್ಯಕ್ಕೆ ಸಲ್ಲಿಸಿದ ಅಮೂಲ್ಯ ಸೇವೆ ಮತ್ತು ಚರ್ಚಿಗೆ ಮತ್ತು ಧರ್ಮಪ್ರಾಂತ್ಯದ ಭಕ್ತರಿಗೆ ನೀಡಿದ ಕೊಡುಗೆಗಾಗಿ. ಮಂಗಳೂರು ಧರ್ಮಪ್ರಾಂತ್ಯದಲ್ಲಿ ಹೊಸ ಚರ್ಚ್ ಕಟ್ಟಡಗಳು ಮತ್ತು ಇತರ ಅಗತ್ಯವಿರುವ ಸಂಸ್ಥೆಗಳ ಸ್ಥಾಪನೆಗೆ ಅವರು ಕಾರಣರಾಗಿದ್ದರು” ಎಂದು ತಿಳಿಸಿದರು.ನಂತರ ಅವರು ಫಾ. ಸ್ಟ್ಯಾನಿ ಲೋಬೋ ಅವರು ಪುಷ್ಪಗುಚ್ಛ ಮತ್ತು ಶಾಲು ಹೊದಿಸಿದರು.ಬಿಷಪ್ ಹೆನ್ರಿ ಡಿಸೋಜ ಅವರು ತಮ್ಮ ಭಾಷಣದಲ್ಲಿ ಫಾ. ಸ್ಟ್ಯಾನಿ ತನ್ನ ಪಾದ್ರಿ ವೃತ್ತಿಜೀವನದುದ್ದಕ್ಕೂ ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಕ್ರಿಸ್ತನ ಗುರಿಗಾಗಿ ಸೇವೆ ಸಲ್ಲಿಸಿದರು” ಎಂದು ತಿಳಿಸಿದರು.

      ನಂತರ, ಫಾದರ್ ಸ್ಟ್ಯಾನಿ ಅವರನ್ನು ಪುಷ್ಪಗುಚ್ಛ  ಅರ್ಪಿಸಿ, ಶಾಲು ಹೊದಿಸಿ, ಸ್ಮರಾಣಿಕೆ ನೀಡಿ ಗೌರವಿಸಲಾಯಿತು. ಬಿಷಪ್ ಸಿಪ್ರಿಯನ್ ಮೋನಿಸ್ ಅವರು ವ್ಯಾಟಿಕನ್‌ನಿಂದ ಫಾದರ್ ಪೋಪ್ ಫ್ರಾನ್ಸಿಸ್  ಕಳುಹಿಸಿದ ಗೌರವ ಪತ್ರದಸಂದೇಶವನ್ನು ಓದಿದರು ಮತ್ತು ಅದನ್ನು ಫಾ. ಸ್ಟ್ಯಾನಿ ಬಿ ಲೋಬೊ ಅವರಿಗೆ ಹಸ್ತಾತಂರಿಸಿದರು. ಬಿಷಪ್ ಸಿಪ್ರಿಯನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ದೀಕ್ಷೆಯ ಸುವರ್ಣ ಮಹೋತ್ಸವದ ಕೇಕ್ ಅನ್ನು ಫಾದರ್ ಸ್ಟ್ಯಾನಿ ಅವರು ಸಹೋದರಿ ರೀಟಾ ಲೂಯಿಸ್ ಮತ್ತು ಸಹೋದರ ಕಿರಣ್ ಕಮಲ್ ಪ್ರಸಾದ್ ಅವರೊಂದಿಗೆ ಕೇಕ್ ಕತ್ತರಿಸಿ ಸಂತೋಷವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಫಾದರ್ ಸ್ಟ್ಯಾನಿ ಲೋಬೋ ಅವರನ್ನು ಬೃಹತ್ ಹಾರ, ಶಾಲು, ಸ್ಮರಣಿಕೆ, ತಾಜಾ ಹಣ್ಣುಗಳ ಬುಟ್ಟಿ, ತಲೆಯ ಪೇಟ ಹಾಕಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಪಾಲನ ಮಂಡಳಿ ಕಾರ್ಯದರ್ಶಿ ಜಾನ್ ಎಂ ಡಿಸೋಜಾ ಅವರು ಅಭಿನಂದನಾ ಪತ್ರವನ್ನು ಸಂಕ್ಷಿಪ್ತವಾಗಿ ವಾಚಿಸಿದರು.

    ಫಾ. ಸ್ಟ್ಯಾನಿ ಲೋಬೋ ಅವರು “ತಮ್ಮ 50 ವರ್ಷಗಳ ಯಾಜಕೀ ಸೆವೆಯಲ್ಲಿ ಕರ್ತನಾದ ಯೇಸು ಕ್ರಿಸ್ತನಿಗೆ ಸಲ್ಲಿಸಿದ ಅಮೂಲ್ಯ ಸೇವೆಗಳಿಗಾಗಿ ಸರ್ವಶಕ್ತ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಹಾಗೇ ನಾಲ್ವರು ಬಿಷಪ್‌ಗಳು, ಅವರ 26 ಸಹಾಯಕ ಅರ್ಚಕರು, ಇತರ ಧರ್ಮಗುರುಗಳಿಗೆ, ಚರ್ಚ್ ಪಾಲನ ಮಂಡಳಿಯವರಿಗೆ, ಮತ್ತು ಸಂಬಂಧಪಟ್ಟ ಜನರಿಗೆ ಕೃತಜ್ಞತೆ ಸಲ್ಲಿಸಿದರು. ತಾಕೋಡು, ಪೆರ್ಮನ್ನೂರು, ಅಂಜೆಲೂರು, ಪುತ್ತೂರು, ಕುಂದಾಪುರ, ಕಲ್ಯಾಣಪುರ ಚರ್ಚಗಳಲ್ಲಿ ತಾನು ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ನೆನಪಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಿಶೇಷವಾಗಿ ಸ್ಟ್ಯಾನಿ ಲೋಬೊರವರ ಸುವರ್ಣಮಹೋತ್ಸವದ ಅಂಗವಾಗಿ ಸ್ಟೀವನ್ ಕುಲಾಸೊ ಇವರ ಸಂಪಾದಕತ್ವದಲ್ಲಿ ಪ್ರಕಟಿಸಿದ ಉದ್ಯಾವರ ಚರ್ಚಿನ ಪತ್ರಿಕೆಯಾದ “ಕುರೊವ್” ಪತ್ರಿಕೆಯನ್ನು ಬಿಷಪ್ ಸಿಪ್ರಿಯನ್ ಅವರು ಬಿಡುಗಡೆಗೊಳಿಸಿದರು.

    ಅಧ್ಯಕ್ಷೀಯ ಭಾಷಣದಲ್ಲಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಅವರು ತಮ್ಮ 50 ವರ್ಷಗಳಲ್ಲಿ ಫಾ. ಸ್ಟ್ಯಾನಿ ಲೋಬೊ ಅವರು ತಮ್ಮ ಬಲವಾದ ನಂಬಿಕೆ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯಿಂದ ಯಾಜಕೀ ದೀಕ್ಷೆಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. 40 ವರ್ಷಗಳ ಕಾಲ ಮಂಗಳೂರು ಧರ್ಮಪ್ರಾಂತ್ಯಕ್ಕೆ ಮತ್ತು ಮಿಲಾಗ್ರಿಸ್‌ನ ಉಡುಪಿ ಧರ್ಮಪ್ರಾಂತ್ಯಕ್ಕೆ ರೆಕ್ಟರ್ ಆಗಿ, ಕುಲಪತಿಯಾಗಿ ಮತ್ತು ಇನ್ನೂ ಅನೇಕ ಸೇವೆಗಳನ್ನು ಅವರು ನೀಡಿದ್ದು ಬಿಷಪ್ ಅದನ್ನು ಬಹಳವಾಗಿ ಶ್ಲಾಘಿಸಿದರು. ನಂತರ ಧರ್ಮಪ್ರಾಂತ್ಯದ ಪರವಾಗಿ ಬಿಷಪ್ ಅವರು ವಿಕಾರ್ ಜನರಲ್ ಎಂಜಿಆರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಫಾದರ್ ಸ್ಟ್ಯಾನಿ ಲೋಬೋ ಅವರನ್ನು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.     ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಮೆಲ್ವಿನ್ ಪೆರಿಸ್ ಅವರು ಫಾದರ್ ಸ್ಟ್ಯಾನಿ ಅವರ ಪೌರೋಹಿತ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಗೌರವಾರ್ಥವಾಗಿ ಸುಂದರವಾಗಿ ಹಾಡಿದರು. ಹಾಡು ಮತ್ತು ಹಾಡಿನ ಸಾಹಿತ್ಯವನ್ನು ಪ್ರತಿಯನ್ನು ಅವರಿಗೆ ಹಸ್ತಾಂತರಿಸಿದರು. ಸ್ಟ್ಯಾನಿ ಲೋಬೊ. ಈ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ಸೆಮಿನರಿ ಬ್ಯಾಚ್ ಮೇಟ್‌ಗಳಾದ . ಕುಂದಾಪುರ ವಲಯ ಪ್ರಧಾನ ಮತ್ತು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಮತ್ತು ಕೋಟ ಚರ್ಚಿನ ಧರ್ಮಗುರು ವಂ| ಆಲ್ಫೊನ್ಸ್ ಡಿ’ಲಿಮಾ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಲಿಯೋ ಪ್ರವೀಣ್ ಡಿಸೋಜಾ ಶಾಲು ಹೊದಿಸಿ ಗೌರವಿಸಿದರು.ಆಯೋಗಗಳ ಸಂಯೋಜಕ ಜೆರಾಲ್ಡ್ ಪಿರೇರಾ ವಂದಿಸಿದರು. ಪ್ರವೀಣ್ ಪಿಂಟೋ ಮತ್ತು ತಂಡದವರು ಕಾರ್ಯಕ್ರಮ ನಿರೂಪಿಸಿದರು. ಭೋಜನ ಮೆಲೆ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಪ್ರಾರ್ಥನೆಯನ್ನು ನೆರವೇರಿಸಿದರು. ಹೀಗೆ ಯಾಜಕೀ ದೀಕ್ಷೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ, ಭೋಜನದೊಂದಿಗೆ ಮುಕ್ತಾಯವಾಯಿತು.