ಕಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಗಳಿಂದ ಆಂಜೆಲೊರ್ ಧರ್ಮಕೇಂದ್ರದಲ್ಲಿ ಮಹಿಳಾ ದಿನಾಚರಣೆ


ಮಂಗಳೂರು : ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ 5.3.2023ರಂದು ಗಾರ್ಡಿಯನ್ ಏಂಜಲ್ ಚರ್ಚ್, ಆಂಜೆಲೊರ್, ನಾಗುರಿ, ಇದರ ಕಥೊಲಿಕ್ ಸಭಾ ಹಾಗೂ ಸ್ತ್ರೀ ಸಂಘಟನೆಗಳ ಆಂಜೆಲೊರ್ ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ, ರಾಜಕೀಯ, ಆರೋಗ್ಯ, ಆಟೋಟ, ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಮಾಜಸೇವೆಗೈದ 11 ಮಹಿಳೆಯರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಫ್ಲೋರಾ ಕ್ಯಾಸ್ತೆಲಿನೊ, ವಿಭಾಗ ಮುಖ್ಯಸ್ಥೆ – ಕೊಂಕಣಿ ವಿಭಾಗ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು, ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಆಂಜೆಲೊರ್ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರುಗಳಾದ ವಂ. ಸ್ವಾ. ವಿಲಿಯಂ ಮಿನೇಜಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಧರ್ಮಪ್ರಾಂತ್ಯದ ಸಹಾಯಕ ಧರ್ಮಗುರುಗಳಾದ ವಂ. ಸ್ವಾ. ಲಾರೆನ್ಸ್ ಕುಟಿನ್ಹೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಶ್ರೀ ಪೌಲ್ ರೊಡ್ರಿಗಸ್, ಕಾರ್ಯದರ್ಶಿ ಶ್ರೀಮತಿ ಲೊಲಿನಾ ಡಿ’ಸೋಜಾ, 21 ಆಯೋಗಗಳ ಸಂಯೋಜಕಿ ಕು. ರೆನಿಟಾ ಮಿನೇಜಸ್, ಕಥೊಲಿಕ್ ಸಭಾದ ಅಧ್ಯಕ್ಷ ಶ್ರೀ ಫೆಲಿಕ್ಸ್ ಮೋರಾಸ್, ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಸುನಿತಾ ಡಿ’ಸೋಜಾ, ಶ್ರೀಮತಿ ರೆನಿಟಾ ವಾಸ್ ಹಾಜರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಜೇಶ್ ಮಿಸ್ಕಿತ್ ಹಾಗೂ ಪಂಗಡದವರು ಮಹಿಳಾ ದಿನಾಚರಣೆಯ ಅಭಿನಂದನಾ ಗೀತೆಯನ್ನು ಹಾಡಿದರು. ಸ್ತ್ರೀ ಸಂಘಟನೆಯ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಶ್ರೀ ಮನೋಹರ್ ಸಲ್ಡಾನಾ ಹಾಗೂ ಶ್ರೀಮತಿ ಲೊಲಿನಾ ಡಿ’ಸೋಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Catechism day at Holy Rosary Church Alangar on 05.03.2023

Fr Nilesh Crasta being the chief guest preached the homily and explained the transfiguration of Jesus and highlited the importance of catechism

Fr Walter D’Souza was the main celebrant

After the Mass children presented Bible and faith based cultural program from four groups, which included dances, singing, skits, action songs, Bible personality fancy dress, and Bible tableaus

Miss Ishita Jane D’Souza as a student and Sr Felcita HMR shared their experience.

Prizes were awarded to all who secured 80% marks in the exam, two top scorers of writing Bible questions from each class, two best Bible copy writers from each class. 

Prizes also were given to 5 best Bible fancy dresses in each group  and two first and two second prizes for Bible tableaus 

Mr Santosh Rodrigues the convener of catechism read the yearly report

Mr Eric Lobo animator of ycs welcomed Sr Helen Goveas proposed the vote of thanks Mrs Asha D’Souza compered

Vice president Mr Edward Serrao, PPP secretary Mr Anil DCunha, commission coordinator Mr Rajesh D’Souza, PPP members, parents of children were present.

A home made grand dinner was served to all.

Mount Carmel Central School conducts a project on ‘Know the Millets–Embrace Good Health’

The International year of Millets 2023 led the students of Mount Carmel Central School, Mangaluru to know the miracles of Millets. The students of grades I, II and III put their best foot forward to undertake a project on Millets called, “Know the Millets – Embrace good health.” The students undertook the project with great excitement and fervour. The project was executed through seven interesting activities from February 10th to 28th 2023.

On Day 1, the students of Grade I, II and III were given a brief awareness by their teachers of the various millets grown in India, its benefits through a Power Point Presentation and a video clipping.

The Day 2 activity enhanced the curiosity of the students as they felt the size, shape, texture and colour of the different millets followed by an activity of germination.

The Day 3 brought in the awareness in the students of the richness in agriculture and the different States of our country in which the millets are cultivated. Next, an evaluation was conducted in which the students identified the given millets with the particular State. Grade II students were busy with their hands working on beautiful craft prepared with the millets. The taste buds were tickled by the yummy healthy millet drink prepared by the mentors assisted by the students.

On Day 4, the students became one with the melody of the song, ‘Chal Bharath, Ut Bharath’ when they learnt this song on millets. They jumped with joy as they tuned their spirits to the tune of this jolly song.

On Day 5, the unsung heroes “Our Farmers – The toil of their hands” was depicted very meaningfully in the form of a skit by the students of Grade I.

Day 6 was truly an adventure to witness the miracles of millets. The students brought with them the germinated millet. The scene looked like the fields walking into the classrooms of MCCS.

The Day 7 was worth the 6 days activities, because it was a tempting, “Millet Snack Break “which was the best and the finest part of the project. The International Science Day was celebrated with great joy by having a ‘Millet Snack Break’. The supportive parents prepared a snack of the allotted millet and sent it with their ward to be shared with others. It was gratifying and heart-warming to see the students sitting in a circle as a family enjoying millet snacks to their heart’s content. This project was a great experience to focus on our good health and spread the awareness of the miracles of Millets on our health.

ವೇಮಗಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಹಾಗೂ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಗಣಿ ಅಧಿಕಾರಿಗಳು ವಿಫಲ -ಆಕ್ರೋಶ

ಕೋಲಾರ; ಮಾ.4: ವೇಮಗಲ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಹಾಗೂ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಗಣಿ ಅಧಿಕಾರಿಗಳು ವಿಫಲರಾಗಿದ್ದಾರೆಂದು ರೈತ ಕೂಲಿಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೇಮಗಲ್ ನಟರಾಜ್ ಗಣಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ಹಾಗೂ ಮಣ್ಣು ಮಾಫಿಯಾ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ವೇಮಗಲ್‍ಗೆ ಕೂಗಳತೆ ದೂರದಲ್ಲಿರುವ 2 ಕಿಮೀ ವ್ಯಾಪ್ತಿಯ ಪೆರ್ಜೇನಹಳ್ಳಿ ಕಂದಾಯ ಸರ್ವೇ ನಂ.11ರ ಗೋಮಾಳ ಜಮೀನಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಜಮೀನು ಸಮತಟ್ಟು ಮಾಡಲು ಗೋಮಾಳದಲ್ಲಿ ಮಣ್ಣು ತೆಗೆಯುತ್ತಿದ್ದರೂ ಕಂದಾಯ ಗಣಿ ಅಧಿಕಾರಿಗಳು ಇದ್ದೂ ಇಲ್ಲದಂತಾಗಿ ರಾಜಕಾರಣಿಯ ಪ್ರಭಾವಕ್ಕೆ ಮಣಿದು ಮಣ್ಣು ಮಾಫಿಯಾಗಿ ಅವಕಾಶ ಮಾಡಿಕೊಟ್ಟಿದ್ದಾರೆಂದು ಅವ್ಯವಸ್ಥೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಸಣ್ಣ ರೈತರು ಹೊಲಗಳಿಗೆ ಮಣ್ಣು ತೆಗೆಯಬೇಕಾದರೆ ನೂರೊಂದು ಕಾನೂನು ಹೇಳುವ ಗಣಿ ಅಧಿಕಾರಿಗಳಿಗೆ ಪ್ರಭಾವಿ ರಾಜಕಾರಣಿಗಳ ಮಣ್ಣು ಮಾಫಿಯಾ ಕಾಣಿಸುತ್ತಿಲ್ಲವೇ. ಸಣ್ಣ ರೈತರ ಮೇಲೆ ತಮ್ಮ ಪ್ರತಾಪ ತೋರಿಸುವ ಗಣಿ ಅಧಿಕಾರಿಗಳು ರಾಜಕಾರಣಿಯ ಮೇಲೆ ತೋರಿಸಿ ಗೋಮಾಳದಲ್ಲಿ ಮಣ್ಣು ತೆಗೆಯುತ್ತಿರುವ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲು ಭಯವೇ ?
ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವ ಅಧಿಕಾರಿಗಳೇ ಅಮಾಯಕರ ಮೇಲೆ ಬ್ರಹ್ಮಾಸ್ತ್ರ ಎತ್ತಿರುವುದನ್ನು ಬಿಟ್ಟು ಪ್ರಭಾವಿಗಳ ಮೇಲೆ ನಿಮ್ಮ ತಾಕತ್ತನ್ನು ತೋರಿಸಿ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದರು.
ಜಿಲ್ಲಾ ಗೌರವಾಧ್ಯಕ್ಷ ಗೋವಿಂದರಾಜು ಮಾತನಾಡಿ, ವೇಮಗಲ್ ಕೈಗಾರಿಕಾ ಪ್ರದೇಶ ಅಕ್ರಮ ಗಣಿಗಾರಿಕೆಗೆ ಪ್ರಸಿದ್ಧಿಯಾಗಿದೆ. ಯಾವುದೇ ಪರವಾನಗಿ ಇಲ್ಲದೆ ರಾಜಾರೋಷವಾಗಿ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಕಾನೂನು ಬಾಹಿರವಾಗಿ ಕಲ್ಲು ಬಂಡೆಗಳನ್ನು ಸಿಡಿಸಿ ಜನಸಾಮಾನ್ಯರಿಗೆ ಪರಿಸರಕ್ಕೆ ಹಾನಿ ಮಾಡುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದೆ ಗಣಿ ಅಧಿಕಾರಿಗಳೇ ಅಕ್ರಮ ಗಣಿಗಾರಿಕೆಗೆ ಬೆಂಗಾವಲಾಗಿ ನಿಂತಿದ್ದಾರೆಂದು ಕಿಡಿಕಾರಿದರು.
ಚಿಕ್ಕಬಳ್ಳಾಪುರ, ಟೇಕಲ್ ವ್ಯಾಪ್ತಿಯಲ್ಲಿ ಅಕ್ರಮ ಸಿಡಿಮದ್ದುಗಳನ್ನು ಉಪಯೋಗಿಸಿ ಸಿಡಿಸುವ ಸಮಯದಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು ಬರುವ ಹೊರ ರಾಜ್ಯದ ಕಾರ್ಮಿಕರ ಪ್ರಾಣಗಳು ಕಳೆದುಹೋಗುತ್ತಿದ್ದರೂ ಇನ್ನೂ ಸಹ ಗಣಿ ಅಧಿಕಾರಿಗಳಿಗೆ ಬುದ್ಧಿ ಬಂದಂತಿಲ್ಲ. ಇನ್ನೆಷ್ಟು ಅಮಾಯಕರ ಬಲಿ ಬೇಕು ಗಣಿ ಅಧಿಕಾರಿಗಳಿಗೆ ಅಕ್ರಮ ಗಣಿಗಾರಿಕೆಗಳ ವಿರುದ್ಧ ಕ್ರಮಕೈಗೊಳ್ಳಲು ಎಂದು ಪ್ರಶ್ನೆ ಮಾಡಿದರು.
24 ಗಂಟೆಯಲ್ಲಿ ಅಕ್ರಮ ಮಣ್ಣು ಹಾಗೂ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಿ ದಂಧೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಬೇಕು. ಇಲ್ಲವಾದರೆ ಕಲ್ಲು-ಮಣ್ಣಿನ ಸಮೇತ ಕೋಲಾರ ಚಿಕ್ಕಬಳ್ಳಾಪುರ ರಸ್ತೆ ಬಂದ್ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹೋಬಳಿ ಅಧ್ಯಕ್ಷ ಅಮರನಾರಾಯಣ, ನಾಗೇಂದ್ರ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮುಂತಾದವರಿದ್ದರು.

National Safety Day Celebration at Rohan Corporation / ರೋಹನ್ ಕಾರ್ಪೊರೇಷನ್‍ನಿಂದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

Mangalore: On March 4, Rohan Corporation India Pvt Ltd celebrated the 52nd National Safety Day at Rohan City Site Project in Bejai, Mangalore. Rohan Monteiro, Managing Director of the organization hoisted the safety flag and gave a short message to the employees.

ರೋಹನ್ ಕಾರ್ಪೊರೇಷನ್‍ನಿಂದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಮಂಗಳೂರು: ಮಾರ್ಚ್ 4ರಂದು ರೋಹನ್ ಕಾರ್ಪೊರೇಷನ್‍ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮಂಗಳೂರಿನ ಬಿಜೈನಲ್ಲಿರುವ ರೋಹನ್ಸಿ ಟಿ ಸೈಟ್ ಪ್ರಾಜೆಕ್ಟ್‍ನಲ್ಲಿ 52ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಿತು. ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್
ರೋಹನ್ ಮೊಂತೇರೊ ಸುರಕ್ಷಾ ಧ್ವಜವನ್ನು ಹಾರಿಸಿ, ನೌಕರರಿಗೆ ಕಿರು ಸಂದೇಶವನ್ನು ನೀಡಿದರು.

ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ರಾಸು ವಿಮಾ ಪರಿಹಾರ ಚೆಕ್

ಶ್ರೀನಿವಾಸಪುರ : ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ , ಶ್ರೀನಿವಾಸಪುರ ಶಿಬಿರ ಕಛೇರಿಯಲ್ಲಿ ರಾಸು ವಿಮಾ ಪರಿಹಾರ ಚೆಕ್ , ಕೋಮುಲ್ ವಿಮೆ , ಅಗ್ನಿ ಅವಘಡದಲ್ಲಿ ಮೃತಪಟ್ಟ ರಾಸುವಿನ ಪರಿಹಾರ ಚೆಕ್ ಮತ್ತು ರಸಮೇವು ಘಟಕ ನಿರ್ಮಾಣದ ಅನುದಾನ ಚೆಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಎನ್. ಹನುಮೇಶ್ ರವರು ಮಾತನಾಡಿ , ಎಲ್ಲಾ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳ ವಿಮೆ ಮಾಡಿಸಬೇಕು , ರಾಸು ವಿಮಾ ಪರಿಹಾರ ಚೆಕ್ ಪಡೆದಿರುವ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಿ , ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಮತ್ತು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಮೃತಪಟ್ಟ ರಾಸುಗಳ ವಿಮಾ ಪರಿಹಾರ 36 ಚೆಕ್‌ಗಳು ಮೊತ್ತ 21,30,000 / – ರೂಗಳು , ಕೋಮುಲ್ ವಿಮೆ ಚೆಕ್‌ಗಳು ಮೊತ್ತ 1,50,000 / – ರೂ.ಗಳು , ಅಗ್ನಿ ಅವಘಡದಲ್ಲಿ ಮೃತಪಟ್ಟ ರಾಸುವಿನ ಪರಿಹಾರ ಚೆಕ್ 1 ಮೊತ್ತ 25,000 / – ರೂಗಳು ಮತ್ತು ರಸಮೇವು ಘಟಕ ನಿರ್ಮಾಣದ ಅನುದಾನದ 2 ಚೆಕ್‌ಗಳ ಮೊತ್ತ 45,000 / ರೂಗಳು ಸೇರಿ ಒಟ್ಟು ಮೊತ್ತ 23,50,000 / – ರೂಗಳ ಚೆಕ್‌ಗಳನ್ನು ವಿತರಿಸಿದರು .

ಪ್ರಭಾರೆ ಉಪ ವ್ಯವಸ್ಥಾಪಕರಾದ ಶ್ರೀ ಕೆ.ಎಂ.ಮುನಿರಾಜು ರವರು ಮಾತನಾಡಿ , ಪ್ರಸ್ತುತ ಒಕ್ಕೂಟದ ವತಿಯಿಂದ ಹಾಲಿನ ಧರವನ್ನು ಏರಿಕೆ ಮಾಡಲಾಗಿದ್ದು , ಸಂಘಗಳಲ್ಲಿ ವೈಜ್ಞಾನಿಕವಾಗಿ ಹಾಲಿನ ಗುಣಮಟ್ಟವನ್ನು ಪರೀಕ್ಷೆ ಮಾಡಿ ಪ್ಯಾಟ್ ಮತ್ತು ಎಸ್.ಎನ್.ಎಫ್ . ಆಧಾರದ ಮೇಲೆ ಎಲ್ಲಾ ಯಂತ್ರಗಳನ್ನು ಬಳಸಿಕೊಂಡು ರೈತರಿಗೆ ಹೆಚ್ಚಿನ ಧರ ನೀಡಿದ್ದಲ್ಲಿ ರೈತರಿಗೆ ಸಂಘಗಳ ಮೇಲೆ ನಂಬಿಕೆ ಹೆಚ್ಚಾಗಿ ಉತ್ತಮ ಗುಣಮಟ್ಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಾರೆ , ಸಹಕಾರ ಸಂಘಗಳು ಅಭಿವೃದ್ಧಿಯಾಗುತ್ತವೆ ಹಾಗೂ ಖಾಸಗಿ ಡೇರಿಗಳ ಹಾವಳಿ ಸಹ ಕಡಿಮೆ ಆಗುವುದೆಂದು ತಿಳಿಸಿದರು .

ಈ ಸಂದರ್ಭದಲ್ಲಿ ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಪಿ.ಕೆ.ನರಸಿಂಹರಾಜು , ಎಸ್.ವಿನಾಯಕ , ಕೆ.ಪಿ. ಶ್ವೇತ , ಜಿ.ಎನ್. ಗೋಪಾಲಕೃಷ್ಣಾರೆಡ್ಡಿ ಹಾಗೂ ಶಿಬಿರದ ಸಿಬ್ಬಂದಿಯವರು ಮತ್ತು ಸಂಘದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು , ಫಲಾನುಭವಿಗಳು ಹಾಜರಿದ್ದರು .

ಜಾಗತಿಕ್ ಡಿಜಿಟಲ್ ಕೊಂಕಣಿ ಕವಿಗೋಶ್ಟಿ

ಆಶಾವಾದಿ ಪ್ರಕಾಶನಾನ್ ಮಾಂಡುನ್ ಹಾಡ್‌ಲ್ಲಿ ಜಾಗತಿಕ್ ಡಿಜಿಟಲ್ ಕೊಂಕಣಿ ಕವಿಗೋಶ್ಟಿ, ಮಾರ್ಚ್ 5 ತಾರಿಕೆಚ್ಯಾ ಆಯ್ತಾರಾ ಸಾಂಜೆರ್ 4:30 ಥಾವ್ನ್ 6:00 ಪರಯಾಂತ್ ಚಲ್ಲಿ. ಯುರೋಪ್, ಗಲ್ಫ್ ತಶೆಂಚ್ ಭರತಾಂತ್ಲ್ಯಾ ಮುಂಬಯ್, ಬೆಂಗ್ಳುರ್, ಮಂಗ್ಳುರ್, ಕೂರ್ಗ್, ಗೊಂಯ್ ಅಶೆಂ ವೆಗ್-ವೆಗಳ್ಯಾ ಪ್ರಾಂತ್ಯಾಂತ್ಲ್ಯಾ ಕವಿಂನಿ ಹ್ಯಾ ಕವಿಗೋಶ್ಟಿಂತ್ ಆಪ್ಲಿಂ ಕವಿತಾ ಸಾದರ್ ಕೆಲಿಂ.

ಯೆವ್ಕಾರ್ ಉಲವ್ಪ್ ಉಲಯಿಲ್ಲೊ ವಿಶ್ವ್-ಕೊಂಕಣಿ ಕೇಂದ್ರಚೊ ವಿಮಲಾ ವಿ. ಪೈ. ಪುರಸ್ಕಾರ್ ಜಿಕ್ಪಿ ನಾಮ್ನೆಚೊ ಕೊಂಕಣಿ ಕವಿ ಬಾಬ್ ಶಯ್ಲೇಂದ್ರ ಮೆಹ್ತಾನ್ “ಕಶೆಂ ಆಜ್ ಡಿಜಿಟಲ್ ಮಾಧ್ಯಮಾನ್ ವೆಗ್-ವೆಗಳ್ಯಾ ಭಂವಾರಾಂತ್ ಜಿಯೆತೆಲ್ಯಾಂಕ್ ಎಕಾ ಶೆವೊಟಾನ್, ಎಕಾ ಮನಾನ್ ಕಾಮ್ ಕರ್ಚಿ ವಾಟ್ ನಿರ್ಮಾಣ್ ಕರುನ್ ದಿಲ್ಯಾ ಆನಿ ಹ್ಯಾ ಸಕ್ತೆಚೊ ಬರೊ ಉಪೇಗ್ ಕರುನ್ ಆಮಿ, ಕವಿಂನಿ ಕೊಂಕಣಿ ಭಾಸ್ ಸಗಳ್ಯಾ ಲ್ಹಾನ್-ಲ್ಹಾನ್ ಭಂವಾರಾಂಕ್ ಉತ್ರುನ್ ಮುಕಾರ್ ಯೆವ್ಪಾಕ್ ಏಕ್ ವಾಟ್ ಕರುನ್ ದಿತಾ. ಆಜ್ ಕೊಂಕಣಿಂತ್ ಆಮಿ ಎಕ್ಲೆ ಎಕ್ಲೆ ಜಾವ್ನ್ ಬೌದ್ದಿಕ್ ಚಿಂತ್ಪಾನ್ ಕಾಂಯ್ ಥೊಡಿಂ ಪಾವ್ಲಾಂ ಮುಕಾರ್ ಆಯ್ಲ್ಯಾಂವ್ ಆಸುಯೆತಾ ಪುಣ್ ಸಾಮೂಹಿಕ್ ಥರಾನ್ ಆಮ್ಚಿ ಸಮಾಜ್ ವಾ ಆಮ್ಚೆ ಕವಿ ಕಿತ್ತುನ್ ಪಾವ್ಲ್ಯಾತ್ ಮ್ಹಳ್ಳೆಂ ವ್ಹಡ್ಲೆಂ ಪ್ರಶ್ನ್. ಬರಯ್ತೆಲೆ ಆಸಾತ್ ಪುಣ್ ವಾಚ್ತೆಲೆ ಕಿತ್ಲೆ ಆಸಾತ್? ವಾಚ್ತೆಲೆ ಆಸ್ತಿತ್ ಪುಣ್ ಸಮ್ಜತೆಲೆ ಕಿತ್ಲೆ ಆಸಾತ್? ಆನಿ ಹ್ಯಾ ಪರಿಗತೆಂತ್ ಬರಯಿಲ್ಲ್ಯೊ ಕವಿತಾ ಸಮಾಜಿಕ್ ಸ್ಥರಾಚೆರ್ ಕಿತ್ಲ್ಯೊ ಪ್ರಸಂಗಿಕತಾಯೆಚ್ಯೊ? ಜೆದ್ನಾ ಪಾಸೊನ್ ಏಕ್ ಕವಿ ಎಕಾ ಸಮಾಜೆಚೊ ಅನ್ಭೋಗ್ ಜೊಡುನ್ ಕವಿತಾ ಬರಯ್ನಾ ತೆದೊಳ್ ಪಾಸೊನ್ ತ್ಯಾ ಕವಿತೆಕ್ ಕಾಂಯ್ ಮೋಲ್ ನಾ” ಮ್ಹಣಾಲೊ ತಶೆಂಚ್ ವಿಶ್ವ್-ಕೊಂಕಣಿ ಕೇಂದ್ರಚೊ ವಿಮಲಾ ವಿ. ಪೈ. ಪುರಸ್ಕಾರ್ ಜಿಕ್ಪಿ ಕವಿ ಬಾಬ್ ಉದಯ್ ಮ್ಹಾಂಬ್ರೊಚಿ ಮಟ್ವಿ ವಳೊಕ್ ಕರುನ್ ಕವಿಗೋಶ್ಟಿ ಚಲವ್ನ್ ವ್ಹರುಂಕ್ ಮಾಗ್ಲೆಂ.

’ರಾತ್ ನಶೇಚಿ’ ಕವಿತೆಂತ್ ಕವಿಗೋಶ್ಟಿಚಿ ಸುರವಾತ್ ಕೆಲ್ಲ್ಯಾ ಬಾಬ್ ಉದಯ್ ಮ್ಹಾಂಬ್ರೊನ್ “ಆಮಿ ಕೊಂಕಣಿ ಭಾಶೆಚಿ ಗ್ರೇಸ್ತ್‌ಕಾಯ್ ಸಮ್ಜುಂಚೆಂ ವ್ಹಡ್ ಮನ್ ದಾಕಯ್ಲೆಂ ತರ್, ಆಮ್ಕಾಂ ಕೊಂಕಣಿ ಭಾಶಿಕ್, ಜಾಂವ್ ತೊ ಖಂಚ್ಯಾಯ್ ವಠಾರಾಂತ್ ಆಸುಂ, ಪುಣ್ ಆಮ್ಚೊಚ್ ಭಾವ್-ಭಯ್ಣ್ ಅಶೆಂ ಭಗ್ತಾ. ದೆಕುನ್ ಗೊಂಯಾಂತ್ ಆಸುಂ, ಕರ್ನಾಟಕಾಂತ್ ಆಸುಂ, ಕೇರಳಾಂತ್ ಆಸುಂ ವಾ ಮುಂಬಯಾಂತ್ ಆಸುಂ, ಕೊಂಕಣಿ ಭಾಶಿಕ್ ಆಮ್ಚೆಚ್ ಆನಿ ಹೆಂ ಚಿಂತಪ್ ಮಾತ್ರ್ ಆಮ್ಕಾಂ ಮುಕಾರ್ ವರುಂಕ್ ಸಕ್ತಾ” ಮ್ಹಣಾಲೊ. ತಶೆಂಚ್ ಹ್ಯಾ ಕವಿಗೋಶ್ಟಿಂತ್ ಭಾಗ್ ಘೆತ್ಲೆಲ್ಯಾ ಕವಿಂಚಿ ಒಳೊಕ್ ಕರುನ್ ಜಾತಚ್ ಸಮೇಸ್ತ್ ಕವಿಂನಿ; ಬಾಬ್ ಪ್ರಸನ್ನ್ ನಿಡ್ಡೊಡಿ ಮುಂಬಯ್ (ನಾರಿಚೊ ಆವಾಜ್), ಬಾಯ್ ಫಿಲೋಮೆನಾ ಸಾಂಫ್ರಾನ್ಸಿಸ್ಕೊ ಗೊಂಯ್ (ದೋತ್), ಬಾಬ್ ಜೋನ್ ಸುಂಟಿಕೊಪ್ಪ ಕೂರ್ಗ್ (ದಾರ್), ಬಾಯ್ ವೈಷ್ಣವಿ ರಾಯ್ಕರ್ ಗೊಂಯ್ (ಜಿಣ್ಯೆ ರಂಗ್), ಬಾಬ್ ಲಾರೆನ್ಸ್ ವಿನೋದ್ ಬಾರ್ಬೋಜ್ ಮ್ಯಾಂಚೆಸ್ಟರ್ ಯುಕೆ (ಬರಂವ್ಕ್ ಚಿಂತ್ಲಾಂ.. ವಾಚ್ತಾಯ್?), ಬಾಯ್ ವಸುಧಾ ಪ್ರಭು ಬೆಂಗ್ಳುರ್ (ಮ್ಹಜಿ ಮಾಂಯ್‌ಕಿ ವ ಮ್ಹಜಿ ದುಶ್ಮನ್?), ಬಾಬ್ ಉದಯ್ ಮ್ಹಾಂಭ್ರೊ ಗೊಂಯ್ (ಆಯೀ), ಬಾಯ್ ಮೊನಿಕಾ ಡೆ’ಸಾ ಮಥಾಯಸ್ ಡಬ್ಲಿನ್ (ಮಾಂಯ್‌ಗಾಂವ್ ಆನಿ ಪರ್ಗಾಂವ್),  ಬಾಬ್ ಜಿಯೊ ಆಗ್ರಾರ್ (ಮ್ಹಾಕಾಯ್ ದಾನ್ ದೀಂವ್ಕ್ ಶಿಕಯ್), ಬಾಯ್ ಉರ್ಜಿತಾ ಭೊಬೆ ಗೊಂಯ್ (ವೋಕ್ಲ್) ಮ್ಹಳ್ಳಿಂ ಅಪುರ್ಭಾಯೆಚಿಂ ಕವಿತಾ ಸಾದರ್ ಕೆಲಿಂ. ಕವಿ ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ.

ಜನ ಔಷಧಿ ದವಸದ ಐದನೇ ದಿನ ಲಯನ್ಸ್ ಕ್ಲಬ್ ತಲ್ಲೂರು ಹಾಗೂ ಗೆಳೆಯರ ಬಳಗ ಕರ್ಕಿ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ

ಜನ ಔಷಧಿ ದವಸದ ಐದನೇ ದಿನ ದಂದು ಲಯನ್ಸ್ ಕ್ಲಬ್ ತಲ್ಲೂರು ಹಾಗೂ ಗೆಳೆಯರ ಬಳಗ ಕರ್ಕಿ ಇವರ ಸಹಯೋಗದೊಂದಿಗೆ ಕರ್ಕಿ ಪ್ರಾಥಮಿಕ ಶಾಲೆ ಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಆಯೋಜಿಸಲಾಯಿತು. ಇದರ ಅಧ್ಯಕ್ಷತೆಯನ್ನು ಲಯನ್ಸ್ ತಲ್ಲೂರು ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ವಹಿಸಿ ಎಲ್ಲರನ್ನೂ ಸ್ವಾಗತಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ರಕ್ತ ದಾನದ ಮಹತ್ವ ವನ್ನು ತಿಳಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮುತ್ತಯ್ಯ ಶೆಟ್ಟಿ, ಸದಾನಂದ ಶೆಟ್ಟಿ , ಲಯನ್ ನಾರಾಯಣ ಶೆಟ್ಟಿ (ಖಜಾಂಚಿ) ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಸುದೇಶ್ ಶೆಟ್ಟಿ, ಲಯನ್ ಕುಸುಮಾಕರ ಶೆಟ್ಟಿ, ಲಯನ್ ರವಿ ದೇವಾಡಿಗ ಅಲ್ಲದೇ ಲಯನ್ಸ್ ನಿತರ ಪದಾಧಿಕಾರಿಗಳು ಮತ್ತು ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು. ಲಯನ್ಸ್ ಕಾರ್ಯದರ್ಶಿ ಪ್ರತಾಪ್ ವಂದಿಸಿದರು ಲಯನ್ ಸುಂದರ ಕಾರ್ಯಕ್ರಮ ನಿರೂಪಿಸಿದರು. 58 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು

ಶ್ರೀನಿವಾಸಪುರ 1 : ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ದಲಿತ ಹಿರಿಯ ಮುಖಂಡ ಮುನಿಸ್ವಾಮಿ ತಿಳಿಸಿದರು.
ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಕಚೇರಿ ಆವರಣದಲ್ಲಿ ಶನಿವಾರ ತಾಲೂಕಿನ ಸಮಾನ ಮನಸ್ಕರ ಸಾಂಸ್ಕøತಿಕ ವೇದಿಕೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರಿಗೆ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. .
ಮಾರ್ಚ್ 6 ರ ಸೋಮವಾರದೊಂದು ಬೆ11;30 ಕ್ಕೆ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರನ್ನ ಮುಳಬಾಗಿಲು ವೃತ್ತದಿಂದ ಪುಷ್ಪಪಲ್ಲಕಿಯಲ್ಲಿ ಗೌರವಯುತವಾಗಿ ಎಂಜಿ ರಸ್ತೆಯ ಮೂಲಕ ತಾಲೂಕು ಕಚೇರಿ ಆವರಣದ ವರೆಗೂ ಕರೆತಂದು, ಈ ಸಭೆಯು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕರು ಪದ್ಮಶ್ರೀ ಪುರಸ್ಕøತರಾದ ಮುನಿವೆಂಕಟಪ್ಪ ರವರನ್ನ ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು .
ಪಿಎಲ್‍ಡಿ ಬ್ಯಾಂಕ್ ತಾಲೂಕು ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ಒಂದು ಕಾಲದಲ್ಲಿ ತಮಟೆ ವಾದ್ಯವು ಉದಾಸೀನವಿತ್ತು . ಆದರೆ ಮುನಿವೆಂಕಟಪ್ಪ ರವರು ತಮಟೆ ವಾದ್ಯದಲ್ಲಿ ಪ್ರಾವೀಣ್ಯತೆ ಹೊಂದಿರುವ ಇವರು ದೇಶ, ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಪ್ರಖ್ಯಾತರಾಗಿ , ವಿವಿಧ ರೀತಿಯ ಪುರಸ್ಕಾರವನ್ನು ಪಡೆದಿರುವ ಅದ್ಭುತ ಕಲಾವಿದನಿಗೆ ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ನೀಡಿ ಗೌರವಿಸಲಾಗಿದೆ. ಇಂತಹ ಅದ್ಭುತ ಕಲಾವಿದನಿಗೆ ಜ್ಯಾತೀತವಾಗಿ, ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಪಾಲ್ಗುಂಡು ಕಲಾವಿದನಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ.ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪರವರು ವಿಶೇಷವಾಗಿ ತಾಲೂಕಿನ ಅಳಿಯರಾಗಿರುವ ಇವರು , ಇವರಿಂದ ತಾಲೂಕಿಗೆ ಒಂದು ರೀತಿಯಲ್ಲಿ ಗೌರವ ಸಿಕ್ಕ ಹಾಗೆ . ತಾಲೂಕಿನ ಕಲಾಭಿಮಾನಿಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಿಗೆ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಬೇಕು. ಈ ಒಂದು ಕಾರ್ಯಕ್ರಮವು ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಬೇಕು ಎಂದರು.
ತಾಲೂಕಿನ ಕಲಾವಿದರು, ಕವಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕಲಾಭಿಮಾನಿಗಳು, ಕನ್ನಡಪರ , ರೈತಪರ ಸಂಘಟನೆಗಳು, ಅಲ್ಪಸಂಖ್ಯಾತರು ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಉಪ್ಪರಪಲ್ಲಿ ತಿಮಯ್ಯ , ಕೆ.ಕೆ.ಮಂಜುನಾಥ್, ರಾಮಾಂಜನಮ್ಮ, ವಾಸು, ಬಂದರ್ಲಾಪಲ್ಲಿ ಮುನಿಯಪ್ಪ, ಚಲ್ದಿಗಾನಹಳ್ಳಿ ಗ್ರಾಮದ ಮುನಿವೆಂಕಟಪ್ಪ, ವೆಂಕಟೇಶ್, ರಾಮಕೃಷ್ಣ, ಶ್ರೀನಿವಾಸರೆಡ್ಡಿ, ಕೃಷ್ಣಾರೆಡ್ಡಿ, ನರಸಿಂಹ ಇದ್ದರು.