ಶ್ರೀನಿವಾಸಪುರ ಗಲ್‌ಪೇಟೆ – ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ – ಬಾಲಕ ಗಂಭೀರವಾಗಿ ಗಾಯಾಳು – ಬಾಲಕನ್ನು ರಕ್ಷಿಸಿದ ಪೊಲೀಸ್ ಪೇದೆ

ಶ್ರೀನಿವಾಸಪುರ : ಪೊಲೀಸ್ ಪೇದೆಯ ಸಾಹಸ ಮತ್ತು ಮಾನವೀಯತೆ ಮೆರೆದಿದ್ದು, ನಗರದ ಚಿಕ್ಕಬಳ್ಳಾಪುರ ರಸ್ತೆಯ ರಹಮತ್ ನಗರದಲ್ಲಿ ತಡರಾತ್ರಿಯಲ್ಲಿ ಈ ದುರ್ಘಟನೆ ಜರುಗಿದೆ.

ನಗರದ ಗಲ್‌ಪೇಟೆ ಪೊಲೀಸ್ ಠಾಣೆಯ ಪೇದೆ ಹೆಚ್.ರಾಜಣ್ಣ ಮತ್ತು ಚಾಲಕ ಡಿ.ಎ.ಆರ್‌ನ ಮಂಜುನಾಥಶೆಟ್ಟಿ ಅವರು ೧೧೨ ವಾಹನದಲ್ಲಿ ರಾತ್ರಿ ಗಸ್ತಿಗೆ ನಿಯೋಜನೆ ಗೊಂಡಿದ್ದರು.
ಶ್ರೀನಿವಾಸಪುರ ವೃತ್ತದಿಂದ ಅರಹಳ್ಳಿ ಕಡೆ ೧೧೨ ವಾಹನ ಹೋಗುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ಮುಂಜಾನೆ ೩.೨೬ರ ಸಮಯದಲ್ಲಿ ಸುಮಾರು ೨೦ ರಿಂದ ೨೫ ಬೀದಿ ನಾಯಿಗಳ ಗುಂಪೊದು ದಾಳಿಯ ದೃಶ್ಯ ಕಂಡು ಬಂದು ಇದರ ಜೊತೆಗೆ ಕಿರುಚಾಟದ ಶಬ್ದವೂ ಕೇಳಿಬಂತು.

ಈ ದೃಶ್ಯವನ್ನು ಕಂಡು ಕೇಳಿದ ಪೇದೆ ರಾಜಣ್ಣ ತಕ್ಷಣವೇ ವಾಹನದಿಂದ ಇಳಿದು ದಾಳಿ ಮಾಡಿದ್ದ ಬೀದಿ ನಾಯಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಇದೇ ನಾಯಿಗಳು ಪೇದೆಯ ಮೇಲೆ ಪ್ರತಿದಾಳಿಗೆ ಮುಂದಾಗಿದ್ದು, ಇದ್ಯಾವುದನ್ನೂ ಲೆಕ್ಕಿಸದ ಪೇದೆ ರಾಜಣ್ಣ ಕಲ್ಲುಗಳಿಂದ ಹೊಡೆದು ಲಾಠಿಯಿಂದ ನಾಯಿಗಳನ್ನು ಅಟ್ಟಾಡಿಸಿ ಓಡಿಸಿದ್ದಾರೆ.

ಈ ಸಂದರ್ಭದಲ್ಲಿ ರಕ್ತದ ಮಡುವಿನಲ್ಲಿ ಬಾಲಕನೋರ್ವ ಕಂಡು ಬಂದಿದ್ದು ತೊಟ್ಟಿದ್ದ ಬಟ್ಟೆಗಳು ಕಿತ್ತುಬರುವಂತೆ ದೇಹದ ವಿವಿಧ ಭಾಗಗಳನ್ನು ಕಚ್ಚಿ ರಕ್ತಸ್ರಾವಕ್ಕೆ ಒಳಗಾಗಿದ್ದ ಬಾಲಕನನ್ನು ಬಾಚಿಕೊಂಡು ತಕ್ಷಣವೇ ಇಲಾಖೆಯ ವಾಹನದಲ್ಲಿ ನಗರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ರಾತ್ರಿ ಕರ್ತವ್ಯದಲ್ಲಿದ್ದ ಡಾ.ಕೆ.ಎಂ.ವರ್ಣಶ್ರೀ ಅವರು ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಬಾಲಕನಿಗೆ ತಕ್ಷಣವೇ ಅಗತ್ಯ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಅಪಾಯದಿಂದ ಪಾರುಮಾಡಿದ್ದಾರೆ.
ಸದರಿ ಬಾಲಕನನ್ನು ವಿಚಾರಿಸಲಾಗಿ ಈತ ನಗರದ ರಹಮತ್ ನಗರದ ನಿವಾಸಿ ಅರಹಳ್ಳಿ ವೃತ್ತದಲ್ಲಿ ಟೀ ಅಂಗಡಿ ಇಟ್ಟುಕೊಂಡಿರುವ ಬಾಬು ಅವರ ಮಗ ೮ ವರ್ಷದ ಜಾಫರ್ ಎಂದು ತಿಳಿದು ಬಂದಿದೆ.  

ನಂತರ ಅವರು ಮನೆಯವರಿಗೆ ಮಾಹಿತಿ ನೀಡಲಾಗಿ ಆತ ರಂಜಾನ್ ಹಬ್ಬದ ಹಿನ್ನಲೆಯಲ್ಲಿ ನಮಾಜ್ ಮುಗಿಸಿ ಉಪವಾಸವಿದ್ದ ಈತ ತಡರಾತ್ರಿ ಗೆಳೆಯರ ಜೊತೆ ತಿರುಗಾಟಕ್ಕೆ ಹೋಗಿದ್ದು, ನಂತರ ಒಬ್ಬೊಂಟಿಯಾಗಿ ಬರುವಾಗ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದು ತಿಳಿದುಬಂತು.
ಬೀದಿ ನಾಯಿಗಳ ದಾಳಿಗೆ ತುತ್ತಾದ ಒಬ್ಬೊಂಟಿ ಬಾಲಕನ ಜೀವ ಉಳಿಸಿದ ಪೇದೆ ರಾಜಣ್ಣ ಅವರ ಸಾಹಸ ಮತ್ತು ಮಾನವೀಯತೆಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಬಾರ್ಕೂರು ಬೆಣ್ಣೆ ಕುದ್ರುವಿನ ಜೆಸ್ವಿಟಾ ಡಾಯಸ್ ಗೆ ಈ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ರೇಂಕ್

ಬಾರ್ಕೂರು ಬೆಣ್ಣೆ ಕುದ್ರುವಿನ ಚಾರ್ಲೆಟ್ ಮತ್ತು ಜೇಮ್ಸ್ ಡಾಯಸ್ ದಂಪತಿಯ ಪುತ್ರಿ ಜೆಸ್ವಿಟಾ ಡಾಯಸ್, ಈ ಸಾಲಿನ ಕರ್ನಾಟಕ ರಾಜ್ಯ ಪಿಯುಸಿ ಪರೀಕ್ಷೆಯಲ್ಲಿ, 600ಕ್ಕೆ 595 ಅಂಕ ಗಳಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ರೇಂಕ್ ಪಡೆದಿದ್ದು, ರಾಜ್ಯ ಮಟ್ಟದಲ್ಲಿ ದ್ವಿತೀಯ ರೇಂಕ್ ಪಡೆದಿದ್ದಾಳೆ. ಈಕೆ. ಉಡುಪಿಯ ಪೂರ್ಣಪ್ರಜ್ಞ ಪಿಯು ವಿದ್ಯಾರ್ಥಿನಿಯಾಗಿದ್ದಾಳೆ..

    ಈ ಅಪೂರ್ವ ಸಾಧನೆಗೆ ಎಲ್ಲಡೆಯಿಂದ ಪ್ರಶಂಸೆಗಳು ಬರುತ್ತೀವೆ, ಜನನಡಿ ವಾರ್ತಾಸಂಸ್ಥೆ ಇವಳ ಸಾಧನೆಗೆ ಅಭಿನಂದಿಸುತ್ತೀದೆ.

ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು – ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ 97% ಫಲಿತಾಂಶ


ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜು 2022-23ನೇ ಶೈಕ್ಷಣಿಕ ವರ್ಷದ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 97% ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ ಪ್ರಾಂಜಲ್ ಮ್ಯಾಥ್ಯೂ ಲೋಬೋ (96.16%), ಶುಭಶ್ರೀ (95.5%) ದಿಶಾ.ಜೆ.ಶೆಟ್ಟಿ (93.33%)ಅತ್ಯತ್ತಮ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಶಮಿ (97.66%) ನಿಶ್ಮಿತಾ(96), ಪ್ರಣಮ್ಯ ಛಾತ್ರ(95.5%) ಅತ್ಯತ್ತಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ವಿಶೇಷ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಶಿಕ್ಷಕರು, ಶಿಕ್ಷಕೇತರರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕುಂದಾಪುರದ ಸೈಂಟ್ ಮೇರಿಸ್ ಪ.ಪೂ. ಕಾಲೇಜ್ – ಪಿಯುಸಿಯಲ್ಲಿ ಶೇಕಡಾ 97 ಫಲಿತಾಂಶ

ಕುಂದಾಪುರದ ಸೈಂಟ್ ಮೇರಿಸ್ ಪ.ಪೂ. ಕಾಲೇಜಿನ 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಶೇಕಡಾ 100 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 93.10 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಕು. ರೀಮಾ ಮಿನೇಜಸ್ ಶೇಕಡಾ 96.83 ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮಳಾಗಿ ಕೀರ್ತಿ ತಂದಿದ್ದಾಳೆ, ಅಭಿನಂದನೆಗಳನ್ನು ಸಲ್ಲಿಸುತ್ತೇವೆ
.