ಬಿಕರ್ಣಕಟ್ಟೆ:ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ನಲವತ್ತು ಘಂಟೆಗಳ ನಿರಂತರಆರಾಧನೆ / Bikarnakatte: 40Hours of Eucharistic Adoration at Infant Jesus Shrine

ಮಂಗಳೂರಿನ ಬಿಕರ್ಣಕಟ್ಟೆಯಲ್ಲಿರುವ ಪ್ರಸಿದ್ಧ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ, ಪವಿತ್ರ ವಾರದಲ್ಲಿ“ಈಸ್ಟರ್”ಹಬ್ಬಕ್ಕೆತಯಾರಿಯಾಗಿ ನಲವತ್ತು ಘಂಟೆಗಳ ನಿರಂತರ ಪರಮಪ್ರಸಾದ ಆರಾಧನೆಯನ್ನು ಆಯೋಜಿಸಲಾಗಿತ್ತು. ಸೋಮವಾರ ಬೆಳ್ಳಿಗೆ ಐದುಘಂಟೆಗೆ ಫಾದರ್‍ರೊವೆಲ್‍ಡಿಸೋಜ್ ಬಲಿಪೂಜೆ ಮುಖಾಂತರ ಪವಿತ್ರ ಪರಮಪ್ರಸಾದವನ್ನು ಪ್ರತಿಶ್ಠಾಪಿಸಿ ಪವಿತ್ರ ಪರಮಪ್ರಸಾದದಲ್ಲಿರುವಯೇಸುಕ್ರಿಸ್ತರಿಗೆಆರಾಧನೆ ಸುತ್ತಿಸ್ತೋತ್ರ ಸಲ್ಲಿಸುವುದರ ಮೂಲಕ ಆರಾಧನೆಯನ್ನು ಪ್ರಾರಂಭಿಸಿದರು. ಪ್ರತಿಒಂದುಘಂಟೆಗೆ ವಿವಿಧ ಗುಂಪುಗಳು ಆರಾಧನೆಯನ್ನು ನೆರವೇರಿಸುತಿದ್ದರು. ಬಜ್ಜೋಡಿಚರ್ಚಿನ ಗುಂಪು, ಕಾರ್ಮೆಲ್ ಸಹೋದರರು, ಸೆಕುಲರ್‍ಕಾರ್ಮೆಲ್ ಸಭೆಯವರು, ಬಾಳೊಕ್ ಜೆಜುಕುಟುಂಬದವರು, ಫಾ.ರುಡೊಲ್ಫ್ ಪಿಂಟೊ, ಫಾ.ಲ್ಯಾನ್ಸಿ ಲುವಿಸ್, ಫಾ. ಅನಿಲ್ ಅಲ್ಫ್ರೆಡ್, ಫಾ. ಜೊಸೆಫ್‍ಡಿಸೋಜಾ, ಸಹೊದರ. ಜೊಯೆಲ್ ಲಸ್ರಾದೊ, ಫಾ. ರಿಚರ್ಡ್‍ಕ್ವಾಡ್ರಸ್, ಫಾ. ಬೊನಾವೆಂಚರ್, ಸಹೋದರ. ಪ್ರಶಾಂತ್ ಫ್ರ್ಯಾಂಕ್, ಸಹೊದರ. ಮರ್ವಿನ್, ಮರಿಯಾಡಿಸೋಜಾ, ಪ್ರಿಜನ್ ಮಿನಿಸ್ಟ್ರಿ, ಎಮ್.ಪಿ. ನೊರೊನ್ಹಾ, ಫಾ. ದೀಪ್ ಫರ್ನಾಂಡಿಸ್, ಫಾ.ಸ್ಟೀಫನ್ ಲೊಬೋ ರವರು ವಿವಿಧ ಕೋರಿಕೆಗಳಿಗೆ, ಬೇಡಿಕೆಗಳಿಗೆ ಪ್ರಾರ್ಥಿಸುತ್ತಾ ಭಕ್ತಾದಿಗಳು ಇನ್ನೂ ಭಕ್ತಿಯಲ್ಲಿ ಪ್ರಾರ್ಥಿಸಲು ನೆರವಾದರು. ವಿಶೇಷವಾಗಿ ಸಮಾಜದಲ್ಲಿ ಶಾಂತಿಗಾಗಿ, ರೋಗಿಗಳಿಗೆ, ಕುಟುಂಬಗಳಿಗಾಗಿ, ಮಕ್ಕಳಿಗಾಗಿ, ಯುವಜನಕಾಗಿ, ನವದಂಪತಿಗಳಿಗಾಗಿ, ಹಿರಿಯರಿಗಾಗಿ, ಮರಣದಂಚಿನಲ್ಲಿರುವವರಿಗಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಸಹಸ್ರಾರು ಭಕ್ತಾದಿಗಳು ಈ ಆರಾಧನೆಯ ವಿಧಿಯಲ್ಲಿ ಭಾಗವಹಿಸಿ ತಮ್ಮಕೋರಿಕೆ, ಬಿನಹಗಳಿಗೆಲ್ಲಾ ಪ್ರಾರ್ಥಿಸಿದರು. ಮಂಗಳವಾರ ರಾತ್ರಿ ಹತ್ತುಘಂಟೆಗೆ ಬಲಿಪೂಜೆಯ ಮೂಲಕ ನಲವತ್ತು ಘಂಟೆಗಳ ನಿರಂತರ ಪರಮಪ್ರಸಾದಆರಾಧನೆಯುಕೊನೆಗೊಂಡು ಭಕ್ತಾದಿಗಳ ಮನದಲ್ಲಿ ಶಾಂತಿ ಪ್ರೀತಿ ಹರಡಿತ್ತು.

Bikarnakatte: 40Hours of Eucharistic Adoration at Infant Jesus Shrine!

Infant Jesus Shrine at Bikarnakatte, Mangaluru, on the view of preparing for the Easter,in the Holy Week had organised 40 hours of continuous Eucharistic Adoration. On Monday morning at 5 am, Fr. Rovel D’Souza initiated the Eucharistic Adoration with the Holy Eucharist. For every hour or two different groups, priests and brothers led and animated the adoration for various intentions and created a prayerful atmosphere and helped the gathered faithful to pray well. Groups namely Bajjodi parish members, Secular Carmelites, Prison ministry, Carmelite Brothers, Frs. Rudolph Pinto, Lancy Lewis, Anil Alfred, Joseph D’Souza, Richard Quadros, Bonaventure, Deep Fernandes, Stephen Lobo and Brothers Joel Lasrado, Prashanth Frank, Mervin and Maria D’souza and M.P Noronha and many of them rendered their help to praise and worship the Eucharistic Lord. Many people had made their time came, offered their praises, and prayed for their various intentions. Tuesday night at 10 pm with the Eucharistic Celebration 40 hours of Eucharistic Adoration concluded preparing the faithful for the fruitful Easter celebrations.

ನಾನು ಶಾಸಕನಾಗಿದ್ದಗಲೂ ನಂತರ ದಿನಗಳಲ್ಲಿಯೂ ಎಲ್ಲಾ ಸಮುದಾಯದವರಿಗೂ ಸ್ಪಂದಿಸಿದ್ದೇನೆ:ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ನಾನು ಶಾಸಕನಾಗಿದ್ದ ಸಮಯದಲ್ಲೇ ಆಗಲಿ, ನಂತರ ದಿನಗಳಲ್ಲಿಯೇ ಆಗಲಿ ಎಲ್ಲಾ ಸಮುದಾಯದವರಿಗೂ ಕಷ್ಟ , ಸುಖಗಳಿಗೆ ಸ್ಪಂದಿಸಿ ಜನರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದೇನೆ ಎಂದು ಜೆಡಿಎಸ್ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಗುಡಿಪಲ್ಲಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಕ್ಷವು ಪಂಚರತ್ನ ಯೋಜನೆ ಮುಖಾಂತರ ಧರ್ಮಾತೀತ, ಜ್ಯಾತ್ಯಾತೀತವಾಗಿ ಶಿಕ್ಷಣ, ಉದ್ಯೋಗ, ಕೃಷಿ ಆರೋಗ್ಯ , ವಸತಿ, ಸಂಬಂದಿಸಿದ ಯೋಜನೆಗಳು ಜನರ ಮನ್ನಣೆ ಗಳಿಸಿದೆ. ಹಾಗೂ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಯಂತಹ ಇನ್ನೂ ಅನೇಕ ಯೋಜನೆಗಳು ಜಾರಿಗೆ ತಂದು, ವಿಶೇಷವಾಗಿ ಜಿಲ್ಲೆಯನ್ನು ಅಭಿವೃದ್ಧಿ ಪಡಿಸುವ ಅನೇಕ ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಹಮ್ಮಿಕೊಂಡಿದ್ದು, ಅವರ ಕನಸು ನನಸು ಮಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಎಚ್.ಡಿ.ಕುಮಾರ್‍ಸ್ವಾಮಿರವರ ನೇತೃತ್ವದ ಜೆಡಿಎಸ್ ಪಕ್ಷವು ಆಡಳಿತಕ್ಕೆ ಬರುಲು ನಿಮ್ಮೆಲ್ಲೆರ ಆರ್ಶೀವಾದ ಬೇಕಾಗಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಸಿದ್ದಾಂತಗಳನ್ನು ಮೆಚ್ಚಿರುವ ಮತದಾರರು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಎಚ್.ಡಿ.ಕುಮಾರಸ್ವಾಮಿ ರವರನ್ನ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಭರವಸೆ ನೀಡಿದರು.
ಶಾಸಕ ಕೆ.ಆರ್.ರಮೇಶ್‍ಕುಮಾರ್‍ರವರು ಅರಣ್ಯ ಇಲಾಖೆ ಹಾಗೂ ಸಣ್ಣ ರೈತರ ಜಮೀನನ್ನು ಆಕ್ರಮಸಿಕೊಂಡು, ಕ್ಷೇತ್ರದ ಅಭಿವೃದ್ಧಿಗಿಂತ ಸ್ವಂತ ಜಮೀನನ್ನು ಅಭಿವೃದ್ಧಿ ಪಡಿಸಿದ್ದಾರೆ ವಿನಃ ಕ್ಷೇತ್ರ ಅಭಿವೃದ್ಧಿಪಡಿಸಿಲ್ಲ ಎಂದು ಆರೋಪಿಸಿದರು.
ಮುಂದಿನ ಚುನಾವಣೆಯಲ್ಲಿ ನನಗೆ ಮತವನ್ನು ಹಾಕಿ ಗೆಲುವು ತಂದುಕೊಡುವ ಮೂಲಕ ರಾಜ್ಯದಲ್ಲಿ ಎಚ್.ಡಿ.ಕುಮಾರ್‍ಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸರ್ಕಾರವನ್ನು ಆಡಳಿತಕ್ಕೆ ತರೋಣ ಎಂದು ಮನವಿ ಮಾಡಿದರು.
ಗುಡಿಪಲ್ಲಿ ಶಿವಾರೆಡ್ಡಿ ನೇತೃತ್ವದಲ್ಲಿ 40 ಕುಟುಂಬಗಳು ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು. ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕಸಬಾ ಹೋಬಳಿಯ ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಕೆ.ವಿ.ಶಿವಾರೆಡ್ಡಿ, ಸಿಮೆಂಟ್‍ನಾರಾಯಣಸ್ವಾಮಿ, ಕೊರ್ನಹಳ್ಳಿ ಆಂಜಿ, ಗೌನಿಪಲ್ಲಿ ರಾಮಮೋಹನ್, ಭೂಚಕ್ರರೆಡ್ಡಿ, ಮಹೇಶ್, ಅಶೋಕ್, ಸುಧಾಕರ, ಗುರುವಲ್ಲೋಲ್ಲಗಡ್ಡ ರಾಜ, ಶಿವಾರೆಡ್ಡಿ, ರಘುನಾಥಪುರ ಸುಬ್ರಮಣಿ, ಕೊತ್ತೂರುಶಿವ, ಅಮ್ಜದ್ ಇದ್ದರು.

ಗಂಟಾಲಕಟ್ಟೆ : ಆಶಾವಾದಿ ಪ್ರಕಾಶನ್ ಆನಿ ಐ.ಸಿ.ವೈ.ಎಮ್/ವೈ.ಸಿ.ಎಸ್ ಮಾಂಡುನ್ ಹಾಡ್ತಾ; ಕೊಂಕಣಿ ಸಾಹಿತಿಕ್ ತರ‍್ಭೆತೆ ಶಿಭಿರ್

ಆಶಾವಾದಿ ಪ್ರಕಾಶನ್ ಆನಿ ಐ.ಸಿ.ವೈ.ಎಮ್/ವೈ.ಸಿ.ಎಸ್ ಗಂಟಾಲಕಟ್ಟೆ ಮಾಂಡುನ್ ಹಾಡ್ತಾ; ಕೊಂಕಣಿ ಸಾಹಿತಿಕ್ ತರ‍್ಭೆತೆ ಶಿಭಿರ್
(ಸನ್ವಾರಾ 6 ಮಾಯ್ 2023, ಸಕಾಳಿಂ 9:30 ಥಾವ್ನ್ 3:30 ಪರ್ಯಾಂತ್)

1. ಖಬ್ರೊ ಬರಂವ್ಚಿ ತರ್ಭೆತ್ (ಮಾ|ರೊಯ್ಸನ್ ಫೆರ್ನಾಂಡಿಸ್, ಸಂ:ಉಜ್ವಾಡ್ ಪಂದ್ರಾಳೆಂ)
2. ಲೇಕನಾಂ ಬರಂವ್ಚಿ ತರ್ಭೆತ್ (ಮಾ|ಚೇತನ್ ಲೋಬೊ, ಸಂ:ಸೆವಕ್ ಮಯ್ನ್ಯಾಳೆಂ)
3. ಮೊಟ್ವ್ಯೊ ಕಥಾ ಬರಂವ್ಚಿ ತರ್ಭೆತ್ (ವಲ್ಲಿ ಕ್ವಾಡ್ರಸ್, ಸಂ: ಪಯ್ಣಾರಿ.ಕೊಮ್)

ಆಶಾವಾದಿ ಪ್ರಕಾಶನಾಚಿಂ ದೋನ್ ಪುಸ್ತಕಾಂ ಮೊಕ್ಳಿಕ್ ಜಾತಲಿಂ;
1. ಆಟ್ವೊ ಸುರ್ (ಸಲೊಮಿ ಮಿಯಾಪದವ್‌ಚೊ ಕವಿತಾಜಮೊ)
2. ಪಾನಾಂಚ್ ಫುಲಾಂ ಜಾತಾನಾ (ಮೊನಿಕಾ ಡೆ’ಸಾ ಮಥಾಯಸಾಚೊ ಕವಿತಾಜಮೊ)

ಕೊಂಕಣಿ ಕವಿಗೋಶ್ಟಿ ಮಾಂಡುನ್ ಚಲವ್ನ್ ವ್ಹರ್ತಾ ಆಂಡ್ಯೂ ಎಲ್. ಡಿ’ಕುನ್ಹಾ

ಮಾ|ರೊನಾಲ್ಡ್ ಡಿ’ಸೋಜಾಚ್ಯಾ ಅಧ್ಯಕ್ಷ್‌ಪಣಾಖಾಲ್ ಚಲ್ಚ್ಯಾ ಹ್ಯಾ ಕಾಮಾಸಾಳಾಂತ್ ಯುವ ಬರವ್ಪ್ಯಾಂನಿ ತಶೆಂಚ್ ಸಾಹಿತಿಕ್ ಅಭಿರುಚ್ ಆಸ್ಚ್ಯಾಂನಿ ಸಂಪರ್ಕ್ ಕರ್ಚೊ.

ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರನ್ನಾಗಿ ವೈ.ವಿ.ನರಸಿಂಹಮೂರ್ತಿ ನೇಮಕ

ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ವೈ.ವಿ.ನರಸಿಂಹಮೂರ್ತಿ ಅವರನ್ನು, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಭಗವಾನ್ ಮಹಾವೀರ ಜನಯಂತಿ

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಮಂಗಳವಾರ ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ನೃತೃತ್ವದಲ್ಲಿ ಭಗವಾನ್ ಮಹಾವೀರ ಜನಯಂತಿ ಆಚರಿಸಲಾಯಿತು.

ಮತದಾರರು ತಪ್ಪದೆ ಮತದಾನ ಮಾಡಬೇಕು. ಅತ್ಯಮೂಲ್ಯವಾದ ಮತ ವ್ಯರ್ಥವಾಗಲು ಬಿಡಬಾರದು:ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ

ಶ್ರೀನಿವಾಸಪುರ: ಮತದಾರರು ತಪ್ಪದೆ ಮತದಾನ ಮಾಡಬೇಕು. ಅತ್ಯಮೂಲ್ಯವಾದ ಮತ ವ್ಯರ್ಥವಾಗಲು ಬಿಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದಲ್ಲಿ ಪುರಸಭೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗೃತ ಮತದಾರರಿಂದ ಮಾತ್ರ ಉತ್ತಮ ಅಭ್ಯರ್ಥಿ ಆಯ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಚುನಾವಣಾ ಆಯೋಗ ಮತದಾನಕ್ಕೆ ಅಗತ್ಯವಾದ ಎಲ್ಲ ಸಿದ್ಧತೆ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತದಾರನೂ ಮತ ಚಲಾಯಿಸಿದಾಗ ಮಾತ್ರ ವ್ಯವಸ್ಥೆ ಘನತೆ ಹೆಚ್ಚುತ್ತದೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬದಲ್ಲಿ ಮತದಾರರು ಹುರುಪಿನಿಂದ ಭಾಗವಹಿಸಬೇಕು ಎಂದು ಹೇಳಿದರು.
ಪುರಸಭೆ ಸಿಬ್ಬಂದಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಮತದಾನ ಕುರಿತು ಅರಿವು ಮೂಡಿಸಿದರು.
ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ಎನ್.ಶಂಕರ್ ಇದ್ದರು.

ವಿಶ್ವಕ್ಕೆ ಅಹಿಂಸೆಯ ಸಂದೇಶ ನೀಡಿದ ಮಹಾವೀರರ ಜಯಂತಿಗೂ ಕಾಡಿದ ನೀತಿ ಸಂಹಿತೆ : ಬೆಳ್ಳಿ ರಥದಲ್ಲಿ ಮಹಾವೀರರ ಮೆರವಣಿಗೆ-ಶ್ರದ್ಧಾಭಕ್ತಿಗಳಿಂದ ಅಹಿಂಸಾ ಮೂರ್ತಿಯ ಸ್ಮರಣೆ

ಕೋಲಾರ:- ವಿಶ್ವಕ್ಕೆ ಅಹಿಂಸೆ ಹಾಗೂ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜಯಂತಿಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿತ್ತಾದರೂ, ಸಮುದಾಯದ ಜನತೆ ಅನುಮತಿ ಪಡೆದುಕೊಂಡು ಸಂಪ್ರದಾಯಬದ್ದವಾಗಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಜಯಂತಿ ಆಚರಿಸಿದರು.
ಪ್ರತಿವರ್ಷದ ಸಂಪ್ರದಾಯದಂತೆ ಜೈನ ಬಂಧುಗಳು ಇಡೀ ಮೆರವಣಿಗೆಯ ಉಸ್ತುವಾರಿಯನ್ನು ವಹಿಸಿದ್ದು, ಕೇಸರಿ ಪೇಟ ತೊಟ್ಟ ನೂರಾರು ಜೈನ ಬಂಧುಗಳು, ಮಹಿಳೆಯರೊಂದಿಗೆ ವೀರ ಮತ್ತು ರಾಜ ಎರಡು ಕುದುರೆಗಳೊಂದಿಗೆ ಮಹಾವೀರರ ಬೆಳ್ಳಿರಥದ ಭವ್ಯ ಮೆರವಣಿಗೆಗೆ ಜಿಲ್ಲಾ ಜೈನ ಸಂಘದ ಅಧ್ಯಕ್ಷ ಜಯಂತಿಲಾಲ್ ಚಾಲನೆ ನೀಡಿದರು.
ಸಮಾಜದಲ್ಲಿ ಶಾಶ್ವತ ಶಾಂತಿ, ಸಂಯಮ ಮೂಡಲು ಮಹಾವೀರರ ತತ್ವಗಳು ಇಂದು ಪ್ರಸ್ತುತವಾಗಿವೆ, ಅವರ ಹಾಕಿಕೊಟ್ಟ ಹಾದಿಯಲ್ಲಿ ಸಮಾಜ ಸಾಗಬೇಕಾಗಿದೆ ಎಂದು ತಿಳಿಸಿದ ಅವರು, ಬಂಧುಗಳಿಗೆ ಶುಭ ಕೋರಿದರು.
ವಿವಿಧ ಹೂವುಗಳಿಂದ ಅಲಂಕರಿಸಿದ್ದ ಮಹಾವೀರರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿದ ಬಳಿಕ ನಾದಸ್ವರ ಹಾಗೂ ಜಯ ಘೋಷಣೆಯೊಂದಿಗೆ ಅಮ್ಮವಾರಿಪೇಟೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.
ಸಮವಸ್ತ್ರ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕ, ಯುವತಿಯರು ಬ್ಯಾಂಡ್‍ಸೆಟ್ ತಾಳಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು. ಮಹಾತ್ಮಗಾಂಧಿ ಚೌಕ, ದೊಡ್ಡಪೇಟೆ ರಸ್ತೆ, ಬ್ರಾಹ್ಮಣರ ಬೀದಿ, ಕಾಳಮ್ಮ ದೇವಸ್ಥಾನದ ಮಾರ್ಗವಾಗಿ ಸಾಗಿದ ಮೆರವಣಿಗೆ ಅಮ್ಮವಾರಿಪೇಟೆಯ ಭಗವಾನ್ ಮಹಾವೀರ ಜೈನ ಮಂದಿರದ ಬಳಿ ಕೊನೆಗೊಂಡಿತು.
ಜೈನ ಮಂದಿರದಲ್ಲಿ ಪ್ರಾರ್ಥನೆ, ಅಭಿಷೇಕ, ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆದವು. ಜೈನ ಸಮಾಜ ಬಾಂಧವರು ಕುಟುಂಬ ಸದಸ್ಯರೊಂದಿಗೆ ಮಂದಿರಕ್ಕೆ ಆಗಮಿಸಿ ಮಹಾವೀರರಿಗೆ ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದ ವಸ್ತುಗಳಿಂದ ವಿಶೇಷ ನೈವೇದ್ಯ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಮಂದಿರದಲ್ಲಿ ನಡೆದ ಸಾಮೂಹಿಕ ಭಜನೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ರಾಘವೇಂದ್ರಸ್ವಾಮಿ ಮಠದಲ್ಲಿ ಅನ್ನದಾನ ನಡೆಸಲಾಯಿತು. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಮಾಂಸದ ಅಂಗಡಿಗಳನ್ನು ಇಡೀ ದಿನ ಮುಚ್ಚಲಾಗಿತ್ತು.
ಮೆರವಣಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಜುವೇರಿಲಾಲ್, ಲಲಿತ್ ಕುಮಾರ್, ನೀರಜ್‍ಕುಮಾರ್, ದಿಲೀಪ್ ಕುಮಾರ್, ಸಾಗರ್, ಅಮಿತ್, ಮುಖಂಡರಾದ ರಂಜಿತ್, ರಮೇಶ್,ವಿಕ್ಕಿ ಅಶೋಕ್, ರತನ್ ಲೋಕ್ ಅಂಗಡಿಯ ಇಂದ್ರಚಂದ್, ಲಾಲ್ ಚಂದ್, ಸುನೀಲ್‍ಕುಮಾರ್, ಮಹೇಂದ್ರ ಕುಮಾರ್, ಉತ್ತಮ್ ಮತ್ತಿತರರು ಉಪಸ್ಥಿತರಿದ್ದರು.