ಸಹಕಾರದ ನಿರೀಕ್ಷೆಯಲ್ಲಿ ಅಸಹಾಯಕ ಬದುಕು


ಕುಂದಾಪುರ : ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಬೆಡ್ಡಿನ ಮೇಲೆ ಸೂರನ್ನು ದ್ರಷ್ಟಿಸುತ್ತಾ ಉದ್ದಕ್ಕೂ ಮೈ ಚೆಲ್ಲಿ ಬಿದ್ದಿರುವ ಇವರ ಹೆಸರು ಚಂದ್ರ ದೇವಾಡಿಗ.ಊರು ಬೈಂದೂರು ತಾಲೂಕಿನ ಕಂಬದ ಕೋಣೆ. ಕೂಲಿ ನಾಲಿಯ ಜತೆ ತೆಂಗಿನ ಮರದ ಕಾಯಿ ಕೀಳುವ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದ ಇವರದ್ದು ಪತ್ನಿ ಹಾಗೂ 2 ಪುಟ್ಟ ಮಕ್ಕಳ ಸಣ್ಣ ಸಂಸಾರ.ಅವತ್ಯಾಕೋ ವಿಧಿ ಕಾರಣವಿಲ್ಲದೆ ಮುನಿದು ಬಿಟ್ಟಿತು. ಪಕ್ಕದ ಗ್ರಾಮದೊರ್ವರ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಮರ ಹತ್ತಿದರು.ಅದೇನಾಯಿತೋ ಗೊತ್ತಿಲ್ಲ ತಲೆ ಸುತ್ತು ಬಂದ ಅನುಭವ ಅಷ್ಟೇ. ಎರಡು ದಿನಗಳ ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಗ ಸೊಂಟದ ಕೆಳಗೆ ಚಲನೆಯೇ ಇರಲಿಲ್ಲ. ನರ, ಮೂಳೆಗಳು ಚದುರಿಹೋಗಿವೆ.ಇದೆ ಸ್ಥಿತಿಯಲ್ಲಿ ಎರಡೂವರೆ ವರ್ಷಗಳು ಸರಿದಿವೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೊತ್ತೊಯ್ದರೂ ಪರಿಣಾಮ ಮಾತ್ರ ಶೂನ್ಯ. ಈಗಾಗಲೇ ಸಾಲ ಸೋಲಮಾಡಿ ಹಲವು ಲಕ್ಷಗಳನ್ನು ಚಿಕಿತ್ಸೆಗಾಗಿ ವ್ಯಯಿಸಿ ಜೀವಚ್ಛವದಂತೆ ಬಿದ್ದುಕೊಂಡಿರುವ ಪತಿಗೆ ಹೆಗಲಿಗೆ ಹೆಗಲು ನೀಡುತ್ತಿರುವ ಪತ್ನಿಯ ಕಣ್ಣುಗಳಲ್ಲಿ ಭವಿಷ್ಯದ ಕರಾಳತೆ. ಬದುಕನ್ನು ಇನ್ನೂ ಅಚ್ಚರಿಯಿಂದ ದಿಟ್ಟಿಸುತ್ತಿರುವ ಮುಗ್ಧ ಪುಟ್ಟ ಮಕ್ಕಳ ಮನದಲ್ಲಿ ಅಯ್ಯೋ ನಮ್ಮ ಅಪ್ಪನಿಗೆ ಹೀಗೇಕಾಯ್ತು ಎಂಬ ಉತ್ತರ ಸಿಗದ ಪ್ರೆಶ್ನೆ. ಆಸಹಾಯಕತೆ ಎದುರು ಸ್ವಾಭಿಮಾನ ಮುದುಡಿಹೋಗಿದೆ. ಬೇರೆ ದಾರಿ ಕಾಣದೆ ಸಹಾಯಕ್ಕಾಗಿ ಯಾಚಿಸಿದ್ದಾರೆ. ನಿಮ್ಮ ಪುಟ್ಟ ಸಹಕಾರವೇ ಆ ಅಭಾಗ್ಯ ಕುಟುಂಬಕ್ಕೆ ಬ್ರಹತ್ ಸಹಾಯದಂತೆ ದಯವಿಟ್ಟು ಸ್ಪಂದಿಸಿ.
ಚಂದ್ರ, ಖಾತೆ ನ.8012500102705801
Ifsc: KARB 0000801,ಕರ್ನಾಟಕ ಬ್ಯಾಂಕ್ ,ಕಂಬದ ಕೋಣೆ
.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ33ನೇ ಪದವಿ ಪ್ರದಾನ ಸಮಾರಂಭ

ಫಾದರ್ ಮುಲ್ಲರ್ ಸೇವಾ ಸಂಸ್ಥೆಯಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 33ನೇ ಪದವಿ ಪ್ರದಾನ ಸಮಾರಂಭವನ್ನುಕಂಕನಾಡಿಯ ಫಾದರ್ ಮುಲ್ಲರ್‍ಕನ್ವೆನ್ಷನ್ ಸೆಂಟರ್‍ನಲ್ಲಿದಿನಾಂಕ29.04.2023ರಂದುಹಮ್ಮಿಕೊಳ್ಳಲಾಗಿದೆ.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ದತಿಯಲ್ಲಿಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಾ, ಹೋಮಿಯೋಪಥಿಚಿಕಿತ್ಸೆಯುಎಲ್ಲಾ ವಿಭಾಗದಜನರಿಗೂತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಸಂಸ್ಥೆಯು‘ಗುಣಪಡಿಸು’ ಮತ್ತು‘ಸಾಂತ್ವನಿಸು’(Heal & Comfort)ಎಂಬ ಧ್ಯೇಯೊಕ್ತಿಯೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಿದೆ. ಈ ಮಹಾವಿದ್ಯಾಲಯವುರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದಗುರುತಿಸಲ್ಪಟ್ಟಿದ್ದು, ಹೋಮಿಯೋಪಥಿರಾಷ್ಟ್ರೀಯ ಪರಿಷತ್ತು ಮತ್ತುಆಯುಷ್‍ಇಲಾಖೆ, ನವದೆಹಲಿ ಇವುಗಳ ಮಾನ್ಯತೆ ಪಡೆದಿದೆ.ಔಷಧಿಶಾಸ್ತ್ರೀಯ ವಿಚಕ್ಷಣೆಗೆ (Pharmacovigilence) ಪ್ರಾದೇಶಿಕ ಕೇಂದ್ರವಾಗಿದ್ದು, ಇತ್ತೀಚಿಗೆರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಎಲ್ಲಾ ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡುವಕೇಂದ್ರವನ್ನಾಗಿಗುರುತಿಸಲ್ಪಟ್ಟಿದೆ.ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (NAAC) ‘A’’ಗ್ರೇಡ್ ಶ್ರೇಯಾಂಕವನ್ನು ಪಡೆದುಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.ಈ ಸಂಸ್ಥೆಯು ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ 7 ವಿಶೇಷತೆಗಳಲ್ಲಿ ಹೋಮಿಯೋಪಥಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ನಡೆಸುತ್ತಿದೆ.

ಪದವಿ ಪ್ರದಾನ ಸಮಾರಂಭವು29.04.2023ರಂದು (ಶನಿವಾರ) ಬೆಳಿಗ್ಗೆ 10.00 ಗಂಟೆಗೆಕಂಕನಾಡಿಯ ಫಾದರ್ ಮುಲ್ಲರ್‍ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಲಿದೆ.ಸಮಾರಂಭದಅಧ್ಯಕ್ಷತೆಯನ್ನುಮಂಗಳೂರು ಧರ್ಮಪ್ರಾಂತ್ಯದಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ವಂದನೀಯಡಾ. ಪೀಟರ್ ಪೌಲ್ ಸಲ್ದಾನ್ಹಾರವರು ವಹಿಸಲಿದ್ದಾರೆ ಹಾಗೂ ವಿನಾಯಕ ಮಿಷನ್‍ರಿಸರ್ಚ್ ಫೌಂಡೇಶನ್, ಡೀಮ್ಡ್‍ಟು. ಬಿ.ಯುನಿವರ್ಸಿಟಿ.ಸೇಲಂ, ತಮಿಳುನಾಡು ಇದರಉಪಕುಲಪತಿಯಾದಡಾ. ಪಿ. ಕೆ.ಸುಧೀರ್‍ರವರು ಮುಖ್ಯಅತಿಥಿಯಾಗಿ ಪದವೀಧರರನ್ನು ಸನ್ಮಾನಿಸಲಿದ್ದಾರೆಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್‍ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಈ ದಿನ 97 ಹೋಮಿಯೋಪಥಿ ಪದವಿ ಹಾಗೂ18 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿರುವರು.ರಾಜೀವ್‍ಗಾಂಧಿಆರೋಗ್ಯವಿಜ್ಞಾನವಿಶ್ವವಿದ್ಯಾಲಯಘೋಷಿಸಿದಸ್ನಾತಕೋತ್ತರ ಪದವಿಯ ವಿವಿಧ ವಿಶೇಷತೆಗಳಲ್ಲಿ 10ರ್ಯಾಂಕ್‍ಗಳನ್ನು ಪಡೆದ ಪ್ರತಿಬಾನ್ವಿತ ವಿದ್ಯಾರ್ಥಿಗಳನ್ನುಇದೇ ಸಂದರ್ಭದಲ್ಲಿಗೌರವಿಸಲಾಗುವುದು.

2016-17 ನೇ ಸಾಲಿನ ರಾಜೀವ್‍ಗಾಂಧಿಆರೋಗ್ಯವಿಜ್ಞಾನವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನುಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಪದವೀಧರೆಡಾ. ಆಶ್ರಿತಾ ಬಿ.ಎ. ಹಾಗೂಸ್ನಾತಕೋತ್ತರ ಪದವಿಯ ಮೆಟಿರಿಯಾ ಮೆಡಿಕಾ ವಿಭಾಗದಲ್ಲಿಅತ್ಯುತ್ತಮಅಂಕ ಗಳಿಸಿರುವ ಡಾ.ರೆಮ್ಯಾ ವರ್ಗೀಸ್‍ಪಡೆದಿರುವರು. ಹಾಗೂ ಸೆಂಟ್ರಲ್‍ಕೌನ್ಸಿಲ್‍ಆಫ್‍ರಿಸರ್ಚ್‍ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯಅತ್ಯುತ್ತಮ ಪ್ರಬಂದ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು 2019-20ರ ಹೋಮಿಯೋಪಥಿಸೈಕ್ಯಾಟ್ರಿ ವಿಭಾಗದಡಾ. ಸುದೀಪ್ತಿ ಸಿಂಗ್ ರವರು ಪಡೆದಿದ್ದುಇವರೆಲ್ಲರನ್ನೂ ಈ ಸಂದರ್ಭದಲ್ಲಿಗೌರವಿಸಲಾಗುವುದು. ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ನೀಡುವಅಧ್ಯಕ್ಷೀಯಚಿನ್ನದ ಪದಕವನ್ನುಅಂದುಘೋಷಿಸಲಿದ್ದುಕಳೆದ 5ಳಿ ವರ್ಷಗಳ ವಿದ್ಯಾರ್ಥಿಜೀವನದಲ್ಲಿ ಶಿಕ್ಷಕೀಯ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆದೊರಕಲಿದೆ. ಅದೇರೀತಿ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ಗುರುತಿಸಿ ವಿಶೇಷಬಹುಮಾನದೊಂದಿಗೆ ಸನ್ಮಾನಿಸಲಾಗುವುದು.ಈ ವರ್ಷ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿ 25 ವರ್ಷ ಪೂರ್ಣಗೊಂಡಿದ್ದು, ಸ್ನಾತಕೋತ್ತರ ಪದವಿಯ ಬೆಳ್ಳಿ ಹಬ್ಬ ಸಮಾರಂಭವನ್ನು ಇದೇ ಮೇ ತಿಂಗಳ 6 ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರು ಬೈಕ್ ಮುಖಾಮುಖಿ ಡಿಕ್ಕಿ : ಸ್ಕೂಟರ್ ಸವಾರ ಧರ್ಮಗುರು ಸ್ಟೀವನ್ ಲೋಬೊ ಸಹೋದರ, ಮ್ರತ್ಯು ವಶ, ಸಹಸವಾರ ಗಂಭೀರ

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನೊರ್ವ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಎ.28 ರಂದು ಬೆಳಿಗ್ಗೆ ನಡೆದಿದೆ.

ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ ಮೃತಪಟ್ಟ ಯುವಕನಾಗಿದ್ದು, ಈತನ ಜೊತೆ ಕೆಲಸ ಮಾಡುವ ನೆರೆಯ ಮನೆಯ ಅಕಾಶ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ‌.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಂದೀಪ್ ಲೋಬೊ ವೆಲ್ಡಿಂಗ್ ವ್ರತ್ತಿಯಲ್ಲಿ ಕಾಂಟೆಕ್ಟ್ ಮಾಡುವರಾಗಿದ್ದು, ಸಹ ಸವಾರ ಇವರ ಜೊತೆ ಕೆಲಸ ಮಾಡುವನಾಗಿದ್ದು, ಬಿಸಿರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಅತೀವೇಗದ ಹಾಗೂ ಅಜಾಕರಕತೆಯಿಂದ ಚಾಲನೆ ಮಾಡಿಕೊಂಡು ಬಂದ ರಿಟ್ಜ್ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಸಂದೀಪ್ ಲೋಬೊ ಅಮ್ಟಾಡಿ ಗ್ರಾಮದ ಗೋರೆಮಾರ್ ನಿವಾಸಿ ಹೆರಾಲ್ಡ್ ಲೋಬೊ ಮತ್ತು ಐರಿನ್ ಲೋಬೊ ದಂಪತಿಯ ಹಿರಿಯ ಮಗನಾಗಿದ್ದರು. ಅವರು ತಂದೆಯ ಕಾಂಟ್ರೆಕ್ಟ್ ವ್ರತ್ತಿಯನ್ನೆ ಮುಂದುವರಿಸುತಿದ್ದರು.
ಅಪಘಾತದಿಂದ ಗಾಯಗೊಂಡಿದ್ದ ಸಂದೀಪ್ ಲೋಬೋ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದು,ಅಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮ್ರತ್ಯುವಶವಾದ ಸಂದೀಪ್ ಲೋಬೊ ಕಾರ್ಮೆಲ್ ಮೇಳದ ಧರ್ಮಗುರು ವಂ|ಸ್ಟೀವನ್ ಲೋಬೊ ಅವರ ಹಿರಿಯ ಸಹೋದರನಾಗಿರುವನೆಂದು ತಿಳಿದು ಬಂದಿದೆ. ಇವರು ಪತ್ನಿ ಮತ್ತು ಮೂವರು ಮಕ್ಕಳನ್ನು, ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಪುಂಜಾಲಕಟ್ಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.