Milagres Cathedral observes Palm Sunday with devotion

Udupi : Palm Sunday to commemorate Christ’s entry into Jerusalem for the completion of Paschal Mystery observed at Milagres Cathedral of Udupi diocese near here on Sunday April 2, 2023 with utmost devotion and solemnity.

Prior to the beginning of the Palm Sunday service, volunteers led parish pastoral council members distributed palm leaves to the parishioners. At around 7.45 am, all parishioners gathered in front of Milagres Tri-centenary Hall where the ritual of blessing of the palms was conducted by Rector Very Rev Fr. Valerian Mendonca along with Rev Fr. Joy Andrade, Asst parish priest, Very Rev Fr. Denzil Martin Superior of Pilar Fathers and Rev Fr. Nithesh D’Souza of Pilar Fathers.

Following a short prayer service and reading of the passage from the Gospel narrating the triumphal entry of Jesus into Jerusalem, Fr Valerian Mendonca blessed the palms. Thereafter, the entire congregation went in procession led by altar servers towards the Cathedral.

The procession signifies the Jews’ welcoming of Jesus into Jerusalem. Following their example, we proclaim Jesus as Victor, “Hosanna to the Son of David, Blessed is He who comes in the name of the Lord.”

The High Solemn Eucharistic Mass was con-celebrated by Very Rev Fr. Valerian Mendonca along with Rev Fr. Denzil Martin, Rev Fr. Joy Andrade and Rev Fr. Nithesh D’Souza.

The long Passion Gospel was read by Rev Fr. Nithesh D’Souza, Rev Fr. Valerian Mendonca and Rev Fr. Joy Andrade. Fr. Nithesh D’Souza read the narration, Fr Valerian Mendonca read the passages uttered by Jesus and Fr. Joy Andrade read the passages uttered by other characters in the Holy Gospel. All huge devotees listened tirelessly by standing all the way, enabling devotees as it were to be eyewitnesses of Christ’s Passion and Death, revealing his love “Unto Death”.

In his beautiful hard hitting homily, Fr Joy Andrade explained the significance of Palm Sunday.

At the end of the mass, Fr Valerian Mendonca announced the schedule of the services during the Holy Week which has been led by the Bishop Gerald Isaac Lobo, Diocese of Udupi. The Maundy Thursday service starts from 6.30pm, Good Friday services will start from 4pm. The Easter Vigil service will begin from 7pm followed by Festal mass. Easter mass will be held on Sunday at 8m. 

ಪಿಯುಸ್ ನಗರ್ ಚರ್ಚಿನಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರ ಆಚರಣೆ


ಕುಂದಾಪುರ, ಸಂತ ಪಿಯುಸ್ X ಇವರಿಗೆ ಸಮರ್ಪಿಸಲ್ಪಟ್ಟ ಪಿಯುಸ್ ನಗರ್, ಹಂಗಳೂರು ಚರ್ಚಿನಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರವನ್ನು ಎ.2 ರಂದು ಆಚರಿಸಲಾಯಿತು. ಇಗರ್ಜಿಯ ಮುಂಭಾಗದ ದ್ವಾರದ ಒಳಗಡೆ, ಆಶಿರ್ವಾದದ ಪ್ರಾರ್ಥನ ವಿಧಿಯನ್ನು ಇಗರ್ಜಿಯ ಧರ್ಮಗುರು ವಂ| ಆಲ್ಬರ್ಟ್ ಕ್ರಾಸ್ತಾ ನಡೆಸಿದರು. ನಂತರ ಚರ್ಚ್ ಆವರಣದಲ್ಲೆ ಮೆರವಣಿಗೆ ಮೂಲಕ ಇಗರ್ಜಿಯೊಳಗೆ ಪ್ರವೇಶಿಸಿ, ಗರಿಗಳ ಭಾನುವಾರದ ಮಹತ್ವವನ್ನು ವಿವರಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕ್ರೈಸ್ತ ಭಕ್ತಾಧಿಗಳು ಈ ಪವಿತ್ರ ದಿನದಲ್ಲಿ ಭಾಗಿಯಾಗಿದ್ದರು.

ಅಥೇನಾ ಇನ್‌ಸ್ಟಿಟ್ಯೂಟ್ ಹೆಲ್ತ್ ಸೈನ್ಸಸ್‌ನಲ್ಲಿ ಅಲೈಡ್ ಹೆಲ್ತ್ ಸೈನ್ಸಸ್‌ಗಾಗಿ ಹೊಸ ಕಾಲೇಜು

ದಿನಾಂಕ 30.03.2023 ರಂದು ನೂತನ ಕಾಲೇಜು ಕಟ್ಟಡವನ್ನು ಅಧ್ಯಕ್ಷ ಶ್ರೀ ಆರ್.ಎಸ್. ಶೆಟ್ಟಿಯಾನ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆಳಗ್ಗೆ 11.30ಕ್ಕೆ ಅಥೇನಾ ಆಸ್ಪತ್ರೆಯ ಸಮೀಪ ಫಳ್ನೀರ್ ನಲ್ಲಿ ಉದ್ಘಾಟಿಸಿದರು.
ಧರ್ಮಗುರುಗಳಾದ ವಂ.ಪ್ರಬುರಾಜ್ ಮತ್ತು ರೆ.ಅಡ್ರಿನ್ ದೀಪಕ್ ರವರಿಂದ ಅರ್ಥಪೂರ್ಣವಾದ ಪ್ರಾರ್ಥನಾ ಸೇವೆಯನ್ನು ನಡೆಸಿ ನೂತನ ಕಟ್ಟಡಕ್ಕೆ ದೇವರ ಆಶೀರ್ವಾದವನ್ನು ಕೋರಿದರು. ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್‌ಗಳ ಪ್ರಾಂಶುಪಾಲರಾದ ಡಾ ನಂದಿನಿ. ಎಂ, ನರ್ಸಿಂಗ್ ಕಾಲೇಜು
ಪ್ರಾಂಶುಪಾಲೆ ರೆ. ವಂ.ದೀಪಾ ಪೀಟರ್, ಉಪಪ್ರಾಂಶುಪಾಲರಾದ ರೆ. ವಂ. ಐಲೀನ್ ಮಥಾಯಾಸ್ ಮತ್ತು ಅಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಗರಿಗಳ ಭಾನುವಾರ ಆಚರಣೆ

ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ವಂದನೀಯ ಧರ್ಮಗುರು ವಿನ್ಸೆಂಟ್ ಕುವೆಲ್ಲೋ ಮತ್ತು ತ್ರಾಸಿ ಡೊನ್ ಬೊಸ್ಕೊ ಸಂಸ್ಥೆಯ ಧರ್ಮಗುರು ರೋಶನ್ ಡಿಸೋಜಾ ರವರ ನೇತ್ರತ್ವದಲ್ಲಿ ಗರಿಗಳ ಭಾನುವಾರ ವನ್ನು ಆಚರಿಸಲಾಯಿತು.

ಖುಷಿಯಿಂದ ಪರೀಕ್ಷೆ ಬರೆದ ಮಕ್ಕಳು-ಎಸ್ಸೆಸ್ಸೆಲ್ಸಿ ಮೊದಲ ದಿನದ ಪರೀಕ್ಷೆ ಯಶಸ್ವಿಪ್ರಥಮ ಭಾಷೆಗೆ 244 ಮಂದಿ ಗೈರು-ಲೋಪಕ್ಕೆ ಎಡೆಯಿಲ್ಲ-ಡಿಡಿಪಿಐ ಕೃಷ್ಣಮೂರ್ತಿ

ಕೋಲಾರ:- ಜಿಲ್ಲೆಯ 83 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಖಾಸಗಿ ಅಭ್ಯರ್ಥಿಗಳು 67 ಮಂದಿ, ಹೊಸ ಅಭ್ಯರ್ಥಿಗಳು 177 ಮಂದಿ ಸೇರಿದಂತೆ ಒಟ್ಟು 244 ಮಂದಿ ಗೈರಾಗಿದ್ದಾರೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.
ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಬರುವ ಮಕ್ಕಳಿಗೆ ಸ್ವತಃ ಹೂ ನೀಡಿ ಸ್ವಾಗತಿಸಿ, ಶುಭ ಕೋರಿದ ಅವರು, ಪರೀಕ್ಷೆ ಮುಗಿದ ನಂತರ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದರು.
2020ರ ಮಾರ್ಚ್‍ನಲ್ಲಿ ನಡೆದಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 310 ವಿದ್ಯಾರ್ಥಿಗಳು ಮೊದಲ ದಿನ ಗೈರಾಗಿದ್ದರು ಆದರೆ ಈ ಬಾರಿ ಅದರ ಪ್ರಮಾಣ ಕೇವಲ 244ಕ್ಕಿಳಿದಿದೆ ಎಂದರು.
ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 19813 ವಿದ್ಯಾರ್ಥಿಗಳ ಪೈಕಿ 19569 ಮಂದಿ ಹಾಜರಾಗಿದ್ದು, 244 ಮಂದಿ ಗೈರಾಗಿದ್ದರು. ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೇ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.


ತಾಲ್ಲೂಕುವಾರು ಹಾಜರಿ ವಿವರ


ಬಂಗಾರಪೇಟೆ ತಾಲ್ಲೂಕಿನ 9 ಕೇಂದ್ರಗಳಲ್ಲಿ ಪ್ರಥಮ ಭಾಷೆಗೆ 2390 ಮಂದಿ ನೊಂದಾಯಿಸಿದ್ದು, 2368 ಮಂದಿ ಹಾಜರಾಗಿ 22 ಮಂದಿ ಗೈರಾಗಿದ್ದಾರೆ, ಕೆಜಿಎಫ್ ತಾಲ್ಲೂಕಿನ 13 ಕೇಂದ್ರಗಳಲ್ಲಿ 3225 ಮಕ್ಕಳು ಹೆಸರು ನೊಂದಾಯಿಸಿದ್ದು, 3185 ಮಂದಿ ಹಾಜರಾಗಿ 40 ಮಂದಿ ಗೈರಾಗಿದ್ದಾರೆ.
ಕೋಲಾರ ತಾಲ್ಲೂಕಿನ 22 ಕೇಂದ್ರಗಳಲ್ಲಿ 4987 ಮಂದಿ ಹೆಸರು ನೊಂದಾಯಿಸಿದ್ದು, 4933 ಮಂದಿ ಹಾಜರಾಗಿ ಕೇವಲ 54 ಮಂದಿ ಗೈರಾಗಿದ್ದಾರೆ. ಮಾಲೂರು ತಾಲ್ಲೂಕಿನ 14 ಕೇಂದ್ರಗಳಲ್ಲಿ 3058 ಮಂದಿ ಹೆಸರು ನೊಂದಾಯಿಸಿದ್ದು, 3043 ಮಂದಿ ಹಾಜರಾಗಿದ್ದು, 15 ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ತಾಲ್ಲೂಕಿನ 13 ಕೇಂದ್ರಗಳಲ್ಲಿ 3068 ಮಂದಿ ನೊಂದಾಯಿಸಿದ್ದು, 3038 ಮಂದಿ ಹಾಜರಾಗಿದ್ದು, 30 ಮಂದಿ ಗೈರಾಗಿದ್ದಾರೆ, ಶ್ರೀನಿವಾಸಪುರ ತಾಲ್ಲೂಕಿನ 13 ಕೇಂದ್ರಗಳಲ್ಲಿ 2585 ಮಂದಿ ಹೆಸರು ನೊಂದಾಯಿಸಿದ್ದು, 2569 ಮಂದಿ ಹಾಜರಾಗಿದ್ದು, 16 ಮಂದಿ ಗೈರಾಗಿದ್ದಾರೆ.


ಖಾಸಗಿ ಕೇಂದ್ರದಲ್ಲಿ 67 ಮಂದಿ ಗೈರು


ಕೋಲಾರದ ಖಾಸಗಿ ಅಭ್ಯರ್ಥಿಗಳ ಕೇಂದ್ರದಲ್ಲಿ 500 ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ 433 ಮಂದಿ ಹಾಜರಾಗಿದ್ದು, ಉಳಿದ 67 ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದರು.
ಮೊದಲ ದಿನದ ಪರೀಕ್ಷೆಯಲ್ಲಿ ಜಿಲ್ಲಾದ್ಯಂತ ಯಾವುದೇ ಕೇಂದ್ರದಲ್ಲಿ ಯಾವುದೇ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ, ಪರೀಕ್ಷೆ ಸುಗಮವಾಗಿ ನಡೆಸುವಲ್ಲಿ ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಎಸ್ಪಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದರು.


ಬೆಳಗ್ಗೆ 9-50ರಿಂದಲೇ ಕೇಂದ್ರಕ್ಕೆ ಪ್ರವೇಶ


ಆಶಾಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ಹಾಕಲು ಬಂದಿದ್ದರಾದರೂ, ಕೋವಿಡ್ ಆತಂಕವಿಲ್ಲದ ಕಾರಣ ಮಕ್ಕಳು ನೇರವಾಗಿ ಪರೀಕ್ಷಾ ಕೊಠಡಿಗಳಿಗೆ ತೆರಳಿದರು.
ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು, ರಾಜ್ಯ ಜಾಗೃತದಳ ತಂಡ ಸೇರಿದಂತೆ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಡಿಡಿಪಿಐ ಕೃಷ್ಣಮೂರ್ತಿ, ಡಿವೈಪಿಸಿಗಳಾದ ಚಂದ್ರಕಲಾ, ಮಂಜುಳಾ, ಎವೈಪಿಸಿ ಮೋಹನ್‍ಬಾಬು, ಪ್ರಭಾರ ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ ಮತ್ತಿತರರೂ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ದತೆಗಳ ಪರಿಶೀಲನೆ ನಡೆಸಿದರಲ್ಲದೇ ಸಣ್ಣಪುಟ್ಟ ಲೋಪಗಳಿಗೂ ಅವಕಾಶವಿಲ್ಲದಂತೆ ಎಚ್ಚರವಹಿಸಿ ಮೆಚ್ಚುಗೆಗೆ ಪಾತ್ರವಾದರು.
ಎಲ್ಲಾ ಕೇಂದ್ರಗಳಲ್ಲೂ ಭದ್ರತೆಗಾಗಿ ಮಹಿಳಾ,ಪುರಷ ಪೊಲೀಸರನ್ನು ನಿಯೋಜಿಸಿದ್ದು, ಎಲ್ಲೂ ಸಮಸ್ಯೆಗಳು ಕಂಡು ಬರಲಿಲ್ಲ.
ಒಟ್ಟಾರೆ ಮೊದಲದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮುಂದಿನ ಐದು ವಿಷಯಗಳ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯ ತಂದುಕೊಟ್ಟಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.
ನೂತನ ಪಿಯು ಕಾಲೇಜು ಕೇಂದ್ರದಲ್ಲಿ ಡಿಡಿಪಿಐ ಅವರೊಂದಿಗೆ ಮುಖ್ಯ ಅಧೀಕ್ಷಕ ಹಾಗೂ ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಖಜಾಂಚಿ ಜಿ.ಎನ್.ವೇಣುಗೋಪಾಲ್, ಪ್ರಶ್ನೆಪತ್ರಿಕೆ ಅಭಿರಕ್ಷಕಿ ರಾಧಮ್ಮ, ಪರೀಕ್ಷಾ ಸಿಬ್ಬಂದಿ ಶಿಕ್ಷಕರಾದ ಭವಾನಿ, ಲಕ್ಷ್ಮೀದೇವಮ್ಮ, ಎಂ.ರಮೇಶ್,ಮಂಜುಳಾ, ಎಂ.ವೇದಾ, ಸುರೇಶ್, ಬಿ.ಜಯಂತಿ, ಸಂಗೀತಾ ಅಂಗಡಿ, ಲಲಿತಾ ಕುಮಾರಿ, ಸೌಮ್ಯ, ಮಂಜುಳಾ,ನಿರ್ಮಲಮ್ಮ, ನಾರಾಯಣಸ್ವಾಮಿ, ಸುಷ್ಮಾ, ವೆಂಕಟೇಶ್, ಸುಬ್ರಮಣಿ,ಶ್ರೀನಿವಾಸಲು ಆನಂದ್ ಹಾಜರಿದ್ದರು.

ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಭಕ್ತಿ ಪೂರ್ವಕವಾಗಿ ಗರಿಗಳ ಭಾನುವಾರ ಆಚರಣೆ

ಕುಂದಾಪುರ,ಎ.2: ಜಿಲ್ಲೆಯ ಅತ್ಯಂತ ಹಿರಿಯ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು, ಗರಿಗಳ ಆಶಿರ್ವವಚನ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಚರ್ಚಿನ ಮೈದಾನದಲ್ಲಿ ಗ್ರೋಟ್ಟೊ ಮುಂದುಗಡೆ ನಡೆಸಿಕೊಟ್ಟರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಜೊತೆ ಸೇರಿ ಗರಿಗಳನ್ನು ಆಶಿರ್ವದಿಸಿದರು. ನಂತರ ಗರಿಗಳ ಮೆರವಣೆಗೆಯನ್ನು ಮಾಡಲಾಯಿತು.
ಗರಿಗಳ ಭಾನುವಾರದ ಪವಿತ್ರ ಬಲಿದಾನದ ನೇತ್ರತ್ವವನ್ನು “ಯೇಸು ಕ್ರಿಸ್ತರು ದೇವರ ಯೋಜನೆಯಂತೆ, eನರನ್ನು ಪಾಪಾದಿಂದ ಬಿಡುಗಡೆ ಗೊಳಿಸಲು, ಭೂಮಿಗೆ ಬಂದಿದ್ದು, ಸತ್ಯ ನುಡಿದಕ್ಕೆ ಅಪಾರ ಕಶ್ಟ ಯಾತನೆ ಅನುಭವಿಸಿ, ಶಿಲುಭೆಯ ಮೇಲೆ ತಮ್ಮ ಪ್ರಾಣವನ್ನು ನೀಡುತ್ತಾರೆ, ನಾವು ತಮ್ಮ ಪಾಪ ಕ್ರತ್ಯಗಳಿಗೆ ಬೆನ್ನು ಮಾಡಬೇಕೆಂದು’ ಅವರು ಸಂದೇಶ ನೀಡಿದರು. ಈ ಪ್ರಾರ್ಥನ ವಿಧಿಯಲ್ಲಿ ಅಪಾರ ಭಕ್ತಾಧಿಗಳು ನೆರೆದಿದ್ದರು. ಪ್ರಧಾನ ಧರ್ಮಗುರುಗಳು ಧನ್ಯವಾದಗಳನ್ನು ಅರ್ಪಿಸಿದರು.