Mangalore ; Milagres church Holy Week celebrations

Mangalore: We begin our Holy Week celebrations today. With the blessing of the palms and proceeding in procession we remember our Lord’s triumphant entry into Jerusalem when people laid palms to welcome him shouting Hosanna to the king of kings. 

This week is dear to us Christians for it is  in this week we deeply reflect on the love of God shown to us in the passion, death and resurrection of His Son, our Lord Jesus Christ. The foundation to our identity as Christians is laid in this week. 

While we rejoice in God’s saving grace through his Son, we are also reminded that of our sinful state of life. Jesus through his suffering and death on the cross has redeemed us sinners from the bondage of sin and thus freed us once again to become the children of God. The glory once lost in Eden is restored by the unfathomable sacrifice on Calvary. 

A procession with Jesus carrying the cross and Mary accompanying her Son closely reminds us that we too are an integral part in the journey Christ undertakes for the love of His people. Jesus’ command to His disciples ‘If you wish to be my disciple, take up the cross and follow me’ echoes in every step that we take in following Him. It is a reminder for all of us that unless we die to ourselves, to our comforts, our sins and passions of the world, we cannot rise like Christ. 

The parishioners of Milagres also began their journey along with the rest of the church to closely accompany Christ in his final journey to victory. Fr Bonaventure Nazareth, the parish priest of Milagres church Mangalore celebrated the Eucharist and led this procession symbolic of our entry into the Holy Week.

ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ಪದವಿ ಪ್ರದಾನ ಸಮಾರಂಭ

ಮಂಗಳೂರು : ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ಪದವಿ ಪ್ರದಾನ ಸಮಾರಂಭವು ದಿನಾಂಕ 30.04.2023 ರಂದು ಸಂಜೆ 4.00 ಗಂಟೆಗೆ “ಟೌನ್ ಹಾಲ್” ಮಂಗಳೂರಿನಲ್ಲಿ ನಡೆಯಿತು. ಪುರಭವನದ ಪ್ರವೇಶ ದ್ವಾರದಲ್ಲಿ ಭವ್ಯ ಗೌರವದೊಂದಿಗೆ ಪದವೀಧರರ ಭವ್ಯ ಮೆರವಣಿಗೆ ಮತ್ತು ಬ್ಯಾಂಡ್‌ನೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಆರ್.ಎಸ್. ಶೆಟ್ಟಿಯಾನ್, ಅಧ್ಯಕ್ಷರು, ಮುಖ್ಯ ಅತಿಥಿ, ಮಂಗಳೂರು ಪ್ರಾಂತ್ಯದ ಸಿಸ್ಟರ್ಸ್ ಆಫ್ ಚಾರಿಟಿಯ ಪ್ರಾಂತೀಯ ಸುಪೀರಿಯರ್ ರೆ. ಭಗಿನಿ. ಐರಿನ್ ಮೆನೆಜಸ್, ಗೌರವ ಅತಿಥಿ ಡಾ. ಜುಡಿತ್ ನೊರೊನ್ಹಾ, ಮಣಿಪಾಲ ನರ್ಸಿಂಗ್ ಕಾಲೇಜಿನ ಡೀನ್, ಶ್ರೀಮತಿ ಆಶಾ ಶೆಟ್ಟಿಯಾನ್, ಎಐಎಚ್‌ಎಸ್ ಕಾರ್ಯದರ್ಶಿ ಡಾ. ಶೆಟ್ಟಿಯಾನ್, ಟ್ರಸ್ಟಿ, ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌,. ದೀಪಾ ಪೀಟರ್ ಪ್ರಿನ್ಸಿಪಾಲ್ ಅಥೇನಾ ಕಾಲೇಜ್ ಆಫ್ ನರ್ಸಿಂಗ್, ಡಾ. ನಂದಿನಿ ಎಂ ,ಪ್ರಿನ್ಸಿಪಾಲ್ ಅಥೇನಾ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಭಗಿನಿ. ಐಲೀನ್ ಮತಯಾಸ್, ವೈಸ್ ಪ್ರಿನ್ಸಿಪಾಲ್ ಅವರು “ಪೂರ್ಣಕುಂಭ ಸ್ವಾಗತದೊಂದಿಗೆ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ದ್ವಿತೀಯ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಪ್ರಾರ್ಥನ ನೃತ್ಯ ಪ್ರದರ್ಶಿಸಿದರು.
ಇದು ಸಂಭ್ರಮಾಚರಣೆಯ ಸಮಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆಯಲು ಅವರು ಮಾಡಿದ ಪ್ರಯತ್ನಗಳಿಗಾಗಿ ಶ್ಲಾಘಿಸಿದರು. ವಿವಿಧ ಚಟುವಟಿಕೆಗಳಲ್ಲಿ 27 ಸ್ಥಾನ ಪಡೆದವರು ಮತ್ತು 84 ಬಹುಮಾನ ವಿಜೇತರು ಇದ್ದರು. 78 ಬಿ.ಎಸ್ಸಿ. ನರ್ಸಿಂಗ್, 5 ಎಂ ಎಸ್ಸಿ. ನರ್ಸಿಂಗ್, 47 ಜಿ.ಏನ್ ಮ್ ಡಿಪ್ಲೊಮಾ ಹೊಂದಿರುವವರು ಮತ್ತು ಬಿ.ಎಸ್ಸಿ ಅಲೈಡ್ ಹೆಲ್ತ್ ಆರ್ ಡಿ ಟಿ 5 ಪದವೀಧರರು; ಒಟ್ಟು 133 ಪದವೀಧರರು ತಮ್ಮ ಪದವಿ ಪ್ರಮಾಣಪತ್ರಗಳನ್ನು ಪಡೆದರು.
ಸಿಸ್ಟರ್ಸ್ ಆಫ್ ಚಾರಿಟಿಯ ಪ್ರಾಂತೀಯ ಸುಪೀರಿಯರ್ ಸೀ. ಐರಿನ್ ಮೆನೆಜಸ್ ಮುಖ್ಯ ಅತಿಥಿಯಾಗಿದ್ದರು. ಅವರು ಕೋವಿಡ್ -19 ರ ಸಾಂಕ್ರಾಮಿಕ ಸಮಯದಲ್ಲಿ ದಾದಿಯರ ಸಮರ್ಪಣೆಯನ್ನು ಎತ್ತಿ ತೋರಿಸಿದರು ಮತ್ತು ಯೇಸುಕ್ರಿಸ್ತನ ಮಾದರಿಯಂತೆ ಹೆಚ್ಚು ಸಹಾನುಭೂತಿ ಹೊಂದಲು ಕರೆ ನೀಡಿದರು.
ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಡೀನ್ ಡಾ.ಜುಡಿತ್ ಏಂಜೆಲಿಟ್ಟಾ ನೊರೊನ್ಹಾ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿ, ಪ್ರತಿಯೊಬ್ಬರು ತಮ್ಮ ಕೈಯಲ್ಲಿ ಅದೃಷ್ಟವನ್ನು ಹೊಂದಿದ್ದಾರೆ’ ಎಂದು ಪದವೀಧರರಿಗೆ ಕರೆ ನೀಡಿದರು. ನಾವು ಅವಕಾಶಗಳನ್ನು ಪಡೆದುಕೊಂಡು ಮತ್ತು ದೇವರು ನೀಡಿದ ಪ್ರತಿಭೆಯನ್ನು ಬಳಸಿ ಜೀವನ
ಸಾಗಬೇಕು. ಶ್ರೀ ಆರ್.ಎಸ್. ಶೆಟ್ಟಿಯಾನ್ ಅಧ್ಯಕ್ಷೀಯ ಭಾಷಣ ಮಾಡಿದರು. ವಿದ್ಯಾರ್ಥಿಗಳು ಸಂಸ್ಥೆಯ ರಾಯಭಾರಿಗಳಾಗಬೇಕು ಮತ್ತು ಅಲ್ಮಾ ಮೇಟರ್‌ಗೆ ಪ್ರಶಸ್ತಿಗಳನ್ನು ತರಲು ಮತ್ತಷ್ಟು ಅಧ್ಯಯನ ಮಾಡು ಬೇಕು.
. ಉಪಪ್ರಾಂಶುಪಾಲರಾದ ವಂದನೀಯ ಶ್ರೀ ಐಲೀನ್ ಮತಾಯಾಸ್ ಸ್ವಾಗತಿಸಿದರು. ವಂದನೀಯ ದೀಪಾ ಪೀಟರ್ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿ ದಾದಿಯರಿಗೆ ಪ್ರಮಾಣ ವಚನ ಬೋಧಿಸಿದರು. ಅಲೈಡ್ ಹೆಲ್ತ್ ಸೈನ್ಸಸ್ ನ ಪ್ರಾಂಶುಪಾಲರಾದ ಡಾ.ನಂದಿನಿ ಎಂ , ಆರ್ ಡಿ ಟಿ ,ಬಿ.ಎಸ್ಸಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಶ್ರೀಮತಿ ಹೇಮಲತಾ ಜಿ ಪ್ರೊ.ಓಬಿಜಿ ವಿಭಾಗದವರು ಬಿಎಸ್ಸಿ(ಎನ್) ಪದವೀಧರರ ಹೆಸರನ್ನು ವಾಚಿಸಿದರು, ಶ್ರೀಮತಿ ಪ್ರಶ್ವಿನ್ ಡಿ ಮೆಲ್ಲೋ ಜಿಎನ್‌ಎಂ ನರ್ಸಿಂಗ್‌ನ ಹೆಸರನ್ನು ವಾಚಿಸಿದರು, ಶ್ರೀಮತಿ ಜ್ಯೋತಿಮೋಲ್ ಪಿ ವಿ, ಶ್ರೀಮತಿ ಕವನಾ ಪಿ ಆರ್, ಶ್ರೀಮತಿ ಪ್ರಿಯಾಂಕಾ ಹೇಜಲ್ ಎಂ ಡಿ ಸೋಜಾ ಮಂಡಿಸಿದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಮಂಡಿಸಿದರು. ಶ್ರೀಮತಿ ಸುನಿತಾ ಕ್ಲೌಡಿಯಾ ಲೋಬೋ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕರು ವಂದಿಸಿದರು. ಶ್ರೀಮತಿ ಜ್ಯೂಲೆಟ್ ಮತ್ತು ಕುಮಾರಿ ಅಮೃತಾ ಕೃಷ್ಣನ್ ಪದವಿ ಪ್ರದಾನ ಸಮಾರಂಭವನ್ನು ನಿರೂಪಿಸಿದರು. ಪದವೀಧರರ ಆರ್ಥಿಕ ಹಿಂಜರಿತದ ನಂತರ ಕೂಟಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದರು. ಪದವೀಧರರು, ಪೋಷಕರು, ಹಳೆ ವಿದ್ಯಾರ್ಥಿಗಳು, ಅತಿಥಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1200 ಜನರು ಸಂಭ್ರಮಾಚರಣೆಗೆ ಸಾಕ್ಷಿಯಾದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಪದವಿ ಭೋಜನವನ್ನು ನೀಡಲಾಯಿತು.

S.C.S ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸ್ ಪದವಿ ಪ್ರಧಾನ ಸಮಾರಂಭ

ಮಂಗಳೂರು: ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸ್ ಮಂಗಳೂರು ಇದರ ಅಂತಿಮ ವರ್ಷದ ಬಿ.ಎಸ್.ಸಿ. ಹಾಗೂ ಎಂ.ಎಸ್ಸಿ. ನರ್ಸಿಂಗ್ ವಿಭಾಗದ ವಿದ್ಯಾರ್ಥಿಗಳ ಪದವಿ ಪ್ರಶಸ್ತಿ ಪ್ರಧಾನ ಸಮಾರಂಭವು ತಾ. 01.04.2023 ರಂದು ಶನಿವಾರ ಬೆಳಿಗ್ಗೆ 10.30 ಗಂಟೆಗೆ ಬೆಂದೂರಿನಲ್ಲಿರುವ ಸಂತ ಸೆಬಾಸ್ಟಿಯನರ ಪ್ಲಾಟಿನಂ ಜ್ಯುಬಿಲಿ ಸಭಾಂಗಣದಲ್ಲಿ ಅದ್ದೂರಿಯಿಂದ ಜರಗಿತು. ಶ್ರೀ ಮನೀಷ ಆನ್ ವರ್ಗೀಸ್, ಸಹಉಪನ್ಯಾಸಕಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಡಾ|| ತ್ರೀಝ ಮಥಾಯಿಸ್, ಪ್ರಾಧ್ಯಾಪಕರು, ಮನೋಶುಶ್ರೂಷಕ ವಿಭಾಗದ ಮುಖ್ಯಸ್ಥರು, ಲಕ್ಷೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್, ಮಂಗಳೂರು ಇವರು ವಹಿಸಿದ್ದರು.
ಅತಿಥಿ ಭಾಷಣದಲ್ಲಿ ಪದವೀಧರರಿಗೆ ಶುಶ್ರೂಷಕರ ಆರೈಕೆಯಲ್ಲಿ ಪ್ರೀತಿ, ಸಹಾನುಭೂತಿ ಮತ್ತು ಸಮರ್ಪಣೆಯ ಮಹತ್ವವನ್ನು ಮತ್ತು ನೈತಿಕ ಮೌಲ್ಯಗಳ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಯು. ಕೆ. ಖಾಲಿದ್, ಆಡಳಿತಾಧಿಕಾರಿ, ಎಸ್.ಸಿ.ಎಸ್. ಗ್ರೂಫ್ ಆಫ್ ಇನ್ಸ್ಟಿಟ್ಯೂಶನ್, ಮಂಗಳೂರು ಇವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಲೊಲಿಟ ಎಸ್.ಎಮ್.ಡಿಸೋಜರವರು ಪದವೀಧರ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು ಮತ್ತು ವಾರ್ಷಿಕ ವರದಿಯನ್ನು ಓದಿದರು. ಡಾ|| ಅಮರನಾಥ ಸೊರಕೆ, ಸಂಸ್ಥಾಪಕ ಅಧ್ಯಕ್ಷರು, ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾಗಿರುವ ಶ್ರೀ ಅನಿಲ್ ಕುಮಾರ್ ಸಿ.ಎಂ.ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಿಕಿತ್ ಪಿಂಟೊ ಹಾಗೂ ಕುಮಾರಿ ಡೆಲಿಶ ಕ್ಯಾರಲ್ ಡಿಸೋಜ ಅವರು ನಿರ್ವಹಿಸಿದರು. ಶ್ರೀ ಡೆನ್ಸಿಲ್ ಡಿಸೋಜ, ಸಹಉಪನ್ಯಾಸಕರವರು ವಂದನಾರ್ಪಣೆ ಮಾಡಿದರು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು
.

ನಬಾರ್ಡ್ ಪ್ರಾಯೋಜಕತ್ವದಲ್ಲಿ ಭಾ.ವಿ.ಟ್ರ.ಮಣಿಪಾಲ ಮಾರ್ಗದರ್ಶನದಲ್ಲಿ, ಹೆಮ್ಮಾಡಿ ಗ್ರಾ. ಪಂ. ಸಹಕಾರದಲ್ಲಿ ಹೆಮ್ಮಾಡಿಯಲ್ಲಿ ಪ್ಯಾಬ್ರಿಕ್ ಪೈಂಟಿಂಗ್ ತರಬೇತಿ ಸಮಾರೋಪ

ನಬಾರ್ಡ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮಾರ್ಗದರ್ಶನದಲ್ಲಿ ಹಾಗೂ ಹೆಮ್ಮಾಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಗ್ರಾಮ ಪಂಚಾಯತ್ ಹೆಮ್ಮಾಡಿಯಲ್ಲಿ ನಡೆಯುತ್ತಿರುವ 15 ದಿನಗಳ ಪ್ಯಾಬ್ರಿಕ್ ಪೈಂಟಿಂಗ್ ತರಬೇತಿ ಇಂದು ಸಮಾರೋಪ ಗೊಂಡಿತು.ಕಾರ್ಯಕ್ರಮದಲ್ಲಿ ನಬಾರ್ಡ್ ಡಿ ಡಿ ಎಮ್ ಸಂಗೀತಾ ಕರ್ತಾ ಮೇಡಂ, ಬಿವಿಟಿ ಸಂಸ್ಥೆಯ ಆಡಳಿತಾಧಿಕಾರಿಗಳು ಮಹೇಶ್ ಸರ್, ಬಿ ವಿ ಟಿ ಯ ಮುಖ್ಯ ವ್ಯವಸ್ಥಾಪಕರಾದ ಮನೋಹರ್ ಕಟ್ಗೇರಿ ಸರ್,ಪಂಚಾಯತ್ ಕಾರ್ಯದರ್ಶಿಗಳಾದ ಜಯಮ್ಮ,ತರಬೇತುದಾರರಾದ ಮಹಾಲಕ್ಷ್ಮಿ ಮೇಡಂ ,ಸಂಜೀವಿನಿ ಎಮ್.ಬಿ.ಕೆ ಶಾಂತಿ ಮೇಡಂ,ಶೈಲಾ ಮೇಡಂ ಉಪಸ್ಥಿತರಿದ್ದು ಶುಭ ಹಾರೈಸಿದರು. ನಾಗಶ್ವೇತಾರವರು ಪ್ರಾರ್ಥಿಸಿ, ಶಾಂತಿಯವರು ಸ್ವಾಗತಿಸಿ, ಪೂರ್ಣಿಮಾರವರು ಧನ್ಯವಾದ ವಿತ್ತು, ಬಿವಿಟಿಯ ರಾಘವೇಂದ್ರ ಆಚಾರ್ಯ ನಿರೂಪಿಸಿದರು.30 ಜನ ಸಂಘದ ಫಲಾನುಭವಿಗಳು ಪ್ರಯೋಜನ ಪಡೆದರು.

ಜೆಸಿಐ ಕುಂದಾಪುರ ಸಿಟಿಯ ವತಿಯಿಂದ ತೆರೆ ಮರೆಯಾ ಸಾಧಕ ದಿನೇಶ್ ಹೆಮ್ಮಾಡಿ ಯವರಿಗೆ ಸನ್ಮಾನ

ಕುಂದಾಪುರ: ಬಾಲ್ಯದಲ್ಲಿ ಕಷ್ಟ ಪಟ್ಟು ಜೀವನ ನಡೆಸಿ ಈಗ ಕುಂದಾಪುರ ಪುರಸಭೆ ಯಲ್ಲಿ ಪೌರ ಕಾರ್ಮಿಕ ನಾಗಿ ಹಲವಾರು ವರ್ಷ ಗಳಿಂದ ಕೆಲಸ ವನ್ನು ಮಾಡುತ್ತ ಬಂದಿದ್ದು ಈಗ ದುಡಿಮೆ ಮಾಡಿ ಸಂಸಾರ ನಡೆಸುವಾಗ ಬಹಳ ಖುಷಿ ಆಗತ್ತೆ ನಾವು ಮಾಡುತ್ತಿರುವ ಕೆಲಸ ಮುಖ್ಯವಲ್ಲ ಶ್ರದ್ದೆಯಿಂದ ಮಾಡುವ ಕೆಲಸ ಮುಖ್ಯ ವಾಗಿರುತ್ತೆ ಕೆಲಸದ ಜೊತೆಗೆ ಕೆಲವೊಮ್ಮೆ ಸಮಯ ಸಿಕ್ಕಿದಾಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಹಾಗಾಗಿ ಜೀವನ ತೃಪ್ತಿಕರವಾಗಿದೆ ಎಂದು ಜೆಸಿಐ ಕುಂದಾಪುರ ಸಿಟಿ ಯವರು ಕೋಟೇಶ್ವರ ದ ಸಮುದಾ ಹಾಲ್ ನಲ್ಲಿ ತೆರೆ ಮರೆಯಾ ಸಾಧಕ ಕುಂದಾಪುರ ಪುರಸಭೆಯ ಪೌರ ಕಾರ್ಮಿಕ ದಿನೇಶ್ ಹೆಮ್ಮಾಡಿ ಜೆಸಿಐ ಕುಂದಾಪುರ ಸಿಟಿಯ ವತಿಯಿಂದ ಸನ್ಮಾನ ಪಡೆದಕ್ಕೆ ಉತ್ತರವಾಗಿ ಮಾತನಾಡಿದರು.

ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು ಸಮಾರಂಭ ದಲ್ಲಿ ಭಾರತೀಯ ಜೇಸಿಸ್ ನ ರಾಷ್ಟ್ರೀಯ ಸಂಯೋಜಕರಾದ ಕೆ ಕಾರ್ತಿಕೇಯ ಮಧ್ಯಸ್ಥ ವಲಯ 15ರ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕಲ್ಯಾಣಪುರ ದ ಅಧ್ಯಕ್ಷ ಅನಿತಾ ನರೇಂದ್ರ ಕುಮಾರ್ ಜೆಸಿಐ ಉಡುಪಿ ಇಂದ್ರಾಳಿ ಯಾ ಅಧ್ಯಕ್ಷೆ ರಿಟಾ ಮರಿಯಾ ಜೆಸಿಐ ಬ್ರಹ್ಮಾವರ ಸೇವೆಮೆ ಯಾ ಅಧ್ಯಕ್ಷ ಕೃಷ್ಣಮೂರ್ತಿ ಹೈಕಾಡಿ
ಜೆಸಿಐ ಶಂಕರಪುರ ಜಾಸ್ಮಿನ್ ನ ಅಧ್ಯಕ್ಷೆ ಮಾಲಿನಿ ಶೆಟ್ಟಿ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಗಿರೀಶ್ ಹೆಬ್ಬಾರ್ ರಾಘವೇಂದ್ರ ಚರಣ್ ನಾವಡ ಶ್ರೀಧರ್ ಸುವರ್ಣ ಮಂಜುನಾಥ್ ಕಾಮತ್ ನಾಗೇಶ್ ನಾವಡ ವಿಜಯ ಬಂಡಾರಿ ಚಂದ್ರಕಾಂತ್ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಯುವ ಜೇಸಿ ಅಧ್ಯಕ್ಷೆ ಚಂದ್ರಿಕಾ ಕಾಮತ್ ವಲಯ ತರಬೇತುದಾರ ನರೇಂದ್ರ ಕುಮಾರ್ ಕೋಟ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೇಶ ಶೆಟ್ಟಿ ವಂದಿಸಿದರು
.