ಶ್ರೀನಿವಾಸಪುರ:ತಾಲ್ಲೂಕಿನ ಆವಲಕುಪ್ಪ ಗ್ರಾಮದ ಸಮೀಪ ಅಕ್ರಮವಾಗಿ ಸಾಗಿಸುತ್ತಿದ್ದ ರೂ.1.70 ಲಕ್ಷ ಮೌಲ್ಯದ ಮದ್ಯ ವಶ

ಶ್ರೀನಿವಾಸಪುರ: ತಾಲ್ಲೂಕಿನ ಆವಲಕುಪ್ಪ ಗ್ರಾಮದ ಸಮೀಪ ಭಾನುವಾರ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ.1.70 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡು, ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ವಲಯ ಅಬಕಾರಿ ಇನ್ಸ್‍ಪೆಕ್ಟರ್ ಬಿ.ಎಸ್.ರೋಹಿತ್ ಮತ್ತು ಸಿಬ್ಬಂದಿ ಚುನಾವಣೆ ಪ್ರಯುಕ್ತ ಗಸ್ತು ತಿರುಗುತ್ತಿದ್ದಾಗ, ಅವಲುಕುಪ್ಪ ಗ್ರಾಮದ ಸಮೀಪ 46.8 ಲೀಟರ್ ಬಿಯರ್ ಮತ್ತು 17.28 ಲೀಟರ್ ಮದ್ಯವನ್ನು ಕಾರಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದುದನ್ನು ಪತ್ತೆಹಚ್ಚಲಾಯಿತು. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು : ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಡಿನ ಅಭಿವೃದ್ಧಿ ಬಗ್ಗೆ ಕೈಗೊಂಡಿರುವ ದೀಕ್ಷೆ ಸಾಕಾರಗೊಳ್ಳಲು, ಮತದಾರರು ಶಕ್ತಿ ತುಂಬಬೇಕು ಎಂದು ಹೇಳಿದರು.
ಜೆಡಿಎಸ್‍ನ ಜಲಧಾರೆ ಯೋಜನೆ ಜಿಲ್ಲೆಗೆ ವರದಾನವಾಗಲಿದೆ. ಈ ಯೋಜನೆಯಡಿ ಜಿಲ್ಲೆಗೆ ಕುಡಿಯಲು ಹಾಗೂ ವ್ಯವಸಾಯಕ್ಕೆ ಯೋಗ್ಯವಾದ ನೀರು ಪೂರೈಸಲಾಗುವುದು. ಪಂಚರತ್ನ ಯೋಜನೆ ಸಮಾಜದ ಎಲ್ಲ ವರ್ಗದ ಜನರ ಪಾಲಿಗೆ ಹೆಚ್ಚು ಉಪಯುಕ್ತವಾಗಿದೆ. ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಣಿಗೆ ರೂ.2 ಲಕ್ಷ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ. ಪ್ರತಿ ರೈತ ಕುಂಟುಂಬಕ್ಕೆ ರೂ.10 ಸಾವಿರ ನೀಡಲಾಗುವುದು. ಇದೆಲ್ಲವೂ ಸಾಧ್ಯವಾಗಬೇಕಾದರೆ ಜೆಡಿಎಎಸ್ ಅಧಿಕಾರಕ್ಕೆ ಬರಬೇಕೆಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಟೊಮೆಟೊ ಹಾಗೂ ಮಾವಿಗೆ ಬೆಂಬಲ ಬೆಲೆ ನೀಡುವುದರ ಮೂಲಕ ರೈತರ ಬೆನ್ನಿಗೆ ನಿಂತರು. ರೂ.25 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ತಾಲ್ಲೂಕಿನ ಶಾಸಕರು, ಕಾಂಗ್ರೆಸ್ ನಾಯಕರು ಮೂರರಿಂದ ನಾಲ್ಕು ತಲೆಮಾರಿಗೆ ಬೇಕಾಗುಷ್ಟು ಸಂಪಾದನೆ ಮಾಡಿಕೊಂಡಿದ್ದಾರೆ ಎಂಬುದನ್ನು ತಮ್ಮ ಮಾತಿನ ಮೂಲಕ ಬಯಲು ಮಾಡಿದ್ದಾರೆ ಎಂದು ಹೇಳಿದರು.
ನಾನು ಶಾಸಕನಾಗಿದ್ದ 4 ಅವಧಿ ಹೊರತುಪಡಿಸಿದರೆ ತಾಲ್ಲೂಕು ಅಭಿವೃದ್ಧಿ ಕಂಡಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡವನ್ನು ನಿರ್ಲಕ್ಷಿಸಲಾಗಿದೆ. ಅವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಅವರಿಗೆ ಕೃಷಿ ಕೊಳವೆ ಬಾವಿ ನಿರ್ಮಿಸಿಕೊಟ್ಟಿಲ್ಲ. ಶಾಸಕರು ಜನರಿಗೆ ನೀಡಿದ್ದ ಭರವಸೆಗಳು, ಭರವಸೆಗಳಾಗಿಯೇ ಉಳಿದಿವೆ ಎಂದು ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಡೆದುಕೊಂಡಿರುವ ಸಾಲ ಮನ್ನಾ ಮಾಡಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಯಾವುದೇ ಸಂದರ್ಭದಲ್ಲೂ ನುಡಿದಂತೆ ನಡೆದುಕೊಳ್ಳುತ್ತಾರೆ. ಸಶಕ್ತ ರಾಜ್ಯ ನಿರ್ಮಾಣಕ್ಕಾಗಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಎಂ.ಎನ್.ಗಣೇಶ್, ಜಿ.ರಾಜಣ್ಣ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾಲಾವತಿ, ಮುಖಂಡರಾದ ಬಿ.ವೆಂಕಟರೆಡ್ಡಿ, ಕುಂದಟಿವಾರಿಪಲ್ಲಿ ಶಿವಾರೆಡ್ಡಿ, ಮಧುಸೂದನರೆಡ್ಡಿ, ಅಪ್ಪೂರು ರಾಜು, ಆನಂದ್, ಶಬ್ಬೀರ್, ವಿ.ನಾಗಭೂಷಣ್, ಶ್ರೀನಾಥ್, ಎಂ.ಆರ್.ಸುಧಾಕರ್, ಸಿ.ರವಿ, ನಂದರೆಡ್ಡಿ, ಸಂತೋಷ್, ಪೂಲ ಶಿವಾರೆಡ್ಡಿ, ಮನು, ಶ್ರೀನಿವಾಸಪ್ಪ, ಶ್ರೀರಾಮ್, ನಾಗಣ್ಣ, ಮಂಜುನಾಥರೆಡ್ಡಿ, ಚಂದ್ರಕಳ, ಮುನಿರಾಜು, ಅಶೋಕ್, ಕೃಷ್ಣಪ್ಪ, ಲಕ್ಷ್ಮಣರೆಡ್ಡಿ, ಮಂಜುಳ ರಾಮಚಂದ್ರೇಗೌಡ ಇದ್ದರು.
ರೋಡ್ ಶೋ: ಮಾಜಿ ಶಾಸಕ ಹಾಗೂ ಕ್ಷೇತ್ರದ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ರೋಡ್ ಶೋ ನಡೆಸಿ ಮತ ಯಾಚನೆ ಮಾಡಿದರು.

Easter Vigil at Holy Rosary Church Alangar

Fr Leo Lasrado Director of Vocation promotion was the main celebrant

Guest priest Fr Deepak Noronha and Fr Walter DSouza the parish priest were present

The celebration included

Rite of blessing the fire and Easter Candle

Liturgy of the word

Rite of blessing the water

Baptismal renewal

Holy Eucharist

Faithful in large number participated in this holy rite in big number and received divine blessings

Easter Vigil held at Milagres Cathedral Kallianpur

Udupi : Milagres Cathedral, Kallianpur of Udupi diocese celebrated Easter Vigil on Saturday, April 8, 2023 with great devotion and gaiety.

The Easter Vigil also called Paschal celebrations began at 7pm in front of Milagres Tri-centenary Hall. After the new fire was blessed, the Paschal candle was lit with formality and was carried into the Cathedral as all those present lit their respective candles from the Paschal Candle when all lights in the Cathedral put off.

The Solemn High Eucharist mass led by Bishop Gerald Isaac Lobo con-celebrated with Very Rev Fr. Valerian Mendonca, Rector of the Cathedral, Rev Fr. Joy Andrade, Asst. parish priest, Very Rev Fr. Denzil Martin, Superior and Vocational Director of Pilar Fathers and Rev Fr. Nithesh D’Souza, Vocational Director of Pilar Fathers, Kallianpur.

The liturgy of the Word comprised of three readings from the Old Testament. After singing “Gloria” accompanied by ringing bells and the main church bells, two readings from the  New Testament were read.

In his homily, Bishop Gerald said that to underscore of importance of the Paschal mystery, the compendium of the Catechism of the Church states that the Paschal mystery of Jesus, which comprises His Passion, death, resurrection, and glorification, stands at the center of Christian faith because God’s saving plan was accomplished once for all. The resurrection of Jesus means that God the Father will give His Holy Spirit to continue His work on earth. This means that Christ’s earthly ministry continues today through His people, in whom He dwells by the Holy Spirit.
Bishop said that Christianity teaches that Christ was resurrected into eternal life for making the ultimate sacrifice for mankind. The resurrection of Jesus shows that Jesus defeated death, and it is considered by many Christians to be proof of life after death. Many Christians also think of Jesus’ resurrection as evidence of God’s omnipotent and omnibenevolent nature. Jesus became a powerful symbol of death, resurrection and immortality. When Jesus rose from the dead, Jesus confirmed His identity as the Son of God and His work of atonement, redemption, reconciliation and salvation. The resurrection was a real, literal, physical raising of Jesus’s body from the dead, Bishop said.

After homily, the water was blessed; people once again lit their candles as they renewed the Baptismal vows following which the Bishop and priests sprinkled newly blessed Holy water on the congregation.

At the end of Paschal celebrations, Rector of the Cathedral Very Rev Fr. Valerian Mendonca extended Paschal greetings to all concerned and gave gratitude to Bishop, priests, nuns, media and all concerned. He also placed the weekly announcements at the end. He thanked the main  sponsor of the celebrations Suneetha Fernandes and other benefactors of the celebrations.

Meanwhile, Bishop distributed prizes for the winners of Bible Quiz competition in Milarchi Laram church letter.

Bishop Gerald extended his Paschal Easter wishes to the congregation and appreciated the arrangements during the tridum celebrations. He called to the congregation that our diocese is suffering from an acute shortage of priests. He asked to pray in favour of getting new priests for the diocese.

Under the leadership of ICYM, the parish unit members distributed snacks for the large number of the congregation.

ಮೂಡ್ಲಕಟ್ಟೆ : ಸಂಸ್ಥಾಪಕರ ದಿನಾಚರಣೆಯ ವಿಶೇಷ ಉಪನ್ಯಾಸ

ಮೂಡ್ಲಕಟ್ಟೆ ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಏಪ್ರಿಲ್ 8ರಂದು ಸಂಸ್ಥೆಯಲ್ಲಿ ಮಾಜಿ ಇಸ್ರೋ ವಿಜ್ಞಾನಿ ಡಾ. ಕೆ. ಗಣೇಶ ರಾಜ್‍ರವರಿಂದ ಶ್ರೀ ಐ.ಎಂ.ಜಯರಾಮ ಶೆಟ್ಟಿ ಸ್ಮರಣಾರ್ಥ ವಿಶೇಷ ಉಪನ್ಯಾಸ ನಡೆಯಿತು. ಅವರು “ಭೂಕಂಪ ಹಾಗೂ ಸಮಾಜದ ಮೇಲೆ ಅದರ ಪರಿಣಾಮ” ಎನ್ನುವ ವಿಷಯದ ಬಗ್ಗೆ ಮಾತನಾಡಿದರು. ಜಗತ್ತಿನ ವಿವಿಧೆಡೆ ನಡೆದ ದೊಡ್ಡ ಭೂಕಂಪಗಳು ಹಾಗೂ ಅವುಗಳಿಂದ ಸಮಾಜದ ಮೇಲೆ ಆದ ನಷ್ಟ ಮತ್ತು ದುಷ್ಪರಿಣಾಮಗಳನ್ನು ಅತ್ಯಂತ ವಿವರವಾಗಿ ತಿಳಿಸಿದರು. ಪ್ರಾಕೃತಿಕವಾಗಿ ನಡೆಯುವ ಭೂಕಂಪನವನ್ನು ತಡೆಯಲಾಗದಿದ್ದರೂ ಅದರಿಂದ ಆಗುವ ಪರಿಣಾಮಗಳ ತೀವ್ರತೆಯನ್ನು, ಕಟ್ಟಡಗಳನ್ನು ಸರಿಯಾಗಿ ಕಟ್ಟುವುದರ ಮೂಲಕ ಕಡಿಮೆಗೊಳಿಸಲು ಸಾಧ್ಯ ಎಂದು ಹೇಳಿದರು. ಈ ದಿಸೆಯಲ್ಲಿ ಜಪಾನ್ ದೇಶದ ಮಾದರಿ ಅನುಕರÀಣೀಯ ಎಂದರು. ನಮ್ಮ ಕರವಾಳಿಯು ಸುರಕ್ಷಿತ ವಲಯದಲ್ಲಿರುವುದರಿಂದ ತುಂಬಾ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರಲ್ಲದೇ ಕಟ್ಟಡ ನಿರ್ಮಾಣ ಸಮಯದಲ್ಲಿ ಅಗತ್ಯಕ್ರಮಗಳನ್ನು ತೆಗೆದುಕೊಳ್ಳವುದು ಒಳ್ಳೆಯದು ಎಂದರು. ಗ್ರಾಮೀಣ ಕ್ಷೇತ್ರದಲ್ಲಿ ಸಂಸ್ಥೆ ಸ್ಥಾಪಿಸಿ ಐ.ಎಂ.ಜೆ. ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಐ.ಎಂ.ಜಯರಾಮ ಶೆಟ್ಟಿಯವರು ವಿದ್ಯಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಹಾಗೂ ಅವರ ಪುತ್ರ ಶ್ರೀ ಸಿದ್ಧಾರ್ಥ ಜೆ. ಶೆಟ್ಟಿಯವರು ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿರುವ ಪರಿಯನ್ನು ಶ್ಲಾಘಿಸಿದರು.
ಐ.ಎಂ.ಜೆ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಸಿದ್ಧಾರ್ಥ ಜೆ. ಶೆಟ್ಟಿಯವರು, ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್Àರವರು, ಎಂಐಟಿಕೆ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂರವರು, ಐ.ಎಂ.ಜೆ ಪ್ರಾಂಶುಪಾಲರಾದ ಡಾ.ಪ್ರತಿಭಾ ಎಂ. ಪಟೇಲ್, ಎಂಸಿಎನ್ ಪ್ರಾಂಶುಪಾಲರಾದ ಹಾಗೂ ಈ ಕಾರ್ಯಕ್ರಮದ ಸಂಯೋಜಕರಾದ ಜೆÀನ್ನಿಫರ್ ಮಿನೇಜಸ್, ಸಂಸ್ಥಾಪಕರ ದಿನಾಚರಣೆಯ ವ್ಯವಸ್ಥಾಪಕರಾದ ಹಾಗೂ ಎಂಐಟಿಕೆ ಉಪಪಾಂಶುಪಾಲರಾದ ಪ್ರೋ. ಮೆಲ್ವಿನ್ ಡಿಸೋಜ್‍ರವರು, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆಯವರು, ಸಂಶೋಧಕರಾದ ಡಾ. ಸತ್ಯಜಿತ್, ಸಂಸ್ಥೆಯ ಉಪಪ್ರಾಂಶುಪಾಲರು, ವಿಭಾಗಮುಖ್ಯಸ್ಥರು, ಉಪನ್ಯಾಸವರ್ಗ ಮತ್ತು ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಪಾಸ್ಖ ಹಬ್ಬ – ನಾವು ಶುದ್ದ ಚಿಂತನೆಯುಳ್ಳವರಾಗಿದ್ದು ಶುದ್ದ ಕ್ರತ್ಯಗಳಿಂದ ಜೀವಿಸಬೇಕು : ಫಾ|ಆಲ್ವಿನ್ ಸಿಕ್ವೇರಾ


ಕುಂದಾಪುರ,ಎ.8: ಇತಿಹಾಸ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ (ಎ.7) ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರಥ್ಹಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವರ ವಾಕ್ಯಗಳ ಪಠಣ, ಕೀರ್ತೆನೆಗಳ ಗಾಯನಗಳು ನಡೆದವು. ಯೇಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನುü ಆಚರಿಸಲಾಯಿತು.
ಕಟ್ಕೆರೆ ಬಾಲಯೇಸು ಆಶ್ರಮದ ಮುಖ್ಯಸ್ಥರಾದ ಧರ್ಮಗುರು ವಂ| ಆಲ್ವಿನ್ ಸಿಕ್ವೇರಾ ಪಾಸ್ಕ ಹಬ್ಬದ ದಿವ್ಯ ಬಲಿದಾನವನ್ನು ಅರ್ಪಿಸಿ “ಯೇಸುವಿನ ಪ್ರೀತಿ ಪಾತ್ರರಾದವರು ಯೇಸುವಿನ ಶವವನ್ನು ಇಟ್ಟಿದ್ದ ಕಲ್ಲು ಗೋರಿಯ ಹತ್ತಿರ ಬರುವಾಗ ಗೋರಿಗೆ ಅಡ್ಡಲಾಗಿ ಇಟ್ಟಿದ್ದ ಕಲ್ಲು ದ್ವಾರದ ಚಪ್ಪಡಿಯು ಸರಿಯಲಾಗಿತ್ತು, ಅದರ ಮೇಲೆ ಕಣ್ಣು ಕೊರೈಸುವ ಬಿಳಿ ಬಟ್ಟೆಯುಟ್ಟ ದೇವ ದೂತನು ಕುಳಿತುಕೊಂಡಿದ್ದನ್ನು, ಇದನ್ನು ಯೇಸುವಿನ ಪ್ರೀತಿಪಾತ್ರರು ಅಚ್ಚರಿಯಿಂದ ನೋಡುವಾಗ, ದೇವದೂತನು ಹೆದರಬೇಡಿ, ಯೇಸು ಹೇಳಿದಂತೆ, ಆತನು ಮೂರನೇ ದಿನ ಪುನರುಥ್ಥಾನಗೊಂಡಿದ್ದಾನೆ, ಈ ಶುಭ ಸಂದೇಶವನ್ನು ಎಲ್ಲರಿಗೂ ಹಂಚೀರಿ ಎಂದು ತಿಳಿಸುತ್ತಾನೆ, ಆದರೆ ಯೇಸುವನ್ನು ಕೊಂದವರು ಯೇಸುವಿವ ಶವವನ್ನು ಯೇಸುವಿನ ಕಡೆಯವರು ಕದ್ದುಕೊಂಡು ಹೋಗಿದ್ದಾರೆ ಎಂದು ಗಾಳಿ ಸುದ್ದಿ ಹಬ್ಬಿಸುತ್ತಾರೆ, ಆದರೆ ಯೇಸುವಿನ ಶವಕ್ಕೆ ಉಡಿಸಿದ ಬಟ್ಟೆ, ಅಲ್ಲಿಯೆ ಇದ್ದು ಅದು ಚೊಕ್ಕವಾಗಿ ಮಡಚಿ ಇಟ್ಟಿದ್ದರು, ಮೂರು ದಿನಗಳ ನಂತರ ಶವ ಕೊಳೆಯುತ್ತದೆ, ಅಂತ ಶವ ಹಾಗೇಯೆ ಕೊಂಡುಹೋಗಲು ಅಸಾಧ್ಯ, ಅದನ್ನು ಬಟ್ಟೆ ಸಮೇತವಾಗಿ ತೆಗೆದುಕೊಂಡು ಹೋಗಬೇಕಿತ್ತು, ಆದರೆ ಹಾಗೇ ಮಾಡಲಿಲ್ಲ, ಅಂದರೆ ಯೇಸು ನೀಜವಾಗಿಯೂ ಪುನರುಥ್ಥಾನಗೊಂಡಿದ್ದನು, ಅಲ್ಲದೆ ಪುನರುಥ್ಥಾನಗೊಂಡಿದ್ದ ನಂತ ಅನೇಕ ಸಲ ಶಿಸ್ಯರ ದ್ರಷ್ಟಿಗೆ ಬಿದ್ದಿದ್ದುನು” ಎಂದು ತಿಳಿಸಿದರು.
“ಹುಟ್ಟು ಪಾಪಿಗಳಾದ ನಮ್ಮನ್ನು ಚಿಕ್ಕವರಿರುವಾಗ ಪವಿತ್ರ ಜಲದಿಂದ ಸ್ನಾನ ಮಾಡಿ ಶುದ್ಧಿಕರಿಸುವಾಗ ನಮಗೆ ಬಿಳಿ ಬಟ್ಟೆ ಉಡಿಸಲಾಗುತ್ತದೆ, ಅದಕ್ಕೆ ಹಿಂದಿನ ಕಾಲದಲ್ಲಿ ಸಿಂಧೊರ ಎನ್ನುತಿದ್ದರು, ಯೇಸುವಿನ ಶವಕ್ಕೆ ಕೂಡ ಬಿಳಿ ಬಟ್ಟೆ ಸಿಂಧೊರ ಉಡಿಸಲಾಗಿತ್ತು, ಅದನ್ನೆ ಯೇಸು ನಮಗೆ ಒಂದು ಸಂಕೇತವಾಗಿ ಬಿಟ್ಟು ಹೋಗಿದ್ದಾರೆ. ಆ ಸಿಂಧೊರವು ನಮ್ಮ ಕ್ರೈಸ್ತ ಧರ್ಮಸಭೆಗೆ ಪವಿತ್ರ ಉಡುಗೆಯಾಗಿದೆ, ನಾವೂ ನಮ್ಮನ್ನು ಪಾಪ ಕ್ರತ್ಯಗಳಿಂದ ದೂರವಿರಲು, ಕೂಡ ಈ ಸಿಂಧೊರದಂತಹ ಉಡುಗೆಯನ್ನು ನಮ್ಮ ಆತ್ಮಗಳಿಗೆ ಉಡಿಸಿಕೊಳ್ಳಬೇಕು. ನಾವು ಶುದ್ದ ಚಿಂತನೆಯುಳ್ಳವರಾಗಿದ್ದು, ಶುದ್ದ ಕ್ರತ್ಯಗಳಿಂದ ಜೀವಿಸಬೇಕು, ಯೇಸು ನಮಗೆ ಮಹಿಮೆಭರಿತ ಪವಿತ್ರ ಉಡುಗೆಯನ್ನು ಉಡಿಸಿದ್ದಾರೆ, ಆ ಉಡುಗೆಯ ಸಹಾಯದಿಂದ ನಮ್ಮನ್ನು ಹೊಲಸಾಗದಂತೆ ನಮ್ಮನ್ನು ಕಾಪಾಡಲು ಆ ಯೇಸುವೇ ನಮಗೆ ಶಕ್ತಿ ನೀಡಲಿ” ಎಂದು ಅವರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಜಲವನ್ನು ಪವಿತ್ರೀಕರಿಸಲಾಯಿತು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಫಾಸ್ಕ ಹಬ್ಬದ ಧಾರ್ಮಿಕ ಕ್ರಿಯೆಗಳಲ್ಲಿ ಸಹಕರಿಸಿ ಬಲಿದಾನದಲ್ಲಿ ಭಾಗಿಯಾದರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ದೀರ್ಘವಾದ ಕಿರ್ತನೆಯನ್ನು ಹಾಡಿದ್ದು ವೀಶೆಷವಾಗಿತ್ತು. ಕೊನೆಯಲ್ಲಿ ಅವರು “450 ವರ್ಷಕ್ಕೂ ಹೆಚ್ಚು ಚರಿತ್ರೆಯುಳ್ಳ ಈ ಇಗರ್ಜಿಯಲ್ಲಿ ಅಂದಿನಿಂದ ಇಂದಿನವರೆಗೆ ಈ ಧಾರ್ಮಿಕ ವಿಧಿಗಳು ನಡೆದುಕೊಂಡು ಬಂದಿವೆ ಎಂದು ಹೇಳಲು ಹೆಮ್ಮೆಯಾಗುತ್ತದೆ.” ಎಂದು ಹೇಳುತ್ತಾ ಭಕ್ತಾಧಿಗಳು ಶಿಸ್ತು ಭಕ್ತಿಯಿಂದ ಈ ಆಚರಣೆಯಲ್ಲಿ ಭಾಗಿಯಾಗಿದ್ದಕ್ಕೆ, ಧನ್ಯವಾದಗಳನ್ನು ಅರ್ಪಿಸಿದರು. ಈ ಆಚರಣೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ, ಹಬ್ಬದ ಶುಭಾಷಯಗಳನ್ನು ನೀಡಿದರು. ಈ ಸಂದರ್ಭದಲ್ಲಿ ಬಹು ಸಂಖ್ಯೆಯಲ್ಲಿ ಭಕ್ತಾಧಿಗಳು ನೆರೆದಿದ್ದರು.