ಕೋಮು ಗಲಭೆಯ ಕಾರಣ 30 ವರ್ಷಮನೆಯಿಂದ ದೂರವಾದ ಹುಸೇನ್ ಸ್ನೇಹಾಲಯದಿಂದ ಮರಳಿ ಮನೆಗೆ ತಲುಪಿದರು


05.04.2012 ರಂದು ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಅವರು ಮಂಜೇಶ್ವರ ರೈಲು ನಿಲ್ದಾಣದಲ್ಲಿ ದೈಹಿಕವಾಗಿ ವಿಕಲಚೇತನರು ಮತ್ತು ಮಾನಸಿಕವಾಗಿ ತೊಂದರೆಗೀಡಾದ ನಿರ್ಗತಿಕರನ್ನು ರಕ್ಷಿಸಿದರು. ಮತ್ತು ಅವರನ್ನು ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ಮಂಜೇಶ್ವರಕ್ಕೆ ದಾಖಲಿಸಲಾಗಿದೆ. ಅವರನ್ನು ಹುಸೇನ್ ಎಂದು ಹೆಸರಿಸಲಾಯಿತು. ಕೆಲ ತಿಂಗಳ ಹಿಂದೆ ತಂಡದ ಸದಸ್ಯರಿಗೆ ತನ್ನ ಹೆಸರು ಹಸೈನ್ ಎಂದು ಹೇಳಲು ಆರಂಭಿಸಿದ್ದ ಆತ ಬೆಂಗಳೂರಿನ ಹಿರಿಯೂರಿನವನು. ಈತನ ಸ್ವದೇಶಿ ವಿವರಗಳಿಗಾಗಿ ಹುಡುಕಾಟ ಮುಂದುವರಿದಿದ್ದು, ಈತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲದವನೆಂದು ತಂಡಕ್ಕೆ ತಿಳಿದು ಬಂದಿದೆ. ಅವರ ಸಹೋದರಿ ಮತ್ತು ಇತರ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ ನಂತರ ಅವರು ಸ್ನೇಹಾಲಯದಲ್ಲಿ ವಾಸಿಸುತ್ತಿರುವ ಬಗ್ಗೆ ತಿಳಿದು ಆಶ್ಚರ್ಯ ಮತ್ತು ಸಂತೋಷವಾಯಿತು.
ಕೂಡಲೇ ಮಂಜೇಶ್ವರಕ್ಕೆ ಪ್ರಯಾಣಿಸಿ ಸ್ನೇಹಾಲಯ ತಲುಪಿದರು. ಇಂದು 26.04.2023 ರಂದು ಸ್ನೇಹಾಲಯ ಕುಟುಂಬವು ಕಾಣೆಯಾದ 30 ವರ್ಷಗಳ ನಂತರ ಹುಸೇನ್ ಅವರ ಸಂತೋಷದ ಪುನರ್ಮಿಲನಕ್ಕೆ ಸಾಕ್ಷಿಯಾಯಿತು. ಗಲಭೆ, ಕೋಮುಗಲಭೆ ಮತ್ತು ಕರ್ಫ್ಯೂ ಸಂದರ್ಭದಲ್ಲಿ ಭಯದ ಕಾರಣದಿಂದ ಅವರು ತಮ್ಮ ಊರನ್ನು ತೊರೆದರು ಮತ್ತು ಅವರನ್ನು ಮತ್ತೆ ಭೇಟಿಯಾಗುವ ಭರವಸೆಯನ್ನು ಕಳೆದುಕೊಂಡರು ಎಂದು ಕುಟುಂಬ ಸದಸ್ಯರು ಹಂಚಿಕೊಂಡರು. ಅವನ ಹೆತ್ತವರು ತೀರಿಕೊಂಡರು ಮತ್ತು ಅವನ ಇತರ ಒಡಹುಟ್ಟಿದವರು ಅವನನ್ನು ಕೆಟ್ಟದಾಗಿ ಕಾಣೆಯಾಗಿದ್ದರು. ಅವನನ್ನು ಮತ್ತೆ ನೋಡುವುದು ಮತ್ತು ಅವನನ್ನು ಮರಳಿ ಪಡೆಯುವುದು ಅವರಿಗೆ ನಿಜವಾಗಿಯೂ ನಂಬಲಾಗದ ಸಂಗತಿಯಾಗಿದೆ. ಅವರ ಸಹೋದರಿಯರು ಮತ್ತು ಸೋದರಳಿಯರು ಸ್ನೇಹಾಲಯದ ಸೇವೆಯನ್ನು ಶ್ಲಾಘಿಸಿದರು ಮತ್ತು ಹುಸೇನ್ ಅವರಿಗೆ ಮನೆಯ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಿದ ಮತ್ತು ಅವರ ಪುನರ್ಮಿಲನದಲ್ಲಿ ಅವರ ತಂಡಕ್ಕೆ ಮಾರ್ಗದರ್ಶನ ನೀಡಿದ ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಪಟ್ಟಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಸ್ವೀಪ್ ಸಮಿತಿ ವತಿಯಿಂದ ಮಂಗಳವಾರ ರಾತ್ರಿ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು.
ತಹಶೀಲ್ದಾರ್ ಶಿರಿನ್ ತಾಜ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮತದಾರನೂ ತಪ್ಪದೆ ಮತದಾನ ಮಾಡಬೇಕು. ಮತದಾನ ಪವಿತ್ರ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಯಾವುದೇ ಆಮಿಷಕ್ಕೆ ಒಳಗಾಗಬಾರದು. ಪ್ರಜಾಪ್ರಭುತ್ವ ರಕ್ಷಣೆ ನಿಸ್ವಾರ್ಥ ಮತದಾರರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ಮತದಾರರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡಲು ಮನವಿ ಮಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥರೆಡ್ಡಿ, ಸಿಡಿಪಿಒ ಶೋಭಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಬುಧವಾರ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

ಶ್ರೀನಿವಾಸಪುರ: ತಾಲ್ಲೂಕಿನ ಕೊಡಿಚೆರುವು ಗ್ರಾಮದಲ್ಲಿ ಬುಧವಾರ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು. ರಥೋತ್ಸವದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು, ಬಿರುಬಿಸಿಲು ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಗ್ರಾಮಸ್ಥರಿಂದ ಪಾನಕ ಸೇವೆ ನೀಡಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಶಿವಾರೆಡ್ಡಿ, ಉಮಾದೇವಿ, ಕೆ.ಎಚ್.ಕೃಷ್ಣಪ್ಪ, ಜಯಣ್ಣ, ಶಿವಾನಂದ, ವೆಂಕಟೇಶ್, ಅಶೋಕ್, ರೆಡ್ಡಪ್ಪ, ಶ್ರೀನಿವಾಸ್, ಅರ್ಜುನ್, ರಂಗಸ್ವಾಮಿಶೆಟ್ಟಿ ಇದ್ದರು.

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ, ಡಬ್ಯೂ.ಎಪ್.ಐ ಮುಖ್ಯಸ್ಥ ಮತ್ತು ಬಿ.ಜೆ.ಪಿ ಸಂಸದ ಬ್ರೀಜ್ ಭೂಷನ್ ಶರಣ್ ಸಿಂಗರನ್ನು ವಜಾಗೊಳಿಸಿ- ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ

ಕೋಲಾರ,ಏ.26: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಡಬ್ಯೂ.ಎಪ್.ಐ ಮುಖ್ಯಸ್ಥ ಮತ್ತು ಬಿ.ಜೆ.ಪಿ ಸಂಸದ ಬ್ರೀಜ್ ಭೂಷನ್ ಶರಣ್ ಸಿಂಗ್ ವಿರುದ್ದ ಕಾನೂನು ಕ್ರಮ ಕೈಗೊಂಡು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳನ್ನು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ರವರು ದಿನದ 24 ಗಂಟೆ ಎರಡು ವರ್ಷದ ಹಸುಗೂಸಿನಿಂದ 80 ವರ್ಷದ ವೃದ್ದೆ ಮಹಿಳೆಯವವರೆಗೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಚಾರ, ವರದಕ್ಷಿಣೆ ಕಿರುಕುಳ ಹೀಗೆ ಒಂದಲ್ಲಾ ಒಂದು ಪ್ರಕರಣ ನಡೆಯುತ್ತಿರುವಾಗ ಮಹಿಳೆಯರಿಗೆ ರಕ್ಷಣೆ ಕೊಡಬೇಕು ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಇಡಬೇಕೆಂದು ಸಾರ್ವಜನಿಕ ಭಾಷಣಗಳಲ್ಲಿ ಉದ್ದಅಗಲ ಮಾತನಾಡುವ ದೇಶದ ಮಾನ್ಯ ಪ್ರಧಾನ ಮಂತ್ರಿಗಳೇ ಮಹಿಳೆಯರಿಗೆ ರಕ್ಷಣೆ ಇದೆಯೇ? ಎಂಬುಂದು ನಿಮ್ಮ ಅನಿಸಿಕೆಯೇ ಅಥವಾ ಮಹಿಳೆಯರನ್ನು ಪುರಾತನ ಕಾಲದಂತೆ ಮನೆಯ 4 ಗೋಡೆಗಳ ಮದ್ಯೆ ಕೂಡಿ ಹಾಕುವ ಹುನ್ನಾರವೇ ಎಂದು ಪ್ರಶ್ನೆ ಮಾಡಿದರು.
3 ತಿಂಗಳಿಂದ ಮಹಿಳಾ ಕುಸ್ತಿಪಟುಗಳು ಶರಣ್‍ಸಿಂಗ್ ವಿರುದ್ದ ಆರೋಪಗಳ ಸುರಿಮಳೆಯೇ ಸುರಿಸಿ ಹೆಣ್ಣಾಗಿ ಹುಟ್ಟಿರುವ ನಮಗೆ ಈ ಶಿಕ್ಷೆ ಬೇಕೇ ಹೆಣ್ಣು ಸಂಸಾರಕ್ಕೆ ಮಾತ್ರ ಸೀಮಿತವಾಗಬೇಕೇ ಎಂದು ಏನಾದರೂ ಸಾಧನೆ ಮಾಡಿ ಜನ್ಮ ಕೊಟ್ಟ ತಂದೆ ತಾಯಿಗೆ ದೇಶಕ್ಕೆ ಕೀರ್ತಿ ತರುವ ಛಲ ಇರುವ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿಯುತ್ತಿರುವ ಕಾಮುಕ ಸಂಸದರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ತಮ್ಮ ಪಕ್ಷದ ಸಂಸದರೆಂದು ಅವರನ್ನು ರಕ್ಷಣೆ ಮಾಡಲು ಹೋರಟಿದ್ದೀರೆಯೇ ದೇಶದ ಹೆಣ್ಣೂ ಮಕ್ಕಳ ಮೇಲೆ ನಿಮಗೆ ಗೌರವ ಇದ್ದರೆ ಕೂಡಲೇ ಕುಸ್ತಿಪಟುಗಳಿಗೆ ಮಾನಸಿಕ ಹಿಂಸೆ ಲೈಂಗಿಕ ದೌರ್ಜನ್ಯ ನೀಡುತ್ತಿರುವ ಸಂಸದರನ್ನು ಕೂಡಲೇ ಸಂಸದ ಸ್ಥಾನದಿಂದ ವಜಾಗೊಳಿಸಿ ಇವರ ವಿರುದ್ದ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ದೇಶದ ಗೌರವ ಕೀರ್ತಿ ಹೊರಟಿರುವ ಮಹಿಳಾ ಕುಸ್ತಿಪಟುಗಳಿಗೆ ರಕ್ಷಣೆ ನೀಡಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳನ್ನು ಒತ್ತಾಯ ಮಾಡಿದರು.

ಸಂವಿಧಾನ ಹಾಗೂ ದಲಿತ ವಿರೋಧಿ ಕೊತ್ತೂರು ಮಂಜುನಾಥ ರನ್ನು ಸೋಲಿಸಿ ಮನೆಗೆ ಕಳುಹಿಸಿ ; ಬಾಲಾಜಿ ಚನ್ನಯ್ಯ

ಕೋಲಾರ ಏಪ್ರಿಲ್ 26 : ಸುಳ್ಳು ಜಾತಿ ಪ್ರಮಾಣಪತ್ರದ ಪ್ರಕರಣದಲ್ಲಿ ಜೈಲಿನಲ್ಲಿರಬೇಕಾಗಿದ್ದ ಕೊತ್ತೂರು ಮಂಜುನಾಥ್‍ಗೆ ಕೋಲಾರ ವಿಧಾನಸಭಾ ಕ್ಷೇತ್ರದ ಟಿಕೇಟ್‍ನ್ನು ಕಾಂಗ್ರೆಸ್ ಪಕ್ಷವು ನೀಡಿರುತ್ತದೆ. ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿ ಶಾಸಕನಾಗಿ ಐದು ವರ್ಷಗಳ ಅಧಿಕಾರವನ್ನು ನಡೆಸಿ ದಲಿತರ ಮೀಸಲಾತಿಯನ್ನು ಕಿತ್ತುಕೊಂಡ ಕೊತ್ತೂರು ಮಂಜುನಾಥ್ ರವರಿಗೆ ಕ್ಷೇತ್ರದ ಜನತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠವನ್ನು ಕಲಿಸುವಂತೆ ಬಾಲಾಜಿ ಚನ್ನಯ್ಯ ಆಗ್ರಹಿಸಿರುತ್ತಾರೆ.
ಪತ್ರಿಕಾಗೋಷ್ಠಿ ನಡೆಸಿದ ಇವರು ಕೊತ್ತೂರು ಮಂಜುನಾಥ್ ಹಿಂದುಳಿದ ವರ್ಗಗಳ ಪ್ರವರ್ಗ-1 ಬೈರಾಗಿ ಜಾತಿಗೆ ಸೇರಿದವರಾಗಿದ್ದು, ಇವರು ಪರಿಶಿಷ್ಟ ಜಾತಿಯ ಬುಡ್ಗ ಜಂಗಮ ಜಾತಿಗೆ ಸೇರಿದವನೆಂದು ಅಂದಿನ ತಹಶೀಲ್ದಾರ್ ಜಯಮಾದವ ರವರಿಗೆ ಲಂಚ ನೀಡಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದು ಶಾಸಕರಾಗಿರುತ್ತಾರೆ. ಇವರು ದಲಿತರನ್ನು ತನ್ನ ಬೆಲೆ ಬಾಳುವ ಲೇಲೆಕರ್ ಶೂಗೆ ಹೋಲಿಸಿ ಅವಹೇಳನ ಮಾಡಿ ಅವಮಾನಿಸಿರುತ್ತಾರೆ. ಜಿಲ್ಲೆಯ ಪ್ರಭಾವಿ ಮುಖಂಡರಾದ ದಲಿತ ಜನಾಂಗದ ಕೆ.ಹೆಚ್.ಮುನಿಯಪ್ಪನವರನ್ನು ಚರಂಡಿಗೆ ಹೋಲಿಕೆ ಮಾಡಿ ಹೀಯಾಳಿಸಿರುತ್ತಾರೆ. ಆಗ ಇದಕ್ಕೆ ಪ್ರತಿ ಉತ್ತರವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದಂತಹ ಕೆ.ಹೆಚ್.ಎಂ. ರವರು ಈತನು ಮುಳಬಾಗಿಲು ಕ್ಷೇತ್ರದಲ್ಲಿ ಸಾವಿರಾರು ಮನೆಗಳನ್ನು ಹಾಳು ಮಾಡಿರುವುದಾಗಿ ಸಾರಿರುತ್ತಾರೆ. ಇವರ ವಿರುದ್ಧ ಅಂದಿನ ಕಾಂಗ್ರೆಸ್ ಮುಖಂಡರುಗಳು ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದವರು. ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿರುವುದು ವಿಪರ್ಯಾಸವೆಂದು ಹಾಗೂ ಇವರ ವಿರುದ್ಧವಾಗಿ ಪ್ರತಿಭಟಿಸಿದವರು ಇಂದು ಇವರ ಪರವಾಗಿ ಪ್ರಚಾರ ಮಾಡುತ್ತಿರುವುದು ಇವರಿಗೆ ಮಾನ ಮರ್ಯಾದೆ ಇಲ್ಲವೆ ಎಂದಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಸ್ಥಳೀಯ ಟಿಕೇಟ್ ಆಕಾಂಕ್ಷಿಗಳಾದ ವಿ.ಆರ್.ಸುದರ್ಶನ್, ಎಲ್.ಎ. ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಬ್ಯಾಲಹಳ್ಳಿ ಗೋವಿಂದಗೌಡ, ಜಯರಾಮ್ (ಜೆಕೆ) ರಂತಹ ಎಲ್ಲಾ ವಿದದಲ್ಲೂ ಸಮರ್ಥರಾಗಿರುವವರನ್ನು ಬಿಟ್ಟು ಹೊರಗಿನ ಮೀಸಲಾತಿ ವಂಚಕ ಕೊತ್ತೂರು ಮಂಜುನಾಥ್‍ರವರನ್ನು ತರಬೇಕಾದ ಔಚಿತ್ಯವಾದರೂ ಕಾಂಗ್ರೆಸ್ ಪಕ್ಷಕ್ಕೆ ಏನು ಎಂದು ಪ್ರಶ್ನಿಸಿದ್ದಾರೆ.
ಮುಳಬಾಗಿಲು ಕ್ಷೇತ್ರದಲ್ಲಿ ಎ.ಐ.ಸಿ.ಸಿ. ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಬಲಗೈ ಅಸ್ಪøಶ್ಯ ಜನಾಂಗದ ಮುದ್ದು ಗಂಗಾಧರ್ ಎಂಬುವರಿಗೆ ಟಿಕೇಟ್ ನೀಡಿದರೂ ಸಹ ಕೊತ್ತೂರು ಮಂಜುನಾಥ್ ಹಟ ಹಿಡಿದು ಇದನ್ನು ರದ್ದುಗೊಳಿಸಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಬ್ಲಾಕ್‍ಮೇಲ್ ಮಾಡಿ ಸೃಷ್ಯ ಜನಾಂಗದ ಆದಿ ನಾರಾಯಣ್ ರವರಿಗೆ ಟಿಕೇಟ್ ಕೊಡಿಸಿದ್ದು, ಇದು ಇವರು ಅಸ್ಪøಶ್ಯ ದಲಿತ ಜನಾಂಗದ ಕಡು ವಿರೋಧಿ ಎಂಬುವುದಕ್ಕೆ ಸಾಕ್ಷಿಯಾಗಿದೆ.
ಅಂಬೇಡ್ಕರ್‍ಗೆ ಧಿಕ್ಕಾರ ಕೂಗಿದ ಕೋಲಾರ ನಗರಸಭೆಯ ಸದಸ್ಯ ಅಂಬರೀಶ್ ಹಾಗೂ ಹಿಂದೆ ದಲಿತರನ್ನು ಲೇಲೇಕರ್ ಶೂಗೆ ಹೋಲಿಸಿ ಅವಮಾನಗೊಳಿಸಿದ ಸಂದರ್ಭದಲ್ಲಿ ಕೊತ್ತೂರು ಮಂಜುನಾಥ್ ವಿರುದ್ಧ ಹೋರಾಟ ಮಾಡಿದ್ದ ದಲಿತ ವಕ್ಕಲೇರಿ ರಾಜಪ್ಪ ರವರುಗಳು ಈಗ ಇಂತಹ ಕೊತ್ತೂರು ಮಂಜುನಾಥ್ ಪರವಾಗಿಯೇ ಪ್ರಚಾರದಲ್ಲಿ ತೊಡಗಿರುವುದು ದಲಿತ ಸಿದ್ಧಾಂತದ ವಿರೋಧ ಅಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಕೊತ್ತೂರು ಮಂಜುನಾಥ್ ರವರಿಂದ ನ್ಯಾಯಾಲಯವು ವಿಧಿಸಿರುವ 92 ಲಕ್ಷ ದಂಡವನ್ನು ತಕ್ಷಣ ವಸೂಲಿ ಮಾಡುವುದರ ಜೊತೆಗೆ ಇವರನ್ನು ಜೈಲಿಗೆ ಕಳುಹಿಸುವ ಕೆಲಸವು ಸರ್ಕಾರವು ತಕ್ಷಣ ಮಾಡಬೇಕೆಂದು ಒತ್ತಾಯಿಸಿರುತ್ತಾರೆ. ಇಂತಹ ದಲಿತ ಮೀಸಲಾತಿಯನ್ನು ಕಬಳಿಸಿ, ಅವಕಾಶವನ್ನು ತಪ್ಪಿಸಿ ವಂಚಿಸಿದ ಇವರಿಗೆ ಕ್ಷೇತ್ರದ ಯಾವೊಬ್ಬ ಸ್ವಾಭಿಮಾನಿ ದಲಿತರು ಹಾಗೂ ಇತರೆ ಪ್ರಜ್ಞಾವಂತ ಮತದಾರರು ಮತ ನೀಡದಿರುವಂತೆ ಮನವಿ ಮಾಡಿಕೊಂಡಿರುತ್ತಾರೆ.
ಕುರುಬ ಸಂಘದ ಮಾಜಿ ರಾಜ್ಯ ನಿರ್ದೇಶಕರಾದ ಕನಕನಪಾಳ್ಯ ಜಟ್ ಅಶೋಕ್ ಮಾತನಾಡಿ ಕೋಲಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಅಭ್ಯರ್ಥಿಗಳಾದ ಸಂದರ್ಭಗಳಲ್ಲಿ ಈಗಿನ ಘಟಬಂಧನ್ ನಾಯಕರು ಏಕೆ ಪ್ರಚಾರ ಮಾಡಿ ಗೆಲ್ಲಿಸಲಿಲ್ಲ? ಈಗ ಸಿದ್ಧರಾಮಯ್ಯನವರು ಬರದೇ ಇದ್ದಾಗ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡಿ ಶಾಸಕರನ್ನಾಗಿ ಮಾಡುವ ಕೆಲಸವನ್ನು ಇವರುಗಳು ಮಾಡದೆ ಜನಾಂಗವನ್ನು ವಂಚಿಸಿ ಅವಕಾಶವನ್ನು ಕಿತ್ತುಕೊಂಡಿದ್ದಾರೆ. ಈಗಿನ ಚುನಾವಣೆ ಹಣ-ಮನುಷ್ಯತ್ವದ ನಡುವೆ ನಡೆಯುತ್ತಿರುವ ಹೋರಾಟವಾಗಿದ್ದು, ಜನರು ಒಳ್ಳೆಯತನದ ಪರವಾಗಿ ನಿಂತು ಗೆಲ್ಲಿಸಬೇಕು. ಮಂಗಳವಾರ ರಘುಪತಿ ಹೊಸಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಸಿ.ಎಂ.ಆರ್.ಗೆ ಜೈಕಾರವನ್ನು ಹಾಕುತ್ತಿದ್ದಾಗ ಈ ಮಾರ್ಗವಾಗಿ ಬಂದ ವಕ್ಕಲೇರಿ ರಾಜಪ್ಪ ಹಾಗೂ ನಗರಸಭೆ ಸದಸ್ಯ ಅಂಬರೀಶ್ ರವರುಗಳು ಇವರ ಮೇಲೆ ದೌರ್ಜನ್ಯ ಮಾಡಿ ಘೋಷಣೆ ಕೂಗದಂತೆ ಧಮಕಿ ಹಾಕಿ ಗೂಂಡಾಗಿರಿ ಪ್ರದರ್ಶಿಸಿರುತ್ತಾರೆ. ಚುನಾವಣೆ ಮುಂಚಿತವಾಗಿಯೇ ಕಾಂಗ್ರೆಸ್‍ನವರ ದಬ್ಬಾಳಿಕೆ ಗೂಂಡಾಗಿರಿ ಈ ಮಟ್ಟಕ್ಕೆ ಇರಬೇಕಾದರೆ ಇವರನ್ನು ಗೆಲ್ಲಿಸಿದರೆ ಕ್ಷೇತ್ರ ಜನತೆಯ ಮೇಲೆ ಇನ್ನೆಷ್ಟು ದಬ್ಬಾಳಿಕೆ ಹಾಗೂ ಗೂಂಡಾಗಿರಿಯನ್ನು ಇವರುಗಳು ಮಾಡಬಹುದು ಎಂದು ಪ್ರಶ್ನಿಸಿರುತ್ತಾರೆ.
ರಾಜ್ಯ ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕುತುಬ್ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿನ ಘಟ ಬಂಧನ್ ನಾಯಕರು ಹಿಂದಿನ ಕೋಲಾರ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ಪಕ್ಷದ ಮುಸ್ಲಿಂ ಅಭ್ಯರ್ಥಿಗೆ ಏಕೆ ಮತ ಹಾಕಿಸಲಿಲ್ಲ. ಮುಸ್ಲಿಂ ಜನಾಂಗವನ್ನು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷವು ಬಳಸಿಕೊಂಡು ಅಧಿಕಾರ ವಂಚಿತರನ್ನಾಗಿ ಮಾಡುತ್ತಿರುವುದು ಜನಾಂಗದ ಅರಿವಿಗೆ ಬಂದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮುನಿಸ್ವಾಮಿರವರನ್ನು ಬೆಂಬಲಿಸಿ ಗೆಲ್ಲಿಸಿದ ಕೊತ್ತೂರು ಮಂಜುನಾಥ್ ಹೇಗೆ ತಾನೇ ಮುಸ್ಲಿಂ ಹಿತೈಷಿಯಾಗಲು ಸಾಧ್ಯ ಎಂದು ಪ್ರಶ್ನಿಸಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ನಗರದ ಹರೀಶ್, ಹೂಹಳ್ಳಿ ನಾರಾಯಣಸ್ವಾಮಿ, ಖಾದ್ರಿಪುರ ಸುಧಾಕರ್, ಕ್ಯಾಲನೂರು ಸುರೇಶ್, ಉಮರ್‍ವುಲ್ಲಾ ಷರೀಫ್, ಬಾರಂಡಹಳ್ಳಿ ನಾರಾಯಣಸ್ವಾಮಿ, ಕಲಾ ರಮೇಶ್, ಸಿರಾಜ್, ಕಠಾರಿಪಾಳ್ಯ ಅಶೋಕ್ ಮುಂತಾದವರು ಭಾಗವಹಿಸಿದ್ದರು.

ಏ.30ರ ಸಮಾವೇಶಕ್ಕೆ ಸಕಲಸಿದ್ದತೆ-ಮೋದಿ ಹೆಸರಿಂದಲೇ ವಿರೋಧಿಗಳಲ್ಲಿ ನಡುಕ ಸರ್ವವ್ಯಾಪಿ, ಸರ್ವಸ್ಪರ್ಶಿ ಆಡಳಿತದ ಮೂಲಕ ಬಿಜೆಪಿ ಭರ್ಜರಿ ಗೆಲುವು-ಮುನಿಸ್ವಾಮಿ

ಕೋಲಾರ:- ಸರ್ವವ್ಯಾಪಿ,ಸರ್ವಸ್ಪರ್ಶಿಯಾಗಿ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿರುವ ವಿಶ್ವವೇ ಮೆಚ್ಚುವ ನಾಯಕರಾದ ಪ್ರಧಾನಿ ಮೋದಿ ಹೆಸರೇ ವಿರೋಧಿಗಳಲ್ಲಿ ನಡುಕ ಹುಟ್ಟಿಸುತ್ತದೆ, ಕೋಲಾರಕ್ಕೆ ಅವರು ಬರುತ್ತಿರುವುದರಿಂದ ಇಲ್ಲಿನ ಪಕ್ಷದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸುನಾಮಿ ಅಪ್ಪಳಿಸಿ, ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಬುಧವಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಕೆಂದಟ್ಟಿ ಸಮೀಪ ಏ.30ರ ಪ್ರಧಾನಿಯವರ ರ್ಯಾಲಿಯ ಪೂರ್ವಸಿದ್ದತೆಗಳನ್ನು ಪರಿಶೀಲಿಸಿ ಅವರು ಮಾತನಾಡಿ, ಪ್ರಧಾನಿಗಳ ಪ್ರಚಾರದಿಂದ ಹಳೆ ಮೈಸೂರು ಜಿಲ್ಲೆಗಳಲ್ಲಿ ಬಿಜೆಪಿ ಮತ್ತಷ್ಟು ಹೆಚ್ಚಿನ ಸ್ಥಾನ ಗಳಿಸಲು ಸಹಹಾರಿಯಾಗಲಿದೆ, ಬಿಜೆಪಿಯ ಅಭಿವೃದ್ದಿ ಕಾರ್ಯಗಳು ಹಾಗೂ ಮೋದಿ ನಾಮಬಲದಿಂದ ನಾನು ಸಂಸದನಾದೆ ಅದೇ ರೀತಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ ಎಂದರು.
ಏ.30 ರಂದು ಬೆಳಗ್ಗೆ 9-30 ಗಂಟೆಗೆ ಮೋದಿ ಆಗಮಿಸಲಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆ ನಡೆಸಲಾಗಿದೆ, ರಾಜ್ಯದ ದೇವಮೂಲೆಯಾಗಿರುವ ಇಲ್ಲಿ ಸಮಾವೇಶ ನಡೆಯುತ್ತಿದ್ದು, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ,ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ ಸುಮಾರು 2.5 ಲಕ್ಷ ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಳೆದ ಒಂದು ವಾರದಿಂದು ಸುಮಾರು 150 ಎಕರೆ ಪ್ರದೇಶದಲ್ಲಿ ಸಿದ್ದತೆಗಳನ್ನು ನಡೆಸಿದ್ದು, ಮೂರು ಹೆಲಿಪ್ಯಾಡ್ ಸಿದ್ದವಾಗುತ್ತಿದೆ, ಮಳೆ,ಬಿಸಿಲಿನಿಂದ ರಕ್ಷಣೆಗೆ ಸುಸಜ್ಜಿತ ಪೆಂಡಾಲ್ ನಿರ್ಮಾಣಗೊಳ್ಳುತ್ತಿದ್ದು, 10ಕ್ಕೂ ಹೆಚ್ಚು ಜೆಸಿಬಿಗಳು, ಐದು ಕ್ರೈನ್‍ಗಳು ಸಿದ್ದತಾ ಕಾರ್ಯದಲ್ಲಿ ಬಳಕೆಯಾಗುತ್ತಿವೆ ಎಂದರು.


ಮೋದಿ ನೋಡಲು ಜನರ ಕಾತುರ


135 ಕೋಟಿ ಜನರಿಗೆ ಉಚಿತ ಸ್ವದೇಶಿ ತಯಾರಿತ ವ್ಯಾಕ್ಸಿನ್ ಒದಗಿಸಿ, ಇಡೀ ವಿಶ್ವಕ್ಕೆ ಮಾರಣಾಂತಿಕವಾಗಿದ್ದ ಕೋವಿಡ್‍ನಿಂದ ಜೀವ ಉಳಿಸಿದ ಮೋದಿ ಕಾಣಲು ಜನತೆ ಸ್ವಯಂಪ್ರೇರಿತರಾಗಿ ಬರುತ್ತಾರೆ ಎಂದರು.
ಕಿಸಾನ್ ಸಮ್ಮಾನ್ ಮೂಲಕ ರೈತರ ಖಾತೆಗಳಿಗೆ 10 ಸಾವಿರ ಹಾಕುತ್ತಿರುವುದು, ಆಯುಷ್ಮಾನ್ ಭಾರತ್, ಸ್ತ್ರೀಶಕ್ತಿ ಸಂಘಗಳಿಗೆ ಸೌಲಭ್ಯ, ಜಲಜೀವನ್ ಮಿಷನ್‍ನಡಿ ಪ್ರತಿ ಮನೆಗೂ ನಳದ ಮೂಲಕ ನೀರು, ಷಟ್ಪತ ರಸ್ತೆಗೆ ಅನುದಾನ, ಅಮೃತಸರೋವರ ಯೋಜನೆ, ಶ್ರೀನಿವಾಸರಪುರ ಬೈಪಾಸ್ ರಸ್ತೆಗೆ 250 ಕೋಟಿ, ಚಿಂತಾಮಣಿ ಬೈಪಾಸ್ ರಸ್ತೆಗೆ 256 ಕೋಟಿ ಹೀಗೆ ವಿವಿಧ ಯೋಜನೆಗಳನ್ನು ಜಿಲ್ಲೆಗೆ ನೀಡಿರುವ ಮೋದಿ ಕಾಣಲು ಜನರಲ್ಲಿ ಕಾತರವಿದೆ ಎಂದರು.
ಭೋವಿ,ಗೊಲ್ಲ,ವಕ್ಕಲಿಗ ಬಲಿಜ,ಬ್ರಾಹ್ಮಣ,ವಿಶ್ವಕರ್ಮ ಹೀಗೆ ಎಲ್ಲಾ ಸಮುದಾಯಗಳ ಅಭಿವೃದ್ದಿ ನಿಗಮ ನೀಡಿರೋದು ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೂ ನ್ಯಾಯ ನೀಡಿದೆ,ಅಲ್ಪಸಂಖ್ಯಾತರು ಬೆಂಬಲಿಸಲಿದ್ದಾರೆ ಎಂದರು.


ಜಿಲ್ಲೆಯ ಹಲವು ಬೇಡಿಕೆಗೆ ಮನವಿ


ಕೋಲಾರ ರಿಂಗ್ ರಸ್ತೆ, ಮೆಡಿಕಲ್ ಕಾಲೇಜು, ದೊಡ್ಡ ಕಾರ್ಖಾನೆಗಳು, ರೈತರಿಗೆ ಕೃಷಿ ಸಂಶೋಧನಾ ಕೇಂದ್ರ, ಚಿನ್ನದ ಗಣಿ ಕಾರ್ಮಿಕರ ರಕ್ಷಣೆ, ಕೆಜಿಎಫ್ ಚಿನ್ನದ ಗಣಿ ಹಳೆ ವೈಭವ ಮರುಕಳಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಕುರಿತು ಗಮನ ಸೆಳೆಯುವುದಾಗಿ ತಿಳಿಸಿ, ಬೆಮೆಲ್ ಖಾಸಗೀಕರಣವಿಲ್ಲ ಎಂದು ಈಗಾಗಲೇ ಸಚಿವ ರಾಜನಾಥಸಿಂಗ್ ಸ್ಪಷ್ಟಪಡಿಸಿರುವುದರಿಂದ ಅದರ ಕುರಿತು ಮತ್ತೆ ಪ್ರಸ್ತಾಪ ಅಗತ್ಯವಿಲ್ಲ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಮೋದಿಗೆ ಸರಿಸಾಟಿಯಾಗಲು ಸಾಧ್ಯವೇ? ರಾಹುಲ್ ಇರುವೆಯಾದರೆ ಮೋದಿ ಆನೆಯಿದ್ದಂತೆ ಅವರ ಹೆಸರೇ ಶತ್ರುಗಳ ಎದೆಯಲ್ಲಿ ನಡುಕ ಸೃಷ್ಟಿಸುತ್ತದೆ, ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ ಆದರೆ ರಾಹುಲ್ ವಿದೇಶಗಳಿಗೆ ಹೋಗಿ ದೇಶದ ಮಾನ ಹರಾಜು ಹಾಕುವ ಮೂಲಕ ಕಾಂಗ್ರೆಸ್ ಸಂಸ್ಕøತಿಯನ್ನು ಬಿಂಬಿಸಿದ್ದಾರೆ ಎಂದರು.
ಕ್ಲಾಕ್ ಟವರ್‍ಮೇಲೆ ನಮ್ಮ ರಾಷ್ಟ್ರಧ್ವಜ ಹಾರಿಸಿದ್ದನ್ನು ಹೇಳಿಕೊಂಡು ಕಾಂಗ್ರೆಸ್ ಮತ ಕೇಳಲು ಹೊರಟಿರುವುದು ನಾಚಿಕೇಗೇಡು ಎಂದ ಅವರು, ರಾಷ್ಟ್ರಧ್ವಜ ಹಾರಿಸಿದ್ದು ತಪ್ಪೇ ಎಂದು ಪ್ರಶ್ನಿಸಿದರು.


ಕೆ.ವೈ.ನಂಜೇಗೌಡ ವಿರುದ್ದ ವಾಗ್ದಾಳಿ


ಮಾಲೂರು ಶಾಸಕ ಕೆ.ವೈ.ನಂಜೇಗೌಡರ ವಿರುದ್ದ 50 ಕೇಸ್ ಇದೆ, ಅಕ್ಕಿ,ಕಲ್ಲು,ಮಣ್ಣು,ಹಾಲು,ಮೊಸರು,ಬೆಣ್ಣೆ, ಪೆಟ್ರೋಲ್ ಎಲ್ಲವೂ ತಿಂದಿದ್ದಾರೆ, ಉಪ್ಪು ತಿಂದೋರು ನೀರು ಕುಡಿಯಲೇ ಬೇಕು, ಖಾಯಂ ಆಗಿ ಜೈಲು ಸೇರುವ ಕಾಲ ಹತ್ತಿರವೇ ಇದೆ, ನಾಳೆಯಿಂದ ನಾನು ಮಾಲೂರು ತಾಲ್ಲೂಕಿನಲ್ಲಿ ಪ್ರಚಾರ ನಡೆಸುವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ,ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ದಿಶಾಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ನಗರಸಭಾ ಸದಸ್ಯ ಪ್ರವೀಣ್ ಗೌಡ,ಬಿಜೆಪಿ ಮುಖಂಡರಾದ ಗುರುನಾಥರೆಡ್ಡಿ,ಬೆಗ್ಲಿ ಸಿರಾಜ್,ಮಮತಾ, ಗಾಂಧಿನಗರ ವೆಂಕಟೇಶ್, ನಗರ ಪ್ರ.ಕಾರ್ಯದರ್ಶಿ ಮಂಜುನಾಥ್,ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಅಮರ್,ಅನಿಲ್‍ಬಾಬು,ಸತೀಶ್ ಮತ್ತಿತರರು ಉಪಸ್ಥಿತರಿದ್ದರು.