ಕುಂದಾಪುರ ಮಹಿಳಾ ಕಾಂಗ್ರೆಸ್ ಆಯೋಜಿಸಿದ ಸಮಾವೇಶಕ್ಕೆ ಮಹಿಳೆಯರ ಜನಜಂಗುಳಿ:ದೇಶದ ಪ್ರತಿಯೊಬ್ಬ ಮಹಿಳೆಗೂ ಭಾರತಮಾತೆಯೆಂದು ಗೌರವಿಸುತ್ತೇವೆ – ಪ್ರತಿಭಾ ಕುಳಾಯಿ


ಕುಂದಾಪುರ: “ಮಹಿಳೆಯರಿಗೆ ಗೌರವ ಕೊಟ್ಟಿದ್ದೆ ಕಾಂಗ್ರೆಸು. ಇದು ಸಾಧ್ಯವಾಗಿದ್ದು ಭಾರತದ ಸಂವಿದಾನದಿಂದ. ಬಿಜೆಪಿ ಭಾರತದ ನಕಾಶೆಯ ಚಿತ್ರ ಬರೆದು ಕಿರೀಟ ಮತ್ತು ವೇಷ ತೊಟ್ಟ ಮಹಿಳೆಯ ಕೈಯಲ್ಲಿ ರಾಷ್ಟ್ರಧ್ವಜವನ್ನು ತೋರಿಸಿ ಭಾರತ ಮಾತೆ ಎನ್ನುತ್ತದೆ. ಆದರೆ ಕಾಂಗ್ರೆಸ್ ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಭಾರತಮಾತೆ ಎಂದು ಗೌರವಿಸುತ್ತದೆ, ಈ ವಂವಿಧಾನದಿಂದ ಭಾರತದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾದರು, ಇಂದಿರಾ ಗಾಂಧಿ ಮಹಿಳೆಯಾಗಿ ಕ್ರಾಂತಿಕಾರಿ ಅಭಿವ್ರದ್ದಿಗಳನ್ನು ಮಾಡಿದರು, ಎಂದು ಕಾಂಗ್ರೆಸ್ ಮುಖಂಡೆ, ಮಂಗಳೂರು ಮಹಾನಗರ ಪಾಲಿಕೆಯ ಮಾಜೀ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.
ಅವರು ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು ಬೆಳಿಗ್ಗೆ ನಡೆದ ಮಹಿಳಾ ಕಾಂಗ್ರೆಸ್ ಬ್ರಹತ್ ಸಮಾವೇಶದಲ್ಲಿ ಮಹಿಳೆಯರನ್ನುದ್ಧೇಶಿಸಿ ಆವರು ಮಾತನಾಡಿದರು.
“ಬಿಜೆಪಿ ಯವರು ಕೇವಲ ಅಧಿಕಾರಕ್ಕಾಗಿ ಜಾತಿಯ ಧರ್ಮದ ವೀಷ ಬೀಜ ಬಿತ್ತಿ ಕೋಮು ಗಲಭೆ ಮಾಡುಸುತ್ತಾರೆ. ಮತ್ತು ಬಡವರ ಮಕ್ಕಳ ಸಾವಿಗೆ ಕಾರಣಾಗುತ್ತಾರೆ, ಆದರೆ ಅವರ ಮುಖಂಡರ ಮಕ್ಕಳು ವಿದೇಶದಲ್ಲಿ, ಶಿಕ್ಷಣ, ಕೆಲಸಮಾಡಿಕೊಂಡು ಹಾಯಾಗಿದ್ದಾರೆ. ಅವರಿಗೆ ಶವ ಸಿಕ್ಕಿದರೆ ಸಾಕು, ಅವರು ಶವದ ಮೇಲೆ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಭಾರತವನ್ನು ಅಭಿವ್ರದ್ದಿ ಪಡಿಸಿತ್ತು, ಆದರೆ ಅದನ್ನು ಬಿಜೆಪಿ ಮಾರಾಟ ಮಾಡಿದೆ, ಇನ್ನು ಬಿಜಿಪಿ ಗೆ ಮತ ಹಾಕುವರನ್ನು ಮಾರಲು ಮಾತ್ರ ಬಾಕಿಯಿದೆ, ಕಾಂಗ್ರೆಸ್ ಯಾವತ್ತೂ ಬಡವರ ಪರ ಸರ್ವ ಧರ್ಮೀಯರ ಪರ” ಎಂದು ಹೇಳಿದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ “ಇಲ್ಲಿ ಜನಸಾಗರ ನೋಡಿದರೆ ರಾಜ್ಯ ಮಟ್ಟದ ಸಮಾವೇಶವೆಂಬಂತ್ತೆ ಕಂಡು ಬರುತ್ತೆ ಎಂದು ಹೇಳುತ್ತಾ ಕಾಂಗ್ರೆಸ್ ಸರಕಾರ ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಇಡೇರಿಸಿದೆ, ನುಡಿದಂತೆ ನಡೆದ ಪಕ್ಷ ಇದು. ಇಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾಡಿದ ಯೋಜನೆಗಳನ್ನು ದುಸ್ಥಿಗೆ ತಂದಿದ್ದಾರೆ. ಬಿಜೆಪಿ ಬೆಲೆಯೇರಿಸುತ್ತ ಇದೆಯೆಂದು ಹೇಳಿದರೆ ಪ್ರತಿ ಮನೆಯಲ್ಲೂ ನಾಲ್ಕು ವಾಹನಗಳಿವೆ, ಬಡವರು ಯಾರೂ ಇಲ್ಲ ಎನ್ನುತ್ತಿದೆ. ಭಾರತದ ಬಡ ಮಹಿಳೆಯರು ಬಿಜೆಪಿ ಕಣ್ಣಿಗೆ ಕಾಣುತ್ತಿಲ್ಲ. ಕೆಲವು ಕಡೆ ಜನರು ಎರಡು ಹೊತ್ತು ಹೊಟ್ಟೆಗಾಗಿ ಬಡವರ ತೆರಿಗೆ ಹಣದಲ್ಲಿ ಶ್ರೀಮಂತರನ್ನು ಸಾಕುತ್ತಿದೆ. ಹಾಗಾಗಿ ಬಿಜೆಪಿ ಏನಿದ್ದರೂ ಶ್ರೀಮಂತರ ಪಕ್ಷ ಎಂದ ಅವರು, ಜಿಲ್ಲೆಯ ಮಹಿಳೆಯರು ಈ ಬಾರಿ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ” ಎಂದು ಹೇಳಿದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸಿನ ಮಾಜೀ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ಮಾತನಾಡಿ, ಕುಂದಾಪುರದಲ್ಲಿ ಮೊದಲ ಬಾರಿಗೆ ಮಹಿಳೆಯರು ಬ್ರಹತ ಮಟ್ಟದ ಸಮಾವೇಶಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕೊರೊನಾದಂತಹಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿದ್ಧರಾಮಯ್ಯ ಆರಂಭಿಸಿದ ಅನ್ನಭಾಗ್ಯ ನಮ್ಮ ಕೈ ಹಿಡಿದಿದೆಯೇ ಹೊರತು ಬಿಜೆಪಿ ನಾಯಕರು ಬಾರಿಸಿದ ಗಂಟೆ ಜಾಗಟೆಗಳಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಈಗ ಅದನ್ನೂ ಕಿತ್ತುಕೊಂಡಿರುವ ಬಿಜೆಪಿ ಸರ್ಕಾರ 5 ಕೆಜಿಗಳಿಗೆ ಕಡಿತ ಮಾಡಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್, ಪ್ರತೀ ಕುಟುಂಬದ ಮಹಿಳಾ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿಗಳು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆಜಿ ಅಕ್ಕಿ ನೀಡುವ ಕಾಂಗ್ರೆಸಿನ ಮೂರು ಗ್ಯಾರೆಂಟಿಗಳನ್ನು ಘೋಷಿಸಿದರು.
ಕುಂದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುರಸಭೆಯ ಸದಸ್ಯೆ ದೇವಕಿ ಸಣ್ಣಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ತಮ್ಮ ಸಂದೇಶ ನೀಡಿದರು. ಕೆಪಿಸಿಸಿ ಸದಸ್ಯ ಎಂ.ಎ.ಗಫೂರ್, ಕಾಂಗ್ರೆಸಿನ ಸಾಧನೆಗಳನ್ನು ತಿಳಿಸಿ “ಯಾರು ಇಂತಹದೇ ಧರ್ಮದಲ್ಲಿ ಜನಿಸ ಬೇಕೆಂದು ಅರ್ಜಿ ಹಾಕಿ ಜನ್ಮವೆತ್ತುವುದಿಲ್ಲಾ, ಯಾವ ಧರ್ಮದಲ್ಲಿ ಜನಿಸಿದರೂ, ಈ ಭಾರತ ಭೂಮಿಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುತ್ತೆ. ಆದರೆ ಬಿ.ಜೆಪಿ. ಧರ್ಮಾಧರಿತ ರಾಜಕಾರಣ ಮಾಡುತ್ತೆ’ ಎಂದು ಹೇಳಿದರು. ನಗರ ಯೋಜನ ಪ್ರಾಧಿಕಾರದ ಮಾಜೀ ಅಧ್ಯಕ್ಷ ವಿಕಾಸ್ ಹೆಗ್ಡೆ ಕಾಂಗ್ರೆಸ್ ಮಾಡಿದ ಸಾಧನೆ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಶ್ಯಾಮಲಾ ಭಂಡಾರಿ, ಮಾತನಾಡಿ ಮಹಿಳೆಯರಿಗಾಗಿಯೇ ಕೆಲವೊಂದು ಯೋಜನೆಗಳು ಅಶ್ವಾಸನೆಯಲ್ಲಿ ಸೇರಿಸಲು ಚಿಂತಿಸಲಾಗಿದೆಯೆಂದರು.
ರೇಖಾ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಪೂಜಾರಿ ಬೀಜಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುಂದಾಪುರ ಪುರಸಭೆಯ ಕಾಂಗ್ರೆಸ್ ಸದಸ್ಯರು, ಗ್ರಾಮ ಪಂಚಾಯತ್ ಗಳ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಕುಂದಾಪುರ ಬ್ಲಾಕ್ ಮಂಡಳದ ಮಹಿಳಾ ಆಶಾ ಕರ್ವಾಲ್ಲೋ ವಂದಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಲ್ಲೂಕಿನಾದ್ಯಂತ ಒತ್ತುವರಿ ಆಗಿರುವ ಕೆರೆ ರಾಜಕಾಲುವೆಗಳನ್ನು ತೆರೆವುಗೊಳಿಸಿ ಮುಂಗಾರು, ಅಕಾಲಿಕ ಮಳೆಗೆ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಿ- ರೈತ ಸಂಘ

ಶ್ರೀನಿವಾಸಪುರ, ಮಾ.19: ತಾಲ್ಲೂಕಿನಾದ್ಯಂತ ಒತ್ತುವರಿ ಆಗಿರುವ ಕೆರೆ ರಾಜಕಾಲುವೆಗಳನ್ನು ತೆರೆವುಗೊಳಿಸಲು ಹಾಗೂ ಮುಂಗಾರು ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ಪ್ರತಿ ಎಕರೆ ಮಾವಿಗೆ 5 ಲಕ್ಷ ವಾಣಿಜ್ಯ ಬೆಳೆಗಳಿಗೆ 2 ಲಕ್ಷ ಪರಿಹಾರಕ್ಕಾಗಿ ತಾಲ್ಲೂಕಾಡಳಿತವನ್ನು ಒತ್ತಾಯಿಸಿ ಮಾ.21 ರಂದು ನಷ್ಟ ಬೆಳೆ ಸಮೇತ ತಾಲ್ಲೂಕು ಕಚೇರಿ ಮುತ್ತಿಗೆ ಹಾಕಲು ರೈತ ಸಂಘಧ ಸಭೆಯಲ್ಲಿ ತಿರ್ಮಾನಿಸಲಾಯಿತು.
ಅಕಾಲಿಕ ಮುಂಗಾರು ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಬದುಕು ಕಟ್ಟಿಕೊಳ್ಳುತ್ತಿದ್ದ ರೈತರ ಸಾವಿರಾರು ಹೆಕ್ಟೆರ್ ಮಾವು ಪಸಲು ರಾತ್ರೋ ರಾತ್ರಿ ನೆಲಕ್ಕೆ ಉರಳಿರುವ ಬೆಳೆಯನ್ನು ನೋಡಿ ರೈತ ದಿಕ್ಕು ತೋಚದೆ ಹಾಕಿದ ಬಂಡವಾಳ ನೀರಿನಲ್ಲಿ ಕೊಚ್ಚಿ ಹೋಗಿದ್ದರೂ ಬೆಳೆ ಸಮೀಕ್ಷೆ ಮಾಡಿ ಪರಿಹಾರ ಕೊಡಬೇಕಾದ ಅಧಿಕಾರಿಗಳು ನಾಪತ್ತೆ ಆಗಿದ್ದಾರೆಂದು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ ಗೌಡ ಅವ್ಯವಸ್ಥೆ ವಿರುದ್ದ ಅಸಮಾದಾನ ವ್ಯಕ್ತಪಡಿಸಿದರು.
ಸತತ ಎರಡು ವರ್ಷಗಳಿಂದ ಮುಂಗಾರು ಮಳೆ ಆರ್ಭಟಕ್ಕೆ ಕೈಗೆ ಬರುವ ಮಾವು ಪಸಲು ರಾತ್ರೋ ರಾತ್ರೋ ಸಂಪೂರ್ಣವಾಗಿ ನೆಲಕಚ್ಚುತ್ತಿದೆ ಅದರ ಜೊತೆಗೆ ಟೊಮೋಟೊ ಕ್ಯಾಪ್ಸಿಕಂ, ಮತ್ತಿತರ ವಾಣಿಜ್ಯ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಖಾಸಗಿ ಸಾಲ ಮಾಡಿ ಬಂಡವಾಳ ಹಾಕಿ ಬೆಳೆದಿರುವಂತಹ ಬೆಳೆ ಕಣ್ಣುಮುಂದೆಯೇ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಸಿಲುಕಿ ಔಷಧಿ ಕೂಲಿ ನೀಡುವವವರು ಮನೆ ಬಾಗಿಲಿಗೆ ಬರುವಂತಹ ಪರಿಸ್ಥಿತಿ ಇದೆ ಎಂದು ರೈತರ ಅವ್ಯವಸ್ಥೆಯ ಬಗ್ಗೆ ಅಳಲು ತೋಡಿಕೋಂಡರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಕಳೆದ ಎರಡು ವರ್ಷ ಮುಂಗಾರು ಮಳೆ ಆರ್ಭಟಕ್ಕೆ ಮಳೆ ನೀರು ಸಮರ್ಪಕವಾಗಿ ಕೆರೆಗಳಿಗೆ ಹರಿದು ಹೋಗಲು ರಾಜಕಾಲುವೆಗಳಿಲ್ಲದೆ ಮಳೆ ನೀರು ರೈತರ ತೋಟ ಹಾಗೂ ಬಡವರ ಮನೆಗಳಿಗೆ ನುಗ್ಗಿ ಅವಾಂತರಗಳು ಸೃಷ್ಠಿ ಮಾಡಿರುವುದು ಕಣ್ಣುಮುಂದೆ ಇದ್ದರೂ ಇನ್ನೂ ಅಧಿಕಾರಿಗಳಿಗೆ ಬುದ್ದಿ ಬಂದಂತಿಲ್ಲ, ಸಮಸ್ಯೆ ಆದಾಗ ನೆಪ ಮಾತ್ರಕ್ಕೆ ಸ್ಥಳಕ್ಕೆ ಬೇಟಿ ನೀಡಿ ಕೈ ತೊಳೆದುಕೊಳ್ಳುವ ಜನ ವಿರೋದಿ ನೀತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮಳೆಯಾಗುವ ಸಾದ್ಯತೆ ಇರುವುದರಿಂದ ಮುಂಜಾಗೃತವಾಗಿ ಒತ್ತುವರಿ ಆಗಿರುವ ಕೆರೆ ರಾಜಕಾಲುವೆ ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಅಕಾಲಿಕ ಮುಂಗಾರು ಆಲಿಕಲ್ಲು ಮಳೆಗೆ ನಷ್ಟವಾಗಿರುವ ಪ್ರತಿ ಎಕರೆ ಮಾವಿಗೆ 5 ಲಕ್ಷ ಇತರ ಬೆಳೆಗಳಿಗೆ 2 ಲಕ್ಷ ಪರಿಹಾರ ನೀಡಬೇಕೆಂದು ಮಾ.21 ರ ಮಂಗಳವಾರ ನಷ್ಟ ಮಾವು ಬೆಳೆ ಸಮೇತ ತಾಲ್ಲೂಕು ಕಚೇರಿಯ ಮುಂದೆ ಹೋರಾಟ ಮಾಡುವ ನಿರ್ದಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ , ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಆಲವಟ್ಟಿ ಶಿವ, ವೆಂಕಟ್, ಸಹದೇವಣ್ಣ, ಶೆಕ್‍ಶಪಿವುಲ್ಲಾ , ಸಂತೋಷ್, ಹೆಬ್ಬಣಿ ಅನಂದ್‍ರೆಡ್ಡಿ, ಶ್ರೀಕಾಂತ್, ಕೋಟೆ ಶ್ರೀನಿವಾಸ್, ಮಂಜುಳಾಮ್ಮ, ಶೈಲಜ, ರಾಧ, ಬೈರಮ್ಮ, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ರಾಮಸಾಗರ ವೇಣು, ಯಲ್ಲಪ್ಪ,, ಹರೀಶ್, ಮುಂತಾದವರಿದ್ದರು.

ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಇಲ್ಲವಾದರೆ ವೃದ್ಧಾಶ್ರಮಗಳು ಹೆಚ್ಚುಸ್ಥಾಪಿಸಬೇಕಾಗುತ್ತದೆ:ಶೀನಪ್ಪ ಎಂ 

ಶ್ರೀನಿವಾಸಪುರ : ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿಕೊಡಬೇಕು ಇಲ್ಲವಾದರೆ ವೃದ್ಧಾಶ್ರಮಗಳು ಹೆಚ್ಚುಸ್ಥಾಪಿಸಬೇಕಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ   ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ  ತಿಳಿಸಿದರು.

     ಪಟ್ಟಣದ ಮಾರುತಿ ಸಭಾ ಭವನದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಮಹಿಳೆಯರು ರಚಿಸಿಕೊಂಡಿರುವ ಸ್ವ-ಸಹಾಯ ಸಂಘಗಳು ಪಾರದರ್ಶಕವಾಗಿ ನಡೆಯಲು ಶಿಸ್ತು, ಚಟುವಟಿಕೆ ಹಾಗೂ ಜವಾಬ್ದಾರಿ ರೂಡಿಸಿಕೊಂಡರೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಪೂರಕವಾದ ವಾತಾವರಣ ರೂಪಿಸಿಕೊಳ್ಳಬಹುದು ಜೊತೆಗೆ ಸ್ವಾಭಿಮಾನದ ಕುಟುಂಬವನ್ನು ನಿರ್ವಹಿಸುವ ಆತ್ಮಸ್ಥೆöÊರ್ಯ ಮಹಿಳೆಯರಲ್ಲಿ ವೃದ್ಧಿಯಾಗುತ್ತದೆ ಮಹಿಳಾ ಸಬಲೀಕರಣಕ್ಕಾಗಿ ಮಾತೃಶ್ರೀ ಡಾ|| ಹೇಮಾವತಿ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘಗಳ ಮೂಲಕ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಅವುಗಳ ಜೊತೆಗೆ ಒಟ್ಟು ೦೫ ಕೆರೆಗಳನ್ನು ಅಭಿವೃದ್ಧಿಗಾಗಿ ರೂ.೫೫ ಲಕ್ಷ ಮೊತ್ತವನ್ನು ವಿನಿಯೋಗ ಮಾಡಲಾಗಿರುತ್ತದೆ,  ತಾಲೂಕಿನಲ್ಲಿ ಒಟ್ಟು-೫೨೩೦೦ ಸದಸ್ಯರಿಗೆ ಆಯುಷ್ಮಾನ್ ಕಾರ್ಡ್, ಇ-Shಚಿಡಿm-೯೩೨೦, Pಒ ಆishಚಿ-೨೨೫೧ ಹಾಗೂ ಒಟ್ಟು ೨೨೦ ವಿದ್ಯಾರ್ಥಿಗಳಿಗೆ ರೂ.೧೪.೮೫ ಲಕ್ಷ ಶಿಷ್ಯವೇತನ, ೪೪ ಹಾಲಿನ ಡೈರಿಗಳ ಅಭಿವೃದ್ಧಿಗೆ sರೂ.೨೩.೦೦ ಲಕ್ಷ, ಒಟ್ಟು-೭೨ ದೇವಾಲಯಗಳ ಜೀರ್ಣೋದ್ದಾರಕ್ಕೆ ರೂ.೮೬.೫೧ ಲಕ್ಷ ವಿನಿಯೋಗ ಮಾಡಲಾಗಿರುತ್ತದೆ ಸೇರಿದಂತೆ ಸಮಾಜದ ಎಲ್ಲಾ ವರ್ಗದವರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆಯಲು ಮತ್ತು ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಹಿಳೆಯರ ಪ್ರತಿಭೆಯನ್ನು ಗುರ್ತಿಸಲು ನಿರಂತರ ಶ್ರಮಿಸಲಾಗುತ್ತಿದೆ ಹಾಗೂ ಇಡೀ ಕರ್ನಾಟಕ ರಾಜ್ಯಾದಾದ್ಯಂತ ಪ್ರತೀ ತಿಂಗಳು ೧೩,೫೩೧ ನಿರ್ಗತಿಕ ಕುಟುಂಬಗಳಿಗೆ ಮಾಶಾಸನವನ್ನು ನೀಡುತ್ತಿದೆ ಹಾಗೂ ಕೋವಿಡ್-೧೯ ಸಂದರ್ಭದಲ್ಲಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಹಾಗೂ ವಿಶೇಷ ಚೇತನರಿಗೆ ಅಗತ್ಯ ಪರಿಕರಗಳಾದ ವೀಲ್ ಚೇರ್, ವಾಟರ್ ಬೆಡ್, ೦೩ ಐeg Wಚಿಟಞiಟಿg Sಣiಛಿಞ,  Siಟಿgಟe ಐeg Wಚಿಟಞiಟಿg Sಣiಛಿಞ ಪರಿಕರಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

     ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲರಾದ ಭವ್ಯಶ್ರೀ ಮಾತನಾಡಿ ಮಹಿಳೆಯರು ಮೊದಲಿನಿಂದಲೂ ಚಳುವಳಿಗಳ ಮೂಲಕ ಹಕ್ಕುಗಳನ್ನು ಪಡೆಯಲಾಗಿದೆ ಕನಿಷ್ಠ ಮಹಿಳಾ ದಿನಾಚರಣೆಕ್ಕೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಇತ್ತು ಬದಲಾದ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳ ತೇಜೋವಧೆಯಿಂದ ತಪ್ಪಿಸಲು ಮತ್ತು ರಕ್ಷಣೆ ಮಾಡಲು ವಿಶ್ವಸಂಸ್ಥೆ ಲಿಂಗ ಸಮಾನತೆ ಆಧಾರದಲ್ಲಿ ತಂತ್ರಜ್ಞಾನ ಡಿಜಿಟಲೀಕರಣವನ್ನು ನೀಡಿರುವುದು ಶ್ಲಾಘನೀಯ ಆದರೂ ಇನ್ನು ಹಲವಾರು ಭಾಗಗಳಲ್ಲಿ ಗೊಡ್ಡು ಸಾಂಪ್ರದಾಯಗಳಾದ ಬಾಲ್ಯ ವಿವಾಯು, ಸತಿಸಹಗಮನ ಪದ್ದತಿ, ಸೇರಿದಂತೆ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿದೆ ಇದೆಲ್ಲರ ರಕ್ಷಣೆಗಾಗಿ ಸರ್ವಧರ್ಮದ ಗ್ರಂಥವಾದ ಸಂವಿಧಾನದ ಅಡಿಯಲ್ಲಿ ಕಾನೂನು ಹೋರಾಟ ಮಾಡಬಹುದು ಕಾನೂನು ನಮ್ಮ ರಕ್ಷಣೆಗೆ ಬಳಸಿಕೊಳ್ಳಬೇಕೆ ಹೊರತು ದುರುಪಯೋಗಪಡಿಸಿಕೊಳ್ಳಬಾರದು ಇದುವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಸಾದಿಸಿದ ಹೆಣ್ಣು ಮಕ್ಕಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ತಮ್ಮ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು. 

      ಈ ಸಂಧರ್ಭದಲ್ಲಿ ವೇದಿಕೆಯಲ್ಲಿ   ಈ ಸಂದರ್ಭದಲ್ಲಿ  ಜಿಲ್ಲಾ ನಿರ್ದೇಶಕರಾದ ಮುರಳಿಧರ ಶೆಟ್ಟಿ ಕೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀವಾಣಿ, ತಾ.ಪಂ. ಮಾಜಿ ಸದಸ್ಯರಾದ ನಾಗವೇಣಿರೆಡ್ಡಿ ಹಾಗೂ ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ ಎಸ್ ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಈರಮ್ಮ ನಾಗರಾಳ ಹಾಗೂ ತಾಲೂಕಿನ ೨೫ ಜ್ಞಾನವಿಕಾಸ ಕೇಂದ್ರದ ಸದಸ್ಯರು ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು 

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಆಯ್ಕೆಯಾಗಿರುವರು ಪದಾಧಿಕಾರಿಗಳು ಸಹಕಾರದೊಂದಿಗೆ ರಾಜ್ಯದಲ್ಲಿಯೇ ಮಾದರಿಯನ್ನಾಗಿಸ ಬೇಕು:ಬಂಗವಾದಿ

ಶ್ರೀನಿವಾಸಪುರ 5: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳು ಮುಖ್ಯ ಎಲ್ಲರೂ ಒಬ್ಬರಿಗೊಬ್ಬರು ಸಹಕಾರದೊಂದಿಗೆ ಸಮಿತಿಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸ ಬೇಕು ಎಂದು ನೌಕರರ ಸಂಘದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್ ಸಲಹೆ ನೀಡಿ, ನೂತನ ಸಮಿತಿಗೆ ಶುಭಹಾರೈಸಿದರು.
ಪಟ್ಟಣದ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದರು.
ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಡಿ.ಎನ್.ಮುಕುಂದ, ಜಿಲ್ಲಾ ಸಂಘನಾ ಕಾರ್ಯದರ್ಶಿ ಸಿ.ವಿ.ನಾಗರಾಜ್, ಜಿಲ್ಲಾ ಖಜಾಂಚಿ ಕೆ.ವಿ.ಜಗನ್ನಾಥ್, ಕಸಾಪ ತಾಲೂಕು ಅಧ್ಯಕ್ಷೆ ಪಿ.ಎಸ್.ಮಂಜುಳ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ನೂತನ ಪದಾಧಿಕಾರಿಗಳಾಗಿ ತಾಲೂಕು ಅಧ್ಯಕ್ಷ ಎಸ್.ರವಣಪ್ಪ, ಕಾರ್ಯದರ್ಶಿ ಕೆ.ವೇಣುಗೋಪಾಲ್, ಉಪಾಧ್ಯಕ್ಷಿ ಬಿ.ಜಿ.ರತ್ನಮ್ಮ, ಸಹ ಕಾರ್ಯದರ್ಶಿ ಡಾ.ಸಿ.ಎನ್.ಮಂಜುನಾಥ್ , ಖಾಜಾಂಚಿ ಸಿ.ವಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಪುರಸಭೆ ಕಚೇರಿ ಮುಂದೆ ಶನಿವಾರ ವಿವಿಧ ದಲಿತಪರ ಸಂಘಟನೆಗಳ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ನೇತೃತ್ವದಲ್ಲಿ ಧರಣಿ

ಶ್ರೀನಿವಾಸಪುರ: ಪಟ್ಟಣದ ಪುರಸಭೆ ಕಚೇರಿ ಮುಂದೆ ಶನಿವಾರ ವಿವಿಧ ದಲಿತಪರ ಸಂಘಟನೆಗಳ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ನೇತೃತ್ವದಲ್ಲಿ ಧರಣಿ ನಡೆಸಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಅವರ ಕೆಲಸಕ್ಕೆ ವಿನಾಕಾರಣ ಅಡ್ಡಿಪಡಿಸುವುದರ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುವ ಜಮೀನಿಗೆ ಇ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಧರಣಿ ನಿರತರು ಆಪಾದಿಸಿದರು.
ಮುಖ್ಯಾಧಿಕಾರಿ ಪುರಸಭೆಯಲ್ಲಿ ನಡೆಸಿರುವ ಅಕ್ರಮ ವ್ಯವಹಾರ ಕುರಿತು ತನಿಖೆ ನಡೆಸಬೇಕು. ಹಣಕಾಸು ವಹಿವಾಟಿನ ಬಗ್ಗೆಯೂ ತನಿಕೆ ಮಾಡಬೇಕು. ಮುಖ್ಯವಾಗಿ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಭೇಟಿ: ತಹಶೀಲ್ದಾರ್ ಶಿರಿನ್ ತಾಜ್ ಸ್ಥಳಕ್ಕೆ ಭೇಟಿ ನೀಡಿ, ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರ ನೀಡಿದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಿಸುವುದಗಿ ತಿಳಿಸಿದರು. ಆದರೆ ಅವರ ಮಾತಿಗೆ ಮನ್ನಣೆ ನೀಡದ ಧರಣಿನಿರತರು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರು ಸ್ಥಳಕ್ಕೆ ಬರುವ ವರೆಗೆ ಧರಣಿ ವಾಪಸ್ ಪಡೆಯಲು ನಿರಾಕರಿಸಿದರು.


ಆದಿಜಾಂಭವ ಚಾರಿಟಬಲ್ ಟ್ರಸ್ಟ್, ಆದಿಜಾಂಭವ ಸೇವಾ ಸಮತಿ ಹಾಗೂ ಪ್ರಗತಿಪರ ದಲಿತ ಒಕ್ಕೂಟದ ಸದಸ್ಯರು ಧರಣಿಯಲ್ಲಿ ಭಾಗವಹಿಸಿದ್ದರು.

ಸೇವೆಯ ಮೂಲಕ ರಾಜಕೀಯ ಶಕ್ತಿ ಪಡೆಯಬೇಕು ಎಂದು ಮಾಜಿ ಸಂಸದ ಡಾ. ವೆಂಕಟೇಶ್

ಶ್ರೀನಿವಾಸಪುರ: ಸೇವೆಯ ಮೂಲಕ ರಾಜಕೀಯ ಶಕ್ತಿ ಪಡೆಯಬೇಕು ಎಂದು ಮಾಜಿ ಸಂಸದ ಡಾ. ವೆಂಕಟೇಶ್ ಹೇಳಿದರು.
ಪಟ್ಟಣದ ವೆಂಕಟೇಶ್ವರ ಸಭಾಂಗಣದಲ್ಲಿ ಎಎಪಿ ವತಿಯಿಂದ ಶನಿವಾರ ಏರ್ಪಡಿಸಿದ್ದ, ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ರಚನಾ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ತೆರಿಗೆದಾರರಾಗಿರುವ ಬಡವರ ಬದುಕು ಮೂರಾಬಟ್ಟೆಯಾಗಿದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತಗಳಿಕೆ ತಂತ್ರ ಒಳಗೊಂಡ ಪ್ರಣಾಳಿಕೆ ಬಿಡುಗಡೆಗೊಳಿಸುವುದು ಸಾಮಾನ್ಯ. ಅಂಥ ಪ್ರಣಾಳಿಕೆಗಳು ಹವಾನಿಯಂತ್ರಿತ ಕೊಠಡಿಗಳಿಂದ ಹೊರಬರುತ್ತವೆ. ಆದರೆ ಎಎಪಿ, ಸಾರ್ವಜನಿಕರಿಂದ ಸಮಸ್ಯೆ ಅರಿತುಕೊಂಡು, ಅವರ ಸಮಸ್ಯೆ ಪರಿಹಾರಕ್ಕೆ ಪೂರಕವಾದ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.
ತಾಲ್ಲೂಕು ಎಎಪಿ ಮುಖಂಡ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಇಡೀ ದೇಶಕ್ಕೆ ಒಂದು ಪ್ರಣಾಳಿಕೆ ತರುವುದರಿಂದ ಪ್ರಯೋಜನವಾಗುವುದಿಲ್ಲ. ಬೇರೆ ಬೇರೆ ಕಡೆ ಬೇರೆ ಬೇರೆ ಸಮಸ್ಯೆಗಳಿರುವತ್ತವೆ. ಅವುಗಳ ನಿವಾರಣೆ ಆಗಬೇಕಾದರೆ ಅಲ್ಲಿನ ಸಮಸ್ಯೆಗಳ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅಗತ್ಯಗಳ ಬಗ್ಗೆ ಅಲ್ಲಿನ ಜನರೇ ಹೇಳಬೇಕಾಗುತ್ತದೆ. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರ ಸ್ವಾತಂತ್ರ್ಯ ಬಂದಾಗಿನಿಂದಲೂ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಅದಕ್ಕೆ ಸ್ಥಳೀಯ ಮಹತ್ವದ ಯೋಜನೆಗಳ ಅನುಷ್ಠಾನದ ಕೊರತೆಯೇ ಕಾರಣ ಎಂದು ಹೇಳಿದರು.
ರಾಜ್ಯ ಎಎಪಿ ಜಂಟಿ ಕಾರ್ಯದರ್ಶಿ ಸುರೇಶ್ ಮಾತನಾಡಿ, ಎಎಪಿ ಪ್ರಣಾಳಿಕೆ ರಚನೆ ಪಕ್ಷಾತೀತವಾಗಿದ್ದು, ಯಾವುದೇ ಪಕ್ಷದ ಕಾರ್ಯಕರ್ತರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಈ ಪ್ರಕ್ತಿಯೆಯಲ್ಲಿ ಭಾಗವಹಿಸಬಹುದು. ಜನರಿಗೆ ಅಭಿವೃದ್ಧಿಗೆ ಸಂಬಂಧಿಸಿದ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ದೆಹಲಿ ಹಾಗೂ ಪಂಜಾಬ್ ಮಾದರಿಯಲ್ಲಿ ರಾಜ್ಯ ಅಭಿವೃದ್ಧಿಪಡಿಸಲಾಗುವುದು. ಅದಕ್ಕೆ ಮತದಾರರು ಎಎಪಿ ಬೆಂಬಲಿಸಬೇಕು ಎಂದು ಹೇಳಿದರು.
ಜಿಲ್ಲಾ ಎಎಪಿ ಅಧ್ಯಕ್ಷ ವಿಜಯ್ ಕುಮಾರ್, ರಾಜ್ಯ ಎಎಪಿ ಜಂಟಿ ಕಾರ್ಯದರ್ಶಿ ರಮೇಶ್ ಮುಖಂಡ ವಿ.ರಮೇಶ್ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಣಾಳಿಕೆ ತಯಾರಿಕೆ ವಿಧಾನ ಕುರಿತು ಸಾರ್ವಜನಿಕರಿಗೆ ತರಬೇತಿ ನೀಡಲಾಯಿತು. ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Rohan Corporation Bagged the Times of India Emerging Project of the year Award-2023

Times Business Awards presented in Mysuru on March 14, 2023 at Silent Shores Resort and SPA Mysuru, and the Emerging project of the year was awarded to ‘Rohan City’, Mangalore, a Project of Rohan Corporation India Pvt ltd, Chairman, Mr Rohan Monteiro.

Award received by Mr. Deemanth Suvarna (General Manager, Sales Marketing) & Mr. Alphonse Fernandes (Sales Associate). 

Prestigious institutions & organizations like Vidyavardhaka Education Trust, Lalitha Jewellery, SCDCC Bank, Rohan Corporation India Pvt ltd. were among 37 organizations awarded with the Times Business Awards, Mysuru- 2023 on March 14, 2023

Actor Raashii Khanna presented the awards to business icons at the awards ceremony held at Silent Shores Resort and Spa. The awardees were corporate leaders, emerging entrepreneurs and businesses professionals from retail, health, real estate and education sectors. 

Mr K.S. Rangappa, Former Vice- Chancellor of University of Mysore was the guest of honour. 

The ceremony was followed by cultural programme by Trishuli Dance Troupe, Mysuru and Bansuri-tabla performed by Sameer Rao and Adarsh Shenoy.

ಧ. ಗ್ರಾ. ಯೋ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ – ಒಕ್ಕೂಟಗಳ ಪದಗ್ರಹಣ ಸಮಾರಂಭ

ಕುಂದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯನ್ನು ಕೇವಲ ಸಾಲ ನೀಡುವ  ಅಥವಾ ಲಾಭ ಮಾಡುವ ಉದ್ದೇಶದಿಂದ ಪ್ರಾರಂಭಿಸಿದ್ದಲ್ಲ. ಸಮುದಾಯದ ಜನರ ಸರ್ವಾಂಗೀಣ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಲು ಮತ್ತು ಆ ಮೂಲಕ ಗ್ರಾಮೀಣ ಜನರನ್ನು ಸ್ವಾವಲಂಬಿಗಳು ಮತ್ತು ಸಶಕ್ತರಾಗಿಸುವ ಉದ್ದೇಶದಿಂದ ಯೋಜನೆ ರೂಪುಗೊಂಡಿದೆ. ಈ ಎಲ್ಲಾ ಅನುಷ್ಠಾನಗಳಿಗೆ ಸಾಲದ ಬೆಂಬಲವೂ ಅಗತ್ಯವಿರುವುದರಿಂದ ಸಾಲ ಯೋಜನೆ ಪರಿಚಯಿಸಲಾಗಿದೆ. ಆದರೆ, ಕ್ಷೇತ್ರದ ವತಿಯಿಂದ ಸಾಲ ನೀಡುವುದಿಲ್ಲ. ಬ್ಯಾಂಕ್ ಒದಗಿಸುವ ಸಾಲಗಳಿಗೆ ಕ್ಷೇತ್ರದ ದೃಢೀಕರಣವಿರುತ್ತದಷ್ಟೇ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರದೀಪ್ ಶೆಟ್ಟಿ ಹೇಳಿದರು.

ಯೋಜನೆಯ ಬಿ ಸಿ ಟ್ರಸ್ಟ್ ಅಂತರ್ಗತ ಕೋಟೇಶ್ವರ ವಲಯ ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕೋಟೇಶ್ವರದಲ್ಲಿ ನಡೆದ ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆಯ ಪ್ರಗತಿ ಮತ್ತು ಗ್ರಾಮೀಣ ಜನರ ಆಶಯಗಳನ್ನು ಪರಿಗಣಿಸಿ ಇದೀಗ ಕೇಂದ್ರ ಸರ್ಕಾರವು ರಾಜ್ಯದಾದ್ಯಂತ ಆಧಾರ್, ಇ-ಶ್ರಮ್ ಇತ್ಯಾದಿ ಕಾರ್ಡುಗಳನ್ನು ನೀಡುವ ಸಿ ಎಸ್ ಸಿ ಸೇವಾ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದೆ. ಇದರಿಂದ ಯೋಜನೆಯ ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಬಲ ಬಂದಿದೆ. ಮಹಿಳಾ ಸಬಲೀಕರಣದ ಜ್ಞಾನವಿಕಾಸ ಕಾರ್ಯಕ್ರಮಗಳು, ಅನಾಥರು, ಅಶಕ್ತರಿಗೆ ಚೈತನ್ಯ ತುಂಬುವ ಕಾರ್ಯಗಳು ವೇಗ ಪಡೆದಿವೆ. ತಾಲೂಕುಗಳೂ ಜಾಸ್ತಿಯಾಗಿದ್ದರಿಂದ ಯೋಜನೆಯ ಎರಡನೇ ಕೇಂದ್ರವನ್ನು ಕೋಟೇಶ್ವರದಲ್ಲೇ ತೆರೆಯಲಾಗಿದೆ ಎಂಬ ವಿವರಗಳನ್ನವರು ನೀಡಿದರು.

ವಲಯದ ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಟ್ಟು ಒಂಭತ್ತು ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ದಾಖಲೆಗಳ ಹಸ್ತಾಂತರದ ಮೂಲಕ ನೆರವೇರಿಸಲಾಯಿತು. ಸಭೆಯ ಮುನ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು.

ಕುಂದಾಪುರದ ಆಪ್ತ ಸಮಾಲೋಚಕಿ ಸ್ವರ್ಣ  ಧಾರ್ಮಿಕ ಉಪನ್ಯಾಸ ನೀಡಿ, ಶ್ರೀ ಸತ್ಯನಾರಾಯಣ ಪೂಜಾ ಮಹತ್ವವನ್ನು ವಿಷದಪಡಿಸುತ್ತಾ ನಮ್ಮ ವೇದ, ಉಪನಿಷತ್ತು, ಪುರಾಣಗಳ ಒಳ್ಳೆಯ ಅಂಶಗಳನ್ನು ನಾವಿಂದು ಅನುಸರಿಸದೆ, ಕಿರಿಯ ಜನಾಂಗಕ್ಕೆ ವರ್ಗಾಯಿಸುವಲ್ಲಿ ಸೋತು, ಕಾಲ ಕೆಟ್ಟಿದೆ ಎಂದು ಹಲುಬುತ್ತೇವೆ. ಆದರೆ ವಾಸ್ತವವಾಗಿ ಕಾಲ ಕೆಟ್ಟಿಲ್ಲ, ಮನುಷ್ಯನ ಸ್ವಾರ್ಥದಿಂದ ಬುದ್ಧಿ ಕೆಟ್ಟಿದೆ ಎಂದರು.

ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ನಾಗರಾಜ್, ಗೋಪಾಡಿ ಗ್ರಾ. ಪಂ. ಅಧ್ಯಕ್ಷೆ ಸರೋಜಾ, ದೊಡ್ಡೋಣಿ ನೀರೇಶ್ವಾಲ್ಯ ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕೆ. ಸುರೇಶ್, ಕೋಟೇಶ್ವರ ವಲಯ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಗತಿಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಕುಂದಾಪುರ ಕೇಂದ್ರ ಸಮಿತಿ ಅಧ್ಯಕ್ಷೆ ಶೋಭಾ ಚಂದ್ರ ಇವರುಗಳು ಮುಖ್ಯ ಅತಿಥಿಗಳಾಗಿದ್ದು ಶುಭ ಹಾರೈಸಿದರು.

ಕೋಟೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಾಗಿಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟಗಳ ಪದಾಧಿಕಾರಿಗಳು, ವಲಯ ಮೇಲ್ವಿಚಾರಕ ನಾಗರಾಜ್ ಎಚ್.,  ಸೇವಾ ಪ್ರತಿನಿಧಿಗಳು,  ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಸುಶೀಲಾ ಶೇಟ್ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಜಯಂತಿ ಶೆಟ್ಟಿ ವರದಿ ವಾಚಿಸಿದರು. ಪ್ರಸನ್ನ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಸುಶೀಲಾ ಕೆ. ಎಸ್. ವಂದಿಸಿದರು.