International Women’s Day Celebration held at Shubadha Centre, Suralpady

Mangaluru, Mar 8: Shubadha Social Service Centre, Suralpady celebrated International Women’s Day on March 8, 2023 at 06:30pm at Shubadha short stay home for women, Suralpady, Kinnikambla. St Raymond’s Degree College, Vamanjoor NSS unit collaborated with the programme.

Mrs Anitha Norbert DSouza, the Panchayat member of Ganjimat Gram Panchayat was the chief guest. Sr Anna Maria BS the Secretary of Shubadha Society, Suralpady presided over the programme. Sr Herita Monthi Mathias BS the Director of Shubadha Centre, Sr Jessy Crasta the Principal of St Raymond’s Degree College, Dr Sujana NSS Programme Coordinator, Mrs Theresa Rego the senior woman form the locality, Mrs Sumathi, the President of Deepa SHG Suralpady were present on the dais.  

Sr Anna Maria BS in her presidential address spoke about the history of Women empowerment and highlighted some of the facts wherein women should assert their rights in the family and society. She highlighted the achievements of great female personalities. She assured the women present on the occasion to carry on women empowerment activities in the neighbourhood. NSS students performed two dances and entertained the audience. Sr Herita Mathias BS welcomed the guests and the members present. She also conducted the spot games. The winners were awarded on the occasion.

Ms Vinutha Kulal the Lecturer from St Raymond’s Degree College expressed sentiments of gratitude on the occasion for all the guests and the participants. Ms Nathasha Noronha NSS student leader compeered the day’s programme. Mrs Theresa Rego was honoured being a senior most woman among the participants. There were around 60 participants such as neighbourhood women, Deepa SHG members, St Raymond’s College staff and NSS students, Shubadha staff and inmates were present for the programme. It was winded at 8.00pm. The refreshments were served on the occasion. 

Report by; Sr Anna Maria BS

2022 ರ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ರೇಂಕ್ ಗಳು

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2022 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿಕುಂದಾಪುರದ ಭಂಡಾರ್ಕಾರ್ಸ್‍ಕಾಲೇಜಿಗೆಎಂಟು ರ್ಯಾಂಕ್‍ಗಳು ದೊರಕಿವೆ.
ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರುತಾಲೂಕಿನಯಡ್ತೆರೆಗ್ರಾಮದಗೋವಿಂದ ಪೂಜಾರಿಅವರ ಪುತ್ರಿ ದೀಕ್ಷಾಅವರಿಗೆ ನಾಲ್ಕನೇ ರ್ಯಾಂಕ್ ಮತ್ತು ಬೈಂದೂರುತಾಲೂಕಿನಕೊಡೇರಿಗ್ರಾಮದ ಕೃಷ್ಣ ಪೂಜಾರಿಅವರಅವರ ಪುತ್ರಿರಮಿತಾಅವರಿಗೆಆರನೇರ್ಯಾಂಕ್‍ಕುಂದಾಪುರದಕಂದಾವರಗ್ರಾಮದ ನಾಗಭೂಷಣಅವರ ಪುತ್ರಿ ಸ್ಪೂರ್ತಿಅವರಿಗೆಎಂಟನೇರ್ಯಾಂಕ್, ಬೈಂದೂರುತಾಲೂಕಿನ ಗೋಳಿಹೊಳೆ ಗ್ರಾಮದರವೀಂದ್ರ ಶೆಟ್ಟಿಅವರ ಪುತ್ರರಕ್ಷಿತ್‍ಕುಮಾರ್ ಶೆಟ್ಟಿಅವರಿಗೆಒಂಬತ್ತನೇರ್ಯಾಂಕ್‍ದೊರೆತಿದೆ.
ಬಿ.ಎಸ್.ಸಿ ಪದವಿ ಪರೀಕ್ಷೆಯಲ್ಲಿಉತ್ತರಕನ್ನಡಜಿಲ್ಲೆಯಕುಮಟಾತಾಲೂಕಿನಗುರುದತ್ತ ಪೈ ಅವರ ಪುತ್ರ ಸನತ್‍ಗುರುದತ್ತ ಪೈ ಅವರಿಗೆ ಏಳನೇ ರ್ಯಾಂಕ್‍ದೊರೆತಿದೆ.
ಬಿ ಕಾಂ ಪರೀಕ್ಷೆಯಲ್ಲಿಕುಂದಾಪುರದತಾಲೂಕಿನಕೋಟೇಶ್ವರಗ್ರಾಮದ ಪ್ರಸನ್ನ ಹೆಬ್ಬಾರ್‍ಇವರ ಪುತ್ರಿಪ್ರತೀಕ್ಷಾಇವರಿಗೆಒಂಬತ್ತನೇರ್ಯಾಂಕ್‍ದೊರೆತಿದೆ.
ಬಿ.ಬಿ.ಎ ಪದವಿ ಪರೀಕ್ಷೆಯಲ್ಲಿಕುಂದಾಪುರದ ಹೆಮ್ಮಾಡಿಗ್ರಾಮದಅಬ್ದುಲ್‍ರೆಹಮಾನ್‍ಅವರ ಪುತ್ರಿ ಶಾಹಿನಾ ಅವರಿಗೆಆರÀನೇರ್ಯಾಂಕ್ ಮತ್ತುಕುಂದಾಪುರದ ಆಸ್ಟಿನ್ ಮೆಂಡೊನ್ಸಾಅವರ ಪುತ್ರಿ ಅಲಸ್ಟಿನ್ ಮೆಂಡೊನ್ಸಾಅವರಿಗೆ ಏಳನೇ ರ್ಯಾಂಕ್‍ದೊರೆತಿದೆ.
ಇವರಿಗೆಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ ಬೋಧಕ ಬೋಧಕೇತರರು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗದು ಬಹುಮಾನ ವಿಜೇತರು:
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಸೆಪ್ಟೆಂಬರ್/ ಅಕ್ಟೋಬರ್2022 ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿಕುಂದಾಪುರದ ಭಂಡಾರ್ಕಾರ್ಸ್‍ಕಾಲೇಜಿನಇಬ್ಬರೂ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊರಕಿವೆ.
ಎ.ಬಿ ಶೆಟ್ಟ ಶತಮಾನೋತ್ಸವ ಸಮಿತಿ, ಬಂಟ್ಸ್‍ಯಾನೆ ನಾಡವರ ಸಂಘ ಮಂಗಳೂರುಇವರುಕೊಡುವಎ.ಬಿ ಶೆಟ್ಟಿ ನಗದು ಬಹುಮಾನವುಬಿಕಾಂ ವಿದ್ಯಾರ್ಥಿನಿಎಸ್.ಕುಮಾರ್‍ಅವರ ಪುತ್ರಿ ಪಂಚಮಿ)ಅವರಿಗೆದೊರೆತಿದೆ.
ಶ್ರೀ ಮಹಾವೀರಕಾಲೇಜು ಮೂಡಬಿದ್ರಿ ಇವರು ನೀಡುವಡಾ.ಟಿ.ಎಮ್.ಎ ಪೈ ನಗದು ಬಹುಮಾನವು ಬಿ.ಎಸ್.ಸಿ ವಿದ್ಯಾರ್ಥಿನಿಕುಂದಾಪುರದಚಂದ್ರಶೇಖರಅವರ ಪುತ್ರಿ ದೀಪ್ತಿ ಶೇರೇಗಾರ್‍ಅವರಿಗೆದೊರೆತಿದೆಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ಮಾ.15 : ಸ್ವರ್ಣ ಪಲ್ಲಕ್ಕಿ ಪುರಪ್ರವೇಶ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರಿಗೆ ಸಮರ್ಪಣೆಯಾಗಲಿರುವ ಸ್ವರ್ಣ ಪಲ್ಲಕ್ಕಿಯ ಪುರಪ್ರವೇಶ ಮಾ.15 ರಂದು ಬುಧವಾರ ಜರುಗಲಿದೆ. ಅಂದು ಸಾಯಂಕಾಲ ಘಂಟೆ 6ಕ್ಕೆ ಸ್ವರ್ಣ ಪಲ್ಲಕ್ಕಿಯನ್ನು ಶಾಸ್ತ್ರಿ ಸರ್ಕಲ್‍ನಲ್ಲಿ ಸ್ವಾಗತಿಸಿ ಪುರ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಗುವುದು ಎಂಬುದಾಗಿ ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

ಮಾ.19 ಸ್ವರ್ಣ ಪಲ್ಲಕ್ಕಿ ಸಮರ್ಪಣೆ
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರಿಗೆ ಸ್ವರ್ಣ ಪಲ್ಲಕ್ಕಿಯ ಸಮರ್ಪಣಾ ಸಮಾರಂಭ ಮಾ.19 ರಂದು ಆದಿತ್ಯವಾರ ಜರುಗಲಿದೆ. ಅಂದು ಮಧ್ಯಾಹ್ನ ಘಂಟೆ 3ಕ್ಕೆ ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸ್ವರ್ಣ ಪಲ್ಲಕ್ಕಿಯನ್ನು ಶ್ರೀ ದೇವರಿಗೆ ಸಮರ್ಪಿಸಲಿದ್ದಾರೆ ಎಂಬುದಾಗಿ ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

ಕೋಟೆಶ್ವರ ಚರ್ಚಿನ ಧರ್ಮಗುರುಗಳಾದ ವಂ|ಸಿರಿಲ್ ಮಿನೆಜೆಸ್ ಇವರ 75 ನೇ ಹುಟ್ಟುಹಬ್ಬದ ಸಂಭ್ರಮ


ಕೋಟೆಶ್ವರ, ಮಾ.11 : ಕೋಟೆಶ್ವರ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ|ಸಿರಿಲ್ ಮಿನೆಜೆಸ್ ಇವರ 75 ನೇ ಹುಟ್ಟು ಹಬ್ಬದ ಸಂಭ್ರಮವನ್ನು ಕೋಟೆಶ್ವರ ಚರ್ಚಿನ ವಿಶ್ವಾಸಿಗಳು, ಅವರು ಹುಟ್ಟಿದ ದಿನವೇ, ಮಾರ್ಚ್ 10 ರಂದು ಸಂಜೆ ಆಚರಣೆಯನ್ನು ಚರ್ಚಿನಲ್ಲಿ ಆಚರಿಸಿದರು.
ಮೊದಲಿಗೆ ಧರ್ಮಗುರು ವಂ|ಸಿರಿಲ್ ಮಿನೆಜೆಸ್ ಅವರು ದೇವರಿಗೆ ಕ್ರತಜ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕಟ್ಕಕೆರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಅಲ್ವಿನ್ ಸೀಕ್ವೆರಾ ತಮ್ಮ ಸಂದೇಶದಲ್ಲಿ “ವಂ|ಸಿರಿಲ್ ಮಿನೆಜೆಸ್ ಅವರು ಜೀವನದಲ್ಲಿ ಸುದಿರ್ಘ ಪಯಣ ಮಾಡಿದ್ದಾರೆ, ದೇವರು ಅವರಿಗೆ 75 ವರ್ಷದ ಜಿವಿತವನ್ನು ಅನುಗ್ರಹಿಸಿದ್ದಾರೆ. ಇಂದು ಅವರ ಹುಟ್ಟು ಹಬ್ಬದ ಅಮ್ರತ್ಸೋವನ್ನು ಆಚರಿಸುತ್ತಿದ್ದೆವೆ, ಅವರು ಬೆಳೆದು ಬರುತ್ತಾ, ತಮ್ಮ ಜೀವನ ನನ್ನದಲ್ಲ ಎಂದು ತಿಳಿದುಬಂದು ಅವರು ತಮ್ಮ ಜೀವನವನ್ನು ಯೇಸು ಕ್ರಿಸ್ತರಿಗೆ ಅರ್ಪಿಸಲಿಕ್ಕಾಗಿ, ಯಾಜಕರಾಗಲು ಬಯಸಿ ಬಹಳ ಹಿಂದೆ ಅವರು ಯಾಜಕಿ ದೀಕ್ಷೆ ಪಡೆದು, ಇಂದು ಅವರು ಒರ್ವ ಉತ್ತಮ ಧರ್ಮಗುರುಗಳಾಗಿ ಹೆಸರು ಪಡೆದಿದ್ದಾರೆ. ಅವರು ತಮ್ಮ ಧರ್ಮಗುರುಗಳ ಜೀವನದಲ್ಲಿ ಇತರರ ಬಗ್ಗೆ ಚಿಂತಿಸುವುದು, ಕಾಳಜಿ ವಹಿಸುವುದು ಹೆಚ್ಚಾಗಿತ್ತು. ಎಲ್ಲಾ ವೇಳೆ ಅವರು ಇತರರಿಗೆ ಒಳಿತಾಗಲು ಪ್ರಯತ್ನಿಸಿದರು. ಅವರ ಜೀವನ ತಾಳ್ಮೆ, ನಯ ವಿನಯಗಳಿಂದ ಕೂಡಿದ್ದು ಅವರ ಜೀವನ ನಮಗೆ ಒಂದು ಪ್ರೇರಣೆಯಾಗಿದೆ” ಎಂದು ಸಂದೇಶ ನೀಡಿ “ಮುಂದೆ ದೇವರು ಇನ್ನೂ ಹೆಚ್ಚು ಅಯರಾರೋಗ್ಯ ನೀಡಲಿ” ಎಂದು ಶುಭ ಹಾರೈಸಿದರು.
ಹುಟ್ಟು ಹಬ್ಬದ ಆಚರಣೆಯ ವೇಳೆ ವಂ|ಸಿರಿಲ್ ಮಿನೆಜೆಸ್ “ತಮಗೆ ಇಷ್ಟು ಪ್ರೀತಿ ಕಾಳಜಿ ವಹಿಸಿ ನನ್ನ 75 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದಕ್ಕೆ ಚರ್ಚಿನ ಜನತೆಗೆ, ಪಾಲನ ಮಂಡಳಿಗೆ, ಹುಟ್ಟು ಹಬ್ಬದ ಕ್ರತಜ್ಞಪೂರ್ವಕ ಬಲಿದಾನದಲ್ಲಿ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾದ ಫಾ|ಆಲ್ವಿನ್ ಸಿಕ್ವೇರಾ, ಫಾ| ದೀಪ್ ಫೆರ್ನಾಡಿಸ್ ಫಾ|ಫ್ರಾನ್ಸಿಸ್ ಸೋಜಾ, ಪಾಲನಮಂಡಳಿ ಉಪಾಧ್ಯಕ್ಷ ತಿಯೋದೊರ್ ಡಿಮೆಲ್ಲೊ, ಕೋಟೆಶ್ವರ ಸಂತ ಆಂತೋನಿ ವ್ರದ್ದಾಶ್ರಮದ ಮುಖ್ಯಸ್ಥೆ ಸಿಸ್ಟರ್ ಅವಿತಾ ಮೊಂತೇರೊ ಇವರಿಗೆ ಮತ್ತು ತಮ್ಮ ಹುಟ್ಟುಹಬ್ಬ ಆಚರಣೆಗೆ ಸಹಕರಿಸಿದವರಿಗೆಲ್ಲ ಕ್ರತಜ್ಞತೆ ಸಲ್ಲಿಸಿದರು.
ಚರ್ಚಿನ ಆಯೋಗಗಳ ಸಂಚಾಲಕಿ ವಿವೀಟಾ ಡಿಆಲ್ಮೇಡಾ, ಫಾ|ಸಿರಿಲ್ ಮಿನೆಜೆಸ್ ಇವರ ಪರಿಚಯ ನೀಡಿದರು. ಪಾಲನಮಂಡಳಿ ಕಾರ್ಯದರ್ಶಿ ಮರಿಯಾ ಮಸ್ಕರೇನ್ಹಸ್ ಧನ್ಯವಾದಗಳನ್ನು ಅರ್ಪಿಸಿದರು. ಸದಸ್ಯೆ ವೀಣಾ ಡಿಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

ಕೋಲಾರ: ಮಹಿಳಾ ದಿನಾಚರಣೆಯಂದು ಕುಂಕುಮ ವಿಚಾರದಲ್ಲಿ ಅವಮಾನ ಮಾಡಿದ ಸಂಸದರು ಬಹಿರಂಗವಾಗಿ ಕ್ಷಮಾಪಣೆ ಕೋರಬೇಕು, ಇಲ್ಲ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು – ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ

ಕೋಲಾರ, ಮಾ,9: ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಗೌರವ ಕೊಡಬೇಕಾದ ಜವಬ್ದಾರಿ ಸ್ಥಾನದಲ್ಲಿರುವ ಸಂಸದರು ಕುಂಕುಮ ವಿಚಾರದಲ್ಲಿ ಸಾರ್ವಜನಿಕವಾಗಿ ಗಂಡ ಬದುಕಿದ್ದಾನಾ? ಕಾಮನ್‍ಸೆನ್ಸ್ ಇಲ್ಲ ಹಣಕ್ಕಾಗಿ ಮತಾಂತರ ಮಾಡಿಕೊಳ್ಳುತ್ತೀರಾ ಎಂದು ಸಾರ್ವಜನಿಕರವಾಗಿ ಅವಮಾನ ಮಾಡಿರುವುದನ್ನು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಸಂಸದರ ಹೇಳಿಕೆಯನ್ನು ಪತ್ರಿಕಾ ಹೇಳಿಕೆ ಮುಖಾಂತರ ಸಂಸದರ ನಡೆ ಮಹಿಳಾ ವಿರೋದಿ ನಡೆಯಾಗಿದೆ ಎಂದು ಖಂಡಿಸಿದ್ದಾರೆ.

ದೇಶಾದ್ಯಾಂತ ಪ್ರತಿದಿನ ಎರಡು ವರ್ಷದ ಮಗುವಿನಿಂದ ನೂರು ವರ್ಷದ ಮುದುಕಿಯವರೆಗೆ ಅತ್ಯಾಚಾರ ದೌರ್ಜನ್ಯ ಕೊಲೆ ಒಂದಲ್ಲ ಒಂದು ದೌರ್ಜನ್ಯ ನಡೆಯುತ್ತಿದ್ದರೂ ಅದನ್ನು ಸರಿಪಡಿಸದ ಸರ್ಕಾರಗಳ ವಿರುದ್ದ ದ್ವನಿ ಎತ್ತಿ  ನೊಂದ ಮಹಿಳೆಯರ ಪರ ನಿಲ್ಲಬೇಕಾದ ಸಂಸದರು ರಂಗಮಂದಿರದಲ್ಲಿ ಮಹಿಳಾ ದಿನಾಚರಣೆಯ ದಿನದಂದೇ ಹಣೆಗೆ ಕುಂಕಮ ಇಡದ ಮಹಿಳೆಗೆ ಗಂಡ ಬದುಕಿದ್ದಾನಾ? ಹಾಗಾದರೆ ಹಣೆಗೆ ಕುಂಕುಮ ಯಾಕೆ ಇಟ್ಟಿಲ್ಲ ಹಣಕ್ಕಾಗಿ ಮತಾಂತರ ಆಗಿದ್ದೀಯಾ ಎಂದು ಪ್ರಶ್ನೆ ಮಾಡುವ ಮೂಲಕ ಮಹಿಳೆಯ ಮೇಲೆ ತಮ್ಮ ಪ್ರತಾಪ ತೋರಿಸುವ ಸಂಸದರು ನಿಮ್ಮ ಕಣ್ಣಿಗೆ ಆ ಹೆಣ್ಣುಮಗುವಿನ ಕುಂಕುಮ ಕಾಣಿಸಿಲ್ಲ ಎಂದರೆ ಮಹಿಳೆಯರಿಗೆ ಹೇಳಿ ಇಂದು ಮಹಿಳಾ ದಿನಾಚರಣೆ ಮಹಿಳೆಯರಿಗೆ ಹಿಂದೂ ಸಂಪ್ರದಾಯದ ಪ್ರಕಾರ ಹಣೆಗೆ ಕುಂಕುಮ ಲಕ್ಷಣ  ಅದನ್ನು ಸರಿಪಡಿಸಿಕೊಳ್ಳುವಂತೆ ಹೇಳಬಹುದಾಗಿತ್ತು, ಸಾರ್ವಜನಿಕವಾಗಿ ಮಹಿಳೆಗೆ ಈ ರೀತಿಯಾಗಿ ಕುಂಕುಮ ಇಟ್ಟಿಲ್ಲ, ಗಂಡ ಬದುಕಿದ್ದಾನಾ ? ಕಾಮನ್ ಸೆನ್ಸ್ ಇಲ್ವಾ  ಎಂದು  ಸಾರ್ವಜನಿಕವಾಗಿ ಮಾತನಾಡಿರುವುದನ್ನು ಖಂಡಿಸುವ ಜೊತೆಗೆ ಆ ಮಹಿಳೆಯನ್ನು ಸಂಸದರು ಬಹಿರಂಗವಾಗಿ ಕ್ಷಮಾಪಣೆ ಕೋರಬೇಕು ಇಲ್ಲವಾದರೆ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು  ಪತ್ರಿಕಾ ಹೇಳಿಕೆಯ ಮುಖಾಂತರ ಜವಬ್ದಾರಿ ಸ್ಥಾನದಲ್ಲಿರುವ ಸಂಸದರಾದ ಮುನಿಸ್ವಾಮಿರವರನ್ನು ಅಗ್ರಹಿಸಿದರು.

ಶ್ರೀನಿವಾಸಪುರದಲ್ಲಿ ಮಾ.12 ರಂದು ಸಂಜೆ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ – ರಾಜೇಂದ್ರ ಪ್ರಸಾದ್

ಶ್ರೀನಿವಾಸಪುರ: ಇಲ್ಲಿ ಮಾ.12 ರಂದು ಸಂಜೆ 4.30 ಗಂಟೆಯಿಂದ 7 ಗಂಟೆ ವರೆಗೆ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.11 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ರಥಬೀದಿಯಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಏರ್ಪಡಿಸಲಾಗಿದೆ. ಮೆರವಣಿಗೆ ಬಳಿಕ ವಿವಿಧ ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ, ಕನಕ ಮಂದಿರದ ಸಮೀಪ ನಿರ್ಮಿಸಲಾಗಿರುವ ವೇದಿಕೆಯಲ್ಲಿ ವಾದ್ಯಗೋಷ್ಠಿ ಏರ್ಪಡಿಸಲಾಗಿದೆ ಎಂದು ಹೇಳಿದರು.
ಮಾ.12 ರಂದು ಶ್ರೀನಿವಾಸ ಕಲ್ಯಾಣೋತ್ಸವ ಮುಗಿದ ಬಳಿಕ, ಉತ್ಸವದಲ್ಲಿ ಭಾಗವಹಿಸುವ ಎಲ್ಲರಿಗೂ ತಿರುಪತಿಯಿಂದ ತರಿಸಲಾಗುವ ಲಾಡು ವಿತರಣೆ ಮಾಡಲಾಗುವುದು. ಸಂಜೆ ರಸ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ವರ್ಗದ ಜನರೂ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ರಾಜಶೇಖರರೆಡ್ಡಿ, ಮುಖಂಡರಾದ ಗುಂಜೂರು ಆರ್.ಶ್ರೀನಿವಾಸರೆಡ್ಡಿ, ಶಂಕರೇಗೌಡ, ನಾರಾಯಣರೆಡ್ಡಿ, ಶಿವಣ್ಣ, ಮಂಜುನಾಥ, ಮುನಿರೆಡ್ಡಿ, ಮುಳ್ಳಳ್ಳಿ ಚೌಡರೆಡ್ಡಿ, ರಾಜಣ್ಣ, ಯಲ್ದೂರು ಶಿವಣ್ಣ ಇದ್ದರು.

ಪ್ರೇಕ್ಷಕರು ಸಮಾಜ ಮುಖಿ ಚಲನ ಚಿತ್ರಗಳನ್ನು ಬೆಂಬಲಿಸಬೇಕು: ಪ್ರಜಾರಾಜ್ಯ ಚಲನ ಚಿತ್ರದ ನಿರ್ದೇಶಕ ಡಾ. ಡಿ.ಎನ್.ವರದರಾಜು

ಶ್ರೀನಿವಾಸಪುರ: ಪ್ರೇಕ್ಷಕರು ಸಮಾಜ ಮುಖಿ ಚಲನ ಚಿತ್ರಗಳನ್ನು ಬೆಂಬಲಿಸಬೇಕು ಎಂದು ಪ್ರಜಾರಾಜ್ಯ ಚಲನ ಚಿತ್ರದ ನಿರ್ದೇಶಕ ಡಾ. ಡಿ.ಎನ್.ವರದರಾಜು ಹೇಳಿದರು.
ಪಟ್ಟಣದ ಎಸ್‍ವಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ಸಭಾಂಗಣದಲ್ಲಿ ಪ್ರಜಾರಾಜ್ಯ ಚಲನ ಚಿತ್ರದ ಟ್ರೈಲರ್ ಪ್ರದರ್ಶನದ ಬಳಿಕ ಮಾತನಾಡಿದ ಅವರು, ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಮತದಾನದ ಮಹತ್ವ ಸಾರುವ ಈ ಚಿತ್ರ ಬದಲಾವಣೆಯ ವಾಹಕವಾಗಿದ್ದು, ಪ್ರೇಕ್ಷಕರು ವೀಕ್ಷಿಸುವುದರ ಮೂಲಕ ಬೆಂಬಲಿಸಬೇಕು ಎಂದು ಹೇಳಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸರ್ಕಾರಕ್ಕೆ ತೆರಿಗೆ ನೀಡುತ್ತಿದ್ದಾನೆ. ಆದರೆ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರಿ ಕೆಲಸ ಸಿಗುತ್ತಿಲ್ಲ. ಆರೋಗ್ಯ ರಕ್ಷಣೆ ದೊರೆಯುತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಹಾಗೂ ಮತದಾನ ವ್ಯವಸ್ಥೆ ಹದಗೆಟ್ಟಿದೆ. ಇಂಥ ಹಲವು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲು ಚಿತ್ರ ನಿರ್ಮಿಸಲಾಗಿದೆ ಎಂದು ಹೇಳಿದರು.
ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಚಿತ್ರದ ಆಶಯ ಜನರಿಗೆ ತಲುಪಿಸುವ ಉದ್ದೇಶದಿಂದ, ಪಟ್ಟಣದ ಸಂಗೀತ ಚಿತ್ರ ಮಂದಿರದಲ್ಲಿ ಮಾ.10 ರಿಂದ 12 ರವರೆಗೆ ಪ್ರತಿ ದಿನ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆ ವರೆಗೆ ಸಾರ್ವಜನಿಕರಿಗೆ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ. ಜನರು ಈ ಅವಕಾಶ ಬಳಸಿಕೊಂಡು ಚಿತ್ರ ವೀಕ್ಷಿಸಬೇಕು. ಚಿತ್ರದ ಸಂದೇಶ ಸಾರಬೇಕು ಎಂದು ಮನವಿ ಮಾಡಿದರು.
ಪ್ರಾಂಶುಪಾಲ ಸೀನಪ್ಪ, ಉಪನ್ಯಾಸಕ ಬಿ.ಶ್ರೀನಿವಾಸ್, ವೆಂಕಟರಾಂ, ಶೈಲಜ ಇದ್ದರು.

ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ – ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್

ಶ್ರೀನಿವಾಸಪುರ: ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಆ ಸ್ಥಾನ ಉಳಿಸಿಕೊಂಡಿರುವುದು ಹೆಣ್ಣಿನ ಹೆಗ್ಗಳಿಕೆ ಎಂದು ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಹೇಳಿದರು.

ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು , ಮಹಿಳೆ ಶಕ್ತಿ ಸ್ವರೂಪಿಣಿ , ಪುರುಷರ ಸಾಧನೆ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ. ಅದು ತಾಯಿಯಾಗಿರಬಹುದು ,ಹೆಂಡತಿಯಾಗಿರಬಹುದು ಅಥವಾ ಬೇರೆ ಯಾರಾದರೂ ಆಗಿರಬಹುದು ಎಂದು ಅಭಿಪ್ರಾಯಪಟ್ಟರು. 

ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಮಾತನಾಡಿ , ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಮಹಿಳಾ ಪೌರ ಕಾರ್ಮಿಕರ ಪಾತ್ರ ಹಿರಿದು. ಅವರು ತಮ್ಮ ಆರೋಗ್ಯ ಮರೆತು ಜನರ ಆರೋಗ್ಯ ರಕ್ಷಣೆ ಮಾಡುತ್ತಾರೆ. ಹಾಗಾಗಿ ನಾಗರಿಕರ ಗೌರವಕ್ಕೆ ಪಾತ್ರರಾಗಿದ್ದಾರೆ, ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಕಾರ್ಯ ನಿರ್ವಹಿಸುವಾಗ ಸುರಕ್ಷತಾ ಕ್ರಮ ಅನುಸರಿಸಬೇಕು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗಂಡು, ಹೆಣ್ಣಿನ ನಡುವೆ ಭೇದ ಭಾವ ಮಾಡಬಾರದು ಎಂದು ಹೇಳಿದರು.

ಸಮಾರಂಭದಲ್ಲಿ ಆಯ್ದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. 

ಪುರಸಭೆ ಕಂದಾಯ ನಿರೀಕ್ಷಕ ವಿ.ನಾಗರಾಜ್ , ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ , ಸುರೇಶ್ , ಸಂತೋಷ್ , ಜಯಶ್ರೀ , ಪ್ರಸಾದ್ , ಪಾರ್ವತಮ್ಮ , ಸದಸ್ಯರಾದ ಸರ್ದಾರ್ , ನಾಗರಾಜ್ , ಜಯಣ್ಣ , ಷಫಿ , ಫಿರೋಜ್ ಉನ್ನೀಸಾ , ವಹೀದಾ ಬೇಗಂ , ಸುನಿತಾ , ವೇದಾಂತ್ ಶಾಸ್ತ್ರಿ ಇದ್ದರು .

International Women’s Day celebration at Father Muller Homoeopathic Medical College

International Women’s Day was celebrated by the Women Guidance & Counseling Committee of Father Muller Homoeopathic Medical College on 08.03.2023. Ms Lakshmi Kunnath, Lecturer, Department of Speech Language Pathology,Father Muller College was the Resource person.

Mrs Veena Pinto Member of Women Guidance & Counselling Committee welcomed the gathering. The event began with a symbolic Inauguration by lighting the lamp.

Rev. Fr Roshan Crasta, Administrator, FMHMC&H greeted all the women staff, in his message highlighted the power and importance of women in daily life, their role in the family as well as in the society. 

DrMadona Joseph proposed the vote of thanks.  The formal programme was concluded with the Institution Anthem.

Later a session on ‘Digit All – innovation and technology for gender equality‘ theme for this year’s International Women’s Day was  conducted  by Ms Lakshmi Kunnath,

Fun games and activities were conducted by Dr Deepa Pais and Dr Prennie V. in which all the women employees participated actively.

Dr E S J Prabhu Kiran, Principal, FMHMC and Dr Vilma D’Souza, Vice Principal, the members of the Management Committee were also present for the programme.

Dr Jenita Fernandes and Mrs Nancy Mascarenhas the programme.  

In connection with the International Women’s Day the Department of OBG, Community Medicine and N.S.S unit of the college conducted camp on 02.03.2023 at Ullal Primary health centre and Street play on “VOICE YOUR CHOICE” with a message to society on Innovation and technology for gender equality at Ullal Primary health centre and camp, Thokottu Busstand, Deralakatte Busstand, Mudipu Busstand and FMHMC Hospital.

The Department of OBG also organized a Talk on the topic “HEALTHY AND NUTRITIOUS DIET”. and Healthy Cooking competition on 04.03.2023 along with N.S.S unit Followed by which there was a Flash Mob performance by the Interns and Students of FMHMC. The hospital also conducted a week long camp Free health check-ups and investigations on concessional rate in the hospital for women.