ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಹೆತ್ತವರು ಮತ್ತು ಪೋಷಕರ ಸಮ್ಮಿಲನ ಕಾರ್ಯಕ್ರಮ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಏಪ್ರಿಲ್ 8ರಂದು ಹೆತ್ತವರು ಮತ್ತು ಪೋಷಕರ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವಿರಾಜ್ ನಾಯಕ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇರುವಂತಹ ನೆಲೆಗಳನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮನ್ನು ತಾವು ಮೊದಲು ಅರಿಯಬೇಕು. ತನ್ನಲ್ಲಿರುವ ಕೌಶಲಗಳನ್ನು ಗುರುತಿಸಿಕೊಳ್ಳಬೇಕು. ಜೊತೆಗೆ ಉತ್ತಮ ಅಂಕಗಳನ್ನು ಪಡೆಯುವುದು ತುಂಬಾ ಮುಖ್ಯ. ಅಲ್ಲದೆ ಸಾಮಾನ್ಯ ಜ್ಞಾನ ಅಷ್ಟೇ ಅಗತ್ಯ ಅಲ್ಲದೆ ಹೆತ್ತವರ ಜವಾಬ್ದಾರಿಯನ್ನು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರಭಾವತಿ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ.ಶಾಂತಾರಾಮ್ ಪ್ರಭು, ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಆದಂ ಗುಲ್ವಾಡಿ, ರಾಜೇಂದ್ರ ಉರಾಳ್ ಪ್ರಾಕ್ತನ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಸತ್ಯನಾರಾಯಣ ಸ್ವಾಗತಿಸಿದರು. ಇತಿಹಾಸ ಪ್ರಾಧ್ಯಾಪಕ ಪ್ರೊ. ಗೋಪಾಲ್ ಕೆ ವಂದಿಸಿದರು.

ಕಳೆದು ಹೋಗಿರುವ ಪಣಸಮಾಕನಹಳ್ಳಿ ಕೆರೆಯನ್ನು ಹುಡುಕಿಕೊಟ್ಟು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ-ರೈತಸಂಘ

ಶ್ರೀನಿವಾಸಪುರ; ಏ.7: ಕಳೆದುಹೋಗಿರುವ ಪಣಸಮಾಕನಹಳ್ಳಿ ಕೆರೆಯನ್ನು ಹುಡುಕಿಕೊಟ್ಟು ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಸರ್ಕಾರಿ ಕೆರೆಯನ್ನು ಉಳಿಸಬೇಕೆಂದು ಏ.12ರ ಬುಧವಾರ ತಾಲೂಕು ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ನಗರಕ್ಕೆ ಕೂಗಳತೆ ದೂರದಲ್ಲಿರುವ ಮಳೆ ನೀರು ಸಂಗ್ರಹವಾಗುವ ಸರ್ಕಾರಿ ಕೆರೆ ಸರ್ವೇ ನಂ.72ರಲ್ಲಿ 15 ಎಕರೆ 24 ಗುಂಟೆ ಕೆರೆ ಜಮೀನನ್ನು ಕಂದಾಯ ಹಾಗೂ ಸರ್ವೇ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂದು ಕೋಟ್ಯಾಂತರ ರೂಪಾಯಿ ಕೆರೆ ಜಮೀನನ್ನೇ ಅಕ್ರಮ ದಾಖಲೆಗಳನ್ನು ಸೃಷ್ಠಿ ಮಾಡಿ ಪ್ರಭಾವಿ ಬಿಜೆಪಿ ನಾಯಕ ಸೇರಿದಂತೆ ಕೆಲವರಿಗೆ ನಿಯತ್ತಾಗಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಟ್ಟಿರುವ ತಾಲೂಕು ಆಡಳಿತದ ಅವ್ಯವಸ್ಥೆ ವಿರುದ್ಧ ವ್ಯಕ್ತಪಡಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಅವರು ಇದೇ ಕೆರೆ ಸರ್ವೇ ನಂಬರ್ 72ನ್ನು ಹೊಸ ನಂಬರ್ ಆಗಿ ದುರಸ್ಥಿ ಮಾಡಿರುವ ನಂಬರ್ ನಲ್ಲಿ 5 ಎಕರೆ 10 ಗುಂಟೆ ಮಾಡಿಕೊಳ್ಳುವ ಮುಖಾಂತರ ಕೆರೆ ಒತ್ತುವರಿ ಮಾಡಿಕೊಂಡಿರುವುದು ಯಾವ ನ್ಯಾಯ ಸ್ವಾಮಿ ? ಜವಾಬ್ದಾರಿ ಸ್ಥಾನದಲ್ಲಿದ್ದು ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ತಾವುಗಳೇ ರಸ್ತೆ ಪಕ್ಕದಲ್ಲಿದೆ ಎಂದು ಖರೀದಿ ಮಾಡಿದರೆ ಇನ್ನು ಕೆರೆಯನ್ನು ಉಳಿಸುವವರು ಯಾರು ಎಂದು ಬಿಜೆಪಿ ಜಿಲ್ಲಾಧ್ಯಕ್ಷರನ್ನು ಪ್ರಶ್ನೆ ಮಾಡಿದರು. ಕೆರೆ ಅಂಗಳ ಎಂದು ಸರ್ವೇ ದಾಖಲೆ ಹೇಳುತ್ತಿದೆ. ಆದರೆ ಕಂದಾಯ ಅಧಿಕಾರಿಗಳು ಕೆರೆ ಸ್ವರೂಪ ಹಾಳಾಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ತಾಲೂಕಿನಾದ್ಯಂತ ಭೂಮಿ ಇಲ್ಲದ ರೈತಾಪಿ ವರ್ಗಕ್ಕೆ ಎರಡು ಎಕರೆ ಜಮೀನು ಹಾಗೂ ಕುರಿಗಾಹಿಗಳು ಕುರಿ ಮೇಯಿಸಲು ಗೋಮಾಳ ಜಮೀನನ್ನು ಹುಡುಕಾಡಿದರೂ ಅಂಗೈ ಅಗಲ ಜಾಗ ಸಿಗುವುದಿಲ್ಲ. ಆದರೆ, ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ನಗರಕ್ಕೆ ಹೊಂದಿಕೊಂಡಿರುವ ಕೆರೆಯನ್ನೇ ಮಾರಾಟಕ್ಕೆ ಇಟ್ಟಿದ್ದರೆ ಇನ್ನು ಜನಸಾಮಾನ್ಯರಿಗೆ ನ್ಯಾಯ ಸಿಗುವುದೇ.
ಸರ್ವೇ ನಂಬರ್ 72ರ ಪಣಸಮಾಕನಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಲು ವಿಶೇಷ ಕಂದಾಯ ಸರ್ವೇ ಅಧಿಕಾರಿಗಳ ತಂಡ ರಚನೆ ಮಾಡಿ ಸರ್ವೇ ಮಾಡಿಸಿ ಕಳೆದುಹೋಗಿರುವ ಕೆರೆಯನ್ನು ಹುಡುಕಿಕೊಟ್ಟು ಅಭಿವೃದ್ಧಿಪಡಿಸಿ ಒತ್ತುವರಿ ದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಏ.12ರ ಬುಧವಾರ ತಾಲೂಕು ಕಚೇರಿ ಮುಂದೆ ಹೋರಾಟ ಮಾಡುವ ಮೂಲಕ ಕೆರೆ ಉಳಿಸುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಂಬಲ ನೀಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವು, ಸಂತೋಷ್, ಶೇಖ್ ಶಭೀಉಲ್ಲಾ, ಸಹದೇವಣ್ಣ, ಫಾರೂಖ್ ಪಾಷ, ಬಂಗಾರಿ ಮಂಜು, ರಾಮಸಾಗರ ವೇಣು, ಸಂದೀಪ್ ಗೌಡ, ಕಿರಣ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ಹೆಬ್ಬಣಿ ಆನಂದರೆಡ್ಡಿ, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಗಿರೀಶ್ ಮುಂತಾದವರಿದ್ದರು.

ಶುಭ ಶುಕ್ರವಾರದಂದು ಬೆಳಿಗ್ಗೆ ಪಿಯುಸ್ ನಗರ ಇಗರ್ಜಿಯ ಮೈದಾನದಲ್ಲಿ ಪವಿತ್ರ ಶಿಲುಬೆಯ ಪಯಣ.

ಶುಭ ಶುಕ್ರವಾರದಂದು ಬೆಳಿಗ್ಗೆಪಿಯುಸ್ ನಗರ ಇಗರ್ಜಿಯ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ  ಪಯಣವನ್ನು  ನಡೆಸಲಾಯಿತು.

ಕುಂದಾಪುರ: 75 ನೇ ವಿಶ್ವ ಆರೋಗ್ಯ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಎದುರು ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ದಿನಾಚರಣೆ

ಕುಂದಾಪುರ: 75 ನೇ ವಿಶ್ವ ಆರೋಗ್ಯ ದಿನಾಚರಣೆಯನ್ನು ಈ ದಿನ ತಾರೀಖು 07-04-2023 ರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಎದುರು ಆಚರಿಸಲಾಯಿತು. ಉಚಿತ ಆರೋಗ್ಯ ತಪಾಸಣೆ ಈ ಪ್ರಯುಕ್ತ ಆಯೋಜಿಸಲಾಯಿತು. 133 ಜನ ಶಿಭಿರಾರ್ಥಿ ಗಳು ಇದರ ಪ್ರಯೋಜನ ಪಡೆದರು. ಈ ಕಾರ್ಯ ಕ್ರಮವನ್ನು ಖ್ಯಾತ ವೈದ್ಯರಾದ ಡಾ. ಎ. ವಸಂತ ಶೆಟ್ಟಿಯವರು ಉದ್ಘಾಟಿಸಿದರು ಮತ್ತು ರೆಡ್ ಕ್ರಾಸ್ ಸಂಸ್ಥೆ ಯ ದೈನಂದಿನ ಕಾರ್ಯಕ್ರಮ ವನ್ನು ಕೊಂಡಾಡಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ ಫಾರ್ಮೆಸಿಸ್ಟ್ ಬಿ. ಎಮ್ ಚಂದ್ರಶೇಖರ ಹಾಗೂ ಸಿಭಂದಿಗಳು ಉಪಸ್ಥಿತರಿದ್ದರು.

ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಷ್ಟ ಮರಣದ ಶುಕ್ರವಾರ

ಬೆಳಗಿನ ಹೊತ್ತಿನಲ್ಲಿ ಕಶ್ಟ ಯಾತನೆಯ  ಶಿಲುಭೆ ಪಯಣ

ಕುಂದಾಪುರ ಎ.8: ಶುಭ ಶುಕ್ರವಾರದಂದು ಬೆಳಿಗ್ಗೆ ಕುಂದಾಪುರ ರೋಜರಿ ಮಾತಾ ಚರ್ಚಿನ ಇಗರ್ಜಿ ಮೈದಾನದಲ್ಲಿ ಶ್ರದ್ದೆ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಪಯಣವನ್ನು ನಡೆಸಲಾಯಿತು. ಯೇಸು ಶಿಲುಭೆ ಹೊತ್ತು, ಕಶ್ಟ ಕಾರ್ಪಣ್ಯಗಳನ್ನು ಒಟ್ಟು 14 ಅಧ್ಯಾಯಗಳು, ಅವುಗಳನ್ನು ಚರ್ಚಿನ ವಾಳೆಯಯವರು ಮತ್ತು ಯುವ ಸಂಘಟನೆಯವರು ಒಂದೊಂದು ಶಿಲುಭಾ ಅಧ್ಯಾಯಾವನ್ನು ಯೇಸು ಅನುಭವಿಸಿದ ಯಾತನೆ ಜಾಪಿಸಿ ಪ್ರಾರ್ಥನೆ ಮೂಲಕ ನೇರವೆರಿಸಿದರು.

ಸಂಜೆ ಇಗರ್ಜಿಯ ಒಳಗಡೆ ಯೇಸುವಿನ ಕಷ್ಟ ಮರಣದ  ಧಾರ್ಮಿಕ ವಿಧಿ


    ಸಂಜೆ ಪುನ: ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಗೌರವ ಪೂರ್ವಕ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ಯೇಸುವಿನ ಕಶ್ಟ ಮರಣದ ಧಾರ್ಮಿಕ ವಿಧಿಗಳನ್ನು ನಡೇಸಲಾಯಿತು.
     ಸಂಜೆಯ ಪ್ರಾರ್ಥನ ವಿಧಿಗಳನ್ನು ಕಟ್ಕರೆ ಬಾಲಾ ಯೇಸುವಿನ ಆಶ್ರಮದ ಧರ್ಮಗುರು ವಂ| ದೀಪ್ ಫೆರ್ನಾಂಡಿಸ್ ನೆಡೆಸಿಕೊಟ್ಟು ’ಯೇಸುವಿನ ಗಾಯಗಳಿಂದ ನಾವು ಗುಣ ಹೊಂದಿದೆವು ಎಂದು ನಾವು ನೆನಪಿಟ್ಟುಕೊಳ್ಳಬೇಕು. ನಾವು ಸಾಮಾನ್ಯವಾಗಿ ಮಾಡುವ ಪಾಪಗಳು ಮಾತ್ರ ನಮಗೆ ತಿಳಿದಿರುತ್ತವೆ, ಆದರೆ ನಮಗೆ ತಿಳಿಯದಂತೆ ನಾವು ಅನೇಕ ಪಾಪಗಳನ್ನು ಮಾಡುತ್ತೇವೆ, ಪರರಿಗೆ ಒಳಿತನ್ನು ಉಂಟು ಮಾಡದಂತೆ ಮಾಡುವುದು, ತಡೆಯುವುದು, ಬೇರೆಯವರು ಕಶ್ಟದಲ್ಲಿರುವರಿಗೆ ಸಹಾಯ ಮಾಡದೆ ಇರುವುದು, ಹಸಿದಾಗ ಹೊಟ್ಟೆಗೆ ಕೊಡದೆ ಇರುವುದು, ಇತರರರಿಗೆ ಒಳಿತನ್ನು ಬಯಸದೇ ಇರುವುದು, ಮನಸಿನಲ್ಲಿ ದೇವರನ್ನು ಅನುಮಾನಿಸುವುದು ಇಂತಹ ನಡೆಗಳು ಕೂಡ ಪಾಪಗಳಾಗಿವೆ.” ಎಂದು ಹೇಳುತ್ತ ’ಯೇಸು ನಮಗೆ ಹೇಳಿದ್ದಾರೆ, ನಾನು ನಿನ್ನನ್ನು ಪ್ರೀತಿಸುವಂತೆ, ನೀನು ಪರರನ್ನು ಪ್ರೀತಿಸಬೇಕು. ನಮ್ಮ ಪಾಪಗಳಿಗಾಗಿ ಯೇಸು ಸ್ವಾಮಿ ಶಿಲುಭೆಯ ಮರಣ ಹೊಂದಿದರು, ೨೦೦೦ ಸಾವಿರ ವರ್ಷಗಳ ಹಿಂದೆ ಶಿಲುಭೆಯು ಅತ್ಯಂತ ಅಸಯ್ಯ ಹೀನಯಾವಾದ ಸಂಕೇತವಾಗಿತ್ತು, ಯೇಸು ಶಿಲುಭೆಯ ಮೇಲೆ ಮರಣ ಹೊಂದಿ ಆ ಶಿಲುಭೆಯನ್ನು ಪವಿತ್ರಗೊಳಿಸಿದರು. ಇದು  ದೇವರು ನಮಗೆ ಪಾಪಗಳಿಂದ ವೀಮೊಚನೆಗೊಳಿಸಲು ಎರ್ಪದಡಿಸಿದ ಯೋಜನೆ. ನಮ್ಮ ಮೇಲೆ ದೇವರಿಗೆ ಪ್ರೀತಿ ಇದೆ, ಅವರಿಗೆ ನಮ್ಮನ್ನು ಕಳೆದುಕೊಳ್ಳಲು ಇಷ್ಟವಿಲ್ಲ, ನೀವೆಲ್ಲರೂ ಅವರ ಸ್ವರ್ಗರಾಜ್ಯದಲ್ಲಿ ಬರಬೇಕೆಂದು ಅವರು ಆಶಿಸುತ್ತಾರೆ. ಅದಕ್ಕಾಗಿಯೇ ದೇವರು ತಮ್ಮ ಪುತ್ರ ಯೇಸುವನ್ನು ಕಳುಹಿಸಿ ಬಲಿ ಅರ್ಪಿಸಿದ್ದಾನೆ, ಕಾರಣ ನೀವು ಪರಿವರ್ತನೆಯಾಗಬೇಕು. ಹೀಗಾಗಿ ನಾವು ಯೇಸು ಹೇಳಿದ ಮಾರ್ಗದಲ್ಲಿ ನಡೆಯೋಣ, ಶಿಲುಭೆಯ ಮೇಲೆ ಮರಣ ಹೊಂದಿದ ಆ ಯೇಸುವೇ ನಿಮಗೆ ದಾರಿದೀಪವಾಗಲಿ” ಎಂದು ಅವರು ಸಂದೇಶ ನೀಡಿದರು.
   ಈ ಪ್ರಾರ್ಥನಾ ವಿಧಿಗಳಲ್ಲಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಭಾಗಿಯಾದರು. ಈ ಶುಭ ಶುಕ್ರವಾರದ ಧಾರ್ಮಿಕ ವಿಧಿಯಲ್ಲಿ , ಹಲವಾರು ಧರ್ಮ ಭಗಿನಿಯರು, ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಶ್ರದ್ದಾ ಭಕ್ತಿಯಿಂದ  ಪಾಲ್ಗೊಂಡರು.