OUR LADY OF MIRACLES CHURCH, MILAGRES, MANGALORE WOMEN’S DAY CELEBRATION

Women’s Day was celebrated on March 19, 2023 at the Senate Hall of the Milagres Hall Complex with the theme, ‘Women be inspired, be an Inspiration’.  This event was planned under the leadership of the Parish Priest along with a team of 12 women parishioners.  The session started with a prayer service followed by an innovative inauguration.

     Dr. Audrey Pinto, the co-ordinator of the Dept. of Psychology, Alva’s college, Moodbidri was the guest speaker.  Dr. Audrey Pinto encouraged the audience to think out of the box, with various hands on activities.  She spoke about following your heart, breaking boundaries and making a difference in society.  The guests were welcomed by sprinkling of rose water.  There were interesting spot games, jokes, songs and dances.  There was a gathering of 220 ladies.  Everyone was involved and had an enjoyable evening together.

Dhyanavana, International institute of Spirituality centre, Mysore, celebrated It’s 26th Convocation day


Convocation day on Sunday, March 19th at 6 pm. Archbishop Emeritus Bernard Moras was the chief Guest and conferred the Diplomas and certificates to more than 50 students.
 
V Rev. Fr George Santhumayor ocd, Provincial, released the Dhyanavana Souvenir.
Mrs. Clara Fernandes, Secretary, Karnataka regional Laity commission, gave the convocation address on “The role of women in the decision making process”.
 
Besides there were many cultural dances put up by the sisters. The whole program was attended by around 250 priests, religious, friends and benefactors.
 



St Joseph Feast celebrated at St Joseph’s Church, Jeppu

St Joseph’s feast was celebrated on March 19th on the occasion of St Joseph’s feast, the patron of the universal Church, the Diocese of Mangalore and the Jeppu church. 

Rev Fr Praveen Leo Lasrado, the Rector of minor Seminary, Gladsome Home, presided over the Eucharistic Celebration. In His Homily, he presented the Seven Virtues of St Joseph from the Apostolic Letter, Patriscorde“With a Father’s Heart”, written by Pope Francis which describes St Joseph as a beloved father, a tender and loving father, an obedient father, an accepting father; a father who is creatively courageous, a working father, a father in the shadows.

A Special prayers were offered for all the fathers, who dedicate their lives like St Joseph to protect the families

Rev Fr Ronald Serrao, the rector of St Joseph’s Seminary was present for the celebration. The well-wishers and benefactors were honoured by the parish priest Fr Maxim D’Souza. A large number of devotees participated in the festal celebration.  All were served sacks and a fresh lime juice prepared by Mr Olwin Miranda, the Vice President of Jeppu Parish.

ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆ, ಕುಂದಾಪುರ *ಕಿಡ್ಸ್ ಕಾರ್ನಿವಲ್*

ಮೂಡ್ಲಕಟ್ಟೆ ನಾಗರತ್ನ ಭುಜಂಗ ಶೆಟ್ಟಿ ಟ್ರಸ್ಟ್ (ಎಂ ಎನ್ ಬಿ ಎಸ್ ಟ್ರಸ್ಟ್) ನಡೆಸುತ್ತಿರುವ ವಿದ್ಯಾ ಅಕಾಡೆಮಿಯು ಮಾರ್ಚ್ 26 ರ ರವಿವಾರ ಸಂಜೆ 4 ಗಂಟೆಗೆ ಚಿಕ್ಕ ಮಕ್ಕಳಿಗಾಗಿ ಕುಂದಾಪುರದಲ್ಲೆ ಮೊದಲ ಬಾರಿಗೆ  ಕಿಡ್ಸ್ ಕಾರ್ನಿವಲ್ ಅನ್ನು ಆಯೋಜಿಸಿದೆ. ಈ ಕಾರ್ನಿವಲ್ ಮುಖಾಂತರ ಚಿಕ್ಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ, ವಿವಿದ ಸ್ಥಳಗಳ ಮತ್ತು ವಿವಿದ ಶಾಲೆಗಳ ಮಕ್ಕಳೊಂದಿಗೆ  ಬೆರೆತು, ಹಲವು ಮನೋರಂಜನೆ ಮತ್ತು ಆಟೋಟ  ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತೋಷ ಪಡಲು ಅವಕಾಶ ಮಾಡಿ   ಕೊಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳ ಜೊತೆಗೆ, ಅವರ ಪೋಷಕರಿಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮಕ್ಕಳಲ್ಲಿ ಅತೀವಸಂತೋಷದ ವಾತಾವರಣ ಉಂಟುಮಾಡಲು ಪ್ರಯತ್ನಿಸಲಾಗುವುದು.   ಹಲವು ಆಟೋಟಗಳ ಜೊತೆಗೆ
 ಮಕ್ಕಳ ಪ್ರತಿಭೆಗಳನ್ನ ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗುವುದು.  ಹಾಗೆ ಮಕ್ಕಳಿಗೆ ಇಷ್ಟ ಆಗುವ ತಿಂಡಿ ತಿನಿಸುಗಳ ಸ್ಟಾಲ್ ಗಳ ವ್ಯವಸ್ಥೆ ಕೂಡ ಮಾಡಲಾಗುವುದು. ಅಲ್ಲದೆ ಕಾರ್ಯಕ್ರಮದ ರಂಗು ಏರಿಸಲು ಮ್ಯಾಜಿಕ್ ಶೋ ಕೂಡ  ಏರ್ಪಡಿಸಲಾಗಿದೆ. ಸ್ಥಳದಲ್ಲಿಯೇ ಮಕ್ಕಳಿಗೆ ಹಲವು ಗೇಮ್ಸ್ ಗಳನ್ನ ಮತ್ತು ಕ್ವಿಜ್ ಗಳನ್ನ ಮಾಡಿ ಮಕ್ಕಳಿಗೆ ಎಲ್ಲರ ಜೊತೆ ವಿಲೀನ ಗೊಳ್ಳುವ ಮನೋಭಾವ ವೃದ್ಧಿಸಲು ಕೂಡ ಪ್ರಯತ್ನಿಸಲಾಗುವುದು. 
ಈ ಕಾರ್ಯಕ್ರಮಕ್ಕೆ ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಎಂ ಎನ್ ಬಿ ಎಸ್ ಟ್ರಸ್ಟ್ ಭರಿಸುತ್ತದೆ. 
ನೋಂದಣಿಗಾಗಿ 9148019301 ಈ ಸಂಖ್ಯೆಯನ್ನು ಸಂಪರ್ಕಿಸಿ.
ಪತ್ರಿಕಾ ಪ್ರಕಟಣೆಯಲ್ಲಿ ಉಪಸ್ಥಿತಿ

ಪ್ರೊ. ಮೆಲ್ವಿನ್ ಡಿ ಸೋಜಾ, ಕಾರ್ಯಕ್ರಮದ ಸಲಹೆಗರಾರು ಮತ್ತು ಉಪ ಪ್ರಾಂಶುಪಾಲರು, ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ

ಡಾ. ರಾಮಕೃಷ್ಣ ಹೆಗ್ಡೆ, ಐ ಎಂ ಜೆ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರು

ಶ್ರೀಮತಿ ರಷ್ಮ ಶೆಟ್ಟಿ, ವಿದ್ಯಾ ಅಕಾಡೆಮಿ ಶಾಲೆಯ ಮುಖ್ಯಸ್ಥೆ.    

ಸರ್ಕಾರವೇ ಜನರ ಬಳಿ ಬಂದು ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು-ಶೀರೀನಾ ತಾಜ್

ಶ್ರೀನಿವಾಸಪುರ: ಸರ್ಕಾರವೇ ಜನರ ಬಳಿ ಬಂದು ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಯ ಅನುದಾನಗಳ ಬಗ್ಗೆ ಪ್ರತಿಯೊಬ್ಬ ರೈತರಿಗೂ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂಬ ಉದ್ಧೇಶದಿಂದ ಸರ್ಕಾರವು ಗ್ರಾಮ ವಾಸ್ತವ್ಯ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮುಖೇನ ನಮ್ಮ ವ್ಯಾಪ್ತಿಗೆ ಬರುವ ಸಮಸ್ಯೆಗಳು ಏನೇ ಇದ್ದರೂ ಇತ್ಯಾರ್ಥ ಪಡಿಸುವುದಾಗಿ ತಾಲ್ಲೂಕು ದಂಡಾಧಿಕಾರಿಗಳಾದ ಶೀರೀನಾ ತಾಜ್ ರವರು ತಿಳಿಸಿದರು.
ಯಲ್ದೂರು ಹೋಬಳಿ ಕೊಳತೂರು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿದಿನ ರೈತರು – ಸಾರ್ವಜನಿಕರು ತಾಲ್ಲೂಕು ಕಛೇರಿ ಹಾಗೂ ಇತರೆ ಕಛೇರಿಗಳಿಗೆ ಅಲೆದಾಟ ತಪ್ಪಬೇಕೆಂದು ಸರ್ಕಾರವು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ನಮ್ಮ ಕಂದಾಯ ಇಲಾಖೆಗೆ ಸಂಬಂಧಪಟ್ಟ ವೃದ್ಯಾಪ್ಯ ವೇತನ, ಸ್ಮಶಾನ ಒತ್ತುವರಿ, ಭೂಮಿಗೆ ಸಂಬಂಧ ಪಟ್ಟ ಏನೇ ಸಮಸ್ಯೆಇದ್ದರೂ ಸ್ಥಳದಲ್ಲೆ ಇತ್ಯಾರ್ಥ ಪಡಿಸುವುದಾಗಿ ಮತ್ತು ಅರ್ಜಿಗಳನ್ನು ಪಡೆಯುವುದಾಗಿ ಹಾಗೂ ಬೇರೆ ಇಲಾಖೆಗಳಲ್ಲಿ ಬರುವ ಯೋಜನೆ ಅನುದಾನಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದು ಫಲಾನುಭವಿಗಳಾಗಬಹುದು ಎಂದು ಹೇಳಿದರು.
ಈ ಸಂದರ್ಬದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಬರುವ ಯೋಜನೆ ಮತ್ತು ಅನುದಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್. ಶ್ರೀನಿವಾಸ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮೆಹರ್ ತಾಜ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ ರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಶ್ರೀನಿವಾಸ್, ಕೃಷಿ ಇಲಾಖೆಯ ಸಹಾಯಕ ನಿದೇಶಕರು ಕೆ.ಸಿ. ಮಂಜುನಾಥ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರು ಕೃಷ್ಣಪ್ಪ, ಸಿರೆಸ್ತೇದಾರ್ ಬಲರಾಮೇ ಗೌಡ,, ರೆವಿನ್ಯೂ ಅಧಿಕಾರಿ ಜನಾರ್ಧನ್, ಗ್ರಾಮ ಲೆಕ್ಕಿಗರು ಸಾಕಮ್ಮ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆಯಾಗಿ ಶೈಲಾ ಡಿಆಲ್ಮೇಡಾ ಪುನರಾಯ್ಕೆ


ಕುಂದಾಪುರ, ಮಾ.21: ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ 22-23 ನೆ ಸಾಲಿನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಇತ್ತಿಚೆಗೆ ಚರ್ಚ್ ಸಭಾ ಭವನದಲ್ಲಿ ನಡೆಯಿತು. ಕಳೆದ ಸಾಲಿನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಅಧ್ಯಕ್ಷೆ ಪುನರಾಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷಾರಾಗಿ ಬರ್ನಾಡ್ ಡಿಕೋಸ್ತಾ, ನಿಯೋಜಿತ ಅಧ್ಯಕ್ಷರಾಗಿ ಪ್ರೇಮಾ ಡಿಕುನ್ಹಾ, ಕಾರ್ಯದರ್ಶಿಯಾಗಿ ವಾಲ್ಟರ್ ಜೆ ಡಿಸೋಜಾ, ಉಪಾಧ್ಯಕ್ಷರಾಗಿ ಡಾ. ಸೋನಿ ಡಿಕೋಸ್ತಾ, ಕಾರ್ಯದರ್ಶಿಯಾಗಿ ಸಂಗೀತಾ ಪಾಯ್ಸ್, ಖಜಾಂಚಿಯಾಗಿ ಆಲ್ಡ್ರಿನ್ ಡಿಸೋಜಾ. ಸಹಾಯಕ ಖಜಾಂಚಿಯಾಗಿ ವಿಲ್ಸನ್ ಡಿ’ಆಲ್ಮೇಡಾ, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಜೂಲಿಯೆಟ್ ಪಾಯ್ಸ್, ರಾಜಕೀಯ ಸಂಚಾಲಕರಾಗಿ ಆಶಾ ಕರ್ವಾಲ್ಲೊ, ಸರ್ಕಾರ ಸೌಲಭ್ಯಗಳ ಸಂಚಾಲಕರಾಗಿ ವಿನೋದ್ ಕ್ರಾಸ್ಟೊ ಆಂತರಿಕ ಲೆಕ್ಕ ಪರಿಶೋಧಕರಾಗಿ ಜಾನ್ಸನ್ ಡಿ’ಆಲ್ಮೇಡಾ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಮಾಜಿ ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷರುಗಳಾದ ಹೇರಿಕ್ ಗೊನ್ಸಾಲ್ವಿಸ್ ಚುನಾವಣಾ ಅಧಿಕಾರಿಯಾಗಿ ಮತ್ತು ವೀಕ್ಷಕರಾಗಿ ಪ್ರೆಸಿಲ್ಲಾ ಮಿನೆಜೆಸ್ ನಡೆಸಿಕೊಟ್ಟರು. ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವ|ಸ್ಟ್ಯಾನಿ ತಾವ್ರೊ ನೂತನ ಕಾರ್ಯಕಾರಿಸಮಿತಿಗೆ ಶುಭ ಕೋರಿದರು.

ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರ ಅಧಿಕೃತ ಭೇಟಿ – ಕೋಣಿ ಜಗನಾಥ್ ರಾವ್ ಸರಕಾರಿ ಪ್ರೌಢಶಾಲೆಗೆ ಕುರ್ಚಿಗಳ ವಿತರಣೆ

ಜೇಸಿಐ ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರ ಅಧಿಕೃತ ಭೇಟಿಯ ಈ ಶುಭಸಂದರ್ಭದಲ್ಲಿ ಕೋಣಿ ಜಗನಾಥ್ ರಾವ್ ಸರಕಾರಿ ಪ್ರೌಢಶಾಲೆಗೆ ಅವಶ್ಯವಿರುವ ಕುರ್ಚಿಗಳ ವಿತರಣಾ ಕಾರ್ಯಕ್ರಮನೆರೆವೇರಿಸಿ ವಿದ್ಯಾ ಸಂಸ್ಥೆಗೆ ಅಗತ್ಯ ವಿರುವ ಪಿಟೋಪಿಕರಣ ನೀಡುವುದ ರಿಂದ ಶಾಖೆಯ ಅಭಿವೃದ್ಧಿ ಯಾ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುವಂತಾಗುತ್ತೆ ಜೇಸಿ ಯುವಕರಿಗೆ ನಾಯಕತ್ವ ಮೂಲಕ ಸಮಾಜ ದ ಜನರೊಂದಿಗೆ ಹೇಗೆ ನಡೆಯ ಬೇಕು ಎನ್ನುದನ್ನು ಕಲಿಸುತ್ತೆ, ಯುವಕರು ಈ ಸಂಸ್ಥೆ ಗೆ ಬರಬೇಕು’ ಎಂದು ಅವರು ನುಡಿದರು
ಸಮಾರಂಭ ದ ಅಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷರಾದ ಡಾ ಸೋನಿ ವಹಿಸಿದರು
ಈ ಸಂದರ್ಭದಲ್ಲಿ ವಲಯ 15 ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ವಲಯ ಉಪಾಧ್ಯಕ್ಷ ಅಭಿಲಾಶ್ ವಲಯಾಧಿಕಾರಿ ನರಸಿಂಹ ಐತಾಳ್ ಶಾಲಾ ಮುಕ್ಯೋಪಾಧ್ಯಾಯ ಮಾದವ ಅಡಿಗ, ಲೇಡಿ ಜೇಸಿ ಪ್ರೇಮ, ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಗಿರೀಶ್ ಹೆಬ್ಬಾರ್, ಶ್ರೀಧರ್ ಸುವರ್ಣ ನಾಗೇಶ್ ನಾವಡ, ಪ್ರಶಾಂತ್ ಹವಾಲ್ದಾರ್, ವಿಜಯ್ ಬಂಡಾರಿ, ವಲಯ 15 ರ ಆಡಳಿತ ಮಂಡಳಿ ಸದ್ಯಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೇಶ್ ಶೆಟ್ಟಿ ವಂದಿಸಿದರು

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗು ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕ್ ಘಟಕ ಸಭಾಪತಿ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಕಾರ್ಯವೈಖರಿಯನ್ನು , ಅದರ ಮಹತ್ವವನ್ನು ವಿಧ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು ಜೊತೆಗೆ ಇಂದಿನ ಯುವ ಪೀಳಿಗೆ ಸಮಾಜಮುಖಿ ಕೆಲಸಗಳಲ್ಲಿ ಸಾದ್ಯವಾದಷ್ಟು ತಮ್ಮನ್ನು ತೊಡಗಿಸಿಕೊಳ್ಳಬೇಕು, ಇಂತಹ ಘಟಕಗಳ ಸದುಪಯೋಗ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಭಾರತೀಯ ರೆಡ್‌ ಕ್ರಾಸ್‌ನ ಖಜಾಂಚಿ ಶಿವರಾಮ ಶೆಟ್ಟಿ ವಿಧ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್ ಅವರು ಮಾತನಾಡಿ  ರಕ್ತದಾನದ ಬಹಳ ಪ್ರಾಮುಖ್ಯವಾದುದು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವಿಧ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಮ್ಯಾನೇಜಿಂಗ್ ಕಮಿಟಿಯ ಸದಸ್ಯರಾದ ಗಣೇಶ್ ಆಚಾರ್, ಸದಾನಂದ ಶೆಟ್ಟಿ, ಮುತ್ತಯ್ಯ ಶೆಟ್ಟಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜಕರಾದ ಪ್ರೊಫೆಸರ್ ಬಾಲನಾಗೇಶ್ವರ್ ಎಸ್,  ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊಫೆಸರ್ ವರುಣ್ ಕುಮಾರ್,ಕಾಲೇಜು ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು  ಉಪಸ್ಥಿತರಿದ್ದರು.  ಪ್ರೊಫ಼ೆಸರ್ ಸೂಕ್ಷ್ಮ ಅಡಿಗ ಕಾರ್ಯಕ್ರಮ ನಿರೂಪಿಸಿದರು.