ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಸಂಘÀಟನೆ ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ ನೀಡುತ್ತಾ ಬಂದಿರುವ ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿಗೆ ಈ ಬಾರಿ ಕಾರ್ಕಳ ತಾಲೂಕಿನಲ್ಲೇ ಸಾಮಾಜಿಕ, ಸಾಂಸ್ಕøತಿಕ, ಕ್ರೀಡಾ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಕಳೆದ 23 ವರ್ಷಗಳಿಂದ ತನ್ನದೇ ವೈಶಿಷ್ಟ್ಯಪೂರ್ಣ ಶೈಲಿಯ ಮೂಲಕ ಗುರುತಿಸಿಕೊಂಡಿರುವ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.) ಸಂಸ್ಥೆಗೆ ಜಿಲ್ಲಾ ಪ್ರಶಸ್ತಿ ಮತ್ತು 25 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ನೀಡಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರನ್ನು ಗೌರವಿಸಲಾಯಿತು.
ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಜರಗಿದ ಜಿಲಾ ಮಟ್ಟದ ನೆರೆಹೊರೆಯ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಭಟ್, ಉಡುಪಿ ಯುವಜನ ಕ್ರೀಡಾ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಶೆಟ್ಟಿ, ಉಡುಪಿ ನೆಹರೂ ಯುವ ಕೇಂದ್ರ ಸಂಘಟನೆಯ ಜಿಲ್ಲಾ ಯುವ ಸಮಾನ್ವಯಾಧಿಕಾರಿ ವಿಲ್ಪ್ರೆಡ್ ಡಿ’ಸೋಜಾ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಪೂರ್ವಾಧ್ಯಕ್ಷರಾದ ಸುರೇಶ್ ಕಾಸರಬೈಲು, ಸತೀಶ್ ಅಬ್ಬನಡ್ಕ, ಕಾರ್ಯದರ್ಶಿ ಲಲಿತಾ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಸದಸ್ಯರಾದ ಸುರೇಶ್ ಅಬ್ಬನಡ್ಕ, ಸಂಧ್ಯಾ ಶೆಟ್ಟಿ, ಆರತಿ ಕುಮಾರಿ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಸುಲೋಚನಾ ಕೋಟ್ಯಾನ್, ಅಶ್ವಿನಿ ಪೂಜಾರಿ ಮೊದಲಾದವರು ಉಪಸ್ಥಿತಿತರಿದ್ದರು.
Month: March 2023
ಜನನುಡಿ ಸುದ್ದಿ ಸಂಸ್ಥೆಯ ಮುದ್ದು ಯೇಸು ಸ್ಫರ್ಧೆಯಲ್ಲಿ ವೆನೋರಾ ಡಿಸೋಜಾ ಮತ್ತು ಸಾನಿಯಾ ಡಿಮೆಲ್ಲೊ ಇವರಿಗೆ ಪ್ರಥಮ ಸ್ಥಾನ
ಕುಂದಾಪುರ, ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ ಮುದ್ದು ಯೇಸು ಸ್ಫರ್ಧೆಯಲ್ಲಿ ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಸ್ರೂರಿನ ವೆನೋರಾ ಡಿಸೋಜಾ ಪ್ರಥಮ ಸ್ಥಾನ ಪಡೆದಿದ್ದಾಳೆ, ದ್ವಿತೀಯ ಸ್ಥಾನವನ್ನು ಬೆಂಗಳೂರಿನ ಇಯಾನ್ ಜಿತ್, ಪಡೆದರೆ ತ್ರತೀಯ ಸ್ಥಾನವನ್ನು ಕುಂದಾಪುರದ ಎಡೆನ್ ಡಿಆಲ್ಮೇಡಾ ಪಡೆದುಕೊಂಡಿದ್ದಾನೆ.
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಕುಂದಾಪುರದ ಸಾನಿಯಾ ಡಿಮೆಲ್ಲೊ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ದ್ವಿತೀಯ ಸ್ಥಾನವನ್ನು ಕುಂದಾಪುರದ ಅಲೈನಾ ಎಬ್ರಿಲ್ ಫೆರ್ನಾಂಡಿಸ್ ಪಡೆದುಕೊಂಡರೆ, ತ್ರತೀಯ ಸ್ಥಾನವನ್ನು ಕುಂದಾಪುರದ ಮಹಿಮಾ ವಿಯಾನ್ನಾ ಬರೆಟ್ಟೊ ಪಡೆದುಕೊಂಡಿದ್ದಾಳೆ.
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಕೋಟದ ಡೀಯೊರ್ ಸಾಶಾ ಡಾಯಾಸ್, ಕೋಟೆಶ್ವರದ ಅಮೋಸ್ ಥೋಮಸ್ ಡಿಮೆಲ್ಲೊ ಮತ್ತು ಪೇತ್ರಿಯ ಈವಾ ಎಂಜೆಲ್ ಡಿಸೋಜಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಗಂಗೊಳ್ಳಿಯ ಒನೀಲ್ ಜೂಡ್ ರೆಬೆಲ್ಲೊ, ಮೂಡುಬಿದ್ರೆ ಕಲ್ಲಾಬೆಟ್ಟುವಿನ ಆನ್ (Ann) ಕಾರ್ಡೊಜಾ, ಮತ್ತು ಹಂಗಾರಕಟ್ಟೆಯ ಸೆಲ್ವಿಟಾ ಡಿಆಲ್ಮೇಡಾ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
ಈ ಸಲ ಮಾಧ್ಯಮದ ಮೂಲಕ ಸಾರ್ವಜನಿಕರು ಮೆಚ್ಚುಗೆ ಪಡೆದ ಮಕ್ಕಳು ಜನನುಡಿ ಮುದ್ದು ಯೇಸು ಸ್ಫರ್ಧೆಯಲ್ಲಿ ಆರಿಸಲಾಗಿದೆ. ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಜನನುಡಿ ಸುದ್ದಿ ಸಂಸ್ಥೆಯಿಂದ ಧನ್ಯವಾದಗಳು, ವಿಜೇತರಾದ ಮುದ್ದು ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಜನನುಡಿ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳು.
ಈ ಸ್ಫರ್ಧೆಯ ಪೋಷಕರುಗಳಿಗೆ ತುಂಬು ಹ್ರದಯದಿಂದ ಸುದ್ದಿ ಸಂಸ್ಥೆಯಿಂದ ಕ್ರತ್ಞಜತೆಗಳನ್ನು ಸಲ್ಲಿಸಿಸುತ್ತಿದ್ದೆವೆ.
ಬಹುಮಾನ ವಿತರಣೆಯ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
ಒಂದು ವರ್ಷದ ಒಳಗಿನ ವಿಭಾಗದಲ್ಲಿ ವಿಜೇತರಾದವರು
ಒಂದರಿಂದ ಐದು ವರ್ಷದ ಒಳಗಿನ ವಿಭಾಗದಲ್ಲಿ ವಿಜೇತರಾದವರು
ಒಂದು ವರ್ಷದ ಒಳಗಿನವರ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡೆದವರು
ಒಂದು ವರ್ಷದಿಂದ ಐದು ವರ್ಷದ ಒಳಗಿನವರ ವಿಭಾಗದಲ್ಲಿ ಸಮಾಧಾನಕರ ಬಹುಮಾನ ಪಡೆದವರು
Appreciated children in one to five years category
Appreciated children in the under one year category
OUR SPONOSORS FOR JANANUDI.COM “MUDDU YESU” PHOTO CONTEST 2022-23
ಗ್ರೇಸಿ ರೀಟಾ ವಾಜ್ (ಕುಂದಾಪುರ್- ಮಾಗುಂಡಿ-ಮಲ್ಗಡಿ ಕೊಂಕ್ಣಿ ಬರವ್ಪಿಣ್) ದೆವಾಧೀನ್ ಜಾಲಿ (25-3-23)
ಗ್ರೇಸಿ ರೀಟಾ ವಾಜ್ (ಕುಂದಾಪುರ್- ಮಾಗುಂಡಿ) ದೆವಾಧೀನ್ ಜಾಲಿ (25-3-23)
ದೆ| ಪಿ. ಡಿ. ವಾಜ್ ಚಿ ಪತಿಣ್
ಧುವ್ :ದೆ| ಜೋಸೆಫ್ ಡೆಸಾ ಆನಿ ಜೂಲಿಯಾನ ಡೆಸಾ ಹಾಂಚಿಂ
ಆವಯ್ : ರೂಪರ್ಟ್ / ಈವಾನ್. ಪ್ರವೀಣ್ / ಜಸಿಂತಾ. ಪ್ರಮೀಳಾ / ಕೇಶವ್. ಪ್ರದೀಪ್ / ಶೋಭಾ. ಶರ್ಮಿಳಾ / ಕಾನ್ರಡ್. ಹಾಂಚಿಂ
ಗ್ರೇಸಿ ಬಾಯ್ ಗಾಂವಾನ್ ಮಾಗುಂಡಿ, ಬಾಳೆಹೊನ್ನೂರ್ ಚಿಕ್ಕಮಗಳೂರ್ ಚಿ, ಆಸೊನ್ ತಿಚೆಂ ಲಗ್ನ್ ಖ್ಯಾತ್ ಹಾಸ್ಯ್ ಬರವ್ಪಿ ಪಿಡ್ವಾಜ್ ಕುಂದಾಪುರ್ ಲಗ್ನ್ ಜಾವ್ನ್ ತಿ ಕುಂದಾಪುರ್, ವಸ್ತಿ ಕರ್ನ್ ಆಸಲ್ಲಿ.
ತಿ ಎಕ್ ಸಮಾಜ್ ಸೇವಕಿ ಜಾವ್ನಾಸೊನ್, ಮಲ್ಗಡಿ ಕೊಂಕ್ಣಿ ಬರವ್ಪಿಣ್ ಜಾವ್ನಾಸ್ಲಿ, ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಂತ್ ತಿಣೆ, ಲ್ಹಾನ ಸಮುದಾಯ್, ಕೊಯೆರ್ ಪಂಗ್ಡಾಂತ್ ಆನಿ ತಿಸ್ರಿ ಒಡ್ದಿಂತ್ ಸೆವಾ ದಿಲ್ಯಾ ಆಸ್ತಾಂ, ಗ್ರೆಸಿ ಬಾಯ್ ಥ್ಹೊಡ್ಯಾ ಕಾಳಾ ಥಾವ್ನ್ ಪೀಡೆಂತ್ ಆಸೊನ್ ತಿ. 25-3-23 ವೇರ್ ಕುಂದಾಪುರ್ ತಿಚ್ಯಾ ಘರಾಂತ್ ಅಂತರ್ಲಿ.
ತಿಚಿ ಕುಡ್ ವೈಧ್ಯಕೀಯ ಉಪ್ಕಾರಾಕ್ ಪಡ್ಚ್ಯಾ ಖಾತಿರ್ ತಿಣೆ ಕಂಕನಾಡಿ ಆಸ್ಪತ್ರೆಕ್ ದಾನ್ ದಿಲ್ಲಿ ಆಸ್ತಾಂ, ತಿಚೆಂ ಮರ್ಣಾಚೆಂ ಬಲಿದಾನ್ ಆನಿ ಅಂತಿಮ್ ಸಂಸ್ಕಾರ್ಣಿ ಸಂಪ್ತೆರ್ ತಿ ಕಂಕನಾಡಿ ಹೊಸ್ಪಿಟೆಲಾಕ್ ವ್ಹರ್ನ್ ವೆತಾಲೆ. ಮ್ಹಣುನ್ ಕುಟ್ಮಾದಾರಾನಿ ಕಳಯ್ಲಾ.
ಮರ್ಣಾಚಿ ರೀತ್ : ಆಯ್ತಾರಾ 26-03-2023, ಸಾಂಜೆರ್ 3.30 ವೊರಾರ್ ಘರಾ ಥಾವ್ನ್ ಆನಿ 4.00 ವೊರಾರ್ ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆಂತ್ ಚಲ್ತೆಲಿ.
ಚಡಿತ್ ವಿವರ್ ಸಂಪರ್ಕಾಕ್ : 9448252649
ಗ್ರಾಮೀಣ ಭಾಗದಲ್ಲಿ ಪಕ್ಷಾತೀತವಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ : ಶಾಸಕ ಕೆ.ಆರ್.ರಮೇಶ್‍ಕುಮಾರ್
ಗ್ರಾಮೀಣ ಭಾಗದಲ್ಲಿ ಪಕ್ಷಾತೀತವಾಗಿ ವಸತಿ ರಹಿತರಿಗೆ ವಸತಿ ನೀಡಲಾಗಿದೆ. ಕುಡಿಯುವ ನೀರು, ಸಮುದಾಯಭವನಗಳನ್ನು ನಿರ್ಮಿಸಲಾಗುತ್ತಿದೆ. ಮುಖ್ಯವಾಗಿ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳಿಗೆ ಮೊದಲ ಆಧ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ಚಿಕ್ಕರಂಗೇಪಲ್ಲಿ ಗ್ರಾಮದಲ್ಲಿ ವಿವಿಧ ಯೋಜನೆಯಲ್ಲಿ 30 ಲಕ್ಷ ವೆಚ್ಚದ ಕಾಮಗಾರಿಗಳನ್ನು ಹಾಗು ಜಿಲ್ಲಾ ಕೋಮುಲ್ ಹಾಲು ಒಕ್ಕೂಟದಿಂದ ನಿರ್ಮಿಸಲಾದ ಹಾಲಿನ ಡೈರಿ ಕಟ್ಟಡವನ್ನು ಶುಕ್ರವಾರ ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯು ರೈತ ಹಾಗೂ ಬಡ ಕುಟುಂಬಗಳ ಆರ್ಥಿಕವಾಗಿ ಸಭಲರಾಗಲು ಕಾರಣವಾಗಿದ್ದು, ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಮಾಡುವಂತೆ ಸಲಹೆ ನೀಡಿದರು.
ಗ್ರಾಮದಲ್ಲಿನ ಹಾಲು ಡೈರಿಯಲ್ಲಿ ದಿನಕ್ಕೆ 385 ಲೀಟರ್ ಉತ್ಪಾದನೆ ಆಗುತ್ತಿದ್ದು, ಇದರಿಂದ 4.20 ಲಕ್ಷ ಆದಾಯ ಇದೆ. ಈಗ ಬರುವ ಆದಾಯವು 4.20 ಲಕ್ಷ ದಿಂದ 8 ಲಕ್ಷ ಆದಾಯದ ಗುರಿ ಸೇರಬೇಕು. ಆಗ ನೀವು ಅಭಿವೃದ್ಧಿಯಾಗುತ್ತೀರಿ ಎಂದರು. ಜನರಿಗೆ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಮಾಡಿದರೆ ಮುಂದಿನ ದಿನಗಳಲ್ಲಿ ಪುನಃ ನಮ್ಮನ್ನ ಆಯ್ಕೆ ಮಾಡುತ್ತಾರೆ.
ಈ ನಿಟ್ಟಿನಲ್ಲಿ ಬಡ ಕುಟುಂಬಗಳ ಮಹಿಳೆಯರ ಏಳಿಗೆಗಾಗಿ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲವಿತರಣೆಯು ಪಕ್ಷತೀತವಾಗಿ ಮಾಡಲಾಗಿದೆ. ಗ್ರಾಮದಲ್ಲಿನ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಸಲಹೆ ಸಹಕಾರಗಳೊಂದಿಗೆ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಳ್ಳುತ್ತಾ ಒಗ್ಗಾಟ್ಟಾಗಿ ಇರುವಂತೆ ಸಲಹೆ ನೀಡಿದರು.
ಅಂಗನವಾಡಿ ನೂತನ ಕಟ್ಟಡ, ಸಿಸಿ ರಸ್ತೆ , ಶಾಲಾ ಶೌಚಾಲಯ , ಶಾಲಾ ಕಾಂಪೌಂಡ್, ಸಿಸಿ ಚರಂಡಿ ರಸ್ತೆಯನ್ನು ಉದ್ಗಾಟಿಸಲಾಯಿತು. ಪಿಎಲ್‍ಡಿ ಬ್ಯಾಂಕ್ ತಾಲೂಕು ಅಧ್ಯಕ್ಷ ದಿಂಬಾಲ್ ಅಶೋಕ್ , ನೆಲವಂಕಿ ಗ್ರಾ.ಪಂ.ಅಧ್ಯಕ್ಷೆ ಗೌತಮಿ ಮುನಿರಾಜು, ಸದಸ್ಯ ಸಿ.ಎಂ.ರಮೇಶ್ , ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸಂದ್ರ ಕೆ.ಆರ್.ಶಿವಾರೆಡ್ಡಿ, ಮುಖಂಡರಾದ ಆರ್.ವೆಂಕಟೇಶ್‍ಮೂರ್ತಿ, ಕೆ.ಕೆ.ಮಂಜು, ಬೋರ್‍ವೈಲ್ ಕೃಷ್ಣಾರೆಡ್ಡಿ, ಎಂಸಿಎಸ್ ಅಧ್ಯಕ್ಷ ನಾರಾಯಣಸ್ವಾಮಿ, ರಮಣಾರೆಡ್ಡಿ, ಮುನಿಯಪ್ಪ, ಅಮರನಾರಾಯಣ, ಶ್ರೀನಿವಾಸ್ ಕೋಮುಲ್ ಶ್ರೀನಿವಾಸಪುರ ಶಿಬಿರ ಕಚೇರಿ ವ್ಯವಸ್ಥಾಪಕ ಮುನಿರಾಜು ಇದ್ದರು.
ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ , ಆಂತಸ್ತು, ಮಾಡಿಕೊಟ್ಟರೆ ಮಾರಿಕೊಳ್ಳುತ್ತಾರೆ,ಆದರೆ ವಿದ್ಯೆ ಕೊಟ್ಟರೆ ಶಾಶ್ವತವಾಗಿ ನಿಮ್ಮ ಮಕ್ಕಳು ಸುಖ ಜೀವನ ನಡೆಸಲು ಕಾರಣರಾಗುತ್ತೀರಿ :ಕೆ.ಆರ್.ರಮೇಶ್‌ಕುಮಾರ್
ಶ್ರೀನಿವಾಸಪುರ : ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ , ಆಂತಸ್ತು, ಮಾಡಿಕೊಟ್ಟರೆ ಮಾರಿಕೊಳ್ಳುತ್ತಾರೆ . ಆದರೆ ವಿದ್ಯೆ ಕೊಟ್ಟರೆ ಶಾಶ್ವತವಾಗಿ ನಿಮ್ಮ ಮಕ್ಕಳು ಸುಖ ಜೀವನ ನಡೆಸಲು ಕಾರಣರಾಗುತ್ತೀರಿ ಎಂದು ಮಕ್ಕಳ ಪೋಷಕರಿಗೆ ಶಾಸಕ ಕೆ.ಆರ್.ರಮೇಶ್‌ಕುಮಾರ್ ಕಿವಿಮಾತು ಹೇಳಿದರು.
ಗೌಡತಾತಗಡ್ಡ ಗ್ರಾಮದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಚುನಾವಣೆಯು ಐದು ವರ್ಷಗಳಿಗೊಮ್ಮೆ ನಡೆಯುವಂತಹ ಕಾರ್ಯಕ್ರಮ. ಈ ದೇಶವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂದು ಆಲೋಚನೆ ಮಾಡಲು, ನೀವು ಎಲ್ಲರೂ ಸೇರಿ ನಮಗೆ ಇಂತಹ ಸೌಲಭ್ಯಗಳು ಬೇಕು. ಇಂತಹ ಸಮಸ್ಯೆ ಇದೆ . ಎಂದು ನೀವು ನನಗೆ ಮಾಹಿತಿ ನೀಡಬೇಕು. ಸಮಸ್ಯೆಯ ಬಗ್ಗೆ ನನ್ನಲ್ಲಿ ಮಾಹಿತಿ ಇರಬೇಕು. ಅದನ್ನ ನಾನು ವಿಧಾನಸೌದ ಚರ್ಚೆ ಮಾಡುತ್ತೇನೆ. ಆಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡಿದರು.
ಸಾರ್ವಜನಿಕರು ಮುಖ್ಯವಾಗಿ ನಮ್ಮ ಗಮನಕ್ಕೆ ತರುವುದು, ಗ್ರಾಮಕ್ಕೆ ಸುಸಜ್ಜಿತ ರಸ್ತೆ, ಚರಂಡಿ, ಶುದ್ದಕುಡಿಯುವ ನೀರು, ಶಾಲೆ, ಕಾಲೇಜು, ಆರೋಗ್ಯ ಕೇಂದ್ರ, ವಸತಿ ನಿಲಯ, ಉದ್ಯೋಗ ಕೇಳುತ್ತಾರೆ ಅಷ್ಟೇ.
ಗೌಡತಾತ ಗಡ್ಡ ಗ್ರಾಮದಲ್ಲಿ ಬಹುತೇಕ ಭೋವಿ ಜನಾಂಗವಿದ್ದು, ೫೦ ವರ್ಷ ಹಿಂದೆ ಯಾವ ರೀತಿಯಲ್ಲಿ ಜೀವನ ಶೈಲಿಯ ಬಗ್ಗೆ ಮಾಹಿತಿ ನೀಡಿದರು . ಈ ಹಿಂದೆ ಗ್ರಾಮದಲ್ಲಿ ಬಹುತೇಕ ಗುಡಿಸಲು ವಾಸಿಗಳೇ ಇದಿದ್ದು, ಶಿಕ್ಷಣ ಅಷ್ಟಕ್ಕಷ್ಟೆ ಆದರೆ ಇಂದು ಗ್ರಾಮದ ಜನತೆ ಸಂವೃದ್ಧಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ ಇದು ನನ್ನ ಮನಸ್ಸಿಗೆ ಖುಷಿ ತಂದಿದೆ.
೬೦ ವರ್ಷಗಳ ಹಿಂದೆ ಇಂದಿರಗಾAದಿ ರವರು ಎಲ್ಲರೂ ಶಿಕ್ಷಣವನ್ನು ಪಡೆಯಲು ಆದೇಶಿದ್ದರು. ಈ ಒಂದು ದೃಷ್ಟಿಯಿಂದ ಇಂದು ಬಹುತೇಕರು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಂದಿರಾಗಾAದಿಯವರ ಆಶಯವನ್ನು ನಾನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಶಾಲೆ ೧೦ ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನು ನಿರ್ಮಿಸಿ ಗ್ರಾಮದ ಎಲ್ಲಾ ಮಕ್ಕಳು ಇಲ್ಲಿಯೇ ಓದಿ ಬುದ್ದಿವಂತರಾಗುವ ನಿಟ್ಟಿನಲ್ಲಿ ಆಂತರರಾಷ್ಟೀಯ ಮಟ್ಟದಲ್ಲಿ ಇಂಗ್ಲೀಷ್ ಭಾಷೆಯನ್ನು ಕಲಿಸುವ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಬೆಂಗಳೂರು ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಈ ಶಾಲೆಯಲ್ಲಿ ಪಾಠಪ್ರವಚನಗಳನ್ನು ಹಮ್ಮಿಕೊಳ್ಳಲಾಗುವುದು.
ದೇಶಕ್ಕೆ ಅನ್ನ ನೀಡುವವರೆಲ್ಲರೂ ರೈತರೆ. ಅನ್ನವನ್ನು ನೀಡುವ ರೈತರಿಗೆ ಜಾತಿ ಮತ ಬೇದವಿಲ್ಲ. ರೈತರನ್ನು ಕಾಪಾಡಿ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಮಳೆ ಬರಲಿ, ಇರಲಿ ಇಂದು ಕೆಸಿ ವ್ಯಾಲಿ ನೀರಿನಿಂದ ತಾಲೂಕಿನ ಕೆರೆಗಳು ಬಹುತೇಕ ಭರ್ತಿಯಾಗಿದೆ. ರಾಯಲ್ಪಾಡು , ನೆಲವಂಕಿ ಹೋಬಳಿಗಳಲ್ಲಿ ಚೆಕ್ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮದಲ್ಲಿ ಅರ್ಧ ಎಕರೆ, ಒಂದು ಎಕರೆ ಜಮೀನು ಇರುವ ರೈತರಿಗೆ ಸರ್ಕಾರದಿಂದ ಉಚಿತವಾಗಿ ಕೊಳವೆಬಾವಿಗಳನ್ನು ಪಕ್ಷಾತೀತವಾಗಿ ಹಾಕಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರಾಜಕೀಯಕ್ಕೆ ಅರ್ಥ ಬರಬೇಕಾದರೆ, ಗೌರವ ಸಿಗಬೇಕಾದರೆ ನೀವು ಕೊಡುವ ಗೌರವ, ಆಪ್ಯಾಯತೆ ನಾವು ಉಳಿಸಿಕೊಳ್ಳಬೇಕು. ಅದರಂತೆ ಮುಂದಿನ ದಿನಗಳಲ್ಲಿ ಗೌಡತಾತಗಡ್ಡ ಗ್ರಾಮಕ್ಕೆ ಬೇಟಿ ನೀಡಿದರೆ ಬೆಂಗಳೂರಿಗೆ ಬೇಟಿ ನೀಡಿದಂತೆ ಇರಬೇಕು ಎಂದರು. ಈ ಒಂದು ನಿಟ್ಟಿನಲ್ಲಿ ತಾವೆಲ್ಲರೂ ಮುಂದಿನ ಚುನಾವಣೆಯಲ್ಲಿ ನನ್ನ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ೩೫ ಕುಟುಂಬಗಳು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಲಕ್ಷಿಪುರ ಗ್ರಾ.ಪಂ.ಅಧ್ಯಕ್ಷೆ ಮಂಗಮ್ಮ ನಡುಪನ್ನ ,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೊಂಡಸAದ್ರ ಶಿವಾರೆಡ್ಡಿ, ರಾಯಲ್ಪಾಡು ಗ್ರಾ.ಪಂ.ಸದಸ್ಯ. ಆರ್.ಗಂಗಾದರ್, ಮುಖಂಡರಾದ ಕೆ.ಕೆ.ಮಂಜು, ಬೋರ್‌ವೆಲ್ ಕೃಷ್ಣಾರೆಡ್ಡಿ, ಎಸ್ . ಎನ್.ವೆಂಕಟೇಶ್, ರೋಣುರು ಸಂತೋಷ, ಸೀತಾರಾಮರೆಡ್ಡಿ, ಪೇಪರ್ ವೆಂಕಟೇಶ್, ಮುನಿಪ್ಪ , ಭಾಸ್ಕರ ಇದ್ದರು.
ವಿಶ್ವ ಕ್ಷಯರೋಗ ದಿನಾಚರಣೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯು ಅತೀ ಹೆಚ್ಚು ಟಿ. ಬಿ. ರೋಗಿಗಳನ್ನು ದತ್ತು ಪಡೆದುದಕ್ಕಾಗಿ ಸನ್ಮಾನ
ಕುಂದಾಪುರ : ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ, ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ದಲ್ಲಿ ನಡೆದ ಕಾರ್ಯ ಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ್ ಉಡುಪ ಇವರು ಉದ್ಘಾಟಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯು ಅತೀ ಹೆಚ್ಚು ಟಿ. ಬಿ. ರೋಗಿಗಳನ್ನು ದತ್ತು ಪಡೆದುದಕ್ಕಾಗಿ ಸನ್ಮಾನಿಸಲಾಯಿತು. ರೆಡ್ ಕ್ರಾಸ್ ಕುಂದಾಪುರ ಘಟಕ ಇಪ್ಪತ್ತೈದು ಕ್ಷಯ ರೋಗಿಗಳನ್ನು ಆರು ತಿಂಗಳ ಕಾಲ ದತ್ತು ಪಡೆದಿದೆ. ಈ ಸನ್ಮಾನವನ್ನು ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಸ್ವೀಕರಿದರು. ಕಾರ್ಯಕ್ರಮ ದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ರಾಮ, ಟಿ.ಬಿ. ನಿರ್ಮೂಲನ ಅಧಿಕಾರಿಗಳಾದ ಚಿದಾನಂದ ಸಂಜು ನರ್ಸಿಂಗ್ ಕಾಲೇಜು ಪ್ರಾಂಶುಪಾಲರು ಉಪಸ್ಥಿತರಿದ್ದರು.
ಕಾಂಗ್ರೆಸ್: ಚುನಾವಣ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ – ಸಿದ್ದರಾಮಯ್ಯನವರು ವರುಣಾದಿಂದ ಸ್ಪರ್ಧೆ – ಕುಂದಾಪುರದಿಂದ ಎಮ್. ದಿನೇಶ್ ಹೆಗ್ಡೆಗೆ ಸ್ಪರ್ಧೆಗೆ ಟಿಕೆಟ್
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ 124 ಮಂದಿ ಅಭ್ಯರ್ಥಿಗಳ ಹೆಸರಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹಾಗ ಕುಂದಾಪುರ ಕ್ಷೇತ್ರದಿಂದ ಎಮ್. ದಿನೇಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಲಾಗಿದೆ. ಬೈಂದೂರು ಕೆ.ಗೋಪಾಲ ಪೂಜಾರಿಗೆ ಟಿಕೆಟ್ ನೀಡಲಾಗಿದೆ.
ಕನಕಪುರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಯು.ಟಿ ಖಾದರ್ ಮಂಗಳೂರಿನಿಂದ, ಮೂಡುಬಿದಿರೆಯಿಂದ ಮಿಥುನ್ ರೈ, ಬೆಳ್ತಂಗಡಿಯಿಂದ ರಕ್ಷಿತ್ ಸುವರ್ಣ, ಸುಳ್ಯ ಮೀಸಲು ಕ್ಷೇತ್ರದಿಂದ ಕೃಷ್ಣಪ್ಪ ಜಿ. ಕಣಕ್ಕಿಳಿಯಲಿದ್ದಾರೆ. ಇನ್ನೂ ಉಡುಪಿ ಜಿಲ್ಲೆಯ ಕಾಪುದಿಂದ ವಿನಯ ಕುಮಾರ್ ಸೊರಕೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
ಕಾರವಾರ ಅಂಕೋಲಾ ಕ್ಷೇತ್ರದಿಂದ ಸತೀಶ್ ಸೈಲ್, ಭಟ್ಕಳದಿಂದ ಮಂಕಾಳ ವೈದ್ಯ, ಹಳಿಯಾಳದಿಂದಾರ ಆರ್. ವಿ. ದೇಶಪಾಂಡೆ ಸ್ಪರ್ಧೆ ಮಾಡಲಿದ್ದಾರೆ.
ನಂಜನಗೂಡು ಕ್ಷೇತ್ರದಿಂದ ದ್ರವನಾರಾಯಣ ಪುತ್ರ ದರ್ಶನ್ ದ್ರವನಾರಾಯಣ ಹಾಗೂ ರಾಜಾಜಿನಗರ ಕ್ಷೇತ್ರದಿಂದ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಎಂ ಎಲ್ ಸಿ ಪುಟ್ಟಣ್ಣಗೆ ಟಿಕೆಟ್ ಘೋಷಿಸಲಾಗಿದೆ.
ಸಂಪೂರ್ಣ ಪಟ್ಟಿ ಇಲ್ಲಿದೆ
ನಾನು ಪಟ್ಟಣ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳನ್ನು ತರುತ್ತಿದ್ದರೆ, ನೀವು ಧರಣಿ ನಡೆಸಿ ಕಾಲಹರಣ ಮಾಡುತ್ತಿದ್ದೀರಿ:ಪುರಸಭೆ ಅಧ್ಯಕ್ಷೆಗೆ ಶಾಸಕ ಕೆ.ಆರ್.ರಮೇಶ್‌ಕುಮಾರ್ ತರಾಟೆ
ಶ್ರೀನಿವಾಸಪುರ : ನಾನು ಪಟ್ಟಣ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳನ್ನು ತರುತ್ತಿದ್ದೇನೆ ಆದರೆ ನೀವು ಧರಣಿ ನಡೆಸಿ ಕಾಲಹರಣ ಮಾಡುತ್ತಿದ್ದೀರಿ ಎಂದು ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್‌ರವರನ್ನು ಶಾಸಕ ಕೆ.ಆರ್ .ರಮೇಶ್‌ಕುಮಾರ್ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪುರಸಭೆಯ ಮುಂದೆ ಕಳೆದ ಮೂರು ದಿನಗಳಿಂದ ಲಲಿತಾ ಶ್ರೀನಿವಾಸ್ ನೇತೃತ್ವದಲ್ಲಿ ಆದಿ ಜಾಂಬವ ಚಾರಿಟಬಲ್ ಟ್ರಸ್ಟ್ , ಆದಿ ಜಾಂಬವ ಸೇವಾ ಸಮಿತಿ , ಪ್ರಗತಿ ಪರ ದಲಿತ ಪರ ಸಂಘಟನೆಗಳ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಅಧಿಕಾರಿಗಳ ನಿರ್ಲಕ್ಷತೆ ವಿರೋಧಿಸಿ ನಡೆಸುತ್ತಿರುವ ಧರಣಿ ನಿರಂತರೊಂದಿಗೆ ಮಾತನಾಡಿದರು
ಪುರಸಭೆ ಅಧ್ಯಕ್ಷೆ ಲಲಿತ ಶ್ರೀನಿವಾಸ್‌ರವರು ಶಾಸಕರೊಂದಿಗೆ ಮಾತನಾಡಿ ಪುರಸಭೆ ಮುಖ್ಯಾಧಿಕಾರಿ ಪಟ್ಟಣದಲ್ಲಿ ನೀರು, ಸ್ವಚ್ಚತೆ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನಹರಿಸುತ್ತಿಲ್ಲ , ಹಾಗೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಮುಖ್ಯಾಧಿಕಾರಿ ವಿರದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ . ಕಳೆದ ೨ ವರ್ಷಗಳಿಂದಲೂ ನಮ್ಮ ಮನವಿಯ ಬಗ್ಗೆ ಸ್ಪಂದನೆ ನೀಡುತ್ತಿಲ್ಲ ಅಮಾನತ್ತು ಆಗಲಿ, ವರ್ಗಾವಣೆ ಆಗಲಿ ಮಾಡಿಸಿ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಶಾಸಕರು ಮಾತನಾಡಿ ’ಮುಖ್ಯ ಅಧಿಕಾರಿ ಮಾಡಿರುವ ಕೃತ್ಯಗಳ ಬಗ್ಗೆ ಸಾಕ್ಷಿ ಸಮೇತ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಕಂಪ್ಲೆಟ್ ಕೊಡಿ, ಆ ಕಂಪ್ಲೆಟ್‌ನ್ನು ಪರಿಶೀಲಿಸಿ , ಮುಖ್ಯ ಅಧಿಕಾರಿಗೆ ನೋಟಿಸ್ ಕೊಟ್ಟು ನಂತರ ಅವರ ವಿರುದ್ಧ ಕ್ರಮಕೈಗೊಳ್ಳುತ್ತಾರೆ . ಮುಖ್ಯ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಪುರಸಭೆ ಮುಖ್ಯ ಅಧಿಕಾರಿಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ನಂತರ ಕ್ರಮಕೈಗೊಳ್ಳುತ್ತಾರೆ’ ಎಂದು ತಿಳಿಸಿದರು
ನಾನು ಹತ್ತಾರುಬಾರಿ ನಿಮ್ಮ ಕಚೇರಿಗೆ ಬಂದಿದ್ದೆ ಒಂದು ದಿನವು ಮುಖ್ಯಧಿಕಾರಿ ಬಗ್ಗೆ ನನಗೆ ಯಾಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸಿ, ಶಾಸಕರು ಕೋಪದಿಂದ ಹೋರಡುತ್ತಿದ್ದರೆ ಕೆಲ ಮುಖಂಡರು ಸಮಾಧಾನಪಡಿಸಿ ಇದನ್ನು ಇತ್ಯರ್ಥ ಮಾಡುವಂತೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಮಾತನಾಡಿ ನಾನು ಕಚೇರಿ ಒಳಗೆ ಕುಳಿತುಕೊಂಡರೂ ಏನೋ ಪ್ರಯೋಜನವಿಲ್ಲ. ಆದ್ದರಿಂದ ನಾನು ಕಚೇರಿ ಮುಂಭಾಗದಲ್ಲಿಯೇ ಕುಳಿತುಕೊಳ್ಳುತ್ತೇನೆ ಎಂದು ಉದ್ರೇಕ ದಿಂದ ನುಡಿದ ಪ್ರಶ್ನೆಗೆ ಹಾಗು ನಮ್ಮ ಬಡವಾಣೆಯಲ್ಲಿ ನೀರು, ಸ್ವಚ್ಚತೆ ಮಾರೀಚಿಕೆಯಾಗಿದೆ ಎಂಬ ಪ್ರಶ್ನೆಗೆ ನಾನು ಬಂದು ಸ್ವಚ್ಚತೆ, ನೀರು ಸರಬಾರಜು ಮಾಡಲೇ ಎಂದು ಪ್ರಶ್ನಿಸಿದರು.
ನಾನು ಮುಖ್ಯಾಧಿಕಾರಿಗಳನ್ನು ಇಲ್ಲಿಗೆ ಹಾಕಸಿಕೊಂಡು ಬಂದವನಲ್ಲ, ನನಗೂ ಅವರಿಗೂ ಯಾವುದೇ ಸಂಬಧವಿಲ್ಲ. ಅಧಿಕಾರಿಯ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಅವರ ಮಾಡಿರುವ ಅಕ್ರಮಗಳ ಬಗ್ಗೆ ತನಿಖೆ ನಂತರ ಕ್ರಮಕೈಗೊಳ್ಳಲು ಸಾಧ್ಯ ಎಂದರು. ನೆರಿದಿದ್ದ ಕೆಲವರನ್ನ ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು. ನಮ್ಮ ಸರ್ಕಾರವಿದ್ದರೆ ಸರ್ಕಾರಕ್ಕೆ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡುತ್ತಿದ್ದೆ ಎಂದರು.
ಅದ್ಯಕ್ಷೆ ಲಲಿತಾ ಶ್ರೀನಿವಾಸ್‌ರವರನ್ನ ಧರಣಿ ಹಿಂಪಡೆಯುವಂತೆ ಮನವೂಲಿಸಿ ಉಪವಿಭಾಗಾಧಿಕಾರಿ ವೆಂಕಟಲಕ್ಷಿಯವರಿಗೆ ಮನವಿ ಪತ್ರವನ್ನು ನೀಡುವಂತೆ ಶಾಸಕರು ಸೂಚನೆ ನೀಡಿದರು.
ತಹಶೀಲ್ದಾರ್ ಶರೀನ್‌ತಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮುಖಂಡರಾದ ಸಂಜಯ್‌ರೆಡ್ಡಿ, ನಾರಾಯಣಸ್ವಾಮಿ, ಪೊಲೀಸ್ ನಿರೀಕ್ಷಕ ಜೆ.ಸಿ.ನಾರಾಯಣಸ್ವಾಮಿ ಹಾಗು ಪುರಸಭೆ ಸದಸ್ಯರಾದ ಅನೀಸ್ ಅಹಮ್ಮದ್, ಸರ್ಧಾರ್, ಎನ್‌ಎನ್‌ಆರ್, ನಾಗರಾಜ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಆರ್‌ಐ ಮುನಿರೆಡ್ಡಿ ಇದ್ದರು.
Mangalore Diocese holds “Training of Trainers” for Pastoral Council
MANGALURU, MARCH, 23: The members of the newly constituted Pastoral Council were trained at the diocesan level to be the trainers of Pastoral Council at the deanery and parish level on March 22, 2023 in Shanthi Kiran Pastoral Centre, Bajjodi, Mangalore.
The Diocesan Curia, Most Rev. Dr Peter Paul Saldanha, Bishop of Mangalore, Very Rev. Fr Maxim L. Noronha, the Vicar General, Very Rev. Dr Victor George, the Chancellor along with Rev. Dr Joseph Martis, parish priest of Derebail, Rev. Fr Naveen Pinto, Administrator, St Joseph Seminary, Jeppu and Rev. Fr Santhosh Rodrigues organised the Training of Trainers for Pastoral Council.
The five Pastoral Council members from every deanery which included dean of the deanery, two priests and two lay faithful took part in the training session.
In the first session, Bishop Peter Paul Saldanha dwelt upon “What is Church”. He briefly explained the nature of the Church, and its role in building God’s Kingdom on earth. The Bishop said, “The mission of Jesus Christ is the mission of all chosen in the Church.”
Rev. Fr Naveen Pinto briefly explained “The Hierarchical Structure of the Church”. He said, “The mission of the Lord is carried out in the Church through a hierarchical structure.” He said that the structure in the Church exists to serve and not to govern or rule. Hence, it is a district from democracy.
Rev. Dr Joseph Martis spoke on “Parish and the mission.” He gave a scriptural perspective on the pastor and pastoral ministry. He guided the pastoral council members on how to support the church, collaborate with the parish priest in building a synodal church and show care and concern to all with an attitude of service after the great model of Jesus, the good shepherd.
Along with speakers, Rev. Dr Victor George Dsouza shared his expert knowledge on the subjects discussed and clarified the doubts raised by the pastoral council trainers.
The prayer was led by the priests of Kasargod Deanery. Rev. Fr Santhosh Rodrigues and Rev. Fr Joseph Martis co-ordinated the programme.
Reported By: Fr Anil Ivan Fernandes, Director Canara Communication Centre