ರಾಯಲ್ಪಾಡು ಸಮೀಪದ ಕೆ.ಗೊಲ್ಲಪಲ್ಲಿ ಬೆಟ್ಟಗುಡ್ಡಗಳಲ್ಲಿ ಚಿರತೆ ಮತ್ತು ಚಿರತೆ ಮರಿಯು ಕಾಣಿಸಿರುವ ಬಗ್ಗೆ ಮಾಹಿತಿ

ರಾಯಲ್ಪಾಡು 1 : ಸಮೀಪದ ಕೆ.ಗೊಲ್ಲಪಲ್ಲಿ ಬೆಟ್ಟಗುಡ್ಡಗಳಲ್ಲಿ ಭಾನುವಾರ ಚಿರತೆ ಮತ್ತು ಚಿರತೆ ಮರಿಯು ಕಾಣಿಸಿರುವ ಬಗ್ಗೆ ಸ್ಥಳಿಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ . ಸೋಮವಾರ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಶ್ರೀನಾಥ್ ಪತ್ರಿಕೆಯೊಂದಿಗೆ ಮಾತನಾಡಿ ಭಾನುವಾರ ಗ್ರಾಮಸ್ಥರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಲಾಗಿದ್ದು, ಇದುವೆರಗೂ ನಮಗೆ ಅದರ ಚಲವಲನಗಳ ಬಗ್ಗೆ ಮಾಹಿತಿ ಲಭ್ಯವಾಗುತಿಲ್ಲ ಎಂದರು.
ಕೆ.ಗೊಲ್ಲಪಲ್ಲಿ ಗ್ರಾಮದ ಬೆಟ್ಟಗುಡ್ಡಗಳು ನೆರೆಯ ಆಂದ್ರಕ್ಕೆ ಹೊಂದಿಕೊಂಡಿದ್ದು, ಸ್ಥಳೀಯರ ಮಾತಿನಂತೆ ನಾವು ಇದೇ ಮೊದಲ ಭಾರಿಗೆ ಈ ಭಾಗದಲ್ಲಿ ಚಿರತೆಯನ್ನು ನೋಡಿದ್ದೇವೆ ಎನ್ನುತ್ತಾರೆ . ಈ ಚಿರತೆಯೊಂದಿಗೆ ಮರಿ ಚಿರತೆ ಇದ್ದ ಬಗ್ಗೆ ಮಾಹಿತಿ ನೀಡಿದರು. ದಾರಿ ತಪ್ಪಿ ಬಂದಿರಬಹುದು ಬಂದ ದಾರಿಯಲ್ಲಿ ಪುನಃ ಹೊರಟು ಹೋಗಬಹುದು ಎನ್ನುತ್ತಾರೆ. ಸ್ಥಳೀಯರು
ಯಾವುದೇ ಏನು ಆಗಲಿ ನಾವು ನಮ್ಮ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವರ ಮಾರ್ಗದರ್ಶನದಂತೆ ಚಿರತೆಯನ್ನು ಹಿಡಿಯಲಾಗುವುದು ಎಂದು ಮಾಹಿತಿ ನೀಡಿದರು.

ನಮ್ಮ ಮತ ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಮತದಾನದ ಬಗ್ಗೆ ನಿರ್ಲಕ್ಷ್ಯತೆ ತೊರದೆ ಎಲ್ಲರೂ ಕಡ್ಡಾಯ ಮತದಾನ ಮಾಡಿ ; ವಿ.ಕೃಷ್ಣಪ್ಪ

ಶ್ರೀನಿವಾಸಪುರ 1 : ನಮ್ಮ ಮತವು ನಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಮತದಾನದ ಬಗ್ಗೆ ನಿರ್ಲಕ್ಷ್ಯತೆ ತೊರದೆ ಎಲ್ಲರೂ ಕಡ್ಡಾಯ ಮತದಾನ ಮಾಡಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿ.ಕೃಷ್ಣಪ್ಪ ಹೇಳಿದರು.
ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಮಂಗಳವಾರ ನಡೆದ ವನಿತಾ ವೈಭವ ಕಾರ್ಯಕ್ರಮದ ಅಂಗವಾಗಿ ನಡೆದ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗವು ಮತದಾನ ಪ್ರಮಾಣ ಹೆಚ್ಚಿಸಲು ಸಾಕಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ, ಈ ಬಾರಿ 80 ವರ್ಷಕಿಂತ ಹೆಚ್ಚಿನ ವಯೋವೃದ್ಧರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದಿದ್ದವರ ಮನೆಗೆ ಮತಗಟ್ಟೆ ಅಧಿಕಾರಿಗಳು ತೆರಳಿ ಮತದಾನ ಪಡೆಯುವ ಯೋಜನೆ ಜಾರಿಗೆ ತಂದಿದೆ ಎಂದರು. ಈ ಒಂದು ಉದ್ದೇಶದಿಂದ ಪ್ರತಿಯೊಬ್ಬ ಪ್ರಜೆಯು ತಮ್ಮ ದೇಶದ ಭವಿಷ್ಯಕ್ಕಾಗಿ ತಮ್ಮ ಅಮೂಲ್ಯವಾದ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ಕರೆ ನೀಡಿದರು.
ಗೌನಿಪಲ್ಲಿ ಪಿಡಿಒ ಗೌಸ್‍ಸಾಬ್, ತಾಲೂಕಿನ ಎಲ್ಲಾ ಪಿಡಿಒಗಳು, ಜಲಗಾರರು, ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮವು ನಡೆಯಿತು.

ಪಟ್ಟಣದ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (KIIT) 17 ಡಿಸ್ಟಿಂಗ್‍ಷನ್ಸ್ ನೊಂದಿಗೆ ಶೇಕಡ100 ರಷ್ಟು ಫಲಿತಾಂಶ

ಶ್ರೀನಿವಾಸಪುರ: ಫೆಬ್ರವರಿ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕಂಪ್ಯೂಟರ್‍ OFFICE AUTOMATION ಪರೀಕ್ಷೆಗಳಲ್ಲಿ ಪಟ್ಟಣದ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (KIIT) 17 ಡಿಸ್ಟಿಂಗ್‍ಷನ್ಸ್ ನೊಂದಿಗೆ (DISTINCTIONS) ಶೇಕಡ100ರಷ್ಟು ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದ ಎಂ.ಜಿ.ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ (KIIT) ಕಳೆದ ಆಗಸ್ಟ್‍ ಮಾಹೆಯಲ್ಲಿರಾಜ್ಯ ಮಟ್ಟದಲ್ಲಿ ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಕಂಪ್ಯೂಟರ್ OFFICE AUTOMATION ಪರೀಕ್ಷೆಗೆ ಶಾಲೆಯಿಂದ ಒಟ್ಟು 55 ಅಭ್ಯರ್ಥಿಗಳು ಹಾಜರಾಗಿದ್ದು, ಇವರಲ್ಲಿ17 ಡಿಸ್ಟಿಂಗ್‍ಷನ್ಸ್, ಪ್ರಥಮ ದರ್ಜೆಯಲ್ಲಿ-26, ದ್ವಿತೀಯ ದರ್ಜೆಯಲ್ಲಿ 10, ತೃತೀಯ ದರ್ಜೆಯಲ್ಲಿ 02 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ಶಾಲೆಗೆ ಶೇಕಡ100ರಷ್ಟು ಫಲಿತಾಂಶದೊರೆತಿದೆ.
ಹಾಗೆಯೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿಒಟ್ಟು 13 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 05 ಡಿಸ್ಟಿಂಗ್‍ಷನ್ಸ್, ಪ್ರಥಮ ದರ್ಜೆಯಲ್ಲಿ-02, ದ್ವಿತೀಯ ದರ್ಜೆಯಲ್ಲಿ 03 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ಶಾಲೆಗೆ ಶೇಕಡ77ರಷ್ಟು ಫಲಿತಾಂಶ ದೊರೆತಿದೆ. ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವ ಉತ್ತಮ ಫಲಿತಾಂಶಕ್ಕೆ ಕಾರಣರಾದ ಬೋಧಕರನ್ನು ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದ ಆರ್. ರಾಧ ಇವರು ಅಭಿನಂದಿಸಿದ್ದಾರೆ.

ಮೂಡ್ಲಕಟ್ಟೆ ಐ.ಎಂ.ಜೆ. ವಿದ್ಯಾರ್ಥಿಗಳಿಂದ “ಮೈತ್ರಿ” ಕಾರ್ಯಕ್ರಮ

ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆಯ ಅದರ ಅಂಗವಾಗಿ ಕುಂದಾಪುರದ ಚೈತನ್ಯ ವೃದ್ಧಾಶ್ರಮದಲ್ಲಿ ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಭೋಧಕ – ವಿದ್ಯಾರ್ಥಿವೃಂದವರು “ಮೈತ್ರಿ” ಕಾರ್ಯಕ್ರಮದಡಿ ವಿವಿಧ ಪ್ರದರ್ಶನದಿಂದ ಹಿರಿಯರನ್ನು ರಂಜಿಸಿದರು. ಚೈತನ್ಯ ವೃದ್ಧಾಶ್ರಮದ ಅಧ್ಯಕ್ಷರಾದ ಸಿಸಿಲಿ ಕೋಟ್ಯಾನ್ ಅವರು ಸಂಸ್ಥೆಯ ಕಾರ್ಯವೈಖರಿಯನ್ನು ಸೇವಾ ಮನೋಭಾವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿಯವರಾದ ಶ್ರೀಮತಿ ದಿವ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾ ಸಂಸ್ಥೆಗಳ ಭೋದಕರಾದ ಶ್ರೀಮತಿ ಅಮೃತಮಾಲ (ಎಂಐಟಿ), ಶ್ರೀಮತಿ ಅಕ್ಷತಾ ನಾಯಕ್(ಎಂಐಟಿ), ಶ್ರೀಮತಿ ಶಬೀನಾ (ಐಎಂಜೆಐಎಸ್‍ಸಿ), ಶ್ರೀಮತಿ ದಿವ್ಯ (ಎಂಸಿಎನ್), ಶ್ರೀಮತಿ ಚೈತ್ರಾ ಯಾಧವ್(ಎಂಐಟಿ), ಶ್ರೀ ಪ್ರವೀಣ್ ಖಾರ್ವಿ (ಐಎಂಜೆ) ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.