ಮೂಡ್ಲಕಟ್ಟೆ ಎಮ್.ಐ.ಟಿ.: ಉದ್ಯೋಗದಲ್ಲಿ ಆರಿಸಿ ಬರಲು ಬೆಂಗಳೂರು ಪಿ ಬಿಎಂಎಸ್ ಕಾಲೇಜಿನ ಉದ್ಯೋಗ ನಿಯುಕ್ತ ಮುಖ್ಯಸ್ಥೆಯಾದ ಡಾ. ಪ್ರದೀಪಾರಿಂದ ವಿಶೇಷ ಉಪನ್ಯಾಸ

ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾನಿಲಯದ, ಕುಂದಾಪುರ ಪ್ಲೆಸ್‍ಮೆಂಟ್ ಮತ್ತು ಟ್ರೆನೀಂಗ್ ವಿಭಾಗವು ಬೆಂಗಳೂರಿನ ಬಿ.ಎಂ.ಎಸ್ ಕಾಲೀಜಿನ ಪ್ಲೆಸ್‍ಮೆಂಟ್ ಡಿನ್ ಆದ ಡಾ. ಪ್ರದೀಪಾರಿಂದ ವಿದ್ಯಾರ್ಥಿಗಳಿಗೆ ಪ್ಲೆಸ್‍ಮೆಂಟ್‍ನ ಟಿಪ್ಸ್ ಮತ್ತು ಟ್ರಿಕ್ಸಗಳ ಮೇಲೆ ವಿಶೇಷ ಉಪನ್ಯಾಸ ಏರ್ಪಡಿಸಿದ್ದರು. ಡಾ. ಪ್ರದೀಪಾರವರು ವಿದ್ಯಾರ್ಥಿಗಳಿಗೆ ತಾವು ಯಾವ ಕಂಪನಿಯಲ್ಲಿ ಕೆಲಸವನ್ನು ನೀರೀಕ್ಷಿಸುತ್ತೀರೊ ಆ ಕಂಪನಿಯ ಬಗ್ಗೆ ಹಾಗೂ ತೆಗೆದುಕೊಳ್ಳುವ ಜವಬ್ದಾರಿಯ ಬಗ್ಗೆ ಆದಷ್ಟು ತಿಳಿದುಕೊಂಡೇ ಕ್ಯಾಂಪಸ ಪ್ಲೆಸ್‍ಮೆಂಟ್‍ಗೆ ಹೋದರೆ ಒಳ್ಳೆಯದು ಎಂದು ಹೇಳಿದರು. ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದು ಭಾರತದಲಿಯೇ ಒಂದು ಅತ್ಯುತಮ ವಿದ್ಯಾ ಸಂಸ್ಥೆಯಲ್ಲಿ ಡಿನ್ ಆಗಿರುವ ತಮ್ಮ ಉದಾಹಣೆಯನ್ನೇ ನೀಡಿ, ವಿದ್ಯಾರ್ಥಿಗಳು ತಮ್ಮಲಿರುವ ಕೀಳರಿಮೆಯನ್ನು ಆದಷ್ಟು ಬೇಗ ತೋರೆದು ಎಲ್ಲಾ ಚಟುವಟಿಕೆಗಳಲ್ಲಿ ಬಾಗವಹಿಸಬೇಕೆಂದು ಸಲಹೆ ನೀಡಿದರು. ವಿವಿಧ ಸರ್ಟಿಫಿಕೆಟ್ ಕೊರ್ಸಗಳನ್ನು ಮಾಡಿ, ಕೌಶಲ್ಯ ಅಭಿವೃದ್ಧಿ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಬೇಕು. ಯಾವ ಸಾಧನೆಗೂ ಕಠಿಣ ಪರಿಶ್ರಮವೇ ಸನಿಹ ದಾರಿ ಎಂದರಲ್ಲದೇ, ಪ್ರಯತ್ನವಿಲ್ಲದೇ ಯಾವ ಸಾಧನೆಯೂ ಅಸಾಧ್ಯ ಎಂದರು. ಕಂಪನಿಗೆ ತಕ್ಕ ಬಯೋಡೆಟಾ ತಯಾರಿ ಮಾಡಿಕೊಂಡರೆ ಉತ್ತಮ ಎಂದು ಹೇಳಿದರು. ನಿಮ್ಮ ಕಾಲಿನ ಮೇಲೆ ನೀವು ನಿಲ್ಲುವುದನ್ನು ಸಮಾಜ ಗೌರವಿಸುತ್ತದೆ ಎಂದು ಒತ್ತಿ ಹೇಳಿದರು.

ಡಾ. ಅಬ್ದುಲ್ ಕರೀಮ್‍ರವರು ಮಾತಾಡಿ ಪ್ರಸ್ತುತ ಎಲ್ಲಾ ವಿಭಾಗದವರಿಗೂ ಉದ್ಯೋಗವಕಾಶವಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಪ್ರೊ. ಅಮೃತಮಾಲಾ ಡೀನ್ ಟಿ.ಪಿ.ಐ.ಆರ್ ಎಂ.ಐ.ಟಿ.ಕೆ ಹಾಗೂ ಪ್ರೊ. ಅಕ್ಷತಾ ನಾಯಕ್ ಸಂಯೋಜಿಸಿದ್ದಾರೆ.

ಭಂಡಾರ್ಕಾರ್ಸ್:ಅಧ್ಯಾಪಕರ ಸಂಘದಿಂದ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ. ಡಾ.ಎಂ.ಬಿ.ನಟರಾಜ್ ರಿಗೆ ಸನ್ಮಾನ ಗೌರವ

ಕುಂದಾಪುರ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ. ಡಾ.ಎಂ.ಬಿ.ನಟರಾಜ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಲಲಿತಾದೇವಿ ಉಪಸ್ಥಿತರಿದ್ದರು.
ಉಪನ್ಯಾಸಕಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ದುರ್ಗಾಪ್ರಸಾದ್ ಮಯ್ಯ ವಂದಿಸಿದರು.

ಭಂಡಾರ್ಕಾರ್ಸ್:ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ದಿಶಾ ಭಾರತ್” ಕಾರ್ಯಾಗಾರ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಾರ್ಚ್ 29ರಂದು ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ದಿಶಾ ಭಾರತ್” ಎಂಬ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ನೇಹಾ ದಾಮ್ಲೆ ಮಾತನಾಡಿ ಜಗತ್ತಿಗೆ ಜೀವನ ಪಾಠವನ್ನು ತಿಳಿಸಿದ ದೇಶ ನಮ್ಮ ಭಾರತ. ನಮ್ಮ ದೇಶವನ್ನು ನಾವು ಅರಿಯಬೇಕು. ಪ್ರತಿಯೊಂದು ವಸ್ತುವಿನ ಯಾರಲ್ಲಿ ದೈವಿಕತೆಯನ್ನು ಕಾಣುವುದು ಭಾರತದ ಸಂಸ್ಕೃತಿ. ಹಾಗಾಗಿ ನಮ್ಮ ದೇಶವನ್ನು ಅರಿಯುವ ಪ್ರಯತ್ನ ಮಾಡಬೇಕು. ದೇಶವನ್ನು ಅರಿಯಬೇಕಾದರೆ ಮೊದಲು ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇಂದಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬದುಕಿನ ಶಿಕ್ಷಣವನ್ನು ಕಲಿಸುವ
ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು
ಇನ್ನೊಬ್ಬ ಅತಿಥಿ ಮಾನ್ವಿತಾ ಡಿ.ಮಾಸ್ಗೊಡೆ ಮಾತನಾಡಿ ಬದುಕಿನಲ್ಲಿ ಬರುವಂತಹ ಸವಾಲುಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗುರುರಾಜ್ ರಾವ್, ಪ್ರಭೋಧನ ಸಂಚಾಲಕರು, ಮಂಗಳೂರು ವಿಭಾಗ, ಆಪ್ತ ಸಮಾಲೋಚಕಿ ಸ್ವರ್ಣ ಕುಂದಾಪುರ, ಶೀತಲ್, ಉಪನ್ಯಾಸಕಿ, ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಕುಂದಾಪುರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಪ್ರೊ ಸತ್ಯನಾರಾಯಣ, ಸಂಯೋಜಕರು, ಯುಥ್ ರೆಡ್ ಕ್ರಾಸ್, ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿರಿ ಕಾರ್ಯಕ್ರಮ ನಿರ್ವಹಿಸಿ, ಚಿನ್ಮಯಿ ಹೆಬ್ಬಾರ್ ಸ್ವಾಗತಿಸಿ, ಸುನಿಧಿ ಹೆಬ್ಬಾರ್ ಮತ್ತು ಸುಧೀಕ್ಷಾ ಅತಿಥಿಗಳನ್ನು ಪರಿಚಯಿಸಿ, ರಮ್ಯಾ ವಂದಿಸಿದರು.

ವಿದ್ಯಾ ಅಕಾಡೆಮಿ ಕಿಡ್ಸ್ ಕಾರ್ನಿವಲ್ : ಹಲವರ ಮೆಚ್ಚುಗೆ

ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿ ಆಶ್ರಯದಲ್ಲಿ ಕುಂದಾಪುರದಲ್ಲಿಯೇ ಮೊದಲ ಬಾರಿಗೆ ಜರುಗಿದ ಕಿಡ್ಸ್ ಕಾರ್ನಿವಲ್ ನೂರಾರು ಎಳೆಯ ಮಕ್ಕಳು ಮತ್ತು ಪೋಷಕರು ಬಂದು ಆಟೋಟಗಳಲ್ಲಿ ಭಾಗವಹಿಸಿ ಸಂತೋಷ ಪಡುವುದರೊಂದಿಗೆ ಅತ್ಯಂತ ಯಶ್ವಸಿಯಾಗಿ ಜರುಗಿತು. ಈ ಮಕ್ಕಳ ಹಬ್ಬದಲ್ಲಿ ಸತೀಶ್ ಹೆಮ್ಮಾಡಿಯವರ ಮ್ಯಾಜಿಕ್ ಶೋ ಮಕ್ಕಳ ಕುತೂಹಲವನ್ನು ಕೆರಳಿಸಿತ್ತು. ಆವರಣದಲ್ಲಿ ಆಯೋಜಿಸಿದ್ದ 360 ಡಿಗ್ರಿ ಸೆಲ್ಫಿ ಪೋಟೋ ಮಕ್ಕಳು ಮತ್ತು ಪೋಷಕರನ್ನು ಆಕರ್ಷಿಸಿತ್ತು. ಕಾರ್ಟೂನ್ ಗೊಂಬೆಗಳ ವೇಷಧಾರಿಗಳು ಈ ಮಕ್ಕಳ ಹಬ್ಬದ ಮೆರುಗನ್ನು ಹೆಚ್ಚಿಸಿದ್ದರು. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಆವರಣದಲ್ಲಿ ಆಯೋಜಿಸದ್ದ ತಿಂಡಿ ತಿನಿಸುಗಳ ಸ್ಟಾಲ್‍ಗಳು ಎಲ್ಲರ ಗಮನ ಸೆಳೆದವು. ಅತ್ಯುತ್ತಮ ಧ್ವನಿ ವ್ಯವಸ್ಥೆ ಹಾಗೂ ಮನಮೋಹಕ ದೀಪಾಲಂಕಾರ ಮಕ್ಕಳಲ್ಲಿಯ ಸಂತೋಷವನ್ನು ಇಮ್ಮಡಿಗೊಳಿಸಿತ್ತು.
ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಸಿದ್ಧಾರ್ಥ್.ಜೆ. ಶೆಟ್ಟಿಯವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಅನಿಷಾ ರೈ ಅವರು ಮಕ್ಕಳು ಹಾಗೂ ಪೋಷಕರೊಂದಿಗೆ ಬೆರೆತು ಈ ಒಂದು ಮಕ್ಕಳ ಹಬ್ಬ ಅತ್ಯಂತ ಸ್ಮರಣೀಯವಾಗುವಂತೆ ನೋಡಿಕೊಂಡರು. ಈ ಕಾರ್ಯಕ್ರಮವನ್ನು ಹೆಸರಾಂತ ನಿರೂಪಕರಾದ ಹಿಸ್ರಾರ್ ಅವರು ನಡೆಸಿಕೊಟ್ಟರು

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್ ಸಾಂಸ್ಕ್ರತಿಕ ಸಂಘದಿಂದ ಮಂಗಳೂರಿನ ಶ್ರಾವ್ಯಾ ಕಲ್ಬಾವಿ ರಾವ್‍ ಗೆ ಪ್ರತಿಭಾ ಸಮ್ಮಾನ

ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್ ಕುಂದಾಪುರ ಇಲ್ಲಿನ ಸಾಂಸ್ಕøತಿಕ ಸಂಘವು ಇತ್ತೀಚಿಗೆ ಮಂಗಳೂರಿನ ಕುಮಾರಿ ಶ್ರಾವ್ಯಾ ಕಲ್ಬಾವಿ ರಾವ್‍ರವರಿಗೆ ಅವರ ಪ್ರತಿಭೆಗಾಗಿ ಸಮ್ಮಾನ ಮಾಡಿತು. ಅವಳು ಕಳೆದ ಸಾಲಿನ ದ್ವೀತಿಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನವನ್ನು ಪಡೆದಿದ್ದರು, ಅದಲ್ಲದೆ ಸಂಗೀತ, ನೃತ್ಯ, ನಾಟಕ ಮುಂತಾದವುಗಳಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿರುತ್ತಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿರುವ ಇವರು ದ.ಕ. ನಿರ್ಮಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಹಾಗೂ ಶ್ರೀಮತಿ ವಾಣಿ ರಾಜೇಂದ್ರರವರ ಸುಪುತ್ರಿಯಾದ ಅವಳು ತಮ್ಮದೇ ಆದ ಯೂಟ್ಯೂಬ್ ಚಾನಲ್ ಕೂಡಾ ಪ್ರಾರಂಭಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೊ. ದೊಮಾ ಚಂದ್ರಶೇಖರ್ ಎಂಐಟಿಕೆಯ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಮ್ ಉಪಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿಸೋಜಾ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರಶಾಂತ್ ಹೆಗ್ಡೆ, ಐಎಂಜೆ ಎಸ್‍ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಪಟೇಲ್ ಹಾಗೂ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕಷ್ಣ ಹೆಗಡೆ ಹಾಗೂ ಶ್ರಾವ್ಯಾರವರ ತಂದೆ ಶ್ರೀ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕೋಣಿ ಮಾನಸ ಜ್ಯೋತಿ ವಿಶೇಷ ಚೇತನರ ಶಾಲಾ ಮಕ್ಕಳಿಗೆ ಉಪಹಾರ ಮತ್ತು ಶಾಲೆಗೆ ಹತ್ತು ಸಾವಿರ ರೂಪಾಯಿ ದೇಣಿಗೆ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೋಣಿ ಮಾನಸ ಜ್ಯೋತಿ ವಿಶೇಷ ಚೇತನರ ಶಾಲೆಗೆ ಬೇಟಿ ನೀಡಿ ಮಕ್ಕಳಿಗೆ ಉಪಹಾರ ಅಲ್ಲದೇ ಶಾಲೆಗೆ ಹತ್ತು ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ಶಾಲೆಯ ವಾರ್ಡನ್ ಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎ. ಮುತ್ತಯ್ಯ ಶೆಟ್ಟಿ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು.

ಕುಂದಾಪುರ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಘಟಿಕೋತ್ಸವ


ಕುಂದಾಪುರ: ಇಲ್ಲಿನ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಯು ಕೆ.ಜಿ ಮಕ್ಕಳ ಘಟಿಕೋತ್ಸವವು ಕುಂದಾಪುರ ಹೋಲಿ ರೋಜರಿ ಚರ್ಚಿನ ಸಭಾ ಭವನದಲ್ಲಿ ಜರುಗಿತು.
ಇಲ್ಲಿನ ಯು ಕೆ.ಜಿ ಮಕ್ಕಳು ತೇರ್ಗಡೆಯಾಗಿದವರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ನಿರ್ದೇಶಕರಾದ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಮಾತನಾಡಿ ‘ಮಕ್ಕಳಿಗೆ ಬರೇ ವಿಧ್ಯಾಬಾಸ ಸಿಕ್ಕಿದರೆ ಮಾತ್ರ ಸಾಲದು, ನಿಮ್ಮ ಮಕ್ಕಳಲಲ್ಲಿ ನಯ ವಿನಯ, ಸಂಸ್ಕಾರ ಸಿಗಬೇಕು, ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮಕ್ಕಳನ್ನು ನಾನು ಗಮನಿಸುತ್ತೇನೆ ಅವರಲ್ಲಿ ಉತ್ತಮ ಶಿಸ್ತು, ನಡತೆ, ಕಾಣುತ್ತೀದ್ದೆನೆ, ಅವರಿಗೆ ಇಲ್ಲಿ ಉತ್ತಮ ಸಂಸ್ಕಾರ ಕಲಿಸುತ್ತಾರೆ, ಮಕ್ಕಳು ಕಲಿಯುವುದರಲ್ಲೂ ಮುಂದಿರಬೇಕು, ಗುಣ ನಡತೆಯಲ್ಲೂ ಮುಂದಿರಬೇಕು. ಇಲ್ಲಿ ಅದೇ ವಾತವರಣದಲ್ಲಿ ನಿಮ್ಮ ಮಕ್ಕಳ ಬೆಳವಣಿಗೆಯನ್ನು ಮಾಡಿದ್ದೇವೆ, ಮುಂದೆ ನಿಮ್ಮ ಮಕ್ಕಳಿಗೆ ಇದೇ ಥರಹದ ವಾತವರಣ ಇರುವ ನಮ್ಮ ಶಾಲೆ ಕೂಡ ಇದೆ, ಅಲ್ಲಿ ನಿಮ್ಮ ಮಕ್ಕಳನ್ನು ವಿಧ್ಯಾವಂತರು ಮತ್ತು ಸಂಸ್ಕಾರವಂತ್ತರನ್ನಾಗಿಸುತ್ತಾರೆ’ ಎಂದು ಅವರು ಸಂದೇಶ ನೀಡಿ ಪ್ರಮಾಣ ಪತ್ರ ಪಡೆದ ಮಕ್ಕಳನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಡಿಅಲ್ಮೇಡಾ, ಶಿಕ್ಷಕಿ ವೀಣಾ ಡಿಸೋಜಾ, ವಿನೀತಾ ಡಿಸೋಜಾ, ಸಹಾಯಕಿ ಡೆಲ್ಫಿನ್ ಡಿಸೋಜಾ, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ನ್ರತ್ಯ ಮತ್ತು ಗಾಯನವನ್ನು ಪ್ರದರ್ಶಿಸಿದರು, ಶಿಕ್ಷಕಿ ರೆಚೆಲ್ ಡಿಸಿಲ್ವಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಚಿನ್ಮಯಿ ಆಸ್ಪತ್ರೆ ಮತ್ತು ರೋಟರಿ ಕುಂದಾಪುರ ದಕ್ಷಿಣ ಇದರ ಸಹಭಾಗಿತ್ವದಲ್ಲಿ “ಉಚಿತ ಮೂತ್ರಪಿಂಡ ತಪಾಸಣಾ ಶಿಬಿರ”

ಚಿನ್ಮಯಿ ಆಸ್ಪತ್ರೆ ಮತ್ತು ರೋಟರಿ ಕುಂದಾಪುರ ದಕ್ಷಿಣ ಇದರ ಸಹಭಾಗಿತ್ವದಲ್ಲಿ “ಉಚಿತ ಮೂತ್ರಪಿಂಡ ತಪಾಸಣಾ ಶಿಬಿರ” ಚಿನ್ಮಯಿ ಆಸ್ಪತ್ರೆಯಲ್ಲಿ ಮಂಗಳೂರಿನ ಖ್ಯಾತ ವೈದ್ಯ ಡಾ. ಸಂತೋಷ ಪೈ ನೇತೃತ್ವದಲ್ಲಿ ಜರುಗಿತು. ಚಿನ್ಮಯಿ ಆಸ್ಪತ್ರೆಯ ಆಡಳಿತ ಪಾಲುದಾರರಾದ ರಾಜೇಂದ್ರ ಕಟ್ಟೆ, ರೋಟರಿ ವಲಯ ಒಂದರ ಸಹಾಯಕ ಗವರ್ನರ್ ಡಾ. ಉಮೇಶ ಪುತ್ರನ್, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ರೋಟರಿ ಸದಸ್ಯರು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. 40ಕ್ಕೂ ಅಧಿಕ ಮಂದಿ ಈ ಶಿಬಿರದಲ್ಲಿ ಪಾಲ್ಗೊಂಡು, ಇದರ ಸದುಪಯೋಗ ಪಡೆದುಕೊಂಡರು.

ಲಯನ್ಸ್ ಕ್ಲಬ್ ಘಟಕಗಳಾದ ಬ್ರಹ್ಮಗಿರಿ, ಉಡುಪಿ ಮಿಡ್ ಟೌನ್, ರೆಡ್ ಕ್ರಾಸ್ ಕುಂದಾಪುರ ತಾ. ಘಟಕ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ, ಉಡುಪಿ ಕೊಚಿನ್‌‌ ಶಿಪ್ ಯಾರ್ಡ್ ಸಂಯೋಗದಿಂದ ರಕ್ತದಾನ ಶಿಬಿರ

ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಲಯನ್ಸ್ ಕ್ಲಬ್ ಉಡುಪಿ ಮಿಡ್ ಟೌನ್, ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ, ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ ಮತ್ತು ಉಡುಪಿ ಕೊಚಿನ್‌‌ ಶಿಪ್ ಯಾರ್ಡ್ – ಮಲ್ಪೆ ಇವರ ಸಂಯೋಗದಿಂದ ನಡೆದ ರಕ್ತ ದಾನ ಶಿಭಿರದ ಉದ್ಘಾಟನೆ ಯನ್ನು ಉಡುಪಿ ಕೊಚಿನ್ ಶಿಪ್ ಯಾರ್ಡ್ CEO ಹರೀಶ್ ಕುಮಾರ್ ಎ. ನೆರವೇರಿಸಿದರು. ಮುಖ್ಯ ಅತಿಥಿ ಗಳಾದ ರೆಡ್ ಕ್ರಾಸ್ ಕುಂದಾಪುರ ಸಭಾಪತಿ ಗಳಾದ ಶ್ರೀ ಎಸ್ ಜಯಕರ ಶೆಟ್ಟಿ ಇವರು ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ಬ್ರಹ್ಮಗಿರಿ ಅದ್ಯಕ್ಷ ರಾದ ಅಶೋಕ್ ನಾಯಕ್, ಲಯನ್ಸ್ ಉಡುಪಿ ಮಿಡ್ ಟೌನ್ ಅದ್ಯಕ್ಷ ರಾದ ವೀಣಾ ಜೆ. ಶೆಟ್ಟಿ, ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ರತ್ನಾಕರ ಶೆಟ್ಟಿ, ಶಿಪ್ ಯಾರ್ಡ್ DGM – ಅಂಬಲವನನ್, ಕುಂದಾಪುರ ಘಟಕದ ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಜಿಲ್ಲಾ ಶಾಖೆಯ ಬಾಲಕ್ರಷ್ಣ ಶೆಟ್ಟಿ ಉಪಸ್ಥಿತರಿದ್ದರು