ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ

ಮಂಗಳೂರು: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಬಿಷಪರ ನಿವಾಸದಲ್ಲಿರುವ ಕಛೇರಿಯ ನವೀಕರಣದ ಉದ್ಘಾಟನೆ ಹಾಗೂ ಆಶೀರ್ವಚನ 06-03-2023 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಜರುಗಿತು. ಉದ್ಘಾಟನೆಯನ್ನು ಹಿರಿಯ ಮಾಜಿ ಅಧ್ಯಕ್ಷರಾದ ಶ್ರೀ. ಕಾಸ್ಮಿರ್ ಮಿನೇಜಸ್ ನೆರವೇರಿಸಿದರು. ಆಶೀರ್ವಚನವನ್ನು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ಇದರ ಅಧ್ಯಾತ್ಮಿಕ ನಿರ್ದೇಶಕರಾದ ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ ಅವರು ಕಛೇರಿಯ ಆಶೀರ್ವಚನಗೊಳಿಸಿ, ಪ್ರಾರ್ಥನೆ ಸಲ್ಲಿಸಿದರು.
ನಂತರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೋ ಪ್ರಸ್ತಾವಿಕ ಭಾಷಣದಲ್ಲಿ ಕಥೊಲಿಕ್ ಸಭಾ ಕಚೇರಿಯ ಅವಶ್ಯಕತೆಯ ಬಗ್ಗೆ ವಿವರವನ್ನು ನೀಡಿ ಎಲ್ಲರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ ಕಾಸ್ಮಿರ್ ಮಿನೇಜಸ್‍ರವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ತಮ್ಮ ನುಡಿಯಲ್ಲಿ ಶ್ರೀ ಕಾಸ್ಮಿರ್ ಮಿನೇಜಸ್ ಕ್ಯಾಥೋಲಿಕ್ ಸಭಾದ ಪ್ರಾರಂಭಿಕ ದಿನಗಳ ಹೋರಾಟಗಳು ಮತ್ತು ತೊಂದರೆಗಳ ಬಗ್ಗೆ ನೆನಪಿಸಿದರು ಹಾಗೂ ನಮ್ಮ ಸಮುದಾಯವನ್ನು ಬಳಿಷ್ಟಗೊಳಿಸಲು ಕರೆ ನೀಡಿದರು.
ಶ್ರೀ ಮರಿಟ್ಟೊ ಸಿಕ್ವೇರಾರವರು ಕಛೇರಿಯ ನವೀಕರಣಗೊಳಿಸಿದ್ದಕ್ಕೆ ಅಧ್ಯಕ್ಷರನ್ನು ಅಭಿನಂದಿಸಿದರು ಮತ್ತು ಅವರ ಸಾಮಥ್ರ್ಯ ಮತ್ತು ಕಾರ್ಯವನ್ನು ಶ್ಲಾಘಿಸಿದರು. ಹಾಗೆಯೇ ಅವರು ಬಿಷಪ್ ಹೌಸ್‍ನಲ್ಲಿ ಹೇಗೆ ಕಚೇರಿಯನ್ನು ಪಡೆದರು ಎಂಬುದನ್ನು ನೆನಪಿಸಿಕೊಂಡರು, ನಮ್ಮ ಸಮುದಾಯದ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಲು ಹಿಂದಿನ ಎಲ್ಲಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಒಂದು ಮಾದರಿಯಾಗಬೇಕಾಗಿ ಪ್ರೇರೇಪಿಸಿದರು.
ಅತಿ ವಂದನೀಯ.ಫಾ| ಡಾ.ಜೆ.ಬಿ.ಸಲ್ಡಾನ್ಹ, ತಮ್ಮ ಭಾಷಣದಲ್ಲಿ ನಮ್ಮ ಸಮುದಾಯದ ಯೋಗ ಕ್ಷೇಮಕ್ಕಾಗಿ ಕ್ಯಾಥೋಲಿಕ್ ಸಭೆಯು ಯಾವುದೇ ವೈಮನಸ್ಸು ಇಟ್ಟುಕೊಳ್ಳದೆ ಒಟ್ಟಾಗಿ ಕೆಲಸ ಮಾಡಿ ನಮ್ಮ ಸಮುದಾಯವನ್ನು ಬಲಿಷ್ಟಪಡಿಸಲು ಕರೆ ಕೊಟ್ಟು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ಆದ ವಂದನೀಯ.ಫಾ| ಮ್ಯಾಕ್ಸಿಮ್ ರೊಸಾರಿಯೊ, ಹಿಂದಿನ ಆಧ್ಯಾತ್ಮಿಕ ನಿರ್ದೇಶಕರಾದ ಫಾ|ವಾಲ್ಟರ್‍ಡಿಮೆಲ್ಲೊ ಹಾಗೂ ಫಾ|.ಜೆ.ಬಿ.ಕ್ರಾಸ್ತಾ, ಆಮ್ಚೊ ಸಂದೇಶ್ ಆಡಳಿತ ಮಂಡಳಿಯ ಸಂಚಾಲಕರಾದ ಎಲ್ರೊಯ್ ಕಿರಣ್ ಕ್ರಾಸ್ಟೊ, ಸಮನ್ವಯ ಸಮಿತಿ ಸಂಚಾಲಕರಾದ ಶ್ರೀ ನೈಜಿಲ್ ಪಿರೇರಾ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳಾದ ಶ್ರೀ.ಎಲ್.ಜೆ. ಫೆನಾರ್ಂಡಿಸ್, ವಾಲ್ಟರ್‍ಡಿಸೋಜಾ, ಆಂಡ್ರ್ಯೂ ನೊರೊನ್ಹಾ, ಪೀಟರ್ ಜೆರಿ ರೋಡ್ರಿಗಸ್, ಫ್ಲೇವಿ ಡಿಸೋಜಾ, ಸಮನ್ವಯ ಸಮಿತಿ ಸಹ- ಸಂಚಾಲಕರಾದ ಶ್ರೀ ವಲೇರಿಯನ್ ಫೆರ್ನಾಂಡಿಸ್ ಮತ್ತು ಕೇಂದ್ರ, ವಲಯ ಮತ್ತು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಕಥೊಲಿಕ್ ಸಭಾ ಕಛೇರಿಯ ನವೀಕರಣ ಕಾರ್ಯಕ್ಕೆ ಸಹಕರಿಸಿದವರಿಗೆ ಪುಷ್ಪಗುಚ್ಛಗಳನ್ನು ನೀಡಿ ಗೌರವಿಸಲಾಯಿತು
ಶ್ರೀ ಎಲ್ರೋಯ್ ಕಿರಣ್ ಕ್ರಾಸ್ಟೊ ವಂದಿಸಿದರು. ಕೋಶಾಧಿಕಾರಿ ಅಲ್ಫೋನ್ಸ್ ಫೆನಾರ್ಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಭಾರತೀಯ ರೆಡ್ ಕ್ರಾಸ್ : ಜನ ಔಷಧಿ ದಿವಸದ ಆಚರಣೆಯ ಕೊನೆಯ ದಿನ ಜನ ಔಷಧಿ ಕೇಂದ್ರದ ಎದುರು ಮಾತ್ರ್ ಶಕ್ತಿ ಅಭಿಯಾನ ಕಾರ್ಯಕ್ರಮ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯಿಂದ ಜನ ಔಷಧಿ ದಿವಸದ ಕೊನೆಯ ದಿನದಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದ ಎದುರು ಮಾತ್ರ್ ಶಕ್ತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಅತಿಥಿ ಗಳಾಗಿ ಲಯನ್ ಪಿ.ಡಿ.ಜಿ. – ವಿ. ಜಿ ಶೆಟ್ಟಿ (ರೆಡ್ ಕ್ರಾಸ್ ರಾಜ್ಯ ಶಾಖೆಯ ಸಮಿತಿ ಸದಸ್ಯರು ಕೂಡಾ) ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ರೆಡ್ ಕ್ರಾಸ್ ಕುಂದಾಪುರ ಶಾಖೆಯ ಕಾರ್ಯ ವೈಖರಿಯನ್ನು ಕೊಂಡಾಡಿದರು. 25 ಜನ ಮಹಿಳೆಯರನ್ನು ಸನ್ಮಾನಿಸಲಾಯಿತು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಸಮಿತಿಯ ಸದಸ್ಯರುಗಳಾದ ಶಿವರಾಮ ಶೆಟ್ಟಿ (ಖಜಾಂಚಿ) ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಸದಾನಂದ ಶೆಟ್ಟಿ, ಅಬ್ದುಲ್ ಬಶೀರ್, ದಿನಕರ ಅರ್ ಶೆಟ್ಟಿ, ಸುಧಾಕರ ಶೆಟ್ಟಿ ಹುಂತ್ರಿಕೆ ಮತ್ತು ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.

ಬಸ್ರೂರು : ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ


ಕುಂದಾಪುರ: ಪುಸ್ತಕಗಳನ್ನು ಓದುವುದರಿಂದ ಆತ್ಮವಿಶ್ವಾಸ, ಏಕಾಗ್ರತೆ, ಶಿಸ್ತು, ಸೃಜನಶೀಲತೆ ಹೆಚ್ಚುತ್ತದೆ. ಪುಸ್ತುಕಗಳು ಜ್ಞಾನ ಭಂಡಾರವಿದ್ದಂತೆ. ಪುಸ್ತಕಗಳ ಅಧ್ಯಯನದಿಂದ ಜ್ಞಾನವೃದ್ಧಿಯಾಗುವ ಮೂಲಕ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಮುತ್ತಯ್ಯ ಶೆಟ್ಟಿ ಹೇಳಿದರು.
ಸಾಹಿತಿ ಪಾರ್ವತಿ ಜಿ ಐತಾಳ್ ಅವರು ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಕೊಡುಗೆಯಾಗಿ ನೀಡಲಾದ ಪುಸ್ತಕಗಳನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಕೆಆರ್ ಎಸ್ ಎಂಇ ಟ್ರಸ್ಟ್ ನ ಅಬ್ದುಲ್ ಜುನೈದ್, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರ : ಚಿಕ್ಕನಸಾಲು ರಸ್ತೆ ಕಾಂಕ್ರೀಟುಕರಣಗೊಂಡು 14 ವರ್ಷಗಳಾದರೂ ರಸ್ತೆ ಪಕ್ಕಗಳಲ್ಲಿ ಇಂಟರ್‍ಲಾಕ್ ಅಳವಡಿಕೆಯಾಗಿಲ್ಲ – ಈ ಭಾಗದ ಜನರು ಅಷ್ಟೂ ನತದ್ರಷ್ಟರೆ?


ಕುಂದಾಪುರ,ಮಾ.7: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಎರಡು ಮುಖ್ಯ ರಸ್ತೆಗಳನ್ನು ಬಿಟ್ಟರೆ, ನಂತರ ಅತ್ಯಂತ ಜನಸಂಚಾರ ಬಾಹನ ಸಂಚಾರ ಇರುವುದು ಚಿಕ್ಕನಸಾಲು ರಸ್ತೆಯಲ್ಲಿರುವುದು. ಆದರೆ ಈ ರಸ್ತೆಯ ಸ್ಥಿತಿ ನೋಡಿದರೆ ಬಹಳ ಚಿಂತಾಜನಕ. ಈ ರಸ್ತೆ ಕಾಂಕ್ರೀಟುಕರಣವಾಗಿ ಸುಮಾರು 14 ವರ್ಷಗಳಾದರೂ, ಇನ್ನೂ ಕೂಡ ಚಿಕ್ಕನಸಾಲು ರಸ್ತೆಯುದ್ದಕ್ಕೂ ಪಾದಚಾರಿಗಳಿಗಾಗಿ ಇರುವ ರಸ್ತೆ ಪಕ್ಕಗಳಲ್ಲಿ ಇಂಟರ್‍ಲಾಕ್‍ಗಳನ್ನು ಪೂರ್ತಿಯಾಗಿ ಹಾಕದೆ, ಪಾದಚಾರಿಗಳಿಗೆ, ಸ್ಥಳೀಯರಿಗೆ, ವಾಕಿಂಗ್ ಮಾಡುವರಿಗೆ ತುಂಬ ಅನಾನುಕೂಲವಾಗಿದೆ.
ಈ ವಾರ್ಡುಗಳ ಚುನಾಯಿತ ಪುರಸಭಾ ಸದಸ್ಯರು ಕಣ್ಣುಗಳು ಇದ್ದು ಕುರುಡರಂತೆ ಇದ್ದಾರೆ. ಪುರಸಭಾ ಅಧಿಕಾರಿಗಳು ಕೂಡ ಗಮನ ಹರಿಸದೆ ದಿವ್ಯ ನಿರ್ಲಕ್ಷ ಮಾಡಿದ್ದಾರೆ. ಈ ರಸ್ತೆಯ ಒಂದು ಪಕ್ಕದಲ್ಲಿ ಪೈಪ್ ಲೈನ್ ಕಾಮಾಗಾರಿಕೆಗಾಗಿ ರಸ್ತೆ ಅಗೆದು, ಪೈಪ್ ಲೈನ್ ಮುಗಿಸಿ ಎಷ್ಟೊ ವರ್ಷಗಳಾಗಿವೆ. ಅಂದು ಪೈಪ್ ಲೈನ್ ಕಾಮಾಗಾರಿಯವರು ಕಾಮಗಾರಿಗೆಗಾಗಿ ರಸ್ತೆ ಪಕ್ಕಗಳಲ್ಲಿ ಅಗೆದಾಗ, ಮಣ್ಣಿನ ಜೊತೆ ಕೆಳಗಡೆ ಇದ್ದ ದೊಡ್ಡ ದೊಡ್ಡ ಶಿಲೆಕಲ್ಲುಗಳು ಮೇಲೆಕ್ಕೆ ಹಾಕಿದರು, ಕಾಮಾಗಾರಿಕೆ ಮುಗಿದಾಗ, ಕಾಮಾಗಾರಿಯವರು ನೆಪಕ್ಕೆ ಮಾತ್ರ ಅಗೆದಲ್ಲಿ ಮಣ್ಣು ಆಚೆ ಇಚೆ ಮಾಡಿ ಮಣ್ಣು ಕಲ್ಲು ರಾಶಿ ಹಾಕಿ ಮುಚ್ಚಿದ ನಾಟಕವಾಡಿದ್ದಾರೆ, ಆ ದೊಡ್ಡ ದೊಡ್ಡ ಶಿಲೆ ಕಲ್ಲುಗಳನ್ನು ಮೇಲ್ಗಡೇಯೆ ಇದ್ದು, ಅವುಗಳು ಜನರು ನಡೆದಾಡುವ ಕಡೆಗಳಲ್ಲಿ ಇವೆ. ಅವುಗಳು ಪಾದಚಾರಿಗಳ ಕಾಲಿಗೆ ತಾಗಿ ಅವರು ಬೀಳುವ ಅಪಾಯವಿದೆ. ಇದಕ್ಕಾಗಿ ಪಾದಚಾರಿಗಳು ನಡೆಯಲು ಹೆದರಿ, ಅಸಾಧ್ಯವಾಗಿ ವಾಹನ ಸಂಚಾರ ಮಾಡುವ ಕಾಂಕ್ರೀಟು ರಸ್ತೆಯ ಮೇಲೆ ಬಂದು ನಡೆಯಬೇಕಾಗುತ್ತದೆ, ಆ ಸಂದರ್ಭದಲ್ಲಿ ವಾಹನಚಾಲಕರಿಂದ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲಾ.
ಕಾಂಕ್ರೀಟು ರಸ್ತೆಯ ಅಂಚಿನಿಂದ ಕೆಲವು ಕಡೆ ಎಷ್ಟೊ ತಗ್ಗಿದ್ದು, ಜನರು ಒಡಾಡಲು ಹರಸಾಹಸ ಪಡೆಬೇಕು, ಇದಲ್ಲದೆ ದ್ವಿ ಚಕ್ರ ವಾಹನದವರು ಕಾಂಕ್ರೀಟು ರಸ್ತೆಯಲ್ಲಿ ಮೇಲೆರುವ ಸಂದರ್ಭದಲ್ಲಿ ಸ್ಕೀಡ್ ಆಗಿ ಬಿದ್ದವರು ಎಷ್ಟೊ ಜನ ಇದ್ದಾರೆ. ಪೈಪ್ ಕಾಮಗಾರಿ ಮುಗಿಸಿದಾಗ ಕಾಮಗಾರಿ ಗುತ್ತಿಗೆ ತೆಗೆದುಕೊಂಡವರ ಹತ್ತಿರ ಅವರು ಅಗೆದ ಕಲ್ಲು ಮಣ್ಣು ಸರಿಯಾದ ರೀತಿಯಲ್ಲಿ ಪುನ ಕಲ್ಲುಗಳನ್ನು ಅಡಿ ಹಾಕಿ, ಅದರ ಮೇಲೆ ಮಣ್ಣು ಸಮಾನಂತರವಾಗಿ ಹಾಕಿಸಿಕೊಳ್ಳುವ ಹೊಣೆಗಾರಿಕೆ ಯಾರಿದು ? ಪರಸಭೆಗೆ ಸಂಬಂಧ ಪಟ್ಟಿದ್ದು ಅಲ್ಲವೆ ? ಅದಿಲ್ಲದಿದ್ದರೆ ಆರಿಸಿ ಬಂದ ಆ ವಾರ್ಡುಗಳ ಪುರಸಭಾ ಸದಸ್ಯರ ಹೊಣೆಯಲ್ಲವೇ? ಯಾವ ಹೊಣೆ ಇವರಿಗಿದೆ, ಇಷ್ಟೂ ಮಾಡಲಿಕಾಗದಿದ್ದಲ್ಲಿ, ಪುರಸಭೆಗಳಲ್ಲಿ ಸದಸ್ಯರು ಯಾಕೆ ಬೇಕು?
ನಗರದ ಎರಡು ಮುಖ್ಯ ರಸ್ತೆಗಳಲ್ಲಿ ಇಂಟ್ಲಾಕ್‍ಗಳನ್ನು ಹಾಕುವುದು, ತೆಗೆಯುವು ನಡೆಯುತ್ತಾ ಇದೆ, ಇಲ್ಲಿ ಪುರಸಭೆಯವರು ಗಮನಿಸಬೇಕು, ಈ ಮುಖ್ಯ ರಸ್ತೆಗಳಲ್ಲಿ ಇರುವ ಕಟ್ಟಡ, ಮನೆಗಳಿಗೆ ವಿಧಿಸುವ ತೆರಿಗೆ ಮತ್ತು ಚಿಕ್ಕನಸಾಲು ರಸ್ತೆಯ, ಮತ್ತು ಕುಂದಾಪುರ ಪುರಸಭೆಯ ಉಳಿದ ರಸ್ತೆಗಳಲ್ಲಿರುವ ಕಟ್ಟಡ, ಮನೆಗಳು ಕಟ್ಟುವ ತೆರಿಗೆ ಒಂದೇ ತೇರನಾಗಿದೆ, ಹಾಗಾದರೆ ಚಿಕ್ಕನಸಾಲು ಮತ್ತು ಇಅತರ್ ರಸ್ತೆಗಳಿಗೆ ಯಾಕೆ ಇಂತಹ ದಿವ್ಯ ನಿರ್ಲಕ್ಷ? ಚಿಕ್ಕಸಾಲು ರಸ್ತೆಯ ಇಂಟರ್‍ಲಾಕ್ ಕಾಮಾಗಾರಿ ಎಷ್ಟೊ ಹಂತಗಳಲ್ಲಿ ಸಾಗಿ, ಈಗ ಚಿಕ್ಕನಸಾಲು ರಸ್ತೆಯ ಕ್ರಾಸ್ತಾ ವರ್ಕ್‍ಶಾಪ್ ಹತ್ತಿರದವರೆಗೆ ಸಾಗಿ ನಿಂತಿದೆ. ನಂತರದ ಚಿಕ್ಕನಸಾಲು ರಸ್ತೆಯ ಉದಕ್ಕೂ ಎರಡು ಕಡೆಗಳಲ್ಲಿ ಇಂಟರ್‍ಲಾಕ್ ಹಾಕಲೇ ಇಲ್ಲ. ಸುಮಾರು 14 ವರ್ಷಗಳು ಸಂದರು ಇದು ಸಾಧ್ಯವಾಗಲಿಲ್ಲ ಅಂದರೆ ನಾಚಿಕೆಗೇಡಿನ ಸಂಗತಿಯಲ್ಲವೇ ?. ನಿಜಕ್ಕೂ ಇದು ಇಲ್ಲಿನ ಜನರ, ಪಾದಚಾರಿಗಳ ದೌಭಾಗ್ಯವೆಂದೇ ಹೇಳಬೇಕು. ಇಷ್ಟು ವರ್ಷಗಳು ಸಂದರೂ ಇಂಟರ್ ಲಾಖ್‍ಗಳನ್ನು ಅಳವಡಿಸಲು ಯಾಕೆ ಸಾಧ್ಯವಾಗಲಿಲ್ಲ? ಇದು ನಮ್ಮ ಅಭಿವ್ರದ್ದಿಯೆ ? ಈ ರೀತಿಯ ನಡವಳಿಕೆಯಂದರೆ ಇದು ದಿವ್ಯ ನಿಲಕ್ಷವಲ್ಲವೇ ಹೌದು ? ಈ ಭಾಗದ ಜನರು ಅಷ್ಟೂ ನತದ್ರಷ್ಟರೆ? ಚಿಕ್ಕನಸಾಲು ರಸ್ತೆಯ ಈ ಭಾಗದಲ್ಲಿ ಇಂಟರ್‍ಲಾಕ್ ಅಳವಡಿಸುವ ಭಾಗ್ಯ ಯಾವಾಗ ಬರಬಹುದೊ ಎಂದು ಜನರು ಕಾಯುತ್ತಾ ಇದ್ದಾರೆ. ಹಾಗೇ ಈ ಭಾಗದ ಜನರು ಕಾಯುದ್ದ ಇದ್ದಾರೆ ಮತ ಕೇಳಲು ಯಾರು, ಯಾವಾಗ ಬರುತ್ತಾರೆಂದು.
ಪುರಸಭೆಯವರು ಪುರಸಭೆಯ ಸದಸ್ಯರು ಗಮನಿಸಬೇಕು, ಚಿಕ್ಕನಸಾಲು ರಸ್ತೆ, ಕುಂದಾಪುರ ನಗರದ ಒಂದು ಮುಖ್ಯವಾದ ದ್ವಾರ. ಈ ರಸ್ತೆ ಹೈವೆಯನ್ನು ಸಂದಿಸುತ್ತದೆ, ಹೈವೆಯ ಬಹು ದೂರದ ಉತ್ತರದಿಂದ ರೋಗಿಗಳನ್ನು ಹೊತ್ತುಕೊಂಡು ಬರುವ ಅಂಬ್ಯುಲೆನ್ಸಗಳು, ಲಘುವಾಹನಗಳು, ದ್ವೀ ಚಕ್ರವಾಹನದವರು ನಿತ್ಯ ಸಂಚಾರ ಮಾಡುತ್ತಾರೆ, ಅವರಿಗೆ ಚಿಕ್ಕನಸಾಲು ರಸ್ತೆ ದ್ವಾರದಲ್ಲೆ ಅಡಚಣೆಯಾಗುತದೆ, ಕಾರಣ ಪಾದಚಾರಿಗಳಿಗೆ ಸಮತಟ್ಟು ಮಾಡದೆ, ಅಥವ ಇಂಟರ್ಲಾಕ್‍ಗಳನ್ನು ಅಳವಡಿಸದೆ ಇರುವುದು. ಹಾಗೆ ಉತ್ತರ ಕಡೆಯ ಹೈವೆಯಿಂದ ಕೂಡ ಈ ದ್ವಾರ ಬಳಸಿಕೊಳ್ಳುತಿದ್ದಾರೆ. ವಾಹನ ಸಂಚಾರ, ಜನ ಸಂಚಾರ ಸುಗಮವಾಗಲು ಇಲ್ಲಿ ಬಹುಬೇಗನೆ ಇಂಟರ್ಲಾಕ್ಗಳನ್ನು ಅಳವಡಿಸಬೇಕು. ಇಲ್ಲಿ ಅಲ್ಲದೆ ಚರ್ಚ್ ರಸ್ತೆಯಲ್ಲೂ, ಮತ್ತು ಕುಂದಾಪುರ ಅನೇಕ ಒಳಗಡೆ ರಸ್ತೆಗಳಲ್ಲಿ ಕೂಡ ಇಂಟರ್ಲಾಕ್, ಅಳವಡಿಸುವ ಕೆಲಸವಾಗಬೇಕು. ಕುಂದಾಪುರ ಸುಂದರ ನಗರ ಎಂಬುದು ಅರೆಸತ್ಯ ಇಂತಹ ರಸ್ತೆಗಳು ಕುಂದಾಪುರ ಪುರಸಭೆಯೊಳಗೆ ಇರುವುದು ನಾ ಲಾಯಕ್ !!
ಮತ ಕೇಳುವಾಗ ಎಲ್ಲ ಮನೆಗಳಿಗೆ ಹೋಗುವ ಸದಸ್ಯರೆ, ಪುರಸಭೆಗೆ ಆರಿಸಿ ಬಂದ ಸದಸ್ಯರೆ ನಂತರ, ಅಪರೂಪಕ್ಕೆ ನಿಮ್ಮ ನಿಮ್ಮ ವಾರ್ಡಿನ ರಸ್ತೆಗಳಲ್ಲಾದರೂ ನಡೆದುಕೊಂಡು ಬಂದು ಸಮಸ್ಯೆಗಳನ್ನು ತಿಳಿದುಕೊಂಡು ಬಂದು ಸಮಸ್ಯೆ ಇದ್ದಲ್ಲಿ ಅವುಗಳನ್ನು ಪರಿಹರಿಸಿ.

ಬಸ್ರೂರು: ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಗೆ ಹಸ್ತಾಂತರ


ಕುಂದಾಪುರ: ಶಾಲೆ ಮತ್ತು ದೇವಾಲಯಗಳು ಅಭಿವೃದ್ಧಿಗೊಂಡರೇ ಇಡೀ ಗ್ರಾಮವೇ ಅಭಿವೃದ್ಧಿ ಹೊಂದುತ್ತದೆ. ಈ ನಿಟ್ಟಿನಲ್ಲಿ ಸುದೀರ್ಘ 18 ವರ್ಷಗಳ ಇತಿಹಾಸವಿರುವ ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದೇವಾನಂದ್ ಶೆಟ್ಟಿ ಹೇಳಿದರು.
ಕೋಳ್ಕೆರೆ ರತ್ನಾಕರ್ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಇವರಿಂದ ನಡೆಸಲ್ಪಟ್ಟ ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಕೆಆರ್ ಎಸ್ಎಂಇ ಟ್ರಸ್ಟ್‌ ನ ಅಧ್ಯಕ್ಷೆ ಗಿರಿಜಾ ಆರ್ ಶೆಟ್ಟಿ, ಶಾಲಾ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ, ಟ್ರಸ್ಟ್ ನ ಸದಸ್ಯರುಗಳಾದ ಅಬ್ದುಲ್ ಜುನೈದ್, ಮೋಸಸ್ ಮನೋಹರ ಇವರು ಶಾಲೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಇವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.
ನೂತನ ಆಡಳಿತ ಮಂಡಳಿಯಾದ ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂತೋಷ್ ಕುಮಾರ್ ಶೆಟ್ಟಿ, ಅಂಪಾರು ಮಾಜಿ ಗ್ರಾಮ ಪಂಚಾಯತ್ ಸದಸ್ಯ ರೋಷಣಿ, ಬ್ರಹ್ಮಶ್ರೀ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿಗಳಾದ ಅಶೋಕ್ ಎನ್, ಸುಧೀರ್ ಕುಮಾರ್, ರಮೇಶ್ ಪೂಜಾರಿ, ಗಣೇಶ್ ಎಸ್ ಬೀಜಾಡಿ, ಶಾಲಾ ಪ್ರಾಂಶುಪಾಲೆ ಅನಿತಾ ಆಲಿಸ್ ಡಿಸೋಜಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ಸಂಜಿತ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.