ಶ್ರೀನಿವಾಸಪುರ: ಹೊಸ ಕಂದಾಯ ಗ್ರಾಮಗಳ ಹೆಸರು ಬದಲಾಯಿಸಿ ಸರ್ಕಾರಿ ದಾಖಲೆಗೆ ಸೇರಿಸಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹೊಸ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಹಿಂದೆ ಜನಸಾಮಾನ್ಯರಿಗೆ ಜಮೀನು ಇರಲಿಲ್ಲ. ಅದು ರಾಜ, ಮಹಾರಾಜರ ಅಧೀನದಲ್ಲಿತ್ತು. ಮತ್ತೆ ಜೋಡಿದಾರರ ಅಧೀನಕ್ಕೆ ಬಂತು. ಮತ್ತೆ ಜಮೀನುದಾರಿಕೆ ಬಂತು ಎಂದು ಹೇಳಿದರು.
ಹಿಂದೆ ಕೆಲವರನ್ನು ಗ್ರಾಮಗಳಿಂದ ಹೊರಗೆ ಇಡಲಾಗಿತ್ತು. ಅಂಥ ಜನವಸತಿ ಪ್ರದೇಶಗಳಿಗೆ ಹೆಸರು ಇರಲಿಲ್ಲ. ಆ ಗ್ರಾಮಗಳನ್ನು ಗುರುತಿಸಿ, ಹೊಸ ಹೆಸರು ನೀಡಿ ಸರ್ಕಾರಿ ದಾಖಲೆಯಲ್ಲಿ ಸೇರಿಸಿದ ಬಳಿಕ, ಹಕ್ಕುಪತ್ರ ನೀಡಲಾಗುತ್ತಿದೆ. ಇದರಿಂದ ಆ ಗ್ರಾಮಗಳಿಗೆ ತಮ್ಮದೇ ಆದ ಮಹತ್ವ ಬಂದಂತಾಗಿದೆ ಎಂದು ಹೇಳಿದರು.
ಕೆಲವು ಕಡೆ ಸ್ಮಶಾನಗಳ ಒತ್ತುವರಿಯಿಂದಾಗಿ, ಕೆರೆ ಅಂಗಳದಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಪ್ರತಿ ಗ್ರಾಮಕ್ಕೂ ಸ್ಮಶಾನ ಅತ್ಯಗತ್ಯವಾದ ಸೌಲಭ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಸ್ಮಶಾನ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಗೊಳಿಸಬೇಕು ಎಂದು ಹೇಳಿದರು.
ಸಧ್ಯಕ್ಕೆ ಗುರುತಿಸಲಾಗಿರುವ 1514 ಫಲಾನುಭವಿಗಳ ಪೈಕಿ, ಸಮಾರಂಭದಲ್ಲಿ 891 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಇದು ಸರ್ಕಾರದ ವಿಶಿಷ್ಟ ಯೋಜನೆಯಾಗಿದ್ದು, ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರೇಡ್2 ತಹಶೀಲ್ದಾರ್ ಕೆ.ಎಲ್.ಜಯರಾಮ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಜನಾರ್ಧನ್, ವಿನೋದ್ ಇದ್ದರು.
Month: March 2023
Society of St. Vincent de Paul of St. Lawrence Church Bondel celebrated Senior Citizens’ Day on Sunday
Report: MSB, Photos:Mr Rony, News sent by:Stanty Bantval
Bondel, March 26 : Society of St. Vincent de Paul of St. Lawrence Church Bondel celebrated Senior Citizens’ Day on Sunday March 26th 2023.
The celebrations began with confessions’ in the church from 10.30 am. Rev Fr Xavier Gomes was the main celebrant Rev Fr Andrew Leo D’Souza Parish Priest concelebrated the mass.
Rev Fr Gomes presided over the Eucharistic celebration and delivered the homily.
Rev Gomes focused on Ministry of Jesus during his earthly life, Jesus was very active in his ministry of healing. He cured the blind, opened the ears of the deaf, and brought the dead back to life. The early Church Fathers gave our Lord the title of “the Divine Physician.. As we are growing in the kingdom of God, let us do good to others and be an example of what it means to be a good Christian. After the final blessings, the celebrant invoked a special prayer on all these elderly persons and then anointed them individually.
Soon after the Mass, the cultural program began with a prayer song by the SVP members..
Rev Fr Gomes, Rev Fr Andrew Leo Dsouza-Parish Priest, Rev Fr Peter Gonsalves –Principal St Lawrence English Medium School, Rev Fr Lancy D’Souza-Asst PP, Rev Fr Melwin Pinto MSIJ, Mr John D’Silva-Vice President, Mr. Santhosh Misquith-Secretary Parish Pastoral Council, Mr Neris Dias –President SVP were present on the dais.
Mr Stany Alvares welcomed the guest with Panpod Udak .Mr Neris Dias welcomed the gathering. All the dignitaries inaugurated the programme by lighting the lamp. Speaking on the occasion, Rev Fr Gomes said, in his witty speech praised the “Young Seniors” for their determination and energy even at their golden age, and encouraged them by saying that help is always there for them from his side anytime they need in their activities or their lives, since he has been watching their activities every now and then. “We are celebrating this day out of joy, and happiness.”
A felicitation programme was held, St Vincent Paul Society (SVP) members honoured Rev Fr Gomes who completed 74 years in Priesthood with a shawl and flower bouquets.
A short introduction about Rev. Fr. Gomes’ birthplace, Shirva Parish. He served as an assistant parish priest in Mondankap, Milagres, and Urwa Parish; as a parish priest in Kelbet, Gantalkatte,aandtMulky;uaskviceVice principal at St Philomena Col in ege-Puttur, Principal at Sacred Heart College in Madnathyar; and as socious at CODP. At present, he is residing at St. Juze Vas home..
Speaking on the occasion, Parish Priest Fr Andrew said, “I congratulate SVP for organizing this meaningful and blessed day. The senior citizens and children are the main source of happiness in every family. They are pure in heart and clean in minds. At the same time we can count the blessings on our families.
At the end Senior Citizen were honoured. With a flower bouquet & gift they are as follows :
Mr Anthony Lobo-89 years –St Joseph ward
Mr Albert Pinto-88 years-Holy Cross ward
Mrs Melrid Pais-88 Years-Holy Cross ward
Mrs Florine Monthiero-88 Years St Thomas Ward
Mrs Agnes Menezes-88 Years St Paul Ward
Programme concluded with the fellowship meal.
Rev Fr Andrew D’Souza said grace before the meal. Mr. Ronald Lasrado impeccably compered the programme. Mr. Naveen Correa delivered the vote of thanks.
ಮಂಗಳೂರು: ಫುಡಾರ್ ಪ್ರತಿಷ್ಠಾನ 2023 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ
ಮಂಗಳೂರಿನ ಕೊಂಕಣಿ ಕೆಥೋಲಿಕ್ ಸಮುದಾಯದ ಪ್ರತಿಷ್ಠಿತ ಸಂಸ್ಥೆ ಫುಡಾರ್ ಪ್ರತಿಷ್ಠಾನ ಇದರ ವತಿಯಿಂದ 2023 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಹಾಲ್ ನಲ್ಲಿ ನಡೆಯಿತು.
ಸಮಾರಂಭದಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮ ಪ್ರಾಂತ್ಯಗಳ ವ್ಯಾಪ್ತಿಯಲ್ಲಿ 2021 – 2022 ನೇ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ರೇಂಕ್ ಗಳಿಸಿದ ಪ್ರತಿಭಾವಂತ ಕೊಂಕಣಿ ಕೆಥೋಲಿಕ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಗುರು ಮೊ. ಮ್ಯಾಕ್ಸಿಮ್ ನೋರೋನ್ಹಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫುಡಾರ್ ಪ್ರತಿಷ್ಟಾನದ ಅಧ್ಯಕ್ಷ ಜೆರಾಲ್ಡ್ ಡಿ ಕೋಸ್ತ ಅಧ್ಯಕ್ಷತೆ ವಹಿಸಿದ್ದರು.
ಮುಂಬಯಿ ಕಸ್ಟಮ್ಸ್ ಮತ್ತು ಜಿ.ಎಸ್. ಟಿ. ವಿಭಾಗದ ನಿರ್ದೇಶಕಿ ಹಾಗೂ 2022 ನೇ ಸಾಲಿನ ಶೌರ್ಯ ಪ್ರಶಸ್ತಿ ವಿಜೇತ ಅಧಿಕಾರಿ ಮಿಶೆಲ್ ಕ್ವೀನಿ ಡಿ ಕೊಸ್ತ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಿಶೆಲ್ ಕ್ವೀನಿ ಡಿ ಕೊಸ್ತ ಅವರು ಫುಡಾರ್ ಪ್ರತಿಷ್ಠಾನವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಮೂಲಕ ಸ್ತುತ್ಯಾರ್ಹ ಕೆಲಸ ಮಾಡುತ್ತಿದೆ. ಇಂದು ಸನ್ಮಾನ ಪಡೆದವರು ಸಮಾಜದ ಒಳಿತಿಗಾಗಿ ಶ್ರಮಿಸ ಬೇಕು. ನಮ್ಮ ಯುವಕರು ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹೋಗುವ ಬದಲು ನಮ್ಮ ದೇಶದಲ್ಲಿಯೇ ಸರಕಾರಿ ನೌಕರಿಗೆ ಸೇರಿ ಸಮಾಜ ಸೇವೆ ಮಾಡ ಬೇಕು ಎಂದು ಹೇಳಿದರು.
ಕ್ಯಾಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ರೆ. ಫಾ. ಜೆ.ಬಿ. ಸಲ್ದಾನ್ಹಾ (ಮಂಗಳೂರು) ಮತ್ತು ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ (ಉಡುಪಿ), ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಸ್ಟಾನಿ ಲೋಬೋ, ಎಲ್. ಜೆ. ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರೆ. ಫಾ. ವಾಲ್ಟರ್ ಡಿ ಮೆಲ್ಲೋ ಸ್ವಾಗತಿಸಿ ಕೋಶಾಧಿಕಾರಿ ಎಲ್ರೊಯ್ ಕಿರಣ್ ಕ್ರಾಸ್ಟೋ ವಂದಿಸಿದರು. ಸಮಾರಂಭದಲ್ಲಿ ಒಟ್ಟು 216 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಅರುಣ್ ಫೆರ್ನಾಂಡಿಸ್ ಮತ್ತು ವಿವಿಡ್ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರಿನ ಕೊಂಕಣಿ ಕೆಥೋಲಿಕ್ ಸಮುದಾಯದ ಪ್ರತಿಷ್ಠಿತ ಸಂಸ್ಥೆ ಫುಡಾರ್ ಪ್ರತಿಷ್ಠಾನ ಇದರ ವತಿಯಿಂದ 2023 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಹಾಲ್ ನಲ್ಲಿ ನಡೆಯಿತು.
ಸಮಾರಂಭದಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮ ಪ್ರಾಂತ್ಯಗಳ ವ್ಯಾಪ್ತಿಯಲ್ಲಿ 2021 – 2022 ನೇ ಶೈಕ್ಷಣಿಕ ವರ್ಷದಲ್ಲಿ 10 ನೇ ತರಗತಿ ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ರೇಂಕ್ ಗಳಿಸಿದ ಪ್ರತಿಭಾವಂತ ಕೊಂಕಣಿ ಕೆಥೋಲಿಕ್ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಪ್ರಧಾನ ಗುರು ಮೊ. ಮ್ಯಾಕ್ಸಿಮ್ ನೋರೋನ್ಹಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫುಡಾರ್ ಪ್ರತಿಷ್ಟಾನದ ಅಧ್ಯಕ್ಷ ಜೆರಾಲ್ಡ್ ಡಿ ಕೋಸ್ತ ಅಧ್ಯಕ್ಷತೆ ವಹಿಸಿದ್ದರು.
ಮುಂಬಯಿ ಕಸ್ಟಮ್ಸ್ ಮತ್ತು ಜಿ.ಎಸ್. ಟಿ. ವಿಭಾಗದ ನಿರ್ದೇಶಕಿ ಹಾಗೂ 2022 ನೇ ಸಾಲಿನ ಶೌರ್ಯ ಪ್ರಶಸ್ತಿ ವಿಜೇತ ಅಧಿಕಾರಿ ಮಿಶೆಲ್ ಕ್ವೀನಿ ಡಿ ಕೊಸ್ತ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಿಶೆಲ್ ಕ್ವೀನಿ ಡಿ ಕೊಸ್ತ ಅವರು ಫುಡಾರ್ ಪ್ರತಿಷ್ಠಾನವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸುವ ಮೂಲಕ ಸ್ತುತ್ಯಾರ್ಹ ಕೆಲಸ ಮಾಡುತ್ತಿದೆ. ಇಂದು ಸನ್ಮಾನ ಪಡೆದವರು ಸಮಾಜದ ಒಳಿತಿಗಾಗಿ ಶ್ರಮಿಸ ಬೇಕು. ನಮ್ಮ ಯುವಕರು ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹೋಗುವ ಬದಲು ನಮ್ಮ ದೇಶದಲ್ಲಿಯೇ ಸರಕಾರಿ ನೌಕರಿಗೆ ಸೇರಿ ಸಮಾಜ ಸೇವೆ ಮಾಡ ಬೇಕು ಎಂದು ಹೇಳಿದರು.
ಕ್ಯಾಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ರೆ. ಫಾ. ಜೆ.ಬಿ. ಸಲ್ದಾನ್ಹಾ (ಮಂಗಳೂರು) ಮತ್ತು ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ (ಉಡುಪಿ), ಕ್ಯಾಥೋಲಿಕ್ ಸಭಾ ಅಧ್ಯಕ್ಷರಾದ ಸ್ಟಾನಿ ಲೋಬೋ, ಎಲ್. ಜೆ. ಫೆರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರೆ. ಫಾ. ವಾಲ್ಟರ್ ಡಿ ಮೆಲ್ಲೋ ಸ್ವಾಗತಿಸಿ ಕೋಶಾಧಿಕಾರಿ ಎಲ್ರೊಯ್ ಕಿರಣ್ ಕ್ರಾಸ್ಟೋ ವಂದಿಸಿದರು. ಸಮಾರಂಭದಲ್ಲಿ ಒಟ್ಟು 216 ಮಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಅರುಣ್ ಫೆರ್ನಾಂಡಿಸ್ ಮತ್ತು ವಿವಿಡ್ ಡಿ ಸೋಜಾ ಕಾರ್ಯಕ್ರಮ ನಿರ್ವಹಿಸಿದರು.
International Women’s Day Celebration by Kundapur -Byndur Taluk, Bhavan Mahila Union – Dance show video
Proclamation through Music:Church musicians from Mangalore Diocese attend Musical Instrument Workshop
Report By Fr Anil Fernandes, Pics by Vijay Omzoor
MANGALURU, MARCH 25: Commission for Liturgy and Commission for Social Communication of the Diocese of Mangalore organised “House of Worship”, a half-a-day workshop on musical instruments on March 26, 2023 at Shanthi Kiran Hall, Pastoral Centre Mangaluru.
The workshop was organised in association with Music Square, Mangaluru, a brand shop of Yamaha India.
As many as 50 interested church musicians from 20 parishes and religious institutions made use of this free workshop. Some religious sisters and seminarians also participated in the same.
Rev. Fr Vijay Machado, Director, Mangala Jyothi in his opening remarks said, “Music is integral to our liturgical worship.”
He said that music at Mass is very important. It is not simply a performance by a soloist or choir, a background to accompany our prayer, a means to create a mood. “More than owning a musical instrument, musicians of the church choir must know how to handle the piano or keyboard. This workshop will enhance your skills,” Fr Vijay added.
Ryutaro Watanabe (Japan), Marketing executive of Yamaha India greeted the participants.
Glen Fernandes from Goa was the main resource person who gave a demo of keyboard and Guitar.He also clarified the doubts of participants.
The workshop was coordinated by Fr Anil Ivan Fernandes, Director, Canara Communication Centre, Mangalore, Fr Vijay Machado, Director, Mangala Jyothi and Mr David Mathew, team member of Yamaha IBD.
ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳ ಒತ್ತುವರಿ ಮಾಡಿರುವ ಶಾಸಕರ ಸದಸ್ಯತ್ವ ರದ್ದು ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲು ಚುನಾವಣಾಧಿಕಾರಿಗಳಿಗೆ ರೈತ ಸಂಘ ಒತ್ತಾಯ
ಬಂಗಾರಪೇಟೆ; ಮಾ.26: ಜಿಲ್ಲಾದ್ಯಂತ ಸರ್ಕಾರಿ ಕೆರೆ, ರಾಜಕಾಲುವೆ, ಗುಂಡು ತೋಪು, ಗೋಮಾಳವನ್ನು ಒತ್ತುವರಿ ಮಾಡಿಕೊಂಡಿರುವ ಶಾಸಕರ ಸದಸ್ಯತ್ವವನ್ನು ರದ್ದು ಮಾಡುವ ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಚುನಾವಣಾಧಿಕಾರಿಗಳನ್ನು ಒತ್ತಾಯಿಸಿ ಮಾ.29ರಂದು ಜಿಲ್ಲಾಧಿಕಾರಿಗಳ ಕಚೇರಿಯೆದುರು ಹೋರಾಟ ಮಾಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ರೈಲ್ವೇ ನಿಲ್ದಾಣದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡರು ಅಕ್ರಮ ಗಣಿಗಾರಿಕೆಗೆ ಗೋಮಾಳ ಜಮೀನು ಕಬಳಿಕೆ, ಶ್ರೀನಿವಾಸಪುರ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಅವರು ನೂರಾರು ಎಕರೆಗೂ ಹೆಚ್ಚು ಅರಣ್ಯ ಭೂಮಿ ಕಬಳಿಕೆ ಜೊತೆಗೆ ಸ್ಥಳೀಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಗುಂಡುತೋಪು, ಗೋಮಾಳ, ಕೆರೆ, ಜಮೀನನ್ನು ಒತ್ತುವರಿ ಮಾಡಿಕೊಂಡು ಲೇಔಟ್, ಗಾಲ್ಫ್ ಅಭಿವೃದ್ಧಿಪಡಿಸಿದ್ದಾರೆ.
ಈ ಬಗ್ಗೆ ಸತತವಾಗಿ 10 ವರ್ಷಗಳಿಂದ ಹೋರಾಟದ ಜೊತೆಗೆ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಮಾನ್ಯ ನ್ಯಾಯಾಲಯ ಸ್ಥಳೀಯ ಜಿಲ್ಲಾಡಳಿತಕ್ಕೆ ಸೂಚನೆ ಮಾಡಿರುವುದರಿಂದ ಭೂ ಕಬಳಿಕೆ ಆರೋಪ ಇವರ ಮೇಲಿರುವುದರಿಂದ ಇವರ ಶಾಸಕ ಸದಸ್ಯತ್ವ ರದ್ದು ಮಾಡುವ ಜೊತೆಗೆ ಭೂ ಆರೋಪ ಮುಕ್ತ ಆಗುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಕಾನೂನಾತ್ಮಕವಾಗಿ ತಡೆ ಹಿಡಿಯಬೇಕೆಂದು ಚುನಾವಣಾಧಿಕಾರಿಗಳನ್ನು ಸಭೆಯಲ್ಲಿ ಒತ್ತಾಯಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಂದ ಆಯ್ಕೆಯಾದ ಶಾಸಕರು ಸಂವಿಧಾನದಡಿಯಲ್ಲಿ ಕೆಲಸ ನಿರ್ವಹಿಸುವಾಗ ಪ್ರಾಮಾಣಿಕವಾಗಿ ಈ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಆದರೆ, ಎಲ್ಲಾ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಅಧಿಕಾರ ಬರುವುದೇ ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲು ಎಂಬಂತೆ ಬಿಂಬನೆ ಮಾಡುವುದು ಯಾವ ನ್ಯಾಯ ?. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಆರೋಪವಿಲ್ಲ. ಆದರೆ, ಸರ್ಕಾರಿ ಆಸ್ತಿಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್ ಗಾಲ್ಫ್ ಕೋಳಿ ಫಾರಂಗಳನ್ನು ನಿರ್ಮಿಸಿರುವುದು ಶಾಸಕರ ಭೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆರೋಪ ಮಾಡಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರು ಅಕ್ರಮ ಗಣಿಗಾರಿಕೆಗೆ ನಕಲಿ ದಾಖಲೆಯನ್ನು ಸೃಷ್ಠಿ ಮಾಡಿ ಟೇಕಲ್ ವ್ಯಾಪ್ತಿಯಲ್ಲಿ ಗೋಮಾಳ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿರುವ ಜೊತೆಗೆ ಪ್ರಭಾವಿ ರಾಜಕಾರಣಿ ಕೆ.ಆರ್.ರಮೇಶ್ ಕುಮಾರ್ ತನ್ನ ಹುಟ್ಟೂರಿನಲ್ಲಿ ನೂರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿರುವ ಜೊತೆಗೆ ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ ಅವರು ಅಣ್ಣಿಹಳ್ಳಿ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮಾವಿನ ತೋಪು ಅಭಿವೃದ್ಧಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಮುಳಬಾಗಿಲು ಶಾಸಕ ಎಚ್.ನಾಗೇಶ್ ಅವರು ಹೆಜ್ಜೆಹೆಜ್ಜೆಗೂ ಲಂಚ ಲಂಚ ಎಂದು ಅಧಿಕಾರಿಗಳು, ಗುತ್ತಿಗೆದಾರರನ್ನು ಪೀಡಿಸುವುದಕ್ಕೆ ಇತ್ತೀಚೆಗೆ ಮಾಧ್ಯಮದಲ್ಲಿ ಪ್ರಕಟವಾದ ಹಣದ ವ್ಯವಹಾರವೇ ಭ್ರಷ್ಟಾಚಾರತೆಗೆ ಕೈಗನ್ನಡಿಯಾಗಿದೆ ಹಾಗಾಗಿ ಇವರ ಶಾಸಕ ಸ್ಥಾನದ ಸದಸ್ಯತ್ವವನ್ನು ಯಾಕೆ ರದ್ದು ಮಾಡಬಾರದೆಂದು ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ರಾಜಕಾರಣಿಗಳಿಗೆ ನೈತಿಕತೆ ಎಂಬುದು ಇಲ್ಲದಂತಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾದ ಅವರು ಸಾರ್ವಜನಿಕವಾಗಿ ಯಾವ ರೀತಿ ಮಾತನಾಡಬೇಕು ಎಂಬುದರ ಬಗ್ಗೆ ತಿಳುವಳಿಕೆ ನೀಡಬೇಕಾದ ಪರಿಸ್ಥಿತಿ ಇದೆ. ಯಾವ ಭಾಷೆ ಮಾತನಾಡಬೇಕು ಎಂಬುದನ್ನು ಅರಿಯದೆ ತಮಗಿಷ್ಟ ಬಂದ ರೀತಿ ಏಕವಚನ ಬಳಸಿದರೆ ಯಾವ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದಕ್ಕೆ ರಾಹುಲ್ ಗಾಂಧಿಯವರ ಅನರ್ಹತೆ ಶಿಕ್ಷೆ ದೇಶದ ರಾಜಕಾರಣಿಗಳಿಗೆ ಪಾಠವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾದ್ಯಂತ 6 ಶಾಸಕರ ಜೊತೆಗೆ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಒಂದಲ್ಲಾ ಒಂದು ಭೂ ಹಗರಣ, ಲಂಚದ ಆರೋಪದಲ್ಲಿ ಸಿಲುಕಿರುವುದರಿಂದ ಜಿಲ್ಲೆಯ ಅಭಿವೃದ್ಧಿ ಹಾಗೂ ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಭೂ ಹಗರಣದಲ್ಲಿ ಸಿಲುಕಿರುವ ಶಾಸಕರ ಸದಸ್ಯತ್ವ ರದ್ದು ಮಾಡಿ ಭ್ರಷ್ಟಾಚಾರದಲ್ಲಿ ಸಿಲುಕಿರುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಮಾನ್ಯ ಒತ್ತಾಯಿಸಿ ಮಾ.29ರ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುವ ಮೂಲಕ ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರಮಿಸುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಚಾಂದ್‍ಪಾಷ, ಕದಿರಿನತ್ತ ಅಪ್ಪೋಜಿರಾವ್, ಮಾಸ್ತಿ ಹರೀಶ್, ವೆಂಕಟೇಶ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಕಿರಣ್, ಗಿರೀಶ್, ಐತಾಂಡಹಳ್ಳಿ ಮುನ್ನಾ ಮುಂತಾದವರಿದ್ದರು.
ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಶೇ.4 ರಷ್ಟು ಮೀಸಲಾತಿ ವಾಪಸ್ ಪಡೆದು ಒಂದು ಸಮುದಾಯಕ್ಕೆ ಅನ್ಯಾಯ ಮಾಡಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್
ಶ್ರೀನಿವಾಸಪುರ: ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಶೇ.4 ರಷ್ಟು ಮೀಸಲಾತಿ ವಾಪಸ್ ಪಡೆಯುವುದರ ಮೂಲಕ ಒಂದು ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸಮಾಜದಲ್ಲಿ ಮತೀಯವಾದ ಬಿತ್ತುತ್ತಿದೆ. ಸಮಾಜ ಒಡೆಯುವ ಕಾರ್ಯ ಮಾಡುತ್ತಿದೆ. ಸಮಾಜದಲ್ಲಿ ಗೋಡೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾತರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿಲ್ಲ. ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಅಲ್ಪ ಸಂಖ್ಯಾತರು ನಡೆಸುವ ವ್ಯಾಪಾರಕ್ಕೆ ಕಲ್ಲು ಹಾಕುತ್ತಿದೆ. ಮತದಾರರು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು. ಎಲ್ಲಕಿಂತ ದೇಶ ಮುಖ್ಯ. ದೇಶಕ್ಕೆ ಗಂಡಾಂತರ ತರುವುದನ್ನು ಸಹಿಸಲಾಗದು ಎಂದು ಹೇಳಿದರು.
ಕೇಂದ್ರ ಸರ್ಕಾರ ಶೇ.18 ಜಿಎಸ್‍ಟಿ ಹಾಕುವುದರ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಬಡವರು ಬಳಸುವ ಗೃಹ ನಿರ್ಮಾಣ ವಸ್ತುಗಳನ್ನೂ ಜಿಎಸ್‍ಟಿಯಿಂದ ಹೊರಗಿಟ್ಟಿಲ್ಲ. ಕೊರೊನಾ ಸಂದರ್ಭದಲ್ಲಿ ವೈಜ್ಞಾನಿಕ ಕ್ರಮ ಕೈಗೊಳ್ಳುವ ಬದಲು ಮೊಂಬತ್ತಿ ಬೆಳಗಲು ಹೇಳಿದ್ದು ಸಾವಿರಾರು ಜನರ ಸಾವಿಗೆ ಕಾರಣವಾಯಿತು. ರಾಮನ ಹೆಸರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.
ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೇರೆಯಲ್ಲ, ಜೆಡಿಎಸ್ ಬೇರೆಯಲ್ಲ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪರಸ್ಪರ ಸಹಕಾರ ಮುಂದುವರಿದಿದೆ. ಜಿಲ್ಲೆಯಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಸೇರಿದಂತೆ ಕಾಂಗ್ರೆಸ್ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯಕರ್ತರು ಎಲ್ಲ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಮುಖಂಡ ಬಿ.ಎಂ.ಪ್ರಕಾಶ್ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಸರ್ಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ವಿತರಣೆ ಮಾಡಿದ್ದಾರೆ. ವಿರೋಧಿಗಳು ವಿನಾಕಾರಣ ಕೆಸಿ ವ್ಯಾಲಿ ನೀರಿನ ಬಗ್ಗೆ ಅಪಸ್ವರ ಎತ್ತಿ, ಅಪಪ್ರಜಾರ ಮಾಡುತ್ತಿದ್ದಾರೆ. ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಜನರು ಸಾಕ್ಷಿಯಾಗಿದ್ದಾರೆ. ರಮೇಶ್ ಕುಮಾರ್ ಸತತವಾಗಿ ಮೂರನೇ ಬಾರಿ ಗೆಲ್ಲುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ಎನ್.ಜಿ.ಬ್ಯಾಟಪ್ಪ, ಗೋವಿಂದಸ್ವಾಮಿ, ಮ್ಯಾಕಲ ನಾರಾಯಣಸ್ವಾಮಿ, ಕೃಷ್ಣೇಗೌಡ, ಸೈಯದ್ ಖಾದರ್, ಕೊಂಡಸಂದ್ರ ಶಿವಾರೆಡ್ಡಿ, ಎನ್.ಹನುಮೇಶ್, ಎಸ್.ವಿ.ಸುಧಾಕರ್, ಕೆ.ಕೆ.ಮಂಜು, ನಾರಾಯಣಸ್ವಾಮಿ, ನಾಗೇಶ್, ಉಮಾ, ಸಂಜಯ್ ರೆಡ್ಡಿ, ರೆಡ್ಡಪ್ಪ, ಅಕ್ಬರ್ ಷರೀಫ್, ವೆಂಕಟಾದ್ರಿ, ಸೀತಾರಾಮರೆಡ್ಡಿ, ರಾಮಮೂರ್ತಿ ಇದ್ದರು.
ರೋಡ್ ಷೋ: ಪಟ್ಟಣದ ಎಂಜಿ ರಸ್ತೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್, ಕಾಂಗ್ರೆಸ್ ಮುಖಂಡರೊಂದಿಗೆ ರೋಡ್ ಷೋ ನಡೆಸಿದರು. ರಸ್ತೆಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಮೂಡ್ಲಕಟ್ಟೆ, ವಿದ್ಯಾ ಅಕಾಡೆಮಿ ಶಾಲೆಯ ವಾರ್ಷಿಕೋತ್ಸವ
ಮೂಡ್ಲಕಟ್ಟೆ, ವಿದ್ಯಾ ಅಕಾಡೆಮಿ ಸ್ಕೂಲಿನ ವಾರ್ಷಿಕೋತ್ಸವವು ಇತ್ತಿಚಿಗೆ ಶಾಲೆಯ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಕುಂದಾಪುರದ ಹೆಮ್ಮಾಡಿಯ ಲಕ್ಷ್ಯಾ ಕ್ಲಿನಿಕ್ ವೈದ್ಯರಾಗಿರುವ ಅಮ್ಮಾಜಿ ಪಿ ಅವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಅವರು ತಮ್ಮ ಉದ್ಗಾಟನಾ ಭಾಷಣದಲ್ಲಿ ಶಾಲೆಯ ವಾರ್ಷಿಕೋತ್ಸವವು ಎಳೆಯರಿಗೆ ಜೀವನ ಪರ್ಯಂತ ಸ್ಮರಣೀಯ ಕ್ಷಣಗಳನ್ನು ನೀಡುವ ಅತ್ಯಂತ ಮಹತ್ವದ ದಿನ ಎಂದು ಹೇಳಿದರು. ಶಾಲೆಯು ಮಕ್ಕಳಿಗೆ ಮನೆಯ ವಾತಾವರಣದ ಹೊರತಾಗಿ ಹೊರಗಿನ ವಾತಾವರಣವನ್ನು ಅರಿತುಕೋಳ್ಳಲು ಬಹಳ ಸಹಾಯವಾಗುತ್ತದೆ ಎಂದರು ಮತ್ತು ವಿದ್ಯಾರ್ಥಿಗಳ ಉನ್ನತಿಯನ್ನೆ ದೈರ್ಯವಾಗಿಟ್ಟುಕೊಂಡು ಶಾಲೆಯು ಮುನ್ನಡೆಯುತ್ತಿರುವುದು ಪ್ರಶಂಸನೀಯ ಎಂದರು. ಐ.ಎಂ.ಜೆ ಸಂಸ್ಥೆಗಳ ನಿದೇರ್ಶಕರಾದ ಪ್ರೋಫೆಸರ್ ದೋಮ ಚಂದ್ರಶೇಖರ್ ಮಾತನಾಡಿ ಸಂಸ್ಥೆಯ ಅಧ್ಯಕ್ಷರ ಅವಿರತ ಪ್ರಯತ್ನವನ್ನು ಪ್ರಶಂಶಿಸಿದರಲ್ಲದೇ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿವಿಧ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆಯ ನಂತರ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸಿದ್ದಾರ್ಥ ಜೆ ಶೆಟ್ಟಿಯವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸುವ್ಯವಸ್ಥೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಹಾಗೂ ಕಲಿಕೆಯು ಮನೋರಂಜನಾತ್ಮಕವಾಗಿ ಸಾಗುವಂತೆ ಪಠ್ಯವನ್ನು ಸಂಯೊಜಿಸಲಾಗಿದೆ ಎಂದರು. ಪೋಷಕರು ಸಂಸ್ಥೆಯ ಮೇಲಿಟ್ಟಿರುವ ವಿಶ್ವಾಸಕ್ಕೆ ಅವರು ಕೃತಜ್ಞತೆಯನ್ನು ಸಲ್ಲಿಸಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಪಾವನಾರವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಶ್ರೀಮತಿ ವಿದ್ಯಾರವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀಮತಿ ರಷ್ಮಾ ಶೆಟ್ಟಿಯವರು ಶಾಲೆಯ ವಾರ್ಷಿಕ ವರದಿಯನ್ನು ಓದಿದರು. ಶ್ರೀಮತಿ ಪಾವನಾರವರು ವಂದನಾರ್ಪಣೆಗೈದರು. ಸಭಾಕಾರ್ಯಕ್ರಮದ ನಂತರ ಮಕ್ಕಳಿಂದ ಅತ್ಯಾಕರ್ಷಕ ಮನೋರಂಜನಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ವಿದ್ಯಾ ಅಕಾಡೆಮಿಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕುಮಾರಿ ಫಾತಿಮಾ ನಿರ್ವಹಿಸಿದ್ದರು.
ಕುಂದಾಪುರ-ಬೈಂದೂರು ತಾಲೂಕು ಭಾವನ ಮಹಿಳಾ ಒಕ್ಕೂಟದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕುಂದಾಪುರ, ಮಾ.27: ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದಿಂದ ಕುಂದಾಪುರ ಸಂತ ಮೇರಿಸ್ ಪ.ಪೂ. ಕಾಲೇಜಿನ ಸಭಾಭವನದಲ್ಲಿ ಮಾ.26 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಸುಗಮ್ಯ ಉಡುಪಿ ಜಿಲ್ಲಾ ಮಹಿಳಾ ಒಕ್ಕೂಟಉಡುಪಿ ಧರ್ಮಪ್ರಾಂತ್ಯ ಇದರ ಅಧ್ಯಕ್ಷೆ ಅನಿತಾ ಡಾಯಸ್ ಗೀಡಕ್ಕೆ ನಿರೇರುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ವಲಯ ಮಟ್ಟದ ಒಕ್ಕೂಟಗಳ ಸಹಕಾರದಿಂದ ನಮ್ಮ ಮಹಿಳಾ ಒಕ್ಕೂಟವು ಉತ್ತಮ ರೀತಿಯಲ್ಲಿ ನಡೆಯುತ್ತದೆ, ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿದು ಚರ್ಚಿನ ವಾಳೆಯ ಗುರಿಕಾರರಾಗಿ, ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತು ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆ ತಾನೇನು ಕಡಿಮೆಯಿಲ್ಲವೆಂದು ಹೆಸರು ಮಾಡಿದ್ದಾಳೆ’ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಉಡುಪಿ ಇದರ ಅಧ್ಯಕ್ಷೆ ಪ್ರಮೀಳಾ ಡೆಸಾ, ಸುಗಮ್ಯ ಸೌರ್ಹಾದ ಸಹಕಾರಿ ನಿಯಮಿತ ಸಂಸ್ಥೆ ಸ್ಥಾಪಿಸುವುದರಲ್ಲಿ ಶ್ರಮಿಸಿದ ಪ್ರಯುಕ್ತ, ಆಶಾ ಕಾರ್ಯಕರ್ತೆಯಾದ ಸಿಂತಿಯಾ ಬುತ್ತೆಲ್ಲೊ ಇವರಿಗೆ ಶಿಸುಗಳ ಆರೈಕೆ ಗರ್ಭಿಣಿಯವರ ಸೇವೆ, ಬಾಣತನದ ಸೇವೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಗುರುತಿಸಿದ್ದಕಾಗಿ ಹಾಗೂ ಕುಂದಾಪುರ ತಾಲೂಕಿನಲ್ಲಿ ಆಟೋ ರಿಕ್ಷಾ ಚಾಲಕರಾಗಿ ಅನನ್ಯ ರೀತಿಯಲ್ಲಿ ಸೇವೆ ನೀಡುತ್ತೀರುವ ರೂಪ, ದೀಪ ಮತ್ತು ಸುಲೋಚನ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಪ್ರಮೀಳಾ ಡೆಸಾ ಮತ್ತು ದೀಪಾ ಅನ್ನಿಸಿಕೆಯನ್ನು ವ್ಯಕ್ತಪಡಿಸಿದರು.
ಅಧ್ಯಕ್ಷತೆ ಸ್ಥಾನ ವಹಿಸಿದ ಭಾವನ ಒಕ್ಕೂಟದ ಅಧ್ಯಾತ್ಮಿಕ ನಿರ್ದೇಶಕರಾದ ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ‘ಮಹಿಳೆ ಇಂದು ಯಾವ ಕ್ಷೇತ್ರದಲ್ಲೂ ಹಿಂದಿಲ್ಲ, ಇವತ್ತು ನಾನೊಂದು ಮಹಿಳೆಯ ಅಂತ್ಯ ಸಂಸ್ಕಾರದ ಕಾರ್ಯವನ್ನು ಮಾಡಬೇಕಿದೆ, ಸಮಾಕ ಸೇವಕಿ ಬರಹಗಾರ್ತಿಯಾದ ಅವಳು ಅವಳು ನಾನು ಸತ್ತ ನಂತರ ನನ್ನ ಶವವನ್ನು ವೈಧ್ಯಕೀಯ ಸಂಶೋಧೆನೆಗಾಗಿ ಉಪಯೋಗಿಸಲು ನೀಡಬೇಕೆಂದು ಕರಾರು ಮಾಡಿಕೊಂಡಿದ್ದಾಳೆ, ಅದರಂತೆ ಅವಳ ಮ್ರ್ ಆತ್ಮಕ್ಕಾಗಿ ಪೂಜೆ ಪ್ರಾರ್ಥನೆ ಮಾಡಿದ ನಂತರ, ಅವರ ಮ್ರತದೇಹವನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ನೀಡಲಿಕ್ಕೆ ಇದೆ, ಇಂತಹ ದಿಟ್ಟತನ ತ್ಯಾಗಮಯಿ ಮಹಿಳೆಗಳು ಸಮಾಜದಲ್ಲಿ ಇದ್ದಾರೆ’ ಎಂದು ಹೇಳುತ್ತಾ, ಶುಭ ಕೋರಿದರು.
ಮುಕಾಂಬಿಕ ಮಹಿಳಾ ಮಂಡಲ ಮತ್ತು ಮಹಿಳಾ ಸಾಂತ್ವನ ಕೇಂದ್ರ ಕುಂದಾಪುರ ಇದರ ಅಧ್ಯಕ್ಷೆ ಸಮಾಜ ಸೆವಕಿ ರಾಧ ದಾಸ್ ಮಾತನಾಡಿ ‘ತಮ್ಮ ಮನೆಯ ವ್ರದ್ದರನ್ನು ಚೆನ್ನಾಗಿ ನೋಡಿಕೊಳ್ಳಿ, ಅವರನ್ನು ವ್ರದ್ದಾಶ್ರಮದಲ್ಲಿ ಇಡುವುದು ಸರಿಯಲ್ಲ, ಅಲ್ಲಿ ಅವರ ವೇದನೆ ನೋಡಲಾರದು ಎಂದು ಹೇಳುತ್ತಾ, ನಾನು ಎಷ್ಟೊ ಅತ್ಯಾಚಾರದ ಪ್ರಕರಣದಲ್ಲಿ ಶಿಕ್ಷೆ ನೀಡುವಲ್ಲಿ ಶ್ರಮಿಸಿದ್ದೇನೆ, ಇಂತಹ ಎಷ್ಟೊ ಪ್ರಕರಣದಲ್ಲಿ ಎರಡು ಕಡೆಯವರಿಗೆ ಒಟ್ಟು ಕೂಡಿಸಿ, ಅವರನ್ನು ಮದುವೆ ಮಾಡಿಸಿದ್ದೇನೆ, ಮಹಿಳೆಯ ಸಾಂತ್ವಾನ ಕೇಂದ್ರವನ್ನು ತೆರೆದಿದ್ದೇನೆ, ಸುಸಜ್ಜಿತ ಶವಾಗರವನ್ನು ನಿರ್ಮಿಸಿದೇನೆ, ಇದ್ಯಾಕೆ ನಾನು ಹೇಳುತ್ತಿದ್ದೇನೆ ಅಂದರೆ, ನನ್ನನ್ನೆ ನಾನು ಸಾಧಕಿಯೆಂದು ಬಿಂಬಿಸಿಕೊಳ್ಳಲು ಅಲ್ಲ, ನೀವು ಕೂಡಾ ಮಹಿಳೆಯರಾಗಿ ಮುಂದೆ ಇಂತಹ ಕೆಲಸಗಳನ್ನು ಮಾಡಿ, ಮಹಿಳೆಯರಿಗಾಗಿ ಶ್ರಮಿಸಬೇಕೆಂಬುದೆ ನನ್ನ ಉದ್ದೇಶ ಎಂದು ಹೇಳಿದರು.
ಕುಂದಾಪುರ, ಬಸ್ರೂರು, ಬೈಂದೂರು, ಪಿಯುಸ್ ನಗರ್, ಪಡುಕೋಣೆ, ಗಂಗೊಳ್ಳಿ ಮಹಿಳಾ ಘಟಕಗಳು ನ್ರತ್ಯ ಹಾಡುಗಳ ಪ್ರದರ್ಶನ ನೀಡಿದರು. ತ್ರಾಸಿ ಘಟಕವು ಪ್ರಹಸನ ಪ್ರದರ್ಶನ ಮಾಡಿದರೆ, ಕೋಟದ ಘಟಕವು ಪ್ರಾರ್ಥನೆ ಗೀತೆ ಹಾಡಿತು. ತಲ್ಲೂರು ಘಟಕವು ಉಪಚಾರ ಸೇವೆಯನ್ನು ಕೈಗೊಂಡಿತು. ಕೋಟ ಚರ್ಚಿನ ಧರ್ಮಗುರು ವಂ|ಆಲ್ಫೊನ್ಸ್ ಡಿಲಿಮಾ ಉಪಸ್ಥತರಿದ್ದರು
ಕುಂದಾಪುರ-ಬೈಂದೂರು ತಾಲೂಕುಗಳ ಭಾವನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಲೆಟ್ ಡಿಸಿಲ್ವಾ ಸ್ವಾಗತಿಸಿದರು.ಕಾರ್ಯದರ್ಶಿ ಜ್ಯೋತಿ ಡಿಮೆಲ್ಲೊ ವಂದಿಸಿದರು, ರೇನಿಟಾ ಬಾರ್ನೆಸ್ ಮತ್ತು ಆಶಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.