ಮಂಗಳೂರು : ಕಸ ಸ್ವಚ್ಛತೆ ಮಾಡಿ ಚರಂಡಿ ಬಳಿ ರಾಶಿ ಹಾಕುವುದು ಅದನ್ನು ವಿಲೇವಾರಿ ಮಾಡದೆ, ಪುನ ಕಸ ಚರಂಡಿಗೆ ಸೇರುತ್ತದೆ

ಮಂಗಳೂರು ಪ್ರದೇಶದಲ್ಲಿ ಸ್ವಚ್ಛತೆ ಯಾವ ಪ್ರಯೋಜನವಿಲ್ಲ ಮಂಗಳೂರು ಮಹಾನಗರ ಪಾಲಿಕೆಯ 34 ವಾರ್ಡ್ ನಲ್ಲಿ ರಸ್ತೆ ಬದಿಯಲ್ಲಿ ಕಸ ವನ್ನು ಮತ್ತು ಚರಂಡಿ ಗ ಸ್ವಚ್ಛತೆ ಮಾಡಿ ಕಸದ ರಾಶಿಯನ್ನು ಅಲ್ಲೆ ರಸ್ತೆಯಲ್ಲಿ ಬಿಟ್ಟು ಹೋಗುವುದು, ಅದೇ ಕಸ ಚರಂಡಿ ಗಳಲ್ಲಿ ಪುನಃ ನಿಂತು ಕಸ ನಿಲ್ಲುತ್ತದೆ. ಈ ರೀತಿ ಸ್ವಚ್ಛತ ಕಾರ್ಯ ಮಾಡಿ ಪ್ರಯೋಜನವಿಲ್ಲ. ಪಾಲಿಕೆ ಯವರು ಇದನ್ನು ಗಮನಿಸಬೇಕು. ವಾರ್ಡ್ ಸಂಖ್ಯೆ 34 ಜಯಶ್ರೀ ಗೇಟ್ ಬಳಿ ಕೆಲವು ದಿನಗಳಿಂದ ಕಸವನ್ನು ಹೀಗೆ ರಾಶಿ ರಾಶಿ ಹಾಕಿ, ಅದು ಚರಂಡಿಗೆ ಸರಿದು ಚರಂಡಿ ಕಸದಿಂದ ತುಂಬಿದೆಯೆಂದು ವಾರ್ಡಿನವರು ಮಾದ್ಯಮದ ಗಮನೆ

ಕುಂದಾಪುರ : ಜನ ಔಷಧಿ ದಿವಸದ ಅಂಗವಾಗಿ ಮೂರನೇ ದಿನ ಭಾರತೀಯ ರೆಡ್ ಕ್ರಾಸ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದರು

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯಿಂದ ಜನ ಔಷಧಿ ದಿವಸದ ಅಂಗವಾಗಿ ಮೂರನೇ ದಿನ ರೆಡ್ ಕ್ರಾಸ್ ಸದಸ್ಯರು ಪ್ರತಿಜ್ಞೆಯನ್ನು ಸ್ವೀಕರಿಸಿದರು. ಇಂದು ನಾಲ್ಕನೇ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಯಿತು. ಶಿಭಿರದಲ್ಲಿ ಮಧುಮೇಹ, ರಕ್ತದೊತ್ತಡ ಮತ್ತು ಅಗತ್ಯ ಇರುವವರಿಗೆ ಇ. ಸಿ. ಜಿ. ಮಾಡಲಾಯಿತು. ಆಯ್ದ ನಾಲ್ಕು ಮಂದಿ ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಪೆನ್ನನ್ನು ನೀಡಲಾಯಿತು. ಕಾರ್ಯಕ್ರಮ ವನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಉದ್ಘಾಟಿಸಿದರು.

ಕಾರ್ಯಕ್ರಮ ದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಪದಾಧಿಕಾರಿಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಸದಾನಂದ ಶೆಟ್ಟಿ, ಬಿ.ಎಮ್. ಚಂದ್ರಶೇಖರ, ವೀರೇಂದ್ರ ಕುಮಾರ್, ಸ್ಮಿತಾ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು. 203 ಜನರ ಆರೋಗ್ಯ ತಪಾಸಣೆ ಮತ್ತು ಐದು ಜನರ ಇ.ಸಿ.ಜಿ ಮಾಡಲಾಯಿತು

ಆರ್‍ಎಲ್ ಜಾಲಪ್ಪ ಆಸ್ಪತ್ರೆ ಕೋಲಾರದಲ್ಲಿ ಟೋಟಲ್ ಟಿ.ಎಂ.ಜೆ ರೀಪ್ಲೇಸ್ಮೆಂಟ್

ಕೋಲಾರ,ಮಾ.3: ಮುಖದಲ್ಲಿ ಚಲಿಸುವ ಏಕೈಕ ಮೂಳೆ ಕೆಳದವಡೆ. ಕೆಳದವಡೆ ಮತ್ತು ತಲೆ ಬುರುಡೆಯ ಜಂಟಿ Temporomandibular joint (TMJ) ತಲೆ ಬುರುಡೆಯ ಫೋಸಾದಲ್ಲಿ ಸರಿಯುವುದರಿಂದ ಕೆಳದವಡೆಯ ಚಲನೆ ಸಾದ್ಯವಾಗುತ್ತದೆ. ಕೆಳದವಡೆಗೆ ಪೆಟ್ಟುಬಿದ್ದು, ಜಂಟಿ ಸುತ್ತ ರಕ್ತಸ್ರಾವವಾಗಿ ಕ್ರಮೇಣ ತಲೆ ಬುರುಡೆ ಜೊತೆ ಸೇರಿ ಒಂದೇ ಮೂಳೆಯಾಗಿ ದವಡೆಯ ಚಲನೆಯನ್ನು ನಿಬರ್ಂಧಿಸುವುದನ್ನು ಖಿಒಎ ಂಟಿಞಥಿಟosis (ಟಿ.ಎಂ.ಜೆ.ಆಂಕಾಲಸೀಸ್) ಎಂದು ಕೆರಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಯಿ ತೆಗೆಯುವುದು ಮತ್ತು ಆಹಾರ ಸೇವನೆಯಲ್ಲಿ ತೊಡುಕು ಕಂಡುಬರುತ್ತದೆ.
ಆರ್‍ಎಲ್ ಜಾಲಪ್ಪ ಆಸ್ಪತ್ರೆಯದಂತ ವೈದ್ಯಕೀಯ ವಿಭಾಗದಲ್ಲಿ ಇಂತಹ ತೊಂದರೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಅಖಿಲಳಿಗೆ (ಹೆಸರು ಬದಲಾಯಿಸಲಾಗಿದೆ) ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಅಖಿಲ 3 ವರ್ಷದ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಕೆಳದವಡೆ ಮತ್ತು ಕಾಲಿಗೆ ಪೆಟ್ಟುತಗುಲಿತ್ತು. ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದ ಹುಡುಗಿಯ ಕೆಳದವಡೆಯ ಪೆಟ್ಟನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಾಯಿ ತೆಗೆಯುವುದು ದಿನದಿಂದ ದಿನಕ್ಕೆ ಕಡಿಮೆಯಾಗಿ ಕೆಲ ವರ್ಷಗಳಿಂದ ಸಂಪೂರ್ಣವಾಗಿ ಬಂದ್ ಆಗಿತ್ತು.
ದಂತ ವಿಭಾಗದ ಮುಖ್ಯಸ್ಥೆ ಡಾ|| ದೀಪಿಕ ಕೆಂಕೆರೆ ಮತ್ತು ಅವರ ತಂಡದ ಡಾ||ಮಲ್ಲಿಕಾ ಪಿ.ರೆಡ್ಡಿ ಹಾಗೂ ಡಾ||ಹರ್ಷಿತ ಕೆ.ಆರ್, ತಲೆ ಬುರುಡೆಯ ಜೊತೆಕೂಡಿಕೊಂಡಿದ್ದ ಕೆಳದವಡೆಯ ಜಂಟಿಯನ್ನು ಬಿಡಿಸಿ ದವಡೆಯ ಚಲನೆಗೆ ಪೂರಕವಾಗಲು, ಭೋಪಾಲ್ ಮಧ್ಯ ಪ್ರದೇಶದಲ್ಲಿ ತಯಾರಿಸಿದ ಕೃತಕ ಜಂಟಿಯನ್ನು ಅಳವಡಿಸಲಾಗಿದೆ. ಅರವಳಿಕೆ ವಿಭಾಗದ ಮುಖ್ಯಸ್ಥ ಡಾ||ರವಿ.ಎಂ ಮತ್ತು ಅವರ ತಂಡದ ಡಾ|| ಸುಜಾತ.ಎಂ.ಪಿ ಯಶಸ್ವಿಯಾಗಿ ಅರವಳಿಕೆಯನ್ನು ನೀಡಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಕೆಳದವಡೆಯ ಚಲನೆ ಪುನ: ಸ್ಥಾಪನೆಯಾಗಿದೆ. ಹಲವಾರು ವರ್ಷಗಳ ನಂತರ ಅಖಿಲಳಿಗೆ ಸಾಮಾನ್ಯ ಆಹಾರವನ್ನು ಸೇವಿಸಲು ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಯ 6 ತಿಂಗಳುವರೆಗೂ ಬಿಡಿಸಿದ ಮೂಳೆ ಜಂಟಿತಲೆ ಬುರುಡೆಯ ಜೊತೆ ಮರುಜೋಡಣೆಯ ಅತಂಕವಿರುವುದರಿಂದ ಬಾಯಿ ತೆಗೆಯುವ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ.
ಆರ್‍ಎಲ್ ಜಾಲಪ್ಪಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿ ಟೋಟಲ್ ಜಾಯಿಂಟ್ ರೀಪ್ಲೇಸ್ಮೆಂಟ್(ಖಿಎಖ) ಮಾಡಲಾಗಿದೆ.ಈ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ನಡೆಯದಿರಲು ಕಾರಣ, ಪರಿಣಿತ ಶಸ್ತ್ರಚಿಕಿತ್ಸಕರ ಅಲಭ್ಯತೆ ಮತ್ತು ಕೃತಕ ಜಂಟಿಗೆ ತಗಲುವ ವೆಚ್ಚ.
ಅಖಿಲಳ ಶಸ್ತ್ರಚಿಕಿತ್ಸೆಗೆ ಪೂರಕವಾದ ಎಲ್ಲಾ ವಿಧಿಗಳನ್ನು ಪೂರೈಸುವುದರಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಮಕ್ಕಳ ವಿಭಾಗದ ಕೊಡುಗೆ ಅಪಾರ.

ಶ್ರೀನಿವಾಸಪುರ:ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿನ ಅಂಗಡಿ ಮಳಿಗೆಗಳನ್ನು ಬಹಿರಂಗ ಹರಾಜಿನ ಮೂಲಕ ರೂ.46.63 ಲಕ್ಷಕ್ಕೆ ನೀಡಲಾಯಿತು

ಶ್ರೀನಿವಾಸಪುರ: ಪಟ್ಟಣದ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿನ 11 ಅಂಗಡಿ ಮಳಿಗೆಗಳನ್ನು ಗುರುವಾರ ಬಹಿರಂಗ ಹರಾಜಿನ ಮೂಲಕ ರೂ.46.63 ಲಕ್ಷಕ್ಕೆ ನೀಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹರಾಜಿನ ಬಳಿಕ ಮಾತನಾಡಿ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಖಾಲಿಯಿದ್ದ 11 ಅಂಗಡಿಗಳ ಬಹಿರಂಗ ಹರಾಜು ನಡೆಸಲಾಗಿದೆ. ಹರಾಜಿನಲ್ಲಿ ಅಂಗಡಿ ಪಡೆದುಕೊಂಡಿರುವ ವ್ಯಕ್ತಿಗಳು, ಅಂಗಡಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಹೇಳಿದರು.
ಅಂಗಡಿ ಮಳಿಗೆ ಬಾಡಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಂದಾಯ ಮಾಡಬೇಕು. ಪುರರಸಭೆ ಗಮನಕ್ಕೆ ತರದೆ ಅಂಗಡಿ ಮಳಿಗೆಗಳನ್ನು ಬೇರೆಯರಿಗೆ ವರ್ಗಾಯಿಸಬಾರದು. ಪುರಸಭೆ ನಿಯಮಗಳಿಗೆ ಒಳಪಟ್ಟು ವ್ಯವಹರಿಸಬೇಕು. ಮಳಿಗೆಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಬಿ.ವೆಂಕಟರೆಡ್ಡಿ, ಸಂಜಯ್‍ಸಿಂಗ್, ಎನ್‍ಎಂಆರ್ ನಾಗರಾಜ್, ಜಯಣ್ಣ, ರಾಮಾಂಜಿ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್

ಮಂಗಳೂರಿನ ಡಾ। ಪಿ.ಪಿ. ದೇವನ್‌ ಅವರಿಗೆ “ಗೋಲ್ಡನ್‌ ಏಮ್‌’ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಡಾ| ಪಿ.ಪಿ. ದೇವನ್‌ ಅವರಿಗೆ ಪ್ರತಿಷ್ಠಿತ
“ಗೋಲ್ಡನ್‌ ಏಮ್‌’ ಪ್ರಶಸ್ತಿ ಲಭಿಸಿದೆ. 11ನೇ ಆವೃತ್ತಿಯ ಗೋಲ್ಡನ್‌ ಏಮ್‌ ಸಮ್ಮೇಳನವನ್ನು ಬೆ೦ಗಳೂರಿನ ಡೈನರ್ಜಿಕ್‌ ಬಿಸಿನೆಸ್‌ ಸೊಲ್ಯೂಷನ್ಸ್‌ ಆಯೋಜಿಸಿತ್ತು. ಈ ಸ೦ದರ್ಭದಲ್ಲಿ, ಸುಮಾರು ಒಂದು ದಶಕದ ಕಾಲ ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಪಿ. ದೇವನ್‌ ಅವರಿಗೆ “ಅತ್ಯಂತ ವಿಶ್ವಾಸಾರ್ಹ ಹೆಲ್ಫ್‌ಕೇರ್‌ ಲೀಡರ್‌ಶಿಪ್‌ – ಶ್ರೇಷ್ಟ ಇಎನ್‌ಟ ಸ್ಪೆಷಲಿಸ್ಟ್‌ ಎಂಬ ಗೌರವ ಪ್ರದಾನ ನೀಡಲಾಯಿತು.

ಕುಂದಾಪುರ : ಜನ ಔಷಧಿ ದಿನಾಚರಣೆ ಎರಡನೇ ದಿನ -ಚೈತನ್ಯ ವಿಶೇಷ ಶಾಲೆಗೆ ದೇಣಿಗೆ


ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶುಕ್ರಾವಾರದಂದು ಚೈತನ್ಯ ವಿಶೇಷ ಶಾಲೆಗೆ ಬೇಟಿ ನೀಡಿ ಶಾಲೆಗೆ ರೂಪಾಯಿ 15,000/- ದೇಣಿಗೆ ನೀಡಲಾಯಿತು. ಈ ದೇಣಿಗೆ ಯನ್ನು ಯುವ ರೆಡ್ ಕ್ರಾಸ್ ಸಂಯೋಜಕರಾದ ದಿನಕರ ಆರ್ ಶೆಟ್ಟಿ ಕೊಡಮಾಡಿದರು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ಮುಖ್ಯ ಶಿಕ್ಷಕರಾದ ಲೀಲಾ ಕರ್ಕಾಡಾ ಇವರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ನಿಂದ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ್ ಆಚಾರ್ಯ, ಡಾ. ಸೋನಿ, ಮುತ್ತಯ್ಯ ಶೆಟ್ಟಿ, ಸೀತಾರಾಮ ನಕತ್ತಾಯ, ಅಬ್ದುಲ್ ಬಶೀರ್, ಸದಾನಂದ ಶೆಟ್ಟಿ, ನಾರಾಯಣ ದೇವಾಡಿಗ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.