ಬೀಜಾಡಿ ; ಮಾ.13ರಂದು ಏಕಪವಿತ್ರ ನಾಗಮಂಡಲೋತ್ಸವ

ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀವ೯ದದೊಂದಿಗೆ ಬೀಜಾಡಿ ಶ್ರೀಮತಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನದಲ್ಲಿ ಮಾ.13ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಏಕಪವಿತ್ರ ನಾಗಮಂಡಲೋತ್ಸವ ಜರುಗಲಿದೆ.
ವೇದಮೂತಿ೯ ಶ್ರೀ ಮಧುಸೂಧನ ಬಾಯಿರಿ ಮಣೂರು ಇವರ ನೇತೃತ್ವದಲ್ಲಿ ಮಾ.12ರಂದು ಬೆಳಿಗ್ಗೆ ಪ್ರಾರ್ಥನಾ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್ವರಣೀ ಗಣಯಾಗ, ಪವಮಾನ ಹೋಮ, ಆಯುತ ಸಂಖ್ಯಾತಿಲ ಹೋಮ, ಸಂಜೆ ಶ್ರೀ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ವಾಸ್ತು ರಾಕ್ಷೋಘ್ನ ಹೋಮ, ದಿಗ್ಬಲಿ ಕಾರ್ಯಕ್ರಮಗಳು ನಡೆಯಲಿದೆ.
ಮಾ.13ರಂದು ಬೆಳಿಗ್ಗೆ ಪಂಚ ವಿಂಶತಿದ್ರವ್ಯ ಕಲಶಪೂರ್ವಕ ಕಲಾತತ್ವ ಬ್ರಹ್ಮಕಲಶ ಸ್ಥಾಪನೆ, ಅಧಿವಾಸ ಹೋಮ, ವೇದ ಪಾರಾಯಣ, ವಟುಬ್ರಾಹ್ಮಣ-ಸುವಾಸಿನೀ ಆರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಶ್ರೀ ದೇವರ ಸಂದರ್ಶನ, ಪಲ್ಲಪೂಜೆ, ಮಧ್ಯಾಹ್ನ ಗಂಟೆ 12.30ಕ್ಕೆ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
ಸಂಜೆ ಗಂಟೆ 7ಕ್ಕೆ ನಾಗನಿಗೆ ಹಾಲಿಟ್ಟು ಸೇವೆ, ಮಂಡಲ ಪೂಜೆ, ಏಕಪವಿತ್ರ ನಾಗಮಂಡಲೋತ್ಸವ ನಂತರ ಮಹಾಪ್ರಸಾದದೊಂದಿಗೆ ಮಹಾಮಂತ್ರಾಕ್ಷತೆ ವಿತರಣೆಯಾಗಲಿದೆ.


ಮಾ.11ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ:
ಏಕಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಮಾ.11ರಂದು ಸಂಜೆ 4.30ರಿಂದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಹೊರಡಲಿದೆ. ಈ ಹೊರೆಕಾಣಿಕೆ ಮೆರವಣಿಗೆಗೆ ಸಮಾಜ ಗಣ್ಯರು ಹಸಿರು ನಿಶಾನೆ ತೋರಿಸಿ ಭವ್ಯ ಪುರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಪುರಮೆರವಣಿಗೆಯಲ್ಲಿ ತಟ್ಟಿರಾಯ, ಕೀಲು ಕುದುರೆ, ಪಂಚವಾದ್ಯಗಳು, ಭಜನೆ ನಾಮ ಸಂಕೀತ೯ನೆ,
ಚಂಡೆವಾದನ, ಕಳಸ ಹಿಡಿದ ಮಹಿಳೆಯರು ಸೇರಿದಂತೆ ಇನ್ನಿತರ ಟ್ಯಾಬ್ಲೋಗಳು ಮೆರವಣಿಗೆಯ ವೈಭವನ್ನು ಹೆಚ್ಚಿಸಲಿದೆ.


ಮಾ.13ರಂದು ಧಾಮಿ೯ಕ ಸಭೆ. ಏಕಪವಿತ್ರ ನಾಗಮಂಡಲೋತ್ಸವದ ಧಾಮಿ೯ಕ ಸಭಾ ಕಾರ್ಯಕ್ರಮವು ಮಾ.13ರಂದು ಸಂಜೆ 4 ಗಂಟೆಗೆ ಜರುಗಲಿದೆ.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಧಾಮಿ೯ಕ ಉಪನ್ಯಾಸ ನೀಡಲಿದ್ದಾರೆ. ಕೋಟೇಶ್ವರ ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗರ್ವನರ್ ಪ್ರಭಾಕರ್ ಬಿ ಕುಂಭಾಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಳ್ಳಲಿದೆ.

Celebrating Women: Digitall 2023 by Snehalaya Charitable Trust

International Women’s Day is celebrated at Snehalaya Manjeshwara with the theme DigitALL 2023 Mrs Deepthi, Community Counsellor, Kudumbashree & Team Leader Jal-Jeevan Mission, inaugurated this Occasion. Mrs Olivia Crasta, the Founder trustee cum Secretary, served as the president of the programme. The presence of Mrs Tolsy Tom, Psycho-Social School Counsellor Department of WCD, and Mrs Befathima, Resource Person, Kudumbasree District Mission, Kasaragod made this event inspirational.Mrs Hilda Lobo from Mangalore was honoured for her Humanitarian work.

The Event was made more colourful and festive by the many cultural performances from Snehalaya staff members, residents, and students from Yenepoya college. All of the women who came to the event were acknowledged and thanked. Mr Hareesh Psw welcomed the Gathering, and Mr Sirajudeen Psw delivered the vote of Thanks. Mr Clint Joseph senior Psychiatric Social worker and Ms Asha Psw served as the emcees of the Programme.

ಜೇಸಿಐ ಕುಂದಾಪುರ ಸಿಟಿ : 7 ದಿನಗಳ ಮಹಿಳಾ ಸಪ್ತಾಹ ದಿನಾಚರಣೆ

ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ಮಾರ್ಚ್ ತಿಂಗಳು ವಿಶ್ವಮಹಿಳಾ ದಿನಾಚರಣೆ ಅಂಗವಾಗಿ, ಅಧ್ಯಕ್ಷರಾದ ಜೇಸಿ ಡಾ ಸೋನಿ ಇವರ ಸಾರಥ್ಯದಲ್ಲಿ ಜೇಸಿ ಮಹಿಳಾ ಅಧ್ಯಕ್ಷೆ ಪ್ರೇಮ ಡಿಕುನ್ಹಾ ಇವರ ಸಹಕಾರದೊಂದಿಗೆ ಸತತವಾಗಿ 7 ದಿನ ಮಹಿಳಾದಿನಾಚರಣೆ ಆಚರಿಸುತ್ತಿದ್ದು, ಈ ಸಪ್ತಾಹದ ಕಾರ್ಯಕ್ರಮವಾಗಿ ಮೂಡ್ಲಕಟ್ಟೆ MIT ಇಂಜಿನಿಯರಿಂಗ್ ಕಾಲೇಜಿನಲ್ಲಿ, ಲಿಂಗ ಸಮಾನತೆ ವಿಷಯದ ಮೇಲೆ ಚರ್ಚಾ ಕಾರ್ಯಕ್ರಮ ನೆರವೇರಿತು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವಿಶ್ವ ಮಹಿಳಾ ದಿನಾಚರಣೆ, ಸನ್ಮಾನ

ಸಮಾಜದಲ್ಲಿ ಪುರುಷರಷ್ಟೇ ಸ್ತ್ರೀ ಕೂಡ ಸಮಾನಳಾಗಿದ್ದು ಹೆಣ್ಣು ಈ ಸಮಾಜದ ಕಣ್ಣಾಗಿದ್ದಾಳೆ. ಹೆಣ್ಣು ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಸಾಧನೆಯನ್ನು ಮಾಡುತ್ತಿದ್ದಾಳೆ ಎಂದು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹೇಳಿದರು.
ಅವರು ಬುಧವಾರ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ವತಿಯಿಂದ ಜರಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಜ ಹೆರಿಗೆ ಎಂಬುದ ವೈದ್ಯಕೀಯ ಲೋಕಕ್ಕೆ ಸವಾಗಿರುವ ಇಂದಿನ ಕಾಲದಲ್ಲಿ ಸುಮಾರು 25 ವರ್ಷಗಳ ಹಿಂದೆಯೇ ಇನ್ನೂರಕ್ಕೂ ಅಧಿಕ ಗರ್ಭಿಣಿಯರಿಗೆ ಸಹಜ ಹೆರಿಗೆ ಮಾಡಿಸಿರುವ ಬೋಳ ಕೊಳಜಾಲು ಅಪ್ಪಿ ಪೂಜಾರ್ತಿ ಅವರಿಗರ ವಿಶ್ವ ಮಹಿಳಾ ದಿನದ ಅಂಗವಾಗಿ ಮನೆಗೆ ತೆರಳಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್, ಪೂರ್ವಾಧ್ಯಕ್ಷ ಸತೀಶ್ ಅಬ್ಬನಡ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಸತೀಶ್, ಕಾರ್ಯದರ್ಶಿ ಲಲಿತಾ ಆಚಾರ್ಯ, ಉಫಾಧ್ಯಕ್ಷೆ ಲೀಲಾ ಪೂಜಾರಿ ಸದಸ್ಯರಾದ ಸುರೇಶ್ ಅಬ್ಬನಡ್ಕ, ಸಂಧ್ಯಾ ಶೆಟ್ಟಿ, ವೀಣಾ ಪೂಜಾರಿ, ಪುಷ್ಪ ಕುಲಾಲ್, ಹರಿಣಿ ಪೂಜಾರಿ ಮೊದಲಾದವರಿದ್ದರು.  

ಮಂಗಳೂರು : ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ 2023


ಮಂಗಳೂರು: ದಿನಾಂಕ 8.03.2023 ರಂದು ಸಹೋದಯ ಬೆಥನಿ ಸೇವಾ ಕೇಂದ್ರ ಬೆಂದುರೂ ಮಂಗಳೂರು ಹಾಗೂ ಅರೈಝ್ ಪೌಂಡೇಶನ್ , ಸಹೋದಯ ಬೆಥನಿ ಮಹಿಳಾ ಒಕ್ಕೂಟ, ಮಂಗಳೂರು ವಿಶ್ವ ವಿದ್ಯಾನಿಲಯ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರ ಜಂಟಿ ಆಶ್ರಯದಲ್ಲಿ ಪುಷ್ಪಾಲಯ ಸಂಭಾಗಣದಲ್ಲಿ ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ ಎಂಬ ವಿಷಯವನ್ನಾಧರಿಸಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನಾ ನೃತ್ಯದ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಭ| ಸಂತೋಷ್ ಮರಿಯಾ ಬಿ.ಎಸ್ ಮಹಾಮಾತೆಯ ಸಲಹೆದಾರರು/ ಬೆಥನಿ ಸಮಾಜ ಸೇವಾ ಪ್ರತಿಷ್ಠಾನದ ಸದಸ್ಯೆಯಾದ ಇವರು ಈಗಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು, ಹುಡುಗಿಯರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳ ಜಾಗತಿಕ ಸಬಲೀಕರಣಕ್ಕೆ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ. ತಾಂತ್ರಿಕ ಯುಗವು ಎಲ್ಲಾ ರೀತಿಯ ಅಸಮಾನತೆ ಮತ್ತು ಅದನ್ನು ತೊಡೆದು ಹಾಕಲು ಅಭೂತಪೂರ್ಣ ಅವಕಾಶವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಯಾವುದೇ ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಮಾನರೆಂಬ ಭಾವನೆ ಎಲ್ಲರಲ್ಲೂ ಮೂಡಬೇಕೆಂದು ತಿಳಿಸುತ್ತಾ ತಮ್ಮ ಉತ್ತಮ ಸಂದೇಶವನ್ನು ನೀಡಿ ಮಹಿಳೆಯರನ್ನು ಹುರಿದುಂಬಿಸಿ ಶುಭ ಹಾರೈಸಿದರು. ತದನಂತರ ಶ್ರೀ ಶಶಿಧರ್ ಪಟ್‍ಗಾರ್ ಇವರು ಈ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸೈಬರ್ ಕ್ರೈಂ ಎಂದರೇನು? ಇದರಿಂದ ಮಹಿಳೆಯರು ಯಾವೆಲ್ಲ ರೀತಿಯಲ್ಲಿ ತೊಂದರೆಗೆ ಒಳಗಾಗುತ್ತಿದ್ದಾರೆ, ಸಮಾಜಿಕ ಜಾಲತಾಣದಿಂದಾಗುವ ಉಪಯೋಗ ಮತ್ತು ದುರುಪಯೋಗÀ, ಇದರಿಂದ ಯಾವ ರೀತಿಯಲ್ಲಿ ಜಾಗೃತಿ ಹೊಂದಬೇಕೆಂಬುದರ ಕುರಿತಾಗಿ ಮಾಹಿತಿ ನೀಡಿದರು. ನಂತರ ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವೇದಿಕೆಯ ಮೇಲೆ ನಗದು ಹಾಗೂ ಪ್ರಮಾಣ ಪತ್ರ ನೀಡಲಾಯಿತು ಅದರೊಂದಿಗೆ ಹೊಲಿಗೆ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಸಹೋದಯ ಕಲಿಕಾ ಸಾಮಥ್ರ್ಯ ಪರೀಕ್ಷೆಯ ರೂವಾರಿಯಾದ ಭ| ಎಸ್ತೆಲಿಟಾ ಬಿ.ಎಸ್ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಸಹೋದಯ ಬೆಥನಿ ಮಹಿಳಾ ಒಕ್ಕೂಟದ ಉತ್ತಮ ನಾಯಕಿಯಾರಾದ ಶ್ರೀಮತಿ ಸುನೀತಾ, ಶ್ರೀಮತಿ ಶೋಭಾ ಇವರು ಕಳೆದ ವರ್ಷ ಎಲ್ಲಾ ಸ್ವ-ಸಹಾಯ ಸಂಘಗಳ ಆಂತರಿಕ ಮೌಲ್ಯ ಮಾಪನವನ್ನು ನಡೆಸಿಕೊಟ್ಟ ಇವರಿಗೆ ವೇದಿಕೆಯಲ್ಲಿ ಅಭಿನಂದಿಸಲಾಯಿತು.