ಆಶಾವಾದಿ ಪ್ರಕಾಶನಾಚೆಂ 36ವೆಂ ಡಿಜಿಟಲ್ ಇ-ಪುಸ್ತಕ್ / आशावादि प्रकाशनाचें ३६वें डिजिटल इ-पुस्तक

आशावादि प्रकाशनाचें ३६वें डिजिटल इ-पुस्तक, नाम्नेची कवयत्री बाय वैष्णवी रायकरच्या कवितेचें पुस्तक ’आत्मनाद’, माय १३ तारिकेच्या शनिवारा सांजेर ४ वोरांचेर गोंय्च्या देंपे कोलेजींत बाब शैलॆंद्र मेह्ताच्या अध्यक्ष्‌पणाखाल चलुंक आस्च्या कोंकणि कविगॊश्टि संधर्भार लोकार्पण जातलें. हेच संधर्भार आशावादि प्रकाशनाचिं दॊन हेर पुस्तकां (आट्वो सुर, पानांच फुलां जाताना) सय्त लोकार्पण जातलीं.

ಆಶಾವಾದಿ ಪ್ರಕಾಶನಾಚೆಂ 36ವೆಂ ಡಿಜಿಟಲ್ ಇ-ಪುಸ್ತಕ್, ನಾಮ್ನೆಚಿ ಕವಯತ್ರಿ ಬಾಯ್ ವೈಷ್ಣವಿ ರಾಯಕರ್‌ಚ್ಯಾ ಕವಿತೆಚೆಂ ಪುಸ್ತಕ್ ’ಆತ್ಮನಾದ್’, ಮಾಯ್ 13 ತಾರಿಕೆಚ್ಯಾ ಶನಿವಾರಾ ಸಾಂಜೆರ್ 4 ವೊರಾಂಚೆರ್ ಗೊಂಯ್ಚ್ಯಾ ದೆಂಪೆ ಕೊಲೆಜಿಂತ್ ಬಾಬ್ ಶೈಲೇಂದ್ರ ಮೆಹ್ತಾಚ್ಯಾ ಅಧ್ಯಕ್ಷ್‌ಪಣಾಖಾಲ್ ಚಲುಂಕ್ ಆಸ್ಚ್ಯಾ ಕೊಂಕಣಿ ಕವಿಗೋಶ್ಟಿ ಸಂಧರ್ಭಾರ್ ಲೊಕಾರ್ಪಣ್ ಜಾತಲೆಂ. ಹೆಚ್ ಸಂಧರ್ಭಾರ್ ಆಶಾವಾದಿ ಪ್ರಕಾಶನಾಚಿಂ ದೋನ್ ಹೆರ್ ಪುಸ್ತಕಾಂ (ಆಟ್ವೊ ಸುರ್, ಪಾನಾಂಚ್ ಫುಲಾಂ ಜಾತಾನಾ) ಸಯ್ತ್ ಲೊಕಾರ್ಪಣ್ ಜಾತಲಿಂ.

`ಚಿನ್ನದ ನಾಡು ಕೋಲಾರ ಜನತೆಗೆ ನಮಸ್ಕಾರಗಳು’ ಎಂದ ಪ್ರಧಾನಿ ಮೋದಿಮುಳಬಾಗಿಲು ದೋಸೆಯ ಸ್ವಾದದ ಪ್ರಸ್ತಾಪ-ಮುಗಿಲು ಮುಟ್ಟಿದ ಜೈಕಾರ

ಕೋಲಾರ:- `ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿಯವರ ಭಾಷಣದಲ್ಲಿ ಮುಳಬಾಗಿಲು ದೋಸೆಯ ಸ್ವಾದದ ಬಗ್ಗೆಯೂ ಪ್ರಸ್ತಾಪಿಸಿ ಗಮನ ಸೆಳೆದಿದ್ದು, ಮೋದಿ ಮೋದಿ ಜೈಕಾರ ಇಡೀ ಕಾರ್ಯಕ್ರಮದಲ್ಲಿ ಮುಗಿಲು ಮುಟ್ಟಿತು.
ಭಾನುವಾರ ತಾಲ್ಲೂಕಿನ ಕೆಂದಟ್ಟಿ ಸಮೀಪ ನಡೆದ ಬಿಜೆಪಿಯ ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಚೆನ್ನೈ-ಬೆಂಗಳೂರು ಎಕ್ಸ್‍ಪ್ರೆಸ್ ಹೈವೆ ಕಾಮಗಾರಿಯ ಪ್ರಗತಿಯ ಕುರಿತು ಮಾತನಾಡುವಾಗ ಮುಳಬಾಗಿಲು ದೋಸೆಯ ಸ್ವಾದ ಇಂದು ಉತ್ತಮ ಸಂಪರ್ಕ ವ್ಯವಸ್ಥೆಯಿಂದ ದೂರದೂರಕ್ಕೆ ತಲುಪುವಂತಾಗಿದೆ ಎಂದರು.
ಡಬಲ್ ಇಂಜಿನ್ ಸರಕಾರ ಆಧುನಿಕ ಸಂಪರ್ಕಕ್ಕೆ ಕೆಲಸಮಾಡುತ್ತಿರುವಂತೆ ಹೊಸ ಕ್ಷೇತ್ರಗಳಲ್ಲಿಯೂ ಏಕ್ಸ್‍ಪ್ರೆಸ್ ವೇ ವೇಗವಾಗಿ ನಿರ್ಮಾಣ ವಾಗುತ್ತಿದೆ. ಇದರಿಂದ ರೈತರು ಉದ್ಯಮಿಗಳಿಗೆ ಅನುಕೂಲವಾಗುತ್ತದೆ, ಬಹು ರಾಷ್ಟ್ರೀಯ ಕಂಪನಿಗಳು ಕೋಲಾರದಲ್ಲಿ ಕೈಗಾರಿಕೆ ಅರಂಭಿಸಿವೆ, ಉತ್ತಮ ಸಂಪರ್ಕದಿಂದ ಅಭಿವೃದ್ಧಿ ಎಷ್ಟು ವೇಗವಾಗಿ ಸಾಧ್ಯ ಎಂದರೆ ಮುಳಬಾಗಿಲು ದೋಸೆಯ ಸ್ವಾದವು ದೂರ ದೂರಕ್ಕೆ ತಲುಪುವಂತಾಗಿದೆ ಎಂದರು.


ಬುದ್ದನ ಪ್ರತಿಮೆ ನೀಡಿ ಸನ್ಮಾನ


ಕೋಲಾರಕ್ಕೆ ಬಂದ ಪ್ರಧಾನಿಗಳನ್ನು ಹೆಲಿಪ್ಯಾಡ್‍ನಲ್ಲಿ ನಿಂತಿದ್ದ ಮೂರು ಜಿಲ್ಲೆಗಳ ಬಿಜೆಪಿ ಪ್ರಮುಖರು ಕೈಮುಗಿದು ಪ್ರಧಾನಿಗೆ ಸ್ವಾಗತಕೋರಿದರು. ನಂತರ ಕಪ್ಪು ಕಾರನ್ನೇರಿ ವೇದಿಕೆ ಸಭಾಂಗಣಕ್ಕೆ ತೆರಳಿದರು.
ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಕೋಲಾರಮ್ಮ ದೇವಾಲಯ, ಅಂತರಗಂಗೆ,ಆವಣಿ, ಕ್ಲಾಕ್‍ಟವರ್ ಧ್ವಜಾರೋಹಣ ಮತ್ತಿತರ ಮಾಹಿತಿ ಒಳಗೊಂಡ ಮೂರುವರೆ ಅಡಿ ಬುದ್ದನ ಮೂರ್ತಿಯನ್ನು ನೀಡಿ ಸಂಸದ ಎಸ್.ಮುನಿಸ್ವಾಮಿ, ಸಚಿವರಾದ ಸುಧಾಕರ್,ಎಂಟಿಬಿ ನಾಗರಾಜ್, ವಿಧಾನಪರಿಷತ್ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸನ್ಮಾನಿಸಿದರು.
ಬೆಳಿಗ್ಗೆ 11.30 ಸುಮಾರಿಗೆ ಕೆಂದಟ್ಟಿ ಬಳಿ ನಿರ್ಮಿಸಿರುವ ವಿಶೇಷ ಹೆಲಿಪ್ಯಾಡ್‍ಗಳಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಮೂಲಕ ಕೋಲಾರಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಾನಂದಗೌಡ, ಸಂಸದ ಎಸ್.ಮುನಿಸ್ವಾಮಿ, ಡಾ.ವೈ.ಎ.ನಾರಾಯಣಸ್ವಾಮಿ ಮತ್ತಿತರರು ಸ್ವಾಗತ ಕೋರಿದರು.
ಕೋಲಾರ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವರ್ತೂರು ಪ್ರಕಾಶ್ ವಿಶೇಷವಾಗಿ ಕುರುಬರ ಸಂಪ್ರದಾಯಿಕ ಕಪ್ಪು ಕಂಬಳಿ ನೀಡಿ ಸ್ವಾಗತಿಸಿ ಹಸ್ತ ಲಾಘವ ಮಾಡಿದರು. ಬಿಳಿ ಬಣ್ಣದ ಕುರ್ತಾ, ಕಪ್ಪು ಬಿಳುಪು ಚೌಕಲಿ ಮೇಲಂಗಿ ಧರಿಸಿದ್ದ ಮೋದಿ ಎಲ್ಲರ ಗಮನ ಸೆಳೆದರು.


ಬಿಗಿ ಬಂದೋಬಸ್ತ್ತಪಾಸಣೆ-ಪ್ರವೇಶ


ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ13 ವಿಧಾನಸಭಾ ಕ್ಷೇತ್ರಗಳ ಪ್ರಚಾರಕ್ಕಾಗಿ ಕೆಂದಟ್ಟಿಯ 150 ಎಕರೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರ ಪ್ರವೇಶಕ್ಕಾಗಿ 12 ಗೇಟ್‍ಗಳನ್ನು ನಿರ್ಮಿಸಲಾಗಿತ್ತು.
ಪ್ರತಿ ಗೇಟ್‍ನಲ್ಲಿ ಭದ್ರತಾ ಸಿಬ್ಬಂದಿ ಸಾರ್ವಜನಿಕರನ್ನು ತಪಾಸಣೆಗೊಳಪಡಿಸಿ ಪ್ರವೇಶ ನೀಡಿದರು. ಕಪ್ಪು ಬಟ್ಟೆ ಧರಿಸಿ ಬಂದವರಿಗೆ ಪ್ರವೇಶ ನಿರಾಕರಿಸಲಾಗಿತ್ತು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ತಂಡ ಪ್ರಥಮ ಚಿಕಿತ್ಸೆ ನಡೆಸಲು ಸಜ್ಜಾಗಿದ್ದು, ಸುಡು ಬಿಸಿಲಿನ ತಾಪಕ್ಕೆ ಬಳಲಿದ ಹಲವಾರು ಮಂದಿಗೆ ಚಿಕಿತ್ಸೆ ನೀಡಿದರು.
ಜನ್ನಘಟ್ಟ ಕೃಷ್ಣಮೂರ್ತಿ ತಂಡದಿಂದ ಗೀತ ಗಾಯನ ಕಾರ್ಯಕ್ರಮನಡೆಯಿತು. ಪ್ರಧಾನಿ ವೇದಿಕೆ ಸಭಾಂಗಣ ಪ್ರವೇಶಿಸುತ್ತಿದ್ದಂತೆಯೇ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಘೋಷಣೆಗಳನ್ನು ಕೂಗಿ ಅವರನ್ನು ಸ್ವಾಗತಿಸುವಂತೆ ನೆರೆದಿದ್ದ ಜನರನ್ನು ಪ್ರೋತ್ಸಾಹಿಸಿದರು

ವಿಕಾಸಕ್ಕೆ ಕಂಟಕವಾದ ಕಾಂಗ್ರೆಸ್,ಜೆಡಿಎಸ್‍ನಿಂದ ಕರ್ನಾಟಕದ ಉದ್ಧಾರ ಅಸಾಧ್ಯಜನರ ನಂಬಿಕೆ ಕಳೆದುಕೊಂಡ ಕಾಂಗ್ರೆಸ್ ಶೇ.85 ಕಮಿಷನ್ ಸರ್ಕಾರ-ನರೇಂದ್ರ ಮೋದಿ

ಕೋಲಾರ:- ಭಾರತದ ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಶೇ.85 ಕಮೀಷನ್ ಸರಕಾರವಾಗಿತ್ತು ಎಂಬುದನ್ನು ಆಪಕ್ಷದಿಂದ ಪ್ರಧಾನಿಯಾಗಿದ್ದ ನೇತಾರರೇ ಒಪ್ಪಿಕೊಂಡಿದ್ದಾರೆ. ಕರ್ನಾಟಕದ ವಿಕಾಸಕ್ಕೆ ಕಂಟಕವಾದ ಕಾಂಗ್ರೆಸ್, ಜೆಡಿಎಸ್‍ನಿಂದ ಕರ್ನಾಟಕದ ಉದ್ಧಾರ ಅಸಾಧ್ಯ ಆದ್ದರಿಂದಲೇ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಆಗಿರಲಿ ಎಂದು ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಭಾನುವಾರ ಕೋಲಾರ ತಾಲ್ಲೂಕಿನ ಕೆಂದಟ್ಟಿ ಸಮೀಪ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರಗಳ ಪ್ರಚಾರಕ್ಕಾಗಿ 150 ಎಕರೆ ಪ್ರದೇಶದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ `ಭಾರತ ಮಾತಾಕಿ ಜೈ, ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು’ ಎಂದು ಭಾಷಣ ಆರಂಭಿಸಿ ಅವರು ಮಾತನಾಡುತ್ತಿದ್ದರು.
ದೆಹಲಿಯಲ್ಲಿನ ಕೇಂದ್ರದ ಬಿಜೆಪಿ ಸರಕಾರ ಎಷ್ಟು ಹಣ ನೀಡುತ್ತದೋ ಅದು ಶೇ.100 ರಷ್ಟು ಜನರಿಗೆ ತಲುಪುತ್ತಿದೆ, ಕಳೆದ 9 ವರ್ಷಗಳಿಂದ ವಿವಿಧ ಡಿಜಿಟಲ್ ಇಂಡಿಯಾ ಯೋಜನೆಗಳ ಮೂಲಕ 29 ಲಕ್ಷ ಕೋಟಿ ರೂಪಾಯಿಗಳನ್ನು ಜನರ ಖಾತೆಗೆ ನೀಡಲಾಗಿದೆ. ಆದ್ದರಿಂದ ಯೋಚಿಸಿ 9 ವರ್ಷಗಳಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಶೇ.15 ಮಾತ್ರ ಜನರಿಗೆ ತಲುಪುತ್ತಿತ್ತು. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಎಷ್ಟೊಂದು ಹಣ ಕಾಂಗ್ರೆಸ್ ಮುಖಂಡರು ಅವತಿಸಿಟ್ಟುಕೊಂಡಿದ್ದಾರೆ ಎಂಬುದರ ಕುರಿತು ಆಲೋಚಿಸಿ ಎಂದರು.


ಭ್ರಷ್ಟತೆಯಲ್ಲಿ ಮುಳುಗಿ ಬೇಲಿನಲ್ಲಿ ಕಾಂಗ್ರೆಸ್ಸಿಗರು


ಕಾಂಗ್ರೆಸ್ ಭ್ರಷ್ಟಾಚಾರವನ್ನು ಎಂದಿಗೂ ವಿರೋಧಿಸುವುದಿಲ್ಲ, ಏಕೆಂದರೆ ಕಾಂಗ್ರೆಸ್‍ನ ಪ್ರತಿ ಯೋಜನೆಯಲ್ಲಿಯೂ ಭ್ರಷ್ಟಾಚಾರ ಅಡಗಿದೆ, ಸಾವಿರಾರು ಕೋಟಿ ಹಗರಣದಲ್ಲಿ ಕಾಂಗ್ರೆಸ್ ವರಿಷ್ಠರು ಜೈಲಿಗೆ ಹೋಗದೆ ಜಾಮೀನಿನ ಮೇಲಿದ್ದಾರೆ, ಆದರೆ, ಅವರು ಉಪದೇಶ ನೀಡುವುದು ಬಿಟ್ಟಿಲ್ಲ. ಸಾವಿರಾರು ಕೋಟಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಕಾಂಗ್ರೆಸ್ ನಾಯಕರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ, 2014 ಕ್ಕಿಂತ ಮುಂಚೆ 9 ವರ್ಷ ಕಾಂಗ್ರೆಸ್ ಸರಕಾರವಿತ್ತು. ಆ ಸಮಯದಲ್ಲಿ ಭ್ರಷ್ಟಾಚಾರಗಳಿಂದ 5 ಸಾವಿರ ಕೋಟಿ ರೂ ಮಾತ್ರ ವಸೂಲು ಮಾಡಿದ್ದರು. ಆದರೆ, ನಮ್ಮ 9 ವರ್ಷದಲ್ಲಿ ಭ್ರಷ್ಟಾಚಾರಗಳಿಂದ 1 ಲಕ್ಷ ಕೋಟಿ ವಸೂಲು ಮಾಡಿದ್ದೇವೆ ಎಂದರು.


ವಿಷ ಸರ್ಪವೆಂದ
ಖರ್ಗೆಗೆ ಟಾಂಗ್


ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವುದರಿಂದ ಕಾಂಗ್ರೆಸ್‍ಗೆ ಸಮಸ್ಯೆಯಾಗುತ್ತಿದೆ, ಆದ್ದರಿಂದ ನನ್ನ ಮೇಲೆ ಹೆಚ್ಚು ಆರೋಪಗಳನ್ನು ಮಾಡುತ್ತಿದ್ದಾರೆ, ಈಗ ಬೆದರಿಕೆ ಹಾಕುತ್ತಿದ್ದಾರೆ, ಮೋದಿ ಸಮಾಧಿಗೆ ಹಳ್ಳ ತೋಡುತ್ತೇವೆ ಎಂಬ ಬೆದರಿಕೆ ಹಾಕುತ್ತಿದ್ದಾರೆ.
ಕಾಂಗ್ರೆಸ್ಸಿಗರು ಈ ಚುನಾವಣೆಯಲ್ಲಿ ಹಾವಿನ ವಿಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ, ನನ್ನನ್ನು ಹಾವಿಗೆ ಹೋಲಿಸುತ್ತಿದ್ದಾರೆ. ಇದರಿಂದ ನನಗೆ ಬೇಸರವಿಲ್ಲ, ಭಗವಂತ ಈಶ್ವರ ರೂಪದ ಜನರ ಕೊರಳಿನ ಹಾವಾಗಲು ನಾನು ಇಷ್ಟಪಡುತ್ತೇನೆ. ಈ ರೀತಿಯ ಆರೋಪಗಳನ್ನು ಕರ್ನಾಟಕದ ಜನತೆ ಸಹಿಸುವುದಿಲ್ಲ, ಜನರು ಆಕ್ರೋಶವನ್ನು ಮೇ.10 ರಂದು ಚುನಾವಣಾ ದಿನ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿ ವ್ಯಕ್ತಪಡಿಸುತ್ತಾರೆ ಎಂದರು.
ಇಷ್ಟೊಂದು ಸಂಖ್ಯೆಯಲ್ಲಿ ಪೆಂಡಾಲ್‍ಗೆ ಹೊರಗೂ ಜನರಿದ್ದೀರಿ, ಕಾಂಗ್ರೆಸ್ ಜೆಡಿಎಸ್ ನಾಯಕರ ನಿದ್ದೆಹಾರಿ ಹೋಗುತ್ತಿದೆ. ಕಣ್ಣು ಮುಚ್ಚಿದರೂ ನಿದ್ದೆ ಬರುತ್ತಿಲ್ಲ, ಕರ್ನಾಟಕ ವಿಕಾಸದಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಕಂಟಕವಾಗಿವೆ ಎಂದ ಅವರು, ಕಾಂಗ್ರೆಸ್ ಜೆಡಿಎಸ್ ಜೊತೆಯಾಗಿ ಎಷ್ಟೇ ಆಟ ಆಡಿದರೂ ಕರ್ನಾಟಕದ ಜನತೆ ಕ್ಲೀನ್ ಬೋಲ್ಡ್ ಮಾಡುತ್ತಾರೆ, ಕರ್ನಾಟಕದ ಜನತೆ ನಿರ್ಧರಿಸಿದ್ದಾರೆ, ದೊಡ್ಡ ವಿಶ್ವಾಸದಿಂದ ನಿರ್ಧರಿಸಿದ್ದಾರೆ. ಅನುಭವದ ಆಧಾರದಲ್ಲಿ ತೀರ್ಮಾನಿಸಿದ್ದಾರೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ ಎಂದು ಘೋಷಿಸಿದರು.


ಅಸ್ಥಿರ ಸರ್ಕಾರ ಬೇಡ ಸ್ಥಿರ ಸರ್ಕಾರ ನೀಡಿ


ಕರ್ನಾಟಕದ ಈ ಚುನಾವಣೆ ಮುಂಬರುವ ಐದು ವರ್ಷಗಳಿಗಾಗಿ ಶಾಸಕ, ಮಂತ್ರಿ, ಮುಖ್ಯಮಂತ್ರಿ ಆಯ್ಕೆ ಮಾತ್ರವಲ್ಲ, ಈ ಚುನಾವಣೆ 25 ವರ್ಷದ ರಾಜ್ಯ ದೇಶದ ಅಭಿವೃದ್ಧಿ ಚಿತ್ರಣ ನಿರ್ಮಾಣ ಮಾಡುವ ಚುನಾವಣೆ, ಅಸ್ಥಿರ ಸರಕಾರ ಬಂದರೆ ಪ್ರಗತಿ ಸಾಧ್ಯವಾಗುವುದಿಲ್ಲ, ದೊಡ್ಡ ವಿಷನ್ ಮೂಲಕ ಕೆಲಸಮಾಡಲಾಗುವುದಿಲ್ಲ ಎಂದರು.
ಅಸ್ಥಿರ ಸರಕಾರದಿಂದ ಆಗುವ ನಷ್ಟವನ್ನು ನೀವು ಗಮನಿಸಿದ್ದೀರಿ, ಜನರ ಹಿತ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ವಿಳಂಬವಾಗುತ್ತದೆ, ಆದರೆ, ಭ್ರಷ್ಟಾಚಾರ ಚುರುಕುಗೊಳಿಸುತ್ತದೆ, ಕರ್ನಾಟಕವನ್ನು ಅಸ್ಥಿರ ಸರಕಾರದಿಂದ ಬಚಾವ್ ಮಾಡಬೇಕಾಗಿದೆ, ಕಾಂಗ್ರೆಸ್ ಜೆಡಿಎಸ್ ಭ್ರಷ್ಟಾಚಾರದ ಕಪಿಮುಷ್ಠಿಯಿಂದ ಬಚಾವ್ ಮಾಡಬೇಕಾಗಿದೆ ಎಂದರು.
ಕೇಂದ್ರದಲ್ಲಿ ಬಹು ವರ್ಷಗಳ ನಂತರ ಸ್ಥಿರ ಹಾಗೂ ಬಲಿಷ್ಠ ಸರಕಾರ ಆಡಳಿತ ಬಂದ ನಂತರ ಏನು ಬದಲಾವಣೆ ಎಂಬುದನ್ನು ಗಮನಿಸಿದ್ದೀರಿ, ಅನೇಕ ದಶಕಗಳ ನಂತರ ಸಂಪೂರ್ಣ ಬಹುಮತದ ಸರಕಾರ ನೋಡಿದ್ದೀರಿ, 2014 ಕ್ಕಿಂತ ಮುಂಚೆ ಏನೆಲ್ಲಾ ಭ್ರಷ್ಟಾಚಾರ ನಡೆಯಿತು. ಇದನ್ನು ನೋಡಿದ ವಿಶ್ವ ಭಾರತದ ಮೇಲೆ ಯಾವುದೇ ಆಶಯ ಇಟ್ಟುಕೊಂಡಿರಲಿಲ್ಲ ಎಂದರು.
ಆದರೆ ಬಿಜೆಪಿಗೆ ನೀವು ಕೊಟ್ಟ ಒಂದು ಮತದಿಂದ ಆಡಳಿತದಲ್ಲಿ ಭಾರೀ ಬದಲಾವಣೆ ಬಂದಿತು. ಇಡೀ ವಿಶ್ವ ಭಾರತವನ್ನು ಹೆಮ್ಮೆಯ ಪ್ರತಿಷ್ಠೆಯ ದೇಶವಾಗಿ ನೋಡುತ್ತಿದೆ, ಇದೇ ಬಲಿಷ್ಟ ಅರ್ಥ ವ್ಯವಸ್ಥೆಯ ಮೂಲಕವೇ ಕೋವಿಡ್ ಎದುರಿಸಲಾಯಿತು. ಭಾರತವನ್ನು ಹೊಳೆಯುವ ನಕ್ಷತ್ರವಾಗಿ ಇಡೀ ವಿಶ್ವ ನೋಡುತ್ತಿದೆ, ಕೋವಿಡ್ ವ್ಯಾಕ್ಸಿನ್ ತಯಾರಿಸಿ ಭಾರತದ ಸಾಮಥ್ರ್ಯ ತೋರಿಸಲಾಯಿತು. ವಿಶ್ವದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.


ಸದಾನಂದಗೌಡ ಸ್ವಾಗತ ನಮೋಗೆ ಧನ್ಯವಾದ


ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಸ್ವಾಗತಿಸಿ ಮಾತನಾಡಿ, ಭಾರತ ಪ್ರಗತಿಯ ವೇಗ ಅತ್ಯಂತ ಹೆಚ್ಚಾಗಿದೆ, ಭಾರತ ಇಂದು ವಿಶ್ವದಬಲಿಷ್ಠ ಸುರಕ್ಷಿತ ದೇಶ ಮಾತ್ರವಲ್ಲ, ರಾಷ್ಟ್ರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೇಲ್ಮಟ್ಟಕ್ಕೇರಿದೆ. ಕೇಂದ್ರ ಬಿಜೆಪಿ ಸರಕಾರ ಅಭೂತ ಪೂರ್ವ ಜನ ಕಲ್ಯಾಣ ಯೋಜನೆಗಳು ರಾಜ್ಯ ಮತ್ತು ಕೇಂದ್ರದಲ್ಲಿ ಅತ್ಯಂತ ಯಶಸ್ವಿ ಅನುಷ್ಠಾನ. ಮೂರು ವರ್ಷಗಳಿಂದಲೂ ಅಭಿವೃದ್ಧಿ ಸಾಕಾರಗೊಳ್ಳುತ್ತಿದೆ ಎಂದರು.
ಕೋವಿಡ್ ನಂತರ ಸಂಕಷ್ಟದ ಸಮಯದಲ್ಲಿ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪಗಳಿಗೆ ಯಶಸ್ವಿ ಪರಿಹಾರ ಸಿಕ್ಕಿದೆ. ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿ ವರ್ಗದ ಮೀಸಲಾತಿ ಹೆಚ್ಚಿಸಲಾಗಿದೆ. ಒಳ ಮೀಸಲಾತಿ ನೀಡುವ ದಿಟ್ಟ ಹೆಜ್ಜೆ ಇಡಲಾಗಿದೆ. ಸಮಾಜದ ಎಲ್ಲಾ ವರ್ಗದ ಮೀಸಲಾತಿ ಸೌಲಭ್ಯವನ್ನು ಸಮರ್ಪಕವಾಗಿ ಬಳಸಲು ಕ್ರಮ ಕೈಗೊಂಡಿದ್ದೇವೆ ಎಂದರು.
ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಅನಾವರಣಮಾಡಲಾಗಿದೆ. ಕಾಶೀ ಯಾತ್ರೆಗೆ ಸಹಾಯಧನ ನೀಡಲಾಗುತ್ತಿದೆ. ಅಂಜನಾದ್ರಿ ಅಭಿವೃದ್ಧಿಗೆ ಯೋಜನೆ ನೀಡಿದೆ, ಕೇಂದ್ರ 81600 ಕಿ.ಮೀ ರೈಲ್ವೆ ವಿದ್ಯುತೀಕರಣ, ರಾಷ್ಟ್ರೀಯ ಹೆದ್ದಾರಿನಿರ್ಮಾಣ ಕಾಮಗಾರಿ ಶೇ.24 ರಷ್ಟು ಹೆಚ್ಚಾಗಿದೆ. ಕಿಸಾನ್ ಸಮ್ಮಾನ ರಾಜ್ಯದ 50 ಲಕ್ಷಕ್ಕೂ ಹೆಚ್ಚು ರೈತರಿಗೆ ತಲುಪುತ್ತಿದೆ ಎಂದರು.
ಪ್ರಧಾನಿ ಆವಾಸ್ ಯೋಜನೆ 2.94ಕೋಟಿ ಮನೆಗಳ ನಿರ್ಮಾಣವಾಗಿದೆ. ಡಬಲ್ ಇಂಜಿನ್ ಸರಕಾರ ಯಶಸ್ವಿಯಾಗಿದೆ ಮತ್ತೇ ಬರಬೇಕು. ಭ್ರಷ್ಟಾಚಾರ ರಾಷ್ಟ್ರ ವಿರೋಧಿ ನೀತಿ, ಸಮಾಜ ಒಡೆಯುವ ಕುತಂತ್ರಗಳಿಗೆ ಮೋದಿ ನೇತೃತ್ವದಲ್ಲಿ ರಾಜ್ಯ ಸರಕಾರ ಕಟ್ಟಬೇಕಾಗಿದೆ. 9 ವರ್ಷದಲ್ಲಿ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಭಾರತ ಜಗತ್ತಿನ ಮಂಚೂಣಿ ರಾಷ್ಟ್ರವಾಗಿಸಲು ಒಂದು ದಿನವೂ ರಜೆ ಪಡೆಯದೆ ದುಡಿಯುತ್ತಿರುವ ಮೋದಿ ಕೋಲಾರಕ್ಕೆ ಆಗಮಿಸಿದ್ದು, ಅವರಿಗೆ ಧನ್ಯವಾದ ಸಲ್ಲಿಸುವೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಸಚಿವರಾದ ಸುಧಾಕರ್,ಎಂಟಿಬಿ ನಾಗರಾಜ್, ವಿಧಾನಪರಿಷತ್ ಸರ್ಕಾರದ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ವರ್ತೂರು ಪ್ರಕಾಶ್, ವಿಧಾನಸಭಾ ಅಭ್ಯರ್ಥಿಗಳಾದ ಎಂ.ನಾರಾಯಣಸ್ವಾಮಿ, ಅಶ್ವಿನಿ ಸಂಪಂಗಿ, ಸೀಗೆಹಳ್ಳಿ ಸುಂದರ್, ಸೀಕಲ್ ರಾಮಚಂದ್ರೇಗೌಡ, ಮಂಜುನಾಥಗೌಡ,ಶ್ರೀನಿವಾಸಗೌಡ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಕಾರ್ಯಕ್ರಮ ನಿರೂಪಿಸಿ, ವಿಧಾನಪರಿಷತ್ ಸದಸ್ಯ ಗೋ.ಮಧುಸೂಧನ್ ಮೋದಿಯವರ ಹಿಂದಿ ಭಾಷಣ ಕನ್ನಡಕ್ಕೆ ತರ್ಜುಮೆ ಮಾಡಿದರು.