Second   Novena preceding the Feast of Relic St. Anthony was held at Milagres Church – Jeppu / ಸಂತ ಅಂತೋನಿ ಹಬ್ಬದ ಪ್ರಯುಕ್ತ ಜೆಪ್ಪುವಿನಲ್ಲಿ ಎರಡನೇ ದಿನದ ನೊವೆನಾ

Theme for the Day “In our Difficulties we should not curse God through our Tounge”

The Novena Mass for the relic feast of St Anthony was held at Milagres Church at 6:00 p.m. Rev. Fr. Vincent Sequeira, the Diocesan Secretary of Bible Commission Celebrated the mass and gave a heart touching homily on the day’s theme. He pointed different biblical personalities who stood firm in their faith during the life difficulties.  Rev Fr. J B Crasta con-celebrated the mass. At the end of the mass Fr Rupesh Tauro Conducted the Novena in honour of St Anthony during which special prayers were offered for all the politicians.  

Choir Members of Jeppu Parish sang and Joined in Thanksgiving.

ಸಂತ ಅಂತೋನಿ ಹಬ್ಬದ ಪ್ರಯುಕ್ತ ಜೆಪ್ಪುವಿನಲ್ಲಿ ಎರಡನೇ ದಿನದ ನೊವೆನಾ

ದಿನದ ಧ್ಯೇಯ ವಾಕ್ಯ “ನಮ್ಮ ಕಷ್ಟಗಳಲ್ಲಿ ನಾವು ನಮ್ಮ ನಾಲಿಗೆಯ ಮೂಲಕ ದೇವರನ್ನು ಶಪಿಸಬಾರದು”

ಮಂಗಳೂರು: ಮಿಲಾಗ್ರಿಸ್ ಚರ್ಚ್‌ನಲ್ಲಿ ಸಂಜೆ 6 ಗಂಟೆಗೆ ಸಂತ ಅಂತೋನಿಯವರ ಸ್ಮಾರಕ ಹಬ್ಬದ ನೊವೆನಾ ಮಾಸಾಚರಣೆ ನಡೆಯಿತು. ರೆ.ಫಾ. ಬೈಬಲ್ ಕಮಿಷನ್‌ನ ಧರ್ಮಪ್ರಾಂತ್ಯದ ಕಾರ್ಯದರ್ಶಿ ವಿನ್ಸೆಂಟ್ ಸಿಕ್ವೇರಾ ಸಾಮೂಹಿಕವಾಗಿ ಆಚರಿಸಿದರು ಮತ್ತು ದಿನದ ವಿಷಯದ ಕುರಿತು ಹೃದಯ ಸ್ಪರ್ಶಿ ಪ್ರವಚನ ನೀಡಿದರು. ಜೀವನದ ಕಷ್ಟಗಳ ಸಮಯದಲ್ಲಿ ತಮ್ಮ ನಂಬಿಕೆಯಲ್ಲಿ ದೃಢವಾಗಿ ನಿಂತಿರುವ ವಿವಿಧ ಬೈಬಲ್ನ ವ್ಯಕ್ತಿಗಳನ್ನು ಅವರು ಸೂಚಿಸಿದರು. ವಂ. ಫಾ. ಜೆ ಬಿ ಕ್ರಾಸ್ತಾ ಸಾಮೂಹಿಕವಾಗಿ ಆಚರಿಸಿದರು. ಸಾಮೂಹಿಕ ಪ್ರಾರ್ಥನೆಯ ಕೊನೆಯಲ್ಲಿ ಫಾದರ್ ರೂಪೇಶ್ ತೌರೊ ಅವರು ಸಂತ ಅಂತೋನಿಯವರ ಗೌರವಾರ್ಥ ನೊವೆನಾವನ್ನು ನಡೆಸಿದರು, ಈ ಸಂದರ್ಭದಲ್ಲಿ ಎಲ್ಲಾ ರಾಜಕಾರಣಿಗಳಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.

ಜೆಪ್ಪು ಚರ್ಚ್ ಗಾಯನ ವೃಂದದ ಸದಸ್ಯರು ಕೃತಜ್ಞತಾ ಸ್ಮರಣೆಯಲ್ಲಿ ಪಾಲ್ಗೊಂಡರು.

ಮಂಗಳೂರು : ಅಥೇನಾ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಂದ ದೀಪ ಬೆಳಗಿಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಮಂಗಳೂರು: ಜಿಎನ್‌ಎಂನ 20ನೇ ಬ್ಯಾಚ್ ಮತ್ತು ಬಿಎಸ್‌ಸಿಯ 19ನೇ ಬ್ಯಾಚ್‌ನ ದೀಪ ಪ್ರಜ್ವಲನ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ. ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ನರ್ಸಿಂಗ್ ವಿದ್ಯಾರ್ಥಿಗಳು 7 ನೇ ಫೆಬ್ರವರಿ 2023 ರಂದು ಬೆಳಿಗ್ಗೆ 10.30 ಕ್ಕೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಥೆನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‌ನ ಅಧ್ಯಕ್ಷರಾದ ಶ್ರೀ ಆರ್.ಎಸ್ ಶೆಟ್ಟಿಯಾನ್ ವಹಿಸಿದ್ದರು ಮತ್ತು ಮಾಜಿ ಪ್ರಾಂಶುಪಾಲರಾದ ಅಥೆನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‌ನ ಹಿರಿಯರಾದ ಆನ್ರೋಸ್ ಡಿ’ಅಲ್ಮೇಡಾ ಮುಖ್ಯ ಅತಿಥಿಯಾಗಿದ್ದರು. ಶ್ರೀಮತಿ ಆಶಾ ಶೆಟ್ಟಿಯಾನ್ ಕಾರ್ಯದರ್ಶಿ, ಡಾ. ಆಶಿತ್ ಶೆಟ್ಟಿಯಾನ್ ಟ್ರಸ್ಟಿ, ಅಥೆನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ಸೀನಿಯರ್ ದೀಪಾ ಪೀಟರ್ ಪ್ರಾಂಶುಪಾಲರು ಮತ್ತು ಸೀನಿಯರ್ ಐಲೀನ್ ಮಥಿಯಾಸ್ ವೈಸ್ ಪ್ರಿನ್ಸಿಪಾಲ್ ಮತ್ತು ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್‌ನ ಪ್ರಾಂಶುಪಾಲರಾದ ಡಾ.ನಂದಿನಿ ಅವರು ವೇದಿಕೆ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ 140 ವಿದ್ಯಾರ್ಥಿನಿಯರು ದೀಪ ಬೆಳಗಿಸಿದರು. ಭಗಿನಿ. ದೀಪ ಪೀಟರ್ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಮುಖ್ಯ ಅತಿಥಿಗಳಾಗಿದ್ದ ಸೀನಿಯರ್ ಆನ್ರೋಸ್ ಡಿ ಅಲ್ಮೇಡಾ ಅವರು ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ದೀಪ ಬೆಳಗಿಸಿ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

     ದಿನದ ಮಹತ್ವವನ್ನು Sr. ಐಲೀನ್ ಮಥಿಯಾಸ್ ಎತ್ತಿ ತೋರಿಸಿದರು. ದೀಪ ಬೆಳಗಿಸಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಒಟ್ಟು 140 ವಿದ್ಯಾರ್ಥಿಗಳನ್ನು ನರ್ಸಿಂಗ್ ವೃತ್ತಿಗೆ ಪರಿಚಯಿಸಲಾಯಿತು. ಪ್ರಾಂಶುಪಾಲೆ ಸೀನಿಯರ್ ದೀಪಾ ಪೀಟರ್ ಪ್ರಮಾಣ ವಚನ ಬೋಧಿಸಿದರು.

    ಮುಖ್ಯ ಅತಿಥಿಗಳು ಶುಶ್ರೂಷಾ ವೃತ್ತಿಯ ಮೌಲ್ಯ ಮತ್ತು ದಾದಿಯ ಗುಣಗಳ ಬಗ್ಗೆ ಒತ್ತಿ ಹೇಳಿದರು. ಸೂಕ್ಷ್ಮವಾದ ಜೀವನವನ್ನು ಸೂಕ್ಷ್ಮವಾದ ಕೈಗಳಿಂದ ನಿಭಾಯಿಸಲು ಅವರು ಒತ್ತಿಹೇಳಿದರು. ವಿದ್ಯಾರ್ಥಿಗಳು ಅಭ್ಯಾಸದ ಮೂಲಕ ಕೌಶಲ್ಯಗಳನ್ನು ಕಲಿಯಬೇಕು ಮತ್ತು ದೈನಂದಿನ ಜೀವನದಲ್ಲಿ ದೈನಂದಿನ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಇದು ರೋಗಿಗಳಿಗೆ ಉತ್ತಮ ಆರೈಕೆಯನ್ನು ನೀಡಲು ಸಹಾಯ ಮಾಡುತ್ತದೆ. ಅಥೇನಾ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್‌ನ ಅಧ್ಯಕ್ಷರಾದ ಶ್ರೀ ಆರ್.ಎಸ್.ಶೆಟ್ಟಿಯಾನ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಗಿಗಳ ಆರೋಗ್ಯ ಮತ್ತು ಸೇವೆಯಲ್ಲಿನ ಸಮರ್ಪಣೆಯಲ್ಲಿ ದಾದಿಯರ ಪಾತ್ರವನ್ನು ನೆನಪಿಸಿದರು. ದಾದಿಯರು ಆರೋಗ್ಯ ವೃತ್ತಿಯ ಬೆನ್ನೆಲುಬಾಗಿದ್ದು, ಬದಲಾಗುತ್ತಿರುವ ಸನ್ನಿವೇಶಗಳಿಗೆ ಅನುಗುಣವಾಗಿ ಅವರು ಜ್ಞಾನ ಮತ್ತು ಕೌಶಲ್ಯದಿಂದ ಸುಸಜ್ಜಿತರಾಗಬೇಕು ಎಂದು ಅವರು ಒತ್ತಿ ಹೇಳಿದರು.

      ನರ್ಸಿಂಗ್ ವಿಭಾಗದ ಫಂಡಮೆಂಟಲ್ಸ್‌ನ ಎಚ್‌ಒಡಿ ಶ್ರೀಮತಿ ಜೆನೆವಿವ್ ಸೆರಾವೋ ಸ್ವಾಗತಿಸಿದರು. GNM ಬ್ಯಾಚ್‌ನ ಕೋ-ಆರ್ಡಿನೇಟರ್  ಸಹಾಯಕ ಉಪನ್ಯಾಸಕರು ಮತ್ತು ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗದ ಶ್ರೀಮತಿ ಪ್ರಶ್ವಿನ್ ಡಿ’ಮೆಲ್ಲೋ ಧನ್ಯವಾದವನ್ನು ಸಮರ್ಪಿಸಿದರು. ಎಂಜೆಲ್ ಬೆನ್ನಿ ಮತ್ತು ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

ಸಾಲ ಪಡೆದವರು ಸಂಕಷ್ಟಕ್ಕೆ ಒಳಗಾದಾಗ, ಸಾಲ ನೀಡಿದವರು ಮಾನವೀಯತೆಯಿಂದ ನಡೆದುಕೊಳ್ಳಬೇಕು:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಸಾಲ ಪಡೆದವರು ಸಂಕಷ್ಟಕ್ಕೆ ಒಳಗಾದಾಗ, ಸಾಲ ನೀಡಿದವರು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್‍ನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಅಡ್ಡಗಲ್ ಹಾಗೂ ಲಕ್ಷ್ಮೀಪುರ ವ್ಯವಸಾಯ ಸೇವಾ ಸಹಕಾರ ಸಂಘದ ವ್ಯಾಪ್ತಿಯ 140 ಸ್ತ್ರೀ ಶಕ್ತಿ ಸಂಘಗಳಿಗೆ ರೂ.10.04 ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ಸಾಲ ಪಡೆದ ಸ್ತ್ರೀ ಶಕ್ತಿ ಸಂಘದ ಸದಸ್ಯೆ ಯಾವುದಾದರೂ ಕಾರಣದಿಂದ ಮರಣಹೊಂದಿದರೆ, ಮನೆಯವರನ್ನು ಸಾಲ ಮರುವಪಾವತಿ ಮಾಡುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ನೀಡಲಾಗುತ್ತಿದ್ದ ಅಕ್ಕಿ ಪ್ರಮಾಣ ಕಡಿಮೆ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕೆ ಸಲ್ಲುತ್ತದೆ. ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಕೊಡಿಸಲು ಆಗದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಸುಳ್ಳು ಆಶ್ವಾಸನೆಗೆ ಕಿವಿಗೊಡಬಾರದು ಎಂದು ಹೇಳಿದರು.
ಕೆಸಿ ವ್ಯಾಲಿ ನೀರು ತಂದು ಕೆರೆ ತುಂಬಿದ್ದೇನೆ. ಸರ್ಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಂಡಿದ್ದೇನೆ. ಪಕ್ಷಾತೀತವಾಗಿ ಮನೆ ವಿತರಿಸಿದ್ದೇನೆ. ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ. ಆದರೂ ಕೆಲವರು ಅನಗತ್ಯವಾಗಿ ಕೊಂಕು ನುಡಿಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಪಿಡಿಒ ಮಂಗಳಾಂಬ, ಮುಖಂಡರಾದ ಕೃಷ್ಣಾರೆಡ್ಡಿ, ಕೊಂಡಸಂದ್ರ ಶಿವಾರೆಡ್ಡಿ, ಕೆ.ಕೆ.ಮಂಜು, ಟಿ.ವಿ.ನಾರಾಯಣಸ್ವಾಮಿ, ಅಯ್ಯಪ್ಪ, ಬಾಬುರೆಡ್ಡಿ, ವೆಂಕಟರಾಮರೆಡ್ಡಿ, ಶಂಕರಪ್ಪ ಇದ್ದರು.

ಕೊಂಕಣಿ ಲೇಖಕ ಸಂಘದ ಪ್ರಶಸ್ತಿಗೆ ಲೇಖಕಿ ಶ್ರೀಮತಿ ಐರಿನ್‌ ಪಿಂಟೊ ಆಯ್ಕೆ

ಮಂಗಳೂರು: ಕೊಂಕಣಿ ಲೇಖಕ ಸಂಘ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ ಸಂಘ ನಿರ್ಧರಿಸಿತು. ಅದರಂತೆ, ಕೊಂಕಣಿ ಲೇಖಕ ಸಂಘದ ಪ್ರಶಸ್ತಿ ಸಮಿತಿಯು ಖ್ಯಾತ ಕೊಂಕಣಿ ಲೇಖಕಿ ಶ್ರೀಮತಿ ಐರಿನ್‌ ಪಿಂಟೊ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2023ರ ಫೆಬ್ರಬರಿ 25ರಂದು ಸಂಜೆ 6.30ಕ್ಕೆ ಮಂಗಳೂರು ನಂತೂರಿನ, ಬಜ್ಜೋಡಿಯ ಸಂದೇಶ ಪ್ರತಿಷ್ಠಾನ ಸಭಾ೦ಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ “ರಾಕ್ಣೊ’ ಕೊಂಕಣಿ ವಾರಪತ್ರಿಕೆಯ ಮಾಜಿ ಸಂಪಾದಕರಾದ ಫಾದರ್‌ ಫ್ರಾನ್ಸಿಸ್‌ ರೊಡ್ರಿಗಸ್‌ ಭಾಗವಹಿಸಲಿದ್ದು, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ| ರಾಧಾಕೃಷ್ಣ ಎನ್‌. ಬೆಳ್ಳೂರ್‌ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.

   ರಿಚರ್ಡ್‌ ಮೊರಾಸ್‌ – ಸಂಚಾಲಕರು, ಡೊಲ್ಫಿ ಎಫ್‌. ಲೋಬೊ, ಸಮಿತಿ ಸದಸ್ಯ, ಜೆ.ಎಫ್‌. ಡಿಸೋಜಾ, ಸಲಹಾ ಸಮಿತಿ ಸದಸ್ಯ,  ಡಾ. ಜೆರಾಲ್ಡ್‌ ಪಿಂಟೊ,ಸಲಹಾ ಸಮಿತಿ ಸದಸ್ಯ, ಟೈಟಸ್‌ ನೊರೊನ್ಹಾ  ಸಂಘಟನಾ ಸದಸ್ಯ, ಇವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ

ಕೋಲಾರ ಹಾಲು ಒಕ್ಕೂಟದ ಶಿಬಿರ ಕಚೇರಿ ಕಟ್ಟಡ ನಿವೇಶನ ಖರೀದಿ ಸಂಬಂಧ ಬೈರೆಡ್ಡಿ ಮಾಡಿರುವ ಆರೋಪ ಸುಳ್ಳು : ಕೋಮುಲ್ ನಿರ್ದೇಶಕ ಎನ್.ಹನುಮೇಶ್

ಶ್ರೀನಿವಾಸಪುರ: ಕೋಲಾರ ಹಾಲು ಒಕ್ಕೂಟದ ಶಿಬಿರ ಕಚೇರಿ ಕಟ್ಟಡ ನಿರ್ಮಿಸಲು ನಿವೇಶನ ಖರೀದಿಗೆ ಸಂಬಂಧಿಸಿದಂತೆ ಒಕ್ಕೂಟದ ಮಾಜಿ ನಿರ್ದೇಶಕ ಬೈರೆಡ್ಡಿ ಮಾಡಿರುವ ಆರೋಪ ಸುಳ್ಳು ಎಂದು ಕೋಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೇಶನ ಖರೀದಿಯಲ್ಲಿ ರೂ.35 ಲಕ್ಷ ಲಾಭ ಮಾಡಿಕೊಳ್ಳಲಾಗಿದೆ ಎಂದು ಪಾಳ್ಯ ಬೈರೆಡ್ಡಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ನಿಯಮಾನುಸಾರ ಆಡಳಿತ ಮಂಡಲಿ ಅನುಮೋದನೆ ಪಡೆದ ಬಳಿಕ 3040 ಚದರ ಅಡಿ ನಿವೇಶನ ಖರೀದಿಗೆ ಅರ್ಹ ಮಾಲೀಕರಿಂದ ಅರ್ಜಿ ಕರೆಯಲಾಗಿತ್ತು. ನಿಗದಿತ ಅವಧಿಯೊಳಗೆ ಆಸಕ್ತ ಮಾಲೀಕರಿಂದ ಬಂದ ಅರ್ಜಿ ಮತ್ತು ದಾಖಲೆ ಕಾನೂನು ತಜ್ಞರ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಯಾವುದೇ ಆಕ್ಷೇಪಣೆ ಬಾರದ ಹಿನ್ನೆಲೆಯಲ್ಲಿ ನೋಂದಾಯಿತ ಮೌಲ್ಯಮಾಪಕರಿಂದ ದರ ನಿಗದಿಪಡಿಸಲಾಯಿತು. ಪ್ರತಿ ಚದರಡಿಗೆ ರೂ.2350 ರಿಂದ 2500 ನೀಡಬಹುದೆಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳಿದರು.
ಪಟ್ಟಣದ ಹೊರವಲಯದ ಪನಸಮಾಕನಹಳ್ಳಿ ಸಮೀಪ ಇರುವ ಒಕ್ಕೂಟದ 10 ಎಕರೆ ಜಮೀನು ಕರಗೆಟೆಡ್ ಬಾಕ್ಸ್ ತಯಾರಿಕಾ ಘಟಕ ಸ್ಥಾಪಿಸಲು ಮೀಸಲಿಡಲಾಗಿದೆ. ಹಾಗೊಂದು ವೇಳೆ ಶಿಬಿರ ಕಚೇರಿ ನಿರ್ಮಿಸಲು ಪ್ರಯತ್ನಿಸಿದರೂ, ಅಲ್ಲಿಗೆ ಬಸ್ ಸೌಲಭ್ಯ ಇಲ್ಲ. ಸರಿಯಾದ ರಸ್ತೆ ಸೌಲಭ್ಯವೂ ಇಲ್ಲ. ಪಟ್ಟಣದಿಂದ 6 ಕಿ.ಮೀ ದೂರ ಇರುವುದರಿಂದ ಹಾಲು ಉತ್ಪಾದಕರು ಹಾಗೂ ಸಿಬ್ಬಂದಿ ಓಡಾಟಕ್ಕೆ ಕಷ್ಟವಾಗುತ್ತದೆ. ಪಟ್ಟಣದಲ್ಲಿ ಕಚೇರಿ ಇದ್ದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀನಿವಾಸಪುರ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಕೋಮುಲ್ ಶಿಬಿರಿ ಕಚೇರಿ ಕಟ್ಟಡ ನಿರ್ಮಿಸಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಒತ್ತಾಯದ ಮೇರೆಗೆ, ಪುರಸಭೆ ವ್ಯಾಪ್ತಿಯಲ್ಲಿ ಶಿಬಿರ ಕಚೇರಿ ನಿರ್ಮಿಸಲು ನಿವೇಶನ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ‘ನಾನು ತಾಲ್ಲೂಕಿನ ಹಾಲು ಉತ್ಪಾದಕರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಹಾಲು ಉತ್ಪಾದಕರ ಬೇಡಿಕೆ ಈಡೇರಿಸುವ ಸಲುವಾಗಿ ನಿಯಮಾನುಸಾರ ನಿವೇಶನ ಖರೀದಿಸಲಾಗುತ್ತಿದೆ’ ಎಂದು ಹೇಳಿದರು.
ಕೋಚಿಮುಲ್ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಮುಖಂಡರಾದ ಪಾಳ್ಯ ಗೋಪಾಲರೆಡ್ಡಿ, ನಾಗದೇನಹಳ್ಳಿ ಸೀತಾರಾಮರೆಡ್ಡಿ, ಕೇತಗಾನಹಳ್ಳಿ ನಾಗರಾಜ್, ಅಯ್ಯಪ್ಪ ಇದ್ದರು.

ಬೈಂದೂರು ಮತ್ತು ಕೊಲ್ಲೂರು ಉಪಕೇಂದ್ರದಿಂದ ಹೊರಡುವ ಫೀಡರುಗಳಿಂದ ವಿದ್ಯುತ್ ವ್ಯತ್ಯಯ

ಬೈಂದೂರು: ವಿದ್ಯುತ್ ಪರಿವರ್ತಕಗಳ 780-0602 & ೦008000708 764 ಹಾಗೂ ತ್ರೈ ಮಾಸಿಕ ನಿರ್ವಹಣಾ ಹಮ್ಮಿಕೊಂಡಿರುವುದರಿಂದ ಸದರಿ ದಿನದಂದು 110/1 ಕೆ.ವಿ ನಾವುಂದ ವಿದ್ಯುತ್‌ ಉಪಕೇಂದ್ರ ಹಾಗೂ 33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಉಪಕೇಂದ್ರದಿಂದ ಹೊರಡುವ ಎಲ್ಲಾ ೫. ಕೆ.ವಿ ಫೀಡರುಗಳಾದ ಹೇರೂರು, ಮರವಂತೆ, ಕಂಬದಕೋಣೆ, ಕಿರಿಮಂಜೇಶ್ವರ, ಆಲೂರು, ಬಡಾಕೆರೆ. ಶಿರೂರು, ಉಪ್ಪುಂದ, ಗಂಗನಾಡು, ಬೈಂದೂರು, ತೂದಳ್ಳಿ, ತಗ್ಗರ್ಸೆ, ಯಳಜಿತ್‌, ಮುದೂರು ಹಾಗೂ ಕೊಲ್ಲೂರು ಫೀಡರುಗಳಲ್ಲಿ ಹೇರಂಜಾಲು, ಕಂಬದಕೋಣೆ. ಹೇರೂರು, ಕಾಲ್ದೋಡು, ಉಳ್ಳೂರು-11, ಆಲೂರು, ಹಕ್ಲಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ, ಹಡವು, ತ್ರಾಸಿ, ಹೊಸಾಡು, ಕೊಯಾನಗರ, ಮರವಂತೆ, ಕಿರಿಮಂಜೇಶ್ವರ, ಅರೆಶಿರೂರು, ಎಲ್ಲೂರು, ಬಾಳ್‌ಕೊಡ್ಡು, ಹಾಲ್ಕಲ್‌, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು. ಜನ್ನಾಲ್‌ ಬೀಸಿನಪಾರೆ, ಸೆಳ್‌. ಕೊಡು, ಕಾನ್ಶಿ, ಮೆಕ್ಕೆ, ಮುದೂರು, ಅರೆಹೊಳೆ, ನಾಗೂರು. ಬೈಂದೂರು, ಶಿರೂರು, ಯಡ್ತರೆ, ಗೋಳಿಹೊಳೆ ಹಾಗೂ ಕೊಲ್ಲೂರು. ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ತಿಳಿಸಿದೆ.

ಮಾರಿ ಜಾತ್ರೆ : ಗಂಗೊಳ್ಳಿ ಹಾಗೂ ಗುಜ್ಜಾಡಿ ಗ್ರಾಮ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧ

ಗಂಗೊಳ್ಳಿ:  ಪೊಲೀಸ್‌ ಅಧೀಕ್ಷಕರು ಉಡುಪಿ. ಜಿಲ್ಲೆ ಇವರು ನೀಡಿರುವ ವರದಿಯಂತೆ. ಗಂಗೊಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗ್ರಾಮದ ಖಾರ್ವಿಕೇರಿಯ ಶ್ರೀ ಮಹಾಕಾಳಿ ಅಮ್ಮನವರ ದೇವಸ್ಥಾನದ ಮಾರಿ ಜಾತ್ರೆ ಸಮಯದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಉಡುಪಿ ಜಿಲ್ಲ್ಲಾಧಿಕಾರಿ ಕೂರ್ಮಾ ರಾವ್‌.ಎಂ. ಭಾ.ಆ.ಸೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಲ್ಲಾ ರೀತಿಯ ನಿಯಮಗಳು 1968 ರ ನಿಯಮ 3 ರಡಿ ಮದ್ಯ ಮಾರಾಟವನ್ನು ನಿಷೇಧಿದಿಸಿದ್ದಾರೆ  

ಮಂಗಳೂರು : ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬಕ್ಕೆ ಚಾಲನೆ

ಮಂಗಳೂರು: ಮಂಗಳೂರಿನ ಮಿಲಾಗ್ರಿಸ್ ಚರ್ಚ್‍ನ ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬಕ್ಕೆ ವಂದನೀಯ ಫಾದರ್ ಒನಿಲ್ ಡಿ’ಸೋಜ ರವರು ಸಂತ ಆಂತೋನಿಯವರ ದ್ವಜಾರೋಹಣ ಮಾಡುವ ಮುಕಾಂತರ ಚಾಲನೆ ನೀಡಿದರು. ಮಂಗಳೂರಿನ ಮಿಲಾಗ್ರಿಸ್ ಚರ್ಚ್‍ನ ಸಂತ ಆಂತೋನಿಯವರ ಪುಣ್ಯಕ್ಷೇತ್ರದ ಹಬ್ಬವು ಫೆಬ್ರವರಿ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು. ಇದರ ತಯಾರಿಯಾಗಿ 9 ದಿವಸಗಳ ನೊವೆನಾ ಪ್ರಾರ್ಥನೆಯನ್ನು ಇಂದು ಆರಂಬಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು ಪ್ರಾರ್ಥನ ವಿಧಿಯನ್ನು ನೆರೆವೆರಿಸಲಿದ್ದಾರೆ. ಹಬ್ಬದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾದ್ಯಕ್ಷರು ಅತಿ ವಂದನೀಯ ಅಲೋಶಿಯಸ್ ಪೌಲ್ ಡಿ’ಸೋಜವರು ಫೆಬ್ರವರಿ 15 ರಂದು ಸಂಜೆ 6 ಗಂಟೆಗೆ ಮಿಲಾಗ್ರಿಸ್ ಚರ್ಚ್‍ನಲ್ಲಿ ನೇರವೇರಿಸಲಿದ್ದಾರೆ. 

ವಂದನೀಯ ಗುರು ಒನಿಲ್ ಡಿ’ಸೋಜ ಹಬ್ಬದ ಧ್ವಜರೋಹಣ ಮಾಡಿ “ಕಳೆದ 125 ವರ್ಷಗಳಲ್ಲಿ ಜೆಪ್ಪು ಸಂತ ಆಂತೋನಿಯವರ ಆಶ್ರಮದಲ್ಲಿ ವಿವಿಧ ಪವಾಡಗಳನ್ನು ಮಾಡಿದ ಈ ಸಂತರು ಇನ್ನೂ ಹಲವಾರ ಪವಾಡಗಳ್ಳು ತನ್ನ ಭಕ್ತರಲ್ಲಿ ಮಾಡಲಿ ಎಂದು ಅರ್ಶಿವಾದಿಸಿದರು. ಈ ಕಾರ್ಯಕ್ರಮದಲ್ಲಿ ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ರೂಪೇಶ್ ತಾವ್ರೊ, ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು ಭಕ್ತಾಧಿಗಳಿ ಪಾಲ್ಗೊಂಡರು. ಪ್ರಥಮ ದಿವಸದ ನೊವೆನಾ ಪ್ರಾರ್ಥನೆಯಲ್ಲಿ ಕುಟುಂಬಗಳಿಗೊಸ್ಕರ ಪ್ರಾರ್ಥಿಸಲಾಯಿತು.

ಕುಂದಾಪುರದಲ್ಲಿ ಕರ್ನಾಟಕ-1 ನಾಗರಿಕ ಸೇವಾ ಕೇಂದ್ರ ಉದ್ಘಾಟನೆ


ಜನ ಸಾಮಾನ್ಯರು ತಾಲೂಕು ಕಛೇರಿಯಲ್ಲಿ ನೀಡುವ ಅರ್ಜಿಗಳನ್ನು ಕರ್ನಾಟಕ-1 ಎನ್ನುವ ಸರಕಾರದ ನಾಗರಿಕ ಸೇವಾ ಕೇಂದ್ರದಲ್ಲಿ ಅನುಕೂಲ ಪಡೆಯುವಂತಹ ಯೋಜನೆಯನ್ನು ಕುಂದಾಪುರದ ಮುಖ್ಯ ರಸ್ತೆಯಲ್ಲಿ ಕಛೇರಿ ಉದ್ಘಾಟಿಸುವ ಮೂಲಕ ಆರಂಭಿಸಲಾಗಿದೆ.
ಕುಂದಾಪುರದ ಯೂನಿಯನ್ ಬ್ಯಾಂಕ್ ಬಳಿ, ಪೀಟರ್ ಇಂಗ್ಲೆಂಡ್ ಶೋರೂಮ್ ಎದುರು ಇರುವ ಕಟ್ಟಡದಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ದೇವಕಿ ಸಣ್ಣಯ್ಯ ಕರ್ನಾಟಕ 1 ಕೇಂದ್ರ ಉದ್ಘಾಟಿಸಿದರು.
ಪುರಸಭಾ ಅಧಿಕಾರಿ ಅಂಜಲಿ, ಗ್ರಾಮ ಆಡಳಿತ ಅಧಿಕಾರಿ ಆನಂದ ಡಿ. ಎಂ., ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಕೆ. ಮೋಹನದಾಸ ಶೆಣೈ ಮತ್ತು ಯು. ಎಸ್. ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನಂದಾದೀಪ ಬೆಳಗಿಸಿದರು.
ನಿವೃತ್ತ ಬ್ಯಾಂಕ್ ಮೇನೇಜರ್ ಗಣೇಶ್ ಆಚಾರ್ಯ ಶುಭಾಶಂಸನೆ ಮಾಡಿದರು. ಇದು ಸಾರ್ವಜನಿಕ ಉಪಯೋಗಿ ಯೋಜನೆಯಾಗಿದ್ದು ಜನರು ಇದರ ಸದುಪಯೋಗ ಪಡೆಯಬೇಕು ಎಂದು ದೇವಕಿ ಸಣ್ಣಯ್ಯ ಹೇಳಿದರು. ಗ್ರಾಮ ಆಡಳಿತ ಅಧಿಕಾರಿ ಆನಂದ್ ಮಾತನಾಡಿ, “ಕರ್ನಾಟಕ ನಂ. 1 ವ್ಯವಸ್ಥೆಯ ಬಗ್ಗೆ ವಿವರಿಸಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಇಂತಹ ಸೌಲಭ್ಯ ರೂಪಿಸಲಾಗಿದ್ದು ಪುರಸಭಾ ವ್ಯಾಪ್ತಿಯೊಳಗಿನವರಿಗೆ ಕುಂದಾಪುರದ ಕಛೇರಿ ಅನುಕೂಲಕರವಾಗಿದೆ” ಎಂದರು.
ಕೇಂದ್ರದ ನಿರ್ವಾಹಕರಾದ ತೇಜಸ್ವಿನಿ ಕಾಮತ್ ಸ್ವಾಗತಿಸಿದರು. ಸಂತೋಷ್ ಕಾಮತ್ ವಂದಿಸಿದರು.