ಕುಂದಾಪುರ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಘಟಿಕೋತ್ಸವ


ಕುಂದಾಪುರ: ಇಲ್ಲಿನ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಯು ಕೆ.ಜಿ ಮಕ್ಕಳ ಘಟಿಕೋತ್ಸವವು ಕುಂದಾಪುರ ಹೋಲಿ ರೋಜರಿ ಚರ್ಚಿನ ಸಭಾ ಭವನದಲ್ಲಿ ಜರುಗಿತು.
ಇಲ್ಲಿನ ಯು ಕೆ.ಜಿ ಮಕ್ಕಳು ತೇರ್ಗಡೆಯಾಗಿದವರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ನಿರ್ದೇಶಕರಾದ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಮಾತನಾಡಿ ‘ಮಕ್ಕಳಿಗೆ ಬರೇ ವಿಧ್ಯಾಬಾಸ ಸಿಕ್ಕಿದರೆ ಮಾತ್ರ ಸಾಲದು, ನಿಮ್ಮ ಮಕ್ಕಳಲಲ್ಲಿ ನಯ ವಿನಯ, ಸಂಸ್ಕಾರ ಸಿಗಬೇಕು, ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮಕ್ಕಳನ್ನು ನಾನು ಗಮನಿಸುತ್ತೇನೆ ಅವರಲ್ಲಿ ಉತ್ತಮ ಶಿಸ್ತು, ನಡತೆ, ಕಾಣುತ್ತೀದ್ದೆನೆ, ಅವರಿಗೆ ಇಲ್ಲಿ ಉತ್ತಮ ಸಂಸ್ಕಾರ ಕಲಿಸುತ್ತಾರೆ, ಮಕ್ಕಳು ಕಲಿಯುವುದರಲ್ಲೂ ಮುಂದಿರಬೇಕು, ಗುಣ ನಡತೆಯಲ್ಲೂ ಮುಂದಿರಬೇಕು. ಇಲ್ಲಿ ಅದೇ ವಾತವರಣದಲ್ಲಿ ನಿಮ್ಮ ಮಕ್ಕಳ ಬೆಳವಣಿಗೆಯನ್ನು ಮಾಡಿದ್ದೇವೆ, ಮುಂದೆ ನಿಮ್ಮ ಮಕ್ಕಳಿಗೆ ಇದೇ ಥರಹದ ವಾತವರಣ ಇರುವ ನಮ್ಮ ಶಾಲೆ ಕೂಡ ಇದೆ, ಅಲ್ಲಿ ನಿಮ್ಮ ಮಕ್ಕಳನ್ನು ವಿಧ್ಯಾವಂತರು ಮತ್ತು ಸಂಸ್ಕಾರವಂತ್ತರನ್ನಾಗಿಸುತ್ತಾರೆ’ ಎಂದು ಅವರು ಸಂದೇಶ ನೀಡಿ ಪ್ರಮಾಣ ಪತ್ರ ಪಡೆದ ಮಕ್ಕಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಡಿಅಲ್ಮೇಡಾ, ಶಿಕ್ಷಕಿ ವೀಣಾ ಡಿಸೋಜಾ, ವಿನೀತಾ ಡಿಸೋಜಾ, ಸಹಾಯಕಿ ಡೆಲ್ಫಿನ್ ಡಿಸೋಜಾ, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ನ್ರತ್ಯ ಮತ್ತು ಗಾಯನವನ್ನು ಪ್ರದರ್ಶಿಸಿದರು, ಶಿಕ್ಷಕಿ ರೆಚೆಲ್ ಡಿಸಿಲ್ವಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಚಿನ್ಮಯಿ ಆಸ್ಪತ್ರೆ ಮತ್ತು ರೋಟರಿ ಕುಂದಾಪುರ ದಕ್ಷಿಣ ಇದರ ಸಹಭಾಗಿತ್ವದಲ್ಲಿ “ಉಚಿತ ಮೂತ್ರಪಿಂಡ ತಪಾಸಣಾ ಶಿಬಿರ”

ಚಿನ್ಮಯಿ ಆಸ್ಪತ್ರೆ ಮತ್ತು ರೋಟರಿ ಕುಂದಾಪುರ ದಕ್ಷಿಣ ಇದರ ಸಹಭಾಗಿತ್ವದಲ್ಲಿ “ಉಚಿತ ಮೂತ್ರಪಿಂಡ ತಪಾಸಣಾ ಶಿಬಿರ” ಚಿನ್ಮಯಿ ಆಸ್ಪತ್ರೆಯಲ್ಲಿ ಮಂಗಳೂರಿನ ಖ್ಯಾತ ವೈದ್ಯ ಡಾ. ಸಂತೋಷ ಪೈ ನೇತೃತ್ವದಲ್ಲಿ ಜರುಗಿತು. ಚಿನ್ಮಯಿ ಆಸ್ಪತ್ರೆಯ ಆಡಳಿತ ಪಾಲುದಾರರಾದ ರಾಜೇಂದ್ರ ಕಟ್ಟೆ, ರೋಟರಿ ವಲಯ ಒಂದರ ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ರೋಟರಿ ಸದಸ್ಯರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 40ಕ್ಕೂ ಅಧಿಕ ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡು, ಇದರ ಸದುಪಯೋಗ ಪಡೆದುಕೊಂಡರು.

ಲಯನ್ಸ್ ಕ್ಲಬ್ ಘಟಕಗಳಾದ ಬ್ರಹ್ಮಗಿರಿ, ಉಡುಪಿ ಮಿಡ್ ಟೌನ್, ರೆಡ್ ಕ್ರಾಸ್ ಕುಂದಾಪುರ ತಾ. ಘಟಕ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ, ಉಡುಪಿ ಕೊಚಿನ್‌‌ ಶಿಪ್ ಯಾರ್ಡ್ ಸಂಯೋಗದಿಂದ ರಕ್ತದಾನ ಶಿಬಿರ

ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್, ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ ಮತ್ತು ಉಡುಪಿ ಕೊಚಿನ್‌‌ ಶಿಪ್ ಯಾರ್ಡ್ – ಮಲ್ಪೆ ಇವರ ಸಂಯೋಗದಿಂದ ನಡೆದ ರಕ್ತ ದಾನ ಶಿಭಿರದ ಉದ್ಘಾಟನೆ ಯನ್ನು ಉಡುಪಿ ಕೊಚಿನ್ ಶಿಪ್ ಯಾರ್ಡ್ CEO ಹರೀಶ್ ಕುಮಾರ್ ಎ. ನೆರವೇರಿಸಿದರು. ಮುಖ್ಯ ಅತಿಥಿ ಗಳಾದ ರೆಡ್ ಕ್ರಾಸ್ ಕುಂದಾಪುರ ಸಭಾಪತಿ ಗಳಾದ ಶ್ರೀ ಎಸ್ ಜಯಕರ ಶೆಟ್ಟಿ ಇವರು ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ಬ್ರಹ್ಮಗಿರಿ ಅದ್ಯಕ್ಷ ರಾದ ಅಶೋಕ್ ನಾಯಕ್, ಲಯನ್ಸ್ ಉಡುಪಿ ಮಿಡ್ ಟೌನ್ ಅದ್ಯಕ್ಷ ರಾದ ವೀಣಾ ಜೆ. ಶೆಟ್ಟಿ, ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಶಿಪ್ ಯಾರ್ಡ್ DGM – ಅಂಬಲವನನ್, ಕುಂದಾಪುರ ಘಟಕದ ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಜಿಲ್ಲಾ ಶಾಖೆಯ ಬಾಲಕ್ರಷ್ಣ ಶೆಟ್ಟಿ ಉಪಸ್ಥಿತರಿದ್ದರು

ಪ್ರತಿಯೊಬ್ಬರೂ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆರ್.ಬಿ.ನಂದಿನಿ

ಶ್ರೀನಿವಾಸಪುರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಸೇರಿದಂತೆ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕು ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆರ್.ಬಿ.ನಂದಿನಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಪಾಲನೆಯಲ್ಲಿ ಯಾವುದೇ ಲೋಪ ಕಂಡುಬಂದರೂ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಏ.13 ರಂದು ಗೆಜೆಟ್ ಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಏ.20, ನಾಮಪತ್ರಗಳ ಪರಿಶೀಲನೆ ಏ.21, ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ ಏ.24, ಮತದಾನ ದಿನಾಂಕ ಮೇ.10, ಮತ ಎಣಿಕೆ ಏ.13, ಏ.15ಕ್ಕೆ ಮೊದಲು ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಸಿಬ್ಬಂದಿ ಶಿಲ್ಪ, ಭಾವನಾ ಇದ್ದರು.

ಗ್ರಾಮದ ಜನತೆ ಬಹಳ ಶ್ರಮಜೀವಿಗಳು. ನಿಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎನ್ನುವುದೇ ನನ್ನ ಆಶಯ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ : ಈ ಗ್ರಾಮದ ಜನತೆ ಬಹಳ ಶ್ರಮಜೀವಿಗಳು. ನಿಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎನ್ನುವುದೇ ನನ್ನ ಆಶಯ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು. 

ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಮಂಗಳವಾರ ೭.೨೫ ಲಕ್ಷದಲ್ಲಿ ನಿರ್ಮಿಸಲಾದ ಶಾಲೆಯ ನೂತನ ಕೊಠಡಿಯನ್ನು ಉದ್ಗಾಟಿಸಿ ಮಾತನಾಡಿದರು. 

ಈ ಶಾಲೆಯ ಮಕ್ಕಳಿಗೆ ಶೌಚಾಲಯ, ಕುಡಿಯುವ ನೀರು, ಕಾಂಪೌAಡ್ ನಿರ್ಮಿಸಬೇಕಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು . ನೀವು ಬೆಂಗಳೂರಿನಲ್ಲಿನ ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಈ ಒಂದು ದೃಷ್ಟಿಯಿಂದ ಈ ಭಾಗದ ವಿದ್ಯಾರ್ಥಿಗಳಿಗಾಗಿ ೨೫ ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನ ನಿರ್ಮಿಸಿ ಉತ್ತಮ ಗುಣಮಟ್ಟವನ್ನು ಹೊಂದಿರುವ ಶಿಕ್ಷರನ್ನ ನೇಮಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲಾಗುವುದು  ಭರವಸೆ ನೀಡಿದರು.

ಈ ಭಾಗದಲ್ಲಿ ವಸತಿ ಶಾಲೆಯನ್ನು ನಿರ್ಮಿಸಿದರೆ ಕೋನೇಟಿ ತಿಮ್ಮನಪಲ್ಲಿ, ಶಿವಪುರ, ಗೌಡಹಳ್ಳಿ, ಜೆವಿ ಕಾಲೋನಿ ಗ್ರಾಮಗಳಲ್ಲಿನ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು. 

ಒಂದು ಗ್ರಾಮವು ಅಭಿವೃದ್ಧಿಯಾಗಬೇಕಾದರೆ ಗ್ರಾಮದಲ್ಲಿನ ಎಲ್ಲರೂ ಪಕ್ಷಾತೀತವಾಗಿ ಸೇರಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಕರೆನೀಡಿದರು. ಈ ಹಿಂದೆ ಗ್ರಾಮದಲ್ಲಿ ಘರ್ಷಣೆಗಳು ಇತ್ತು , ಘರ್ಷಣೆಗಳನ್ನು ಮರೆತು ಸಹಬಾಳ್ವೆಯೊಂದಿಗೆ ನೆಲಸುವಂತೆ ಮನವಿ ಮಾಡಿದರು. ನನಗೆ ಈ ಭಾಗದ ಮುಖಂಡರಾದ ತಿಮ್ಮಿರೆಡ್ಡಿ, ರಾಮಚಂದ್ರಪ್ಪ, ಸಿದ್ದಪ್ಪ, ಮುನಿಯಪ್ಪ ಸಹಕರಿಸಿದ್ದರು ಎಂದು ಮಾಹಿತಿ ನೀಡಿದರು.   

ಇದೇ ಸಮಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಲವಾರು ಕುಟುಂಬಗಳು ಮುಖಂಡರು ಸೇರ್ಪಡೆಗೊಂಡರು. ಕೆಎಂಎಫ್ ನಿರ್ದೇಶಕ ಎನ್.ಹನುಮೇಶ್, ಮಾಸ್ತೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ರವಿಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಗರ‍್ರಪ್ಪ, ಮುಖಂಡರಾದ ಪ್ರಥಮ ದರ್ಜೆ ಗುತ್ತಿಗೆದಾರರಾದ ಗೌಡಹಳ್ಳಿ ವೆಂಕಟರೆಡ್ಡಿ, ಶಿವಪುರ ಎಸ್.ಜಿ.ವಿ ವೆಂಕಟೇಶ್, ಆಲೇರಿ ಬಾಬು, .ವೆಂಕಟೇಶ್, ಗಾಂಡ್ಲಹಳ್ಳಿ ಶಶಿಕುಮಾರ್, ಮುನಿಯಪ್ಪ, ಗಂಗಾಧರ್, ಅಶ್ವತಗೌಡ ,ಅಮರೀಶ್.ಇದರು. 

ಮೂಡ್ಲಕಟ್ಟೆ ಎಂ ಐ ಟಿ: ವಿಶ್ವ ಜಲ ದಿನಾಚರಣೆ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನ ಸಿವಿಲ್‌ ಇಂಜಿನಿಯರಿಂಗ್ ವಿಭಾಗ ಹಾಗೂ ಇಕೋ ಕ್ಲಬ್ ಇದರ ಸಹಭಾಗಿತ್ವದಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು.  ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಇವರು ಆಗಮಿಸಿ ನೀರಿನ ಮಹತ್ವ ಮತ್ತು ಸಂರಕ್ಷಣೆ ವಿಷಯದ ಕುರಿತು ವಿಚಾರ ವಿನಿಮಯ ಮಾಡಿದರು. ನೀರನ್ನು ಜೀವ ಜಲ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ನೀರಿನ ಅಭಾವದ ಕುರಿತು ಎಚ್ಚರಿಸುತ್ತ ಬಾವಿಯ ನೀರಿನ ಮಟ್ಟ ಹಾಗೂ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಹೊಸ ಹೊಸ ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಐಎಮ್ ಜೆ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊಫ಼ೆಸರ್ ದೋಮ ಚಂದ್ರಶೇಖರ ಮಾತನಾಡಿ ಮುಂದಿನ ಪೀಳಿಗೆಗೆ ನೀರನ್ನು ಕಾಯ್ದಿರಿಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ವಿದ್ಯಾರ್ಥಿಗಳು ಆ ಕುರಿತು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅದನ್ನು ಎಲ್ಲರೂ ಪಾಲಿಸಬೇಕು ಎಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಐಎಮ್ ಜೆಐ ಎಸ್ ಸಿ ಕಾಲೇಜಿನ ಪ್ರಾಂಶುಪಾಲೆ ಡಾ ಪ್ರತಿಭ ಪಟೇಲ್, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|ರಾಮಕೃಷ್ಣ ಹೆಗ್ಡೆ, ಸಿವಿಲ್‌ ವಿಭಾಗದ ಮುಖ್ಯಸ್ಥ ಪ್ರೊಫ಼ೆಸರ್ ಪ್ರಶಾಂತ ಹೆಗ್ಡೆ, ಸಿಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಥಮ್ ಮೈಕೆಲ್ ಕಾರ್ಯಕ್ರಮ ನಿರೂಪಿಸಿ, ಆಮೆ ನಾಂಗ್ಬೋ ವಂದಿಸಿದರು.

ಕೆದಿಂಜೆ ಶಾಲೆ : ಹಳೆ ವಿದ್ಯಾರ್ಥಿಗಳ ಸಮಾವೇಶ, ಗುರುವಂದನೆ ಕಾರ್ಯಕ್ರಮ

ಕಾರ್ಕಳ ತಾಲೂಕು ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ಪುರಸ್ಕøತ ಸಂಸ್ಥೆ ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರ ಶಾಲಾ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ, ಗುರುವಂದನೆ ಕಾರ್ಯಕ್ರಮ, ವಿದ್ಯಾರ್ಥಿ ವೇತನ ವಿತರಣೆ, ಚೈತ್ಯನ್ಯ ಅವಲೋಕನ ಬಿಡುಗಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಯು. ಶೇಷಗಿರಿ ಕಾಮತ್ ವಹಿಸಿದ್ದರು. ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜಯಂತ್ ರಾವ್ ಪಿ. ಚೈತ್ಯನ್ಯ ಅವಲೋಕನ ಬಿಡುಗಡೆ ಮಾಡಿದರು. ಭಾರತೀಯ ಜೇಸಿಐನ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಕೆ. ಅಭಿನಂದನಾ ಭಾಷಣ ಮಾಡಿದರು. ಬೆಳ್ಮಣ್ಣು ವಾಸ್ತು ತಜ್ಞರು, ಜ್ಯೋತಿಷ್ಯರಾದ ಡಾ. ಆಚಾರ್ಯ ವಾದಿರಾಜ ಅವರು ಗುರುವಂದನಾ ಕಾರ್ಯಕ್ರಮದ ಪ್ರಯೋಜಕತ್ವ ನೀಡಿ ನಿವೃತ್ತ ಹಾಗೂ ಪ್ರಸಕ್ತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು. ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರು ಆರ್ಥಿಕವಾಗಿ ಹಿಂದುಳಿದ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ವೇದಿಕೆಯಲ್ಲಿ ಶಾಲಾ ಯಕ್ಷಗಾನ ಗುರುಗಳಾದ ಮಹಾವೀರ ಪಾಂಡಿ ಕಾಂತಾವರ, ಶಾಲಾ ಚಿತ್ರಕಲಾ ಶಿಕ್ಷಕರಾದ ಶಿರ್ವ ಗಣೇಶ್ ಆಚಾರ್ಯ, ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸೂರ್ಯಕಾಂತ್ ಶೆಟ್ಟಿ ಮೊದಲಾದವರಿದ್ದರು.
ಗುರುವಂದನೆ : ಶಾಲಾ ನಿವೃತ್ತ ಶಿಕ್ಷಕರಾದ ಪ್ರಭಾಕರ್ ಶೆಟ್ಟಿ, ತುಕಾರಾಮ ಶೆಟ್ಟಿ, ಸರೋಜಿನಿ ಶೆಟ್ಟಿ, ಅನಿಲ್ ಕುಮಾರ್, ಲಕ್ಷ್ಮೀನಾರಾಯಣ ಭಟ್, ಸುಧಾಕರ್ ರಾವ್ ಹಾಗೂ ಪ್ರಸಕ್ತ ಸಾಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್, ರೇಖಾ ಪೈ, ಗೌರವ ಶಿಕ್ಷಕರಾದ ಮಮತಾ, ಜಯಲಕ್ಷ್ಮೀ, ಚೇತನಾ, ಭಾರತಿ ಅವರನ್ನು ಸನ್ಮಾನಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಪ್ತಾರ್ಥನೆಗೈದರು, ಶಾಲಾ ಮುಖ್ಯ ಶಿಕ್ಷಕರಾದ ಪ್ರಥ್ವೀರಾಜ್ ಬಲ್ಲಾಳ್ ಅವರು ಸ್ವಾಗತಿಸಿದರು, ಶಾಲಾ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ತುಕಾರಾಮ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು, ಶಾಲಾ ಸಹಶಿಕ್ಷಕಿ ರೇಖಾ ಪೈ ವಿದ್ಯಾರ್ಥಿ ವೇತನದ ವಿವರ ನೀಡಿದರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದ ಸಂಗೀತ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ‘ಪಂಚವಟಿ’ ಯಕ್ಷಗಾನ ಜರಗಿತು.

ಮಾ. 30 ರಂದು ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಬ್ರಹ್ಮರಥೋತ್ಸವ ಮಾ. 30 ರಂದು ಶ್ರೀ ರಾಮನವಮಿಯಂದು ಜರುಗಲಿದೆ.
ರಥೋತ್ಸವ ಸಂಬಂಧ ಮಾ. 26 ರಿಂದ ಕಾರ್ಯಕ್ರಮಗಳು ನಡೆಯುತ್ತಿದ್ದು 30 ರಂದು ಗುರುವಾರ ಬೆಳಿಗ್ಗೆಯಿಂದ ಪಂಚಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ, ಮಹಾಪೂಜೆ, ಮಹಾಬಲಿ ಪ್ರಧಾನ ನಡೆದು ಸಂಜೆ ಬ್ರಹ್ಮರಥಾರೋಹಣ ನಡೆಯಲಿದೆ ನಂತರ ರಾತ್ರಿ ಬ್ರಹ್ಮರಥೋತ್ಸವ ಜರುಗಲಿರುವುದು.
ಮಾರ್ಚ್ 31 ರಂದು ಓಕುಳಿ ಸಂಭ್ರಮದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು, ಓಕುಳಿ ಉತ್ಸವ, ಚೂರ್ಣೋತ್ಸವ, ಅವಭೃತ ಸ್ನಾನ, ಧ್ವಜಾರೋಹಣ ಹಾಗೂ ರಾತ್ರಿ ಮೃಗಬೇಟೆ ಉತ್ಸವ ಜರುಗಲಿದೆ ಎಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದು, ರಥೋತ್ಸವಕ್ಕೆ ಸರ್ವರನ್ನು ಆಹ್ವಾನಿಸಿದ್ದಾರೆ.