ಕುಂದಾಪುರ : ಧರ್ಮಭಗಿನಿ ಮೊನಿಕಾರ ಧಾರ್ಮಿಕ ವ್ರತ್ತಿಯ ಸುವರ್ಣ ಮಹತೋತ್ಸವ


ಕುಂದಾಪುರ, ಎ.17: ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಕಡೆಯ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಇದೀಗ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನಲ್ಲಿ ತಮ್ಮ ನಿವ್ರತ್ತಿ ಜೀವನವನ್ನು ಸಾರುತ್ತಾ ಕಾನ್ವೆಂಟ್ ಮತ್ತು ಕುಂದಾಪುರ ರೋಜರಿ ಚರ್ಚಿನಲ್ಲಿ ಧಾರ್ಮಿಕ ಸೇವೆ ನೀಡುತ್ತಿರುವ ಧರ್ಮಭಗಿನಿ ಮೊನಿನಿಕಾರು ಧಾರ್ಮಿಕ ದೀಕ್ಷೆಯ ಸುವರ್ಣ ಮಹತೋತ್ಸವವನ್ನು ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿಯರು ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.
ಪವಿತ್ರ ಬಲಿದಾನದ ನೇತ್ರತ್ವವನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿಕೊಂಡಿದ್ದು, ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ದೇವರ ವಾಕ್ಯವನ್ನು ವಿಮರ್ಶಿಸಿ “ಸಿಸ್ಟರ್ ವೆರೊನಿಕಾರಿಗೆ ಯೇಸು ಕ್ರಿಸ್ತರು ತನ್ನ ಧರ್ಮಸಭೆಯಲ್ಲಿ ಸೇವೆ ನೀಡಲು ಆರಿಸಿಲ್ಪಟ್ಟವರಾರಿದ್ದು, ಹೀಗೆ ಧರ್ಮಭಗಿನಿಯಾದ ಮೇಲೆ ಯೇಸುಕ್ರಿಸ್ತರಿಗಾಗಿ ಸಮರ್ಪಿತ ಜೀವನ ಸಾರಿದವರು. ಅವರು ಧರ್ಮಭಗಿನಿಯ ಜೀವನ ಸಾರುವಾಗ, ಶಿಕ್ಷಣ, ಧಾರ್ಮಿಕ ಸೇವೆ, ಧರ್ಮಗುರುಗಳು ಪವಿತ್ರ ಬಲಿದಾನ ಅರ್ಪಿಸುವ ಮುನ್ನ ಅವರು ಮಾಡುವ ವ್ಯವಸ್ಥೆ, ದೇವ ಪೀಠದ ಹಿಂದಿನ ಕೋಣೆಯಲ್ಲಿನ ಏರ್ಪಾಟು ಇಂತಹ ವಿವಿಧ ಥರಹದ ಸೇವೆಗಳನ್ನು ನೀಡಿದ್ದು, ಈವಾಗಲೂ ನೀಡುತ್ತಾ ಇರುವ ಸಿಸ್ಟರ್ ಮೊನಿಕಾರ ಬದುಕು ದೇವರ ಮೆಚ್ಚುಗೆಗೆ ಪಾತ್ರವಾಗಿದೆ, ಅವರು ಧಾರ್ಮಿಕ ವತ್ತಿಯ ದೀಕ್ಷೆ ಪಡೆಯುವಾಗ ಸರಳತೆ, ಸಮರ್ಪಣೆ, ತ್ಯಾಗ ಈ ಮೂರು ಆದರ್ಶತೆಯ ಧ್ಯೇಯದೊಂದಿಗೆ ಜೀವನ ಸಾಗಿಸುತ್ತೇನೆ’ ಎಂದು ಪ್ರತಿಜ್ಞಾವಿಧಿಯನ್ನು ಮಾಡಿದ್ದರು, ಅವರು ಇಂದಿಗೂ ಅದೇ ಧೇಯ್ಯದೊಂದಿಗೆ ಜೀವಿಸಿದ್ದಾರೆ” ಎಂದು ಬಣ್ಣಿಸಿದರು.
ತದ ನಂತರ ನಡೆದ ಚರ್ಚಿನ ಸಭಾಭವನದಲ್ಲಿ ನಡೆದ ಅಭಿನಂದ ಸಮಾರಂಭದಲ್ಲಿ ಕುಂದಾಪುರ ಕಾನ್ವೆಂಟಿನ ಹಿರಿಯ ಧರ್ಮಭಗಿನಿ ಸಿಸ್ಟರ್ ಆಶಾ “ಸಿಸ್ಟರ್ ಮೊನಿಕಾರು ನಮಗೆಲ್ಲರಿಗೂ ಆದರ್ಶಪ್ರಾಯರು, ಅವರೊಬ್ಬ ಉತ್ತಮ ಶಿಕ್ಷಕಿಯಾಗಿದ್ದು, ಅಪಾರ ದೈವ ಭಕ್ತಿಯುಳ್ಳವರು, ಅವರ ಮುಂದಿನ ಜೀವನದಲ್ಲಿ ದೇವರು ಇನ್ನೂ ಹೆಚ್ಚಿನ ಸೇವೆ ಮಾಡಲು ಶಕ್ತಿ ನೀಡಲಿ” ಎಂದು ಶುಭ ಕೋರಿದರು.
ಕಾರ್ಮೆಲ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥೆ ಸಿಸ್ಟರ್ ಶಮಿತಾ “ಸಿಸ್ಟರ್ ಮೊನಿಕಾರನ್ನು ಎಲ್ಲ ಧರ್ಮಭಗಿನಿಯರು ಗೌರವ ಭಾವದಿಂದ ನೋಡುತ್ತಾರೆ, ಅವರು ಶಿಸ್ಯರು ಮೆಚ್ಚಿದ ಸಿಸ್ಟರ್, ಅವರ ವಿದ್ಯಾರ್ಥಿಗಳು ನಮಗೆ ಗಣಿತ ಕಲಿಸಿದ ಶಿಕ್ಷಕಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರು ವಿದ್ಯಾರ್ಥಿಗಳಿಗೆ ಮನದಟ್ಟಾಗುವಹಾಗೆ ಕಲಿಸುವುದು ಅವರ ವೈಶಿಷ್ಠತೆ, ಧಾರ್ಮಿಕ ವ್ರತ್ತಿಯಲ್ಲಿ ಕೂಡ ಆದರ್ಶರು, ಧರ್ಮಭಗಿನಿಯಾಗಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಯೇಸು ಕ್ರಿಸ್ತರಿಗಾಗಿ ಸಮರ್ಪಿಸಿಕೊಂಡವರು” ಎಂದು ಅವರನ್ನು ಗೌರವಿಸಿದರು.
ಕುಂದಾಪುರ ರೋಜರಿ ಚರ್ಚ್ ಪ್ರಧಾನ ಧರ್ಮಗುರು ಸ್ಟ್ಯಾನಿ ತಾವ್ರೊ ‘ಸಿಸ್ಟರ್ ಮೊನಿಕಾರ ಬಗ್ಗೆ ಹೇಳುವಾಗಾ ಅವರು ಒರ್ವ ಮಹಾ ತಾಯಿ ಹಾಗೇ ಕಾಣುತ್ತಾರೆ, ಅವರು ಈ ಪ್ರಾಯದಲ್ಲಿಯೂ ಅವರು ನಾವು ಧರ್ಮಗುರುಗಳು ಬಲಿದಾನ ಅರ್ಪಿಸುವ ಮುನ್ನ ಅವರು ಮಾಡುವ ಸೇವೆ ಬಹು ಅಮೂಲ್ಯ” ಎಂದು ಹೇಳಿದರು. ಸಿಸ್ಟರ್ ಮೊನಿಕಾ ಇವರ ಕುಟುಂಬದ ಪರವಾಗಿ ಪ್ರಿನ್ಸಿಟಾ ಡಿಸೋಜಾ ಶುಭ ಹಾರೈಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ ಸಿಸ್ಟರ್ ಮೊನಿಕಾರವರನ್ನು ಸಂತ ಜೋಸೆಫ್ ಕಾನ್ವೆಂಟ್ ಪರವಾಗಿ, ಕುಂದಾಪುರ ಹೋಲಿ ರೋಜರಿ ಚರ್ಚ್ ಪರಾವಾಗಿ, ಕುಟುಂಬದ ಪರವಾಗಿ ಸಿಸ್ಟರ್ ಮೊನಿಕಾರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಿಸ್ಟರ್ ಮೊನಿಕಾರ 75 ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಸಿಸ್ಟರ್ ಮೊನಿಕಾ ಈ ಸಂಭ್ರಮವನ್ನು ಏರ್ಪಡಿಸಿ ನಡೆಸಿಕೊಟ್ಟದಕ್ಕೆ, ಮತ್ತು ನನ್ನ ಧರ್ಮಭಗಿನಿಯ ಜೀವನವನ್ನು ನಡೆಸಲು ಸಾಗಿಸಲು ಸಹಕರಿಸಿದವರಿಗೆಲ್ಲರಿಗೂ ಸ್ಮರಿಸಿ, ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಆಚರಣೆಯಲ್ಲಿ ಕೋಟ ಚರ್ಚಿನ ಧರ್ಮಗುರು ವಂ|ಆಲ್ಫೊನ್ಸ್ ಡಿಲೀಮಾ. ಕಟ್ಕೆರೆ ಬಾಲ ಯೇಸುವಿನ ಆಶ್ರಮದ ಧರ್ಮಗುರು ವಂ| ಫ್ರಾನ್ಸಿಸ್ ಡಿಸೋಜಾ, ಹಲವಾರು ಉಡುಪಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಭಗಿನಿಯರು ಕುಟುಂಬಸ್ಥರು, ಕುಂದಾಪುರ ಚರ್ಚಿನವರು ಹಾಜರಿದ್ದರು ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸಂಗೀತ ಸ್ವಾಗತಿಸಿದರು, ಸಿಸ್ಟರ್ ಪ್ರೇಮಿಕಾ ನಿರೂಪಿಸಿದರು.

ಪೋಲಿಸರ ನಿರ್ಲಕ್ಷತೆಯಿಂದ 6 ವರ್ಷ ಕುಟುಂಬದಿಂದ ದೂರವಾದ ಪಾಂಡಿಚೇರಿಯ ಯುವತಿ

ಮಂಗಳೂರಿನ ಸುರತ್ಕಲ್ ನಲ್ಲಿ ಪಾಂಡಿಚೇರಿಯ ಕುಟುಂಬವೊಂದು ದಿನಗೂಲಿ ಮಾಡಿ ಜೀವಿಸುತ್ತಿತ್ತು . 2017ರಲ್ಲಿ ಕಲ್ಯಾಣಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದುರದೃಷ್ಟವಶಾತ್, ಪೊಲೀಸರು ಅವರ ದೂರನ್ನು ಸ್ವೀಕರಿಸಲಿಲ್ಲ ಮತ್ತು ತಂದೆಯೂ ಅಪಘಾತಕ್ಕೊಳಗಾಗಿ ಮರಣ ಹೊಂದಿದರು.ತದನಂತರ ಅಸಹಾಯಕ ತಾಯಿ ಮತ್ತು ಮಗ ಪಾಂಡಿಚೇರಿಗೆ ಹಿಂತಿರುಗಿದರು. ಕಲ್ಯಾಣಿಯ ಹುಡುಕಾಟ ಮತ್ತು ಆಕೆ ಮರಳಿ ಬರುವ ಭರವಸೆ ಅವರಲ್ಲಿ ಬಲವಾಗಿತ್ತು. ಕಲ್ಯಾಣಿಯನ್ನು ಮತ್ತೆ ಪಡೆಯುವ ಅವರ ವಿಶ್ವಾಸವು ಆಕೆಯು ಕಾಣೆಯಾಗಿ 6 ​​ವರ್ಷಗಳ ನಂತರ ಮಂಜೇಶ್ವರದ ಸ್ನೇಹಾಲಯದ ಮೂಲಕ ನಿಜವಾಯಿತು.


2017ರಲ್ಲಿ ನಾಪತ್ತೆಯಾಗಿದ್ದ ಕಲ್ಯಾಣಿಯನ್ನು ಕಂಕನಾಡಿ ಪೊಲೀಸರು ರಕ್ಷಿಸಿ ಪ್ರಜ್ಞಾ ಕೇಂದ್ರಕ್ಕೆ ಕರೆತಂದಿದ್ದರು. ಮತ್ತು
2023 ಎಪ್ರಿಲ್‌ನಲ್ಲಿ ಆಕೆ ಐದು ವರ್ಷಗಳಿಗೂ ಹೆಚ್ಚು ಕಾಲ ಆಶ್ರಯದಲ್ಲಿದ್ದ ಪ್ರಜ್ಞಾ ಕೇಂದ್ರದಿಂದ ಮಂಜೇಶ್ವರದ
ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಆಕೆಯ ಮನೋವೈದ್ಯಕೀಯ ಸಮಸ್ಯೆಗಳ ಚಿಕಿತ್ಸೆಗಾಗಿ ಸ್ಥಳಾಂತರಗೊಂಡಳು. ಆಕೆಗೆ ಚಿಕಿತ್ಸೆಯ ಜೊತೆಗೆ ಸ್ನೇಹಾಲಯ ತಂಡವು ವಿವಿಧ ಚಿಕಿತ್ಸಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಿತು. ಆಕೆಯಿಂದ ಕೆಲವು ವಿವರಗಳನ್ನು ಪಡೆದ ನಂತರ, ತಂಡವು ಸ್ಥಳೀಯ ಸಂಸ್ಥೆ ಮತ್ತು ಪಾಂಡಿಚೇರಿಯ ಜನರನ್ನು ಸಂಪರ್ಕಿಸಿ ಆಕೆಯ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಯಿತು . ಅಸಹಾಯಕ
ತಾಯಿ ಮತ್ತು ಮಗನ ಭರವಸೆ, ನಂಬಿಕೆ ಮತ್ತು ಕಲ್ಯಾಣಿ ಯನ್ನು ಹಿಂಪಡೆಯುವ ಕಾಯುವಿಕೆ ಸುಳ್ಳಾಗಲಿಲ್ಲ.ಅವರು ತಮ್ಮ ಪ್ರೀತಿಯ ಕಲ್ಯಾಣಿಯನ್ನು ಮತ್ತೆ ಸೇರಿಕೊಂಡರು . ಅವರಿಗೆ ಸ್ನೇಹಾಲಯದಿಂದ ಕರೆ ಬಂದಿತು ಮತ್ತು ಅವರು ಸ್ನೇಹಾಲಯವನ್ನು ತಲುಪಲು ಕೇರಳಕ್ಕೆ ತೆರಳಿದರು. ಕಲ್ಯಾಣಿ ತನ್ನ ಪ್ರೀತಿಯ ಕುಟುಂಬದೊಂದಿಗೆ ಮತ್ತೆ ಒಂದಾಗುತ್ತಿದ್ದಂತೆ ಸ್ನೇಹಾಲಯ ಕುಟುಂಬವು ಇಂತಹ ಉತ್ತಮ ಮತ್ತು ಸಂತೋಷದ ಕ್ಷಣಕ್ಕೆ ಸಾಕ್ಷಿಯಾಯಿತು.
ಕಲ್ಯಾಣಿಯ ಪುನರ್ಮಿಲನದಲ್ಲಿ ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದ ಸ್ನೇಹಾಲಯದ ಸಂಸ್ಥಾಪಕ ಸಹೋದರ
ಜೋಸೆಫ್ ಕ್ರಾಸ್ತಾ ಅವರಿಗೆ ಕಲ್ಯಾಣಿ ಮತ್ತು ಅವರ ಕುಟುಂಬ ಕೃತಜ್ಞತೆ ಸಲ್ಲಿಸಿತು.