ಕುಂದಾಪುರ:ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಬಾರಂದಾಡಿ ಕನ್ನಡ ಮಾಧ್ಯಮ ಶಾಲೆಯ ಅಭಿವ್ರದ್ದಿಗಾಗಿ 80 ಸಾವಿರ ರೂಪಾಯಿ ದೇಣಿಗೆ

ಕುಂದಾಪುರ. ಮಾ.28 : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಈ ದಿನ ತಮ್ಮ ಆಡಳಿತ ಕಛೇರಿಯಲ್ಲಿ ಬಾರಂದಾಡಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಅಭಿವ್ರದ್ದಿಗಾಗಿ ರೂಪಾಯಿ ಎಂಬತ್ತು ಸಾವಿರ ದೇಣಿಗೆ ನೀಡಿದರು.

ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಶಾಲೆಯ HM ಶ್ರೀಮತಿ ಅಮಿತಾ ಆರ್ ಶೆಟ್ಟಿ ಇವರಿಗೆ 80,000/- ದ ಚೆಕ್ ಹಸ್ತಾಂತರಿಸಿದರು. ಈ ದೇಣಿಗೆಯನ್ನು ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ಯವರು ಕೊಡಮಾಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ ಮತ್ತು ಡಾ. ಸೋನಿ ಉಪಸ್ಥಿತರಿದ್ದರು .

ಜೆಸಿಐ ಕುಂದಾಪುರ ಸಿಟಿ ವತಿಯಿಂದ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಗೆ ಫ್ಯಾನುಗಳ ಕೊಡುಗೆ

ಕುಂದಾಪುರ : ಇಲ್ಲಿನ ಸಂಚಾರಿ ಪೊಲೀಸ್ ಠಾಣೆಗೆ ಜೆಸಿಐ ಕುಂದಾಪುರ ಸಿಟಿ ವತಿಯಿಂದ ಫ್ಯಾನುಗಳನ್ನು ಕೊಡುಗೆ ರೂಪದಲ್ಲಿ ನೀಡಲಾಯಿತು
ಈ ಸಂದರ್ಭದಲ್ಲಿ ಠಾಣೆಯ ಠಾಣಾಧಿಕಾರಿ ನಾಸಿರ್ ಹುಸೇನ್, ಜೆಸಿಐ ಕುಂದಾಪುರ ಸಿಟಿ ಯ ಅಧ್ಯಕ್ಷೆ ಡಾ ಸೋನಿ ಡಿಕೋಸ್ತಾ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ, ಗಿರೀಶ್ ಹೆಬ್ಬಾರ್, ವಿಜಯ್ ತೆಕ್ಕಟ್ಟೆ, ರಾಘವೇಂದ್ರ ಕುಲಾಲ್
ಸದ್ಯಸ್ಯರಾದ ಗುರುರಾಜ್ ಕೊತ್ವಾಲ್ ನಾಗರಾಜ್ ಪಾಟ್ವಲ್ ಇನ್ನಿತರರು ಉಪಸ್ಥಿತರಿದ್ದರು

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರ /Scouts and Guides Summer Camp at Holy Redeemer English Medium School, Belthangadi

ಬೆಳ್ತಂಗಡಿ:ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ ಮಾರ್ಚ್ 23 ಮತ್ತು 24 ರಂದು ಸ್ಕೌಟ್ ಮತ್ತು ಗೈಡ್ಸ್, ಕಬ್ಸ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಬೆಳ್ತಂಗಡಿ ಸಂತ ತೆರೇಸಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಸ್ಕೌಟ್ ತರಬೇತುದಾರ ಶ್ರೀ ವಲೇರಿಯನ್ ಸಿಕ್ವೇರಾ ಮುಖ್ಯ ಅತಿಥಿಯಾಗಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ಮೋಟೋ, ಪ್ರಾಮುಖ್ಯತೆ ಮತ್ತು ಮೂಲಭೂತ ಕರ್ತವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ನೀಡಲಾಯಿತು. ವಿವಿಧ ವೈಯಕ್ತಿಕ ಮತ್ತು ತಂಡದ ಚಟುವಟಿಕೆಗಳನ್ನು ನಡೆಸಲಾಯಿತು. ಮುಖ್ಯೋಪಾಧ್ಯಾಯ ಫಾದರ್ ಕ್ಲಿಫರ್ಡ್ ಪಿಂಟೋ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಪ್ರಭಾರಿ ಶಿಕ್ಷಕರಾದ ಬ್ಲೆಂಡಿನ್ ರೋಡ್ರಿಗಸ್, ಶಾಂತಿ ಪಿರೇರಾ, ಅಖಿದಾ ಬಾನು, ಅನಿತಾ ಮತ್ತು ಎಲ್ವಿತಾ ಪೈಸ್ ಶಿಬಿರವನ್ನು ಆಯೋಜಿಸಿದ್ದರು.

Scouts and Guides Summer Camp at Holy Redeemer English Medium School, Belthangadi

Holy Redeemer English Medium School, Belthangady organized a Two day Summer camp for Scout and Guides, Cubs and Bul Bul students on March 23rd & 24th. Mr Valerian Sequiera, Physical Education Teacher and Scout Trainer of St Teresa High School, Belthangady was the chief guest. Students were given good information on the moto, importance and basic duties of the Scouts and Guides. Various individual and team activities were conducted. Headmaster Fr Clifford Pinto and encouraged the students. Incharge teachers Blendin Rodrigues, Shanthi Pereira, Akhida Banu, Anitha and Elvita Pais organised the camp.

Holy Redeemer English Medium School, Belthangady had its Farewell ceremony / ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿ : 10 ನೇ ತರಗತಿ ಮತ್ತು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯು ಮಾರ್ಚ್ 25 ರಂದು ಹೊರಹೋಗುವ 10 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ನಡೆಸಿತು.

ನಿರ್ಗಮಿತ ಶಿಕ್ಷಕಿಯರಾದ ಶ್ರೀಮತಿ ಕವಿತಾ ಮತ್ತು ಕುಮಾರಿ ದಿವ್ಯಾ ಮತ್ತು ಚರ್ಚ್ ಧರ್ಮಾಧಿಕಾರಿ ಜೋಯಲ್ ಪ್ರೀತಂ ರೇಗೊ ಅವರನ್ನು ಸಂಸ್ಥೆಯ ವತಿಯಿಂದ ಅವರ ಸೇವೆಗಾಗಿ ಸನ್ಮಾನಿಸಲಾಯಿತು. ಪ್ಯಾಸ್ಟೋರಲ್ ಕೌನ್ಸಿಲ್ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಪಿಟಿಎ ಉಪಾಧ್ಯಕ್ಷ ಬೊನವೆಂಚರ್ ಪಿಂಟೋ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಫಾದರ್ ಕ್ಲಿಫರ್ಡ್ ಪಿಂಟೋ ಅವರು ಶಿಕ್ಷಕರ ಮುಂದಿನ ವೃತ್ತಿ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು. 9ನೇ ತರಗತಿಯ ವಿದ್ಯಾರ್ಥಿಗಳು ನೃತ್ಯ ಹಾಗೂ ಹಾಡುಗಳ ಮೂಲಕ ಎಲ್ಲರನ್ನೂ ರಂಜಿಸಿದರು. ಶಿಕ್ಷಕಿಯರಾದ ಸರಿತಾ ರೋಡ್ರಿಗಸ್ ಅವರು ನಿರ್ಗಮಿಸಿದ ಶಿಕ್ಷಕರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ರೋಹನ್ ಮತ್ತು ಇವಾನ್ ಏಂಜೆಲ್ ಡಿಸೋಜಾ ಶಾಲಾ ದಿನಗಳ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಹೊರಹೋಗುವ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ವಿದ್ಯಾರ್ಥಿಗಳಾದ ಸಾನ್ವಿ ಸ್ವಾಗತಿಸಿ, ಸನಾ ವಂದಿಸಿದರು. ಶಿಕ್ಷಕಿ ಪ್ರೀತಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Holy Redeemer English Medium School, Belthangady had its Farewell ceremony

Holy Redeemer English Medium School, Belthangady had its Farewell ceremony for outgoing Class 10 students on March 25th. Departing Teachers Mrs. Kavitha and Ms Divya, and Church Deacon Joel Preetham Rego were felicitated by the institution for their service. Parish Pastoral Council Vice President Walter Monis and PTA Vice President Bonaventure Pinto were present. Headmaster Fr Clifford Pinto wished well for the future career of the teachers and the future of the students. Students of Class 9 entertained everyone with dances and songs. Teachers Sarita Rodrigues expressed her views on the departing teachers. Class 10 students Rohan and Evon Angel D’Souza shared their thoughts on school days. Outgoing students were presented with a memento and certificates. Students Sanvi welcomed and Sana thanked. Teacher Preetha D’Souza compered the program.

ಗ್ರಾಮೀಣ ಪ್ರದೇಶದಲ್ಲಿ ಆದ್ಯತೆ ಮೇಲೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅದರಲ್ಲೂ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ:ಶಾಸಕ ಕೆ.ಅರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದಲ್ಲಿ ಆದ್ಯತೆ ಮೇಲೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅದರಲ್ಲೂ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಅರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ರೂ.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆಸಿ ವ್ಯಾಲಿ ನೀರು ತಾಲ್ಲೂಕಿನ ಕೆರೆಗಳಿಗೆ ಹರಿದು ಬರುತ್ತಿದೆ. ಹೊಸದಾಗಿ ಕೆಲವು ಕೆರೆಗಳಿಗೆ ಕೊಳವೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ವಸತಿ ಹೀನರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. ಕೆಲವು ಕಡೆ ನಿರ್ಮಾಣ ಹಂತದಲ್ಲಿವೆ. ಹೊಸದಾಗಿ 4 ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ರಸ್ತೆ, ಚರಂಡಿ, ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅಗತ್ಯ ಇರುವೆಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಮುಖಂಡರಾದ ಕೆ.ಕೆ.ಮಂಜು, ಗೋಪಾಲರೆಡ್ಡಿ, ಅಯ್ಯಪ್ಪ, ಎಸ್‍ಜಿವಿ ವೆಂಕಟೇಶ್, ಎಸ್.ಜಿ.ಜಗದೀಶ್, ಜಿ.ಗುರ್ರಪ್ಪ, ಬಿ.ಗುರ್ರಪ್ಪ, ಪ್ರಸಾದ್, ಶಿವಪ್ಪ, ಶ್ರೀನಿವಾಸ್ ರಾಜೇಂದ್ರ ಕುಮಾರ್ ಇದ್ದರು
.

ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕ, ಜಿ. ಶಂಕರ್ ಫೆಮಿಲಿ ಟ್ರಸ್ಟ್ ಅಂಬಲಪಾಡಿ, ಭಾರತೀಯ ರೆಡ್ ಕ್ರಾಸ್ ಕುಂದಾಪುರ ಘಟಕದ ಆಶ್ರಯದಲ್ಲಿ ರಕ್ತದಾನ ಶಿಬಿರ

ಕುಂದಾಪುರ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕುಂದಾಪುರ ಘಟಕ, ಜಿ. ಶಂಕರ್ ಫೆಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಇವರ ಸಹಯೋಗದೊಂದಿಗೆ ಆಯೋಜಿಸಿದ ರಕ್ತ ದಾನ ಶಿಬಿರವನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ದೀಪಬೆಳಗಿಸಿ ಉದ್ಘಾಟಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ಚಂದ್ರಹಾಸ ಕೋಣಿ, ನಿಕಟಪೂರ್ವ ಅಧ್ಯಕ್ಷರಾದ ಕೆ. ಕೆ ಕಾಂಚನ್, ಮಾಜೊ ಜಿಲ್ಲಾ ಯುವ ಅಧ್ಯಕ್ಷರಾದ ಸದಾನಂದ ಬಳ್ಕೂರ್, ನಿಕಟ ಪೂರ್ವ ಅಧ್ಯಕ್ಷರಾದ ಗಣೇಶ್ ಮೆಂಡನ್, ಬಗ್ವಾಡಿ ಹೋಬಳಿಯ ಕೋಶಾಧಿಕಾರಿ ಯಾದ ಸುಧಾಕರ ಕಾಂಚನ್, ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ ಮತ್ತು ಡಾ. ಸೋನಿ ಉಪಸ್ಥಿತರಿದ್ದರು.

ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆಯಲ್ಲಿ ‘ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ ಕುರಿತು ಕಾರ್ಯಗಾರ

ಕುಂದಾಪುರ: ಮಾ 27: ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆಯಲ್ಲಿ ‘ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ’ ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಐ. ಎಂ. ಜೆ. ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಪ್ರೊಫೆಸರ್ ದೋಮ ಚಂದ್ರಶೇಖರ್ ಅವರು ವಿಷಯದ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. “ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಪ್ರಪಂಚಕ್ಕೆ ವಿದ್ಯಾರ್ಥಿಗಳು ಅಣಿಯಾಗುತ್ತಿರುವ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ತೊಡಗಿಸಿಕೊಳ್ಳಬಹುದಾದ ವಿಷಯದ ಕುರಿತು ಮಾತನಾಡುತ್ತಾ, ಶಿಕ್ಷಣ, ಕೌಶಲ್ಯ ಮತ್ತು ಪ್ರಚಲಿತ ವಿದ್ಯಮಾನದ ಬಗ್ಗೆ ತಿಳಿಸಿದರು. ಜ್ಞಾನ, ಅರಿವು ಮತ್ತು ಆಸಕ್ತಿ ಆಧಾರಿತ ವಿಷಯದ ಕುರಿತು ವಿವರಣೆ ನೀಡಿದರು. ಜೀವನದಲ್ಲಿ ಶಿಕ್ಷಣ ಮತ್ತು ಕೌಶಲ್ಯದ ಬಗ್ಗೆ ಆಧುನಿಕ ಪ್ರಪಂಚದಲ್ಲಿ ನಡೆಯುತ್ತಿರುವ ವಿಚಾರವನ್ನು ಉದಾಹರಣೆಯೊಂದಿಗೆ ವಿವರಿಸಿದರು. ಕಾಲೇಜಿನಲ್ಲಿ ಪದವಿ ಜೊತೆಗೆ ನೀಡುತ್ತಿರುವ ಕೌಶಲ್ಯ ಮತ್ತು ಉದ್ಯೋಗ ಆಧಾರಿತ ತರಬೇತಿಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾ ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ತಿಳಿ ಮಾತು ಹೇಳಿದರು.

ಶ್ರೀನಿವಾಸಪುರ:ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀನಿವಾಸದೇವರ, ಪ್ರಾಣದೇವರ ಹಾಗೂ ರಾಘವೇಂದ್ರ ತೀರ್ಥರ ಮೃತ್ತಿಕಾ ಬಂದಾವನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

ಶ್ರೀನಿವಾಸಪುರ: ಇಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ಶ್ರೀನಿವಾಸದೇವರ, ಪ್ರಾಣದೇವರ ಹಾಗೂ ರಾಘವೇಂದ್ರ ತೀರ್ಥರ ಮೃತ್ತಿಕಾ ಬಂದಾವನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ, ಕಳಶ ಸ್ಥಾಪನೆ, ಹೋಮ, ಪೂರ್ಣಾಹುತಿ, ಪ್ರತಿಷ್ಠಾಪನೆ, ಮಹಾಭಿಷೇಕ, ಪಂಚಾಮೃತ ಅಭಿಷೇಕ, ಮೂಲ ದೇವರಿಗೆ ಮಹಾಪೂಜೆ, ನೈವೇದ್ಯ, ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪ್ರಾಣದೇವರು, ರಾಘವೇಂದ್ರಸ್ವಾಮಿ ಪಾದುಕೆಗಳಿಗೆ ನೂತನ ರಜತ ಕವಚ ಸಮರ್ಪಣೆ ಮಾಡಲಾಯಿತು. ರಾಯರ ಬೃದಾವನ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಸುವಿದೇಂದ್ರತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಗುರು ರಾಘವೇಂದ್ರ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್‍ನ ಶ್ರೀನಾಥ್, ಚೇತನ್ ವೆಂಕೋಬರಾವ್, ಬಿ.ಎನ್.ಸೂರ್ಯನಾರಾಯಣ, ರಾಜ್ಯ ಬ್ರಾಹ್ಮಣ ಮಹಾಸಭಾ ನಿರ್ದೇಶಕ ಕೆ.ಎನ್.ಅರುಣ್ ಕುಮಾರ್ ಶರ್ಮಾ, ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಕೆ.ದಿವಾಕರ್, ಖಜಾಂಚಿ ಗೋಪಿನಾಥರಾವ್, ತಾಲ್ಲೂಕು ಪುರೋಹಿತ ಪರಿಷತ್ ಅಧ್ಯಕ್ಷ ಸತೀಶ್ ಶಾಸ್ತ್ರಿ, ಕಾರ್ಯದರ್ಶಿ ಸಂತೋಷ್, ಜಿ.ಆರ್.ಮಧ್ವೇಶ್, ರಾಘವೇಂದ್ರ, ದಿನೇಶ್, ಕಾರ್ತಿಕ್ ಇದ್ದರು.

ಹೊಸ ಕಂದಾಯ ಗ್ರಾಮಗಳ ಹೆಸರು ಬದಲಾಯಿಸಿ ಸರ್ಕಾರಿ ದಾಖಲೆಗೆ ಸೇರಿಸಲಾಗುತ್ತಿದೆ:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಹೊಸ ಕಂದಾಯ ಗ್ರಾಮಗಳ ಹೆಸರು ಬದಲಾಯಿಸಿ ಸರ್ಕಾರಿ ದಾಖಲೆಗೆ ಸೇರಿಸಲಾಗುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹೊಸ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಹಿಂದೆ ಜನಸಾಮಾನ್ಯರಿಗೆ ಜಮೀನು ಇರಲಿಲ್ಲ. ಅದು ರಾಜ, ಮಹಾರಾಜರ ಅಧೀನದಲ್ಲಿತ್ತು. ಮತ್ತೆ ಜೋಡಿದಾರರ ಅಧೀನಕ್ಕೆ ಬಂತು. ಮತ್ತೆ ಜಮೀನುದಾರಿಕೆ ಬಂತು ಎಂದು ಹೇಳಿದರು.
ಹಿಂದೆ ಕೆಲವರನ್ನು ಗ್ರಾಮಗಳಿಂದ ಹೊರಗೆ ಇಡಲಾಗಿತ್ತು. ಅಂಥ ಜನವಸತಿ ಪ್ರದೇಶಗಳಿಗೆ ಹೆಸರು ಇರಲಿಲ್ಲ. ಆ ಗ್ರಾಮಗಳನ್ನು ಗುರುತಿಸಿ, ಹೊಸ ಹೆಸರು ನೀಡಿ ಸರ್ಕಾರಿ ದಾಖಲೆಯಲ್ಲಿ ಸೇರಿಸಿದ ಬಳಿಕ, ಹಕ್ಕುಪತ್ರ ನೀಡಲಾಗುತ್ತಿದೆ. ಇದರಿಂದ ಆ ಗ್ರಾಮಗಳಿಗೆ ತಮ್ಮದೇ ಆದ ಮಹತ್ವ ಬಂದಂತಾಗಿದೆ ಎಂದು ಹೇಳಿದರು.
ಕೆಲವು ಕಡೆ ಸ್ಮಶಾನಗಳ ಒತ್ತುವರಿಯಿಂದಾಗಿ, ಕೆರೆ ಅಂಗಳದಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಪ್ರತಿ ಗ್ರಾಮಕ್ಕೂ ಸ್ಮಶಾನ ಅತ್ಯಗತ್ಯವಾದ ಸೌಲಭ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಸ್ಮಶಾನ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಗೊಳಿಸಬೇಕು ಎಂದು ಹೇಳಿದರು.
ಸಧ್ಯಕ್ಕೆ ಗುರುತಿಸಲಾಗಿರುವ 1514 ಫಲಾನುಭವಿಗಳ ಪೈಕಿ, ಸಮಾರಂಭದಲ್ಲಿ 891 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಇದು ಸರ್ಕಾರದ ವಿಶಿಷ್ಟ ಯೋಜನೆಯಾಗಿದ್ದು, ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ. ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರೇಡ್2 ತಹಶೀಲ್ದಾರ್ ಕೆ.ಎಲ್.ಜಯರಾಮ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಜನಾರ್ಧನ್, ವಿನೋದ್ ಇದ್ದರು.