ಕುಂದಾಪುರ ಚರ್ಚ್: ಇಂಟರ್‍ಲಾಕ್‍ಗಳಿಂದ ಸಜ್ಜುಗೊಳಿಸಿದ ಆವರಣದ ಆಶಿರ್ವಚನ

ಕುಂದಾಪುರ. ಎ.30: ಕುಂದಾಪುರ ಚರ್ಚಿನ ಬಲಭಾಗದಲ್ಲಿರುವ ಆವರಣಕ್ಕೆ ಇಂಟರ್‍ಲಾಕ್ ಆಳವಡಿಸುವ ಕಾಮಗಾರಿ ಸುಮಾರು ಒಂದು ತಿಂಗಳಿನಿಂದ ನಡೆಯುತ್ತ ಇದ್ದದ್ದು, ಇದೀಗ ಅದು ಪೂರ್ಣಗೊಂಡಿದ್ದು, ಇದು ಎರಡು ದ್ವಾರರಳನ್ನು ಒಳಗೊಂಡಿರುತ್ತದೆ, ಇದರ ಒಂದು ದ್ವಾರವನ್ನು ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಮತ್ತು ಕಾಮಾಗಾರಿಯ ಇಂಜಿನಿಯರ್ ವಾಲ್ಟರ್ ಡಿಸೋಜಾ ಮತ್ತೊಂದು ದ್ವಾರವನ್ನು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಮತ್ತು ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಉದ್ಘಾಟಿಸಿದರು. ಬಳಿಕ ಇಂಟರ್‍ಲಾಕ್ ಅಳವಡಿಸಿ ಸಜ್ಜುಗೊಳಿಸಿದ ಆವರಣವನ್ನು ಇಬ್ಬರೂ ಧರ್ಮಗುರುಗಳು ಆ ಪ್ರದೇಶವನ್ನು ಆಶಿರ್ವದಿಸಿ ಪ್ರಾರ್ಥನೆಯನ್ನು ನೆಡೆಸಿದರು. ಈ ಸಂದರ್ಭದಲ್ಲಿ ಪಾಲನಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಕಾಮಾಗಾರಿಯ ಸಹಾಯಕ ಆಶಿಸಿ ಡಿಸೋಜಾ, ಆರ್ಥಿಕ ಮಂಡಳಿ ಸದಸ್ಯರು, ವಾಳೆಯಗುರಿಕಾರರು, ಪಾಲನಮಂಡಳಿ ಸದಸ್ಯರು ಹಾಗೂ ಚರ್ಚಿನ ಭಕ್ತಾಧಿಗಳು ಹಾಜರಿದ್ದರು.

ಕೋಲಾರಕ್ಕೆ ಪ್ರಧಾನಿ ನರೇಂದ್ರಮೋದಿ-ಸ್ವಾಗತಕ್ಕೆ ಜಿಲ್ಲಾ ಬಿಜೆಪಿಯಿಂದ ಸಕಲ ಸಿದ್ದತೆಎಸ್‍ಪಿಜಿ ಕಮಾಂಡೋಗಳಿಂದ ಬಿಗಿಭದ್ರತೆ-2ಲಕ್ಷ ಮಂದಿ ಭಾಗಿ ನಿರೀಕ್ಷೆ-ಸಂಸದ ಮುನಿಸ್ವಾಮಿ

ಕೋಲಾರ:- ಪ್ರಧಾನಿ ನರೇಂದ್ರಮೋದಿಯವರ ಆಗಮನಕ್ಕಾಗಿ ಸುಮಾರು 150 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು, ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ 2 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಭದ್ರತೆ ದೃಷ್ಟಿಯಿಂದ ಎಸ್‍ಪಿಜಿ ಕಮಾಂಡೋಗಳು ನಿಗಾ ವಹಿಸಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಕಾರ್ಯಕ್ರಮದ ಮುನ್ನಾದಿನವಾದ ಶನಿವಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಕೆಂದಟ್ಟಿ ಸಮೀಪ ಏ.30ರ ಪ್ರಧಾನಿಯವರ ರ್ಯಾಲಿಯ ಪೂರ್ವಸಿದ್ದತೆಗಳನ್ನು ಪರಿಶೀಲಿಸಿ ಅಂತಿಮ ಹಂತದ ಸಿದ್ದತೆಗಳ ನೇತೃತ್ವ ವಹಿಸಿದ್ದ ಅವರು, ಕಾರ್ಯಕ್ರಮದ ವೇದಿಕೆ, ಆಸನಗಳ ವ್ಯವಸ್ಥೆ, 3 ಹೆಲಿಪ್ಯಾಡ್ ಸಿದ್ದಗೊಂಡಿದ್ದು, ಈಗಾಗಲೇ ಹೆಲಿಕಾಪ್ಟರ್‍ಗಳು ಆಗಮಿಸಿ ಟ್ರಯಲ್ ನಡೆಸಿವೆ ಜತೆಗೆ ಇಂದು ಪ್ರಧಾನಿಯವರು ಹೆಲಿಪ್ಯಾಡ್‍ನಿಂದ ಬರುವ ವಾಹನಗಳು ಸಹಾ ಪೂರ್ವ ತಯಾರಿ ಸಂಚಾರ ನಡೆಸಿವೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪ್ರಧಾನಿಗಳ ಅಕ್ಕಪಕ್ಕದಲ್ಲಿ ಒಂದು ಕಡೆ ಸಂಸದ ಮುನಿಸ್ವಾಮಿ ಮತ್ತೊಂದು ಕಡೆ ಸದಾನಂದಗೌಡರಿಗೆ ಆಸನ ವ್ಯವಸ್ಥೆ ಮಾಡಿದ್ದು, ಗೌಡರ ಪಕ್ಕದಲ್ಲಿ ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ ಅವರಿಗೆ ಆಸನ ಕಲ್ಪಿಸಲಾಗಿದ್ದು, ಇಡೀ ವೇದಿಕೆ, ಕಾಯಕ್ರಮ ಸ್ಥಳವನ್ನು ಎಸ್‍ಪಿಜಿ ಕಮಾಂಡೋಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.


13 ಅಭ್ಯರ್ಥಿಗಳು ಸಭೆಯಲ್ಲಿ ಹಾಜರಿ


ಕಾರ್ಯಕ್ರಮದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ 11 ಬಿಜೆಪಿ ಅಭ್ಯರ್ಥಿಗಳು, ದೇವನಹಳ್ಳಿ,ಹೊಸಕೋಟೆ ಕ್ಷೇತ್ರಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು 13 ಮಂದಿಯೂ ಹಾಜರಿರಲಿದ್ದಾರೆ ಎಂದು ತಿಳಿಸಿ, ಕೋಲಾರ ಜಿಲ್ಲೆಯ ಅಭ್ಯರ್ಥಿಗಳಾದ ವರ್ತೂರು ಪ್ರಕಾಶ್, ಅಶ್ವಿನಿ ಸಂಪಂಗಿ, ಎಂ.ನಾರಾಯಣಸ್ವಾಮಿ, ಸೀಗೆಹಳ್ಳಿ ಸುಂದರ್, ಶ್ರೀನಿವಾಸರೆಡ್ಡಿ, ಮಂಜುನಾಥಗೌಡ ಅವರು ವೇದಿಕೆಯಲ್ಲಿ ಹಾಜರಿರಲಿದ್ದಾರೆ ಎಂದರು.
ಶ್ವಾನದಳ,ತಜ್ಞರಿಂದ
ಪರಿಶೀಲನಾ ಕಾರ್ಯ
ವೇದಿಕೆ ಮತ್ತು ಆಸು ಪಾಸಿನಲ್ಲಿ ಅನುಮಾನಸ್ಪದ ವ್ಯಕ್ತಿಗಳಿಗೆ ಅವಕಾಶವಿಲ್ಲದಂತೆ ಎಸ್‍ಪಿಜಿ ಕಮಾಂಡೋಗಳು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದು, ಶ್ವಾನದಳ, ಬಾಂಬ್ ಪತ್ತೆ ತಜ್ಞರ ತಂಡ ವೇದಿಕೆ, ಸುತ್ತಮುತ್ತ ಪರಿಶೀಲನೆ ನಡೆಸಿ ಎಲ್ಲವೂ ಸಮರ್ಪಕವಾಗಿದೆ ಎಂದು ದೃಢಪಡಿಸಿಕೊಂಡಿದೆ ಎಂದರು.


ವೇದಿಕೆ ನಿರ್ಮಾಣ ಸಂಸದರ ಉಸ್ತುವಾರಿ


ಸಂಸದ ಎಸ್.ಮುನಿಸ್ವಾಮಿ ಹಗಲಿರುಳೆನ್ನದೇ ವೇದಿಕೆ ಬಳಿಯೇ ತಮ್ಮ ಬೆಂಬಲಿಗರೊಂದಿಗೆ ಮೊಕ್ಕಾಂ ಹೂಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ, ಈ ನಡುವೆ ರಾಷ್ಟ್ರೀಯ ಹೆದ್ದಾರಿಯ ಕೆಂದಟ್ಟಿ ಸಮೀಪ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇದಿಕೆ ಹಾಗೂ ಮತ್ತಿತರ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲನೆ ಮಾಡಿದರು.


ಮೋದಿ ಆಗಮನ ಬಿಜೆಪಿಯಲ್ಲಿ ಸಂಚಲನ


ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಸಂಸದ ಎಸ್.ಮುನಿಸ್ವಾಮಿ, ಮೋದಿ ಆಗಮನದಿಂದ ಬಿಜೆಪಿಗೆ ಜಿಲ್ಲೆಯಲ್ಲಿ ಬೂಸ್ಟ್ ಸಿಕ್ಕಂತಾಗಿದೆ, ಜಿಲ್ಲೆಯಲ್ಲಿ ಕನಿಷ್ಟ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಶತಸಿದ್ದವಾಗಲಿದ್ದು, ಮೋದಿಯ ಅಭಿಮಾನಿಗಳಾಗಿರುವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು, ಎಸ್ಪಿ, ಕೆಜಿಎಫ್ ಎಸ್ಪಿ, ಅಪರ ಎಸ್ಪಿ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು ಸಿದ್ದತೆಗಳು ಮತ್ತು ಭದ್ರತೆ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಹೋಗಿದ್ದಾರೆ, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರೂ ಲೋಹಶೋಧಕ ಸ್ಕ್ಯಾನರ್ ಮೂಲಕವೇ ವೇದಿಕೆ ಮುಂಭಾಗಕ್ಕೆ ಪ್ರವೇಶಿಸಲು ಅಗತ್ಯ ಸಿದ್ದತೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ|| ವೇಣುಗೋಪಾಲ್ ರವರು, ಕಾರ್ಯಕ್ರಮದ ವೀಕ್ಷಕರಾದ ಸಾಯಿ ಲೋಕೇಶ್ ರವರು, ಕೆ.ಜಿ.ಎಫ್ ಮಂಡಲ ಅಧ್ಯಕ್ಷರಾದ ಜೈಪ್ರಕಾಶ್ ನಾಯ್ಡು, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಶ್ರೀನಿವಾಸ್ ರವರು ಗಾಂಧಿನಗರ ವೆಂಕಟೇಶ್ ರವರು ಬೆಗ್ಲಿ ಶಿರಾಜ್ ಹಾಗೂ ಮತ್ತಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ33ನೇ ಪದವಿ ಪ್ರದಾನ ಸಮಾರಂಭ


ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 33ನೇ ಪದವಿ ಪ್ರದಾನ ಸಮಾರಂಭವನ್ನು ದಿನಾಂಕ 29.04.2023 ರಂದು ಪೂರ್ವಾಹ್ನ 10.00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆಸಲಾಯಿತು.
ಸಮಾರಂಭದಲ್ಲಿ 97 ಪದವಿ ವಿದ್ಯಾರ್ಥಿಗಳಿಗೆ ಹಾಗೂ 18 ಸ್ನಾತಕೋತ್ತರ ಪದವೀದರರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ವಿನಾಯಕ ಮಿಷನ್ ರಿಸರ್ಚ್ ಫೌಂಡೇಶನ್, ಡೀಮ್ಡ್ ಟು. ಬಿ. ಯುನಿವರ್ಸಿಟಿ. ಸೇಲಂ, ತಮಿಳುನಾಡು ಇದರ ಉಪಕುಲಪತಿಯಾದ ಡಾ. ಪಿ. ಕೆ. ಸುಧೀರ್ ರವರು ಮುಖ್ಯ ಅತಿಥಿಯಾಗಿ ಪ್ರಮಾಣ ಪತ್ರ ವಿತರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಸಭೆಯನ್ನು ಸ್ವಾಗತಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಹೋಮಿಯೋಪಥಿ ವೈದ್ಯಪದ್ದತಿಯು ಜಗತ್ತಿನಾದ್ಯಂತ 65 ದೇಶಗಳಲ್ಲಿ ಜನಪ್ರಿಯಗೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ವಿಶ್ವದಲ್ಲಿ 2ನೇ ಅತೀ ದೊಡ್ಡ ವೈದ್ಯ ಪದ್ದತಿಯೆಂದು ಗುರುತಿಸಲಾಗಿದೆ ಎಂದು ತಿಳಿಸಿದರು. ಹಲವು ರ್ಯಾಂಕ್ ಹಾಗೂ ಚಿನ್ನದ ಪದಕವನ್ನು ಗಳಿಸುವುದರ ಮೂಲಕ ಸಂಸ್ಥೆಯ ಹೆಮ್ಮೆಗೆ ಕಾರಣರಾಗಿರುವ ಪದವೀದರರನ್ನು ಅಬಿನಂದಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ರವರು ವಾರ್ಷಿಕ ವರದಿಯಲ್ಲಿ 2022-23ರಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು ಮತ್ತು ಪದವಿ ಸ್ವೀಕರಿಸಿದ ಹೋಮಿಯೋಪಥಿ ವೈದ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾದ ಡಾ. ಪಿ. ಕೆ. ಸುಧೀರ್ ರವರು ಪದವಿ ಪ್ರಧಾನ ಸಮಾರಂಭದ ಸಂದೇಶದೊಂದಿಗೆ ಪ್ರತಿಷ್ಠಿತ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಸಿಕ್ಕಿದ ಅವಕಾಶಕ್ಕಾಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಫಾದರ್ ಮುಲ್ಲರ್ ಸಂಸ್ಥೆಯಲ್ಲಿನ ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡು ಅಂದಿನ ನಿರ್ದೇಶಕರು, ಆಡಳಿತಾಧಿಕಾರಿಗಳು ಹೋಮಿಯೋಪಥಿ ಕಾಲೇಜನ್ನು ಮುಂದುವರೆಸಲು ಪಟ್ಟ ಪರಿಶ್ರಮವನ್ನು ಸ್ಮರಿಸಿದರು. ಘಟಿಕೋತ್ಸವದ ದಿನವು ಪ್ರತಿ ಪದವೀಧರರ ಜೀವನದಲ್ಲಿ ಸ್ಮರಣೀಯ ದಿನ ಹಾಗೂ ಈ ದಿನಕ್ಕಾಗಿ ಅವರ ಪರಿಶ್ರಮ ಹಾಗೂ ಪೆÇೀಷಕರ ಬೆಂಬಲವನ್ನು ಶ್ಲಾಘಿಸಿದರು.
ಪದವೀದರರ ಪರವಾಗಿ ಡಾ. ದರ್ಶನಾ ಪದ್ಮನಾಭನ್ ರವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.
  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ 2 ಚಿನ್ನದ ಪದಕವನ್ನು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರೆ ಡಾ. ಆಶ್ರಿತಾ ಬಿ.ಎ. ಹಾಗೂ ಮತ್ತೊಂದು ಚಿನ್ನದ ಪದಕವನ್ನು ಸ್ನಾತಕೋತ್ತರ ಪದವಿಯ ಮೆಟಿರಿಯಾ ಮೆಡಿಕಾ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ಡಾ. ರೆಮ್ಯಾ ವರ್ಗೀಸ್ ಪಡೆದಿದ್ದು ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಅಕ್ಟೋಬರ್ 2022 ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ 10 ಸ್ನಾತಕೋತ್ತರ ವಿದ್ಯಾರ್ಥಿಗಳನ್ನೂ ಬಿಷಪ್‍ರವರು ಸನ್ಮಾನಿಸಿದರು. ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯ ಅತ್ಯುತ್ತಮ ಪ್ರಬಂದ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು ನಮ್ಮ ಕಾಲೇಜಿನ 2018-19 ರ ಹೋಮಿಯೋಪಥಿ ಸೈಕ್ಯಾಟ್ರಿ ವಿಭಾಗದ ಡಾ. ಸುದಿಪ್ತಿ ಸಿಂಗ್ ರವರು ಪಡೆದಿರುವರು.
6ನೇ ಮುಲ್ಲೇರಿಯನ್ ಬ್ಯಾಚ್ ಪ್ರಾಯೋಜಿಸಿದ ‘ಡಾ. ಸುಮೊದ್ ಜಾಕೊಬ್ ಸೊಲೊಮನ್ ಪ್ರಶಸ್ತಿ’ಯನ್ನು 2019-20 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ರೆಮ್ಯಾ ವರ್ಗೀಸ್ ರವರಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಪ್ರತಿಷ್ಠಿತ ಅಧ್ಯಕ್ಷೀಯ ಚಿನ್ನದ ಪದಕವನ್ನು ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿನಿ ಡಾ. ಜಿದ್ದು ಸಾಯಿ ಅಖಿಲ ರವರಿಗೆ ಹಾಗೂ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿಯನ್ನು ಡಾ. ಸ್ಟೆಫಿ ವರ್ಗೀಸ್ ರವರಿಗೆ ನೀಡಿ ಗೌರವಿಸಿದರು.
ಬಿಷಪ್‍ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವೀಧರರನ್ನು ಅಭಿನಂದಿಸಿ, ಹೋಮಿಯೋಪಥಿ ವೈದ್ಯ ಪದ್ಧತಿಯು ವಿಶ್ವದ ಎರಡನೇ ಅತೀ ದೊಡ್ಡ ಪದ್ಧತಿಯೆಂದು ಪರಿಗಣಿಸಲ್ಪಟ್ಟರೂ ಇದನ್ನು ಮುಂದುವರೆಸಲು ಅನೇಕ ಅಡೆ ತಡೆಗಳನ್ನು ದಾಟಿ ಹೋಗಬೇಕು. ಉದಯೋನ್ಮುಖ ವೈದ್ಯರು ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಅದನ್ನು ತೆರವುಗೊಳಿಸಬಹುದು ಎಂದು ಪದವೀದರರಿಗೆ ಒತ್ತಿ ಹೇಳಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾರವರು ವಂದನಾರ್ಪಣೆಗೈದರು.
ಡಾ. ದೀಪಾ ರೆಬೆಲ್ಲೊ ಹಾಗೂ ಡಾ. ಮನಿಷ್ ಎಸ್ ತಿವಾರಿ ರವರು ಪದವಿ ಪ್ರದಾನ ಕಾರ್ಯಕ್ರಮವನ್ನು ನಿರೂಪಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ರಂಜನ್ ಕ್ಲೆಮೆಂಟ್ ಬ್ರಿಟ್ಟೊರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐ ಎಂ ಜೆ ಐ ಎಸ್ ಸಿ ಮೂಡ್ಲಕಟ್ಟೆ : ಯುವಜನ ವಿಕಾಸ ಕಾರ್ಯಗಾರ 

ಕುಂದಾಪುರ: ಏ:25 –  ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕಾಲೇಜಿನಲ್ಲಿ “ಸ್ವಾತಂತ್ರ್ಯ” ಎಂಬ ಒಂದು  ದಿನದ  “ಯುವಜನ ವಿಕಾಸ”  ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿಯಾದ ಡಾ. ಶಿಕಾರಿಪುರ ಕೃಷ್ಣಮೂರ್ತಿ, ಪ್ರಾಧ್ಯಾಪಕರು ಮತ್ತು ಪರಿಣಿತ ಎಚ್ ಆರ್ ಡಿ.ಯ ಶಿಕ್ಷಕರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. “ಯಾ ವಿದ್ಯಾ ಸ ವಿಮುಕ್ತಯೇ” ಎಂದು ವಿದ್ಯಾರ್ಥಿಗಳಿಂದ ಹೇಳಿಸಿದ ಅವರು ಎಲ್ಲ ಬಂಧಗಳಿಂದಲೂ ಬಿಡುಗಡೆಗೊಳಿಸುವ ಮುಕ್ತಿದಾಯಿನಿಯಾಗಿದೆ ವಿದ್ಯೆ ಎಂದರು. ಶರೀರ, ಬುದ್ಧಿ, ಮನಸ್ಸುಗಳನ್ನು ಮುಕ್ತಗೊಳಿಸಿ ಮತ್ತೆ ಬಲಗೊಳಿಸಬೇಕು. ಇಂತಹ ಸಮರ್ಥ ಸಜ್ಜನರ ಸಂತುಷ್ಟ ಜೀವನವೇ ಸಮಾಜದ ಸೌಖ್ಯಗಳ ಮೂಲವಾಗಿದೆ. ಅಂತಹ ವ್ಯಕ್ತಿಗಳ ಸಮರಸ ಸಮುದಾಯವೇ ಸುಖಿ ಸ್ವತಂತ್ರ ಸಮಾಜ, ಈ ಸ್ವಾತಂತ್ರ್ಯ ನಮ್ಮ ಭಾರತದ ಅಮೂಲ್ಯ ಸಂಪತ್ತು ಅದಕ್ಕಾಗಿ ನಮ್ಮ ಯುವಜನರನ್ನು ಪ್ರಜ್ಞಾವಂತರಾಗಿಸುವ ಮಾನವೀಯರಾಗಿಸುವ ಸದುದ್ದೇಶ ನಮ್ಮದು ಎಂದು ತಿಳಿಸಿದರು. ಅಲ್ಲದೆ, ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ನ ಶ್ರೀಯುತ ನಂದಗೋಪಾಲ, ಹಿರಿಯ ಪತ್ರಕರ್ತರು ಟೈಮ್ಸ್ ಆಫ್ ಇಂಡಿಯಾ, ಕಾರ್ಯಗಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

  ಪ್ರಾಂಶುಪಾಲೆಯವರಾದ ಡಾ| ಪ್ರತಿಭಾ ಎಂ ಪಟೇಲ್ ರವರು ಅಧ್ಯಕ್ಷೀಯ ಮಾತುಗಳಲ್ಲಿ, “ವಿದ್ಯಾರ್ಥಿಗಳು, ಗಣ್ಯರು ತಿಳಿಸಿದ ವಿಚಾರತತ್ವವನ್ನು  ಅರಿತು ನಿಮ್ಮ ಬದುಕನ್ನು ರೂಪಿಸಿಕೊಳ್ಳಲು  ಅವಕಾಶಗಳು ಸಾವಿರಾರು ಇವೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ ಕುಮಾರ್, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಿ.ಸಿ.ಎ.  ವಿದ್ಯಾರ್ಥಿಗಳಾದ ಕು| ನೇತ್ರಾವತಿ ಸ್ವಾಗತಿಸಿದರು. ಕು| ರಿಯಾನ್ ಕಾರ್ಯಕ್ರಮ ನಿರ್ವಹಿಸಿದರು. ಕು| ಪ್ರತಿಭಾ ವಂದಿಸಿದರು. ಪ್ರೋ| ಸುಮನ ಅತಿಥಿ ಪರಿಚಯ ನೀಡಿದರು.

ತುಂಬೆಯ ಫಾದರ್ ಮುಲ್ಲರ್ : ದಶಮನೋತ್ಸವ ಸಂಭ್ರಮದ ಪತ್ರಿಕಾಗೋಷ್ಟಿ

ಮಂಗಳೂರಿನ ಹೃದಯ ಭಾಗದಲ್ಲಿರುವ ಎಲ್ಲರಿಗೂ ಚಿರ ಪರಿಚಿತವಾದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್‍ಷ್ಟಿಟ್ಯೂಷನ್ ಪೂಜನೀಯ ಫಾದರ್ ಆಗಸ್ಟಸ್ ಮುಲ್ಲರ್‍ರವರಿಂದ 1880ನೇ ಇಸವಿಯಲ್ಲಿ ಕಂಕನಾಡಿಯಲ್ಲಿ ಸ್ಥಾಪನೆಯಾಗಿ ಇಂದು ಬೃಹದಾಕಾರವಾಗಿ ಬೆಳೆದು, ಅತ್ತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದರಲ್ಲಿ ಹೆಸರುವಾಸಿಯಾಗಿದೆ.

ಈ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಒಂದು ಸಹ ಸಂಸ್ಥೆಯಾಗಿರುವ ಬಂಟ್ವಾಳ ತಾಲೂಕಿನ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯನ್ನು 01.05.2013 ರಂದು ತುಂಬೆಯ ಬಿ.ಎ. ಸಮೂಹ ಸಂಸ್ಥೆಯಿಂದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ಖರೀದಿಸಿತು ಮತ್ತು ಈ ಆಸ್ಪತ್ರೆಯು 02.06.2013 ರಂದು ಉದ್ಘಾಟನೆಗೊಂಡಿತು. ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆಯು ಈ ವರ್ಷ ದಶಮನೋತ್ಸವ ಆಚರಿಸುತ್ತದೆ ಎಂದು ತಿಳಿಸಲು ಸಂತೋಷವಾಗುತ್ತದೆ. ಆಸ್ಪತ್ರೆಯು 50 ಹಾಸಿಗೆಗಳಿಂದ ಈಗ 100 ಹಾಸಿಗೆಗಳನ್ನು ಹೊಂದಿದೆ. ಮಲ್ಟಿ ಸ್ಪೆಷಾಲಿಟಿಯಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಸೇವೆಗಳು ಲಭ್ಯವಿದೆ. ಓಂಃಊ ಪ್ರವೇಶ ಪೂರ್ವ ಮಾನ್ಯತೆ ಪಡೆದು ಈ ಆಸ್ಪತ್ರೆಯು ಉನ್ನತ ದರ್ಜೆಗೇರಿದೆ.
ಈ ಆಸ್ಪತ್ರೆಯು 24 ತಾಸುಗಳ ತುರ್ತು ಮತ್ತು ಅಪಘಾತ ಚಿಕಿತ್ಸೆ, 16 ಸ್ಲೈಸ್ ಸಿಟಿ ಸ್ಕ್ಯಾನ್, 24×7 ಪ್ರಯೋಗಾಲಯದ ಸೇವೆಗಳು, ಔಷಧಾಲಯ, ಪ್ರಸೂತಿ/ಹೆರಿಗೆ ವಿಭಾಗ, ಸುಸರ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ದಾದಿಯರ ಸೇವೆಗಳಿಗೆ ಹೆಸರುವಾಸಿಯಾಗಿದೆ. ಕಳೆದ 10 ವರ್ಷಗಳಿಂದ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವಿಟ್ಲ ಹಾಗೂ ನೆರೆರಾಜ್ಯ ಕೇರಳದಿಂದ ಆರೋಗ್ಯ ಸೇವೆಯನ್ನು ಪಡೆಯಲು ರೋಗಿಗಳು ಬರುತ್ತಾರೆ. ಈ ಗ್ರಾಮೀಣ ಪ್ರದೇಶದ ಜನರಿಗೆ ಪ್ರತ್ಯೇಕವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕಳೆದ ವರ್ಷ ದಶಮಾನೋತ್ಸವದ ಕೊಡುಗೆಯಾಗಿ ಬಂಟ್ವಾಳ ತಾಲೂಕಿನ ಪ್ರಥಮ ಃ.Sಛಿ ನರ್ಸಿಂಗ್ ಕಾಲೇಜನ್ನು (40 ಸೀಟುಗಳು) ಆರಂಭಿಸಿದೆ ಹಾಗೂ ಕಾಲೇಜಿನ ಹೊಸ ಕಟ್ಟಡದ ಕೆಲಸವು ಭರದಿಂದ ಸಾಗುತ್ತಿದೆ.
ಆಸ್ಪತ್ರೆಯು ದಶಮನೋತ್ಸವ ಪೂರೈಸುವ ಸಂದರ್ಭದಲ್ಲಿ ಮೇ 1, 2023 ರಂದು ಎಲ್ಲಾ ವಿಭಾಗಗಳ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಶಿಬಿರದ ಸೌಲಭ್ಯವನ್ನು ಒಂದು ತಿಂಗಳಿಗೆ ಉಚಿತವಾಗಿ ಒದಗಿಸಲಾಗುತ್ತದೆ.


ಕೆಸಿ ವ್ಯಾಲಿ ನೀರುನಿಂದಾಗಿ ಈ ಭಾಗದ ಜನರಿಗೆ ವರದವಾಗಲಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್

ಶ್ರೀನಿವಾಸಪುರ 2 : ಕೆಸಿ ವ್ಯಾಲಿ ನೀರುನಿಂದಾಗಿ ಈ ಭಾಗದ ಜನರಿಗೆ ವರದವಾಗಲಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ತಾಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದವತಿಯಿಂದ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈ ಹಿಂದೆ ಜಿಲ್ಲೆಯಲ್ಲಿ ನೀರಿನ ಮಟ್ಟವು 1400 ಅಡಿಗಳಷ್ಟು ಆಳಕ್ಕೆ ದಾಟಿತ್ತು, ಆದರೆ ಇಂದು ನೀರಿನ ಮಟ್ಟವು 600 ಕ್ಕೆ ಬಂದಿರುವುದು ಸಂತಸದ ವಿಚಾರ ಎನಿಸಿದೆ. ಕಾಂಗ್ರೆಸ್ ಪಕ್ಷವು ಆಡಳಿತಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ವಿತರಣೆ 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ಮನೆಗಳನ್ನು ನೀಡಲಾಗುವುದು, ಸಿಸಿ ರಸ್ತೆ, ಸರ್ಕಾರಿ ಶಾಲೆಗಳ ಪುನಃಶ್ಚೇತನ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಆ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ನಾನು ನಿಮ್ಮ ಸೇವೆ ಮಾಡಲ್ಲಿಕ್ಕೆ ಅವಕಾಶ ಮಾಡಿಕೊಡಿ. ನೀವು ನನ್ನನ್ನು ಗೆಲ್ಲಿಸುವುದರ ಮೂಲಕ ಆರ್ಶೀವಾದ ಮಾಡಿದರೆ ವಿಧಾನ ಸೌದದಲ್ಲಿ ನಿಮ್ಮ ಪರವಾಗಿ ದ್ವನಿ ಎತ್ತುತ್ತೇನೆ ಎಂದರು . ಇಲ್ಲವಾದರೆ ನನ್ನ ತೋಟಕ್ಕೆ ಹೋಗಿ ಕುರಿ, ಮೇಕೆ ಮೇಯಿಸಿಕೊಂಡು ವಿಶ್ರಾಂತಿ ಪಡೆಯುತ್ತೇನೆ ಎಂದರು.
ಆಂಬೇಡ್ಕರ್ ರವರ ತತ್ವದ ಹಾಗೂ ಆಶಯದ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇನೆ . ಯುವ ಸಮುದಾಯವು ಅಂಬೇಡ್ಕರ್ ವಿಚಾರ ಧಾರೆಗಳನ್ನು ಅರಿತುಕೊಳ್ಳಬೇಕು.
ಕೇಂದ್ರ ಸರ್ಕಾರ ವೈಪಲ್ಯದ ಯೋಜನೆಗಳ ವಿರುದ್ದ ಟಾಂಗ್ ನೀಡಿದರು. ಎಂಎಲ್‍ಸಿ ಅನಿಲ್‍ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಜಿ.ಪಂ.ಮಾಜಿ ಅಧ್ಯಕ್ಷ ಜನ್ನಘಟ್ಟ ಕೃಷ್ಣಪ್ಪ, ತೋಟಗಾರಿಕೆ ವಿಶ್ವವಿದ್ಯಾನಿಲಯದ ನಿರ್ದೇಶಕ ಮಾದಮಂಗಲ ಮಂಜುನಾಥ್, ಕೋಲಾರ ಜಿಲ್ಲಾ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಸುಗಟೂರು ಸೊಸೈಟಿ ಅಧ್ಯಕ್ಷ ಬಾಬು, ಗ್ರಾ.ಪಂ. ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ಪಿ.ಎಸ್.ನಾಗೇಂದ್ರಶೆಟ್ಟಿ, ಸುಗಟೂರು ವಿಶ್ವನಾಥ್, ಮುಳ್ಳಳ್ಳಿ ಚಂದ್ರು, ಸುಮನ್, ಕೇಶವ, ಡಾ.ಮಂಜುನಾಥ್, ವಿ.ಪ್ರಕಾಶ್, ವಿಜಯಕುಮಾರ್, ಮುರಳಿ, ಸಂತೋಷ್, ನವೀನ್ , ಅಭಿಲಾಷ್ ಇದ್ದರು
.

ಡಾ.ಹೆಚ್. ಶಾಂತಾರಾಮ್ ಹೆಸರಿನಲ್ಲಿ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ 2021ರಿಂದ 2022ರ ಅವದಿ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಕೊಡ ಮಾಡುವ ಪ್ರಶಸ್ತಿಗೆ ಅಹ್ವಾನ

Dark northern lights gradient blur abstract color background pattern design.

ಕುಂದಾಪುರ : ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ ಪ್ರತಿವರ್ಷ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ ಕಾದಂಬರಿಗಳನ್ನು ಪರಿಗಣಿಸಲಿದ್ದು, 2021ರಿಂದ 2022ರ ಅವಧಿಯಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಪ್ರಕಾಶಕರು ಅಥವಾ ಲೇಖಕರು ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಮೇ 20ರೊಳಗೆ ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ -576201 ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಈಗಾಗಲೇ ಪ್ರಶಸ್ತಿ ಪಡೆದವರಿಗೆ ಅವಕಾಶವಿರುವುದಿಲ್ಲ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ ನಡೆಯಲಿದ್ದು, ಹದಿನೈದು ಸಾವಿರ ರೂಪಾಯಿಯೊಂದಿಗೆ ಬೆಳ್ಳಿಫಲಕ ನೀಡಲಾಗುವುದೆಂದು ಪ್ರಶಸ್ತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ – 9449257263 ಸಂಪರ್ಕಿಸಬಹುದು.

ಜೆಸಿಐ ಕುಂದಾಪುರ ಸಿಟಿ ಘಟಕದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ನರ್ಸ್ ರಾಧಿಕಾರವರಿಗೆ ಸನ್ಮಾನ

ಜೆಸಿಐ ಕುಂದಾಪುರ ಸಿಟಿ ಘಟಕದ ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಎಲೆಮರೆಯ ಸಾಧಕರನ್ನು ಗೌರವಿಸುವ ಕಾರ್ಯಕ್ರಮವನ್ನು ಕುಂದಾಪುರದ ಸುಮುಖ ಮಿನಿ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ತಿಂಗಳ ಮೌನ ಸಾಧಕರಾಗಿ ಕುಂದಾಪುರದ ಶ್ರೀ ರಾಮಕೃಷ್ಣ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ರಾಧಿಕಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಪೂರ್ವ ವಲಯ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷರಾದ ಅಭಿಲಾಶ್ ಬಿ ಏ, ವಲಯದ ವಿವಿಧ ಘಟಕಗಳ ಘಟಕ ಅಧ್ಯಕ್ಷರುಗಳಾದ ಅನಿಲ್ ಕುಮಾರ್, ಜ್ಯೋತಿಶಂಕರ್, ಪ್ರದೀಪ್ ಶೆಟ್ಟಿ, ನಾಗೇಂದ್ರ ಪ್ರಭು ಉಪಸ್ಥಿತರಿದ್ದರು. ಘಟಕದ ಪೂರ್ವ ಅಧ್ಯಕ್ಷರುಗಳಾದ ಗಿರೀಶ್ ಹೆಬ್ಬಾರ್ ರಾಘವೇಂದ್ರ ನಾವಡ, ನಾಗೇಶ್ ನಾವಡ, ಮಂಜುನಾಥ ಕಾಮತ್, ಶ್ರೀಧರ್ ಸುವರ್ಣ, ವಿಜಯ್ ಭಂಡಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಸೋನಿ ಡಿಕೋಸ್ಟ ಅವರು ವಹಿಸಿದ್ದರು. ಪ್ರೇಮ ಡಿಕುನ್ನ ಧನ್ಯವಾದ ಸಮರ್ಪಿಸಿದರು.