ಗಂಗೊಳ್ಳಿಂತ್ ದಾದ್ಲ್ಯಾಂಚೆ ಸ್ವ. ಸಹಾಯ್ ಸಂಘಟನಾ ವಿಶಿಂ ಮಾಹೆತ್ ಶಿಬಿರ್ -ಸಮಾಜಿಕ್ ಅಭಿವೃದ್ಧಿ ಆಯೋಗ್ ಸಂಚಾಲಕಾಂಚೆಂ ಸಹಮಿಲನ್


ಗಂಗೊಳ್ಳಿ: ಸಮನ್ವಯ ದಾದ್ಲ್ಯಾಂಚೆ ಸ್ವ. ಸಹಾಯ್ ಸಂಘಟನ್ ಉಡುಪಿ ಜಿಲ್ಲೆ ತಶೆಂಚ್ ಸಮಾಜಿಕ್ ಅಭಿವೃದ್ಧಿ ಆಯೋಗ್ ಗಂಗೊಳ್ಳಿ ಫಿರ್ಗಜೆಚಾ ಮುಕೇಲ್ಪಣಾರ್ ಮಾರ್ಚ್ 5 ತಾರೀಕೆರ್ ಆಯ್ತಾರಾ ದನ್ಪಾರ 3:00 ವೊರಾರ್ ವಾರಾಡ್ಯಾ ಹಂತಾರ್ ದಾದ್ಲ್ಯಾಂಚೆ ಸ್ವ. ಸಹಾಯ್ ಸಂಘಟನಾ ವಿಶಿಂ ಮಾಹೆತ್ ಆನಿ ಸಾಂಧ್ಯಾಂಚೆಂ ಸಹಮಿಲನ್ ತಶೆಂಚ್ ತರ್ಬೆತಿ ಕಾರ್ಯಕ್ರಮ್ ಸಾಂ. ಜುಜೆ ವಾಜ್ ಸಭಾ ಸಾಲಾಂತ್ ಆಸಾ ಕೆಲೆಂ. ಹ್ಯಾ ಕಾರ್ಯಕ್ರಮಾಂಕ್ ಸಂಪನ್ಮೂಳ್ ವ್ಯಕ್ತಿ ಜಾವ್ನ್ ಸಂಪದಾಚೆಂ ದಿರೊಕ್ತರ್ ಬಾ| ರೆಜಿನಾಲ್ಡ್ ಪಿಂಟೊ ಹಾಜರ್ ಆಸ್ಲೆ. ತಾಣಿ ದಾದ್ಲ್ಯಾಂಚೆ ಸ್ವಸಹಾಯ್ ಸಂಘ್ ಆರಂಭ್ ಕರ್ಚೊ ಉದ್ದೇಶ್, ಸಂಘ ಥಾವ್ನ್ ಜಾಲ್ಲೆ ಬರೆಂಪಣ್, ತಶೆಂಚ್ ಸಂಘ ಥಾವ್ನ್ ಕಿತೆಂ ಆಶೆತಾತ್ ಮ್ಹಳ್ಳಿಂ ತೀನ್ ಸವಾಲಾಂ ಸಾಂದ್ಯಾಂಕ್ ದಿಲಿ ಆನಿ ಪಂಗಡ್ ತರ್ಕಾ ಮಾರಿಫಾತ್ ಜಾಪಿ ಬರವ್ನ್ ಸಭೆರ್ ಸಾದರ್ ಕರ್ಚೆಂ ಅವ್ಕಾಸ್ ದಿಲೆಂ . ಉಪ್ರಾಂತ್ ಸ್ವ-ಸಹಾಯ್ ಸಂಘಾಚೊ ಉದ್ದೇಶ್ ಕಿತೆಂ ಆನಿ ಸಂಘ್ ಕಶೆಂ ಚಲಂವ್ಚೆ ಮ್ಹಳ್ಯಾ ವಿಶ್ಯಾಂತ್ ಸವಿಸ್ತಾರ್ ರಿತಿನ್ ಮಾಹೆತ್ ದಿಲಿ. ಫಿರ್ಗಜ್ ಯಾಜಕ್ ಬಾl ತೋಮಸ್ ರೋಶನ್ ಡಿಸೋಜಾನ್ ಸುರ್ವಿಲೆ ಮಾಗ್ಣೆಂ ಶಿಕಯ್ಲೆಂ, ಬಾ। ಎಡ್ವಿನ್ ಡಿಸೋಜಾನ್ ಸಂದೇಶ್ ದಿಲೆಂ. ಹ್ಯಾ ಕಾರ್ಯಕ್ರಮಾಕ್ ಸ್ವ- ಸಹಾಯ್ ಸಂಘಾಚೊ ಕೇಂದ್ರಾಚೊ ಅಧ್ಯಕ್ಷ್ ಆಲ್ಟನ್ ರೆಬೇರೊ ತಶೆಂಚ್ ಹುದ್ದೆದಾರಾಂ ಹಾಜರ್ ಆಸ್ಲಿಂ. ಒಟ್ಟು 120 ಜಣ್ ಸಾಂದ್ಯಾಂನಿ ಹ್ಯಾ ಕಾರ್ಯಾಕ್ರಮಾಂತ್ ಭಾಗ್ ಘೆತ್ಲೆಂ.

ಭವಿಷ್ಯದ ದೃಷ್ಟಿಯಿಂದ ಜೀವ ವಿಮೆ ಮಾಡಿಸಿ :  ಉಪ ಶಾಖೆ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ 

ಶ್ರೀನಿವಾಸಪುರ : ಎಲ್ ಐ ಸಿ ಒಂದು ಜನ ಕ್ಷೇಮಾಭಿವೃದ್ಧಿ ಸಂಸ್ಥೆಯಾಗಿದ್ದು , ಏಜೆಂಟರು ಭವಿಷ್ಯದ ದೃಷ್ಟಿಯಿಂದ ಜೀವ ವಿಮೆ ಮಾಡಿಸುವಂತೆ ಜನರ ಮನವೊಲಿಸಬೇಕು ಎಂದು ತಾಲ್ಲೂಕು ಎಲ್‌ಐಸಿ ಉಪ ಶಾಖೆ ವ್ಯವಸ್ಥಾಪಕ ಎಸ್.ವಿ. ಪ್ರಸಾದ್ ಹೇಳಿದರು .

ಪಟ್ಟಣದ ಎಲ್‌ಐಸಿ ಉಪ ಶಾಖೆಯಲ್ಲಿ  ಏರ್ಪಡಿಸಿದ್ದ ಎಲ್‌ಐಸಿ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು , ಎಲ್‌ಐಸಿ ದೇಶದ ಜನರ ಭವಿಷ್ಯದಕಡೆ ಗಮನ ಹರಿಸುವ ಸಂಸ್ಥೆಯಾಗಿ ಮಾತ್ರ ಉಳಿದಿಲ್ಲ. ದೇಶದ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ನೆರವು ನೀಡುತ್ತಿದೆ , ಅದರಿಂದ ದೇಶದ ಪ್ರಗತಿ ಶೀಘ್ರಗತಿಯಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಎಲ್‌ ಐ ಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್. ಕುಲಕರ್ಣಿ ಮಾತನಾಡಿ , ಸಂಸ್ಥೆ ಏಜೆಂಟರು ಮನೆ ಮನೆಗೆ ಹೋಗಿ ಜೀವ ವಿಮೆ ಮಹತ್ವ ತಿಳಿಸಬೇಕು. ಅವರವರ ಆರ್ಥಿಕ ಮಟ್ಟಕ್ಕೆತಕ್ಕ೦ತೆ ಪಾಲಿಸಿ ಮಾಡಿಸುವಂತೆ ಮನವೊಲಿಸಬೇಕು. ಪಾಲಿಸಿದಾರರಿಗೆ ಉತ್ತಮ ಸೇವೆ ನೀಡಬೇಕು. ಸಮಯ ಬಂದಾಗ ಎಲ್‌ಐಸಿಯಿಂದ ದೊರೆಯುವ ಸೌಲಭ್ಯ ಕೊಡಿಸಬೇಕು. ಜನರ ವಿಶ್ವಾಸಗಳಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಎಲ್‌ ಐ ಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ಆರ್. ಕುಲಕರ್ಣಿ ಏಜೆಂಟರು ಸಭೆಯಲ್ಲಿ ಭಾಗವಹಿಸಿದರು.

ಪತ್ರಕರ್ತರು ಸ್ವಾಭಿಮಾನ , ನಿರ್ದಾಕ್ಷಿಣ್ಯ ಮನೋಭಾವ ಉಳಿಸಿಕೊಂಡು ವೃತ್ತಿಗೌರವ ಬೆಳೆಸಿಕೊಳ್ಳಬೇಕು – ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ. ಗೋಪಿನಾಥ್ 

ಕೋಲಾರ : ಪತ್ರಕರ್ತರು ಸ್ವಾಭಿಮಾನ ಮತ್ತು ನಿರ್ದಾಕ್ಷಿಣ್ಯ ಮನೋಭಾವ ಉಳಿಸಿ ಕೊಂಡು ವೃತ್ತಿ ಘನತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ , ಇಂದಿನ ಬಹುತೇಕ ಪತ್ರಕರ್ತರಲ್ಲಿ ಈ ಎರಡೂ ಗುಣಗಳ ಕೊರತೆ ಕಂಡುಬರುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದಿಸಿದರು.

ಕೆ ಯು ಡಬ್ಲ್ಯೂ ಜೆ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಎಂ.ಜಿ. ಪ್ರಭಾಕರ್ ಅವರನ್ನು ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಅಭಿನಂದಿಸಿ ಅವರು ಮಾತನಾಡಿದರು. ವೃತ್ತಿಯಲ್ಲಿ ಹಮ್ಮುಬಿಮ್ಮು ಇಲ್ಲದೆ ಸ್ವಾಭಿಮಾನ ಹಾಗೂ ನಿರ್ದಾಕ್ಷಿಣ್ಯ ಮನೋ ಭಾವ ಉಳಿಸಿಕೊಂಡಿದ್ದ ಎಂ.ಜಿ. ಪ್ರಭಾಕರ್ ಅವರ ಹೊನ್ನುಡಿ ಪತ್ರಿಕೆಯ ಕಚೇರಿಯು 90 ರ ದಶಕದಲ್ಲಿ ಕೋಲಾರ ಜಿಲ್ಲೆಯ ಸಾಮಾಜಿಕ ಹೋರಾಟಗಳ ವೇದಿಕೆ ಇದ್ದಂತೆ ಕಾರ್ಯನಿರ್ವಹಿಸುತ್ತಿತ್ತು .

ಜಿಲ್ಲೆಯ ಹೋರಾಟಗಳ ಕುರಿತು ಪ್ರಮುಖ ನಿರ್ಧಾರ ಗಳನ್ನು ಹೊನ್ನುಡಿ ಕಚೇರಿಯಲ್ಲಿಯೇ ಕೈಗೊಳ್ಳಲಾಗುತ್ತಿತ್ತು. ಎಂ.ಜಿ.ಪ್ರಭಾಕರ್ ಅವರು ಸಾಮಾಜಿಕ , ಕಾರ್ಮಿಕ , ಹಾಗೂ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿ ವಹಿಸುತಿದ್ದರು ಎಂದು ನೆನಪಿಸಿಕೊಂಡರು. 

ಕೆ ಯು ಡಬ್ಲ್ಯೂ ಜೆ  ಖಜಾಂಚಿ ಎಂ. ವಾಸುದೇವ ಹೊಳ್ಳ ಮಾತನಾಡಿ , ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ ಎಂ.ಜಿ. ಪ್ರಭಾಕರ್. ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಹೇಳಿದರು. ಬೆಂಗಳೂರಿನಲ್ಲಿ ರಾಜ್ಯ ಸಂಘದ ಭವನ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ . 5 ಕೋಟಿ ಹಣ ಬಿಡುಗಡೆಯಾಗಿದ್ದು , 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು. 

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ , ಪತಕರ್ತರಿ ಹೊನ್ನುಡಿ ಪತ್ರಿಕೆ ಕಾಲೇಜು ಇದ್ದಂತೆ . ಮನಸ್ಸು ಮಾಡಿದ್ದರೆ ಎಂ.ಜಿ.ಪ್ರಭಾಕರ್ ಅವರು ಮಂತ್ರಿ ಆಗಬಹುದಿತ್ತು.  ಅಷ್ಟು ಪ್ರಭಾವಿ ಪತ್ರಕರ್ತ. ಎಲ್ಲರಲ್ಲೂ ಆತ್ಮವಿಶ್ವಾಸ ತುಂಬುವ ಪತ್ರಕರ್ತ , ಕನ್ನಡದ ಹೋರಾಟದಲ್ಲೂ ಮುಂಚೂಣಿಯಲ್ಲಿ ನಿಂತರು. ಕರ್ನಾಟಕ ರಾಜ್ಯೋತ್ಸವವನ್ನು ಮಿನಿ ದಸರೆಯಾಗಿ ರೂಪಿಸಿದವರು ಎಂ.ಜಿ.ಪ್ರಭಾಕರ್ ಎಂದು ಬಣ್ಣಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ ವಿ.ಮುನಿರಾಜು ಮಾತನಾಡಿ ,ಎಂ.ಜಿ. ಪ್ರಭಾಕರ್ ಅವರ ಹೋರಾಟದ ಫಲವಾಗಿ ಕೋಲಾರಕ್ಕೆ ರೈಲು ಮಾರ್ಗ ಉಳಿದಿದೆ. ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದವರು. ಹಲವರಿಗೆ ಮಾರ್ಗ ಹಾಕಿಕೊಟ್ಟಿದ್ದಾರೆ. ಎಂ.ಜಿ. ಪ್ರಭಾಕರ್ ಅವರ ಮಾತಿಗೆ ಜಿಲ್ಲಾಡಳಿತ ನಡುಗುತಿತ್ತು. ಎಷ್ಟು ಸನ್ಮಾನ ಮಾಡಿದರೂ ಸಾಲದು ಎಂದರು. 

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ , ಧೈರ್ಯ ನೀಡುವವರೇ ಮುಂದಿನ ನಾಯಕರು. ಅಂಥವರಲ್ಲಿ ಎಂ.ಜಿ. ಪ್ರಭಾಕರ್ ಕೂಡ ಒಬ್ಬರು . ಅವರು ಎಲ್ಲಾ ಪತ್ರಕರ್ತರಿಗೆ ಮಾದರಿ ಎಂದರು. ಪತ್ರಕರ್ತ ಪ್ರಕಾಶ್ ( ಮಾಮಿ ) , ಉಪಾಧ್ಯಕ್ಷ ಟೇಕಲ್ ಲಕ್ಷ್ಮೀಶ್ , ಎಸ್.ಚಂದ್ರಶೇಖರ್ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ.ಪ್ರಭಾಕರ್ , ನನಗೆ ಸರ್ವಸ್ವ ಪತ್ರಿಕಾ ವೃತ್ತಿ . ಬೇರೊಂದು ಕೆಲಸ ಗೊತ್ತಿಲ್ಲ . ಪತ್ರಿಕೆ ಬೆಳೆಸಲು ನಾನೊಬ್ಬನೇ ಕಾರಣ ಅಲ್ಲ . ಹಲವಾರು ಮಂದಿ ಸೇರಿ ಕಟ್ಟಿದ ಪತ್ರಿಕೆ . ಈ ಪ್ರಶಸ್ತಿ ಎಲ್ಲರಿಗೂ ಸೇರಬೇಕು ಎಂದರು. 

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎನ್.ಮುನಿವೆಂಕಟೇಗೌಡ , ಓಂಕಾರಮೂರ್ತಿ , ಕೆ.ಆಸೀಫ್ ಪಾಷ , ಸಂದಕುಮಾರ್‌ , ಎನ್.ಶಿವಕುಮಾರ್ , ಎನ್ . ಗಂಗಾಧರ್ , ಎಂ.ಲಕ್ಷ್ಮಣ , ಎನ್.ಸತೀಶ್ , ಬಾಲನ್ , ಬೆಟ್ಟಣ್ಣ , ಪವನ್ , ಅಮರ್ , ಕಿತ್ತಂಡೂರು ವೆಂಕಟರಾಮ್ , ಪುರು ಷೋತ್ತಮ್ , ಜೆ.ಅಂಬರೀಶ್ , ಎಂ . ವಿನೋದ್ , ಮುಕ್ತಿಯಾರ್ ಅಹಮದ್ , ಸರ್ವಜ್ಞಮೂರ್ತಿ , ಶ್ರೀಹರಿ , ಶ್ರೀಕಾಂತ್ , ಶಿವುಸಸ್ಯ , ಪ್ರಕಾಶ್ ಉಪಸ್ಥಿತರಿದ್ದರು.

ಕುಂದಾಪುರ :ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಕುಂದಾಪುರ : ಜೆಸಿಐ ಕುಂದಾಪುರ ಸಿಟಿ ಯಾ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಯಾ ಪ್ರಯುಕ್ತ ಮಹಿಳಾ ಸಮಾನತೆ ಯಾ ಬಗ್ಗೆ ಬೀದಿ ನಾಟಕ ಹಾಗು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕಾರ್ ರ್ಯಾಲಿಯನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ತಾಲೂಕು ಪಂಚಾಯತ್ ಎದುರುಗಡೆ ಪುರಸಭೆ ಅಧ್ಯಕ್ಷ ರಾದ ವೀಣಾ ಭಾಸ್ಕರ್ ಉದ್ಘಾಟನೆ ನೆರೆವೇರಿಸಿ ಮಹಿಳೆಯರು ಇಂದು ಎಲ್ಲ ಕ್ಷೇತ್ರ ದಲ್ಲಿ ತೊಡಗಿಸಿಕೊಂಡು ತನ್ನ ಕಾರ್ಯ ವ್ಯಾಪಿ ಯನ್ನು ಪುರುಷ ರಿಗೆ ಸಮಾನವಾಗಿ ಕೆಲಸ ಮಾಡಿ ಕೊಂಡು ಬರ್ತಾ ಇದೆ. ಮಹಿಳೆಯರು ಶಿಕ್ಷಣ ರಾಜಕೀಯ ಸಮಾಜ ಸೇವೆ ಉದ್ಯೋಗ ಸಾಂಸ್ಕೃತಿಕ ಹಾಗು ಇನ್ನಿತರ ಕಾರ್ಯಕ್ರಮ ದಲ್ಲಿ ತೊಡಗಿಸಿ ಕೊಂಡಿದೆ ಎಂದು ಮಾತನಾಡಿದರು

ಮುಖ್ಯ ಅತಿಥಿಯಾಗಿ ವಲಯ 15 ರ ಲೇಡಿ ಜೇಸಿಸ್ ನ ನಿರ್ದೇಶಕ ರಾದ ಸುಮನಾ ಪೊಳಲಿ ಮಾತನಾಡಿ ಜೆಸಿಐ ಕುಂದಾಪುರ ಸಿಟಿ ಸುಮಾರು 17 ವರ್ಷ ಗಳಿಂದ ಈ ಭಾಗದಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಆಯೋಜಿಸಿದ ವಲಯ ಹಾಗು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಕೊಂಡ ಸಂಸ್ಥೆ
ಕರೋನ ಸಂದರ್ಭದಲ್ಲಿ ಕಳೆದ ಎರಡು ವರ್ಷ ದಲ್ಲಿ 15 ಸಾವಿರ ಜನರಿಗೆ ಹಸಿದವರಿಗೆ ಊಟ 500 ಮನೆಗೆ ಕಿಟ್ ವಿತರಣೆ ಸುಮಾರು 7 ಸಾವಿರ ಜನರಿಗೆ ಮಾಸ್ಕ್ ನೀಡಿ ಜನ ಮನ್ನಣೆ ಪಡೆದ ಸಂಸ್ಥೆ ಅಗಿದೆ ಎಂದು ನುಡಿದರು
ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ಅಧ್ಯಕ್ಷತೆ ವಹಿಸಿದರು
ಸಮಾರಂಭ ದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಸಾದ್ ಮನೀಶ್ ಆಸ್ಪತ್ರೆ ಯಾ ನಿರ್ದೇಶಕರು ಡಾ ಪ್ರಮೀಳಾ ನಾಯಕ್ ಡಾ ವಿಜಯ ಲಕ್ಷ್ಮಿ ಡಾ ಅಮ್ಮಾಜಿ ಡಾ ಸ್ವಾತಿ ಶೇಟ್ ಭಾರತೀಯ ಜೇಸಿಸ್ ನ ರಾಷ್ಟ್ರೀಯ ಸಂಯೋಜಕರಾದ ಕೆ ಕಾರ್ತಿಕೇಯ ಮಧ್ಯಸ್ಥ ವಲಯ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕುಂದಾಪುರ ಸಿಟಿ ಯಾ
ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ
ವಿಜಯ ಭಂಡಾರಿ ಮಂಜುನಾಥ್ ಕಾಮತ್ ನಾಗೇಶ್ ನಾವಡ ಜಯಚಂದ್ರ ಶೆಟ್ಟಿ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಕುಲಾಲ್ ಗಿರೀಶ್ ಹೆಬ್ಬಾರ್ ಶ್ರೀಧರ್ ಸುವರ್ಣ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಜೊತೆ ಕಾರ್ಯದರ್ಶಿ ಶೈಲಾ ಸದ್ಯಸ್ಯರಾದ ದಿನೇಶ್ ಪುತ್ರನ್ ರೇಷ್ಮ ಕೋಟ್ಯಾನ್ ಸುವರ್ಣ ಅಲ್ಮೆಡ ವಿಠಲ್ ಹೆಬ್ಬಾರ್ ಸರೋಜಾ ಲೋನಾ ಕಲ್ಪನಾ ಭಾಸ್ಕರ್ ಸೌರಬಿ ಪೈ ಮೇಬಲ್ ಡಿ ಸೋಜಾ ಡಾ ಸವಿತಾ ಆಚಾರ್ ಐರಿ ಡಿ ಸೋಜಾ ಸ್ವಪ್ನ ಇರೆನ ಬೇರಟೊ ಯುವ ಜೇಸಿ ಛೇರ್ಮನ್ ಚಂದ್ರಿಕಾ ಕಾಮತ್ ಇನ್ನಿತರರು ಉಪಸ್ಥಿತರಿದ್ದರು
ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ವಂದಿಸಿದರು