ಪತ್ರಕರ್ತರು ಸ್ವಾಭಿಮಾನ , ನಿರ್ದಾಕ್ಷಿಣ್ಯ ಮನೋಭಾವ ಉಳಿಸಿಕೊಂಡು ವೃತ್ತಿಗೌರವ ಬೆಳೆಸಿಕೊಳ್ಳಬೇಕು – ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ. ಗೋಪಿನಾಥ್ 

ಕೋಲಾರ : ಪತ್ರಕರ್ತರು ಸ್ವಾಭಿಮಾನ ಮತ್ತು ನಿರ್ದಾಕ್ಷಿಣ್ಯ ಮನೋಭಾವ ಉಳಿಸಿ ಕೊಂಡು ವೃತ್ತಿ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ , ಇಂದಿನ ಬಹುತೇಕ ಪತ್ರಕರ್ತರಲ್ಲಿ ಈ ಎರಡೂ ಗುಣಗಳ ಕೊರತೆ ಕಂಡುಬರುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದಿಸಿದರು.

ಕೆ ಯು ಡಬ್ಲ್ಯೂ ಜೆ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ್ ಅವರನ್ನು ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಅಭಿನಂದಿಸಿ ಅವರು ಮಾತನಾಡಿದರು. ವೃತ್ತಿಯಲ್ಲಿ ಹಮ್ಮುಬಿಮ್ಮು ಇಲ್ಲದೆ ಸ್ವಾಭಿಮಾನ ಹಾಗೂ ನಿರ್ದಾಕ್ಷಿಣ್ಯ ಮನೋ ಭಾವ ಉಳಿಸಿಕೊಂಡಿದ್ದ ಎಂ.ಜಿ. ಪ್ರಭಾಕರ್ ಅವರ ಹೊನ್ನುಡಿ ಪತ್ರಿಕೆಯ ಕಚೇರಿಯು 90 ರ ದಶಕದಲ್ಲಿ ಕೋಲಾರ ಜಿಲ್ಲೆಯ ಸಾಮಾಜಿಕ ಹೋರಾಟಗಳ ವೇದಿಕೆ ಇದ್ದಂತೆ ಕಾರ್ಯನಿರ್ವಹಿಸುತ್ತಿತ್ತು .

ಜಿಲ್ಲೆಯ ಹೋರಾಟಗಳ ಕುರಿತು ಪ್ರಮುಖ ನಿರ್ಧಾರ ಗಳನ್ನು ಹೊನ್ನುಡಿ ಕಚೇರಿಯಲ್ಲಿಯೇ ಕೈಗೊಳ್ಳಲಾಗುತ್ತಿತ್ತು. ಎಂ.ಜಿ.ಪ್ರಭಾಕರ್ ಅವರು ಸಾಮಾಜಿಕ , ಕಾರ್ಮಿಕ , ಹಾಗೂ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿ ವಹಿಸುತಿದ್ದರು ಎಂದು ನೆನಪಿಸಿಕೊಂಡರು. 

ಕೆ ಯು ಡಬ್ಲ್ಯೂ ಜೆ  ಖಜಾಂಚಿ ಎಂ. ವಾಸುದೇವ ಹೊಳ್ಳ ಮಾತನಾಡಿ , ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ ಎಂ.ಜಿ. ಪ್ರಭಾಕರ್. ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಹೇಳಿದರು. ಬೆಂಗಳೂರಿನಲ್ಲಿ ರಾಜ್ಯ ಸಂಘದ ಭವನ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ . 5 ಕೋಟಿ ಹಣ ಬಿಡುಗಡೆಯಾಗಿದ್ದು , 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು. 

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ , ಪತಕರ್ತರಿ ಹೊನ್ನುಡಿ ಪತ್ರಿಕೆ ಕಾಲೇಜು ಇದ್ದಂತೆ . ಮನಸ್ಸು ಮಾಡಿದ್ದರೆ ಎಂ.ಜಿ.ಪ್ರಭಾಕರ್ ಅವರು ಮಂತ್ರಿ ಆಗಬಹುದಿತ್ತು.  ಅಷ್ಟು ಪ್ರಭಾವಿ ಪತ್ರಕರ್ತ. ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುವ ಪತ್ರಕರ್ತ , ಕನ್ನಡದ ಹೋರಾಟದಲ್ಲೂ ಮುಂಚೂಣಿಯಲ್ಲಿ ನಿಂತರು. ಕರ್ನಾಟಕ ರಾಜ್ಯೋತ್ಸವವನ್ನು ಮಿನಿ ದಸರೆಯಾಗಿ ರೂಪಿಸಿದವರು ಎಂ.ಜಿ.ಪ್ರಭಾಕರ್ ಎಂದು ಬಣ್ಣಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ ವಿ.ಮುನಿರಾಜು ಮಾತನಾಡಿ ,ಎಂ.ಜಿ. ಪ್ರಭಾಕರ್ ಅವರ ಹೋರಾಟದ ಫಲವಾಗಿ ಕೋಲಾರಕ್ಕೆ ರೈಲು ಮಾರ್ಗ ಉಳಿದಿದೆ. ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರು. ಹಲವರಿಗೆ ಮಾರ್ಗ ಹಾಕಿಕೊಟ್ಟಿದ್ದಾರೆ. ಎಂ.ಜಿ. ಪ್ರಭಾಕರ್ ಅವರ ಮಾತಿಗೆ ಜಿಲ್ಲಾಡಳಿತ ನಡುಗುತಿತ್ತು. ಎಷ್ಟು ಸನ್ಮಾನ ಮಾಡಿದರೂ ಸಾಲದು ಎಂದರು. 

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ , ಧೈರ್ಯ ನೀಡುವವರೇ ಮುಂದಿನ ನಾಯಕರು. ಅಂಥವರಲ್ಲಿ ಎಂ.ಜಿ. ಪ್ರಭಾಕರ್ ಕೂಡ ಒಬ್ಬರು . ಅವರು ಎಲ್ಲಾ ಪತ್ರಕರ್ತರಿಗೆ ಮಾದರಿ ಎಂದರು. ಪತ್ರಕರ್ತ ಪ್ರಕಾಶ್ ( ಮಾಮಿ ) , ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ್ , ಎಸ್.ಚಂದ್ರಶೇಖರ್ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಪ್ರಭಾಕರ್ , ನನಗೆ ಸರ್ವಸ್ವ ಪತ್ರಿಕಾ ವೃತ್ತಿ . ಬೇರೊಂದು ಕೆಲಸ ಗೊತ್ತಿಲ್ಲ . ಪತ್ರಿಕೆ ಬೆಳೆಸಲು ನಾನೊಬ್ಬನೇ ಕಾರಣ ಅಲ್ಲ . ಹಲವಾರು ಮಂದಿ ಸೇರಿ ಕಟ್ಟಿದ ಪತ್ರಿಕೆ . ಈ ಪ್ರಶಸ್ತಿ ಎಲ್ಲರಿಗೂ ಸೇರಬೇಕು ಎಂದರು. 

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎನ್.ಮುನಿವೆಂಕಟೇಗೌಡ , ಓಂಕಾರಮೂರ್ತಿ , ಕೆ.ಆಸೀಫ್ ಪಾಷ , ಸಂದಕುಮಾರ್‌ , ಎನ್.ಶಿವಕುಮಾರ್ , ಎನ್ . ಗಂಗಾಧರ್ , ಎಂ.ಲಕ್ಷ್ಮಣ , ಎನ್.ಸತೀಶ್ , ಬಾಲನ್ , ಬೆಟ್ಟಣ್ಣ , ಪವನ್ , ಅಮರ್ , ಕಿತ್ತಂಡೂರು ವೆಂಕಟರಾಮ್ , ಪುರು ಷೋತ್ತಮ್ , ಜೆ.ಅಂಬರೀಶ್ , ಎಂ . ವಿನೋದ್ , ಮುಕ್ತಿಯಾರ್ ಅಹಮದ್ , ಸರ್ವಜ್ಞಮೂರ್ತಿ , ಶ್ರೀಹರಿ , ಶ್ರೀಕಾಂತ್ , ಶಿವುಸಸ್ಯ , ಪ್ರಕಾಶ್ ಉಪಸ್ಥಿತರಿದ್ದರು.

ಕುಂದಾಪುರ :ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕುಂದಾಪುರ : ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಯಾ ಪ್ರಯುಕ್ತ ಮಹಿಳಾ ಸಮಾನತೆ ಯಾ ಬಗ್ಗೆ ಬೀದಿ ನಾಟಕ ಹಾಗು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ ರ್ಯಾಲಿಯನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ತಾಲೂಕು ಪಂಚಾಯತ್ ಎದುರುಗಡೆ ಪುರಸಭೆ ಅಧ್ಯಕ್ಷ ರಾದ ವೀಣಾ ಭಾಸ್ಕರ್ ಉದ್ಘಾಟನೆ ನೆರೆವೇರಿಸಿ ಮಹಿಳೆಯರು ಇಂದು ಎಲ್ಲ ಕ್ಷೇತ್ರ ದಲ್ಲಿ ತೊಡಗಿಸಿಕೊಂಡು ತನ್ನ ಕಾರ್ಯ ವ್ಯಾಪಿ ಯನ್ನು ಪುರುಷ ರಿಗೆ ಸಮಾನವಾಗಿ ಕೆಲಸ ಮಾಡಿ ಕೊಂಡು ಬರ್ತಾ ಇದೆ. ಮಹಿಳೆಯರು ಶಿಕ್ಷಣ ರಾಜಕೀಯ ಸಮಾಜ ಸೇವೆ ಉದ್ಯೋಗ ಸಾಂಸ್ಕೃತಿಕ ಹಾಗು ಇನ್ನಿತರ ಕಾರ್ಯಕ್ರಮ ದಲ್ಲಿ ತೊಡಗಿಸಿ ಕೊಂಡಿದೆ ಎಂದು ಮಾತನಾಡಿದರು

ಮುಖ್ಯ ಅತಿಥಿಯಾಗಿ ವಲಯ 15 ರ ಲೇಡಿ ಜೇಸಿಸ್ ನ ನಿರ್ದೇಶಕ ರಾದ ಸುಮನಾ ಪೊಳಲಿ ಮಾತನಾಡಿ ಜೆಸಿಐ ಕುಂದಾಪುರ ಸಿಟಿ ಸುಮಾರು 17 ವರ್ಷ ಗಳಿಂದ ಈ ಭಾಗದಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಿದ ವಲಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಕೊಂಡ ಸಂಸ್ಥೆ
ಕರೋನ ಸಂದರ್ಭದಲ್ಲಿ ಕಳೆದ ಎರಡು ವರ್ಷ ದಲ್ಲಿ 15 ಸಾವಿರ ಜನರಿಗೆ ಹಸಿದವರಿಗೆ ಊಟ 500 ಮನೆಗೆ ಕಿಟ್ ವಿತರಣೆ ಸುಮಾರು 7 ಸಾವಿರ ಜನರಿಗೆ ಮಾಸ್ಕ್ ನೀಡಿ ಜನ ಮನ್ನಣೆ ಪಡೆದ ಸಂಸ್ಥೆ ಅಗಿದೆ ಎಂದು ನುಡಿದರು
ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು
ಸಮಾರಂಭ ದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಸಾದ್ ಮನೀಶ್ ಆಸ್ಪತ್ರೆ ಯಾ ನಿರ್ದೇಶಕರು ಡಾ ಪ್ರಮೀಳಾ ನಾಯಕ್ ಡಾ ವಿಜಯ ಲಕ್ಷ್ಮಿ ಡಾ ಅಮ್ಮಾಜಿ ಡಾ ಸ್ವಾತಿ ಶೇಟ್ ಭಾರತೀಯ ಜೇಸಿಸ್ ನ ರಾಷ್ಟ್ರೀಯ ಸಂಯೋಜಕರಾದ ಕೆ ಕಾರ್ತಿಕೇಯ ಮಧ್ಯಸ್ಥ ವಲಯ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕುಂದಾಪುರ ಸಿಟಿ ಯಾ
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ
ವಿಜಯ ಭಂಡಾರಿ ಮಂಜುನಾಥ್ ಕಾಮತ್ ನಾಗೇಶ್ ನಾವಡ ಜಯಚಂದ್ರ ಶೆಟ್ಟಿ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಕುಲಾಲ್ ಗಿರೀಶ್ ಹೆಬ್ಬಾರ್ ಶ್ರೀಧರ್ ಸುವರ್ಣ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಜೊತೆ ಕಾರ್ಯದರ್ಶಿ ಶೈಲಾ ಸದ್ಯಸ್ಯರಾದ ದಿನೇಶ್ ಪುತ್ರನ್ ರೇಷ್ಮ ಕೋಟ್ಯಾನ್ ಸುವರ್ಣ ಅಲ್ಮೆಡ ವಿಠಲ್ ಹೆಬ್ಬಾರ್ ಸರೋಜಾ ಲೋನಾ ಕಲ್ಪನಾ ಭಾಸ್ಕರ್ ಸೌರಬಿ ಪೈ ಮೇಬಲ್ ಡಿ ಸೋಜಾ ಡಾ ಸವಿತಾ ಆಚಾರ್ ಐರಿ ಡಿ ಸೋಜಾ ಸ್ವಪ್ನ ಇರೆನ ಬೇರಟೊ ಯುವ ಜೇಸಿ ಛೇರ್ಮನ್ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು
ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ವಂದಿಸಿದರು

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ

ಮಂಗಳೂರು: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ ಹಾಗೂ ಆಶೀರ್ವಚನ 06-03-2023 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಜರುಗಿತು. ಉದ್ಘಾಟನೆಯನ್ನು ಹಿರಿಯ ಮಾಜಿ ಅಧ್ಯಕ್ಷರಾದ ಶ್ರೀ. ಕಾಸ್ಮಿರ್ ಮಿನೇಜಸ್ ನೆರವೇರಿಸಿದರು. ಆಶೀರ್ವಚನವನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಅಧ್ಯಾತ್ಮಿಕ ನಿರ್ದೇಶಕರಾದ ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ ಅವರು ಕಛೇರಿಯ ಆಶೀರ್ವಚನಗೊಳಿಸಿ, ಪ್ರಾರ್ಥನೆ ಸಲ್ಲಿಸಿದರು.
ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೋ ಪ್ರಸ್ತಾವಿಕ ಭಾಷಣದಲ್ಲಿ ಕಥೊಲಿಕ್ ಸಭಾ ಕಚೇರಿಯ ಅವಶ್ಯಕತೆಯ ಬಗ್ಗೆ ವಿವರವನ್ನು ನೀಡಿ ಎಲ್ಲರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಕಾಸ್ಮಿರ್ ಮಿನೇಜಸ್‍ರವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ತಮ್ಮ ನುಡಿಯಲ್ಲಿ ಶ್ರೀ ಕಾಸ್ಮಿರ್ ಮಿನೇಜಸ್ ಕ್ಯಾಥೋಲಿಕ್ ಸಭಾದ ಪ್ರಾರಂಭಿಕ ದಿನಗಳ ಹೋರಾಟಗಳು ಮತ್ತು ತೊಂದರೆಗಳ ಬಗ್ಗೆ ನೆನಪಿಸಿದರು ಹಾಗೂ ನಮ್ಮ ಸಮುದಾಯವನ್ನು ಬಳಿಷ್ಟಗೊಳಿಸಲು ಕರೆ ನೀಡಿದರು.
ಶ್ರೀ ಮರಿಟ್ಟೊ ಸಿಕ್ವೇರಾರವರು ಕಛೇರಿಯ ನವೀಕರಣಗೊಳಿಸಿದ್ದಕ್ಕೆ ಅಧ್ಯಕ್ಷರನ್ನು ಅಭಿನಂದಿಸಿದರು ಮತ್ತು ಅವರ ಸಾಮಥ್ರ್ಯ ಮತ್ತು ಕಾರ್ಯವನ್ನು ಶ್ಲಾಘಿಸಿದರು. ಹಾಗೆಯೇ ಅವರು ಬಿಷಪ್ ಹೌಸ್‍ನಲ್ಲಿ ಹೇಗೆ ಕಚೇರಿಯನ್ನು ಪಡೆದರು ಎಂಬುದನ್ನು ನೆನಪಿಸಿಕೊಂಡರು, ನಮ್ಮ ಸಮುದಾಯದ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಹಿಂದಿನ ಎಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಂದು ಮಾದರಿಯಾಗಬೇಕಾಗಿ ಪ್ರೇರೇಪಿಸಿದರು.
ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ, ತಮ್ಮ ಭಾಷಣದಲ್ಲಿ ನಮ್ಮ ಸಮುದಾಯದ ಯೋಗ ಕ್ಷೇಮಕ್ಕಾಗಿ ಕ್ಯಾಥೋಲಿಕ್ ಸಭೆಯು ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಒಟ್ಟಾಗಿ ಕೆಲಸ ಮಾಡಿ ನಮ್ಮ ಸಮುದಾಯವನ್ನು ಬಲಿಷ್ಟಪಡಿಸಲು ಕರೆ ಕೊಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ಆದ ವಂದನೀಯ.ಫಾ| ಮ್ಯಾಕ್ಸಿಮ್ ರೊಸಾರಿಯೊ, ಹಿಂದಿನ ಆಧ್ಯಾತ್ಮಿಕ ನಿರ್ದೇಶಕರಾದ ಫಾ|ವಾಲ್ಟರ್‍ಡಿಮೆಲ್ಲೊ ಹಾಗೂ ಫಾ|.ಜೆ.ಬಿ.ಕ್ರಾಸ್ತಾ, ಆಮ್ಚೊ ಸಂದೇಶ್ ಆಡಳಿತ ಮಂಡಳಿಯ ಸಂಚಾಲಕರಾದ ಎಲ್ರೊಯ್ ಕಿರಣ್ ಕ್ರಾಸ್ಟೊ, ಸಮನ್ವಯ ಸಮಿತಿ ಸಂಚಾಲಕರಾದ ಶ್ರೀ ನೈಜಿಲ್ ಪಿರೇರಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀ.ಎಲ್.ಜೆ. ಫೆನಾರ್ಂಡಿಸ್, ವಾಲ್ಟರ್‍ಡಿಸೋಜಾ, ಆಂಡ್ರ್ಯೂ ನೊರೊನ್ಹಾ, ಪೀಟರ್ ಜೆರಿ ರೋಡ್ರಿಗಸ್, ಫ್ಲೇವಿ ಡಿಸೋಜಾ, ಸಮನ್ವಯ ಸಮಿತಿ ಸಹ- ಸಂಚಾಲಕರಾದ ಶ್ರೀ ವಲೇರಿಯನ್ ಫೆರ್ನಾಂಡಿಸ್ ಮತ್ತು ಕೇಂದ್ರ, ವಲಯ ಮತ್ತು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಕಥೊಲಿಕ್ ಸಭಾ ಕಛೇರಿಯ ನವೀಕರಣ ಕಾರ್ಯಕ್ಕೆ ಸಹಕರಿಸಿದವರಿಗೆ ಪುಷ್ಪಗುಚ್ಛಗಳನ್ನು ನೀಡಿ ಗೌರವಿಸಲಾಯಿತು
ಶ್ರೀ ಎಲ್ರೋಯ್ ಕಿರಣ್ ಕ್ರಾಸ್ಟೊ ವಂದಿಸಿದರು. ಕೋಶಾಧಿಕಾರಿ ಅಲ್ಫೋನ್ಸ್ ಫೆನಾರ್ಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಭಾರತೀಯ ರೆಡ್ ಕ್ರಾಸ್ : ಜನ ಔಷಧಿ ದಿವಸದ ಆಚರಣೆಯ ಕೊನೆಯ ದಿನ ಜನ ಔಷಧಿ ಕೇಂದ್ರದ ಎದುರು ಮಾತ್ರ್ ಶಕ್ತಿ ಅಭಿಯಾನ ಕಾರ್ಯಕ್ರಮ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯಿಂದ ಜನ ಔಷಧಿ ದಿವಸದ ಕೊನೆಯ ದಿನದಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದ ಎದುರು ಮಾತ್ರ್ ಶಕ್ತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿ ಗಳಾಗಿ ಲಯನ್ ಪಿ.ಡಿ.ಜಿ. – ವಿ. ಜಿ ಶೆಟ್ಟಿ (ರೆಡ್ ಕ್ರಾಸ್ ರಾಜ್ಯ ಶಾಖೆಯ ಸಮಿತಿ ಸದಸ್ಯರು ಕೂಡಾ) ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ರೆಡ್ ಕ್ರಾಸ್ ಕುಂದಾಪುರ ಶಾಖೆಯ ಕಾರ್ಯ ವೈಖರಿಯನ್ನು ಕೊಂಡಾಡಿದರು. 25 ಜನ ಮಹಿಳೆಯರನ್ನು ಸನ್ಮಾನಿಸಲಾಯಿತು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಮಿತಿಯ ಸದಸ್ಯರುಗಳಾದ ಶಿವರಾಮ ಶೆಟ್ಟಿ (ಖಜಾಂಚಿ) ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಸದಾನಂದ ಶೆಟ್ಟಿ, ಅಬ್ದುಲ್ ಬಶೀರ್, ದಿನಕರ ಅರ್ ಶೆಟ್ಟಿ, ಸುಧಾಕರ ಶೆಟ್ಟಿ ಹುಂತ್ರಿಕೆ ಮತ್ತು ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.

ಬಸ್ರೂರು : ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ


ಕುಂದಾಪುರ: ಪುಸ್ತಕಗಳನ್ನು ಓದುವುದರಿಂದ ಆತ್ಮವಿಶ್ವಾಸ, ಏಕಾಗ್ರತೆ, ಶಿಸ್ತು, ಸೃಜನಶೀಲತೆ ಹೆಚ್ಚುತ್ತದೆ. ಪುಸ್ತುಕಗಳು ಜ್ಞಾನ ಭಂಡಾರವಿದ್ದಂತೆ. ಪುಸ್ತಕಗಳ ಅಧ್ಯಯನದಿಂದ ಜ್ಞಾನವೃದ್ಧಿಯಾಗುವ ಮೂಲಕ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಮುತ್ತಯ್ಯ ಶೆಟ್ಟಿ ಹೇಳಿದರು.
ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಲಾದ ಪುಸ್ತಕಗಳನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಕೆಆರ್ ಎಸ್ ಎಂಇ ಟ್ರಸ್ಟ್ ನ ಅಬ್ದುಲ್ ಜುನೈದ್, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರ : ಚಿಕ್ಕನಸಾಲು ರಸ್ತೆ ಕಾಂಕ್ರೀಟುಕರಣಗೊಂಡು 14 ವರ್ಷಗಳಾದರೂ ರಸ್ತೆ ಪಕ್ಕಗಳಲ್ಲಿ ಇಂಟರ್‍ಲಾಕ್ ಅಳವಡಿಕೆಯಾಗಿಲ್ಲ – ಈ ಭಾಗದ ಜನರು ಅಷ್ಟೂ ನತದ್ರಷ್ಟರೆ?


ಕುಂದಾಪುರ,ಮಾ.7: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಎರಡು ಮುಖ್ಯ ರಸ್ತೆಗಳನ್ನು ಬಿಟ್ಟರೆ, ನಂತರ ಅತ್ಯಂತ ಜನಸಂಚಾರ ಬಾಹನ ಸಂಚಾರ ಇರುವುದು ಚಿಕ್ಕನಸಾಲು ರಸ್ತೆಯಲ್ಲಿರುವುದು. ಆದರೆ ಈ ರಸ್ತೆಯ ಸ್ಥಿತಿ ನೋಡಿದರೆ ಬಹಳ ಚಿಂತಾಜನಕ. ಈ ರಸ್ತೆ ಕಾಂಕ್ರೀಟುಕರಣವಾಗಿ ಸುಮಾರು 14 ವರ್ಷಗಳಾದರೂ, ಇನ್ನೂ ಕೂಡ ಚಿಕ್ಕನಸಾಲು ರಸ್ತೆಯುದ್ದಕ್ಕೂ ಪಾದಚಾರಿಗಳಿಗಾಗಿ ಇರುವ ರಸ್ತೆ ಪಕ್ಕಗಳಲ್ಲಿ ಇಂಟರ್‍ಲಾಕ್‍ಗಳನ್ನು ಪೂರ್ತಿಯಾಗಿ ಹಾಕದೆ, ಪಾದಚಾರಿಗಳಿಗೆ, ಸ್ಥಳೀಯರಿಗೆ, ವಾಕಿಂಗ್ ಮಾಡುವರಿಗೆ ತುಂಬ ಅನಾನುಕೂಲವಾಗಿದೆ.
ಈ ವಾರ್ಡುಗಳ ಚುನಾಯಿತ ಪುರಸಭಾ ಸದಸ್ಯರು ಕಣ್ಣುಗಳು ಇದ್ದು ಕುರುಡರಂತೆ ಇದ್ದಾರೆ. ಪುರಸಭಾ ಅಧಿಕಾರಿಗಳು ಕೂಡ ಗಮನ ಹರಿಸದೆ ದಿವ್ಯ ನಿರ್ಲಕ್ಷ ಮಾಡಿದ್ದಾರೆ. ಈ ರಸ್ತೆಯ ಒಂದು ಪಕ್ಕದಲ್ಲಿ ಪೈಪ್ ಲೈನ್ ಕಾಮಾಗಾರಿಕೆಗಾಗಿ ರಸ್ತೆ ಅಗೆದು, ಪೈಪ್ ಲೈನ್ ಮುಗಿಸಿ ಎಷ್ಟೊ ವರ್ಷಗಳಾಗಿವೆ. ಅಂದು ಪೈಪ್ ಲೈನ್ ಕಾಮಾಗಾರಿಯವರು ಕಾಮಗಾರಿಗೆಗಾಗಿ ರಸ್ತೆ ಪಕ್ಕಗಳಲ್ಲಿ ಅಗೆದಾಗ, ಮಣ್ಣಿನ ಜೊತೆ ಕೆಳಗಡೆ ಇದ್ದ ದೊಡ್ಡ ದೊಡ್ಡ ಶಿಲೆಕಲ್ಲುಗಳು ಮೇಲೆಕ್ಕೆ ಹಾಕಿದರು, ಕಾಮಾಗಾರಿಕೆ ಮುಗಿದಾಗ, ಕಾಮಾಗಾರಿಯವರು ನೆಪಕ್ಕೆ ಮಾತ್ರ ಅಗೆದಲ್ಲಿ ಮಣ್ಣು ಆಚೆ ಇಚೆ ಮಾಡಿ ಮಣ್ಣು ಕಲ್ಲು ರಾಶಿ ಹಾಕಿ ಮುಚ್ಚಿದ ನಾಟಕವಾಡಿದ್ದಾರೆ, ಆ ದೊಡ್ಡ ದೊಡ್ಡ ಶಿಲೆ ಕಲ್ಲುಗಳನ್ನು ಮೇಲ್ಗಡೇಯೆ ಇದ್ದು, ಅವುಗಳು ಜನರು ನಡೆದಾಡುವ ಕಡೆಗಳಲ್ಲಿ ಇವೆ. ಅವುಗಳು ಪಾದಚಾರಿಗಳ ಕಾಲಿಗೆ ತಾಗಿ ಅವರು ಬೀಳುವ ಅಪಾಯವಿದೆ. ಇದಕ್ಕಾಗಿ ಪಾದಚಾರಿಗಳು ನಡೆಯಲು ಹೆದರಿ, ಅಸಾಧ್ಯವಾಗಿ ವಾಹನ ಸಂಚಾರ ಮಾಡುವ ಕಾಂಕ್ರೀಟು ರಸ್ತೆಯ ಮೇಲೆ ಬಂದು ನಡೆಯಬೇಕಾಗುತ್ತದೆ, ಆ ಸಂದರ್ಭದಲ್ಲಿ ವಾಹನಚಾಲಕರಿಂದ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲಾ.
ಕಾಂಕ್ರೀಟು ರಸ್ತೆಯ ಅಂಚಿನಿಂದ ಕೆಲವು ಕಡೆ ಎಷ್ಟೊ ತಗ್ಗಿದ್ದು, ಜನರು ಒಡಾಡಲು ಹರಸಾಹಸ ಪಡೆಬೇಕು, ಇದಲ್ಲದೆ ದ್ವಿ ಚಕ್ರ ವಾಹನದವರು ಕಾಂಕ್ರೀಟು ರಸ್ತೆಯಲ್ಲಿ ಮೇಲೆರುವ ಸಂದರ್ಭದಲ್ಲಿ ಸ್ಕೀಡ್ ಆಗಿ ಬಿದ್ದವರು ಎಷ್ಟೊ ಜನ ಇದ್ದಾರೆ. ಪೈಪ್ ಕಾಮಗಾರಿ ಮುಗಿಸಿದಾಗ ಕಾಮಗಾರಿ ಗುತ್ತಿಗೆ ತೆಗೆದುಕೊಂಡವರ ಹತ್ತಿರ ಅವರು ಅಗೆದ ಕಲ್ಲು ಮಣ್ಣು ಸರಿಯಾದ ರೀತಿಯಲ್ಲಿ ಪುನ ಕಲ್ಲುಗಳನ್ನು ಅಡಿ ಹಾಕಿ, ಅದರ ಮೇಲೆ ಮಣ್ಣು ಸಮಾನಂತರವಾಗಿ ಹಾಕಿಸಿಕೊಳ್ಳುವ ಹೊಣೆಗಾರಿಕೆ ಯಾರಿದು ? ಪರಸಭೆಗೆ ಸಂಬಂಧ ಪಟ್ಟಿದ್ದು ಅಲ್ಲವೆ ? ಅದಿಲ್ಲದಿದ್ದರೆ ಆರಿಸಿ ಬಂದ ಆ ವಾರ್ಡುಗಳ ಪುರಸಭಾ ಸದಸ್ಯರ ಹೊಣೆಯಲ್ಲವೇ? ಯಾವ ಹೊಣೆ ಇವರಿಗಿದೆ, ಇಷ್ಟೂ ಮಾಡಲಿಕಾಗದಿದ್ದಲ್ಲಿ, ಪುರಸಭೆಗಳಲ್ಲಿ ಸದಸ್ಯರು ಯಾಕೆ ಬೇಕು?
ನಗರದ ಎರಡು ಮುಖ್ಯ ರಸ್ತೆಗಳಲ್ಲಿ ಇಂಟ್ಲಾಕ್‍ಗಳನ್ನು ಹಾಕುವುದು, ತೆಗೆಯುವು ನಡೆಯುತ್ತಾ ಇದೆ, ಇಲ್ಲಿ ಪುರಸಭೆಯವರು ಗಮನಿಸಬೇಕು, ಈ ಮುಖ್ಯ ರಸ್ತೆಗಳಲ್ಲಿ ಇರುವ ಕಟ್ಟಡ, ಮನೆಗಳಿಗೆ ವಿಧಿಸುವ ತೆರಿಗೆ ಮತ್ತು ಚಿಕ್ಕನಸಾಲು ರಸ್ತೆಯ, ಮತ್ತು ಕುಂದಾಪುರ ಪುರಸಭೆಯ ಉಳಿದ ರಸ್ತೆಗಳಲ್ಲಿರುವ ಕಟ್ಟಡ, ಮನೆಗಳು ಕಟ್ಟುವ ತೆರಿಗೆ ಒಂದೇ ತೇರನಾಗಿದೆ, ಹಾಗಾದರೆ ಚಿಕ್ಕನಸಾಲು ಮತ್ತು ಇಅತರ್ ರಸ್ತೆಗಳಿಗೆ ಯಾಕೆ ಇಂತಹ ದಿವ್ಯ ನಿರ್ಲಕ್ಷ? ಚಿಕ್ಕಸಾಲು ರಸ್ತೆಯ ಇಂಟರ್‍ಲಾಕ್ ಕಾಮಾಗಾರಿ ಎಷ್ಟೊ ಹಂತಗಳಲ್ಲಿ ಸಾಗಿ, ಈಗ ಚಿಕ್ಕನಸಾಲು ರಸ್ತೆಯ ಕ್ರಾಸ್ತಾ ವರ್ಕ್‍ಶಾಪ್ ಹತ್ತಿರದವರೆಗೆ ಸಾಗಿ ನಿಂತಿದೆ. ನಂತರದ ಚಿಕ್ಕನಸಾಲು ರಸ್ತೆಯ ಉದಕ್ಕೂ ಎರಡು ಕಡೆಗಳಲ್ಲಿ ಇಂಟರ್‍ಲಾಕ್ ಹಾಕಲೇ ಇಲ್ಲ. ಸುಮಾರು 14 ವರ್ಷಗಳು ಸಂದರು ಇದು ಸಾಧ್ಯವಾಗಲಿಲ್ಲ ಅಂದರೆ ನಾಚಿಕೆಗೇಡಿನ ಸಂಗತಿಯಲ್ಲವೇ ?. ನಿಜಕ್ಕೂ ಇದು ಇಲ್ಲಿನ ಜನರ, ಪಾದಚಾರಿಗಳ ದೌಭಾಗ್ಯವೆಂದೇ ಹೇಳಬೇಕು. ಇಷ್ಟು ವರ್ಷಗಳು ಸಂದರೂ ಇಂಟರ್ ಲಾಖ್‍ಗಳನ್ನು ಅಳವಡಿಸಲು ಯಾಕೆ ಸಾಧ್ಯವಾಗಲಿಲ್ಲ? ಇದು ನಮ್ಮ ಅಭಿವ್ರದ್ದಿಯೆ ? ಈ ರೀತಿಯ ನಡವಳಿಕೆಯಂದರೆ ಇದು ದಿವ್ಯ ನಿಲಕ್ಷವಲ್ಲವೇ ಹೌದು ? ಈ ಭಾಗದ ಜನರು ಅಷ್ಟೂ ನತದ್ರಷ್ಟರೆ? ಚಿಕ್ಕನಸಾಲು ರಸ್ತೆಯ ಈ ಭಾಗದಲ್ಲಿ ಇಂಟರ್‍ಲಾಕ್ ಅಳವಡಿಸುವ ಭಾಗ್ಯ ಯಾವಾಗ ಬರಬಹುದೊ ಎಂದು ಜನರು ಕಾಯುತ್ತಾ ಇದ್ದಾರೆ. ಹಾಗೇ ಈ ಭಾಗದ ಜನರು ಕಾಯುದ್ದ ಇದ್ದಾರೆ ಮತ ಕೇಳಲು ಯಾರು, ಯಾವಾಗ ಬರುತ್ತಾರೆಂದು.
ಪುರಸಭೆಯವರು ಪುರಸಭೆಯ ಸದಸ್ಯರು ಗಮನಿಸಬೇಕು, ಚಿಕ್ಕನಸಾಲು ರಸ್ತೆ, ಕುಂದಾಪುರ ನಗರದ ಒಂದು ಮುಖ್ಯವಾದ ದ್ವಾರ. ಈ ರಸ್ತೆ ಹೈವೆಯನ್ನು ಸಂದಿಸುತ್ತದೆ, ಹೈವೆಯ ಬಹು ದೂರದ ಉತ್ತರದಿಂದ ರೋಗಿಗಳನ್ನು ಹೊತ್ತುಕೊಂಡು ಬರುವ ಅಂಬ್ಯುಲೆನ್ಸಗಳು, ಲಘುವಾಹನಗಳು, ದ್ವೀ ಚಕ್ರವಾಹನದವರು ನಿತ್ಯ ಸಂಚಾರ ಮಾಡುತ್ತಾರೆ, ಅವರಿಗೆ ಚಿಕ್ಕನಸಾಲು ರಸ್ತೆ ದ್ವಾರದಲ್ಲೆ ಅಡಚಣೆಯಾಗುತದೆ, ಕಾರಣ ಪಾದಚಾರಿಗಳಿಗೆ ಸಮತಟ್ಟು ಮಾಡದೆ, ಅಥವ ಇಂಟರ್ಲಾಕ್‍ಗಳನ್ನು ಅಳವಡಿಸದೆ ಇರುವುದು. ಹಾಗೆ ಉತ್ತರ ಕಡೆಯ ಹೈವೆಯಿಂದ ಕೂಡ ಈ ದ್ವಾರ ಬಳಸಿಕೊಳ್ಳುತಿದ್ದಾರೆ. ವಾಹನ ಸಂಚಾರ, ಜನ ಸಂಚಾರ ಸುಗಮವಾಗಲು ಇಲ್ಲಿ ಬಹುಬೇಗನೆ ಇಂಟರ್ಲಾಕ್ಗಳನ್ನು ಅಳವಡಿಸಬೇಕು. ಇಲ್ಲಿ ಅಲ್ಲದೆ ಚರ್ಚ್ ರಸ್ತೆಯಲ್ಲೂ, ಮತ್ತು ಕುಂದಾಪುರ ಅನೇಕ ಒಳಗಡೆ ರಸ್ತೆಗಳಲ್ಲಿ ಕೂಡ ಇಂಟರ್ಲಾಕ್, ಅಳವಡಿಸುವ ಕೆಲಸವಾಗಬೇಕು. ಕುಂದಾಪುರ ಸುಂದರ ನಗರ ಎಂಬುದು ಅರೆಸತ್ಯ ಇಂತಹ ರಸ್ತೆಗಳು ಕುಂದಾಪುರ ಪುರಸಭೆಯೊಳಗೆ ಇರುವುದು ನಾ ಲಾಯಕ್ !!
ಮತ ಕೇಳುವಾಗ ಎಲ್ಲ ಮನೆಗಳಿಗೆ ಹೋಗುವ ಸದಸ್ಯರೆ, ಪುರಸಭೆಗೆ ಆರಿಸಿ ಬಂದ ಸದಸ್ಯರೆ ನಂತರ, ಅಪರೂಪಕ್ಕೆ ನಿಮ್ಮ ನಿಮ್ಮ ವಾರ್ಡಿನ ರಸ್ತೆಗಳಲ್ಲಾದರೂ ನಡೆದುಕೊಂಡು ಬಂದು ಸಮಸ್ಯೆಗಳನ್ನು ತಿಳಿದುಕೊಂಡು ಬಂದು ಸಮಸ್ಯೆ ಇದ್ದಲ್ಲಿ ಅವುಗಳನ್ನು ಪರಿಹರಿಸಿ.

ಬಸ್ರೂರು: ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಗೆ ಹಸ್ತಾಂತರ


ಕುಂದಾಪುರ: ಶಾಲೆ ಮತ್ತು ದೇವಾಲಯಗಳು ಅಭಿವೃದ್ಧಿಗೊಂಡರೇ ಇಡೀ ಗ್ರಾಮವೇ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಸುದೀರ್ಘ 18 ವರ್ಷಗಳ ಇತಿಹಾಸವಿರುವ ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವಾನಂದ್ ಶೆಟ್ಟಿ ಹೇಳಿದರು.
ಕೋಳ್ಕೆರೆ ರತ್ನಾಕರ್ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಇವರಿಂದ ನಡೆಸಲ್ಪಟ್ಟ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಕೆಆರ್ ಎಸ್ಎಂಇ ಟ್ರಸ್ಟ್‌ ನ ಅಧ್ಯಕ್ಷೆ ಗಿರಿಜಾ ಆರ್ ಶೆಟ್ಟಿ, ಶಾಲಾ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ, ಟ್ರಸ್ಟ್ ನ ಸದಸ್ಯರುಗಳಾದ ಅಬ್ದುಲ್ ಜುನೈದ್, ಮೋಸಸ್ ಮನೋಹರ ಇವರು ಶಾಲೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಕುಮಾರ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ಕಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಗಳಿಂದ ಆಂಜೆಲೊರ್ ಧರ್ಮಕೇಂದ್ರದಲ್ಲಿ ಮಹಿಳಾ ದಿನಾಚರಣೆ


ಮಂಗಳೂರು : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ 5.3.2023ರಂದು ಗಾರ್ಡಿಯನ್ ಏಂಜಲ್ ಚರ್ಚ್, ಆಂಜೆಲೊರ್, ನಾಗುರಿ, ಇದರ ಕಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಗಳ ಆಂಜೆಲೊರ್ ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ರಾಜಕೀಯ, ಆರೋಗ್ಯ, ಆಟೋಟ, ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಮಾಜಸೇವೆಗೈದ 11 ಮಹಿಳೆಯರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಫ್ಲೋರಾ ಕ್ಯಾಸ್ತೆಲಿನೊ, ವಿಭಾಗ ಮುಖ್ಯಸ್ಥೆ – ಕೊಂಕಣಿ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಆಂಜೆಲೊರ್ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ವಂ. ಸ್ವಾ. ವಿಲಿಯಂ ಮಿನೇಜಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಗುರುಗಳಾದ ವಂ. ಸ್ವಾ. ಲಾರೆನ್ಸ್ ಕುಟಿನ್ಹೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ ಪೌಲ್ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ಲೊಲಿನಾ ಡಿ’ಸೋಜಾ, 21 ಆಯೋಗಗಳ ಸಂಯೋಜಕಿ ಕು. ರೆನಿಟಾ ಮಿನೇಜಸ್, ಕಥೊಲಿಕ್ ಸಭಾದ ಅಧ್ಯಕ್ಷ ಶ್ರೀ ಫೆಲಿಕ್ಸ್ ಮೋರಾಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಸುನಿತಾ ಡಿ’ಸೋಜಾ, ಶ್ರೀಮತಿ ರೆನಿಟಾ ವಾಸ್ ಹಾಜರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಜೇಶ್ ಮಿಸ್ಕಿತ್ ಹಾಗೂ ಪಂಗಡದವರು ಮಹಿಳಾ ದಿನಾಚರಣೆಯ ಅಭಿನಂದನಾ ಗೀತೆಯನ್ನು ಹಾಡಿದರು. ಸ್ತ್ರೀ ಸಂಘಟನೆಯ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಶ್ರೀ ಮನೋಹರ್ ಸಲ್ಡಾನಾ ಹಾಗೂ ಶ್ರೀಮತಿ ಲೊಲಿನಾ ಡಿ’ಸೋಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Catechism day at Holy Rosary Church Alangar on 05.03.2023

Fr Nilesh Crasta being the chief guest preached the homily and explained the transfiguration of Jesus and highlited the importance of catechism

Fr Walter D’Souza was the main celebrant

After the Mass children presented Bible and faith based cultural program from four groups, which included dances, singing, skits, action songs, Bible personality fancy dress, and Bible tableaus

Miss Ishita Jane D’Souza as a student and Sr Felcita HMR shared their experience.

Prizes were awarded to all who secured 80% marks in the exam, two top scorers of writing Bible questions from each class, two best Bible copy writers from each class. 

Prizes also were given to 5 best Bible fancy dresses in each group  and two first and two second prizes for Bible tableaus 

Mr Santosh Rodrigues the convener of catechism read the yearly report

Mr Eric Lobo animator of ycs welcomed Sr Helen Goveas proposed the vote of thanks Mrs Asha D’Souza compered

Vice president Mr Edward Serrao, PPP secretary Mr Anil DCunha, commission coordinator Mr Rajesh D’Souza, PPP members, parents of children were present.

A home made grand dinner was served to all.