ಕೆಸಿ ವ್ಯಾಲಿ ನೀರುನಿಂದಾಗಿ ಈ ಭಾಗದ ಜನರಿಗೆ ವರದವಾಗಲಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್

ಶ್ರೀನಿವಾಸಪುರ 2 : ಕೆಸಿ ವ್ಯಾಲಿ ನೀರುನಿಂದಾಗಿ ಈ ಭಾಗದ ಜನರಿಗೆ ವರದವಾಗಲಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ತಾಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದವತಿಯಿಂದ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಜಿಲ್ಲೆಯಲ್ಲಿ ನೀರಿನ ಮಟ್ಟವು 1400 ಅಡಿಗಳಷ್ಟು ಆಳಕ್ಕೆ ದಾಟಿತ್ತು, ಆದರೆ ಇಂದು ನೀರಿನ ಮಟ್ಟವು 600 ಕ್ಕೆ ಬಂದಿರುವುದು ಸಂತಸದ ವಿಚಾರ ಎನಿಸಿದೆ. ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ವಿತರಣೆ 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ಮನೆಗಳನ್ನು ನೀಡಲಾಗುವುದು, ಸಿಸಿ ರಸ್ತೆ, ಸರ್ಕಾರಿ ಶಾಲೆಗಳ ಪುನಃಶ್ಚೇತನ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ನಾನು ನಿಮ್ಮ ಸೇವೆ ಮಾಡಲ್ಲಿಕ್ಕೆ ಅವಕಾಶ ಮಾಡಿಕೊಡಿ. ನೀವು ನನ್ನನ್ನು ಗೆಲ್ಲಿಸುವುದರ ಮೂಲಕ ಆರ್ಶೀವಾದ ಮಾಡಿದರೆ ವಿಧಾನ ಸೌದದಲ್ಲಿ ನಿಮ್ಮ ಪರವಾಗಿ ದ್ವನಿ ಎತ್ತುತ್ತೇನೆ ಎಂದರು . ಇಲ್ಲವಾದರೆ ನನ್ನ ತೋಟಕ್ಕೆ ಹೋಗಿ ಕುರಿ, ಮೇಕೆ ಮೇಯಿಸಿಕೊಂಡು ವಿಶ್ರಾಂತಿ ಪಡೆಯುತ್ತೇನೆ ಎಂದರು.
ಆಂಬೇಡ್ಕರ್ ರವರ ತತ್ವದ ಹಾಗೂ ಆಶಯದ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇನೆ . ಯುವ ಸಮುದಾಯವು ಅಂಬೇಡ್ಕರ್ ವಿಚಾರ ಧಾರೆಗಳನ್ನು ಅರಿತುಕೊಳ್ಳಬೇಕು.
ಕೇಂದ್ರ ಸರ್ಕಾರ ವೈಪಲ್ಯದ ಯೋಜನೆಗಳ ವಿರುದ್ದ ಟಾಂಗ್ ನೀಡಿದರು. ಎಂಎಲ್‍ಸಿ ಅನಿಲ್‍ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಜಿ.ಪಂ.ಮಾಜಿ ಅಧ್ಯಕ್ಷ ಜನ್ನಘಟ್ಟ ಕೃಷ್ಣಪ್ಪ, ತೋಟಗಾರಿಕೆ ವಿಶ್ವವಿದ್ಯಾನಿಲಯದ ನಿರ್ದೇಶಕ ಮಾದಮಂಗಲ ಮಂಜುನಾಥ್, ಕೋಲಾರ ಜಿಲ್ಲಾ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಸುಗಟೂರು ಸೊಸೈಟಿ ಅಧ್ಯಕ್ಷ ಬಾಬು, ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ಪಿ.ಎಸ್.ನಾಗೇಂದ್ರಶೆಟ್ಟಿ, ಸುಗಟೂರು ವಿಶ್ವನಾಥ್, ಮುಳ್ಳಳ್ಳಿ ಚಂದ್ರು, ಸುಮನ್, ಕೇಶವ, ಡಾ.ಮಂಜುನಾಥ್, ವಿ.ಪ್ರಕಾಶ್, ವಿಜಯಕುಮಾರ್, ಮುರಳಿ, ಸಂತೋಷ್, ನವೀನ್ , ಅಭಿಲಾಷ್ ಇದ್ದರು
.

ಡಾ.ಹೆಚ್. ಶಾಂತಾರಾಮ್ ಹೆಸರಿನಲ್ಲಿ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ 2021ರಿಂದ 2022ರ ಅವದಿ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಕೊಡ ಮಾಡುವ ಪ್ರಶಸ್ತಿಗೆ ಅಹ್ವಾನ

Dark northern lights gradient blur abstract color background pattern design.

ಕುಂದಾಪುರ : ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಗಳನ್ನು ಪರಿಗಣಿಸಲಿದ್ದು, 2021ರಿಂದ 2022ರ ಅವಧಿಯಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಪ್ರಕಾಶಕರು ಅಥವಾ ಲೇಖಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಮೇ 20ರೊಳಗೆ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ -576201 ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅವಕಾಶವಿರುವುದಿಲ್ಲ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದ್ದು, ಹದಿನೈದು ಸಾವಿರ ರೂಪಾಯಿಯೊಂದಿಗೆ ಬೆಳ್ಳಿಫಲಕ ನೀಡಲಾಗುವುದೆಂದು ಪ್ರಶಸ್ತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ – 9449257263 ಸಂಪರ್ಕಿಸಬಹುದು.

ಜೆಸಿಐ ಕುಂದಾಪುರ ಸಿಟಿ ಘಟಕದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ನರ್ಸ್ ರಾಧಿಕಾರವರಿಗೆ ಸನ್ಮಾನ

ಜೆಸಿಐ ಕುಂದಾಪುರ ಸಿಟಿ ಘಟಕದ ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಎಲೆಮರೆಯ ಸಾಧಕರನ್ನು ಗೌರವಿಸುವ ಕಾರ್ಯಕ್ರಮವನ್ನು ಕುಂದಾಪುರದ ಸುಮುಖ ಮಿನಿ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ತಿಂಗಳ ಮೌನ ಸಾಧಕರಾಗಿ ಕುಂದಾಪುರದ ಶ್ರೀ ರಾಮಕೃಷ್ಣ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ರಾಧಿಕಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಪೂರ್ವ ವಲಯ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷರಾದ ಅಭಿಲಾಶ್ ಬಿ ಏ, ವಲಯದ ವಿವಿಧ ಘಟಕಗಳ ಘಟಕ ಅಧ್ಯಕ್ಷರುಗಳಾದ ಅನಿಲ್ ಕುಮಾರ್, ಜ್ಯೋತಿಶಂಕರ್, ಪ್ರದೀಪ್ ಶೆಟ್ಟಿ, ನಾಗೇಂದ್ರ ಪ್ರಭು ಉಪಸ್ಥಿತರಿದ್ದರು. ಘಟಕದ ಪೂರ್ವ ಅಧ್ಯಕ್ಷರುಗಳಾದ ಗಿರೀಶ್ ಹೆಬ್ಬಾರ್ ರಾಘವೇಂದ್ರ ನಾವಡ, ನಾಗೇಶ್ ನಾವಡ, ಮಂಜುನಾಥ ಕಾಮತ್, ಶ್ರೀಧರ್ ಸುವರ್ಣ, ವಿಜಯ್ ಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸೋನಿ ಡಿಕೋಸ್ಟ ಅವರು ವಹಿಸಿದ್ದರು. ಪ್ರೇಮ ಡಿಕುನ್ನ ಧನ್ಯವಾದ ಸಮರ್ಪಿಸಿದರು.

ಮತದಾನವೆಂದರೆ ಸಂವಿಧಾನದ ಪ್ರಕಾರ ೧೮ ವರ್ಷ ತುಂಬಿದ ಪ್ರಾಯದ ಪ್ರತಿಯೊಬ್ಬರು ಆ ಪವಿತ್ರ ಹಕ್ಕನ್ನು ಚಲಾಯಿಸಲೇಬೇಕು:ಜಿ.ಎಸ್.ಸತೀಶ್‌ಕುಮಾರ್

ಶ್ರೀನಿವಾಸಪುರ ೧ : ಮತದಾನವೆಂದರೆ ನಮ್ಮ ದೇಶದ ಸಂವಿಧಾನದ ಪ್ರಕಾರ ೧೮ ವರ್ಷ ತುಂಬಿದ ಪ್ರಾಯದ ಪ್ರತಿಯೊಬ್ಬರು ಆ ಪವಿತ್ರ ಹಕ್ಕನ್ನು ಚಾಲಾಯಿಸಲೇಬೇಕು. ನಮ್ಮ ಮತ ಬಹಳ ಪವಿತ್ರವಾದದ್ದು, ಅದು ನಮ್ಮ ಹಕ್ಕು ಅದರ ಜೊತೆಗೆ ನಮ್ಮ ಕರ್ತವ್ಯವೂ ಇದೆ. ಎಂದು ಸ್ವೀಪ್ ಸಮಿತಿ ಅಧ್ಯಕ್ಷ ಹಾಗು ತಾ.ಪಂ.ಇಒ ಜಿ.ಎಸ್.ಸತೀಶ್‌ಕುಮಾರ್ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಶುಕ್ರವಾರ ವಿದ್ಯಾರ್ಥಿಗಳಿಗೆ ಹಾಗೂ ಬಸ್ ಚಾಲಕರಿಗೆ ಪ್ರಯಾಣಿಕರಿಗೆ ಮತದಾನದ ಅರಿವು ಕರಪತ್ರಗಳನ್ನು ನೀಡುವುದರ ಮೂಲಕ ಮಾತದಾನದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕರಿಗೆ ಚುನಾವಣೆಯಲ್ಲಿ ಯುವ ಮತದಾರರ ಪಾತ್ರ ಮತ್ತು ಅವರ ಭವಿಷ್ಯಕ್ಕೆ ಮತದಾನ ಎಷ್ಟು ಮುಖ್ಯ ಎನ್ನುವದರ ಕುರಿತು ವಿವರಿಸಿದರು ಹಾಗು ಮೇ ೧೦ ರಂದು ನಡೆಯುವ ಸಾವರ್ತ್ರಿಕ ಚುನವಾಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು, ಮಾಡಿಸಬೇಕು ಎಂದು ಕರೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವು ಗ್ರಾಮಗಳಲ್ಲಿನ ಹಿರಿಯರಿಗೆ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಿ, ಮತದಾನ ಮಾಡಲಿಲ್ಲವೆಂದರೆ ದೇಶದ ಪರಿಸ್ಥಿತಿ ಏನಾಗುತ್ತದೆ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ವಿವರಿಸಿ ಕಡ್ಡಾಯವಾಗಿ ಮತದಾನವನ್ನು ಮಾಡಿಸುವುದಕ್ಕೆ ಪ್ರೇರೇಪಣೆ ನೀಡಿ ಮತದಾನವನ್ನು ಮಾಡಿಸಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಬಸ್ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಮತದಾನದ ಕರಪತ್ರ ನೀಡುವುದರ ಮೂಲಕ ಹಾಗು ಗುಲಾಬಿ ಹೂವುಗಳನ್ನು ನೀಡುವುದರ ಮೂಲಕ ಅರಿವು ಮೂಡಿಸಲಾಯಿತು.
ತಾ.ಪಂ.ಸಹಾಯಕ ನಿರ್ದೇಶಕ ರಾಮಪ್ಪ, ತಾ.ಪಂ ಸಿಬ್ಬಂದಿಗಳಾದ ಲಕ್ಷ್ಮಿಶ್ ಕಾಮತ್ , ಚೇತನ್ , ಪುರಸಭೆಯ ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಶಂಕರ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ವ್ಯವಸ್ಥಾಪಕ ನವೀನಚಂದ್ರ, ಸಿಬ್ಬಂದಿಗಳಾದ ಸುರೇಶ್, ಸಂತೋಷ, ಪ್ರತಾಪ್,ಎಸ್.ಶಿವಪ್ರಸಾದ್ ಇದ್ದರು.

ಭಂಡಾರ್ಕಾರ್ಸ್ : ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ ” ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ” ಪುಸ್ತಕ ಬಿಡುಗಡೆ ಕಾರ್ಯಕ್ರಮ

ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ ” ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ ಸ್ವಸ್ಥವಾಗಿ ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ ಇತ್ತು. ಕೇವಲ ಮಠ ಮಂದಿರಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ಈ ಕಾಲಘಟ್ಟದಲ್ಲಿ ಬಸವಣ್ಣ ತಾರತಮ್ಯವನ್ನು ಎಂದಿಗೂ ಒಪ್ಪಲಿಲ್ಲ. ತನ್ನ ಸಮಾಜದ ತಾರತಮ್ಯ ನೀತಿಯ ಕುರಿತು ತನ್ನನ್ನೇ ತಾನು ಪ್ರಶ್ನೆ ಮಾಡಿಕೊಳ್ಳುತ್ತಾನೆ. ಭಕ್ತಿಯ ಆಂದೋಲನದಲ್ಲಿ ಬಸವಣ್ಣ ತನ್ನನ್ನು ಕಂಡರು. ನಾರಾಯಣಗುರುಗಳ ತತ್ವ ಆದರ್ಶಗಳು ಸಹ ಸಾಮ್ಯತೆ ಇದೆ. ಇಬ್ಬರೂ ಸಮಾಜದ ಸಮಾನ ಬದುಕಿನಲ್ಲಿ ತಮ್ಮನ್ನು ಕಂಡುಕೊಂಡವರು. ಪ್ರಜಾಸತ್ತಾತ್ಮಕತೆ ಇವರಿಬ್ಬರಲ್ಲೂ ಇತ್ತು. ಇವರಿಬ್ಬರನ್ನು ಇಂದಿನ ಭಕ್ತರು ಬಂಧಿಯಾಗಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿ ಪ್ರಕಟಿತ ಪುಸ್ತಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ಕಾಲೇಜಿನ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ, ಸತ್ಯನಾರಾಯಣ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ರಾಮಚಂದ್ರ ಆಚಾರ್ಯ ಕನ್ನಡ ವಿಭಾಗದ ಮುಖ್ಯಸ್ಥರಾದ ಮೈತ್ರಿ ಉಪಸ್ಥಿತರಿದ್ದರು.