ಶ್ರೀನಿವಾಸಪುರ:ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವಾಗಿರಬೇಕು ಅಧಿಕಾರಿಗಳು ಕಾಮಗಾರಿ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು:ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಸರಿಯಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ಸಮೀಪ ಬುಧವಾರ ರೂ.19 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ನಾಡಕಚೇರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಿರ್ಮಾಣ ಕಾಮಗಾರಿ ನಿರ್ಮಿತಿ ಕೇಂದ್ರದಿಂದ ನಡೆಯುತ್ತಿದೆ. ಅವರಿಂದ ಉತ್ತಮ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲಾಗಿದೆ. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಶೀಘ್ರವಾಗಿ ನಿವಾರಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಸರ್ಕಾರಿ ಜಮೀನು ಲಭ್ಯವಿಲ್ಲದ ಪರಿಣಾಮವಾಗಿ, ನಾಡಕಚೇರಿ ಕಟ್ಟಡ ನಿರ್ಮಾಣ ಕಾರ್ಯ ತಡವಾಯಿತು. ಆದರೆ ದಾನಿಗಳಾದ ಬಾಬೂರೆಡ್ಡಿ ಹಾಗೂ ರಮಣಾರೆಡ್ಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾ ಜಮೀನು ದಾನವಾಗಿ ನೀಡಿದ್ದರಿಂದಾಗಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಕೋಚಿಮುಲ್ ಮಾಜಿ ಅಧ್ಯಕ್ಷ ವೆಂಕಟಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಮುಖಂಡರಾದ ಬಾಬುರೆಡ್ಡಿ, ರಮಣಾರೆಡ್ಡಿ ಇದ್ದರು.

ಕುಂದಾಪುರ:ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ

ಕುಂದಾಪುರ ಮಾ.2: ಸರಕಾರದ ಆದೇಶದಂತೆ ಮಾರ್ಚ್ ಒಂದರಿಂದ ಮಾರ್ಚ್ ಏಳರ ವರೆಗೆ ಜನ ಔಷಧಿ ದಿವಸ ಆಚರಣೆ ಆರಂಬಿಸಲಾಯಿತು. ಇದರ ಉದ್ಘಾಟನೆ ಯನ್ನು ತಾರೀಖು ಒಂದರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದಲ್ಲಿ ಮನೋರೋಗ ತಜ್ಞರಾದ ಡಾ. ಸುಕದಾ ಉಪಾಧ್ಯಾಯ ಇವರಿಂದ ನೆರವೇರಿತು.

ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಉದ್ಘಾಟಕರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ ಆಚಾರ್ಯ, ಮುತ್ತಯ್ಯ ಶೆಟ್ಟಿ, ಡಾ. ಸೋನಿ, ಸದಾನಂದ ಶೆಟ್ಟಿ, ಸೀತಾರಾಮ ನಕತ್ತಾಯ, ನಾರಾಯಣ ದೇವಾಡಿಗ ದಿನಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶಂಕರ ಶೆಟ್ಟಿ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು. ನೆರೆದ ಗ್ರಾಹಕ ಬಂಧುಗಳಿಗೆ ಸಿಹಿ ಹಂಚಲಾಯಿತು.

ಕೆವಿನ್ ಡಿ’ಮೆಲ್ಲೊ ಸ್ಮಾರಕ್ ಪಯ್ಣಾರಿ ವರಸಾಚೊ ಕಥಾಕಾರ್ 2023 – ಪುರಸ್ಕಾರಾಕ್ ಕಥಾ ಅಹ್ವಾನ್

ಆಶಾವಾದಿ ಪ್ರಕಾಶನಾನ್ 2008 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಮ್ಹಳ್ಳೊ ವರ್ಸಾಚೊ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಸ್ಟೇನ್ ಅಗೇರಾ ಮುಲ್ಕಿ ಹಾಂಕಾಂ, 

2009 ಇಸ್ವೆಚೊ ದಾಯ್ಜ್ ವರ್ಸಾಚೊ ಕಥಾಕಾರ್ ಪುರಸ್ಕಾರ್ ನಾಮ್ನೆಚೊ ಕೊಂಕಣಿ ಕಥಾಕಾರ್ ಕ್ಲೆರೆನ್ಸ್ ಕೈಕಂಬ ಹಾಂಕಾಂ ದಿಲ್ಲೊ.

ಆತಾಂ 2023 ವರ್ಸಾಚೊ ಕೆವಿನ್ ಡಿ’ಮೆಲ್ಲೊ ಸ್ಮಾರಕ್ ಪಯ್ಣಾರಿ ವರ್ಸಾಚೊ ಕಥಾಕಾರ್ ಪುರಸ್ಕಾರ್ ಅಖಿಲ್ ಭಾರತೀಯ್ ಮಟ್ಟಾರ್ ಜಾಹೀರ್ ಕೆಲಾ. ರುಪಯ್ 10,000 ನಗ್ದೆನ್ ತಶೆಂಚ್ ಡಿಜಿಟಲ್ ಶಿಫಾರಸ್ ಪತ್ರ್ ಆಟಾಪ್ಚ್ಯಾ ಹ್ಯಾ ಸರ್ತೆಂತ್ ಕೊಣೆಂಯ್ ಭಾಗ್ ಘೆವ್ಯೆತಾ. 

ರೆಗ್ರೊ/ನೇಮಾಂ:

೧. ಕೊಂಕಣಿ ಕಥಾ (ಕನ್ನಡ್, ನಾಗರಿ ವ ರೋಮಿ ಲಿಪಿಯೆಂತ್ ಆಸುಂಕ್ ಜಾಯ್).

೨. ಕಥಾ ಸ್ವತಾಚಿ ಆಸುನ್ ಖಂಯ್ಚರ್‌ಯೀ ಫಾಯ್ಸ್ ಜಾಲ್ಲಿ ವಾ ಧಾಡ್ಲೆಲಿ ಆಸಾನಾಯೆ.

೩. ಕಥಾ 2000 ಸೊಭ್ದಾಂ ಭಿತರ್ ಆಸುಂಕ್ ಜಾಯ್.

೪. ಕಥಾ ಯುನಿಕೋಡ್ ವಾ ಟಾಯ್ಪ್ ಕರುನ್ ಧಾಡ್ಲೆಲಿ ಆಸುಂಕ್ ಜಾಯ್.

೫. ಇಮೇಯ್ಲ್ ಕರುಂಕ್ ಅಖೇರಿಚಿ ತಾರಿಕ್ 31 ಒಕ್ತೋಬರ್ 2023.

೬. ಕಥೆಸವೆಂ ಕಥಾಕಾರಾಚಿ ಒಳೊಕ್, ಪಾತ್ತೊ ಆನಿ ಫೋಟೊ ಧಾಡುನ್ ದಿಂವ್ಚೊ.

೭. ಕಥಾ ಧಾಡುಂಕ್ ಇಮೇಯ್ಲ್: editor@poinnari.com

ಚಡ್ತಿಕ್ ವಿವರಾಂಕ್ ಪಳೆಯಾತ್ ಪಯ್ಣಾರಿ.ಕೊಮ್ 

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಂದಾಪುರ : ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಸಿ.ವಿ.ರಾಮನ್ ಕ್ಲಬ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರಥಮ ವರ್ಷದ ವಿಧ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿದ್ದು 40ಕ್ಕೂ ಅಧಿಕ ತಂಡಗಳು ಪ್ರಥಮ ಸುತ್ತಿನಲ್ಲಿ ಭಾಗವಹಿಸಿ ವಿಭಿನ್ನ ರೀತಿಯ ಮಾದರಿಯನ್ನು ತಯಾರಿಸಿ ಪ್ರದರ್ಶಿಸಿದರು. ತಿರುವುಗಳಲ್ಲಿ ಅಪಘಾತ ತಡೆಗಟ್ಟುವಿಕೆ, ಲೇಸರ್ ತಂತ್ರಜ್ಞಾನ ಬಳಸಿ ಸುರಕ್ಷತಾ ಅಲಾರಾಮ್ , ಆರ್ಡಿನೋ ಸಾಧನದಿಂದ ಮೊಬೈಲ್ ಅಲ್ಲೇ ನಿರ್ವಹಣೆ ಮಾಡಬಲ್ಲ ಕಾರು, ನೀರನ್ನು ಸ್ವಚ್ಛ ಮಾಡುವ ಮಾದರಿ, ವೈ ಫ಼ೈ ಮೂಲಕ ನಿರ್ವಹಣೆ ಮಾಡಬಲ್ಲ ವಾಹನ ಹೀಗೆ ಹಲವು ರೀತಿಯ ವಿಶಿಷ್ಟ ಮಾದರಿಯನ್ನು ತಯಾರಿಸಿದರು. ಲೋಳೆರಸದಿಂದ ವಿಧ್ಯುತ್ ತಯಾರಿಕೆ, ಹೊಲೊಗ್ರಾಫಿಕ್ ಪ್ರಕ್ಷೇಪಕಗಳು ವಕ್ರೀಭವನದ ಮೂಲಕ  ಸೃಷ್ಟಿಸಿದ ಚಿತ್ರ, ಆಟೋಮ್ಯಾಟಿಕ್ ಜ಼ೀಬ್ರಾ ಕ್ರಾಸಿಂಗ್, ಜಲಾಂತರ್ಗಾಮಿ ವ್ಯವಸ್ಥೆಯ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.

ಆಯ್ದ ಹದಿನೈದು ಮಾದರಿಗಳ ಪ್ರದರ್ಶನ ಹಾಗು ಕೊನೆಯ ಹಂತದ ತೀರ್ಪನ್ನು ರಾಷ್ಟ್ರೀಯ ವಿಜ್ಞಾನ ದಿನದಂದು ನಡೆಸಲಾಯಿತು. ಮಧ್ಯಾಹ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು. ಅತಿಥಿ ಹಾಗೂ ತೀರ್ಪುಗಾರರಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯ ಪ್ರಶಸ್ತಿ ವಿಜೇತ ಗಣಿತ ಪ್ರಾಧ್ಯಾಪಕರಾದ ಶ್ರೀ ಉದಯಕುಮಾರ್ ಹಾಗೂ ಭಟ್ಕಳದ ಸಿಧ್ದಾರ್ಥ ಪದವಿ ಪೂರ್ವ ಕಾಲೇಜಿನ ಗಣಿತ ಪ್ರಾಧ್ಯಾಪಕರಾದ ಶ್ರೀ ಶ್ರೀನಿವಾಸ ಎನ್ ನಾಯ್ಕ್ ಅವರು ಆಗಮಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಉದಯಕುಮಾರ್ ಅವರು ಪ್ರಥಮ ವರ್ಷದ ವಿಧ್ಯಾರ್ಥಿಗಳಾಗಿ ಕಡಿಮೆ ಅವಧಿಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾದರಿಯನ್ನು ಪ್ರಸ್ತುತ ಪಡಿಸಿರುವುದು ನಿಜವಾಗಿಯೂ ಶ್ಲಾಘನೀಯ. ಮುಂದಿನ ದಿನಗಳಲ್ಲಿ ತಮ್ಮ ಸುತ್ತ ಮುತ್ತಲಿನ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಒದಗಿಸುವಂತಹ ಪ್ರಾಜೆಕ್ಟ್ ಗಳನ್ನು ಆವಿಷ್ಕರಿಸಿ ಜನಹಿತ ಕಾರ್ಯಗಳಲ್ಲಿ ತೊಡಗಬೇಕು ಎಂದು ಕರೆ ನೀಡಿದರು. ಇನ್ನೋರ್ವ ಅತಿಥಿಯಾಗಿರುವ ಶ್ರೀನಿವಾಸ ನಾಯ್ಕ್ ಅವರು ಮಾತನಾಡಿ ವಿಧ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿ ಯಾದರೆ ಕಾಲೆಜು ಉನ್ನತ ಸ್ಥಾನವೇರುವುದರಲ್ಲಿ ಬೇರೆ ಮಾತಿಲ್ಲ ಆ ನಿಟ್ಟಿನಲ್ಲಿ ಇಂತಹ ಸ್ಪರ್ದೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಪ್ರತಿಯೊಂದು ಕಾರ್ಯದಲ್ಲು ಗುರುಹಿರಿಯರ ಮಾರ್ಗದರ್ಶನ ಅತಿ ಅವಶ್ಯಕ ಎಂದು ಉದಾಹರಣೆಯೊಂದಿಗೆ ವಿವರಿಸಿ ತಾವು ಕಲಿತ ಶಾಲಾಕಾಲೇಜುಗಳ ಬಗ್ಗೆ ಸದಾಕಾಲ ಅಭಿಮಾನ ಹೊಂದಿರಬೇಕು ಎಂದು ಮಾರ್ಮಿಕವಾಗಿ ತಿಳಿಸಿದರು. ಐಎಮ್ ಜೆ ವಿಧ್ಯಾ ಸಂಸ್ಥೆಯ ನಿರ್ದೇಶಕರಾದ ಪ್ರೊಫ಼ೆಸರ್ ದೋಮ ಚಂದ್ರಶೇಖರ ಅವರು ವಿಧ್ಯಾರ್ಥಿಗಳ ಉತ್ಸಾಹ, ಮಾದರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ|ಅಬ್ದುಲ್ ಕರೀಮ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಿ ವಿ ರಾಮನ್ ಅವರ ಸಾಧನೆಯ ಬಗ್ಗೆ ವಿವರಿಸುತ್ತ ವಿಧ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆವಿಷ್ಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಡು ಕಾಲೇಜಿನ ಕೀರ್ತಿ ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು. ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ದೀಪಕ್ ಶೆಟ್ಟಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿ ಸೋಜಾ, ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|ರಾಮಕೃಷ್ಣ ಹೆಗ್ಡೆ, ಸಂಯೋಜಕರಾದ ಪ್ರೊಫೆಸರ್ ಸೂಕ್ಷ್ಮ ಅಡಿಗ , ವಿಭಾಗದ ಮುಖ್ಯಸ್ಥರು , ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿಧ್ಯಾರ್ಥಿನಿ ಪ್ರತೀಕ್ಷಾ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.  ಸಿವಿ ರಾಮನ್ ಕ್ಲಬ್ ಇದರ ಅಧ್ಯಕ್ಷ ದೇವರಾಜ್ ಮತ್ತು ದರ್ಶನ್ ಅತಿಥಿಗಳ ಪರಿಚಯ ಮಾಡಿ, ಉಪಾಧ್ಯಕ್ಷ ಮಣಿಕಂಠ ವಿಜೇತರ ವಿವರಣೆ ನೀಡಿದರು ಹಾಗೂ ಕಾರ್ಯದರ್ಶಿ ಶರತ್ ಸ್ವಾಗತಿಸಿ, ಸ್ನೇಹ ವಂದಿಸಿದರು

“ಕುಂದಾಪ್ರ ಕನ್ನಡ ಅಕಾಡೆಮಿ”ಗೆ ಒತ್ತಾಯಿಸಿ ಒಂದು ಸಾವಿರ ಪತ್ರಗಳ ಅಭಿಯಾನ

ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ನಡೆಯುತ್ತಿರುವ “ಕುಂದಾಪ್ರ ಕನ್ನಡ ಅಕಾಡೆಮಿಗಾಗಿ ಹೋರಾಟ”ದ ಅಂಗವಾಗಿ ಒಂದು ಸಾವಿರ ಪತ್ರಗಳನ್ನು ಕನ್ನಡ ಮತ್ತು ಸಂಸ್ಕøತಿ ಸಚಿವರಿಗೆ ಕಳುಹಿಸುವ ಅಭಿಯಾನ ಮಾರ್ಚ್ 1 ರಿಂದ ಆರಂಭಗೊಂಡಿದೆ.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ “ಗಂಗಾವಳಿ” ಸಮ್ಮೇಳನಾಧ್ಯಕ್ಷ ಕೋ. ಶಿವಾನಂದ ಕಾರಂತರು, ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ ಕಾರ್ಯಗತಗೊಳಿಸಲು ಸರ್ವ ಕುಂದ ಕನ್ನಡಿಗರು ಒಗ್ಗಟ್ಟಿನಿಂದ ಸರಕಾರವನ್ನು ಒತ್ತಾಯಿಸಬೇಕು ಎಂದು ಕರೆ ನೀಡಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಕುಂದ ಕನ್ನಡ ಅಕಾಡೆಮಿ ಸ್ಥಾಪನೆಗೆ ಒತ್ತಾಯಿಸಿ 1 ಸಾವಿರ ಪತ್ರ ಕಳುಹಿಸುವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.
ಅಭಿಯಾನ ಚಾಲನೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು. ಪ್ರೊ. ಎ. ವಿ. ನಾವಡ ಡಾ. ಗಾಯತ್ತಿ ನಾವಡ, ಹಿರಿಯ ಸಾಹಿತಿ ದುಂಡಿರಾಜ್, ರೋಟರಿ ಜಿಲ್ಲಾ ಉಪ ರಾಜ್ಯಪಾಲ ಡಾ. ಉಮೇಶ್ ಪುತ್ರನ್, ಚಿತ್ರ ನಿರ್ದೇಶಕ ರಾಜ್ ಬಲ್ಲಾಳ್, ಗಮಕ ಕಲಾ ಪರಿಷತ್ ಕುಂದಾಪುರ ಘಟಕದ ಅಧ್ಯಕ್ಷ ಸುಜಯೀಂದ್ರ ಹಂದೆ, ಕಾರ್ಯದರ್ಶಿ ವಿಶ್ವನಾಥ ಕರಬ, ಡಾ. ಶ್ರೀಕಾಂತ್ ಸಿದ್ಧಾಪುರ, ಕವಿ ಗೋಪಾಲ ತ್ರಾಸಿ, ಪ್ರೊ. ವೆಂಕಟೇಶ ಎ. ಪೈ ಮುಂಬೈ, ಡಾ. ಭಾರತಿ ಮರವಂತೆ, ಪ್ರಕಾಶ ಹೆಬ್ಬಾರ್ ನಾಡ, ಪೂರ್ಣಿಮಾ ಭಟ್ ಕಮಲಶಿಲೆ, ಡಾ. ಕಿಶೋರ್ ಶೆಟ್ಟಿ ಹಕ್ಲಾಡಿ, ಪ್ರತಾಪ ಕೊಡಂಚ ಕಂಬದಕೋಣೆ, ಗಿರಿಧರ ಕಾರ್ಕಳ, ಲತಾ ಸಂತೋಷ ಶೆಟ್ಟಿ ಮುದ್ದುಮನೆ, ಮಂಜುನಾಥ ಮಯ್ಯ ಉಪ್ಪುಂದ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಡಾ. ನಿತ್ಯಾನಂದ ಶೆಟ್ಟಿ ಅಂಪಾರು, ಪತ್ರಕರ್ತ ನಾಗೇಂದ್ರ ತ್ರಾಸಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕ ಹಂದ ಕುಂದ ಸೋಮಶೇಖರ ಶೆಟ್ಟಿ ಗಿಳಿಯಾರು, ಕುಂಚ ಕಲಾವಿದ ಕೆ. ಕೆ. ರಾಮನ್, ಲೇಖಕ ಪಿ. ಜಯವಂತ ಪೈ, ಶಂಕರ ನಾರಾಯಣ ತಾಲೂಕು ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ಮುಂಬಾರು ದಿನಕರ ಶೆಟ್ಟಿ, ಸಾಹಿತಿ ಜಾದೂಗಾರ ಓಂ ಗಣೇಶ ಉಪ್ಪುಂದ, ಕಲಾವಿದ ಅಶೋಕ ಶ್ಯಾನುಭಾಗ್, ಬಿ. ಜಿ. ಸೀತಾರಾಮ ಧನ್ಯ ಗೋಪಾಡಿ, ರಮೇಶ ಭಟ್ ಕೋಟೇಶ್ವರ, ಉಮೇಶ ಶೆಟ್ಟಿ ಪ್ರಾಂಶುಪಾಲರು ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ, ತರಬೇತುದಾರ ಅಶೋಕ ತೆಕ್ಕಟ್ಟೆ, ಖ್ಯಾತ ಕತೆಗಾರ ಮಂಜುನಾಥ ಹಿಲಿಯಾಣ, ಲೇಖಕ ದಿವಾಕರ ಶೆಟ್ಟಿ ಬಸ್ರೂರು, ಲೇಖಕಿ ನಾಗರತ್ನ ಎಂ. ಜಿ. ಬೆಂಗಳೂರು, ಪತ್ರಕರ್ತ ಕಲಾವಿದ ಕೇಶವ ಸಸಿಹಿತ್ಲು, ಉಡುಪಿ ಜಿಲ್ಲಾ ಜಾನಪದ ಪರಿಷತ್ ಉಪಾಧ್ಯಕ್ಷ ಅಶೋಕ್ ಆಚಾರ್ ಪಾಲ್ಗೊಂಡು ಪತ್ರ ಅಭಿಯಾನ ಆರಂಭಕ್ಕೆ ಸ್ಫೂರ್ತಿ ತುಂಬಿದರು.
ಈ ಅಭಿಯಾನ ನಿರಂತರವಾಗಿ ನಡೆಯಲಿದ್ದು ಈಗಾಗಲೇ ಹಲವು ಸಂಘ ಸಂಸ್ಥೆಗಳ ಸದಸ್ಯರು ಈ ಹೋರಾಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತಿಗಳು, ಕುಂದ ಕನ್ನಡಿಗರೆಲ್ಲರೂ ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿಗಾಗಿ ಒತ್ತಾಯಿಸಿ ಸರಕಾರಕ್ಕೆ ಪತ್ರ ಬರೆಯಬೇಕೆಂದು ಬಿ. ಅಪ್ಪಣ್ಣ ಹೆಗ್ಡೆ ಕರೆ ನೀಡಿದ್ದಾರೆ.
ಸಂಘಟಕರ ಪರವಾಗಿ ಯು. ಎಸ್. ಶೆಣೈ ಅಭಿಯಾನದ ವಿವರ ನೀಡಿದರು.

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ – “ಕುಟುಂಬೋತ್ಸವ” ಕಾರ್ಯಕ್ರಮ ಹೊಸತನ – ಸಂಘ ಸಂಸ್ಥೆಗಳಲ್ಲಿ ಕೌಟುಂಬಿಕ ಮನೋಭಾವನೆ ವೃದ್ಧಿ – ಸಂದೀಪ್ ವಿ. ಪೂಜಾರಿ

ನಂದಳಿಕೆ : ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಹೊಸತನದ ಕಾರ್ಯಕ್ರಮಗಳ ಮೂಲಕ ಸಂಘ ಸಂಸ್ಥೆಗಳಲ್ಲಿ ಯುವ ಜನತೆ ಹೆಚ್ಚಾಗಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಕೌಟುಂಬಿಕ ಮನೋಭಾವನೆ ವೃದ್ಧಿಯಾಗುತ್ತದೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹೇಳಿದರು.
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ನೇತೃತ್ವದಲ್ಲಿ ಬೋಳ ಬೀರೊಟ್ಟಿನಲ್ಲಿ ಆದಿತ್ಯವಾರ ಜರಗಿದ 23ನೇ ವರ್ಷದ ವರ್ಷಾಚರಣೆಯ ಪ್ರಯುಕ್ತ ಜರಗಿದ “ಕುಟುಂಬೋತ್ಸವ” ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಾಸ್ಯ, ಚಿಂತನ, ನೃತ್ಯ, ಗಾಯನ, ವಿವಿಧ ಮನೋರಂಜನಾ ಸ್ಪರ್ಧೆಗಳು ಜರಗಿದವು.
ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಬೋಳ ಉದಯ ಅಂಚನ್, ಪೂರ್ವಾಧ್ಯಕ್ಷ ರಘುವೀರ್ ಶೆಟ್ಟಿ, ಸುರೇಶ್ ಕಾಸ್ರಬೈಲು, ಸತೀಶ್ ಪೂಜಾರಿ, ರಾಝೇಶ್ ಕೋಟ್ಯಾನ್ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಆರತಿ ಕುಮಾರಿ, ಹರಿಣಾಕ್ಷಿ, ಹರೀಶ್ ಪೂಜಾರಿ, ಲಲಿತಾ ಆಚಾರ್ಯ, ಲೀಲಾ ಪೂಜಾರಿ, ಪದ್ಮಶ್ರೀ, ಪುಷ್ಪ ಕುಲಾಲ್, ರಾಜೇಂದ್ರ ಶೆಟ್ಟಿಗಾರ್, ಸಂಧ್ಯಾ ಶೆಟ್ಟಿ, ಸುದರ್ಶನ್ ಕುಂದರ್, ಸುಲೋಚನಾ ಕೋಟ್ಯನ್, ಸುರೇಶ್ ಅಬ್ಬನಡ್ಕ, ವೀಣಾ ಪೂಜಾರಿ, ಯಶವಂತ್ ಕುಲಾಲ್ ಮೊದಲಾದವರಿದ್ದರು.

ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕು – ರೈತ ಸಂಘದಿಂದ ಒತ್ತಾಯ

ಮುಳಬಾಗಿಲು : ಪೆ.28: ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕೆಂದು ರೈತ ಸಂಘದಿಂದ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಮುಖಾಂತರ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಹಗಲು ರಾತ್ರಿ ಎನ್ನದೆ ಬಿಸಿಲು ಗಾಳಿಗೆ ಬೆವರು ಸುರಿಸಿ ಬಂಡವಾಳ ಹಾಕಿ ಬೆಳೆದಿರುವ ರಾಗಿಗೆ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಅಧಿಕಾರಿಗಳ ಬೇಜವಬ್ದಾರಿಯಿಂದ ರೈತರಿಗೆ ಸೇರಬೇಕಾದ ಬೆವರಿಗೆ ತಕ್ಕ ಪ್ರತಿಪಲ ದಲ್ಲಾಳಿಗಳಿಗೆ ಸೇರುತ್ತಿರುವುದು ದುರಾದೃಷ್ಟಕರ ಎಂದು ಅವ್ಯವಸ್ಥೆಯ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿ 3578 ರೂ ಘೋಷಣೆ ಮಾಡಿರುವ ಬೆಂಬಲ ಬೆಲೆ 90 ದಿನ ಕಷ್ಟಪಟ್ಟಿರುವ ರೈತರ ಹೆಸರಿನಲ್ಲಿ ದಲ್ಲಾಳಿಗಳು ಅಧಿಕಾರಿಗಳು ಲೂಟಿ ಹೊಡೆಯುತ್ತಿರುವುದು ರೈತ ವಿರೋದಿ ದೋರಣೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ರೈತರು ರಾಗಿ ತರಬೇಕಾದರೆ ಚೀಲದಿಂದ ಎಲ್ಲಾವೂ ರೈತರೇ ವ್ಯವಸ್ಥೆ ಮಾಡಿಕೊಳ್ಳಬೇಕು ಆದರೆ ದಲ್ಲಾಳರು ತರುವ ರಾಗಿಗೆ ಯಾವುದೇ ಚೀಲ ಬೇಡ ಅಧಿಕಾರಿಗಳೇ ನೇರವಾಗಿ 100 ಕ್ವಿಂಟಾಲ್ ಒಂದೇ ದಿನದಲ್ಲಿ ಖರೀದಿ ಮಾಡಿಕೊಂಡು ಬೆಂಬಲ ಬೆಲೆಯ ಹಣವನ್ನು ದಲ್ಲಾಳರು ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಾರೆಂದ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು .
ಕೆಲವು ರಾಗಿ ಖರೀದಿ ದಲ್ಲಾಳರು ದೊಡ್ಡ ರೈತರಿಂದ ರಾಗಿಯನ್ನು ಕಡಿಮೆ ಬೆಲೆಗೆ  ಖರೀದಿ ಮಾಡಿ ಸಣ್ಣರೈತರ ಹೆಸರಿನಲ್ಲಿ ನಕಲಿ ದಾಖೆಲಗಳನ್ನು ಸೃಷ್ಠಿ ಮಾಡಿ ಸರ್ಕಾರದ ಬೆಂಬಲ ಬೆಲೆ ಯನ್ನು ರೈತರ ಹೆಸರಿನಲ್ಲಿ ಲೂಟಿ ಮಾಡಲು ವ್ಯಾಪಾರಸ್ಥರಿಗೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪ ಮಾಡಿದರು.

ವಂಚನೆ ಹೇಗೆಂದರೆ:


ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಬೇಕಾದರೆ ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ಎಪ್.ಐ.ಡಿ ಮಾಡಿಸುವುದು ಕಡ್ಡಾಯ ಎಪ್.ಐ.ಡಿ ಸೃಷ್ಠಿಗೆ ಜಮೀನಿನ ಪಹಣಿ ಆದಾರ್ ಬ್ಯಾಂಕ್ ಪಾಸ್ ಬುಕ್ ಮಾಹಿತಿ ಅಗತ್ಯವಾಗಿದೆ ಈ ಎಲ್ಲಾ ದಾಖೆಲಗಳನ್ನೇ ಬಳಸಿಕೊಂಡು ಸೈಬರ್ ಸೆಂಟರ್ ಸಾಮಾನ್ಯ ಸೇವಾ ಸಿಬ್ಬಂದಿ ಅಮಾಯಕ ರೈತರ ಹೆಸರಿನಲ್ಲಿ ಎಪ್.ಐ.ಡಿ ಸೃಷ್ಠಿಸುತ್ತಿದ್ದಾರೆ . ಬಳಿಕ ಎಪ್.ಐ.ಡಿ ಗೆ ರೈತರ ಬದಲು ವ್ಯಾಪಾರಿಗಳ ಬ್ಯಾಂಕ್ ಖಾತೆ ನಂಬರ್ ನಮೂದಿಸಿ ರಾಗಿ ಮಾರಿದ ಹಣ ಅವರ ಖಾತೆಗೆ ಹೋಗುವಂತೆ ನೋಡಿಕೊಳ್ಳುತ್ತಾರೆ. ಈಗಾಗಿ ಸಣ್ಣ ರೈತರು ತಾವು ಬೆಳೆದ ರಾಗಿ ಬೆಂಬಲ ಬೆಲೆ ಮಾರಾಟಕ್ಕೆ ಹೋಗುವ ವೇಳೆಗೆ ಅವರ ಹೆಸರಿನಲ್ಲಿ ಖರೀದಿ ದಾಖೆಲೆಗಳು ಸೃಷ್ಠಿಯಾಗಿ ವಂಚನೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ ಮಾತನಾಡಿ ಆಕ್ರಮ ರಾಗಿ ಖರೀದಿಗೆ ಅಧಿಕಾರಿಗಳೇ ಸಾಥ್; ಎಪ್.ಐ.ಡಿ ಸೃಷ್ಠಿಯವೇಳೆ ಸಣ್ಣ ವ್ಯತ್ಯಾಸವಿದ್ದರೂ ಅಧಿಕಾರಿಗಳ ಲಾಗಿನ್‍ಗೆ ಬಂದಾಗ ಒಪ್ಪುವುದಿಲ್ಲ ಆದರೆ ಸೈಬರ್ ಸೆಂಟರ್ ಸಾಮಾನ್ಯ ಸೇವಾ ಕೇಂದ್ರ ಸೃಷ್ಠಿಸಿದ ಎಪ್.ಐ.ಡಿಗಳಿಗೆ ಕೃಷಿ ತೋಟಗಾರಿಕೆ ಕಂದಾಯ ಮತ್ತಿತರ ಇಲಾಖೆಗಳ ಕೆಳಹಂತದ ಅಧಿಕಾರಿಗಳ ನೆರವಿಲ್ಲದೆ ಯಾರದೋ ಹೆಸರಿನ ಪಹಣಿಗೆ ಇನ್ನಾರದೋ ದಾಖಲೆ ನೊಂದಾಯಿಸಲು ಹೇಗೆ ಅವಕಾಶ ನೀಡಲಾಗುತ್ತದೆ ರೈತರ ದುಡಿಮೆ ಹಣವೇ ಅಧಿಕಾರಿಗಳಿಗೆ ಬೇಕಾ ಎಂದು ಕಿಡಿ ಕಾರಿದರು.

ಟೋಕನ್ ಪಡೆಯದಿದ್ದರೆ ರೈತರ ರಾಗಿ ಖರೀದಿ ಇಲ್ಲ ಸರ್ಕಾರದ ಬೆಂಬಲ ಬೆಲೆ ಪಡೆಯಬೇಕಾದರೆ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟಕ್ಕೂ ಮುಂಚೆ ರೈತರಿಗೆ 3-4 ವಾರದ ಮೊದಲೇ ಟೋಕನ್ ಕೊಡಲಾಗುತ್ತದೆ. ಟೋಕನ್ ನೀಡುವ ಪ್ರಕ್ರಿಯೆ ನಿಲ್ಲಿಸಿದ ಕೆಲ ಹಿರಿತನದ ಆಧಾರದಲ್ಲಿ ರಾಗಿ ಸರಬರಾಜು ಮಾಡಬೇಕಾಗುತ್ತದೆ. ಆದರೆ ರೈತರು ತರುವ ರಾಗಿಗೆ ಇಷ್ಟೇ ಖರೀದಿ ಎಂದು ನಿಯಮ ನಿಗದಿ ಮಾಡುವ ಅಧಿಕಾರಿಗಳು ರೈತರ ಹೆಸರಿನಲ್ಲಿ ರಾಗಿ ದಲ್ಲಾಳರು ಮಿತಿಯಿಲ್ಲದ ನೂರಾರು ಕ್ವಿಂಟಾಂಲ್ ರಾಗಿಯನ್ನು ಯಾವ ಆಧಾರದ ಮೇಲೆ ಖರೀದಿ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದರು.
ಜಿಲ್ಲಾದ್ಯಾಂತ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ದಲ್ಲಾಳರ ವಂಚನೆ ನಿಲ್ಲಬೇಕು ಜೊತೆಗೆ ದಲ್ಲಾಳರು ನೀಡಿರುವ ರೈತರ ಹೆಸರಿನ ದಾಖಲೆಗಳನ್ನು ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಿ ರೈತರ ಬೆವರ ಹನಿಯ ಬೆಂಬಲ ಬೆಲೆ ರೈತರಿಗೆ ಸಿಗಬೇಕು ಇಲ್ಲವಾದರೆ ರಾಗಿ ಖರೀದಿ ಕೇಂದ್ರಗಳ ಹಗಲು ದರೋಡೆ ಬಗ್ಗೆ ದಾಖಲೆಗಳ ಸಮೇತ ಲೋಕಾಯುಕ್ತ ದೂರು ನೀಡಿ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ವ್ಯವಸ್ಥಾಪಕರು ರಾಗಿ ಖರೀದಿಯಲ್ಲಿ ಅವ್ಯವಸ್ಥೆ ಇರುವುದು ನಿಜ ರೈತರ ಹೆಸರಿನಲ್ಲಿ ದಲ್ಲಾಳರು ದಾಖಲೆಗಳನ್ನು ನೀಡಿ ರಾಗಿಯನ್ನು ತರುತ್ತಿದ್ದಾರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಸುನಿಲ್‍ಕುಮಾರ್, ವಿಶ್ವ, ವಿಜಯ್‍ಪಾಲ್, ಅಂಬ್ಲಿಕಲ್ ಮಂಜುನಾಥ, ಯಾರಂಘಟ್ಟ ಗಿರೀಶ್, ಪದ್ಮಘಟ್ಟ ಧರ್ಮ, ಜುಬೇರ್‍ಪಾಷ, ಆದಿಲ್‍ಪಾಷ, ವೇಣು, ಹೆಬ್ಬಣ್ಣಿ ಆನಂದರೆಡ್ಡಿ ಸುಪ್ರಿಂ ಚಲ, ರಂಜಿತ್, ಸುರೇಶ್, ಗೋಪಿ, ಹರಿ, ಗುರುಮೂರ್ತಿ ಸಂದಿಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಮುಂತಾದವರು ಇದ್ದರು.

ಈಚೆಗೆ ನಿಧನರಾದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ ಗೌರವಾರ್ಥ ಪುಷ್ಪಾಂಜಲಿ ಕಾರ್ಯಕ್ರಮದದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಹಾಗೂ ಅನ್ನಸಂತರ್ಪಣೆ

ಶ್ರೀನಿವಾಸಪುರ: ಪಟ್ಟಣದಲ್ಲಿ ಸೋಮವಾರ, ಈಚೆಗೆ ನಿಧನರಾದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ ಅವರ ಗೌರವಾರ್ಥ ಏರ್ಪಡಿಸಿದ್ದ ಪುಷ್ಪಾಂಜಲಿ ಕಾರ್ಯಕ್ರಮದದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.
ಪುರಸಭೆ ಕಚೇರಿ ಸಮೀಪ ಎಂಜಿ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಮೇಲೆ ಇಡಲಾಗಿದ್ದ ದಿವಂಗತ ವಿಜಯಮ್ಮ ಅವರ ಭಾವಚಿತ್ರಕ್ಕೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಪುಷ್ಪಾಂಜಲಿ ಅರ್ಪಿಸಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಮಾನಿ ಬಳಗದ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಇಂದ್ರಾಭವನ್ ವೃತ್ತ, ಸರ್ಕಾರಿ ಬಸ್ ನಿಲ್ದಾಣ ಹಾಗೂ ತಾಲ್ಲೂಕು ಕಚೇರಿ ಸಮೀಪ ಅನ್ನದಾನ ಮಾಡಲಾಯಿತು.
ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭಾಧ್ಯಕ್ಷೆ ಎನ್.ಎಂ.ಲಲಿತಾ ಶ್ರೀನಿವಾಸ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥರೆಡ್ಡಿ, ಕೃಷ್ಣಾರೆಡ್ಡಿ, ಹರೀಶ್ ಯಾದವ್, ವೇಣು, ಹೇಮಂತ್, ನರಸಿಂಹ ಇದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ – ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟನೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ಹೊಸೂರು ಶ್ರೀ ಮೂಕಾಂಬಿಕಾ ಪ್ರೌಢ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟಿಸಲಾಯಿತು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ರೆಡ್ ಕ್ರಾಸ್, ರಕ್ತ ನಿಧಿ ಕೇಂದ್ರ ಮತ್ತು ಜನ ಔಷಧಿ ಕೇಂದ್ರದ ಬಗ್ಗೆ ವಿವರಣೆ ನೀಡಿದರು. ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಬಗ್ವಾಡಿ ಮೆತ್ತಿನ ಮನೆ ಡಾ. ದಿನಕರ ಶೆಟ್ಟಿ ದಂಪತಿಗಳು ಕೊಡಮಾಡಿದ ರೂಪಾಯಿ ಒಂದು ಲಕ್ಷ (50,000/- ಶಾಲಾ ಲೈಬ್ರರಿ ಗಾಗಿ) ಅಲ್ಲದೇ ಹತ್ತು ಮಂದಿ ಬಡ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ಸ್ಕೋಲರ್ ಶಿಪ್ ನೀಡಲಾಯಿತು. ಪ್ರಾಂಶುಪಾಲರಾದ ಚಂದ್ರ ಶೆಟ್ಟಿ ಯವರು ಎಲ್ಲರನ್ನೂ ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಸಂಯೋಜಕ ರಾದ ದಿನಕರ ಆರ್ ಶೆಟ್ಟಿ ಯವರು ವಿದ್ಯಾರ್ಥಿಗಳಿಗೆ ಪ್ರತಿಜ್ನಾವಿಧಿ ಬೋದಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ದೇವಾಡಿಗ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀಮತಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀ ವೇಣುಗೋಪಾಲ ಶೆಟ್ಟಿ ವಂದನಾರ್ಪಣೆ ಗೈದರು.