“Samrakshana” Community Service Activity / “ಸಂರಕ್ಷಣ್” ಸಮಾಜ ಸೇವಾ ಕಾರ್ಯಕ್ರಮ

As a part of Founders day Celebration of IMJ Institutions, Moodlakatte , many Community Service activities are under taken. ‘Samrakshana’ is one such activity which was done in association with town municipality, Kundapura, which was aimed to clean up Kundapura city. Clean drive was done from shasthri circle to Kundapura midtown 50 students of IMJ Institutions and Faculties Prof. Shabeena, Mr. Praveen Kharvi (PD) from IMJISC, Prof. Chaithra , Prof. Ashritha from MITK participated in the event.

“ಸಂರಕ್ಷಣ್” ಸಮಾಜ ಸೇವಾ ಕಾರ್ಯಕ್ರಮ

ಮೂಡ್ಲಕಟ್ಟೆ ಐ.ಎಂ.ಜೆ ವಿದ್ಯಾಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುಂದಾಪುರ ನಗರಸಭೆಯ ಸಹಯೋಗದಲ್ಲಿ “ಸಂರಕ್ಷಣ್” ಹೆಸರಿನಲ್ಲಿ ಕುಂದಾಪುರ ಪಟ್ಟಣವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಲಾಯಿತು. ಶಾಸ್ತ್ರಿ ವೃತ್ತದಿಂದ ಕುಂದಾಪುರ ಪಟ್ಟಣದ ಮಧ್ಯದವರೆಗೆ ಸ್ವಚ್ಛತಾಕಾರ್ಯ ಮಾಡಲಾಯಿತು. ಐಎಂಜೆ ವಿದ್ಯಾಸಂಸ್ಥೆಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಾದ ಐಎಂಜೆಐಎಸ್‍ಸಿಯ ಪ್ರೋ. ಶಬೀನಾ ಮತ್ತು ಶ್ರೀ ಪ್ರವೀಣ ಖಾರ್ವಿ (ದೈಹಿಕ ಶಿಕ್ಷಕ), ಎಂ.ಐ.ಟಿ.ಕೆಯ ಪ್ರೊ. ಆಶ್ರಿತಾ ಹಾಗೂ ಪ್ರೊ. ಚೈತ್ರಾರವರು ಭಾಗವಹಿಸಿದ್ದರು.

ನಾಗ್ಪುರದ ಕುವರಿಯನ್ನು ಕುಟುಂಬದೊಂದಿಗೆ ಒಂದುಗೂಡಿಸಿದ ಸ್ನೇಹಾಲಯ


ದಿನಾಂಕ 12.04.2023 ರಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ದಕ್ಷಿಣ ರೈಲ್ವೇ/ಮಂಗಳೂರು ಜಂಕ್ಷನಿನ ರೈಲ್ವೇ ಸಂರಕ್ಷಣಾ ಪಡೆ ಪೋಸ್ಟ್ ಕಮಾಂಡರ್ ಅವರ ಕಚೇರಿಯಿಂದ. ಅನುಮಾನಾಸ್ಪದ ರೀತಿಯಲ್ಲಿ ಅಡ್ಡಾಡುತ್ತಿದ್ದ ಯುವತಿಯನ್ನು ರಕ್ಷಿಸಿ,ಆರೈಕೆ ಮತ್ತು ಚಿಕಿತ್ಸೆ ನೀಡಲು ವಿನಂತಿಸಿ ಕರೆ ಬಂದಿತು. ಆಕೆ ತನ್ನ ಬ್ಯಾಗ್ ಮತ್ತು ದಾಖಲೆಗಳನ್ನು ಕಳೆದುಕೊಂಡು ಗಾಬರಿ ಮತ್ತು ಖಿನ್ನತೆಗೆ ಒಳಗಾಗಿದ್ದಳು. ಬ್ರದರ್ ಜೋಸೆಫ್ ಕ್ರಾಸ್ತಾರವರ ಮಾರ್ಗದರ್ಶನದಂತೆ ಸ್ನೇಹಾಲಯ ತಂಡ ತೇಜಸ್ವಿನಿ ದೇವಾಸೆ ಯನ್ನು ರಕ್ಷಿಸಿತು ಮತ್ತು ವಿಚಾರಣೆಯ ನಂತರ ಅವಳು ನಾಗಪುರದವಳು ಮತ್ತು ಪೋಷಕರಿಗೆ ತಿಳಿಸದೆ ಮನೆಯಿಂದ ಹೊರಟು ಬಂದಿರುವುದಾಗಿ ತಿಳಿದು ಬಂದಿತು . ಆಕೆಗೆ ವಸತಿ ಮತ್ತು ಮಾನಸಿಕ ಬೆಂಬಲದ ಅಗತ್ಯವಿದ್ದ ಕಾರಣ ರೈಲ್ವೆ ಅಧಿಕಾರಿಗಳು ಆಕೆಯನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥ ರ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದರು.
ಸ್ನೇಹಾಲಯದಲ್ಲಿ ಆಕೆಯ ದಾಖಲಾತಿ ಮತ್ತು ಸಮಾಲೋಚನೆಯ ನಂತರ, ತಂಡವು ನಾಗ್ಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಆಕೆಯ ವಿವರಗಳನ್ನು ಹಂಚಿಕೊಂಡಿತು. ಮಾತ್ರವಲ್ಲದೆ ತಂಡವು ಆಕೆಯ ಕಾಲೇಜನ್ನು ಪತ್ತೆ ಹಚ್ಚಿ ಆಕೆಯ ಪೋಷಕರ ವಿವರಗಳನ್ನು ಪಡೆಯಲು ಪ್ರಯತ್ನಿಸಿತು . ಆಕೆಯ ತಂದೆಯ ಸಂಪರ್ಕ ವಿವರಗಳನ್ನು ಪಡೆದ ನಂತರ ತಂಡವು PW ಆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದ ಆಕೆಯ ತಂದೆ ಶ್ರೀ ರಮೇಶ್ ದೇವಾಸೆ ಅವರೊಂದಿಗೆ ದೂರವಾಣಿ ಸಂವಾದ ನಡೆಸಿತು. ತಂಡವು ಪೋಷಕರ ಸರಿಯಾದ ವಿವರಗಳನ್ನು ಖಚಿತಪಡಿಸಿ ಕೊಂಡಿತು ಮತ್ತು ಇಂದು ದಿನಾಂಕ 13.04.2023 ರಂದು ಅವರು ನಾಗಪುರದಿಂದ ಸ್ನೇಹಾಲಯಕ್ಕೆ ಬಂದರು.
ಶ್ರೀ ರಮೇಶ್ ದೇವಾಸೆರವರು 5 ದಿನಗಳಿಂದ ಕಾಣೆಯಾದ ತನ್ನ ಮಗಳನ್ನು ಸಂತೋಷದಿಂದ ಸ್ವೀಕರಿಸಿದರು. ತನ್ನ ಮಗಳನ್ನು ರಕ್ಷಿಸಿ ಆಕೆಯನ್ನು ಮತ್ತೆ ಆಕೆಯ ಕುಟುಂಬದೊಂದಿಗೆ ಒಂದುಗೂಡಿಸುವ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ ಸ್ನೇಹಾಲಯ ಮತ್ತು ರೈಲ್ವೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು.
ತನ್ನೆಲ್ಲ ವಸ್ತುಗಳನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ತೇಜಸ್ವಿನಿ ದೇವಾಸೆಯನ್ನು
ಸ್ನೇಹಾಲಯದ ಸಲಹೆಗಾರರು ಆಕೆಗೆ ಮತ್ತು ಆಕೆಯ ತಂದೆಗೆ ಪ್ರತ್ಯೇಕ ಕೌನ್ಸಿಲಿಂಗ್ ಸೆಷನ್ ಮತ್ತು ಕೌಟುಂಬಿಕ ಸಮಾಲೋಚನೆಯನ್ನೂ ನಡೆಸಿದರು. ಕೆಲವು ಅವಧಿಗಳಿಗಾಗಿ ಅವಳನ್ನು ಸಲಹೆಗಾರರ ಬಳಿಗೆ ಕರೆದೊಯ್ಯಲು ಅವಳ ತಂದೆಗೆ ಸಲಹೆ ನೀಡಲಾಯಿತು. ಶ್ರೀ ರಮೇಶ್ ಮತ್ತು ಅವರ ಕುಟುಂಬ ಸದಸ್ಯರು ತೇಜಸ್ವಿನಿ ದೇವಾಸೆ ಅವರನ್ನು ಸುರಕ್ಷಿತ ಮತ್ತು ಆರೋಗ್ಯಕರ ಸ್ಥಿತಿಯಲ್ಲಿ ಮರಳಿ ಪಡೆದಕ್ಕಾಗಿ ಸಂತೋಷಪಟ್ಟರು.

ಕುಂದಾಪುರ ಬೇಸಿಗೆ ರಜೆ ಶಿಬಿರ – ಶಿಬಿರಗಳು ನಿಮ್ಮ ಭವಿಸ್ಯವಕ್ಕೆ ಆಧಾರವಾಗುತ್ತವೆ :ಫಾ|ಸ್ಟ್ಯಾನಿ ತಾವ್ರೊ


ಕುಂದಾಪುರ,ಎ.13: “ಶಿಬಿರಗಳು ನಿಮ್ಮ ಭವಿಸ್ಯವನ್ನು ರೂಪಿಸಿಕೊಳ್ಳಲು ಆಧಾರವಾಗುತ್ತವೆ ಎಂದು ನೀವು ಮರೆಯಬಾರದು, ಇಂತಹ ಶಿಬಿರಗಳಲ್ಲಿ, ನಿಮಗೆ ಬಹಳಷ್ಟು ಕಲಿಯಲು ಸಿಗುತ್ತದೆ, ಸಂಗೀತ, ನಾಟ್ಯ, ಆಟ, ಪಾಠ, ಕ್ರೀಡೆ, ಮನೋರಂಜನೆ, ಸಾಹಿತ್ಯ, ಮುಂದಿನ ಜೀವನಕ್ಕೆ ಆಧಾರವಾಗುವಂತ ಅನುಭವದ ಭಾಷಣಗಳು, ಮಾತು ಕತೆ ವಿನಿಮಯ, ಮುಂದಿನ ವಿದ್ಯಾಭಾಸದ ನೋಟ, ಇವೆಲ್ಲವೂ ಈ ಶಿಬಿರದಲ್ಲಿ ಅಡಕವಾಗಿರುತ್ತವೆ” ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹೇಳಿದರು.
ಅವರು ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿ ಬರುವ 5 ರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಎರ್ಪಡಿಸಲ್ಪಟ್ಟ ಬೇಸಿಗೆ ರಜಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. “ಎಳೆಯದರಲ್ಲಿ ಕಲಿತ ಸಂಗತಿಗಳು, ಮಕ್ಕಳಲ್ಲಿ ಒಳ್ಳೆಯ ಪ್ರಭಾವ ಬೀರುತ್ತವೆ, ಆದರಿಂದ ಈ ಶಿಬಿರದಲ್ಲಿ ನಿಮಗೆ ಕಲಿಸುವ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಿ” ಎಂದು ಸಂದೇಶ ನೀಡಿದರು.
ಶಿಬಿರದ ಮುಂದಾಳಾತ್ವವನ್ನು ವಹಿಸಿಕೊಂಡ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಶಿಬಿರದ ಮಕ್ಕಳು ಒಂದು ಕುಟುಂಬದ ಮಕ್ಕಳಂತೆ ಪ್ರೀತಿಯಿಂದ ಇದ್ದು, ನಾವು ಒಗಟ್ಟಿನಲ್ಲಿರಬೇಕು, ಇಲ್ಲಿ ಕಲಿಯಲು ಸಿಗುವುದನ್ನು ಆಸಕ್ತಿಯಿಂದ ಮನನ ಮಾಡಿಕೊಳ್ಳಬೇಂದು” ಶಿಬಿರ ಯಶಸ್ವಿಯಾಗಲು ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. 3 ದಿವಸಗಳ ಈ ಶಿಬಿರದಲ್ಲಿ ಹಲವಾರು ಸಂಪನ್ಮೂಕ ವ್ಯಕ್ತಿಗಳಿಂದ ಮಾರ್ಗದರ್ಶನ ಸಿಗುವ ಈ ಶಿಬಿರಕ್ಕೆ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಚರ್ಚಿನ ಸ್ತ್ರಿ ಸಂಘಟನೆ ಶಿಬಿರಾರ್ಥಿಗಳಿಗೆ ಊಟ ತಿಂಡಿ ಸಿದ್ದಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕೆ ವೀಶೆಷ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಡಿಆಲ್ಮೇಡಾ ನಿರೂಪಿಸಿದರು, ಶಿಕ್ಷಕಿ ವೀಣಾ ಡಿಸೋಜಾ ವಂದಿಸಿದರು.

ಮತದಾನ ಪ್ರಜಾಪ್ರಭುತ್ವದ ಹಬ್ಬ. ಪ್ರತಿ ಮತದಾರನೂ ತಪ್ಪದೆ ಮತದಾನ ಮಾಡಬೇಕು – ವಿ.ನಾಗರಾಜು ಹೇಳಿದರು

ಶ್ರೀನಿವಾಸಪುರ: ಮತದಾನ ಪ್ರಜಾಪ್ರಭುತ್ವದ ಹಬ್ಬ. ಪ್ರತಿ ಮತದಾರನೂ ತಪ್ಪದೆ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯ ಎತ್ತಿಹಿಡಿಯಬೇಕು ಎಂದು ಪುರಸಭೆ ಕಂದಾಯಾಧಿಕಾರಿ ವಿ.ನಾಗರಾಜು ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭಾ ವಾಪ್ತಿಯ ವಿಕಲಚೇತನ ಮತದಾರರಿಗೆ ಬುಧವಾರ ಏರ್ಪಡಿಸಿದ್ದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಒಂದು ಪವಿತ್ರವಾದ ಕರ್ತವ್ಯ. ದೇಶದ ಉತ್ತಮ ಭವಿಷ್ಯ ಮತದಾರರ ಕೈಯಲ್ಲಿದೆ. ಪ್ರತಿಯೊಬ್ಬ ಮತದಾರನೂ ಮತದಾನ ಮಾಡಿದಾಗ ಮಾತ್ರ ಜನಸತ್ತೆ ಬಲಗೊಳ್ಳುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಮತದಾರರಿಗೆ, ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಪುರಸಭೆ ಕಂದಾಯ ನಿರೀಕ್ಷಕ ಎನ್.ಶಂಕರ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಚೇರಿ ಸಿಬ್ಬಂದಿ ಇದ್ದರು.

ಐಎಂ ಜಯರಾಮ ಶೆಟ್ಟಿ ಇನ್ಸಿಟ್ಯೂಟ್ ಆಫ್ ಸೈನ್ಸ್ ಆಂಡ್ ಕಾಮರ್ಸ್, ಮೂಡ್ಲಕಟ್ಟೆ ಸಂಸ್ಥೆಯಲ್ಲಿ ಕಾಲೇಜಿನ ಕ್ರೀಡೋತ್ಸವ “ಐಕ್ಯಂ”/ Sports Day “Aikyam” was held recently at I M Jayaram Shetty Institute of science and commerce

ಐಎಂ ಜಯರಾಮ ಶೆಟ್ಟಿ ಇನ್ಸಿಟ್ಯೂಟ್ ಆಫ್ ಸೈನ್ಸ್ ಆಂಡ್ ಕಾಮರ್ಸ್, ಮೂಡ್ಲಕಟ್ಟೆ ಸಂಸ್ಥೆಯಲ್ಲಿ ಕಾಲೇಜಿನ ಕ್ರೀಡೋತ್ಸವ “ಐಕ್ಯಂ” ಇದರ ಉದ್ಘಾಟನೆ ಮತ್ತು ತಂಡಗಳ ಹೆಸರು ಮತ್ತು ಲಾಂಛನಗಳನ್ನು ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಸಿದ್ಧಾರ್ಥ ಜೆ. ಶೆಟ್ಟಿಯವರು ಅನಾವರಣಗೊಳಿಸಿದರು. ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮಹತ್ವವನ್ನು ತಿಳಿಸಿದರು. ಕ್ರೀಡೆಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಸಾಧನವಾಗಿದೆಯೆಂದು ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೋ. ದೋಮಚಂದ್ರಶೇಖರರವರು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾಸಂಸ್ಥೆಗಳ ಬ್ರ್ಯಾಂಡ್ ಬಿಲ್ಡಿಂಗ್‍ನ ನಿರ್ದೇಶಕರಾದ ಶ್ರೀಯುತ ರಾಮಕೃಷ್ಣ ಹೆಗ್ಡೆಯವರು, ಐಎಂಜೆಐಎಸ್‍ಸಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್‍ರವರು, ಐಎಂಜೆಐಎಸ್‍ಸಿ ಸಂಸ್ಥೆಯ ಉಪಪ್ರಾಂಶುಪಾಲರಾದ ಪ್ರೋ. ಜಯಶೀಲ ಕುಮಾರ್‍ರವರು, ಐಎಂಜೆ ವಿದ್ಯಾ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಪ್ರವೀಣ ಖಾರ್ವಿಯವರು ಉಪಸ್ಥಿತರಿದ್ದರು. ಐಎಂಜೆಐಎಸ್‍ಸಿ ಸಂಸ್ಥೆಯ ಬಿಕಾಂ ವಿದ್ಯಾರ್ಥಿನಿಗಳಾದ ಕುಮಾರಿ ಮೊಹಿನ್ ಸಭಾ ಸ್ವಾಗತಿಸಿ, ಕುಮಾರಿ ಹನಾ ಶೇಖ್ ವಂದಿಸಿದರು. ಬಿಸಿಎ ವಿದ್ಯಾರ್ಥಿನಿ ಶರೋನ್ ಕಾರ್ಯಕ್ರಮವನ್ನು ನಿರೂಪಿಸಿದರು.

Sports Day “Aikyam” was held recently at I M Jayaram Shetty Institute of science and commerce.  Chairman of the IMJ Institutions, Sri Siddharth J Shetty inaugurated the sports day and released the logo and names of the teams. Speaking on the occasion he emphasized the importance of sports in the student’s life.

Director of IMJ Institutions, Prof. Doma Chandrashekhar told sports is very important for the better physical and mental health of a person. Director brand building Dr. Ramakrishna Hegde, Principal IMJISC Dr. Prathibha M. Patel, Vice Principal Prof. Jayasheel Kumar, Physical Director of IMJ Institutions Mr. Praveen Kharvi were present on the occasion. Students of IMJISC Mohin Sabha welcomed the gathering; Hana Sheikh proposed the vote thanks, Sharon was the Master of Ceremony.

ಪ್ರಭಾವಿ ಮುಖಂಡರಿಂದ ಒತ್ತುವರಿಯಾಗಿರುವ ಪಣಸಮಾಕನಹಳ್ಳಿ ಕೆರೆಯನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ- ರೈತ ಸಂಘ

ಶ್ರೀನಿವಾಸಪುರ-ಏ-12, ಪ್ರಭಾವಿ ಮುಖಂಡರಿಂದ ಒತ್ತುವರಿಯಾಗಿರುವ ಪಣಸಮಾಕನಹಳ್ಳಿ ಕೆರೆಯನ್ನು ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ಅಭಿವೃದ್ದಿಗೊಳಿಸಬೇಕೆಂದು ರೈತ ಸಂಘದಿಂದ ಉಪ ತಹಸೀಲ್ದಾರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಪೂರ್ವಜರು ಬೆವರು ಸುರಿಸಿ ಒಗ್ಗಟ್ಟಾಗಿ ಮಳೆನೀರು ಸಂಗ್ರಹಣೆಗೆ ಕಟ್ಟಿ ಅಭಿವೃದ್ದಿ ಪಡಿಸಿರುವಂತಹ ಕೆರೆಗಳು ಇಂದು ಭೂ ಮಾಪಿಯ ಹಾಗೂ ಕೆಲವು ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿದೆ. ಕೆರೆಯ ಸುತ್ತಮುತ್ತಲಿರುವ ಹತ್ತಾರು ಹಳ್ಳಿಗಳ ರೈತಾಪಿವರ್ಗ ಒತ್ತುವರಿದಾರರ ವಿರುದ್ದ ದ್ವನಿಎತ್ತಲಾರದೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗದೆ ಕಣ್ಣುಮುಂದೆಯೇ ಕೆರೆ ನಾಶವಾಗುತ್ತಿದ್ದರೆ. ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಆ ಹಳ್ಳಿಯ ಜನರಿದ್ದಾರೆ. ಅಷ್ಟರ ಮಟ್ಟಿಗೆ ಪ್ರಭಾವಿ ವ್ಯಕ್ತಿಗಳ ಒತ್ತಡ ಜನ ಸಾಮಾನ್ಯರ ಮೇಲೆ ಹಾಕುತ್ತಿದ್ದಾರೆಂದು ಹದಗೆಟ್ಟಿರುವ ಅವ್ಯವಸ್ಥೆ ವಿರುದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಷ ವ್ಯಕ್ತಪಡಿಸಿದರು.